ದೀರ್ಘ ಕಾಲದ ಸುಸ್ತು – ಇನ್ನೂ ಪ್ರಶ್ನಾರ್ಥಕವೇ ?
ವೈದ್ಯವೈವಿಧ್ಯ
ಡಾ.ಎಚ್.ಎಸ್‌.ಮೋಹನ್‌
ನಲವತ್ತೊಂದು ವರ್ಷದ ಸುಮಲತಾ ಬ್ಯಾಂಕ್ ಉದ್ಯೋಗಿ. ಆಕೆಗೆ ಕಳೆದ೩-೪ತಿಂಗಳುಗಳಿಂದ ವಿಪರೀತ ಸುಸ್ತು, ಬಳಲಿಕೆ. ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಮನಸ್ಸಿಟ್ಟು ಯಾವ ಕೆಲಸವನ್ನೂ ಮಾಡಲಾಗುತ್ತಿಲ್ಲ. ನೆನಪಿನ ಶಕ್ತಿ ಕಡಿಮೆ ಯಾಗುತ್ತಿದೆ.
ಕಾಲಿನ ಮಾಂಸಖಂಡಗಳಲ್ಲಿ ವಿಪರೀತ ನೋವು. ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು. ಜತೆಗೆ ಈಕೆಯ ನಿದ್ರೆಯ ಪ್ರಮಾಣವೂ ಕಡಿಮೆಯಾಗಿದೆ. ಅಲ್ಪ ಸ್ವಲ್ಪ ನಿದ್ರೆ ಬಂದರೂ ಸುಸ್ತಿನ ಅಂಶ, ಬಳಲಿಕೆಯ ಅಂಶವೂ ಕಡಿಮೆಯಾಗುವುದಿಲ್ಲ. ಆಕೆ ತನಗೆ ಆಪ್ತರಾದ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾದಳು. ವೈದ್ಯರು ಈ ವಯಸ್ಸಿನವರಲ್ಲಿ ಸುಸ್ತಿಗೆ ಕಾರಣವಾಗುವ ಕಾಯಿಲೆಗಳ ಬಗ್ಗೆ ಒಂದೊಂದಾಗಿ ಪರೀಕ್ಷಿಸತೊಡಗಿದರು.
ಮಧ್ಯ ವಯಸ್ಸಿನ ಮಹಿಳೆಯರು ಬಳಲಿಕೆ ಅನುಭವಿಸಲು ಕಾರಣಗಳೇನು? ಈ ಕಾರಣಗಳನ್ನು ಮೂರು ವಿಭಾಗಗಳಾಗಿ ಮಾಡಬಹುದು.
೧. ಜೀವನಶೈಲಿ೨. ವೈದ್ಯಕೀಯ೩. ಮಾನಸಿಕ
ಜೀವನಶೈಲಿಯ ಕಾರಣಗಳು:ದೀರ್ಘಕಾಲದ ಅಧಿಕ ಮದ್ಯಪಾನ, ಹೆಚ್ಚಿನ ಪ್ರಮಾಣದ ಕೆಫೀನ್ ಉಪಯೋಗ-ವಿಪರೀತ ಕಾಫಿ ಟೀ ಕುಡಿಯುವುದು, ನಿದ್ರೆ ಕಡಿಮೆ ಮಾಡುವುದು, ದೈಹಿಕವಾಗಿ ವಿಪರೀತ ಶ್ರಮ ಪಡುವುದು, ಹಲವು ಔಷಧಗಳನ್ನು ದೀರ್ಘಕಾಲ ಉಪಯೋಗಿಸುವುದು, ಉದಾಹರಣೆಗೆ ಆಂಟಿ ಹಿಸ್ಟೀಮೀನ್‌ಗಳು, ಕೆಮ್ಮು ಶೀತ ಕಡಿಮೆ ಮಾಡುವ ಔಷಧಗಳು. ಊಟ ತಿಂಡಿ ಸೇವಿಸುವ ರೀತಿಯಲ್ಲಿ ಸರಿಯಾದ ಕ್ರಮ ಪಾಲಿಸದೇ ಇರುವುದು.
