ಈ ಕಥೆಗಳ ಪಾತ್ರಧಾರಿಗಳು ನಾನೋ? ನೀವೋ? ಯಾರೋ? ಗೊತ್ತಿಲ್ಲ
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್‌
ಇದೇ ಶೀರ್ಷಿಕೆಯಲ್ಲಿ ಹಿಂದಿನ ವಾರವೂ ಬರೆದಿದ್ದೆ. ಹೇಳಬೇಕೆಂದಿದ್ದ ಕೆಲವು ಕಥೆಗಳು ಎದೆಯಲ್ಲಿ ಹಾಗೆ ಉಳಿದು, ಯಾತನೆ ಕೊಡುತ್ತಿದ್ದವು. ಅವುಗಳ ಭಾರವನ್ನು ಇಳಿಸಿದರೇ ಸಮಾಧಾನ.
***ಆ ಬಡ ಹುಡುಗ ಮನೆಗೆ ಮನೆಗೆ ತೆರಳಿ ತರಕಾರಿ ಮಾರುತ್ತಿದ್ದ. ಅದರಿಂದ ಸಿಗುತ್ತಿದ್ದ ಚೂರುಪಾರು ಕಾಸಿನಿಂದ ನಂದಿನ ಖರ್ಚು, ಸ್ಕೂಲ್ ಫೀಸಿಗೆ ಹಣವನ್ನು ಹೊಂದಿಸುತ್ತಿದ್ದ. ಒಂದು ದಿನ ಆತನಿಗೆ ಯಾಕೋ ವಿಪರೀತ ಹಸಿವಾಯಿತು. ಆದರೆ ಕಿಸೆಯಲ್ಲಿ ಹಣವಿರಲಿಲ್ಲ. ‘ನನ್ನ ತರಕಾರಿ ಕೊಂಡು ಹತ್ತು ರುಪಾಯಿ ಕೊಡಿ’ ಎಂದು ಒಂದಿಬ್ಬರನ್ನು ಕೇಳಿದ. ಯಾರೂ ಕೊಡಲಿಲ್ಲ.ತರಕಾರಿಯನ್ನೂ ಖರೀದಿಸಲಿಲ್ಲ. ಆದರೆ ಆತನಿಗೆ ತಲೆ ಚಕ್ಕರ್ ಬಂದಂತಾಯಿತು.
ಹತ್ತಿರದಲ್ಲಿಯೇ ಇದ್ದ ಮನೆ ಬಾಗಿಲು ಬಡಿದ. ಸುಮಾರು ಮೂವತ್ತರ ಪ್ರಾಯದ ಹೆಂಗಸೊಬ್ಬಳು ಬಾಗಿಲು ತೆರೆದಳು. ತಿನ್ನಲು ಏನಾದರೂ ಕೊಡಿ ಎಂದು ಕೇಳೋಣ ಎನಿಸಿತು. ಯಾಕೋ ಮಾತೇ ಬರಲಿಲ್ಲ. ತಕ್ಷಣ ಮನಸ್ಸನ್ನು ಬದಲಿಸಿ, ‘ಒಂದು ಲೋಟನೀರು ಕೊಡ್ತೀರಾ?’ ಎಂದು ಕೇಳಿದ. ಆಕೆ ಒಳಮನೆಯಿಂದ ಒಂದು ದೊಡ್ಡ ಲೋಟದಲ್ಲಿ ಹಾಲು ತಂದು ಕೊಟ್ಟಳು. ಆತ ಗಟಗಟ ಕುಡಿದು, ಲೋಟ ತೊಳೆದು ಕೊಟ್ಟ. ‘ಅಮ್ಮಾ, ನಾನು ಎಷ್ಟು ಹಣ ಕೊಡಬೇಕು?’ ಎಂದು ಕೇಳಿದ. ಅದಕ್ಕೆ ಆ ಹೆಂಗಸು, ‘ನೀನುಏನೂ ಕೊಡಬೇಕಾಗಿಲ್ಲ. ಮನೆಗೆ ಬಂದವರ ಬಳಿ ಹಣ ತೆಗೆದುಕೊಳ್ತಾರಾ?’ ಎಂದು ಹೇಳಿದಳು.
