ಬ್ಲೂ ಕಲರ್‌ ಸಿಲ್ಕ್‌ ಪೈಜಾಮ ಎಲ್ಲಿದೆ ?
ತುಂಟರಗಾಳಿ
ಹರಿ ಪರಾಕ್‌
ಸಿನಿಗನ್ನಡಯಾಕೋ ನಿರ್ದೇಶಕ ರವಿ ಶ್ರೀವತ್ಸ ಅವರ ಟೈಮೇ ಸರಿ ಇಲ್ಲ ಅನ್ಸುತ್ತೆ. ಅವರು ಕೈ ಹಾಕಿದ ಯಾವ ಪ್ರಾಜೆಕ್ಟ್‌ಗಳೂ ಅವರ ಕೈ ಹಿಡಿಯುತ್ತಿಲ್ಲ. ಬದಲಾಗಿ ಕೈ ಜಾರಿ ಹೋಗುತ್ತಿವೆ. ಕೆಲವು ದಿನಗಳ ಹಿಂದೆ ಮುತ್ತಪ್ಪ ಅವರ ಬಗ್ಗೆ ಸಿನಿಮಾ ಮಾಡಬೇಕು ಅಂತ ರವಿ ಶ್ರೀವತ್ಸ ಹೊರಟಿದ್ದರು. ಅದಕ್ಕೆ ಅದ್ದೂರಿ ಚಾಲನೆಯನ್ನೂ ಕೊಟ್ಟಿದ್ದರು.
ಆದರೆ ಅಷ್ಟರಲ್ಲಿ ಮುತ್ತಪ್ಪ ರೈ ಸಿನಿಮಾ ಹಕ್ಕುಗಳು ನಮ್ಮ ಬಳಿ ಇವೆ ಅಂತ ಇನ್ನೊಬ್ಬ ನಿರ್ಮಾಪಕರು ತಕರಾರು ಮಾಡಿದ್ದ ರಿಂದ ರವಿ ಶ್ರೀವತ್ಸ ಅವರ ಎಂ ಆರ್ ಚಿತ್ರ ನಿಂತುಹೋಗಿತ್ತು. ಆದರೆ ಅಷ್ಟಕ್ಕೇ ಸುಮ್ಮನಾಗದ ರವಿಶ್ರೀವತ್ಸ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಡಿಆರ್ ಎಂಬ ಹೆಸರಿಟ್ಟುಕೊಂಡು ಅದೇ ಟೈಟಲ್ ಡಿಸೈನ್ ಇಟ್ಟುಕೊಂಡು ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಆ ಮೂಲಕ ಎಂಆರ್ ರವಿಶ್ರೀವತ್ಸ, ಡಿಆರ್ ರವಿ ಶ್ರೀವತ್ಸ ಆಗಲು ಪ್ರಯತ್ನ ಪಟ್ಟಿದ್ದರು.
ಹೀಗೆ ಮಿಸ್ಟರ್ ಬಿಟ್ಟು ಡಾಕ್ಟರ್ ಆಗಲು ಹೊರಟಿದ್ದ ಅವರಿಗೆ ಈಗ ಮತ್ತೊಮ್ಮೆ ಸಂಕಷ್ಟ ಒದಗಿಬಂದಿದೆ ಎಂಬ ಗಾಳಿಸುದ್ದಿ ಗಾಂಽನಗರದಲ್ಲಿ ಓಡಾಡುತ್ತಿದೆ. ಈಗ ರವಿ ಅವರ ಡಿಆರ್ ಚಿತ್ರ ಕೂಡ ನಿಂತು ಹೋಗಿದೆಯಂತೆ. ಹಾಗಾಗಿ ಅದ್ದೂರಿಯಾಗಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಹೊರಟಿದ್ದ ರವಿಶ್ರೀವತ್ಸ ಅವರಿಗೆ ಈಗ ತಮ್ಮ ಚಿತ್ರಗಳ ನಿಲುಗಡೆ ಮತ್ತು ಮುಳುಗಡೆ ಸಮಸ್ಯೆ ಕಾಡುತ್ತಿದೆ. ಆದರೆ ಹಾಗಂತ ಈ ಬಗ್ಗೆ ರವಿ ಶ್ರೀವತ್ಸ ಅವರನ್ನು ಯಾರಾದ್ರೂ ಕೇಳಿದ್ರೆ ಅಷ್ಟೇ, ನಿರಾಸೆಯಲ್ಲಿರುವ ಅವರಿಗೆ ಎಲ್ಲರೂ ತಮ್ಮ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ, ನನ್ನ ಸಿನಿಮಾ ನಿಂತು ಹೋಗಿದ್ದನ್ನು ನೋಡಿ ಖುಷಿ ಪಡುತ್ತಿದ್ದಾರೆ ಎಂಬ ಅನಿಸಿಕೆ ಮೂಡಿದೆ.