ವೈದ್ಯಕೀಯ ಕಾರಣಗಳು:ಬಹಳಷ್ಟು ದೈಹಿಕ ಕಾಯಿಲೆಗಳಲ್ಲಿ ಸುದೀರ್ಘ ಅವಧಿಯ ಅಥವಾ ದೀರ್ಘ ಕಾಲದ ಸುಸ್ತು ಇರುತ್ತದೆ. ಮುಖ್ಯವಾಗಿ ಅನೀಮಿಯಾ, ವಿವಿಧ ಕ್ಯಾನ್ಸರ್ ಕಾಯಿಲೆಗಳು, ಯಕೃತ್ತಿನ ವೈಫಲ್ಯದ ಕಾಯಿಲೆ, ದೀರ್ಘಕಾಲದಸುಸ್ತಿನ ಕಾಯಿಲೆ (  ), ದೀರ್ಘಕಾಲದ ಕಿಡ್ನಿಯ ಕಾಯಿಲೆ, ಶ್ವಾಸಕೋಶದ ದೀರ್ಘಕಾಲದ ಕಾಯಿಲೆ,ಎದೆಗೂಡಿನ ಭಾಗದಲ್ಲಿ ನೀರು ತುಂಬಿರುವ ಕಾಯಿಲೆ, ವಿವಿಧ ಹೃದಯದ ಕಾಯಿಲೆಗಳು, ಥೈರಾಯಿಡ್ ಗ್ರಂಥಿಯ ಕಾಯಿಲೆಗಳು, ಸ್ಥೂಲ ಕಾಯ ಅಥವಾ ಬೊಜ್ಜು, ರೆ ಲೆಸ್ ಲೆಗ್ ಸಿಂಡ್ರೋಮ, ಡಯಾಬಿಟಿಸ್ ಕಾಯಿಲೆ, ವಿವಿಧ ಔಷಧಗಳನ್ನು ಬಹಳ ಕಾಲ ಸೇವಿಸುವಾಗ ಉದಾಹರಣೆಗೆ, ನೋವಿಗಾಗಿ ದೀರ್ಘಕಾಲದ ಔಷಧ ತೆಗೆದುಕೊಳ್ಳುವುದರಿಂದ, ಹೃದಯ, ಬಿ.ಪಿ. ಮಾನಸಿಕ ಕಾಯಿಲೆಗಳಿಗೆ ದೀರ್ಘ ಕಾಲ ಔಷಧ ಸೇವಿಸುವುದರಿಂದ.
ಮಾನಸಿಕ ಕಾಯಿಲೆಗಳು:ತೀವ್ರ ರೀತಿಯ ಚಿಂತೆ, ಮಾನಸಿಕ ಖಿನ್ನತೆ, ಹತ್ತಿರದ ಸಂಬಂಧಿಗಳ ಮರಣದ ದುಃಖ, ವಿವಿಧ ರೀತಿಯ ಮಾನಸಿಕ ಒತ್ತಡಗಳು. ಮೊದಲು ತಿಳಿಸಿದ ಸುಮಲತಾಳ ಸುಸ್ತಿಗೆ ಮೇಲಿನ ಹೆಚ್ಚಿನ ಕಾರಣಗಳು ಅಲ್ಲವೆಂದು ಗೊತ್ತಾದಾಗವೈದ್ಯರು ದೀರ್ಘಕಾಲದ ಸುಸ್ತಿನ ಕಾಯಿಲೆ (  ) ಈಕೆಯ ಸುಸ್ತಿಗೆ ಕಾರಣ ಎಂಬ ತೀರ್ಮಾನಕ್ಕೆ ಬಂದರು.
