ಸ್ತ್ರೀಶಕ್ತಿಯ ಪ್ರತೀಕ: ಡಾ.ಇಂದಿರಾ ಗೋಸ್ವಾಮಿ
ಸಾಧನೆ
ನಾಗೇಶ.ಯು.ಸಿದ್ಧೇಶ್ವರ
ಪ್ರತಿವರ್ಷ ಮಾರ್ಚ್ 8ರಂದು – ಅಂತಾರಾಷ್ಟ್ರೀಯ ಮಹಿಳಾ ದಿವಸ ( ’ ) ಮತ್ತು ಮೇ ತಿಂಗಳ 2ನೇ ರವಿವಾರ ಅಂತಾರಾಷ್ಟ್ರೀಯ ತಾಯಿಯರ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಮಹಿಳಾ ಸಬಲೀಕರಣ, ಸ್ತ್ರೀಪರ ಚಿಂತನೆ, ಸ್ತ್ರೀವಾದ (), ಹೆಣ್ಣಿನ ಶೋಷಣೆ, ಲಿಂಗ ಅಸಮಾನತೆ, ಹೆಣ್ಣು ಮಕ್ಕಳ ರಕ್ಷಣೆ, ಮತ್ತು ಹೆಣ್ಣು ಭ್ರೂಣ ಹತ್ಯೆ ಮುಂತಾದ ವಿಷಯಗಳ ಬಗ್ಗೆ ಜಗತ್ತಿನಾದ್ಯಂತ ಜನ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಚರ್ಚಾ ಗೋಷ್ಠಿಗಳೂ ಸಮಾವೇಶಗಳೂ ಜರುಗುತ್ತವೆ. ಅನೇಕ ಲೇಖನಗಳು, ವಿಚಾರ ಮಂಥನದ ಬರಹಗಳು ಮತ್ತು ಪುಸ್ತಕಗಳುಪ್ರಕಟವಾಗುತ್ತವೆ. ಈವರೆಗೆ ನಡೆದ ಇಂತಹ ಪ್ರಯತ್ನಗಳಿಂದ ಸಮಾಜ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿರುವದು ಸಂತಸದ ಸಂಗತಿ. ಸ್ತ್ರೀವಾದದ ಬಗ್ಗೆ ಇಂದಿಗೂ ಕೆಲವು ತಪ್ಪು ಕಲ್ಪನೆಗಳಿವೆ.
ಸ್ತ್ರೀವಾದದ ವ್ಯಾಖ್ಯೆಯನ್ನು ನಾವು ಹೀಗೆ ಮಾಡಬಹುದು – ಕುಟುಂಬದ ಒಳಗಾಗಲಿ, ಹೊರಗಾಗಲಿ, ಹೆಣ್ಣಿನ ಮೇಲೆ ನಡೆಯುವ ದಬ್ಬಾಳಿಕೆ ಹಾಗೂ ಶೋಷಣೆಯ ಸ್ವರೂಪವನ್ನು ಅರ್ಥಮಾಡಿಕೊಂಡು, ಅಂತಹ ಪರಿಸ್ಥಿತಿಯ ನಿವಾರಣೆಗಾಗಿ ಪ್ರಜ್ಞಾಪೂರ್ವಕ ವಾಗಿ ನಡೆಸುವ ಚಿಂತನೆ ಮತ್ತು ಚಟುವಟಿಕೆಗಳು.ಪುರುಷರನ್ನು ದ್ವೇಷಿಸುವುದು ಅಥವಾ ಕುಟುಂಬ ವ್ಯವಸ್ಥೆಯನ್ನೇ ನಿರಾಕರಿಸುವುದು ಸ್ತ್ರೀವಾದವಾಗಲಾರದು.
ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ನಮ್ಮದು, ಮಾನವೀಯ ಬೆಳವಣಿಗೆಯನ್ನು ಹೊಂದಿರುವ ಸ್ತ್ರೀವಾದ (( ). ಸಾಹಿತ್ಯ ಸಮಾಜದ ಪ್ರತಿಬಿಂಬ. ನಮ್ಮ ದೇಶದ ಎಲ್ಲ ಭಾಷೆಗಳ ಸಾಹಿತ್ಯವನ್ನು ಅವಲೋಕಿಸಿದಾಗಅಸಂಖ್ಯ ಸಾಹಿತಿಗಳು, ತಮ್ಮ ಬರಹ ಮತ್ತು ಬದುಕಿನ ಮೂಲಕ ಸ್ತ್ರೀಪರ ವಾದಮಂಡಿಸಿ, ಅನ್ಯಾಯದ ವಿರುದ್ಧ ಕಹಳೆ ಊದಿದ್ದು ಕಂಡುಬರುತ್ತದೆ. ವಿಶೇಷತಃ ಲೇಖಕಿಯರ ಪ್ರಯತ್ನ ಉಲ್ಲೇನೀಯ.