ಇದನ್ನು ತಲೆಗೇರಿಸಿಕೊಂಡಿರುವ ಅವರು ಈ ಬಗ್ಗೆ ಕೇಳಿದವರ ಮೇಲೆ ಹರಿಹಾಯುತ್ತಿದ್ದಾರೆ. ಅಂಡರ್ ವಲ್ಡ್ ಸಿನಿಮಾಗಳನ್ನು ಮಾಡಿ ಅಂಥ ಚಿತ್ರಗಳ ಮೂಲಕವೇ ಹೆಸರು ಮಾಡಬೇಕು ಎಂದುಕೊಂಡಿದ್ದರು ರವಿ ಶ್ರೀವತ್ಸ. ಆದರೂ, ಇಂದಿಗೂ ಗಂಡ ಹೆಂಡತಿ ರವಿ ಶ್ರೀವತ್ಸ ಎಂದೇ ಕರೆಸಿಕೊಳ್ಳುತ್ತಿರುವ ಅವರಿಗೆ ಯಶಸ್ಸು ಸಿಕ್ಕಿದ್ದು ಅಪರೂಪ. ಈಗ ನೋಡಿದರೆ ಸಿನಿಮಾ ನಿಂತುಹೋಗಿರುವ ಕೋಪವನ್ನು ಅವರು ಎಲ್ಲರ ಮೇಲೂ ಹೊರಹಾಕುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರಬಂದು ಆದಷ್ಟು ಬೇಗ ಅವರು ಹುಷಾರಾಗಿ ಮತ್ತೆ ಸಿನಿಮಾ ಮಾಡುವಂತಾಗಲಿ.
ನೆಟ್ ಪಿಕ್ಸ್ಆಫೀಸಿನಿಂದ ಬಂದವನೇ, ನಾಳೆಯಿಂದ ಮೂರು ದಿನ ಆಫೀಸ್ ಬ್ಯುಸಿನೆಸ್ ಟೂರ್ ಇದೆ ಅಂತ ಖೇಮು ಹೆಂಡತಿ ಖೇಮು ಶ್ರೀಗೆ ಹೇಳಿದ. ಬೆಳಿಗ್ಗೆ ಬೇಗನೇ ಹೋಗಬೇಕು ನನ್ನ ಎಲ್ಲಾ ಲಗೇಜ್ ಅನ್ನು ಈಗ್ಲೇ ಪ್ಯಾಕ್ ಮಾಡು. ಬೆಳಗ್ಗೆ ಲೇಟ್ ಆಗುತ್ತೆ ಅಂತ ಹೇಳಿದ. ಆಫೀಸ್ ಬ್ರೀಫ್ ಕೇಸ್‌ನಲ್ಲಿ ಈ ಎಲ್ಲಾ ಫೈಲ್‌ಗಳನ್ನೂ, ಡಾಕ್ಯುಮೆಂಟ್ ಅನ್ನು ಇಡು. ನನ್ನ ಪರ್ಸನಲ್ ಸಾಮಾನುಗಳನ್ನು ಇನ್ನೊಂದು ಸೂಟ್ ಕೇಸ್‌ನಲ್ಲಿ ಇಡು. ಅಂದಹಾಗೆ ನನ್ನ ಆ ಬ್ಲೂ ಕಲರ್ ಸಿಲ್ಕ್ ಪೈಜಾಮ ಇಡೋದನ್ನು ಮರೀಬೇಡ ಅಂತ ಹೆಂಡತಿಗೆ ಹೇಳಿ ಬಾತ್ ರೂಮ್‌ಗೆ ಹೋದ ಖೇಮು. ಸರಿ ಖೇಮುಶ್ರೀ ಎಲ್ಲವನ್ನೂ ಪ್ಯಾಕ್ ಮಾಡಿದಳು. ಬೆಳಗ್ಗೆ ಬೇಗ ಎದ್ದವನೇ ಖೇಮು ಟೂರ್‌ಗೆ ಹೊರಟ.
