’ಸ್ವಾತಂತ್ರ‍್ಯ ಸಂಗ್ರಾಮ’ದ ಬುದ್ದಿವಂತ ಹೋರಾಟಗಾರರು ’ಹೆಡ್ಗೆವಾರ್‌’
ವೀಕೆಂಡ್‌ ವಿಥ್‌ ಮೋಹನ್‌
ಮೋಹನ್‌ ವಿಶ್ವ
‘ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್’ ಭಾರತ ಕಂಡಂಥ ತೆರೆಯ ಹಿಂದಿನ ಬುದ್ಧಿವಂತ ಸ್ವಾತಂತ್ರ್ಯ ಹೋರಾಟಗಾರರು. ಈ ಹೆಸರು ಎಲ್ಲಾ ಕೇಳಿದ ಹಾಗೆ ಅನಿಸುತ್ತಿರಬಹುದಲ್ಲ, ಹೌದು ಇವರೇ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ’ ಸ್ಥಾಪಕರು.
ಕಾಂಗ್ರೆಸ್ಸಿಗರು ಮಾತು ಮಾತಿಗೂ ‘’ನವರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಲಿಲ್ಲ, ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ ವೆಂದು ಹೇಳಿದಾಗ ತಕ್ಷಣ ನೆನಪಿಗೆ ಬರುವುದು ‘ಹೆಗ್ಡೆವಾರ್’ರವರ ಹೆಸರು. ಸಂಘದಲ್ಲಿ ‘ಡಾಕ್ಟರ್ ಜಿ’ಎಂದೇ  ಹೆಸರುವಾಸಿ ಯಾಗಿದ್ದ ಇವರು ಕಿರಿಯ ವಯಸ್ಸಿನಲ್ಲಿಯೇ ಬ್ರಿಟಿಷರಿಂದ ಭಾರತ ಮಾತೆಯ ಮುಕ್ತಿ ಬಯಸಿದ್ದರು.
ಎಂಟನೆಯ ವಯಸ್ಸಿನಲ್ಲಿ ತಮ್ಮ ಶಾಲೆಯಲ್ಲಿ ಇಂಗ್ಲೆಂಡಿನ ರಾಣಿಯ ಹುಟ್ಟಿದಹಬ್ಬವನ್ನು ಆಚರಿಸಿ ನೀಡಿದ ಸಿಹಿ ತಿನಿಸನ್ನು ಮನೆಗೆ ತಂದು ಕಸದ ಬುಟ್ಟಿಗೆ ಎಸೆಯುವ ಮೂಲಕ, ಮರಾಠ ರಾಜಮನೆತವರಾದ ‘ಬೋನ್ ಸಲೇಸ್ ’ರನ್ನು ಸೋಲಿಸಿದ ಬ್ರಿಟಿಷರ ರಾಣಿಯ ಹುಟ್ಟು ಹಬ್ಬವನ್ನು ನಾವೇಕೆ ಆಚರಿಸಬೇಕೆಂದು ಹೇಳಿದ್ದರು.
1908ರಲ್ಲಿ ‘ರೈಸಲೇ ಸರ್ಕ್ಯುಲರ್’ ‘ವಂದೇ ಮಾತರಂ’ ಘೋಷಣೆ ಯನ್ನು ನಿಷೇಧಿಸಿತ್ತು. ಹತ್ತನೆಯ ತರಗತಿಯಲ್ಲಿ ಓದುತ್ತಿದಂಥ‘ಡಾಕರ್ ಜಿ’ ತಾನು ಓದುತ್ತಿದ್ದಂಥ ಶಾಲೆಯಲ್ಲಿ ತನ್ನ ಸಹಪಾಠಿಗಳೊಡನೆ ಸೇರಿಕೊಂಡು ಬ್ರಿಟಿಷರ ನಿಷೇಧಕ್ಕೆ ತಲೆ ಕೆಡಿಸಿಕೊಳ್ಳದೆ ‘ವಂದೇ ಮಾತರಂ’ ಘೋಷಣೆಯನ್ನು ಕೂಗುತ್ತಿದ್ದರು. ತಿಂಗಳುಗಳ ಕಾಲ ಬ್ರಿಟಿಷರ ವಿರುದ್ಧ ತನ್ನ ಶಾಲೆಯಲ್ಲಿ ಘೋಷಣೆಗಳನ್ನು ಕೂಗಿದ್ದರ ಪರಿಣಾಮವಾಗಿ, ಶಾಲೆಯು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು.
ಶಾಲೆಯ ನಂತರ ತನ್ನ ಸ್ನೇಹಿತರ ಸಹಾಯದಿಂದ ಕೋಲ್ಕತಾದ ಮೆಡಿಕಲ್ ಕಾಲೇಜಿಗೆ ಸೇರಿದ ಡಾಕ್ಟರ್ ಜಿ, ಮತ್ತಷ್ಟು ಹೋರಾಟದ ವಿಷಯಗಳನ್ನು ಅಧ್ಯಯನ ಮಾಡಿದರು. ಆಶ್ಚರ್ಯವಾಗಬಹುದು, ಮೆಡಿಕಲ್ ಕಾಲೇಜಿನಲ್ಲಿ ಹೋರಾಟದ ಪಾಠ ಯಾಕೆ? ದೇಶದ ವಿವಿಧ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ಬಳಿ ಆಯಾ ರಾಜ್ಯದಲ್ಲಿ ಬ್ರಿಟಿಷರ ವಿರುದ್ಧ ನಡೆಯುತ್ತಿರುವ ಹೋರಾಟಗಳ ಬಗ್ಗೆ ಚರ್ಚಿಸಿ, ಹೇಗೆ ತಾನೂ ಸಹ ತನ್ನ ಸ್ನೇಹಿತರ ಜತೆಗೂಡಿ ಬ್ರಿಟಿಷರ ವಿರುದ್ಧ ಹೋರಾಟವನ್ನು ರೂಪಿಸಬಹುದೆಂಬ ಉದ್ದೇಶ ದಿಂದ ಡಾಕ್ಟರ್ ಜಿ ಮೆಡಿಕಲ್ ಕಾಲೇಜಿಗೆ ಸೇರಿದ್ದರು.