ನಮ್ಮ ದೇಶದ ಸಾಹಿತ್ಯ ಕ್ಷೇತ್ರದಲ್ಲಿನ ಅತ್ಯುತ್ತಮ ಪ್ರಶಸ್ತಿ –  ಜ್ಞಾನಪೀಠ ಪ್ರಶಸ್ತಿಯನ್ನು ಈವರೆಗೆ ಆರು ಮಹಿಳಾಮಣಿಯರಿಗೆ ನೀಡಿ ಗೌರವಿಸಲಾಗಿದೆ. ಆಶಾ ಪೂರ್ಣಾ ದೇವಿ (ಬಂಗಾಲಿ) 1976, ಮಹಾದೇವಿ ವರ್ಮಾ (ಹಿಂದಿ)1982, ಅಮೃತಾ ಪ್ರೀತಮ್ ಪಂಜಾಬಿ/ಹಿಂದಿ1981, ಕುರತಲಿಯನ್ ಹೈದರ್ ಉರ್ದು1989, ಮಹಾಶ್ವೇತಾ ದೇವಿ ಬಂಗಾಲಿ1996, ಇಂದಿರಾ ಗೋಸ್ವಾಮಿ ಅಸ್ಸಾಮಿ2000, ಈ ಎಲ್ಲ ಗಣ್ಯ ಲೇಖಕಿಯರಲ್ಲಿರುವ ಒಂದು ಸಾಮಾನ್ಯ ಅಂಶವೆಂದರೆ ತಮ್ಮ ಸಾಹಿತ್ಯದ ಮೂಲಕ ಅವರು ನಮ್ಮ ಸಮಾಜದಲ್ಲಿರುವ ಗೊಡ್ಡು ಸಂಪ್ರದಾಯವನ್ನು ಖಂಡಿಸಿದರು.
ಮಹನೀಯರ ಸಂಗಡ ಮಹಿಳೆಯರೂ ಕ್ರಿಯಾಶೀಲರಾಗಿ ದೇಶ ಕಟ್ಟುವ ಕೆಲಸದಲ್ಲಿ ತೊಡಗಿ ರಚನಾತ್ಮಕವಾಗಿ ದೇಶದ ಉನ್ನತಿ ಗಾಗಿ ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ. ಲೇಖನದ ಕೇಂದ್ರಬಿಂದು, ಡಾ.ಇಂದಿರಾ ಗೋಸ್ವಾಮಿ. ಅವರ ಕೃತಿಗಳನ್ನು ಓದುವ ಮತ್ತು ಅವರ ಬದುಕು ಬರಹಗಳ ಬಗ್ಗೆ ತಿಳಿದು ಬರೆಯಬೇಕೆಂಬ ಆಸೆ ನನಗಾಗಲು ಒಂದು ಕಾರಣವಿದೆ. ಧಾರವಾಡದ ನಾರಾಯಣಪುರದಲ್ಲಿ ಇರುವ ವಯೋವೃದ್ಧ ದಂಪತಿಗಳಾದ ಯಶೋಧಾ ಭಟ್ (ವಿ.ಕೃ. ಗೋಕಾಕ್ ಅವರ ಸುಪುತ್ರಿ) ಮತ್ತುಎನ್. ಪಿ. ಭಟ್ (ಕಳೆದ ವರ್ಷ ಸ್ವರ್ಗಸ್ಥರಾದರು). ಇಬ್ಬರೂ ಪ್ರಸಿದ್ಧ ಲೇಖಕರು ಮತ್ತು ಸಂಪಾದಕರು. ಅವರ ಮನೆಯ ಹತ್ತಿರವೇ ನಾನು ವಾಸಿಸಿದ್ದು, ನನ್ನ ಸೌಭಾಗ್ಯವೇ ಸರಿ.