‘ಅಮ್ಮಾ, ಈಗ ಸಮಾಧಾನವಾಯಿತು. ನೀವು ಹಾಲನ್ನು ಕೊಡದಿದ್ದರೆ ನಾನು ತಲೆಸುತ್ತಿ ಬಂದು ಬಿದ್ದು ಬಿಡುತ್ತಿದ್ದೆ. ಬಹಳ ಉಪಕಾರವಾಯಿತು. ನಿಮ್ಮನ್ನು ನಾನು ಎಂದೂ ಮರೆಯುವುದಿಲ್ಲ. ಧನ್ಯವಾದಗಳು’ ಎಂದು ಹೇಳಿ ಅಲ್ಲಿಂದ ಹೊರಟು ಹೋದ.ಆ ಹುಡುಗನ ಹೆಸರು ಪಿ.ಜನಾರ್ಧನ್ ಅಲಿಯಾಸ್ ಪ್ರೀತಿಯ ಜನಾರ್ಧನ್ !
ಹಲವು ವರ್ಷಗಳು ಗತಿಸಿದವು. ಪಿ.ಜನಾರ್ಧನ್ ಈಗ ಡಾಕ್ಟರ್ ಪಿ.ಜನಾರ್ಧನ್ ಆಗಿದ್ದ. ಒಂದು ದಿನ ಅದೇ ಹೆಂಗಸು ಆಸ್ಪತ್ರೆಗೆ ಅಡ್ಮಿಟ್ ಆದಳು. ಅವಳನ್ನು ಪರೀಕ್ಷಿಸಿದ ವೈದ್ಯರು ಆಕೆ ಬದುಕಿ ಉಳಿಯುವ ಸಾಧ್ಯತೆ ತೀರಾ ಕಮ್ಮಿ ಎಂದು ಹೇಳಿದರು. ‘ಆದರೆ ಕೊನೆ ಪ್ರಯತ್ನವಾಗಿ ಒಂದು ಕೆಲಸ ಮಾಡಿ, ಡಾಕ್ಟರ್ ಪಿ.ಜನಾರ್ಧನ್ ಎಂಬುವವರು ಇದ್ದಾರೆ, ಅವರು ಮಾತ್ರ ನಿಮ್ಮ ಕಾಯಿಲೆ ಗುಣಪಡಿಸಬಹುದು. ಆದರೆ ಸಮಸ್ಯೆ ಏನಂದ್ರೆ ಅವರು ತುಂಬಾ ಛಾರ್ಜ್ ಮಾಡುತ್ತಾರೆ’ ಎಂದರು ವೈದ್ಯರು.
ಆಕೆಯ ಮಗ ತನ್ನ ತಾಯಿಯನ್ನು ಡಾಕ್ಟರ್ ಪಿ.ಜನಾರ್ಧನ್ ಅವರ ಆಸ್ಪತ್ರೆಗೆ ಸೇರಿಸಿದ. ನರ್ಸ್ ಗಳು ಮತ್ತು ಕಿರಿಯ ವೈದ್ಯರು ಆಕೆಯನ್ನು ಪರೀಕ್ಷಿಸಿ, ‘ನಿಮ್ಮ ತಾಯಿಯ ಕಾಯಿಲೆಯನ್ನು ಗುಣಪಡಿಸಲು ಕನಿಷ್ಠ ಇಪ್ಪತ್ತು ಲಕ್ಷ ರುಪಾಯಿ ತಗುಲಬಹುದು. ಅಷ್ಟಾಗಿಯೂ ನಿಮ್ಮ ತಾಯಿ ಬದುಕುತ್ತಾಳೆ ಎಂಬ ಖಾತ್ರಿಯಿಲ್ಲ. ನಾವು ಯಾವುದಕ್ಕೂ ಈ ಎಲ್ಲಾ ವಿಷಯಗಳನ್ನು ಡಾಕ್ಟರ್ ಪಿ.ಜನಾರ್ಧನ್ ಅವರಿಗೆ ತಿಳಿಸುತ್ತೇವೆ’ ಎಂದರು.