ಇದರ ಮಧ್ಯೆಯೂ ಡಾಕ್ಟರ್ ಜಿ ತಮ್ಮ ಮೆಡಿಕಲ್ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದರು. ಡಾಕ್ಟರ್ ಜಿ ತಮ್ಮ ವೈದ್ಯಕೀಯ ಅಧ್ಯಯನ ಮುಗಿಸಿದ ಕೆಲ ವರ್ಷಗಳ ನಂತರ ಬ್ರಿಟಿಷರು ಕೋಲ್ಕತ್ತಾದ ‘ಮೆಡಿಕಲ್ ಕಾಲೇಜಿ’ನಿಂದ ಹೊರಬಂದಂಥ ವಿದ್ಯಾರ್ಥಿ ಗಳು ವೈದ್ಯಕೀಯ ವೃತ್ತಿಯನ್ನು ನಡೆಸಬಹುದು, ಆದರೆ ‘ಅನಾರೋಗ್ಯ ಪ್ರಮಾಣಪತ್ರ’ವನ್ನು ನೀಡುವ ಹಕ್ಕನ್ನು ಹೊಂದಿಲ್ಲ ವೆಂಬ ನಿಯಮವನ್ನು ತಂದುಬಿಟ್ಟರು. ಬ್ರಿಟಿಷರ ಈ ಅಸಯ್ಯಕರವಾದ ನಿಯಮದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದಂಥ ಡಾಕ್ಟರ್ ಜಿ ಅಂದಿನ ಕಾಲದ ದೊಡ್ಡ ದೊಡ್ಡ ದಿನಪತ್ರಿಕೆಗಳಲ್ಲಿ ಎಡೆಯೂ ಬ್ರಿಟಿಷರ ಈ ನಿಯಮದ ವಿರುದ್ಧ ವೈದ್ಯರು ಹೋರಾಟ ಮಾಡುತ್ತಿದ್ದರೆಂಬ ವಿಷಯವನ್ನು ಪ್ರಕಟಿಸಿ ಬ್ರಿಟಿಷ್ ಸರಕಾರದ ಮೇಲೆ ಒತ್ತಡ ಹೇರಿದ್ದರು.
ಅವರ ಒತ್ತಡಕ್ಕೆ ಮಣಿದ ಬ್ರಿಟಿಷ್ ಸರಕಾರ ತಕ್ಷಣ ತಾನು ಮಾಡಿದ್ದಂಥ ನಿಯಮವನ್ನು ವಾಪಾಸ್ ಪಡೆದು ಕೋಲ್ಕತ್ತಾದ ‘ಮೆಡಿಕಲ್ ಕಾಲೇಜು’ ವಿದ್ಯಾರ್ಥಿಗಳು ‘ಅನಾರೋಗ್ಯ ಪ್ರಮಾಣಪತ್ರ’ ನೀಡಬಹುದೆಂದು ಹೇಳಿತು. ತನ್ನನು ತಾನು ಸಂಪೂರ್ಣ ವಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಂಥ ‘ಡಾಕ್ಟರ್ ಜಿ’ ತಮ್ಮ ಮನೆಯಲ್ಲಿ ತಾವು ಮದುವೆಯಾಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು. ಎಲ್ಲಿ ಸಂಸಾರ ಬಂಧನವು ಬ್ರಿಟಿಷರ ವಿರುದ್ದದ ಹೋರಾಟಕ್ಕೆ ಮುಳುವಾಗುತ್ತದೆಯೋ ಎಂಬ ಭಯದಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು.
ಇದರ ಫಲವಾಗಿ 1918ರಲ್ಲಿ ‘ಡಾಕ್ಟರ್ ಜಿ’ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಸೇರಿದರು. ಏನಪ್ಪಾ ‘”’ನ ಸಂಸ್ಥಾಪಕರು‘ಕಾಂಗ್ರೆಸ್’ ಸೇರಿದ್ದರೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು, ಹೌದು ಬ್ರಿಟಿಷರ ವಿರುದ್ಧ ಸಂಘಟಿಸಲು ಅಂದು ಇದ್ದಂತಹ ಏಕೈಕ ಸಂಘಟನೆಂದರೆ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’, ಬ್ರಿಟಿಷರ ವಿರುದ್ಧ ಯಾರೇ ಹೋರಾಟಕ್ಕೆ ಧುಮುಕಬೇಕಿದ್ದರೂ ಸಹ ಕಾಂಗ್ರೆಸ್ಸಿನಿಂದಲೇ ಶುರು ಮಾಡುತ್ತಿದ್ದರು. ಇದನ್ನೇ ಇಂದಿನ ಕಾಂಗ್ರೆಸ್ ನಾಯಕರು ಕೇವಲ ತಾವು ಮಾತ್ರ ಬ್ರಿಟಿಷರ ವಿರುದ್ಧ ಹೋರಾಡಿದೆವೆಂದು ಹೇಳಿಕೊಂಡು ತಿರುಗುತ್ತಾರೆ.