ಅವರ ಮನೆ, ಒಂದು ಪುಣ್ಯಭೂಮಿ ಎಂದರೆ ತಪ್ಪಾಗ ಲಾರದು. ಆ ಕುಟೀರಕ್ಕೆ ಅನೇಕ ಸಾಹಿತಿಗಳೂ, ಸಂಗೀತಗಾರರು ಬಂದು ಅವನಿ ರಸಿಕ ರಂಗದ ರಸಿಕರಿಗೆ ಸಾಹಿತ್ಯ, ಸಂಗೀತದ ರಸದೌತಣ ನೀಡಿದ್ದಾರೆ. ಡಾ.ಯಶೋಧಾ ಭಟ್ಟರು ದೆಹಲಿ ವಿಶ್ವವಿದ್ಯಾ ನಿಲಯದಲ್ಲಿ ಇಂಗ್ಲಿಷ್ ಭಾಷೆಯ ರೀಡರ್ ಆಗಿದ್ದರು, ನಿವೃತ್ತಿಯಾಗಿ ಎರಡು ದಶಕಗಳೇ ಕಳೆದಿವೆ. ಇಂದಿರಾ ಗೋಸ್ವಾಮಿಯ ವರೂ ಅಲ್ಲಿ ಅಸ್ಸಾಮಿ ಭಾಷೆಯ ಪ್ರಾಧ್ಯಾಪಕರು. ಇಬ್ಬರೂ ಸಾಹಿತ್ಯ ಪ್ರೇಮಿಗಳು ಮತ್ತು ಚಿಂತಕರು. ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದರು.
ಹೀಗಾಗಿ ಯಶೋಧಾ ಭಟ್ ಅವರಿಗೆ ಇಂದಿರಾ ಗೋಸ್ವಾಮಿಯವರ ಬದುಕು ಮತ್ತು ಬರಹಗಳ ವಿಸ್ತೃತ ಮಾಹಿತಿ ಇತ್ತು. ಎನ್.ಪಿ. ಭಟ್ ಅವರು ಆ ಸಮಯದಲ್ಲಿ ದೆಹಲಿಯ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ಆಗ ಅವರು ಆಯೋಜಿಸಿದ್ದ ಕನ್ನಡ ಸಾಹಿತ್ಯದ ಅಖಿಲ ಭಾರತ ಮಟ್ಟದ ಗೋಷ್ಠಿಯಲ್ಲಿ ಇಂದಿರಾ ಗೋಸ್ವಾಮಿ ಯವರನ್ನು ಕರೆದು ಸನ್ಮಾನಿಸಿದರು. ದಿವಂಗತಎನ್.ಪಿ. ಭಟ್ ಅವರು ಅಂದು ಇಂದಿರಾ ಗೋಸ್ವಾಮಿಯವರ ಭಾಷಣದ ಸುಮಧುರ ಕ್ಷಣ ಗಳನ್ನು ಎರಡು ವರ್ಷಗಳ ಹಿಂದೆ ನನ್ನೊಡನೆ ಹಂಚಿಕೊಂಡಿದ್ದರು.
ಸಾಹಿತ್ಯ ಪ್ರೇಮಿಗಳೆಂದು ಕರೆಯಲೋ, ಅಥವಾ ಸಾಹಿತ್ಯ ತಪಸ್ವಿಗಳೆಂದು ಕರೆಯಲೋ, ಧಾರವಾಡದ ಭಟ್ ದಂಪತಿಗಳಿಂದನನಗೆ ಇಂದಿರಾ ಗೋಸ್ವಾಮಿಯವರ ಕುರಿತು ಕೇಳಿ ತಿಳಿದ ಮಾಹಿತಿಗಳಿಂದ, ಅವರ ಕುರಿತು ಓದುವ ಆಸಕ್ತಿಯನ್ನು ಹೆಚ್ಚುವಂತೆ ಮಾಡಿತು. ಡಾ.ಯಶೋಧಾ ಭಟ್ ಅವರು ಬರೆದ ವಿಚಾರ ವಿಲಾಸ ಎಂಬ ಪುಸ್ತಕದಲ್ಲಿಯೂ ಸಹ ಇಂದಿರಾ ಗೋಸ್ವಾಮಿಯವರ ಬಗ್ಗೆ ಸಂಕ್ಷಿಪ್ತ ಮತ್ತು ಸುಂದರ ಲೇಖನ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಇಂದಿರಾ ಗೋಸ್ವಾಮಿಯವರ ಆತ್ಮಚರಿತ್ರೆ…    (  ) ಮತ್ತು     ಎಂಬ ಕೃತಿಗಳನ್ನು ಓದಿ ಈ ಲೇಖನವನ್ನು ಕೈಗೆತ್ತಿಕೊಳ್ಳಲಾಯಿತು.
