ಡಿಜಿಟಲ್‌ ಲೋಕದಲ್ಲಿ ಭಾರತ
ಅಭಿವ್ಯಕ್ತಿ
ಗಣೇಶ್‌ ಭಟ್‌ ವಾರಣಾಸಿ
೧೯೮೩ರಲ್ಲಿ ಮೊದಲ ಬಾರಿಗೆ ಇಂಟರ್‌ನೆಟ್ ಅನ್ನು ಕಂಡುಹಿಡಿದು ಕಂಪ್ಯೂಟರ್ ಗಳನ್ನು ಪರಸ್ಪರ ಬೆಸೆಯುವ ತಂತ್ರಜ್ಞಾನವನ್ನು ಕಂಡುಹಿಡಿದಾಗ ನಂತರದ೩೮ವರ್ಷಗಳಲ್ಲಿ ಪ್ರಪಂಚದಲ್ಲಿ ಇಂತಹ ಡಿಜಿಟಲ್ ಕ್ರಾಂತಿಯಾದೀತೆಂದು ಯಾರೂ ಊಹಿಸಿರಲಿಕ್ಕಿಲ್ಲ!
‘ವಸುಧೈವ ಕುಟುಂಬಕಂ’ ಎನ್ನುವ ಮಾತುಗಳನ್ನುಒಂದು ರೀತಿಯಲ್ಲಿ ಈ ಡಿಜಿಟಲ್ ಯುಗ ಸತ್ಯವಾಗಿಸುತ್ತಿದೆ. ಭಾರತವೂ ಸಹ ಡಿಜಿಟಲ್ ಕ್ರಾಂತಿಗೆ ತನ್ನನ್ನು ತಾನು ಒಡ್ಡಿಕೊಂಡು ಬಹಳ ಬದಲಾವಣೆಗಳನ್ನು ಕಂಡಿದೆ. ಸರಕಾರದ ಯೋಜನೆ ಗಳು, ಬ್ಯಾಂಕಿಂಗ್, ವ್ಯಾಪಾರ ವಹಿವಾಟು, ಸಂವಹನ, ಶಿಕ್ಷಣ, ಮಾಧ್ಯಮ, ಸಾಮಾಜಿಕ ಮಾಧ್ಯಮ ಇವುಗಳೆ ಡಿಜಿಟಲ್ ಮಾಧ್ಯಮಗಳ ಮೂಲಕ ನಡೆಯುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಭಾರತೀಯರು ಡಿಜಿಟಲ್ ಲೋಕಕ್ಕೆ ತಮ್ಮನ್ನು ತಾವು ತೆರೆದುಕೊಂಡಿರುವ ರೀತಿ ಅನನ್ಯವಾದದ್ದು.
೧೩೬ಕೋಟಿ ಜನಸಂಖ್ಯೆಯ ಭಾರತ ದೇಶದಲ್ಲಿ ಸುಮಾರು೭೫.೫ಕೋಟಿ ಮಂದಿ ಇಂಟರ್‌ನೆಟ್ ಬಳಕೆದಾರರು ಇzರೆ ಎಂದು ಅಂದಾಜಿಸಲಾಗಿದೆ. ದೇಶದ ಶೇ.೫೫.೫ಜನ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದಾರೆ. ಚೀನಾದಲ್ಲಿ ಸುಮಾರು೯೦ಕೋಟಿಮಂದಿ ಇಂಟರ್‌ನೆಟ್ ಬಳಕೆ ಮಾಡುತ್ತಿದ್ದು ಜಾಗತಿಕ ವಾಗಿ ಅತಿ ಹೆಚ್ಚು ಇಂಟರ್‌ನೆಟ್ ಬಳಕೆದಾರರಿರುವ ದೇಶವಾಗಿ ಚೀನಾ ಮೂಡಿ ಬಂದರೆ, ಜಾಗತಿಕವಾಗಿ ಎರಡನೇ ಅತೀ ಹೆಚ್ಚು ಇಂಟರ್‌ನೆಟ್ ಬಳಕೆದಾರರಿರುವ ದೇಶ ಭಾರತ.