ಸುದೀರ್ಘ ಸುಸ್ತಿನ ಕಾಯಿಲೆ:ಇದರಲ್ಲಿ ವ್ಯಕ್ತಿ ದೀರ್ಘಕಾಲ ಸುಸ್ತು, ಸುಸ್ತು ಎಂದು ಹೇಳುತ್ತಿರುತ್ತಾನೆ. ಕಾರಣಗಳನ್ನು ಹುಡುಕಿದಾಗ ವೈದ್ಯಕೀಯವಾಗಿ ಯಾವ ಕಾರಣವೂ ಇರುವುದಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ಬೇರೆ ಬೇರೆ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಸುಸ್ತು ಜಾಸ್ತಿಯಾಗುತ್ತ ಹೋಗುತ್ತದೆ. ಹಾಗೆಂದು ವಿಶ್ರಾಂತಿ ತೆಗೆದುಕೊಂಡರೆ ಅಥವಾ ನಿದ್ರೆ ಮಾಡಿದರೆ ಸುಸ್ತು ಕಡಿಮೆಯಾಗುವುದಿಲ್ಲ. ಈ ತರಹದ ಸುಸ್ತು    ಕಾಯಿಲೆಯಿಂದಲೇ ಎಂದು ದೃಢೀಕರಿಸುವ ಪರೀಕ್ಷೆಗಳಿಲ್ಲ.
ಆದರೆ ವೈರಸ್ ಸೋಂಕಿನಿಂದ ಮಾನಸಿಕ ಒತ್ತಡದವರೆಗೆ ವಿಭಿನ್ನ ಕಾರಣಗಳಿಂದ ಈ ಕಾಯಿಲೆ ಬರಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೆಚ್ಚಿನವರಲ್ಲಿಕಾಯಿಲೆ ಪತ್ತೆಯಾಗುವುದೇ ಕಷ್ಟ.
ಕಾಯಿಲೆಯ ಲಕ್ಷಣಗಳು:ಸುದೀರ್ಘ ಕಾಲದ ಸುಸ್ತು, ನೆನಪಿನ ಶಕ್ತಿ ಕಡಿಮೆಯಾಗುವುದು, ಮನಸ್ಸಿನ ಏಕಾಗ್ರತೆ ತೀವ್ರವಾಗಿ ಕಡಿಮೆಯಾಗುವುದು, ಗಂಟಲಿನ ಸೋಂಕು ಇರಬಹುದು, ಕುತ್ತಿಗೆ ಮತ್ತು ಕಂಕುಳಿನ ಭಾಗದಲ್ಲಿರುವ ಗ್ರಂಥಿಗಳು( ) ಊದಿಕೊಳ್ಳುವುದು, ಯಾವುದೇ ಕಾರಣವಿಲ್ಲದೆ ದೇಹದ ವಿವಿಧ ಮಾಂಸಖಂಡಗಳಲ್ಲಿ ನೋವು, ಒಂದು ಕೀಲಿನಿಂದ ಮತ್ತೊಂದು ಕೀಲಿಗೆ ನೋವು ಸ್ಥಳಾಂತರವಾಗುತ್ತಾ ಹೋಗುತ್ತದೆ. ಹಾಗೆಂದು ಕೀಲು ಊದಿಕೊಂಡಿರುವುದಿಲ್ಲ. ಕೆಂಪು ಬಣ್ಣಕ್ಕೆ ತಿರುಗಿರುವುದಿಲ್ಲ. ಭಿನ್ನ ರೀತಿಯ ತಲೆನೋವು, ಸುಸ್ತನ್ನು ಕಡಿಮೆ ಮಾಡದಿರುವ ನಿದ್ರೆ. ದೈಹಿಕ ಅಥವಾ ಮಾನಸಿಕವಾಗಿಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡರೆ೨೪ಗಂಟೆಗೂ ಹೆಚ್ಚು ಸಮಯ ಸುದೀರ್ಘ ಸಮಯ ಸುಸ್ತು ಇರುತ್ತದೆ.
ಕೆಲವರಲ್ಲಿ ವೈರಸ್ ಸೋಂಕಿನ ನಂತರ ಈ ಸುದೀರ್ಘ ಸುಸ್ತಿನ ಕಾಯಿಲೆ ಕಾಣಿಸಿಕೊಳ್ಳುವುದರಿಂದ ಕೆಲವು ವೈರಸ್‌ಗಳು ಈಕಾಯಿಲೆಗೆ ಕಾರಣವಾಗಬಹುದೇ ಎಂದು ಸಂಶೋಧಕರು ಸಂದೇಹ ವ್ಯಕ್ತಪಡಿಸುತ್ತಾರೆ. ಅನುಮಾನಾಸ್ಪದ ವೈರಸ್‌ಗಳೆಂದರೆ ಎಪ್ಸ್ಟಿನ್ ಬಾರ್ ( ) ವೈರಸ್, ಹರ್ಪೀಸ್ ವೈರಸ್೬, ರೋಸ್ ರಿವರ್ ವೈರಸ್ (), ರುಬೆ ವೈರಸ್.