ಡಾ.ಇಂದಿರಾ ಗೋಸ್ವಾಮಿಯವರು ಮೂಲತಃ ಆಸ್ಸಾಮಿನವರು. ಅಸ್ಸಾಮಿ ಭಾಷೆಯ ಲೇಖಕಿ, ಕವಯಿತ್ರಿ, ಕಾದಂಬರಿಗಾರ್ತಿ , ಚಿಂತಕಿ, ಸಂಪಾದಕಿ, ಪ್ರಾಧ್ಯಾಪಕಿ ಮತ್ತು ಸಮಾಜ ಸೇವಕಿ. ಅವರ ಕಾವ್ಯನಾಮ… ಮಾಮೋನಿ ರಾಯಸಂ ಗೋಸ್ವಾಮಿ. ಆಸಾಮಿ ಭಾಷೆಯಲ್ಲಿ ಅವರನ್ನು ಅಲ್ಲಿಯ ಜನ ಅಕ್ಕರೆಯಿಂದ ಅವರನ್ನು ..ಮಾಮೊನಿ ಬೈಡ್ಯೋ ( ) ಎಂದು ಕರೆದರು. ಆಸಾಮಿ ಭಾಷೆಯಲ್ಲಿ  ಎಂದರೆ ಹಿರಿಯ ಸಹೋದರಿ ಎಂದು ಅರ್ಥ.
ಅವರ ಕಾವ್ಯನಾಮದಲ್ಲಿ ಇರುವ ರಾಯಸಂ ಎಂಬ ಹೆಸರಿಗೆ ಕರ್ನಾಟಕದ ನಂಟಿದೆ. 1965 ರ ಸಮಯದಲ್ಲಿ ಅಸ್ಸಾಂ ರಾಜ್ಯ ದಲ್ಲಿ ನಮ್ಮ ಕರ್ನಾಟಕದ ಶ್ರೀ ಮಾಧವನ್ ರಾಯಾಸಂ ಅಯ್ಯಂಗಾರ್ ಎಂಬ ಯುವಕ, ಸೇತುವೆ ನಿರ್ಮಾಣಗಳ ವಿಭಾಗದಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇಂದಿರಾ ಗೋಸ್ವಾಮಿ ಯವರು ಅವರನ್ನು ಪ್ರೇಮಿಸಿ ವಿವಾಹವಾಗುತ್ತಾರೆ. ಇದರಿಂದ ಅವರ ಕಾವ್ಯನಾಮದಲ್ಲಿ ರಾಯಾಸಮ್ ಎಂಬ ಹೆಸರು ಜೋಡಿಸಲ್ಪಟ್ಟಿದೆ.
ಇಂದಿರಾ ಗೋಸ್ವಾಮಿ ಯವರು ನಮ್ಮ ಕರ್ನಾಟಕದ ಸೊಸೆ! ನಮಗೆಲ್ಲ ಇದೊಂದು ಹೆಮ್ಮೆಯ ವಿಷಯ.! ಇಂದಿರಾ ಗೋಸ್ವಾಮಿ ಯವರು 14 ನವೆಂಬರ್ 1942ರಂದು, ಅಸ್ಸಾಂನ ದಕ್ಷಿಣ ಕಾಮರೂಪ್ ಜಿಯ ಅಮ್ರಾಂಗ ಎಂಬಲ್ಲಿ ಜನಿಸಿದರು. ಅವರ ತಂದೆ ಉಮಾಕಾಂತ ಗೋಸ್ವಾಮಿ ಸರಕಾರಿ ಹುದ್ದೆ (   )ಯಲ್ಲಿದ್ದರು. ತಾಯಿ ಅಂಬಿಕಾ ದೇವಿ. ಇಂದಿರಾ ಗೋಸ್ವಾಮಿಯವರು ಹುಟ್ಟಿದ್ದು ಶ್ರೀಮಂತ ವೈಷ್ಣವ ಬ್ರಾಹ್ಮಣ ಕುಟುಂಬದಲ್ಲಿ. ನಮ್ಮ ಕರ್ನಾಟಕದಲ್ಲಿ ಮಠಗಳಿದ್ದಂತೆ, ಅಸ್ಸಾಮಿನಲ್ಲಿ ಸತ್ರಗಳಿವೆ.
