ನಾಸಾದಲ್ಲಿ ಮಿಂಚುತ್ತಿರುವ ಭಾರತದ ವಿಜ್ಞಾನಿಗಳು
ಸ್ಮರಣೆ
ಎಲ್‌.ಪಿ.ಕುಲಕರ್ಣಿ
ಬಹುಶಃ ಮಂಗಳ ಗ್ರಹ ಭೂಮಿಯನ್ನೇ ಹೋಲುತ್ತದೆ ಎಂಬುದು ಎಲ್ಲ ವಿಜ್ಞಾನಿಗಳ ನಂಬುಗೆ. ಹೀಗಾಗಿ ಅಲ್ಲಿ ಜೀವ ಜಗತ್ತಿನಇರುವಿಕೆಯ ಬಗೆಗೆ ಕೊಂಚ ಕುತೂಹಲ ಜಾಸ್ತಿನೇ ಇದೆ.
ಅಂತೆಯೇ ಮುಂಗಳದಲ್ಲಿರುವ ಜೀವ ಜಗತ್ತಿನ ಹುಡುಕಾಟದಲ್ಲಿ ಮುಂಚೂಣಿಯಲ್ಲಿರುವ ನಾಸಾ ಕಳೆದ ವರ್ಷ ಮತ್ತೊಂದು ಮಹಾತ್ವಾಕಾಂಕ್ಷೆಯ ಪ್ರಯತ್ನ ನಡೆಸಿತ್ತು. ಫ್ಲೋರಿಡಾದ ‘ಕೇಪ್ ಕ್ಯಾನವರೆಲ್ ಸ್ಟೇಷನ್’ನಿಂದ ಜುಲೈ ತಿಂಗಳಿನಲ್ಲಿ‘ಪರ್ಸೆವೆರೆನ್ಸ್’ () ರೋವರ್ ಹೊತ್ತ ರಾಕೆಟ್ ಉಡಾವಣೆಯಾಗಿತ್ತು. ಅಟ್ಲಾಸ್ 5 ರಾಕೆಟ್ ಮೂಲಕ 2.4 ಬಿಲಿಯನ್ ಡಾಲರ್ (ಸುಮಾರು ?17,977 ಕೋಟಿ) ಮೊತ್ತದ ಮಿಷನ್‌ನ ಮೊದಲ ಹಂತ ಯಶಸ್ವಿಯಾಗಿತ್ತು.
ರೋವರ್ ಈಗ ಇದೇ ಫೆಬ್ರವರಿ ತಿಂಗಳಿನಲ್ಲಿ ಮಂಗಳನ ನೆಲದ ಮೇಲೆ ಯಶಸ್ವಿಯಾಗಿ ಇಳಿದು ತನ್ನ ಕಾರ್ಯ ಶುರು ಮಾಡಿದೆ ಎಂಬುದಾಗಿ ನಾಸಾ ಮಾಹಿತಿ ಹಂಚಿಕೊಂಡಿದೆ. ಒಂದು ಕಾರಿನ ಗಾತ್ರದಷ್ಟಿರುವ ರೋವರ್ ಸೂಕ್ಷ್ಮಾಣು ಜೀವಿಗಳ ಕುರುಹುಗಳ ಹುಡುಕಾಟ ನಡೆಸಲಿದೆ. ಅಲ್ಲಿನ ವಾತಾವರಣದ ಮಾಹಿತಿ, ನೆಲದ ಮಣ್ಣು ಮತ್ತು ಕಲ್ಲಿನ ಚೂರುಗಳನ್ನು ಸಂಗ್ರಹಿಸಿ ಸಂಶೋ ಧನೆಗೆ ಸಹಕಾರಿಯಾಗಲಿದೆ. ಈಗ ರೋವರ್ ಮಂಗಳನ ಅಂಗಳ ತಲುಪಿ, ತನ್ನ ಜತೆಗೆ ಒಂದು ಪುಟ್ಟ ಹೆಲಿಕಾಪ್ಟರನ್ನು ಕಾರ್ಯಾ ಚರಣೆಗೆ ಇಳಿಸಲಿದೆ.