ಆ ಮೂರು ದಿನದಲ್ಲಿ ಖೇಮು ಶ್ರೀ ಖೇಮುಗೆ ಹಲವಾರು ಬಾರಿ ಕಾಲ್ ಮಾಡಿದಳು. ಆದರೆ ಖೇಮು ಕಾಲ್ ರಿಸೀವ್ ಮಾಡಲಿಲ್ಲ. ನಾನು ಮೀಟಿಂಗ್‌ನಲ್ಲಿ ಇದ್ದೇನೆ. ಬ್ಯುಸಿ ಅಂತ ಮೆಸೇಜ್ ಮಾಡುತ್ತಿದ್ದ. ಸರಿ ಮೂರು ದಿನ ಕಳೆಯಿತು. ಖೇಮು ವಾಪಸ್ ಬಂದ. ಏನು ಬ್ಯುಸಿನೆಸ್ ಟೂರ್‌ನಲ್ಲಿ ತುಂಬಾ ಬ್ಯುಸಿಯಾಗಿದ್ರಿ ಅನ್ಸುತ್ತೆ. ತುಂಬಾ ಸುಸ್ತಾಗಿದ್ದೀರ ಅಂದಳು ಖೇಮುಶ್ರೀ. ಅಯ್ಯೋ, ಅದ್ಯಾಕ್ ಕೇಳ್ತೀಯ ಸಿಕ್ಕಾಪಟ್ಟೆ ಕೆಲಸ ಅಂದ ಖೇಮು, ಅದ್ಸರಿ ನನ್ನ ಬ್ಲೂ ಕಲರ್ ಸಿಲ್ಕ ಪೈಜಾಮ ಪ್ಯಾಕ್ ಮಾಡು ಅಂತ ಹೇಳಿ ಅಲ್ವಾ, ಅದನ್ನ ನೀನು ಮರೆತೇಬಿಟ್ಟಿದ್ದೀಯ ಅಂದ. ಅದಕ್ಕೆ ಖೇಮು ಹೇಳಿದಳು ಮರೆತಿರಲಿಲ್ಲ, ಇಟ್ಟಿದ್ದೆ, ಅದು ನಿಮ್ಮಆಫೀಸ್ ಬ್ರೀ- ಕೇಸ್‌ನಲ್ಲಿದೆ.
ಲೈನ್ ಮ್ಯಾನ್ಆತ್ಮೀಯ ಸ್ನೇಹಿತನನ್ನು ಕೊಲೆ ಮಾಡಿದವನುಕ್ಲೋಸ್ ಫ್ರೆಂಡ್ತಮ್ಮ ಸಿಡಿ ಬಿಡುಗಡೆ ಮಾಡಿದವರ ಮೇಲಿನ ಕೋಪಅಸಿಡಿಟಿದುಃಖದ ಸೀನ್‌ನಲ್ಲಿ ಹಾಡುವ ದೇವರ ಹಾಡುಶ್ಲೋಕ ಗೀತೆಧರ್ಮದ ಬಗ್ಗೆ ಅವಹೇಳನ ಮಾಡಿದಾಗ ಬರೋ ಪ್ರತಿಕ್ರಿಯೆಹಿಂದೂ – ಅವರು ಬಹಿರಂಗವಾಗಿ ಚರ್ಚೆಗೆ ಬರಲಿಕ್ರಿಶ್ಚಿಯನ್ – ಅವರು ಬಹಿರಂಗವಾಗಿ ಚರ್ಚಿಗೆ ಬರಲಿಜಿಮ್ ಬಾಡಿ ಇರೋ ಮನುಷ್ಯಜಿಮ್ ಆಫ್ ಎಲ್ಲಾ ಪರ್ಸನ್ಹೌದು, ಜನ ಜಿಮ್‌ಗೆ ಯಾಕ್ ಹೋಗ್ತಾರೆಪಾಪ, ಹೊಟ್ಟೆಪಾಡುಕೊನೇ ಟೆಸ್ಟ್ ಮ್ಯಾಚ್‌ನಲ್ಲಿ ಆಗಿದ್ದುಅಕ್ಷರ್ ಪಟೇಲ್ ದಾಳಿಗೆ ಇಂಗ್ಲೆಂಡ್ ನುಜ್ಜು ಗುಜ್ಜುಸಿಡಿ ತೋರಿಸಿ ಹೆದರಿಸಿ ಅಧಿಕಾರ ಪಡೆದವನುಚಕ್ರಾಧಿಪತಿಪೋರ್ನ್ ಸ್ಟಾರ್ ಒಬ್ಬರು ಸುಳ್ಳು ಹೇಳಿದ್ದು ಪ್ರೂವ್ ಆದರೆ ಅವರ ಬಗ್ಗೆ ಏನಂತಾರೆ?ಅವರು ಸಿಕ್ಕಾಕ್ಕೊಂಡು ಸಮಾಜದ ಮುಂದೆ ಬೆತ್ತಲಾದರು
