ಅಧ್ಯಕ್ಷ ಪಟ್ಟದಿಂದ ತೊಲಗಿದರೂ, ತೊಟ್ಟಿಕ್ಕುತ್ತಲೇ ಇದೆ ನಗೆಹನಿಗಳು !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್‌
ಅ ಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ತೀರಾ ಕೆಟ್ಟದಾಗಿ ನಿರ್ಗಮಿಸಿ, ಐವತ್ತು ದಿನಗಳಾಗುತ್ತಾ ಬಂದರೂ, ಅವರ ಬಗ್ಗೆ ಜೋಕುಗಳು ನಿಂತಿಲ್ಲ. ಕೊನೆ ಕೊನೆಗೆ ಟ್ರಂಪ್‌ನನ್ನು ಅಮೆರಿಕ ಜನತೆ ಮತ್ತು ಅಲ್ಲಿನ ಮಾಧ್ಯಮ, ಜೋಕರ್ ಥರ, ಶುದ್ಧ ಪೆಕರನಂತೆ ನೋಡಿದ್ದು ಸುಳ್ಳಲ್ಲ.
ಈಗಲೂ ಟ್ರಂಪ್ ವಿಷಯ ಬಂದರೆ, ಅವರ ಬಗ್ಗೆ ಲಘುವಾಗಿ ಮಾತಾಡುತ್ತಾರೆ. ಜೋಕ್ ಸಿಡಿಸಿ  ವಡಿ ಮಾಡಿ ನಗುತ್ತಾರೆ. ಟ್ರಂಪ್ ವಿಷಯ ಪ್ರಸ್ತಾಪವಾದರೆ, ಅಲ್ಲಿ ಒಂದಷ್ಟು ತಮಾಷೆ, ಹಾಸ್ಯ, ನಗುವಿಗೆ ಕೊರತೆಯಿರುವುದಿಲ್ಲ. ಅಮೆರಿಕದಂಥ ದೇಶದ ಅಧ್ಯಕ್ಷ ಈ ಪರಿ ಲೇವಡಿಗೆ ಎಂದೂ ಗುರಿಯಾಗಿರಲಿಲ್ಲವೇನೋ. ಟ್ರಂಪ್ ಕುರಿತ ನಾಲ್ಕು ತಮಾಷೆಯ (ಕಾಲ್ಪನಿಕ) ಪ್ರಸಂಗಗಳು.ಮೊದಲ ಪ್ರಸಂಗ.
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕಾರ ಸ್ವೀಕರಿಸಿದ (ಜನವರಿ ೨೧ರಂದು) ಮರುದಿನ, ವೈಟ್ ಹೌಸ್‌ನ ಪೆನ್ಸಿಲ್ವೇನಿಯಾ ಅವೆನ್ಯೂದಿಂದ ಯುವಕನೊಬ್ಬ ನುಗ್ಗುತ್ತಿರುವಾಗ, ಪೊಲೀಸ್ ಅವನನ್ನು ತಡೆದು ನಿಲ್ಲಿಸಿದ. ‘ವೈಟ್ ಹೌಸ್ ನಲ್ಲಿರುವ ಪ್ರೆಸಿಡೆಂಟ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತಾಡಬೇಕಿದೆ’ ಎಂದ ಯುವಕ.
ಆ ಮಾತನ್ನು ಕೇಳಿದ ಪೊಲೀಸ, ‘ನಿನಗೆ ಗೊತ್ತಿಲ್ಲವಾ? ಟ್ರಂಪ್ ಈಗ ಅಮೆರಿಕದ ಅಧ್ಯಕ್ಷರಲ್ಲ, ಹೀಗಾಗಿ ಅವರು ಇಲ್ಲಿ ಉಳಿದು ಕೊಳ್ಳುತ್ತಿಲ್ಲ’ ಎಂದು ಹೇಳಿ, ಆ ಯುವಕನನ್ನು ಸಾಗಹಾಕಿದ. ಮರುದಿನ ಅದೇ ಯುವಕ ಮತ್ತೆ ಬಂದ. ‘ವೈಟ್ ಹೌಸ್ನಲ್ಲಿರುವ ಪ್ರೆಸಿಡೆಂಟ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತಾಡಬೇಕಿದೆ’ ಎಂದ. ಅದಕ್ಕೆ ಪೊಲೀಸ್, ‘ನೀನು ನಿನ್ನೆ ಬಂದು ಇದೇ ಪ್ರಶ್ನೆ ಕೇಳಿದ್ದೆ. ಟ್ರಂಪ್ ಈಗ ಅಮೆರಿಕದ ಅಧ್ಯಕ್ಷರಲ್ಲ, ಹೀಗಾಗಿ ಅವರು ಇಲ್ಲಿ ಉಳಿದುಕೊಳ್ಳುತ್ತಿಲ್ಲ ಎಂದು ಹೇಳಿದ್ದೆ. ಆದರೂ ಇಂದು ಬಂದು ಅದೇ ಪ್ರಶ್ನೆ ಕೇಳುತ್ತಿzಯಲ್ಲ?’ ಎಂದು ಅವನನ್ನು ಗದರಿ ಸಾಗ ಹಾಕಿದ.