ಬ್ರಿಟಿಷರ ವಿರುದ್ಧ ಹೋರಾಡುವಾಗ ನಮ್ಮ ನಮ್ಮಲ್ಲಿಯೇ ಒಡಕು ಮೂಡದಿರಲೆಂದು ಎಲ್ಲರು ಕಾಂಗ್ರೆಸ್ಸಿನಿಂದ ಶುರು ಮಾಡುತ್ತಿದ್ದರಷ್ಟೆ. ‘ಡಾಕ್ಟರ್ ಜಿ’ ನಾಗ್ಪುರ್ ಕಾಂಗ್ರೆಸ್ಸಿನ ‘ಕಾರ್ಯದರ್ಶಿ’ಯಾಗಿದ್ದರು. ತಮ್ಮ ವಲಯದಲ್ಲಿ ಬ್ರಿಟಿಷರ ವಿರುದ್ಧ ಯುವಕರನ್ನು ಒಂದುಗೂಡಿಸುವುದರಲ್ಲಿ ‘ಡಾಕ್ಟರ್ ಜಿ’ ಬಹಳ ಯಶಸ್ವಿಯಾಗಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ‘ಡಾಕ್ಟರ್ ಜಿ’ಯವರ ಹೆಸರು ನೋಡ ನೋಡುತ್ತಲೇ ಎತ್ತರಕ್ಕೆ ಬೆಳೆಯಲು ಪ್ರಾರಂಭ ವಾಯಿತು.
1920ರ ವರೆಗೆ ಬ್ರಿಟಿಷರ ಆಡಳಿತದ ಕೆಳಗೆ ‘ಸ್ವಯಂ ನಿಯಮ’ಬೇಕೆಂದು ಮಾತ್ರ ಆಗ್ರಹಿಸುತ್ತಿದಂಥ ಕಾಂಗ್ರೆಸ್ ಪಕ್ಷಕ್ಕೆ ‘ಸಂಪೂರ್ಣ ಸ್ವಾತಂತ್ರ್ಯ’ ಬ್ರಿಟಿಷರಿಂದ ಬೇಕೆಂದು ಮೊಟ್ಟ ಮೊದಲ ಬಾರಿಗೆ ಹೇಳಿದ್ದೇ ‘ಡಾಕ್ಟರ್ ಜಿ’, ಕಾಂಗ್ರೆಸ್ಸಿಗರಿಗೆ ತಾವು ಪ್ರಸ್ತಾಪಿಸಿದ ಅನುಸೂಚಿಯಲ್ಲಿ ಮೂಲ ಉದ್ದೇಶ ‘ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯ’ ವಾಗಬೇಕೆಂದು ಹೇಳಿದ್ದರು, ‘ಡಾಕ್ಟರ್ ಜಿ’ಯವರ ಮಾತನ್ನು ಅಂದು ಗಂಭೀರವಾಗಿ ತೆಗೆದುಕೊಳ್ಳದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು 1929ರಲ್ಲಿ ‘ಡಾಕ್ಟರ್ ಜಿ’ ಹೇಳಿದ್ದನ್ನೇ ‘ಲಾಹೋರ್’ ಸಮ್ಮೇಳನದಲ್ಲಿ ತಮ್ಮ ಉದ್ದೇಶವನ್ನಾಗಿ ಘೋಷಿಸಿದರು.
ಒಂಬತ್ತು ವರ್ಷಗಳ ಹಿಂದೆಯೇ ಬ್ರಿಟಿಷರನ್ನು ಸಂಪೂರ್ಣವಾಗಿ ಓಡಿಸಬೇಕೆಂಬ ಸ್ಪಷ್ಟ ಉದ್ದೇಶವನ್ನು ‘ಡಾಕ್ಟರ್ ಜಿ’ ಹೊಂದಿ ದ್ದರು, ‘ಡಾಕ್ಟರ್ ಜಿ’ ಯವರ ಭಾರತ ಸ್ವಾತಂತ್ರ್ಯ ಕಹಳೆಯ ದೂರದೃಷ್ಟಿಯು ಯಾವ ಮಟ್ಟದ್ದಿರಬಹುದೆಂದು ನೀವೇ ಯೋಚಿಸಿ ನೋಡಿ. ಅಂದಿನ ಕಾಲದಲ್ಲಿಯೇ ಒಂಬತ್ತು ವರ್ಷ ಮುಂದಿದ್ದ ‘ಡಾಕ್ಟರ್ ಜಿ’ಯ ಮಾತುಗಳನ್ನು ಕೇಳಿದ್ದರೆ ಬಹುಷಃ ನಮಗೆ ಸ್ವಾತಂತ್ರ್ಯವು ಒಂಬತ್ತು ವರ್ಷಗಳ ಹಿಂದೆಯೇ ಬಂದಿರುತ್ತಿತ್ತೇನೋ !
1920ರಲ್ಲಿ ಮಹಾತ್ಮಾ ಗಾಂಧಿಯವರು ಮುಸಲ್ಮಾನರ ಪರವಾಗಿದ್ದಂಥ ‘ಖಿಲಾಫತ್’ ಚಳವಳಿಯನ್ನು ಡಾಕ್ಟರ್ ಜಿವಿರೋಧಿಸದಿದ್ದರೂ ಸಹ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹಾತ್ಮಾಗಾಂಧಿಯವರಿಗೆ ನೆರವಾಗುವುದನ್ನು ಬಿಡಲಿಲ್ಲ. ಗಾಂಧೀಜಿಯವರ ‘ಅಸಹಕಾರ ಚಳವಳಿ’ಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸುವ ಮೂಲಕ ಮಾದರಿಯಾದರು. ಈ ಚಳವಳಿಯಲ್ಲಿ ಡಾಕ್ಟರ್ ಜಿ ಅತ್ಯುತ್ಸಾಹದಿಂದ ಮಹಾತ್ಮಾ ಗಾಂಧೀಜಿಯವರ ಪರವಾಗಿ ನಿಂತರು. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಭಾಷಣಗಳನ್ನು ಮಾಡುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಶುರು ಮಾಡಿದರು.