ಈ ಸತ್ರಗಳ ಮಾಲೀಕತ್ವ ಹೊಂದಿದ್ದ ಇಂತಹ ಕುಟುಂಬ ಗಳಿಗೆ ಅಸ್ಸಾಮಿ ಭಾಷೆಯಲ್ಲಿ  ಎಂದು ಕರೆಯುತ್ತಾರೆ. ಇಂತಹ ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದರೂ, ಇಂದಿರಾ ಗೋಸ್ವಾಮಿಯವರಿಗೆ ಅದೃಷ್ಟ ಅನುಕೂಲವಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿತಂದೆಯವರು ತೀರಿಕೊಂಡಿದ್ದು, ಅವರಿಗೆ ಬಹಳ ದುಃಖ ಮತ್ತು ಖಿನ್ನತೆಯನ್ನು ತಂದಿತು. ಅವರ ಪ್ರಾಥಮಿಕ ಶಿಕ್ಷಣ ಲಟಾಸಿಲ ಪ್ರಾಥಮಿಕ ಶಾಲೆ ಗೌಹಾಟಿ, ಮತ್ತು ಪೈನ್ ಮೌಂಟ್ ಸ್ಕೂಲ್ ಶಿಂಗ್ ದಲ್ಲಿ ಆಯಿತು.
1957ರಲ್ಲಿ,       ದಿಂದ ಮೆಟ್ರಿಕ್ಯುಲೇಷನ್ ಮುಗಿಸಿದರು. ಮುಂದೆ ಕಾಟನ್ ಕಾಲೇಜ್ ಗವಹಾಟಿಯಲ್ಲಿ ವಿದ್ಯಾಭ್ಯಾಸ ಮಾಡಿ 1960ರಲ್ಲಿ, ಅಸ್ಸಾಮಿ ಭಾಷೆಯಲ್ಲಿ ಪದವಿ ಪಡೆದರು. ಈ ಸಮಯದಲ್ಲಿಯೇ, (1962) ಅವರ ಮೊದಲನೆ ಕಥಾಸಂಕಲನ   ಪ್ರಕಟವಾಯಿತು.
ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಅಸ್ಸಾಮಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ದೆಹಲಿ ವಿಶ್ವವಿದ್ಯಾ ನಿಲಯದಲ್ಲಿ () 1973ರಲ್ಲಿ ಡಾಕ್ಟರೇಟ್ ಪಡೆದರು. ಅವರು ತಮ್ಮ ಸಂಶೋಧನೆಗೆ ತೆಗೆದುಕೊಂಡ ವಿಷಯ ತುಳಸೀದಾಸರ ರಾಮಚರಿತ ಮಾನಸ ಮತ್ತು ಕಂದಾಲಿ ಅಸ್ಸಾಮಿ ರಾಮಾಯಣ ಇವುಗಳ ತುಲನಾತ್ಮಕ ಅಭ್ಯಾಸ.
ಈ ಸಂಶೋಧನಾ ಪ್ರಬಂಧಕ್ಕೆ ಮಥುರಾ ಬೃಂದಾವನದ ಪ್ರೊ.ಲೇಖರು ಮಾರ್ಗದರ್ಶನ ಮಾಡಿದ್ದು ವಿಶೇಷ. ವಿವಾಹವಾದ ನಂತರ ತಮ್ಮ ಪತಿಯೊಂದಿಗೆ ಇಂದಿರಾ ಗೋಸ್ವಾಮಿಯವರು ಕೆಲವು ಬೇರೆ ಬೇರೆ ರಾಜ್ಯದ ಪ್ರದೇಶಗಳಿಗೆ ಪತಿಯ ಉದ್ಯೋಗದನಿಮಿತ್ತ ಹೋಗಬೇಕಾದ ಪರಿಸ್ಥಿತಿ ಬಂದಿತ್ತು. ಕಾಶ್ಮೀರದ ಚೆನಾಬ್ ನದಿಗೆ ಸೇತುವೆ ನಿರ್ಮಾಣದ ಅವಧಿಯಲ್ಲಿ ಒಂದು ಭಯಾನಕ ದುರ್ಘಟನೆಯಲ್ಲಿ ಮಾಧವನ್ನರು ಸಾವಿಗೀಡಾದರು.