ಆಕೆಯ ಮಗ,‘ನನ್ನ ತಾಯಿಯನ್ನು ಹೇಗಾದರೂ ಬದುಕಿಸಿಕೊಡಿ’ ಎಂದು ಹೇಳಿದ. ಡಾಕ್ಟರ್ ಪಿ.ಜನಾರ್ಧನ್ ಬಂದು ಮಹಿಳೆ ಯನ್ನು ಪರೀಕ್ಷಿಸಿ, ತಕ್ಷಣ ಆಪರೇಷನ್ ಥಿಯೇಟರ್‌ಗೆ ಕಳಿಸುವಂತೆ ಹೇಳಿದರು. ಪೇಶಂಟ್ ವಿವರ ಪಡೆದು, ಆಕೆಯನ್ನು ನೋಡು ತ್ತಿದ್ದಂತೆ, ಈ ಹೆಂಗಸು ಮತ್ಯಾರೂ ಅಲ್ಲ, ತನಗೆ ಒಂದು ಲೋಟ ಹಾಲು ಕೊಟ್ಟ ಮಹಾ ತಾಯಿ ಎಂದು ಗೊತ್ತಾಯಿತು. ಆದರೆ ಆ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸಲಿಲ್ಲ. ಕಾರಣ ಆಕೆಗೆ ಪ್ರಜ್ಞೆ ಇರಲಿಲ್ಲ.
ಬಹಳ ಪ್ರಯಾಸ ಪಟ್ಟು ಆಪರೇಷನ್ ಮಾಡಿದ ಡಾಕ್ಟರ್ ಪಿ.ಜನಾರ್ಧನ್ ಅವಳನ್ನು ಬದುಕಿಸಿದರು. ಹತ್ತು ದಿನಗಳ ಕಾಲ ಆಕೆಯನ್ನು ಆಸ್ಪತ್ರೆಯ ಇಟ್ಟುಕೊಂಡರು. ನಂತರ ‘ಅಮ್ಮಾ, ನೀವು ಈಗ ಕ್ಷೇಮವಾಗಿದ್ದೀರಿ, ನೀವು ಮೊದಲಿನಂತೆ ಹಾಯಾಗಿರು ತ್ತೀರಿ, ಚಿಂತೆ ಬೇಡ’ ಎಂದು ಡಾಕ್ಟರ್ ಪಿ.ಜನಾರ್ಧನ್ ಹೇಳಿದರು. ಕಾಯಿಲೆಯೇನೋ ವಾಸಿಯಾಯಿತು, ಆದರೆ ಬಿಲ್ ಎಷ್ಟಾಗ ಬಹುದು ಎಂದು ಅವಳು ಚಿಂತಾಕ್ರಾಂತಳಾಗಿದ್ದಳು. ಆಸ್ಪತ್ರೆ ಬಿಲ್ ಬಂತು. ಅದರಲ್ಲಿ ಬರೆದಿತ್ತು –         !
ಆಗಲೇ ಆಕೆಗೆ ಗೊತ್ತಾಗಿದ್ದು ತಾನು ಅಂದು ಒಂದು ಲೋಟ ಹಾಲು ಕೊಟ್ಟ ಬಾಲಕನೇ ಈಗ ತನ್ನ ಮುಂದೆ ನಿಂತ ಡಾಕ್ಟರ್ ಡಾಕ್ಟರ್ ಪಿ.ಜನಾರ್ಧನ್ ಅಂತ.
***
ಆಕೆ ತನ್ನ ಗಂಡನ ಜತೆ ಊಟಿಗೆ ಸನಿಹದಲ್ಲಿರುವ ಫಾರ್ಮ್ ಹೌಸ್‌ಗೆ ಕಾರಿನಲ್ಲಿ ಹೊರಟಿದ್ದರು. ಬಂಡೀಪುರದ ಕಾಡಿನಲ್ಲಿ ಹೋಗುವಾಗ, ನಾಲ್ಕೆ ದು ಜಿಂಕೆಗಳು ರಸ್ತೆ ದಾಟಲು ಹಿಂದೆ – ಮುಂದೆ ನೋಡುತ್ತಿದ್ದವು. ತನ್ನ ಗಂಡ ವೇಗವಾಗಿ ಕಾರನ್ನು ಓಡಿಸು ತ್ತಿದ್ದುದನ್ನು ಗಮನಿಸಿದ ಆಕೆ, ಮೆಲ್ಲಗೆ ‘…’ ಎಂದು ಹೇಳಿದಳು.