ಬ್ರಿಟಿಷ್ ಸರಕಾರವು ಮೂರು ಬಾರಿ ನೋಟೀಸ್ ನೀಡಿದರೂ ಸಹ ತಲೆ ಕೆಡಿಸಿಕೊಳ್ಳದೆ, ಬ್ರಿಟಿಷರ ವಿರುದ್ಧ ತಮ್ಮ ಭಾಷಣಗಳನ್ನುಡಾಕ್ಟರ್ ಜಿ ಮಾಡುತ್ತಲೇ ಇದ್ದರು. ಕೊನೆಯದಾಗಿ ಬ್ರಿಟಿಷ್ ಕೋರ್ಟ್ ಡಾಕ್ಟರ್ ಜಿ ಯವರಿಗೆ ಇಂತಹ ಭಾಷಣಗಳನ್ನುಮಾಡಬಾರದು. ಜಾಮೀನಿನ ಹಣವಾಗಿ1000ರುಪಾಯಿ ಯನ್ನು ಕಟ್ಟಬೇಕೆಂದು ಆದೇಶ ಹೊರಡಿಸಿತ್ತು. ಬ್ರಿಟಿಷ್ ಕೋರ್ಟಿನ ಆದೇಶಕ್ಕೂ ಕ್ಯಾರೇ ಅನ್ನದ ಡಾಕ್ಟರ್ ಜಿ ತಮ್ಮ ಭಾಷಣಗಳನ್ನು ಮಾಡುತ್ತಲೇ ಇದ್ದರು. ಆದರೆ ಡಾಕ್ಟರ್ ಜಿಯನ್ನು ಬ್ರಿಟಿಷರು ಬಿಡಲಿಲ್ಲ, ಅವರನ್ನು ಬಂಧಿಸಿ ಒಂದು ವರ್ಷಗಳ ಕಾಲ ಜೈಲಿನಲ್ಲಿರಿಸಿದರು.
‘ಮಲ್ಲಿಕಾರ್ಜುನ ಖರ್ಗೆ’ ಸಂಸತ್ತಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ‘ಆರ್‌ಎಸ್ ಎಸ್’ನವರು ಜೈಲಿಗೆ ಹೋಗಲಿಲ್ಲವೆಂದು ಸುಳ್ಳು ಹೇಳುವಾಗ ಡಾಕ್ಟರ್ ಜಿಯನ್ನು ಬ್ರಿಟಿಷರು ಜೈಲಿಗೆ ಕಳುಹಿಸಿದ ವಿಷಯ ನೆನಪಾಯಿತು. ಜೈಲಿಗೆ ಹೋಗುವುದರಿಂದ ಮಾತ್ರ ನಮಗೆ ಸ್ವಾತಂತ್ರ್ಯ ಬರುವುದಿಲ್ಲವೆಂಬ ವಿಷಯ ಡಾಕ್ಟರ್ ಜಿಗೆ ಚೆನ್ನಾಗಿ ಗೊತ್ತಿತ್ತು, ಜೈಲಿಗೆ ಹೋಗುವುದೊಂದೇ ಸ್ವಾತಂತ್ರ್ಯ ಹೋರಾಟದ ಭಾಗವಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸಲು ಜೈಲಿನಿಂದ ಹೊರಗಡೆ ಹೆಚ್ಚಿನ ಕೆಲಸ ಮಾಡುವ ಅಗತ್ಯವಿತ್ತೆಂದು ತಮ್ಮನ್ನು ನೋಡಲು ಜೈಲಿಗೆ ಬರುವವರಿಗೆ ಹೇಳುತ್ತಿದ್ದರು.
ಜೈಲಿನಿಂದ ಬಿಡುಗಡೆಯಾದ ನಂತರ ಡಾಕ್ಟರ್ ಜಿ ತಮ್ಮ ಛಲವನ್ನು ಬಿಡಲಿಲ್ಲ. ಈ ಹಿಂದಿಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ದ್ದರು. 18-03-1922 ರಲ್ಲಿ ಮಹಾತ್ಮಾ ಗಾಂಧಿಯವರಿಗೆ ಆರು ವರ್ಷಗಳ ಕಾಲದ ಸೆರೆವಾಸವಾದಾಗ ಡಾಕ್ಟರ್ ಜಿ ಪ್ರತಿ ತಿಂಗಳ18ನೆಯ ದಿವಸದಂದು ‘ಗಾಂಧಿ ದಿನ’ವೆಂದು ಆಚರಿಸುತ್ತಿದ್ದರು.