ಭಾರತದಲ್ಲಿ ಸರಿಸುಮಾರು೪೫ಕೋಟಿ ಮಂದಿ ಮೊಬೈಲ್ ಫೋನ್ ಇಂಟರ್‌ನೆಟ್ ಬಳಕೆದಾರರಿದ್ದಾರೆ.೨೦೧೪ರಲ್ಲಿ ಭಾರತದಲ್ಲಿ ಸರಿಸುಮಾರು೨೪ಕೋಟಿ ಮೊಬೈಲ್ ಇಂಟರ್‌ನೆಟ್ ಬಳಕೆದಾರ ಇದ್ದರು. ಕಳೆದ೭ವರ್ಷಗಳಲ್ಲಿ ಮೊಬೈಲ್ಇಂಟರ್‌ನೆಟ್ ಬಳಕೆದಾರರ ಪ್ರಮಾಣದಲ್ಲಿ೮೭.೫%ಹೆಚ್ಚಾಗಿದೆ.೨೦೧೪ರಲ್ಲಿ ಒಂದು ಜಿಬಿ ಮೊಬೈಲ್ ಇಂಟರ್ನೆಟ್ ಬೆಲೆ ಸುಮಾರು೨೬೯ರು.ಗಳಷ್ಟು ಇತ್ತು. ಅದೂ೩ಜಿಡೇಟಾ.೨೦೧೬ರವರೆಗೆ ಪ್ರತಿವರ್ಷ ಭಾರಿ ಪ್ರಮಾಣದಲ್ಲಿ ಇಂಟರ್‌ನೆಟ್ ಡೇಟಾ ಬೆಲೆ ಏರುತ್ತಾ ಇತ್ತು. ಮೊಬೈಲ್ ಇಂಟರ್‌ನೆಟ್ ಬೆಲೆ ನಿಯಂತ್ರಣಕ್ಕೆ ಬಂದದ್ದು ರಿಲಾಯ ಕಂಪನಿ ಜಿಯೋವನ್ನು ಲಾಂಚ್ ಮಾಡಿದ ನಂತರವೇ. ರಿಲಾಯ ನಂತರ ಏರ್‌ಟೆಲ, ವೊಡಾಫೋನ್-ಐಡಿಯಾಗಳೂ ತಮ್ಮ ಇಂಟರ್‌ನೆಟ್ ಬೆಲೆಯಲ್ಲಿ ಭಾರಿ ಕಡಿತ ಮಾಡಿದವು.
ಈಗ ಭಾರತದಲ್ಲಿ ಒಂದು ಜಿಬಿ೪ಜಿಡಾಟಾದ ಬೆಲೆ ವಲ೪.೪೦ರು.ಗಳಷ್ಟು ಮಾತ್ರ. ಅಂದಿನ ಇಂಟರ್ನೆಟ್‌ನ ಬೆಲೆಗೆ ಇಂದಿನ ಬೆಲೆಯನ್ನು ಹೋಲಿಕೆ ಮಾಡಿದರೆ೪ಜಿಡಾಟಾದ ಬೆಲೆ ಸುಮಾರು೧೬೫ಪಟ್ಟು ಕಡಿಮೆ ಆಗಿದೆ. ಈಗ ಜಗತ್ತಿನ ಅತಿ ಕಡಿಮೆ ಬೆಲೆಗೆ ಇಂಟರ್‌ನೆಟ್ ಲಭ್ಯವಾಗುತ್ತಿರುವುದು ಭಾರತದ!
ಅಮೆರಿಕದಲ್ಲಿ ಒಂದು ಜಿಬಿ ಇಂಟರ್‌ನೆಟ್ ಬೆಲೆ೮ಡಾಲರ್‌ಗಳು(೫೮೦ರು.ಗಳು), ಇಂಗ್ಲೆಂಡ್‌ನಲ್ಲಿ೧.೪ಡಾಲರ್‌ಗಳು(೯೦ರು.ಗಳು) ಹಾಗೂ ಚೀನಾದಲ್ಲಿ ಒಂದು ಜಿಬಿ ಇಂಟರ್ನೆಟ್ ಬೆಲೆ೦.೬ಡಾಲರ್‌ಗಳು (೪೨ರು.ಗಳು). ಭಾರತದಲ್ಲಿ ಕಡಿಮೆ ಬೆಲೆಗೆ ಇಂಟರ್ ರ್ನೆಟ್ ಡೆಟಾ ಸಿಗುವುದರಿಂದ ಭಾರತೀಯರಲ್ಲಿ ಬಳಸಲ್ಪಡು ತ್ತಿರುವ ಇಂಟರ್‌ನೆಟ್‌ನ ಪ್ರಮಾಣವೂ ಹೆಚ್ಚಾಗಿದೆ.