ಮೂರನೇ ದಿನವೂ, ವೈಟ್ ಹೌಸ್‌ಗೆ ಬಂದ ಆ ಯುವಕ, ‘ವೈಟ್ ಹೌಸ್‌ನಲ್ಲಿರುವ ಪ್ರೆಸಿಡೆಂಟ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತಾಡಬೇಕಿದೆ’ ಎಂದ. ಅವನನ್ನು ನೋಡಿ ಕ್ರುದ್ಧನಾದ ಪೊಲೀಸ್, ‘ನೀನು ಕಳೆದ ಮೂರು ದಿನಗಳಿಂದ ಬಂದು, ಅದೇ ಅದೆ ಪ್ರಶ್ನೆಯನ್ನು ಕೇಳುತ್ತಿದ್ದೀಯಾ. ನಿನಗೆ ಎಷ್ಟು ಸಲ ಹೇಳಬೇಕು ಟ್ರಂಪ್ ಈಗ ಅಮೆರಿಕದ ಅಧ್ಯಕ್ಷರಲ್ಲ ಎಂದು. ಹೀಗಾಗಿ ಅವರು ಇಲ್ಲಿ ಉಳಿದುಕೊಳ್ಳುತ್ತಿಲ್ಲ’ ಎಂದು ಜೋರಾಗಿ ಗದರಿದ.
ಅದಕ್ಕೆ ಆ ಯುವಕ ಹೇಳಿದ – ‘ನನಗೂ ಗೊತ್ತಿದೆ ಈಗ ಟ್ರಂಪ್ ಅಧ್ಯಕ್ಷರಲ್ಲವೆಂದು ಮತ್ತು ಅವರು ಇಲ್ಲಿ ಉಳಿದುಕೊಳ್ಳುತ್ತಿಲ್ಲ ವೆಂದು. ಆದರೂ ಪದೇ ಪದೆ ಈ ಮಾತುಗಳನ್ನು ಕೇಳಲು ಇಂಪಾಗಿರುತ್ತವೆ ಮತ್ತು ಇದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ. ಹೀಗಾಗಿ ದಿನವೂ ಬರುತ್ತಿದ್ದೇನೆ’ ಆ ಯುವಕನ ಮಾತುಗಳನ್ನು ಕೇಳಿದ ಪೊಲೀಸ್ ನುಡಿದ – ‘ಹಾಗಾದರೆ ನೀನು ನಾಳೆಯೂ ಬರುತ್ತೀಯಲ್ಲ? ತಪ್ಪಿಸಬೇಡ.’
ಎರಡನೆಯ ಪ್ರಸಂಗ.ಯುವಕನೊಬ್ಬ ವೈಟ್ ಹೌಸ್‌ಗೆ ಫೋನ್ ಮಾಡಿದ. ಆಪರೇಟರ್ – ನಾನು ನಿಮಗೆ ಹೇಗೆ ಸಹಾಯ ಮಾಡಲಿ? ಯುವಕ – ನಾನು ಮುಂದಿನ ಅಧ್ಯಕ್ಷನಾಗಬೇಕು ಆಪರೇಟರ್ – ನೀನು ಮೂರ್ಖನಿದ್ದೀಯಾ? ಯುವಕ – ಅದು ಕಡ್ಡಾಯವಾ?
ಮೂರನೆಯ ಪ್ರಸಂಗ.
ಕಳೆದ ಡಿಸೆಂಬರ್ ರಾತ್ರಿಯಲ್ಲಿ ಅಧ್ಯಕ್ಷ ಟ್ರಂಪ್‌ಗೆ ಊಟವಾದ ನಂತರ ವೈಟ್ ಹೌಸ್ ಹುಲ್ಲು ಹಾಸಿನ ಮೇಲೆ ನಡೆಯಬೇಕುಎಂದೆನಿಸಿತು. ಹುಲ್ಲು ಹಾಸು ಹಿಮದಿಂದ ಆವರಿಸಿತ್ತು. ಬೆಳದಿಂಗಳ ರಾತ್ರಿಯಲ್ಲಿ ಅದು ಹೊಳೆಯುತ್ತಿತ್ತು. ಸ್ವಲ್ಪ ದೂರನಡೆಯುತ್ತಿದ್ದಂತೆ, ಹಿಮದ ಮೇಲೆ    ಎಂದು ಮೂತ್ರ ಚೆಲ್ಲಿ ಬರೆದಿದ್ದು ಕಾಣಿಸಿತು. ಅದನ್ನು ನೋಡಿದ ಟ್ರಂಪ್ ಕೋಪ ನೆತ್ತಿಗೇರಿತು. ತನ್ನ ಸೆಕ್ಯೂರಿಟಿ ಮುಖ್ಯಸ್ಥನನ್ನು ಕರೆದು, ‘ವೈಟ್ ಹೌಸ್‌ನಲ್ಲಿ ಏನು ನಡೆಯುತ್ತಿದೆ? ನಾನು ಸೋತಿದ್ದೇನೆ ಎಂದು ನೀವೆ ನನ್ನನ್ನು ಕಡೆಗಣಿಸುತ್ತಿದ್ದೀರಾ? ಯಾರೋ ಹುಲ್ಲು ಹಾಸಿನ ಮೇಲೆ ಬಿದ್ದ ಹಿಮದಲ್ಲಿ ಮೂತ್ರ ಚೆಲ್ಲಿ    ಎಂದು ಬರೆದಿದ್ದಾರೆ. ಇಲ್ಲಿ ಸೆಕ್ಯೂರಿಟಿ ಇಲ್ಲವಾ? ನೀವೆ ಏನು ಮಾಡುತ್ತಿದ್ದೀರಿ?’ ಎಂದು ಯದ್ವಾ ತದ್ವಾ ಗದರಿದ. ಸೆಕ್ಯೂರಿಟಿ ಸ್ಟಾಫ್ ತಲೆತಗ್ಗಿಸಿ ನಿಂತಿದ್ದರು.