‘ಖಿಲಾಫತ್’ ಚಳವಳಿಯ ವೈಫಲ್ಯದ ಹಾಗೂ ‘ಮೋಪ್ಲಾ’ ಹತ್ಯಾಕಾಂಡದ ಪರಿಣಾಮವಾಗಿ, 1924ರ ಹೊತ್ತಿಗೆ ಭಾರತದಲ್ಲಿ ‘ಕೋಮು ಗಲಭೆಗಳು’ ಹೆಚ್ಚಾಗಿದ್ದವು. ಸುಖಾಸುಮ್ಮನೆ ಹಿಂದೂ ಮುಸ್ಲಿಂ ಗಲಭೆಗಳಾದವು, ಸಾವಿರಾರು ಹಿಂದೂಗಳ ಹತ್ಯೆ ಯಾಯಿತು. ಗಲಭೆಗಳಲ್ಲಿ ಮುಸಲ್ಮಾನರ ಅಟ್ಟಹಾಸ ಹೆಚ್ಚಾಗಿತ್ತು, ಹಿಂದೂಗಳು ಮುಸಲ್ಮಾನರಷ್ಟು ಕಠಿಣವಾಗಿ ಗಲಭೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಮುಸಲ್ಮಾನರಲ್ಲಿದಂಥ ಒಗ್ಗಟ್ಟು ಹಿಂದು ಗಳಲ್ಲಿರಲಿಲ್ಲ, ಸ್ವತಃ ನೆಹರು ತಮ್ಮ ಪುಸ್ತಕದಲ್ಲಿ ‘ಹಿಂದೂಗಳು ಕಚೇರಿಗಳಲ್ಲಿ ಕೆಲಸ ಮಾಡುವುದರಲ್ಲಿ ಮಾತ್ರ ನಿರತರಾಗಿರುತ್ತಾರೆಂದು ಹೇಳಿದ್ದಾರೆ.
ಹಿಂದೂಗಳಲ್ಲಿ ಇಲ್ಲದ ಒಗ್ಗಟ್ಟಿನ ಪರಿಣಾಮವಾಗಿ ಬ್ರಿಟಿಷರು ಇಷ್ಟು ವರ್ಷಗಳ ಕಾಲ ನಮ್ಮನ್ನು ಆಳಲು ಸಾಧ್ಯವಾಗಿದೆಯೆಂಬ ಅಂಶ ಡಾಕ್ಟರ್ ಜಿಯ ಮನಸ್ಸಿನಲ್ಲಿ ಯಾವಾಗಲೂ ಕೊರೆಯುತ್ತಿತ್ತು. ಅತ್ತ ಮುಸಲ್ಮಾನರು ತಮ್ಮ ಧರ್ಮ ಮೊದಲು, ನಂತರ ದೇಶವೆಂಬುದನ್ನು ಪದೇ ಪದೆ ತೋರಿಸಿಕೊಡುತ್ತಿದ್ದರು. ಇಂತಹದ್ದೇ ಅನುಭವ ‘ಸಾವರ್ಕರ್’ರಿಗೆ ಅಂಡಮಾನಿನಜೈಲಿನಲ್ಲಿರುವಾಗ ಆಗಿತ್ತು, ಹಿಂದುಗಳಲ್ಲಿನ ಒಗ್ಗಟ್ಟನ್ನು ಒಂದು ಸಂಘಟನೆಯ ಮೂಲಕ ಮಾಡಿಸಿದರೆ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸುವುದು ಸುಲಭವೆಂದು ಕ್ಟರ್ ಜಿಗೆ ತಿಳಿದಿತ್ತು.
ಸ್ವಾತಂತ್ರ್ಯ ನಂತರ ಸುದೀರ್ಘವಾದ ಅಭಿವೃದ್ಧಿ ಹೊಂದಿದ ದೇಶವನ್ನು ಕಟ್ಟಲು ಹಿಂದೂಗಳ ಒಗ್ಗೂಡುವಿಗೆ ಅತೀ ಮುಖ್ಯ ವೆಂಬು ದನ್ನೂ ಸಹ ಡಾಕ್ಟರ್ ಜಿಗೆ ತಿಳಿದಿತ್ತು. ತಮ್ಮ ಸಂಘಟನಾ ಯೋಜನೆಯನ್ನು ಕಾರ್ಯರೂಪಕ್ಕೆ ತಂದು 1925ರ ‘ವಿಜಯ  ದಶಮಿ’ಯಂದು ‘ರಾಷ್ಟ್ರೀಯ ಸ್ವಯಂ ಸೇವಾ ಸಂಘ’ವನ್ನು ಸ್ಥಾಪಿಸಿದರು. ‘ರಾಷ್ಟ್ರೀಯ ಸ್ವಯಂ ಸೇವಾ ಸಂಘ’ವನ್ನು ಸ್ಥಾಪಿಸಿದ ನಂತರವೂ ಸಹ ಡಾಕ್ಟರ್ ಜಿ ತಮ್ಮ ಸ್ವಾತಂತ್ರ್ಯ ಹೋರಾಟ ವನ್ನು ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿಯೇ ಮಾಡಲು ನಿರ್ಧರಿಸಿದ್ದರು.
ಹಿಂದೂ ಯುವಕರನ್ನು ಒಗ್ಗೂಡಿಸುವ ಕೆಲಸ ಒಂದೆಡೆ ನಡೆಯುತ್ತಿದ್ದರೆ, ಬ್ರಿಟಿಷರ ವಿರುದ್ಧ ಹೋರಾಡಲು ಮಾಡಬೇಕಾದ ಕೆಲಸಗಳನ್ನು ಡಾಕ್ಟರ್ ಜಿ ಚಾಚೂ ತಪ್ಪದೆ ಮಾಡುತ್ತಿದ್ದರು. ನೋಡ ನೋಡುತ್ತಲೇ ‘ರಾಷ್ಟ್ರೀಯ ಸ್ವಯಂ ಸೇವಾ ಸಂಘ’ಕ್ಕೆ ಪ್ರಾದ್ಯಾಪಕರು, ವೈದ್ಯರು, ವಕೀಲರು, ವ್ಯವಹಾರಸ್ಥರು, ದೊಡ್ಡ ದೊಡ್ಡ ವಿದ್ವಾಂಸರು ಸೇರಿಕೊಂಡರು, ಯಾರೂ ಊಹಿಸದ ರೀತಿಯಲ್ಲಿ ಸಂಘವು ಬೆಳೆಯತೊಡಗಿತು. 1930ರಲ್ಲಿ ತಮ್ಮ ‘ಸರಸಂಘಚಾಲಕ’ರ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಬ್ರಿಟಿಷರ ವಿರುದ್ಧ ಡಾಕ್ಟರ್ ಜಿ ‘ಜಂಗಲ್ ಸತ್ಯಾಗ್ರಹ’ಕ್ಕೆ ಧುಮುಕಿದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅವರ ಹೋರಾಟದ ಹಾದಿ ಸ್ಪಷ್ಟವಾಗಿತ್ತು.
ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿಯೇ ಹೋರಾಟ ನಡೆಯುತ್ತಿದ್ದರಿಂದ ತಾನೂ ಸಹ ಅವರೊಟ್ಟಿಗೆ ಹೊರಡ ಬೇಕೆಂದು ನಿರ್ಧರಿಸಿದ್ದರು. ಸಂಘದ ಸ್ವಯಂಸೇವಕರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಲು ನಾವು ತಯಾರಿದ್ದೇವೆಂದು ಹೇಳಿ  ದಾಗ, 1920ರಲ್ಲಿ ಹೇಳಿದ ಮಾತುಗಳನ್ನೇ ಪುನಃ ಹೇಳಿದರು. ಕೇವಲ ಜೈಲಿಗೆ ಹೋಗುವುದರಿಂದ ನಮಗೆ ಸ್ವತಂತ್ರ್ಯ ಸಿಗುವುದಿಲ್ಲ, ಜೈಲಿನ ಒಳಗೆ ಹಾಗೂ ಹೊರಗೆ ಎರಡೂ ಕಡೆ ಬ್ರಿಟಿಷರನ್ನು ಓಡಿಸುವ ಕಾರ್ಯದಲ್ಲಿ ನೀವೆಲ್ಲರೂ ಪಾಲ್ಗೊಳ್ಳ ಬೇಕೆಂದು ಹೇಳಿದ್ದರು.
ನೂರಾರು ಸ್ವಯಂಸೇವಕರ ಜತೆಗೆ ‘ಡಾಕ್ಟರ್ ಜಿ’ ಒಂಬತ್ತು ತಿಂಗಳುಗಳ ಜೈಲುವಾಸವನ್ನು ‘ಜಂಗಲ್ ಸತ್ಯಾಗ್ರಹ’ದಲ್ಲಿ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆ ಯಾದ ಡಾಕ್ಟರ್ ಜಿ, ‘ಕಾಶಿ’ ವಿಶ್ವನಾಥನ ಸನ್ನಿದಿಗೆ ಭೇಟಿ ನೀಡಿದ್ದರು. ‘ವಿಶ್ವನಾಥ’ನಮಂದಿರದ ಪಕ್ಕದಲ್ಲಿದ್ದ ‘ಮಸೀದಿ’ಯನ್ನು ನೋಡಿದ ಡಾಕ್ಟರ್ ಜಿ, ಹಿಂದೂಗಳ ಮೇಲಿನ ಸತತ ಆಕ್ರಮಣಗಳ ನೆನೆದರು. ‘ಸಂಘವು’ ಇಂತಹ ಆಕ್ರಮಣಗಳಲ್ಲಿ ಹುದುಗಿಹೋದಂಥ ಹಿಂದೂ ಸಂಸ್ಕೃತಿ ಯನ್ನು ಎತ್ತಿ ಹಿಡಿಯುತ್ತದೆಯೆಂಬ ಸಂದೇಶ ವನ್ನು ಸ್ವಯಂ ಸೇವಕರಿಗೆ ಹೇಳಿದ್ದರು. 1986ರ ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನಾ ವಿಧಿಯ ಹಿಂದೆ, ಅಂದರೆ 1959ರಲ್ಲಿ ಕಾಶಿಯಲ್ಲಿನ ವಿಶ್ವನಾಥ ದೇವಸ್ಥಾನವನ್ನು ಹಿಂದುಗಳಿಗೆ ಪುನರ್ ಪ್ರತಿಷ್ಠಾಪಿಸುವ ಪ್ರತಿಜ್ಞಾವಿಧಿಯು ನಡೆದಿತ್ತು.
‘ಜಂಗಲ್ ಸತ್ಯಾಗ್ರಹ’ದ ಸೆರೆಮೆನೆ ವಾಸದ ನಂತರ ‘ಡಾಕ್ಟರ್ ಜಿ’ ‘ಉಪ್ಪಿನ ಸತ್ಯಾಗ್ರಹ’ದಲ್ಲಿ ಪಾಲ್ಗೊಂಡಿದ್ದರು, ಪದೇ ಪದೆ ‘ಆರ್‌ಎಸ್‌ಎಸ್’ನವರು ಸ್ವಾತಂತ್ರ್ಯಕ್ಕಾಗಿ ಏನು ಮಾಡಿದ್ದಾರೆಂದು ಹೇಳುವ ‘ರಾಹುಲ್ ಗಾಂಧಿ’ ಇತಿಹಾಸ ವನ್ನು ಒಮ್ಮೆ ಸರಿಯಾಗಿ ತಿಳಿದುಕೊಳ್ಳಬೇಕು. ನಿಧಾನವಾಗಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದ ಬೆಳೆವಣಿಗೆಯೂ ಎಲ್ಲೂ ಹಬ್ಬಲು ಶುರುವಾಯಿತು. 1932ರ ಹೊತ್ತಿಗೆ ಬ್ರಿಟಿಷರಿಗೆ ಸಂಘವು ಅಪಾಯಕಾರಿಯಾಗಿ ಕಂಡಿತು.