ಇದೀಗ ಇಡೀ ಜಗತ್ತೇ ಕುತೂಹಲದಿಂದ ವೀಕ್ಷಿಸುತ್ತಿದ್ದ ನಾಸಾದ ಮಾರ್ಸ್ ಮಿಷನ್, ವಿಜ್ಞಾನಿಗಳ ಪರಿಶ್ರಮದಿಂದ ಯಶಸ್ವಿ ಯಾಗಿದೆ. ಆದರೆ ಈ ಯಶಸ್ಸಿನಲ್ಲಿ ಭಾರತದ ಪಾಲೂ ಇದೆ. ಏಕೆಂದರೆ, ಪರ್ಸೀವರೆನ್ಸ್ ರೋವರ್ ಮಂಗಳ ಗ್ರಹದ ಮೇಲ್ಮೆ ನಲ್ಲಿ ಇಳಿಯುವ ಯೋಜನೆಯಲ್ಲಿ ಭಾರತದ ವಿಜ್ಞಾನಿಗಳ ಶ್ರಮಕೂಡ ಇದೆ. ಏಕೆಂದರೆ ಅದರಲ್ಲೂ ಕುತೂಹಲ ಸಂಗತಿ ಎಂದರೆ ಭಾರತ ಮೂಲದ ಮಹಿಳೆಯೇ ಈ ಮಿಷನ್‌ನ ನೌಕಾ ನಿಯಂತ್ರಣ ಹಾಗೂ ಪಥಮಾರ್ಗದರ್ಶನ ಎಂಜಿನಿಯರ್ ಆಗಿದ್ದರು.
ನಾಸಾ ಮಿಷನ್‌ನ ನೌಕಾಯಾನ ಹಾಗೂ ಪಥ ಮಾರ್ಗದರ್ಶನದ ನೇತೃತ್ವ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗ ದಂಪತಿಜ್ಯೋತಿ – ಮೋಹನ್ ಅವರ ಪುತ್ರಿ ಡಾ.ಸ್ವಾತಿ ಮೋಹನ್ ಹೊತ್ತುಕೊಂಡಿದ್ದು, ಇದೀಗ ತನ್ನ ಕಾರ್ಯದಲ್ಲಿ ಅವರು ಯಶಸ್ಸು ಕಾಣುವ ಮೂಲಕ ಭಾರೀ ದೊಡ್ಡ ಸಾಧನೆ ಮಾಡಿದ್ದಾರೆ. ಇವರ ಜತೆಗೆ ಮತ್ತೊಬ್ಬ ಭಾರತೀಯ ಮೂಲದ ಜಿಯೋಲಾಜಿಸ್ಟ್(ಭೌಗೋಳಿಕ ಶಾಸ್ತ್ರಜ್ಞ) ಒಬ್ಬರ ಹೆಸರೂ ಕೂಡ ಕೇಳಿ ಬರುತ್ತಿದೆ.
ಕೋವಿಡ್ –19ತಂದೊಡ್ಡಿದ ಬಿಕ್ಕಟ್ಟಿನಿಂದ ಇಡೀ ಜಗತ್ತೇ ವರ್ಕ್ ಫ್ರಂ ಹೋಮ್ ನಲ್ಲಿದೆ ಅಂದರೆ ತಪ್ಪಾಗಲಾರದು. ಯಾಕೆಂದರೆ ಹಲವು ರಾಷ್ಟ್ರಗಳಲ್ಲಿ ಲಾಕ್ ಡೌನ್ ತೆರವುಗೊಂಡಿದ್ದರೂ ಅಲ್ಲಿರುವ ಕೆಲವು ಕಾರ್ಪೋರೇಟ್ ಸಂಸ್ಥೆಗಳು ಇಂದಿಗೂ ವರ್ಕ್ ಫ್ರಮ್ ಹೋಮ್ ಅನ್ನು ಅನ್ವಯಿಸಿಕೊಂಡಿವೆ. ವಿಚಿತ್ರವೆಂದರೆ ಈ ವಿಜ್ಞಾನಿ ನಾಸಾದ ರೋವರ್‌ನ ಕಾರ್ಯ ಚಟುವಟಿಕೆಯನ್ನು ಮನೆಯಲ್ಲಿ ಕುಳಿತುಕೊಂಡು ತನ್ನ ಲ್ಯಾಪ್‌ಟಾಪ್ ನಿಂದಲೇ ನಿಯಂತ್ರಿಸುತ್ತಿದ್ದಾರೆ.