ಈ ಸುಸ್ತಿನ ಕಾಯಿಲೆ ಇರುವವರಲ್ಲಿ ದೈಹಿಕ ಪ್ರತಿರೋಧ ವ್ಯವಸ್ಥೆ ಶಿಥಿಲಗೊಂಡಿರುತ್ತದೆ. ಆದರೆ ಇದೇ ಈ ಕಾಯಿಲೆಗೆ ಕಾರಣವೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಕಾಯಿಲೆ ಅನುಭವಿಸುತ್ತಿರುವ ವ್ಯಕ್ತಿಗಳಲ್ಲಿ ಹಲವು ರೀತಿಯ ಹಾರ್ಮೋನ್ವೈಪರೀತ್ಯಗಳು ಕಾಣಿಸಿಕೊಳ್ಳುತ್ತವೆ. ಮೆದುಳಿನ ಹೈಪೋಥಲಾಮಸ್ ಭಾಗದಲ್ಲಿನ ಹಾರ್ಮೋನ್, ಪಿಟ್ಯೂಟರಿ ಗ್ರಂಥಿ ಸ್ರವಿಸುವ ಹಾರ್ಮೋನ್, ಅಡ್ರೀನಲ್ ಗ್ರಂಥಿ ಸ್ರವಿಸುವ ಹಾರ್ಮೋನ್‌ಗಳು ಏರುಪೇರು ಹೊಂದುತ್ತವೆ.
ಈ ಸುದೀರ್ಘ ಸುಸ್ತಿನ ಕಾಯಿಲೆಯ ಕಾರಣಗಳು ಇದುವರೆಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಕೆಲವೊಂದು  ಕಾರಣಗಳು ಇರಬಹುದೆಂದು ಸಂಶೋಧಕರು ಊಹಿಸಿದ್ದಾರೆ. ಈಗಾಗಲೇ ಮೇಲೆ ತಿಳಿಸಿದಂತೆ ಹಲವು ರೀತಿಯ ವೈರಸ್‌ಗಳು ಕಾರಣವಾಗ ಬಹುದು. ಗೆಯೇ ವ್ಯಕ್ತಿಯ ಪ್ರತಿರೋಧ ಶಕ್ತಿ ಕುಂದಿರುವುದು ಕಾರಣವಾಗಬಹುದು. ಜೀವನದ ವಿವಿಧ ರೀತಿಯ ಒತ್ತಡವೂ ಕಾರಣವಾಗಬಹುದು.
ವ್ಯಕ್ತಿಯಲ್ಲಿ ಜರುಗುವ ಹಾರ್ಮೋನಿನ ವ್ಯತ್ಯಾಸಗಳೂ ಕಾರಣವಾಗಬಹುದು. ಮತ್ತೊಂದು ಅಂಶ ಎಂದರೆ ಕೆಲವೊಂದುವ್ಯಕ್ತಿಗಳು ಜೆನೆಟಿಕ್ ರೀತಿಯಲ್ಲಿಯೇ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಕೆಲವೊಂದು ಬ್ಯಾಕ್ಟೀರಿಯಾಗಳ ಸೋಂಕು ಉದಾ: ಕಾಕ್ಸಿಯೆ ಬರ್ಸೆಟಿ ಮತ್ತು ಮೈಕೋಪ್ಲಾಸ್ಮಾ ನ್ಯುಮೋನಿಯೇ – ಇವೂ ಕಾರಣವಾಗಬಹುದೆಂದು ಊಹಿಸಲಾಗಿದೆ.