ಆದರೆ ಗಂಡ ಕಾರಿನ ವೇಗವನ್ನು ಕುಗ್ಗಿಸಲಿಲ್ಲ. ಆಗ ಆಕೆ ಅವನ ಭುಜವನ್ನು ಮುಟ್ಟಿ, ‘…’ ಎಂದು ಹೇಳಿದಳು. ಆದರೂ ಸ್ಲೋ ಮಾಡಲಿಲ್ಲ. ಇನ್ನೇನು ಕಾರು ಆ ಜಿಂಕೆಗಳಿಗೆ ಬಡಿಯುತ್ತದೆ ಎನ್ನುವಷ್ಟರಲ್ಲಿ, ಆತ ರಪ್ಪನೆ ಬ್ರೇಕ್ ತುಳಿದ. ಸಿನಿಮೀಯ ಎಂಬಂತೆ, ಆ ಜಿಂಕೆಗಳು ಬಚಾವ್ ಆದವು. ಅಪಘಾತ ತಪ್ಪಿತು. ಆಗ ಆಕೆ ಗಂಡನಿಗೆ, ‘ಎಂಥಾ ಅವಾಂತರ ಆಗುತ್ತಿತ್ತು ? ಕಾರನ್ನು ಸ್ಲೋ ಮಾಡು ಎಂದು ನಾನು ಪದೇ ಪದೆ ಹೇಳಿದರೂ, ನೀನೇಕೆ ಸ್ಲೋ ಮಾಡಲಿಲ್ಲ?’ ಎಂದು ಕೇಳಿದಳು. ಅದಕ್ಕೆ ಗಂಡ ಹೇಳಿದ – ‘ನೀನು ನನಗೆ ಪದೇ ಪದೆ ಕೊಟ್ಟಿದ್ದು ವಾರ್ನಿಂಗಾ? ನಾನು ಅಂದುಕೊಂಡೆ ಇಂದು ಅಮ್ಮಾವರು ಯಾಕೋ ಬಹಳ ರೊಮ್ಯಾಂಟಿಕ್ ಆಗಿದ್ದಾರೆ ಅಂತ.’
***ಆಕೆ ಸುಮಾರು ಹತ್ತು ವರ್ಷದವಳಿರಬಹುದು. ಆಕೆ ಬದುಕುಳಿಯುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಅವಳ ಎಂಟು ವರ್ಷದ ತಮ್ಮನ ರಕ್ತವನ್ನು ( ) ವರ್ಗಾಯಿಸಿದರೆ, ಬದುಕುಳಿಯ ಬಹುದು ಎಂದು ವೈದ್ಯರು ಹೇಳಿದರು. ಈ ಸಂಗತಿ ಯನ್ನು ವೈದ್ಯರು ಆಕೆಯ ಪಾಲಕರ ಜತೆ ರ್ಚಿಸಿದರು. ಆರು ವರ್ಷದ ಬಾಲಕನ ರಕ್ತವನ್ನು ವರ್ಗಾಯಿಸುವ ಬಗ್ಗೆ ಪಾಲಕರಿಗೆ ಸಮ್ಮತಿಯಿರಲಿಲ್ಲ.