ಅವರೇ ಭಾರತೀಯ ಮೂಲದ ಎನ್‌ಆರ್‌ಐ ಡಾ.ಸಂಜೀವ್ ಗುಪ್ತಾ. ಭಾರತದ ಆಗ್ರಾದಲ್ಲಿ ಜನಿಸಿದ ಸಂಜೀವ್ ಗುಪ್ತಾ, 5ವರ್ಷ ದವರಿರುವಾಗಲೇ ಅವರ ಕುಟುಂಬ ಯುನೈಟೆಡ್ ಕಿಂಗ್ಡಂಗೆ ತೆರಳಿತು. ಇವರ ತಂದೆ ಒಬ್ಬ ವಿಜ್ಞಾನಿಯಾಗಿದ್ದರು. ಮಗ ವೈದ್ಯ ಕೀಯ ಇಲ್ಲವೇ ಎಂಜಿನೀಯರಿಂಗ್ ಕಲಿಯಲೆಂದು ಬಯಸಿದ್ದರು. ಆದರೆ ಸಂಜೀವ್ ಅವರಿಗೆ ಬಾಲ್ಯದಿಂದಲೂ ಭೌಗೋಳಿಕ ಅಂಶಗಳ ಬಗ್ಗೆ ಕುತೂಹಲವಿದ್ದುದರಿಂದ ಜಿಯೋಲಜಿ ವಿಷಯದಲ್ಲಿ ಪದವಿ ಗಳಿಸಿದರು.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ತಮ್ಮ ನೆಚ್ಚಿನ ವಿಷಯ ಜಿಯೊಲಾಜಿ ಮೇಲೆ ಪಿಎಚ್‌ಡಿ ಉನ್ನತ ಪದವಿಯನ್ನೂ ಪಡೆದರು. ಗುಪ್ತಾ ಅವರು ನಾಸಾದ ಈ ಮಾರ್ಸ್ ಮಿಷನ್‌ನಲ್ಲಷ್ಟೇ ಅಲ್ಲ, ಹಿಮಾಲಯದ ವಾತಾವರಣದ ಸೃಷ್ಟಿ, ಕಪ್ಪು ಕಾಡುಗಳು,ಮುಂತಾದವುಗಳ ಬಗ್ಗೆ ಉನ್ನತ ಅಧ್ಯಯನ ಕೈಗೊಂಡಿzರೆ. ಇವರ ಸಾಕಷ್ಟು ವೈಜ್ಞಾನಿಕ ಪ್ರಬಂಧಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿಪ್ರಕಟಗೊಂಡಿವೆ.
ಲಂಡನ್‌ನಲ್ಲಿ ವಾಸವಾಗಿರುವ ಗುಪ್ತಾ ಅವರು, ಈ ಮಾರ್ಸ್ ಮಿಷನ್ ಕಾರ್ಯಾಚರಣೆಯ ಸಲುವಾಗಿ ಕ್ಯಾಲಿಫೋರ್ನಿಯಾ ದಲ್ಲಿನ ನಾಸಾ ಜೆಟ್ ಪ್ರಪೊಲ್ಯೂಶನ್ ಲ್ಯಾಬೊರೇಟರಿಗೆ ತೆರಳಬೇಕಿತ್ತು. ಆದರೆ ಲಂಡನ್‌ನಲ್ಲಿ ಕೋವಿಡ್ – 19ಮಹಾಮಾರಿಯ ಸಲುವಾಗಿ ಲಾಕ್ ಡೌನ್ ಘೋಷಿಸಿದ್ದರಿಂದ ಅಲ್ಲಿಗೆ ಹೋಗಲಾಗಲಿಲ್ಲ. ಕಾರಣ ಗುಪ್ತಾರವರೀಗ ಮನೆಯಲ್ಲಿದ್ದುಕೊಂಡೇ ತಮ್ಮಲ್ಯಾಪ್ ಟಾಪ್ ಮೂಲಕ ಮಂಗಳನ ಮೇಲಿಳಿದ ರೋವರನ್ನು ನಿಯಂತ್ರಿಸುತ್ತಿದ್ದಾರೆ. ಅಂದರೆ, ಇವರ ತಂಡ ಮಂಗಳನ ಮೇಲಿರುವ ಕಲ್ಲು, ಮಣ್ಣುಗಳ ಸ್ಯಾಂಪಲನ್ನು ಸಂಗ್ರಹಿಸಿ, ವಿಶ್ಲೇಷಿಸುವಂತೆ ಅಲ್ಲಿರುವ ರೋವರ್‌ಗೆ ಆಜ್ಞೆಮಾಡುತ್ತಿದ್ದಾರೆ.