ಅಮೆರಿಕದ ಸಿ.ಡಿ.ಸಿ.ಯ ಪ್ರಕಾರ ಇ.ಬಿ ವೈರಸ್, ಆರ್.ಆರ್. ವೈರಸ್, ಕಾಕ್ಸಿಯೆ ಬರ್ನೆಟಿ ಸೋಂಕು ಇರುವ೧೦ರಲ್ಲಿ ಒಬ್ಬರು ಈ ಸುದೀರ್ಘ ಸುಸ್ತಿನ ಕಾಯಿಲೆಗೆ ತುತ್ತಾಗುತ್ತಾರೆ ಎನ್ನಲಾಗಿದೆ. ಮತ್ತೊಂದು ಅಂಶ ಎಂದರೆ ಮೇಲಿನ ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ವಿಪರೀತವಾದ ರೋಗಲಕ್ಷಣಗಳಿದ್ದರೆ ಅಂತಹವರು ಈ ಸುದೀರ್ಘ ಸುಸ್ತಿನ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ.
ದೀರ್ಘಕಾಲೀನ ಸುಸ್ತಿನ ಕಾಯಿಲೆ ಯಾವ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳಬಹುದು. ಆದರೆ೪೦- ೫೦ವರ್ಷಗಳ ಆಸುಪಾಸಿನಲ್ಲಿ ಹೆಚ್ಚು  ಕಂಡು ಬರುತ್ತದೆ. ಇದು ಹೆಂಗಸರಲ್ಲಿ ಜಾಸ್ತಿ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಯಾವ ವ್ಯಕ್ತಿಗಳಲ್ಲಿ ಒತ್ತಡದ ಸನ್ನಿವೇಶಗಳನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲವೋ ಅಂತಹ ವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಕಾಯಿಲೆಗೆ ಕಾರಣವಾಗುವ ರಿ ಅಂಶಗಳು:ಹೆಚ್ಚಾಗಿ೪೦ – ೫೦ವರ್ಷದವರಲ್ಲಿ ಕಂಡು ಬರುತ್ತದೆ. ಪುರುಷರಿಗಿಂತ೨ರಿಂದ೪ಪಟ್ಟು ಹೆಚ್ಚು ಪ್ರಮಾಣದಲ್ಲಿ ಮಹಿಳೆಯರಲ್ಲಿ ಕಂಡುಬರುತ್ತದೆ ಎನ್ನಲಾಗಿದೆ. ಇನ್ನಿತರ ಮುಖ್ಯ ಅಂಶಗ ಳೆಂದರೆ, ಜೆನೆಟಿಕ್ ಹಂತದಲ್ಲಿ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುವವರು, ವಿವಿಧ ರೀತಿಯ ಅಲರ್ಜಿ ಹೊಂದಿರುವವರು, ತೀವ್ರವಾದ ಮಾನಸಿಕ ಒತ್ತಡಕ್ಕೆ ಒಳಗಾದವರು ಮತ್ತು ಹೊರಗಿನ ವಾತಾವರಣದ ವಿವಿಧ ಅಂಶಗಳು.
ಇಂತಹವರು ಹಲವು ರೀತಿಯ ನಿದ್ರೆಯ ಸಮಸ್ಯೆಗೆ ಒಳಗಾಗಬಹುದು. ರಾತ್ರಿ ಬೆಳಗು ನಿದ್ರೆ ಮಾಡಿಯೂ ಅಂತಹ ವ್ಯಕ್ತಿಮಾನಸಿಕವಾಗಿ ಪ್ರಫುಲ್ಲನಾಗದೇ ಇರುವುದು, ಕೆಲವರಿಗೆ ನಿದ್ರೆಯೇ ಸರಿಯಾಗಿ ಬರದಿರುವುದು- ಈ ಲಕ್ಷಣ ದೀರ್ಘಕಾಲ ಮುಂದುವರಿಯಬಹುದು. ಹಾಗೆಯೇ ನಿದ್ರೆಯ ಇನ್ನಿತರ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.