‘ನನಗೆ ನಾಳೆ ಸಾಯಂಕಾಲದೊಳಗೆ, ಈ ಕೃತ್ಯವೆಸಗಿದವರು ಯಾರು ಎಂಬುದು ಗೊತ್ತಾಗಬೇಕು. ಇಲ್ಲದಿದ್ದರೆ ನಿಮ್ಮನ್ನೆ ವಜಾ ಮಾಡುತ್ತೇನೆ’ ಎಂದು ಟ್ರಂಪ್ ಕಿರುಚಿದ. ತಕ್ಷಣ ಸೆಕ್ಯೂರಿಟಿ ಮುಖ್ಯಸ್ಥ ತನಿಖೆಗೆ ಮುಂದಾದ. ಮರುದಿನ ಸಾಯಂಕಾಲದ ಹೊತ್ತಿಗೆ, ಟ್ರಂಪ್ ಭೇಟಿಯಾದ ಭದ್ರತಾ ಮುಖ್ಯಸ್ಥ, ‘ಮಿಸ್ಟರ್ ಪ್ರೆಸಿಡೆಂಟ್, ನಿಮಗೆ ಒಂದು ಕೆಟ್ಟ ಸುದ್ದಿ ಮತ್ತು ಅತಿ ಕೆಟ್ಟ ಸುದ್ದಿ ಹೇಳಲು ಬಯಸುವೆ’ ಎಂದ. ‘ಮೊದಲು ಕೆಟ್ಟ ಸುದ್ದಿ ಹೇಳು’ ಎಂದ ಟ್ರಂಪ್.
‘ನಾವು ಹಲವರ ಮೂತ್ರದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷಿಸಿದೆವು. ಅಂತಿಮವಾಗಿ, ನಮಗೆ ಗೊತ್ತಾಗಿದ್ದೇನೆಂದರೆ, ಅದು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮೂತ್ರ ಎಂಬುದು ಖಚಿತವಾಗಿದೆ’ ಎಂದ ಭದ್ರತಾ ಮುಖ್ಯಸ್ಥ. ಅದನ್ನು ಕೇಳಿ ಟ್ರಂಪ್, ‘ಓ ಮೈ ಗಾಡ್! ನನ್ನ ಉಪಾಧ್ಯಕ್ಷನೇ ನನಗೆ ಈ ರೀತಿ ದ್ರೋಹ ಮಾಡೋದಾ? ಯಾರನ್ನೂ ನಂಬಬಾರದು’ ಎಂದು ಟೇಬಲ್ ಗುದ್ದಿದ. ಎರಡು ನಿಮಿಷಗಳ ನಂತರ, ‘ಸರಿ, ಇದಕ್ಕಿಂತ ಕೆಟ್ಟ ಸುದ್ದಿ ಯಾವುದು? ಹೇಳು’ ಎಂದ ಟ್ರಂಪ್.
ಭದ್ರತಾ ಮುಖ್ಯಸ್ಥ ಗಂಟಲು ಸರಿಪಡಿಸಿಕೊಳ್ಳುತ್ತಾ ಹೇಳಿದ – ‘ಮಿಸ್ಟರ್ ಪ್ರೆಸಿಡೆಂಟ್, ಅದು.. ಅದು…ಅದು… ಮೆಲನಿಯಾ(ಟ್ರಂಪ್ ಪತ್ನಿ) ಹ್ಯಾಂಡ್ ರೈಟಿಂಗ್…!’
ನಾಲ್ಕನೇ ಪ್ರಸಂಗ.ನಿರ್ಗಮಿಸುವ ಮುನ್ನ ವೈಟ್ ಹೌಸ್‌ಗೆ ಪೈಂಟ್ ಮಾಡಿಸಬೇಕು ಎಂದು ಟ್ರಂಪ್ ತೀರ್ಮಾನಿಸಿದ. ಅಂತಿಮವಾಗಿ, ಮೂರು ಕೋಟೇಶನ್ ಪಡೆದ. ಮೆಕ್ಸಿಕನ್ ಗುತ್ತಿಗೆದಾರ ಮೂರು ಮಿಲಿಯನ್ ಡಾಲರ್, ರಷ್ಯನ್ ಗುತ್ತಿಗೆದಾರ ಏಳು ಮಿಲಿಯನ್ ಡಾಲರ್ ಮತ್ತು ಭಾರತದ ಗುತ್ತಿಗೆದಾರ ಹತ್ತು ಮಿಲಿಯನ್ ಡಾಲರ್ ಕೋಟ್ ಮಾಡಿದ್ದರು.