ಅವಳನ್ನು ಬದುಕಿಸುವ ಧಾವಂತದಲ್ಲಿ ಮಗನಿಗೂ ಏನಾದರೂ ಆದರೆ ಗತಿಯೇನು ಎಂದು ಅವರು ಗಾಬರಿಯಾದರು. ಆದರೆ ವೈದ್ಯರು ಅವರಿಗೆ ಧೈರ್ಯ ತುಂಬಿದರು. ಆನಂತರ ವೈದ್ಯರು ಆ ಬಾಲಕನನ್ನು ಕರೆದು, ‘ನೀನು ನಿನ್ನ ಅಕ್ಕಳಿಗೆ ರಕ್ತ ಕೊಡಲು ಸಿದ್ಧನಿದ್ದೀಯಾ ?’ ಎಂದು ಕೇಳಿದರು. ಆ ಪುಟ್ಟ ಬಾಲಕ, ಹಿಂದೆ-ಮುಂದೆ ನೋಡದೇ, ನನ್ನ ಅಕ್ಕನಿಗಾದರೆ ಕೊಡ್ತೇನೆ. ಅವಳು ಮೊದಲಿನಂತೆ ನನ್ನ ಜತೆ ಆಟವಾಡುವಂತಾದರೆ ಸಾಕು’ ಎಂದ.
ಆ ಬಾಲಕ ಮತ್ತು ಅವನ ಅಕ್ಕನನ್ನು ಅಕ್ಕ-ಪಕ್ಕದ ಬೆಡ್ ಮೇಲೆ ಮಲಗಿಸಲಾಗಿತ್ತು. ಇಬ್ಬರೂ ಪರಸ್ಪರರನ್ನು ನೋಡುತ್ತಾ ಖುಷಿ – ಖುಷಿಯಿಂದ ಇದ್ದರು. ಆ ಬಾಲಕನ ದೇಹದಿಂದ ತೆಗೆದ ರಕ್ತವನ್ನು ಆಕೆಗೆ ವರ್ಗಾಯಿಸುತ್ತಿದ್ದಂತೆ, ಇಬ್ಬರೂ ಪರಸ್ಪರರ ಮುಖ ನೋಡುತ್ತಿದ್ದರು. ಇದ್ದಕ್ಕಿದ್ದಂತೆ, ಬಾಲಕನ ಮುಖ ಕಳಾಹೀನವಾಯಿತು. ಆತ ತೊದಲು ದನಿಯಲ್ಲಿ, ‘ಡಾಕ್ಟರ್, ನಾನು ಇನ್ನೇನುಸಾಯ್ತೀನಾ?’ ಎಂದು ಕೇಳಿದ. ಅದಕ್ಕೆ ವೈದ್ಯರು, ‘ಇಲ್ಲ ಮಗು, ನಿನಗೆ ಏನೂ ಆಗೊಲ್ಲ, ನೀನು ಸಾಯುವುದಿಲ್ಲ’ ಎಂದು ಹೇಳಿದರು.
‘ನನ್ನ ದೇಹದಲ್ಲಿರುವ ರಕ್ತವನ್ನೆ ತೆಗೆದು ಅವಳಿಗೆ ಕೊಡ್ತೀರೇನೋ ಅಂತ ಅಂದುಕೊಂಡಿದ್ದೆ. ಅದಕ್ಕೆ ನಾನು ಸಿದ್ಧನಾಗಿದ್ದೆ’ ಎಂದ ಆ ಬಾಲಕ. ವೈದ್ಯರು ಕಣ್ಣೊರೆಸಿಕೊಳ್ಳುತ್ತಿದ್ದರು !***ನಾನು ಆಗ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ. ಒಂದು ರಾತ್ರಿ ನನಗೆ ಫೋನ್ ಬಂತು. ನಾನು ಟಾಕ್ಸಿಯಲ್ಲಿ ನನಗೆ ಹೇಳಿದ ವಿಳಾಸಕ್ಕೆ ಹೋದೆ. ಅದೊಂದು ದೊಡ್ಡ ಮನೆ. ಒಂದು ಕೋಣೆಯಲ್ಲಿ ಮಾತ್ರ ದೀಪ ಉರಿಯುತ್ತಿತ್ತು. ಟ್ಯಾಕ್ಸಿ ಬಂದ ಸದ್ದು ಕೇಳಿ ಒಬ್ಬಾಕೆ ಹೊರ ಬಂದಳು.