ಕಾಯಿಲೆ ಪತ್ತೆ ಹಚ್ಚುವುದು ಹೇಗೆ?:ಈ ಕಾಯಿಲೆ ಪತ್ತೆ ಹಚ್ಚುವುದು ನಿಜವಾಗಿಯೂ ಕಷ್ಟವೇ ಸರಿ. ಅಮೆರಿಕದ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನ್ ಪ್ರಕಾರ೨೦೧೫ರ ವರೆಗೆ ಅಲ್ಲಿನ೮,೩೬,೦೦೦ದಿಂದ೨.೫ಮಿಲಿಯನ್ ಅಮೆರಿಕನ್ನರಲ್ಲಿ ಈ ಕಾಯಿಲೆ ಇದೆ. ಆದರೆ ಅವರಲ್ಲಿ೮೪-೯೦%ಜನರಲ್ಲಿ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದನ್ನುಪತ್ತೆ ಹಚ್ಚುವ ಯಾವುದೇ ವೈದ್ಯಕೀಯ ಪರೀಕ್ಷೆಗಳಿಲ್ಲ. ಈ ಕಾಯಿಲೆ ಇದ್ದ ಹಲವು ವ್ಯಕ್ತಿಗಳು ಯಾವುದೇ ಕಾಯಿಲೆ ಇದ್ದಂತೆ ಮೇಲ್ನೋಟಕ್ಕೆ ಕಾಣುವುದಿಲ್ಲ. ಈ ಕಾಯಿಲೆಯ ಲಕ್ಷಣ ಹೊಂದಿರುವ ಹಲವು ಕಾಯಿಲೆಗಳಿವೆ.
ಈ ಕಾಯಿಲೆ ವ್ಯಕ್ತಿಯಲ್ಲಿ ಕಾಣಿಸಿಕೊಂಡ ನಂತರ ಕಾಣಿಸಿಕೊಳ್ಳುವ ತೊಡಕುಗಳೆಂದರೆ:ಚಿತ್ತವೈಕಲ್ಯ (). ಈ ವ್ಯಕ್ತಿ ಸಾಮಾಜಿಕವಾಗಿ ಏಕಾಂಗಿಯಾಗುತ್ತಾ ಹೋಗುತ್ತಾನೆ. ಪರಿಣಾಮವಾಗಿ ಈತನ ಜೀವನ ಕ್ರಮವೇ ಬದಲಾಗುತ್ತದೆ. ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗದೇ ಮಾಡುವ ಕೆಲಸದ ನಿರ್ವಹಣೆ ತುಂಬಾ ಕಷ್ಟವಾಗುತ್ತದೆ. ಮೊದಲು ತಿಳಿಸಿದ ಹಲವಾರು ರೋಗ ಲಕ್ಷಣ ಗಳಿದ್ದರೂ ಇವುಗಳೆ ಇದೇ ಕಾಯಿಲೆಯಿಂದ ಬಂದಿದೆ ಎಂದು ಹೇಳುವುದು ಕಠಿಣ. ಏಕೆಂದರೆ ಈಕಾಯಿಲೆ ಪತ್ತೆ ಹಚ್ಚುವ ನಿರ್ದಿಷ್ಟವಾದ ಪರೀಕ್ಷೆ ಅಥವಾ ಮಾಪನಗಳಿಲ್ಲ.
ಆದರೆ ಇತ್ತೀಚೆಗೆ ಹಲವು ಸಂಶೋಧಕರು ಈ ಕಾಯಿಲೆಯ ವ್ಯಕ್ತಿಗಳ ಮೆದುಳಿನಲ್ಲಿ ಹಲವು ಬದಲಾವಣೆಗಳನ್ನು ಗುರುತಿಸಿದ್ದಾರೆ.ಅಮೆರಿಕದ ಸ್ಟಾನ್ ಫರ್ಡ್ ವಿಶ್ವವಿದ್ಯಾನಿಲಯದ ಡಾ. ಜೀನೆ ಮತ್ತು ಡಾ. ಜೋಸ್ ಮೊಂಟೋಯೋ ಅವರ ತಂಡ ಕಾಯಿಲೆ ಪೀಡಿತ೧೫ವ್ಯಕ್ತಿಗಳ ಮೆದುಳಿನ ಎಂಆರ್‌ಐ ಸ್ಕ್ಯಾನಿಂಗ್ ಮಾಡಿದರು. ಹಾಗೆಯೇ ಈ ಕಾಯಿಲೆಯ ಲಕ್ಷಣವಿರದ ಇನ್ನಿತರ೧೫ಜನರಲ್ಲಿಯೂ ಇದೇ ರೀತಿಯ ಸ್ಕ್ಯಾನಿಂಗ್ ಮಾಡಲಾಯಿತು.