1932ರಲ್ಲಿ ಬ್ರಿಟಿಷರು ಒಂದು ಸುತ್ತೋಲೆಯನ್ನು ಹೊರಡಿಸಿದರು. ಅದರನ್ವಯ ಸರಕಾರಿ ನೌಕರರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿರಲಿಲ್ಲ. ಸಂಘವು ಒಂದು ಕೋಮುವಾದಿ ಸಂಘಟನೆಯಾಗಿದ್ದು, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದರಿಂದ ಅಲ್ಲಿಗೆ ಸರಕಾರಿ ನೌಕರರು ಹೋಗಬಾರದೆಂಬ ಕಟ್ಟು ನಿಟ್ಟಿನ ಆದೇಶ ಅದಾಗಿತ್ತು. ಡಾಕ್ಟರ್ ಜಿ ಸುಮ್ಮನೆ ಕೂರಲಿಲ್ಲ, ‘ಮಧ್ಯ ಪ್ರಾಂತ’ದ ಗೃಹ ಸಚಿವರನ್ನು ಕರೆಸಿ ಕಾರ್ಯಕ್ರಮ ವೊಂದರಲ್ಲಿಸಂಘವು ಯಾವುದಾದರೊಂದು ರಾಜಕೀಯ ಚಳವಳಿಯನ್ನು ಮಾಡಿರುವ ಉದಾಹರಣೆಯನ್ನು ನೀಡುವಂತೆ ಹೇಳಿದರು.ಸರಕಾರದ ಬಳಿ ಉತ್ತರವಿರಲಿಲ್ಲ. ನಮ್ಮ ಹಿಂದೂ ಧರ್ಮದ ಒಗ್ಗೂಡುವಿಕೆಗೆ ಕಟ್ಟುವ ಸಂಘವು ಯಾವ ರೀತಿಯಲ್ಲಿಕೋಮುವಾದಿಯಾಗಿದೆಯೆಂದು ಸ್ವಲ್ಪ ಹೇಳಿ ಎಂದು ಹೇಳುವ ಮೂಲಕ, ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
ಬ್ರಿಟಿಷರು ಹೊರಡಿಸಿದ ಸುತ್ತೋಲೆಯನ್ನು ಯಾರೂ ಸಹ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಸಂಘವು ತನ್ನ ಸಮಾಜಮುಖಿ ಕಾರ್ಯ ಗಳನ್ನು ಮಾಡುತ್ತಲೇ ಇತ್ತು. ಇದರಿಂದ ಬೇಸತ್ತ ಬ್ರಿಟಿಷ್ ಸರಕಾರ ಮತ್ತೊಮ್ಮೆ 1933ರಲ್ಲಿ ಸರಕಾರಿ ಶಾಲೆಯಅಧ್ಯಾಪಕರೂ ಸಹ ಸಂಘದ ಕೆಲಸದಲ್ಲಿ ತೊಡಗಿಸಿಕೊಳ್ಳಬಾರದೆಂಬ ಸುತ್ತೋಲೆಯನ್ನು ಹೊರಡಿಸಿತ್ತು. ಬ್ರಿಟಿಷರಿಗೆ ತಾವು ಏನೇ ಮಾಡಿದರೂ ಸಹ ಸಂಘದ ಸ್ವಯಂಸೇವಕರು ಸ್ವಾತಂತ್ರ್ಯದ ಪರವಾಗಿ ತಮ್ಮ ಕೆಲಸ ಮಾಡುವುದನ್ನು ಬಿಡುವುದಿಲ್ಲವೆಂಬ ವಿಷಯ ತಿಳಿಯಿತು.
1937ರಲ್ಲಿ ಸಾವರ್ಕರ್ ತಮ್ಮ ‘ಗೃಹ ಬಂಧನ’ದಿಂದ ಮುಕ್ತರಾದಾಗ ದೇಶದೆಡೆ ಪ್ರಯಾಣ ಮಾಡುತ್ತಿದ್ದರು. ಅಂತಹ ಸಮಯ ದಲ್ಲಿ ಅವರು ‘ನಾಗಪುರ’ಕ್ಕೆ ಬಂದಾಗ ‘ಡಾಕ್ಟರ್ ಜಿ’ ಅವರ ಜತೆಗೂಡಿದರು. ನಾಗಪುರದ ಅಕ್ಕಪಕ್ಕದ ಭಾಗಗಳಲ್ಲಿ ಸಾವರ್ಕರ್ ಜತೆಗಿದ್ದಂಥ ಡಾಕ್ಟರ್ ಜಿ ತಮ್ಮ ಸಾವಿರಾರು ಸ್ವಯಂಸೇವಕರ ಜತೆಗೆ ಹಲವು ಕಾರ್ಯಕ್ರಮಗಳನ್ನು ಮಾಡಿಸಿದ್ದರು. ಸಾವರ್ಕರ್ ಅವರಿಗೆ ಬೇಕಿದ್ದಂಥ ಬೆಂಬಲವನ್ನು ಡಾಕ್ಟರ್ ಜಿ ತಮ್ಮ ಸ್ವಯಂಸೇವಕರ ಮೂಲಕ ನೀಡುತ್ತಿದ್ದರು. ಸಾವರ್ಕರ್ ಜತೆಗೆ ಕಳೆದ ಸಮಯವನ್ನು ಡಾಕ್ಟರ್ ಜಿ ತಮ್ಮ ಜೀವನದ ಅಮೂಲ್ಯ ಕ್ಷಣಗಳೆಂದು ಹೇಳಿಕೊಂಡಿದ್ದಾರೆ.