ಮೊದಲು ಟ್ರಂಪ್ ಮೆಕ್ಸಿಕನ್ ಗುತ್ತಿಗೆದಾರನನ್ನು ಕರೆದು, ‘ನೀನೇಕೆ ಮೂರು ಮಿಲಿಯನ್ ಡಾಲರ್ ಕೋಟ್ ಮಾಡಿದ್ದೀಯಾ?’ ಎಂದು ಕೇಳಿದ. ಅದಕ್ಕೆ ಆತ ಹೇಳಿದ – ಒಂದು ಮಿಲಿಯನ್ ಡಾಲರ್ ಪೈಂಟ್ ಗೆ, ಒಂದು ಮಿಲಿಯನ್ ಡಾಲರ್ ಕೆಲಸಗಾರರಿಗೆ ಮತ್ತು ಒಂದು ಮಿಲಿಯನ್ ಡಾಲರ್ ನನ್ನ ಪ್ರಾಫಿಟ್’ ಮುಂದಿನ ಪಾಳಿ ರಷ್ಯನ್ ಗುತ್ತಿಗೆದಾರನದು. ಅವನಿಗೆ ಟ್ರಂಪ್ ‘ಏಳು ಮಿಲಿಯನ್ ಡಾಲರ್ ಕೋಟ್ ಮಾಡಿದ್ದೇಕೆ?’ ಎಂದು ಕೇಳಿದ.
ಅದಕ್ಕೆ ರಷ್ಯನ್ ಗುತ್ತಿಗೆದಾರ ಹೇಳಿದ – ‘ಮೂರು ಮಿಲಿಯನ್ ಡಾಲರ್ ಒಳ್ಳೆಯ ಗುಣಮಟ್ಟದ ಪೈಂಟ್‌ಗೆ. ಎರಡು ಮಿಲಿಯನ್ ಡಾಲರ್ ಕೆಲಸಗಾರರಿಗೆ ಮತ್ತು ಎರಡು ಮಿಲಿಯನ್ ಡಾಲರ್ ನನ್ನ ಪ್ರಾಫಿಟ್’ ಮುಂದಿನ ಸರದಿ ಭಾರತೀಯ ಗುತ್ತಿಗೆದಾರನದು. ಅವನನ್ನು ಮೇಲಿಂದ ಕೆಳಗೆ ನೋಡಿದ ಟ್ರಂಪ್, ‘ನೀನೇಕೆ ಹತ್ತು ಮಿಲಿಯನ್ ಡಾಲರ್ ಕೋಟ್ ಮಾಡಿದ್ದೀಯಾ?’ ಎಂದುಕೇಳಿದ. ಅದಕ್ಕೆ ಭಾರತೀಯ ಗುತ್ತಿಗೆದಾರ ಹೇಳಿದ – ‘ಮಿಸ್ಟರ್ ಪ್ರೆಸಿಡೆಂಟ್, ನಿಮ್ಮಂತೆ ನಾನೂ ಬ್ಯುಸಿನೆಸ್ ಮನ್. ಅಲ್ಲದೇನೀವು ನನ್ನ ಫ್ರೆಂಡ್ ಬೇರೆ. ನಿಮಗೆ ನಾಲ್ಕು ಮಿಲಿಯನ್  ಡಾಲರ್, ನನಗೆ ಮೂರು ಮಿಲಿಯನ್ ಡಾಲರ್ ಮತ್ತು ಉಳಿದ ಮೂರು ಮಿಲಿಯನ್ ಡಾಲರನ್ನು ಮೆಕ್ಸಿಕನ್ ಗುತ್ತಿಗೆದಾರನಿಗೆ ಕೊಟ್ಟು ಪೈಂಟ್ ಮಾಡಿಸುತ್ತೇನೆ.’ಯಾರಿಗೆ ಆ ಗುತ್ತಿಗೆ ಸಿಕ್ಕಿತು ಅನ್ನೋದನ್ನು ಪ್ರತ್ಯೇಕ ಹೇಳಬೇಕಿಲ್ಲ.