ನೋಡಿದರೆ ಸುಮಾರು ಎಂಬತ್ತೈದು ವರ್ಷದ ಹಣ್ಣು – ಹಣ್ಣು ಮುದುಕಿ. ಮದುಮಗಳಂತೆ ಸಿಂಗಾರ ಮಾಡಿಕೊಂಡಿದ್ದಳು. ತಲೆಗೆ ಹ್ಯಾಟ್ ಧರಿಸಿದ್ದಳು. ಮೈಗೆ ಅತ್ತರು ಸಿಂಪಡಿಸಿಕೊಂಡು, ಮೇಕಪ್ ಮಾಡಿಕೊಂಡು ಲಕಲಕ ಅಂತ ಸಿದ್ಧಳಾಗಿದ್ದಳು. ಕೈಯಂದು ಸೂಟ್ ಕೇಸ್ ಇತ್ತು. ನಾನು ಅವಳ ಸೂಟ್ ಕೇಸ್ ತೆಗೆದುಕೊಂಡು ಹೋಗಿ ಕಾರಲ್ಲಿಟ್ಟು ಬಂದೆ. ಕೈ ಹಿಡಿದು ಅವಳನ್ನು ಕಾರಿನಲ್ಲಿಕುಳ್ಳಿರಿಸಿದೆ. ‘ಟ್ಯಾಕ್ಸಿ ಡ್ರೈವರುಗಳೂ ಒಳ್ಳೆಯವರಿರುತ್ತಾರೆ ಎಂದು ನನಗೆ ಅನೇಕ ಸಲ ಮನವರಿಕೆಯಾಗಿದೆ’ ಎಂದಳು.ನಾನು ಏನೂ ಹೇಳಲಿಲ್ಲ.ಟ್ಯಾಕ್ಸಿಯನ್ನು ಸ್ಟಾರ್ಟ್ ಮಾಡಿದೆ. ಎಂ.ಜಿ.ರಸ್ತೆಗೆ ಹೋಗು ಎಂದಳು. ಈ ರಾತ್ರಿ ಅಲ್ಲಿಗೇಕೆ ಎಂದು ಕೇಳೋಣ ಎನಿಸಿತು. ಕೇಳಲಿಲ್ಲ. ಅವಳೇ ರೂಟ್ ಹೇಳಿದಳು. ಅದಕ್ಕೆ ನಾನು,‘ಆ ಮಾರ್ಗವಾಗಿ ಹೋಗುವುದು ಸುತ್ತು ಬಳಸಿದಂತೆ. ಅದಕ್ಕೂ ಸನಿಹದ ಮಾರ್ಗದಲ್ಲಿ ಕರೆದುಕೊಂಡು ಹೋಗುತೇನೆ’ ಎಂದೆ. ಆಕೆ ಅದಕ್ಕೆ ಸಮ್ಮತಿಸಲಿಲ್ಲ. ತಾನು ಹೇಳಿದ ಮಾರ್ಗದಲ್ಲಿಯೇಹೋಗುವಂತೆ ತಿಳಿಸಿದಳು.
ಆಗ ನಾನು ಮೀಟರನ್ನು ಸ್ವಿಚ್ ಆಫ್ ಮಾಡಿದೆ. ‘ನೋಡಪ್ಪಾ, ನಾನು ಈ ಹೊತ್ತಿನಲ್ಲಿ ಯಾರನ್ನೂ ಭೇಟಿ ಮಾಡಬೇಕಿಲ್ಲ. ಅಷ್ಟಕ್ಕೂ ನನಗೆ ಯಾರೂ ಇಲ್ಲ’ ಎಂದಳು. ಅವಳು ಕಣ್ಣನ್ನು ಒರೆಸಿಕೊಂಡಿದ್ದು ನನಗೆ ಕನ್ನಡಿಯಲ್ಲಿ ಕಾಣಿಸಿತು. ದಾರಿಯಲ್ಲಿ ಹೋಗುವಾಗ ಆಕೆ, ‘ಇಲ್ಲೇ ನಾನು ರಿಸೆಪ್ಷನಿಸ್ಟ್ ಆಗಿದ್ದೆ…. ಈ ಮರದ ಕೆಳಗೆ ನಾನು ಮೊದಲ ಬಾರಿಗೆ ಅವರನ್ನು ನೋಡಿದ್ದು… ಇದೇ ಕಲ್ಯಾಣ ಮಂಟಪದಲ್ಲಿ ನನ್ನ ಮದುವೆಯಾಗಿದ್ದು… ಈ ರೆಸ್ಟೋರೆಂಟಿನಲ್ಲಿ ನಾವಿಬ್ಬರೂ ಅವೆಷ್ಟು ಸಲ ಕ್ಯಾಂಡಲ್ಲೈಟ್ ಡಿನ್ನರ್ ಮಾಡಿದ್ದೇವೋ… ’ ಎಂದು ತನ್ನಷ್ಟಕ್ಕೆ ಹೇಳುತ್ತಿದ್ದಳು.