ಮೂರು ಭಿನ್ನ ರೀತಿಯ ಎಂಆರ್‌ಐ ತಂತ್ರಜ್ಞಾನ ಉಪಯೋಗಿಸಿ ಮೆದುಳಿನ ಹಲವು ಭಾಗಗಳ ಅಳತೆ ಮಾಡಲಾಯಿತು. ಮೆದುಳಿನ ಸಂದೇಶ ಸಾಗಿಸುವ ಪಥವನ್ನು ವೀಕ್ಷಿಸಲಾಯಿತು. ಅಂತೆಯೇ ರಕ್ತಚಲನೆಯನ್ನೂ ಅಳತೆ ಮಾಡಲಾಯಿತು. ಈ ಎರಡೂ ಗುಂಪುಗಳ ಸ್ಕ್ಯಾನಿಂಗ್ ಅವಲೋಕಿಸಿದಾಗ, ದೀರ್ಘಕಾಲೀನ ಸುಸ್ತು ಕಾಯಿಲೆ ಇರುವವರ ಮೆದುಳಿನಲ್ಲಿ ಮೆದುಳಿನ ಸಂದೇಶ ಸಾಗಿಸುವ ವಾಹಕಗಳಲ್ಲಿ ಕೆಲವು ನ್ಯೂನತೆಗಳನ್ನು ಕಂಡು ಕೊಂಡರು. ಇದರರ್ಥ ಬಲಭಾಗದ ಮೆದುಳಿನಭಾಗದಲ್ಲಿ ಅಸಹಜ ಕ್ರಿಯೆಗಳು ನಡೆಯುತ್ತಿವೆ ಎಂದು.
ಈ ಹೊಸ ಸಂಶೋಧನೆ ಕಾಯಿಲೆಯನ್ನು ನಿರ್ದಿಷ್ಟ ವಾಗಿ ಪತ್ತೆ ಹಚ್ಚಲು ಮತ್ತು ಭವಿಷ್ಯದಲ್ಲಿ ಸ್ಪಷ್ಟ ಚಿಕಿತ್ಸೆ ಕಂಡುಹಿಡಿಯಲು ಸಹಾಯವಾಗುತ್ತದೆ ಎನ್ನಲಾಗಿದೆ.
ಕಾಯಿಲೆಯ ಬಗ್ಗೆ ಇತ್ತೀಚೆಗೆ ಗೊತ್ತಾದ ಅಂಶಗಳು:ಇತ್ತೀಚಿನ ಜಾಮಾ () ಜರ್ನಲ್‌ನಲ್ಲಿ ವರದಿ ಯಾದಂತೆ ದೇಹದ ಹಲವು ಅಂಗಗಳಲ್ಲಿ ವ್ಯತ್ಯಯ ವಾದ ಲಕ್ಷಣಗಳನ್ನು ಸಂಶೋಧಕರು ಗುರುತಿಸಿದ್ದಾರೆ.