ಈಗ, ಈ ಹಿಂದಿಗಿಂತಲೂ ಮಂಗಳ ಗ್ರಹದ ಮೇಲೆ ವಾತಾವರಣ ಬದಲಾಗಿರಬಹುದು. ಜೀವಿಗಳು ಅಲ್ಲಿರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಆ ಕುತೂಹಲಕ್ಕೆ ತೆರೆ ಎಳೆಯಲು ಈಗ ನಾಸಾ ಈ ಮಾರ್ಸ್ ಮಿಷನ್ ಕೈಗೊಂಡಿದೆ. ಬಹುಪಾಲುಈ ಯೋಜನೆ ಯಶಸ್ವಿಯಾಗಿದೆ ಕೂಡ. ಇನ್ನುಳಿದಂತೆ, ಜೀವಿಗಳಿರಲು ಅಲ್ಲಿಯ ವಾತಾವರಣ ಹೇಗಿದೆ? ತೇವಾಂಶದಿಂದ ಕೂಡಿದ ಮಣ್ಣು ಅಲ್ಲಿ ಇದೆಯೇ? ಕಲ್ಲುಗಳ ರಚನೆ ಮತ್ತು ಗಾತ್ರ ಹೇಗಿದೆ? ಎಂಬೆ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಕ್ಕರೆ ಮಾತ್ರ ಮಂಗಳ ಗ್ರಹದ ಮೇಲೆ ಜೀವಿಗಳಿರಬಹುದು ಎಂದು ನಿರ್ಧರಿಸಬಹುದು.
ನಮ್ಮ ತಂಡ ಈ ಕುರಿತು ಮಾಹಿತಿ ಕಲೆ ಹಾಕಲು ಅಲ್ಲಿನ ಕಲ್ಲು, ಮಣ್ಣುಗಳ ಸ್ಯಾಂಪಲ್‌ನ್ನು ಸಂಗ್ರಹಿಸುವಂತೆ ರೋವರ್‌ಗೆ ಆಜ್ಞೆ ಮಾಡುತ್ತಿದೆ ಎಂದು 55 ವರ್ಷದ ಈ ಜಿಯೋಲಾಜಿಸ್ಟ್ ಡಾ.ಸಂಜಯ್ ಗುಪ್ತಾ ಹೇಳುತ್ತಾರೆ. ವಿಜ್ಞಾನಿಗಳ ಈ ಸಂಶೋಧನೆ ಗಳಿಂದ ಮಂಗಳ ಗ್ರಹದ ಮೇಲೆ ಜೀವಿಗಳ ಆಸ್ತಿತ್ವ ಇದೆ ಎಂದು ಗೊತ್ತಾಗಿಬಿಟ್ಟರೆ, ನಾವೂ ಕೂಡ ಮಂಗಳನ ನೆಲದಲ್ಲಿ ಪ್ಲಾಟ್ ಖರೀದಿಸಿ ಮನೆ ಕಟ್ಟಿ ಆರಾಮವಾಗಿ ಇರುವ ಕಾಲ ದೂರವೇನಿಲ್ಲ ಎನಿಸುತ್ತದೆ.
ಇಡೀ ಜಗತ್ತೇ ಕುತೂಹಲದಿಂದ ವೀಕ್ಷಿಸುತ್ತಿದ್ದ ನಾಸಾದ ಮಾರ್ಸ್ ಮಿಷನ್, ವಿಜ್ಞಾನಿಗಳ ಪರಿಶ್ರಮದಿಂದಯಶಸ್ವಿ ಯಾಗಿದೆ. ಆದರೆ ಈ ಯಶಸ್ಸಿನಲ್ಲಿ ಭಾರತದ ಪಾಲೂ ಇದೆ. ಏಕೆಂದರೆ, ಪರ್ಸೀವರೆನ್ಸ್ ರೋವರ್ಮಂಗಳ ಗ್ರಹದ ಮೇಲ್ಮೆ ನಲ್ಲಿ ಇಳಿಯುವ ಯೋಜನೆಯಲ್ಲಿ ಭಾರತದ ವಿಜ್ಞಾನಿಗಳ ಶ್ರಮಕೂಡ ಇದೆ.ಕುತೂಹಲ ಸಂಗತಿ ಎಂದರೆ ಭಾರತ ಮೂಲದ ಮಹಿಳೆಯೇ ಈ ಮಿಷನ್‌ನ ನೌಕಾ ನಿಯಂತ್ರಣ ಹಾಗೂಪಥಮಾರ್ಗದರ್ಶನ ಎಂಜಿನಿಯರ್ ಆಗಿದ್ದರು.