ಎಂದೆಂದೂ ಹೆಲ್ಮೆಟ್ ಧರಿಸದ ಗವಾಸ್ಕರ್ಇಂದಿಗೆ ಐವತ್ತು ವರ್ಷಗಳ ಹಿಂದೆ, ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಆಂಗ್ಲದೈನಿಕವೊಂದು ಅವರನ್ನು ಸಂದರ್ಶಿಸಿತು. ಅವರ ಸಂದರ್ಶನದಲ್ಲಿ ಒಂದು ಪ್ರಶ್ನೆ ಮತ್ತು ಅದಕ್ಕೆ ಆ ಮಹಾನ್ ಕ್ರಿಕೆಟ್ ಪಟು ನೀಡಿದ ಉತ್ತರ ಗಮನ ಸೆಳೆಯಿತು. ‘ನೀವೇಕೆ ನಿಮ್ಮ ಕ್ರಿಕೆಟ್ ಜೀವನದಲ್ಲಿ ಎಂದೂ ಹೆಲ್ಮೆಟ್ ಹಾಕಿಕೊಳ್ಳಲಿಲ್ಲ ಅಥವಾ ನೆಟ್ ಪ್ರಾಕ್ಟೀಸ್ ಮಾಡುವಾಗ ಹೆಲ್ಮೆಟ್ ಧರಿಸಿದ್ದಿರಾ?’ ಎಂಬ ಸಂದರ್ಶಕನ ಪ್ರಶ್ನೆಗೆ ಗವಾಸ್ಕರ್ ಹೇಳಿದ್ದು – ‘ಆ ದಿನಗಳಲ್ಲಿ ಯಾರೂ ಹೆಲ್ಮೆಟ್ ಧರಿಸುತ್ತಿರಲಿಲ್ಲ.
ನಾವು ಲೆಗ್-ಗಾರ್ಡ್ಸ್ ಮತ್ತು ಗ್ಲೋವ್ಸ್ ಹಾಕಿಕೊಳ್ಳುತ್ತಿದ್ದೆವು. ನಾವು ಉಳಿದುಕೊಳ್ಳುತ್ತಿದ್ದ ಹೋಟೆಲಿನಲ್ಲಿ ಇಟ್ಟಿರುತ್ತಿದ್ದ ದಪ್ಪಟವೆಲುಗಳನ್ನು ತೊಡೆಗೆ ಕಟ್ಟಿಕೊಳ್ಳುತ್ತಿದ್ದೆವು. 1971ರ ವೆಸ್ಟ್ ಇಂಡೀಸ್ ಪ್ರವಾಸದ ನಂತರ ತೊಡೆಗೆ ಸ್ಪಾಂಜ್ ಗಾರ್ಡ್ಸ್ ಧರಿಸಲಾ ರಂಭಿಸಿದೆವು. ಆದರೆ ಅದು ಟವೆಲ್ ಸುತ್ತಿಕೊಂಡಷ್ಟು ಸುರಕ್ಷಿತವಾಗಿರಲಿಲ್ಲ. ನಾನೆಂದೂ ಹೆಲ್ಮಟ್‌ನ್ನು ಧರಿಸಲಿಲ್ಲ. ಅದನ್ನು ಧರಿಸುವ ಅವಶ್ಯಕತೆಯೂ ಬೀಳಲಿಲ್ಲ. ಕಾರಣ ನನಗೆ ನನ್ನ ಬ್ಯಾಟಿಂಗ್ ಟೆಕ್ನಿಕ್‌ನಲ್ಲಿ ವಿಶ್ವಾಸವಿತ್ತು. ಕೈಯಲ್ಲಿ ಬ್ಯಾಟ್ ಇರುವಾಗ, ಹೇಗೆ ಬೌಲ್ ಎಸೆದರೂ ಎದುರಿಸಬಹುದಲ್ಲ.
ಒಮ್ಮೆ ಮಾಲ್ಕಮ್ ಮಾರ್ಷಲ್ ಎಸೆದ ಚೆಂಡು ನನ್ನ ಹಣೆಗೆ ಬಡಿಯಿತು. ಆನಂತರ ನನ್ನ ಕ್ರಿಕೆಟ್ ಜೀವನದ ಕೊನೆಯ ಮೂರು ವರ್ಷಗಳಲ್ಲಿ, ಆಗಾಗ ವೇಗದ ಬೌಲರುಗಳನ್ನು ಎದುರಿಸುವಾಗ ಸ್ಕಲ್ ಕ್ಯಾಪ್ ಧರಿಸುತ್ತಿದ್ದೆ, ಅದೂ ಹೊಸ ಚೆಂಡನ್ನು ಎದುರಿಸುವಾಗ ಮಾತ್ರ. ಅದನ್ನು ಬಿಟ್ಟರೆ ನಾನು ಸದಾ ಬಿಳಿ ಪನಾಮಾ ಹ್ಯಾಟ್ ಧರಿಸಿ ಆಡುತ್ತಿದ್ದೆ. ಉಳಿದಂತೆ ತಲೆಗೆ ಏನೂ ಧರಿಸದೇ ಆಡುತ್ತಿದ್ದುದೂ ಉಂಟು.’