ಮೆದುಳು:ಮೆದುಳಿನ ಹಾರ್ಮೋನು, ಯೋಚನಾ ಶಕ್ತಿಯ ಬಗೆಗಿನ ಪರೀಕ್ಷೆ, ಎಂಆರ್‌ಐ ಮತ್ತು ಪಿಇಟಿ () ಸ್ಕ್ಯಾನ್‌ಗಳನ್ನು ಮಾಡಿದಾಗ ಈ ಕಾಯಿಲೆ ಎಂದು ಗುರುತಿಸಿದ ಹೆಚ್ಚಿನವರಲ್ಲಿ ಬಹಳಷ್ಟು ಬದಲಾದ ಗುರುತುಗಳು ಕಂಡು ಬಂದವು. ದೇಹದಮುಖ್ಯ ಕ್ರಿಯೆಗಳಾದ ತಾಪಮಾನ, ಬಿ.ಪಿ, ಹೃದಯದ ಬಡಿತ, ಉಸಿರಾಟದ ಗತಿ, ಕರುಳಿನ ಮತ್ತು  ಮೂತ್ರ ಚೀಲದ ಚಲನೆ- ಇವೆ ಇಂತಹ ವ್ಯಕ್ತಿಗಳಲ್ಲಿ ಅಸಹಜವಾಗಿ ಕಂಡುಬಂದಿತು. ಹಾಗೆಂದು ಇವು ಕಾಯಿಲೆ ಬಂದವರಲ್ಲಿ ಎಲ್ಲರಲ್ಲಿಯೂ ಇದ್ದವೆಂದುಅಲ್ಲ.
ಪ್ರತಿರೋಧ ವ್ಯವಸ್ಥೆ:ಈ ಬಗ್ಗೆ ಕೈಗೊಂಡ ಹಲವಾರು ಅಧ್ಯಯನಗಳಲ್ಲಿ ಈ ವ್ಯಕ್ತಿಗಳ ಪ್ರತಿರೋಧ ವ್ಯವಸ್ಥೆ ತೀವ್ರವಾಗಿ ಚೇತನಗೊಂಡಿರುತ್ತದೆ. ಅಂದರೆ ದೇಹವು ಯಾವುದೋ ಗೊತ್ತಿಲ್ಲದ ಶತ್ರುವಿನ ಜೊತೆ ಹೋರಾಡುತ್ತಿದೆ ಎಂದರ್ಥ. ಈ ರೀತಿಯ ಸುದೀರ್ಘ ಹೋರಾಟದಿಂದ ಈ ವ್ಯವಸ್ಥೆ ಸುಸ್ತಾಗಿ ನಿಸ್ತೇಜಗೊಳ್ಳುತ್ತದೆ.
ಚಿಕಿತ್ಸೆ:ಈ ಕಾಯಿಲೆಗೆ ಸ್ಪಷ್ಟವಾದ ಕಾರಣ ಗೊತ್ತಿಲ್ಲದಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆಯೂ ಇಲ್ಲ. ಆದರೆ ಈ ಕಾಯಿಲೆ ಇರುವವರು ಹಲವು ರೀತಿಯ ಜೀವನ ಶೈಲಿಯ ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ದಿನದ ಅವಧಿಯನ್ನು ನಿರ್ದಿಷ್ಟವಾಗಿ ಇಂತಹುದೇ ಕೆಲಸ ಹಾಗೂ ವಿಶ್ರಾಂತಿ ಎಂದು ವಿಂಗಡಿಸಿಕೊಂಡು ಅದೇ ರೀತಿ ನಡೆದು ಕೊಳ್ಳಬೇಕು. ವಿಪರೀತ ನೋವಿದ್ದರೆ ನೋವು ನಿವಾರಕ ಔಷಧಿಗಳಾದ ಡೈಕ್ಲೋಫಿನಾಕ್, ಪ್ಯಾರಸಿಟಮಾಲ್ ಗಳನ್ನು ತೆಗೆದುಕೊಳ್ಳಬಹುದು.
ಮಾನಸಿಕ ಖಿನ್ನತೆ ಇದ್ದರೆ ಖಿನ್ನತೆ ನಿವಾರಕ ಔಷಧಗಳನ್ನು ಮನೋವೈದ್ಯರ ಸಲಹೆಯ ಮೇರೆಗೆ ಸೇವಿಸಬೇಕು. ಕೆಲವೊಮ್ಮೆಕಾಗ್ನಿಟಿವ್ ಬಿಹೇವಿಯರಲ್ ಥೆರಪಿ ಎಂಬ ಮನಸ್ಸನ್ನು ದೃಢಪಡಿಸುವ ಚಿಕಿತ್ಸೆ ಬಹಳ ಸಹಾಯಕಾರಿ.