ನಾನು ಹೂಂ..ಹೂಂ.. ಅನ್ನುತ್ತಿದ್ದೆ. ಸುಮಾರು ಎರಡು ತಾಸು ಅವಳನ್ನು ಸುತ್ತಿಸಿದ ಬಳಿಕ, ‘ಸಾಕು, ಮನೆಗೆ ಹೋಗೋಣ. ನೀನು ಒಳ್ಳೆಯವನು, ನನಗೆ ಎಲ್ಲವನ್ನೂ ತೋರಿಸಿದೆ. ನನಗೆ ನನ್ನ ನೆನಪುಗಳನ್ನು ಭೇಟಿ ಮಾಡಿಸಿದೆ’ ಎಂದಳು. ವಾಪಸ್ ಅವಳ ಮನೆಯ ಕಡೆ ಟ್ಯಾಕ್ಸಿ ಹೊರಟಿತು. ಮನೆ ತಲುಪುತ್ತಿದ್ದಂತೆ, ಅವಳ ಸೂಟ್ ಕೇಸನ್ನು ಇಳಿಸಿದೆ. ಅವಳಿಗಾಗಿ ಸಹಾಯಕಿ ಕಾಯುತ್ತಿದ್ದಳು. ‘ಅಮ್ಮಾ, ಹೇಗಿತ್ತು ಟೂರ್?’ ಎಂದು ಕೇಳಿದಳು.
‘ಐವತ್ತು ವರ್ಷ ಸುತ್ತಿ, ಮನಸ್ಸು ತುಂಬಾ ನೆನಪುಗಳನ್ನು ಅರಳಿಸಿಕೊಂಡು, ಸುರಕ್ಷಿತವಾಗಿ ಮನೆಗೆ ಬಂದರೆ ಹೇಗಾಗ ಬಹುದು, ಹಾಗನಿಸುತ್ತಿದೆ. ನನಗೆ ಮಗ ಇದ್ದಿದ್ದರೆ ಈ ಡ್ರೈರ್ವ ಮಾಡಿದ ಕೆಲಸವನ್ನು ಆತ ಮಾಡುತ್ತಿದ್ದನೇನೋ?’ ಎಂದು ಹೇಳಿದಳು.ಆಕೆ ನನ್ನತ್ತ ತಿರುಗಿ, ‘ಎಷ್ಟಾಯಿತು?’ ಎಂದು ಕೇಳಿದಳು. ‘ತಾಯಿಯಿಂದ ಮಗ ಹಣ ತೆಗೆದುಕೊಳ್ಳುವುದುಂಟಾ?’ ಎಂದೆ.ಇಬ್ಬರ ಕಣ್ಣುಗಳಲ್ಲೂ ನೀರಾಡುತ್ತಿದವು. ಆ ಟ್ರಿಪ್‌ನ್ನು ನಾನು ಮರೆಯುವಂತೆಯೇ ಇಲ್ಲ. ಅದುನನ್ನ ಜೀವನದ ಬೆಸ್ಟ್ ಟ್ರಿಪ್ !