ಪುಸ್ತಕ ಮತ್ತು ಪರಿಪೂರ್ಣತೆ‘ಯಾವ ಪುಸ್ತಕವೂ ಪರಿಪೂರ್ಣ ಅಲ್ಲ, ಯಾವ ಲೇಖಕನಿಗೂ ಎಲ್ಲವೂ ಗೊತ್ತಿರಲು ಸಾಧ್ಯವಿಲ್ಲ’ ಎಂಬುದು ಸಂಸ್ಕೃತ ಶ್ಲೋಕ.ವಿಷಯ ಪರಿಣತನೊಬ್ಬ ತನಗೆ ಪಾಂಡಿತ್ಯವಿರುವ ವಿಷಯದ ಬಗ್ಗೆ ಬರೆದಾಗಲೂ ಈ ಮಾತು ಅನ್ವಯ. ಹೀಗಾಗಿ ಎಲ್ಲ ಪುಸ್ತಕಗಳೂ ಒಂದಿಂದು ರೀತಿಯಲ್ಲಿ ಅಪೂರ್ಣವೇ. ಒಂದು ವಿಷಯದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಅದೇ ವಿಷಯದ ಬಗ್ಗೆ ಅನೇಕರು ಬರೆದ ಪುಸ್ತಕಗಳನ್ನು ಓದಬೇಕಾದೀತು. ಅದೇ ಸಂಶೋಧನೆ ಎಂದೂ ಕೆಲವರು ಹೇಳುತ್ತಾರೆ. ಹಾಗೆಂದು ಸಂಶೋಧನೆಯೂ ಪರಿಪೂರ್ಣ ಅಲ್ಲ.
ಹೀಗಾಗಿ ಒಂದೇ ವಿಷಯದ ಬಗ್ಗೆ ಹಲವರು ಸಂಶೋಧನೆ ಮಾಡುತ್ತಾರೆ. ನಮ್ಮ ಬಗ್ಗೆ ನಾವು ಬರೆದರೂ, ಅದು ಅಪೂರ್ಣವೇ. ಯಾವುದೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ, ಈ ಪ್ರಕೃತಿಯೂ ಸೇರಿ. ಏನೇ ಬರೆದರೂ ಅದಕ್ಕೆ ಸ್ವಲ್ಪ ಸೇರಿಸಬಹುದಂತೆ ಅಥವಾ ಯಾರ ಕಾಪಿಯನ್ನಾದರೂ ಎಡಿಟ್ ಮಾಡಬಹುದಂತೆ. ಯಾರ ಬರಹದದರೂ ತಪ್ಪು ಕಂಡು ಹಿಡಿಯಬಹುದಂತೆ.ವಾಲ್ಮೀಖಿ ಮೊದಲ ಸಲ ‘ರಾಮಾಯಣ’ ಬರೆದರೂ ಅದಾದ ಬಳಿಕ, ಸಾವಿರಾರು ಮಂದಿ ವ್ಯಾಖ್ಯಾನಿಸಿದ್ದಾರೆ, ತಮ್ಮದೃಷ್ಟಿಕೋನದಲ್ಲಿ ರಾಮಾಯಣವನ್ನು ಬರೆದಿದ್ದಾರೆ.
ವಾಲ್ಮೀಖಿ ಮೊದಲಿಗೆ ಬರೆದಿದ್ದರೂ, ಅದೇ ಪರಿಪೂರ್ಣ ಅಲ್ಲ, ಸರ್ವಸ್ವವಲ್ಲ. ‘ನೀವೇಕೆ ನಿಮ್ಮ ಆತ್ಮಕಥೆಯನ್ನು ಬರೆಯ ಬಾರದು?’ ಎಂದು ಅಟಲ್ ಬಿಹಾರಿ ವಾಜಪೇಯಿಗೆ ಕೇಳಿದಾಗ, ‘ನಾನು ನನ್ನ ಬಗ್ಗೆ ಹೇಳುವುದೇನೂ ಇಲ್ಲ. ನನ್ನ ಬಗ್ಗೆ ನನಗಿಂತ ನಿಮಗೇ (ಪತ್ರಕರ್ತರಿಗೆ) ಹೆಚ್ಚು ಗೊತ್ತಿದೆ’ ಎಂದು ಹೇಳಿದ್ದರು. (ನಾನು ಅವರ ಬಗ್ಗೆ ಬರೆದ ಸುಮಾರು ಆರು ನೂರು ಪುಟಗಳಬಯಾಗ್ರಫಿ (ಅಜಾತಶತ್ರು)ಯನ್ನು ವಾಜಪೇಯಿ ಕೈಗಿತ್ತಾಗಲೂ, ‘ನನಗೇ ನನ್ನ ಬಗ್ಗೆ ಇಷ್ಟೆ ವಿಷಯಗಳು ಗೊತ್ತಿಲ್ಲ’ ಎಂದು ತಮಾಷೆಗೆ ಹೇಳಿದ್ದರು.) ಇಂದಿರಾ ಗಾಂಧಿ ಸೇರಿದಂತೆ ಭಾರತದ ಮೂವರು ಪ್ರಧಾನಿಗಳಿಗೆ ಪತ್ರಿಕಾ ಸಲಹೆಗಾರರಾಗಿದ್ದ ಎಚ್.ವೈ. ಶಾರದಾ ಪ್ರಸಾದ್ ಅವರಿಗೆ, ‘ನೀವೇಕೆ ನಿಮ್ಮ ಆತ್ಮಕಥೆ ಬರೆಯಬಾರದು?’ ಎಂದು ಕೇಳಿದಾಗ, ಅವರು ಹೇಳಿದ್ದು – ‘ನೀವು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿದ್ದಾಗ (ಪಿಎಂಒ), ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸತ್ಯದ ಒಂದು ಮಗ್ಗುಲು ಅಷ್ಟೇ ಗೊತ್ತಾಗುವುದಿಲ್ಲ, ಅದಕ್ಕಿಂತ ಮುಖ್ಯವಾಗಿ ಸತ್ಯಕ್ಕೆ ಎಷ್ಟು ಮಗ್ಗುಲುಗಳು ಇದ್ದಿರಬಹುದು ಎಂಬುದೂ ಗೊತ್ತಾಗುವು ದಿಲ್ಲ. ನಾವು ಯಾವುದು ಸತ್ಯ ಎಂದು ಭಾವಿಸಿರುತ್ತೇವೋ, ಅದು ಮತ್ತೊಂದು ಮಗ್ಗುಲಿನಿಂದ ಬೇರೆ ರೀತಿಯಲ್ಲಿ ಕಾಣಿಸುತ್ತದೆ. ಹೀಗಾಗಿ ನಾನು ಬರೆಯುವ ಗೋಜಿಗೆ ಹೋಗಲಿಲ್ಲ.’
ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೂ, ‘ನೀವೇಕೆ ಆತ್ಮಕಥೆ ಬರೆಯುತ್ತಿಲ್ಲ?’ ಎಂದು ಕೇಳಿದಾಗಲೂ, ‘ನೀವು ನನ್ನ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಬದಲಿಸಲು ನನಗೆ ಇಷ್ಟವಿಲ್ಲ’ ಎಂದು ಹೇಳಿದ್ದರು. ಆಸ್ಪತ್ರೆ ಹಾಸಿಗೆ ಮೇಲೂ ಹಾಸ್ಯಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರು ಹಾಸ್ಯಪ್ರಿಯರು. ಅವರು ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗಲೂ ಹಾಸ್ಯಪ್ರಜ್ಞೆ ಮೆರೆದವರು. ಅವರ ಕೊನೆಯ ದಿನಗಳಲ್ಲಿ ಆಸ್ಪತ್ರೆಗೆ ಅಡ್ಮಿಟ್ ಆದಾಗ ನಿತ್ರಾಣರಾಗಿದ್ದರು.ಅವರ ಮುಖ ಕಳೆಗುಂದಿತ್ತು. ಅವರು ಹೆಚ್ಚು ದಿನ ಬದುಕುವುದಿಲ್ಲ ಎಂಬುದು ವೈದ್ಯರಿಗೆ ಮನದಟ್ಟಾಗಿತ್ತು. ಆ ಸಂಗತಿ ಪಟೇಲರಿಗೂ ಖಾತ್ರಿಯಾಗಿತ್ತು.
‘ಪಟೇಲರೇ, ನಿಮ್ಮನ್ನು ನೋಡಿದರೆ ಬಹಳ ಬೇಸರವಾಗುತ್ತದೆ. ನಿಮ್ಮ  ನೋಡಿದರೆ ಖೇದವಾಗುತ್ತದೆ’ ಎಂದು ವೈದ್ಯರೊಬ್ಬರು ಹೇಳಿದರಂತೆ. ಅದಕ್ಕೆ ಪಟೇಲರು ಹೇಳಿದರಂತೆ – ನನಗೆ ಅದರ ಬಗ್ಗೆ ಖೇದವಿಲ್ಲ. ನೀವು ತಲೆಕೆಡಿಸಿಕೊಳ್ಳ ಬೇಕಾದುದು  (ಕಣ್ಮರೆ ಅರ್ಥಾತ್ ಸಾವು) ಬಗ್ಗೆ
’ ಸಂಭಾವನೆ : ಅಂದು-ಇಂದುಇಂದು ಕ್ರಿಕೆಟ್ ಆಟಗಾರರನ್ನು   ಎಂದು ಕರೆಯುತ್ತಾರೆ. ಅವರು ‘ಹಾಲು ಹಿಂಡುವ ಆಕಳುಗಳಂತೆ.’ ಅವರು ಮುಟ್ಟಿದ್ದಕ್ಕೆ ಹಣ ಕೀಳುತ್ತಾರೆ. ಶೋ ರೂಮ್ ಉದ್ಘಾಟನೆಗೆ ಹೋದರೂ ಹತ್ತಾರು ಲಕ್ಷ ರುಪಾಯಿ ಪೀಕಿಸುತ್ತಾರೆ. ಯಾವುದಾದರೂ ಬ್ರಾಂಡ್‌ನ ಟೀ-ಶರ್ಟ್ ಹಾಕಿಕೊಂಡರೂ ಅದಕ್ಕೆ ಇಂತಿಷ್ಟು ಅಂತ ಛಾರ್ಜ್ ಮಾಡುತ್ತಾರೆ. ಇನ್ನು ಅವರ ದೇಹದ ಅಂಗಗಳ ಮೇಲೆ ಕಮರ್ಷಿಯಲ್ ಲೋಗೋ ಹಾಕಿಕೊಂಡು ಹಣ ಮಾಡುತ್ತಾರೆ. ಬ್ಯಾಟ್ ಮೇಲೆ ಪ್ರಮುಖ ಕಂಪನಿಗಳ ಸ್ಟಿಕ್ಕರ್ ಅಂಟಿಸಿಕೊಂಡರೂ ಹಣ ಝಣ ಝಣ!