೨೦೧೪ರಲ್ಲಿ ಭಾರತದಲ್ಲಿ ಒಂದು ತಿಂಗಳಲ್ಲಿ ಬಳಸಲ್ಪಡುತ್ತಿದ್ದ ಮೊಬೈಲ್ ಇಂಟರ್‌ನೆಟ್ ಪ್ರಮಾಣ ಕೇವಲ೦.೦೮೯ಜಿಬಿ ಆಗಿದ್ದರೆ ಈಗ ಆ ಪ್ರಮಾಣ೧೨.೧ಜಿಬಿಗೆ ಏರಿದೆ.೨೦೧೫ನೇ ಇಸವಿಯಲ್ಲಿ ಭಾರತದಲ್ಲಿ ಜನರಿಗೆ ಸರಕಾರಿ ಸೇವೆಗಳು ಸುಲಭವಾಗಿ ಇಂಟರ್‌ನೆಟ್ ಮೂಲಕ ತಲುಪುವಂತಾಗಲು ಡಿಜಿಟಲ್ ಇಂಡಿಯಾ ಯೋಜನೆಯನ್ನು ಜಾರಿ ಮಾಡಲಾಯಿತು. ಪ್ರತಿ ಸರಕಾರಿ ಕಚೇರಿಗಳನ್ನು ಅಂತರ್ಜಾಲದ ಮೂಲಕ ಬೆಸೆದು ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಸಂಪರ್ಕಿಸಲು ಸಾಧ್ಯವಾಗುವ ವ್ಯವಸ್ಥೆಯನ್ನು ಮಾಡಲಾಯಿತು.
ದೇಶದಲ್ಲಿ೧,೫೪,೦೯೬ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್ ಬ್ಯಾಂಡ್ ಮೂಲಕ ಹೈಸ್ಪೀಡ್ ಇಂಟರ್‌ನೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬ್ರಾಡ್‌ಬ್ಯಾಂಡ್ ಮೂಲಕ ಸಂಪರ್ಕವನ್ನು ಕಲ್ಪಿಸಲಾಗದ ಪಂಚಾಯತ್‌ಗಳಿಗೆ ಸ್ಯಾಟಲೈಟ್ ಮೂಲಕ ನೇರ ಇಂಟರ್‌ನೆಟ್ ಸೌಲಭ್ಯವನ್ನು ಕೊಡ ಲಾಗುತ್ತಿದೆ. ಸರಕಾರದ೪೪ಪ್ರಮುಖ ಸೇವೆಗಳು (ಮಿಷನ್ ಮೋಡ್ ಪ್ರಾಜೆಕ್ಟ್) ಆನ್‌ಲೈನ್ ಮೂಲಕ ಅಭಿಸುತ್ತಿವೆ. ಇದರಲ್ಲಿ೧೩ಸೇವೆಗಳು ಕೇಂದ್ರ ಸರಕಾರಕ್ಕೆ ಸಬಂಧಪಟ್ಟವು.೧೭ಸೇವೆಗಳು ರಾಜ್ಯಗಳ ಮೂಲಕ ಜಾರಿಯಾಗುವಂತವು ಹಾಗೂ೧೪ಸೇವೆಗಳು ಕೇಂದ್ರ ಹಾಗೂ ರಾಜ್ಯಗಳ ಏಕೀಕೃತ ಸೇವೆಗಳಾಗಿವೆ.
ಸರಕಾರದ ಮೈ ಗವರ್ನೆ ಅನ್ನುವ ಡಿಜಿಟಲ್ ವೇದಿಕೆ ಇದ್ದು ಇದರಲ್ಲಿ ಜನರು ಸರಕಾರಕ್ಕೆ ಸಲಹೆ ಸೂಚನೆ ಗಳು, ದೂರುಗಳನ್ನು ನೀಡಬಹುದು. ನಾಗರಿಕರು ನೀಡಿದ ದೂರಿಗೆ ನಿರ್ದಿಷ್ಟ ದಿವಸಗಳೊಳಗೆ ಉತ್ತರ ಹಾಗೂ ಪರಿಹಾರವನ್ನು ಒದಗಿಸುವ ವ್ಯವಸ್ಥೆ ಮೈ ಗವರ್ನೆನಲ್ಲಿದೆ. ಇದೀಗ ಮೈ ಗವರ್ನೆನಲ್ಲಿ೧.೭೫ಕೋಟಿ ನೋಂದಾಯಿತ ಸದಸ್ಯರು ಇದ್ದಾರೆ.