ಅಷ್ಟು ಹೊತ್ತಿಗಾಗಲೇ ಬ್ರಿಟಿಷರಿಗೆ ದೊಡ್ಡ ತಲೆ ನೋವಾಗಿದ್ದಂಥ ’ರಾಷ್ಟ್ರೀಯ ಸ್ವಯಂ ಸೇವಾ ಸಂಘ’ವು ಕಾಂಗ್ರೆಸ್ ಪಕ್ಷಕ್ಕೆ ಸರಿ ಸಮನಾಗಿ ಬೆಳೆದಿತ್ತು. ಸಂಘದ ಬೆಳವಣಿಗೆಯನ್ನು ಸಹಿಸದ ಕಾಂಗ್ರೆಸ್ ಪಕ್ಷವು, ಬ್ರಿಟಿಷರ ಜತೆ ಕೈ ಜೋಡಿಸಿ ಸಂಘದ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಲು ಶುರುಮಾಡಿತ್ತು. ‘ಮಹಾತ್ಮಾ ಗಾಂಧಿ’ಯ ಅಹಿಂಸಾ ತತ್ತ್ವವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿ ದ್ದಂಥ ಕಾಂಗ್ರೆಸ್, ಸಂಘವು ಕೇವಲ ಕ್ರಾಂತಿಕಾರಿ ಸಂಘಟನೆಯೆಂಬ ತೀರ್ಮಾನಕ್ಕೆ ಬಂದಿತ್ತು.
ಸಂಘವು ಮಹಾತ್ಮಾ ಗಾಂಧಿಯವರ ಅಹಿಂಸ ತತ್ತ್ವಕ್ಕೆ ವಿರುದ್ಧವಾದಂಥ ಸಂಘಟನೆ ಎಂದು ಕಾಂಗ್ರೆಸ್ ಯೋಚಿಸತೊಡಗಿತ್ತು. ಹೊಟ್ಟೆಉರಿಯಿಂದಾಗಿ ಕಾಂಗ್ರೆಸ್ ಸಂಘವನ್ನು ದ್ವೇಷಿಸಲು ಶುರುಮಾಡಿತ್ತು. ಸಮಾಜ ದಲ್ಲಿದ್ದ ಸಂಘದ ಜನಪ್ರಿಯತೆಯ ಭಯವು ಕಾಂಗ್ರೆಸ್ ಪಕ್ಷದ ‘ಏಕಸ್ವಾಮ್ಯತೆ’ಗೆ ದಕ್ಕೆ ತರುವಂತಿತ್ತು. ಇದರಿಂದ ಹೆದರಿದ ಕಾಂಗ್ರೆಸ್ ಡಾಕ್ಟರ್ ಜಿ ಸಂಘದ ಜತೆಗಿನ ತಮ್ಮ ಸಂಬಂಧವನ್ನು ವಿವರವಾಗಿ ಹೇಳಬೇಕೆಂದು ಪತ್ರದ ಮೂಲಕ ಕೇಳಿತ್ತು.
ಸಂಘದ ಉದ್ದೇಶ ಹಾಗೂ ಕಾರ್ಯ ಚಟುವಟಿಕೆಗಳ ಸಂಪೂರ್ಣ ವಿವರವನ್ನು ಕಾಂಗ್ರೆಸ್ ಪಕ್ಷಕ್ಕೆ ಹೇಳಬೇಕೆಂದು ಪತ್ರದಲ್ಲಿ ಕೇಳಲಾಗಿತ್ತು. ಡಾಕ್ಟರ್ ಜಿ ಪತ್ರದ ಮೂಲಕ ಕಳೆದ ಹನ್ನೆರಡು ವರ್ಷಗಳಿಂದ ಸಂಘವು ಮಾಡುತ್ತಿರುವ ಕೆಲಸ ವೆಲ್ಲವು ನಿಮಗೆ ತಿಳಿದಿದೆ. ಕಾಂಗ್ರೆಸ್ಸಿನ ಕಾರ್ಯಕ್ಕೆ ಸಂಘವು ಎಂದೂ ಸಹ ಅಡ್ಡಿಪಡಿಸಿಲ್ಲ ಬ್ರಿಟಿಷರ ವಿರುದ್ಧದ ಹೋರಾಟ ದಲ್ಲಿ ನಾನೂ ಸಹ ಸದಾ ತಮ್ಮೊಂದಿಗಿದ್ದೆ ಎಂದು ಉತ್ತರ ನೀಡಿದ್ದರು.
ಡಾಕ್ಟರ್ ಜಿ ಹಾಗೂ ಸಂಘವು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಎಷ್ಟೇ ಸಹಾಯ ಮಾಡಿದ್ದರೂ ಸಹ ತನ್ನ ರಾಜಕೀಯ ಅಸ್ತಿತ್ವದ ಭಯದಿಂದ ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನು ಸಂಘಧ ಮೇಲೆ ಮಾಡತೊಡಗಿತು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತನ್ನ ಅಸ್ತಿತ್ವ ವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಅಂದು ಮಾಡಿದ ಅಪವಾದಗಳನ್ನೇ ಇಂದೂ ಸಹ ‘ಸಂಘದ’ಮೇಲೆ ಮಾಡುತ್ತಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ‘ರಾಷ್ಟ್ರೀಯ ಸ್ವಯಂ ಸಂಘ’ದ ಕೊಡುಗೆ ಏನು ಎಂದು ಕೇಳುವವರಿಗೆ ‘ಡಾಕ್ಟರ್ ಜಿ’ಯವರಇತಿಹಾಸವನ್ನೊಮ್ಮೆ ಓದಿದರೆ ಉತ್ತರ ಸಿಗುತ್ತದೆ.