ಈಗಂತೂ ಯಾವುದಾದರೂ ಹೋಟೆಲ್‌ಗೆ ಹೋಗಿ ಊಟ ಮಾಡಿ ಬಂದರೆ, ಆ ಬಗ್ಗೆ ಟ್ವೀಟ್ ಮಾಡಿದರೆ ಅಥವಾ ಇನ್ಸ್ಟಾಗ್ರಾಮ್ ‌ನಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿದರೆ  ಅದಕ್ಕೂ ಹಣ ಕೇಳುತ್ತಾರೆ, ಕೀಳುತ್ತಾರೆ. ಇನ್ನು ಅವರು ಫೈವ್ ಸ್ಟಾರ್ ಹೋಟೆಲ್ ಬಿಟ್ಟು ಬೇರೆಲ್ಲೂ ಉಳಿಯುವುದಿಲ್ಲ. ಬಿಸಿನೆಸ್ ಅಥವಾ ಫಸ್ಟ್ ಕ್ಲಾಸ್ ಬಿಟ್ಟು ವಿಮಾನದಲ್ಲಿ ಪ್ರಯಾಣಿಸುವು ದಿಲ್ಲ. ಇವನ್ನೆಲ್ಲ ನೋಡುವಾಗ, ಪತ್ರಕರ್ತ ಸುರೇಶ ಮೆನನ್ ಬರೆದ, ಭಾರತ ಕ್ರಿಕೆಟ್ ತಂಡದ ನಾಯಕ ಮತ್ತು ಖ್ಯಾತ ಸ್ಪಿನ್ ಬೌಲರ್ ಬಿಷನ್ ಸಿಂಗ್ ಬೇಡಿ ಬಗ್ಗೆ  :     ಕೃತಿಯಲ್ಲಿನ ಒಂದು ಪ್ರಸಂಗ ನೆನಪಾಗುತ್ತದೆ.
1975-76ರಲ್ಲಿ ನಾಗಪುರದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಬಿಷನ್ ಸಿಂಗ್ ಬೇಡಿ ಆಡಿದರು. ಎರಡು ದಿನಗಳ ನಂತರ ಚಂಡೀಗಢದಲ್ಲಿ ನಡೆಯಲಿರುವ ದುಲೀಪ್ ಟ್ರೋಫಿ ಪಂದ್ಯದಲ್ಲಿ ಬೇಡಿ ಆಡಬೇಕಿತ್ತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳು ಅವರ ವಿಮಾನ ಟಿಕೆಟ್ ಕಾಯ್ದಿರಿಸಲು ಮರೆತಿದ್ದರು. ಆ ದಿನಗಳಲ್ಲಿ, ಈಗಿನಷ್ಟು ವಿಮಾನಗಳಿರಲಿಲ್ಲ. ಬೇರೆ ಮಾರ್ಗವಿಲ್ಲದೇ, ಬೇಡಿ ಅಂದು ರಿಸರ್ವೇಶನ್ ಇಲ್ಲದ ಜನರಲ್ ಕಂಪಾರ್ಟ್‌ಮೆಂಟಿನಲ್ಲಿ ಪ್ರಯಾಣಿಸಬೇಕಾಗಿ ಬಂತು. ತಮ್ಮ ಸೂಟ್ ಕೇಸ್ ಮತ್ತು ಕ್ರಿಕೆಟ್ ಕಿಟ್ ಅವರೇ ಹೊತ್ತುಕೊಂಡು ಹೊರಟರು. ಅದಕ್ಕೆ ಅವರು ಸ್ವಲ್ಪವೂ ಬೇಸರಿಸಿಕೊಳ್ಳಲಿಲ್ಲ.
ಆ ದಿನಗಳಲ್ಲಿ ಟೆಸ್ಟ್ ಪಂದ್ಯ ಆಡುವ ಆಟಗಾರರಿಗೆ ದಿನಕ್ಕೆ ಇನ್ನೂರು ರುಪಾಯಿ ಸಂಭಾವನೆ ನೀಡುತ್ತಿದ್ದರು. ವಿದೇಶಗಳಲ್ಲಿಆಡಿದರೆ ಇನ್ನು ಐವತ್ತು ರುಪಾಯಿ ಜಾಸ್ತಿ. ನ್ಯೂಜಿಲ್ಯಾಂಡಿನಲ್ಲಿ ಭಾರತ ತಂಡ ನಾಲ್ಕನೇ ದಿನಕ್ಕೆ ಟೆಸ್ಟ್ ಪಂದ್ಯ ಮುಗಿಸಿದಾಗ,ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳು ಇನ್ನೂರೈವತ್ತು ರುಪಾಯಿ ಕಡಿಮೆ ನೀಡಿದ್ದರು! ಒಂದು ದಿನದಸಂಭಾವನೆಯನ್ನು ಕಟ್ ಮಾಡಿದ್ದರು.