ವಿವಾಹವಾದ ಒಂದೂವರೆ ವರ್ಷದಲ್ಲಿ ನಡೆದ ಪತಿಯ ಸಾವಿನಿಂದ ಇಂದಿರಾ ಗೋಸ್ವಾಮಿಯವರು ದುಃಖದ ಮಡುವಿನಲ್ಲಿಮುಳುಗಿ ಖಿನ್ನತೆಗೂ ಜಾರಿದರು. ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡಿದ ಉಲ್ಲೇಖ ಇದೆ. ಬಹುಶಃ ಸಮಯಕ್ಕೆ ಇಂತಹ ಘಟನೆಗಳಿಂದ ಮನುಷ್ಯರನ್ನು ಶ್ರೇಷ್ಠತೆಯ ಕಡೆಗೆ ಒಯ್ಯುವ ಸಾಮರ್ಥ್ಯವೂ ಇದ್ದ ಹಾಗೆ ಕಾಣುತ್ತದೆ. ಪತಿ ಮಾಧವನ್ ರಾಯಸಮ್ ಅಯ್ಯಂಗಾರ್ ಅವರ ಸ್ಮರಣೆಯೇ ಪ್ರೇರಣೆಯಾಗಿ ಸಾಹಿತ್ಯ ಸಾಧನೆಯಲ್ಲಿ ಅವರು ತೊಡಗಿದರು. ನನಗೆ ಬರೆಯುವ ಹವ್ಯಾಸ ಇಲ್ಲದಿದ್ದರೆ, ನಾನು ಎಂದೋ ಸಾಯುತ್ತಿದ್ದೆ…. ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
1993ರಲ್ಲಿ ಬೆಂಗಳೂರಿನ  ಕಾಲೇಜಿನವರು        ಎಂಬ ಸೆಮಿನಾರನ್ನು ಆಯೋಜಿಸಿದ್ದರು. ಕಾಲೇಜಿನ ಅಂದಿನ ಪ್ರಾಂಶುಪಾಲರಾದ ಚಿ.ನ. ಮಂಗಳ ಅವರು ಸೆಮಿನಾರ್‌ನ ನೇತೃತ್ವವಹಿಸಿದ್ದರು. ಆಗಡಾ.ಯಶೋಧಾ ಭಟ್ಟರು ಪ್ರಸ್ತುತ ವಿಷಯದ ಮೇಲೆ ಸಂಪಾದಿಸಿದ ಸೆಮಿನಾರ್‌ನ ಪ್ರಬಂಧಗಳ ಸಂಕಲನದಲ್ಲಿ ಡಾ.ಇಂದಿರಾ ಗೋಸ್ವಾಮಿಯವರು ಆಸಾಮಿ ಸಾಹಿತ್ಯದ ಕುರಿತು ಬರೆದ ಪ್ರಬಂಧವೂ ಒಳಗೊಂಡಿತ್ತು. ಆ ಸೆಮಿನಾರ್ ಅಧ್ಯಕ್ಷತೆಯನ್ನುಅಂದಿನ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬೀರೆಂದ್ರ. ಭಟ್ಟಾಚಾರ್ಯ ಅವರು ವಹಿಸಿದ್ದರು.
      Literatureಎಂಬ ಪ್ರಬಂಧ ಸಂಕಲನ (.. ,)1993ರಲ್ಲಿ ಪ್ರಕಟವಾಯಿತು. ಒಟ್ಟೂ13ಭಾರತೀಯ ಭಾಷೆಗಳ ಪ್ರತಿಭಾನ್ವಿತ ಲೇಖಕಿಯರು, ತಮ್ಮ ಸಾಹಿತ್ಯ ದಲ್ಲಿ ಮಹಿಳೆಯರಚಿತ್ರಣ ಮತ್ತು ಕೌಟುಂಬಿಕ , ಸಾಮಾಜಿಕ ಹಾಗೂ ರಾಷ್ಟ್ರೀಯ ಜೀವನದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಬರೆದಿದ್ದಾರೆ. ಇಂದಿರಾ ಗೋಸ್ವಾಮಿಯವರು ಅಸ್ಸಾಮಿ ಭಾಷೆಯ ಬಗ್ಗೆ ಬರೆಯುತ್ತಾ ಅಲ್ಲಿಯ ಮಹಿಳೆಯರು ಬ್ರಿಟಿಷ್ ಅಧಿಕಾರಿಗಳು ಮಾಡಿದ ದಬ್ಬಾಳಿಕೆಯನ್ನು ಪ್ರತಿಭಟಿಸಿದ ರೀತಿಯನ್ನು ಕೊಂಡಾಡಿದ್ದಾರೆ.