ಲೂಸ್ ಟಾಕ್ರಮೇಶ್ ಜಾರಕಿಹೊಳಿ (ಕಾಲ್ಪನಿಕ ಸಂದರ್ಶನ)ಏನ್ ಸಾರ್, ನಿಮ್ ಸಿಡಿ ವಿಡಿಯೋ ಎಲ್ಲರ ಮೊಬೈಲ್‌ಗಳಲ್ಲೂ ಓಡಾಡ್ತಾ ಇದೆ..ಹೌದೌದು. ಏನ್ ಮಾಡಕಾಗುತ್ತೆ, ಸಿನಿಮಾಗಳಿಗೆ ಸಿಕ್ತಾರೋ ಇಲ್ವೋ ಆದ್ರೆ, ಇಂಥ ಸಿಡಿಗಳಿಗೆಮಾತ್ರ ಬೇಜಾನ್ ಡಿಸ್ಟ್ರಿಬ್ಯೂಟರ್ಸ್ ಸಿಕ್ತಾರೆ. ಹಂಗಾಗಿ ಎಲ್ಲಾ ಕಡೆ ನಮ್ದೇ ಹವಾ.ಇದರಿಂದ ನಿಮ್ಮ ಸಚಿವ ಸ್ಥಾನನೇ ಹೋಯ್ತು, ತುಂಬಾ ಬೇಜಾರಾಗಿರಬೇಕುಏನ್ ಮಾಡೋದು ಕಾಂಪ್ರೊಮೈಸಿಂಗ್ ಪೊಸಿಶನ್ ನಲ್ಲಿ ಸಿಕ್ಕಾಕ್ಕೊಂಡೆ ಅಂತ ಈಗ ಪೊಸಿಶನ್ವಿಷಯದಲ್ಲಿ ಕಾಂಪ್ರೊಮೈಸ್ ಮಾಡಿಕೊಳ್ಳೋ ಹಾಗಾಯ್ತು.ನಿಮ್ಮ ಜತೆಗೆ ಇನ್ನೂ೬ಜನ ಸಚಿವರ ಸಿಡಿ ಇದೆಯಂತೆರೀ, ಸರಿಯಾಗ್ ಮಾತಾಡ್ರೀ, ನನ್ ಜತೆ ಇಲ್ಲ, ಅದು ಬೇರೆ ಬೇರೆಯವರ ಜತೆ, ನಾನ್ ಆಟೈಪ್ ಅಲ್ಲ.ಅಯ್ಯೋ, ಹಂಗ ಸಾರ್ ನಾನ್ ಹೇಳಿದ್ದು. ನಿಮ್ ಜತೆ ಬಾಂಬೆಗೆ ಹೋದವರzಇದೇ ಪರಿಸ್ಥಿತಿ ಅಂತಿದಾರೆ ಜನಏನೋ ನಂಗೊತ್ತಿಲ್ಲ, ಆದ್ರೂ, ಬಾಂಬೆಗ್ ಹೋಗಿದ್ಯಾ ಅಂತ ಯಾರಾದ್ರೂ ಕೇಳಿದ್ರೆ ಸಾಕು,ಯಾಕೆ, ಸಿಡಿ ಸಿಕ್ತಾ ಅಂತ ಕೇಳೋ ಥರ ಆಗಿದೆ.ಅದ್ಸರಿ ಮೊದ್ಲು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಅಂದಿದ್ರಿ, ಮರುದಿನನೇಕೊಟ್ಟುಬಿಟ್ರಲ್ಲಇರ್ಲಿ ಬಿಡಿ. ಇದೆಲ್ಲ ಸಹಜ. ನಾಳೆ ಮತ್ತೆ, ನನ್ನ ರಾಜೀನಾಮೆ ಹೇಳಿಕೆ ಮತ್ತು ಮಾಧ್ಯಮಗಳಿಗೆಕೊಟ್ಟ ವಿಡಿಯೋ ಬೈಟ್ ಅನ್ನು ತಿರುಚಲಾಗಿದೆ. ಅದರಲ್ಲಿರೋದು ನಾನಲ್ಲ, ಇದರ ತನಿಖೆಆಗಬೇಕು ಅಂತ ಉಲ್ಟಾ ಹೊಡೀತೀನಿ