ನನಗೆ ಮಾಡಲು ವಿಪರೀತ ಕೆಲಸಗಳಿದ್ದವು. ಸಾಲು, ಸಾಲು ಮೀಟಿಂಗುಗಳಿದ್ದವು. ಮೂರು ದಿನ ಬಿಟ್ಟು ವಿದೇಶ ಪ್ರಯಾಣಕ್ಕೆ ಅಣಿಯಾಗಬೇಕಿತ್ತು. ಸೆಕ್ರೆಟರಿಗೆ ಮಾಡಬೇಕಾದ ಕೆಲಸಗಳ ಬಗ್ಗೆ ಡಿಕ್ಟೇಷನ್ ಕೊಡಬೇಕಿತ್ತು. ಹತ್ತಾರು ಫೋನ್ ಕರೆಗಳನ್ನು ಮಾಡಬೇಕಿತ್ತು. ಆದರೂ ಮಗನ ಒತ್ತಡ, ಒತ್ತಾಯ ತಾಳಲಾರದೇ ನಾನು ಒಂದು ದಿನ ರಜಾ ಹಾಕಿದೆ.ನಾವಿಬ್ಬರೇ ಕಾರಿನಲ್ಲಿ ಡ್ರೈವ್ ಹೋಗಲು ನಿರ್ಧರಿಸಿದೆವು. ಮಗ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದ. ನನಗೆ ಡೆಡ್ ಲೈನ್, ಮೀಟಿಂಗ್,ಫೋ-ನ್ ಕಾಲ, ಪ್ರೆಸೆಂಟೇಷನ್,… ಅವುಗಳ ಮೇಲೆಯೇ ಲಕ್ಷ್ಯ.
ನಾವಿಬ್ಬರೂ ಅಂದು ಬ್ಯಾಡ್ಮಿಂಟನ್, ವಾಲಿಬಾಲ್ ಆಡಿದೆವು. ಮೀನು ಹಿಡಿದೆವು. ಪಕ್ಷಿಗಳ ಫೋಟೋ ತೆಗೆದೆವು. ಕೆರೆಯಲ್ಲಿ ಈಜಿದೆವು. ಜೋಕಾಲಿಯಲ್ಲಿ ಜೀಕಿದೆವು. ಹಾಡು ಕೇಳಿದೆವು. ಒಳ್ಳೆಯ ರೆಸ್ಟೋರೆಂಟಿನಲ್ಲಿ ಊಟ ಮಾಡಿದೆವು. ಆ ದಿನ ವಿಭಿನ್ನ ವಾಗಿ ಕಳೆದೆವು. ಆ ದಿನವನ್ನು ಹೇಗೆ ಕಳೆದೆವು ಎಂಬುದನ್ನು ನಾನು ನನ್ನ ಡೈರಿಯಲ್ಲಿ ಬರೆದಿಟ್ಟಿದ್ದೆ. ನನ್ನ ಮಗನೂ ಆ ದಿನದಅನುಭವವನ್ನು ಬರೆದಿಡಬಹುದು ಎಂದು ಅಂದುಕೊಂಡಿರಲಿಲ್ಲ.
ಬಹಳ ವರ್ಷಗಳ ನಂತರ, ಆ ಎರಡೂ ಡೈರಿಗಳನ್ನು ನನ್ನ ಹೆಂಡತಿ ತಂದು ತೋರಿಸಿದಳು. ನಾನು ಬರೆದಿಟ್ಟಿದ್ದು ಮರೆತು ಹೋಗಿತ್ತು. ನಾನು ಬರೆದಿದ್ದೆ – ‘ಮಗನ ಜತೆ ಸುತ್ತಲು ಹೋಗಿದ್ದೆ. ಇಡೀ ದಿನ ನಿಷ್ಪ್ರಯೋಜಕವಾಗಿ ಕಳೆದಿದಕ್ಕೆ ವ್ಯಥೆಯಾಯಿತು’ಮಗ ತನ್ನ ಡೈರಿಯಲ್ಲಿ ಬರೆದಿದ್ದ – ‘ಇಡೀ ದಿನವನ್ನು ಅಪ್ಪನ ಜತೆ ಕಳೆದೆ. ಅಪ್ಪ ಎಂಥ ಅದ್ಭುತ, ಆಪ್ತ ವ್ಯಕ್ತಿ. ಆತ ನಿಜಕ್ಕೂ ಗ್ರೇಟ್. ನನಗಾಗಿ ಟೈಮ್ ಮಾಡಿಕೊಂಡ. ಇಂದು ನನ್ನ ಜೀವನದ ಸ್ಮರಣೀಯ ದಿನ’