ತಮ್ಮ ಪತಿ ಮಾಧವನ್ ಅವರ ಅಕಾಲ ಮೃತ್ಯುವಿನ ನಂತರ, ಇಂದಿರಾ ಗೋಸ್ವಾಮಿಯವರು ತುಂಬಾ ಹತಾಶ ಸ್ಥಿತಿಯಲ್ಲಿಯೇ ಕೆಲವು ಸಮಯ ಕಳೆಯಬೇಕಾಯಿತು. ಆಮೇಲೆ ಮತ್ತೆ ಆಸ್ಸಾಮ್‌ಗೆ ಮರಳಿದರು. ಗೋಪಾಲಪಾರಾ ಎಂಬಲ್ಲಿ ಸೈನಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿದರು. 1969ರಲ್ಲಿ ರಾಮಾಯಣದ ಕುರಿತು ವಿಶೇಷ ಅಧ್ಯಯನ ಮಾಡುವ ಉದ್ದೇಶದಿಂದ ಮಥುರಾ ವೃಂದಾವನಕ್ಕೆ ಪ್ರಯಾಣಿಸಿದರು. ಈ ಒಂಟಿ ಪಯಣ ಮತ್ತು ಅಲ್ಲಿ ಹೋದ ನಂತರದ ಕಷ್ಟಕರ ಜೀವನದ ಕುರಿತು ಇಂದಿರಾ ಗೋಸ್ವಾಮಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೃದಯಂಗಮವಾಗಿ ಹೇಳಿಕೊಂಡಿದ್ದಾರೆ.
ಬಹುಶಃ ಗುರುಗಳಾದ ಉಪೇಂದ್ರಲೇಖ ಅವರ ಮಾರ್ಗದರ್ಶನ ಮತ್ತು ಪಿತೃ ಸಮಾನ ಪ್ರೀತಿ ದೊರೆಯದಿದ್ದರೆ, ಇಂದಿರಾ ಗೋಸ್ವಾಮಿ ಯವರಿಗೆ ಒಂದು ಉತ್ತಮ ಸಂಶೋಧನೆ ಮತ್ತು ಶ್ರೇಷ್ಠ ಕಾದಂಬರಿಗಳನ್ನು ಸೃಷ್ಟಿಸಲು ಕಷ್ಟವಾಗುತ್ತಿತ್ತು. ಗುರುಗಳು ಅವರಿಗೆ ತಾರಕ ಮಂತ್ರವೊಂದನ್ನು ಉಚ್ಚರಿಸಿ , ನಿನಗೆ ಸೋಲಿಲ್ಲ, ಅಪರಾಜಿತೆ ಎಂದು ಧೈರ್ಯ ತುಂಬಿದರು.
ಇಂದಿರಾಗೋಸ್ವಾಮಿಯವರು ಮಾನಸಿಕವಾಗಿ ಸಧೃಡರಾಗಿ ತಮ್ಮ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿ ಕೊಂಡರು. ರಾಮಾಯಣ ಮತ್ತು ಮಹಾಭಾರತಗಳ ಸಂಶೋಧನಾತ್ಮಕ ಅಭ್ಯಾಸ ಮಾಡುತ್ತಾ ಇಂದಿರಾ ಗೋಸ್ವಾಮಿಯವರು ಮಥುರಾ ವೃಂದಾವನ ಕ್ಷೇತ್ರದ ಎಲ್ಲ ಆಯಾಮಗಳನ್ನೂ ತಿಳಿದುಕೊಂಡರು. ಭಕ್ತಿಯಿಂದ ಹಾಡಿಕುಣಿಯುತ್ತ ಭಕ್ತರ ದಂಡು, ರಾಧೇಶ್ಶಾಮಿ ಗಳ ಹೃದಯ ವಿದ್ರಾವಕ ಕತೆಗಳು, ಮತ್ತು ಅಲ್ಲಿಯ ಸಾಧು ಸಂತರ ಜೀವನದ ಬಗ್ಗೆ ಅವರು ತಮಗಾದ ಅನುಭವಗಳ ಬಗ್ಗೆ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ.
(ಮುಂದುವರಿಯಲಿದೆ)