ಪ್ರಧಾನಿ ಮೋದಿಯವರ ‘ನಮೋ’ ಎನ್ನುವ ಆಪ್ ಇದ್ದು ಈ ಆಪ್ ಮೂಲಕವೂ ಸರಕಾರಕ್ಕೆ ಸಲಹೆ ಹಾಗೂ ದೂರುಗಳನ್ನು ನೀಡಿ ಪರಿಹಾರಗಳನ್ನು ಪಡೆಯಬಹುದು. ಮೈ ಗ್ರೀವಿಯೆ ಅನ್ನುವ ಸರಕಾರದ ಇ-ಪೋರ್ಟಲ್ ವ್ಯವಸ್ಥೆ ಇದ್ದು ವಿವಿಧ ಇಲಾಖೆ ಇಲಾಖೆಗಳಿಗೆ ಸಂಬಂಧಪಟ್ಟ ದೂರುಗಳನ್ನು ದಾಖಲಿಸಿ ಸಮರ್ಪಕ ಪರಿಹಾರವನ್ನು ಪಡೆದು ಕೊಳ್ಳಬಹುದು. ಇನ್ನು ಡಿಜಿ ಲಾಕರ್ ಎನ್ನುವ ಅಪ್ಲಿಕೇಶನ್ ಸಾರ್ವಜನಿಕರಿಗೆ ಲಭ್ಯವಿದ್ದು ಇದರ ಮೂಲಕ ಜನರು ತಮ್ಮ ಆಧಾರ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ವಾಹನಗಳ ದಾಖಲೆಗಳು, ಮಾರ್ಕ್ಸ್ ಕಾರ್ಡ್.
ಇನ್ಶೂರೆ ಮೊದಲಾದವುಗಳನ್ನು ತಮ್ಮ ಮೊಬೈಲ್ ಫೋನ್‌ಗಳ ಸಂಗ್ರಹಿಸಿಡಬಹುದು. ಡಿಜಿ ಲಾಕರ್ ಮೂಲಕ ಹಾಜರು ಪಡಿಸಲಾಗುವ ದಾಖಲೆಗಳನ್ನು ಐಟಿ ಆಕ್ಟ್೨೦೦೦ರಲ್ಲಿ ಸೂಚಿಸಿದಂತೆ ಮೂಲ ದಾಖಲೆಗೆ ದಾಖಲೆಗಳಿಗೆ ಸರಿಸಮಾನವಾಗಿ ಪರಿಗಣಿಸಲಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ ನಿಯಂತ್ರಿಸಲ್ಪಡುತ್ತಿರುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (ಎನ್‌ಸಿಪಿಐ) ಆನ್‌ಲೈನ್ ಮೂಲಕ ತ್ವರಿತ ಪಾವತಿ ಮಾಡುವ ಭಾರತ್ ಇಂಟರ್ಫೇಸ್ ಫಾರ್ ಮನಿ (ಭೀಮ) ಅಪ್ಲಿಕೇಶನ್ಗಳನ್ನು ರೂಪಿಕರಿಸಲಾಗಿದೆ.
ಇವುಗಳನ್ನು ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ೧೫.೮ಕೋಟಿಗೂ ಹೆಚ್ಚು ಸಂಖ್ಯೆಯ ಭೀಮ್ ಯುಪಿಐ ಬಳಕೆದಾರರಿದ್ದಾರೆ. ಭಾರತದ೨೧೩ಬ್ಯಾಂಕ್‌ಗಳು ಭೀಮ್ ಯುಪಿಐ ಮೂಲಕ ತ್ವರಿತ ಹಣ ವರ್ಗಾವಣೆ ಹಾಗೂ ಪಾವತಿ ವ್ಯವಸ್ಥೆಯನ್ನು ಮಾಡಿವೆ. ಕ್ಯುಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವುದರ ಮೂಲಕವೂ ಪಾವತಿ ಮಾಡಬಹು ದಾಗಿದೆ. ಯುಪಿಐಗಳ ಮೂಲಕ ತಿಂಗಳೊಂದಕ್ಕೆ ಸರಾಸರಿ೧೫೦ಕೋಟಿ ಬಾರಿ ಹಣದವರ್ಗಾವಣೆ ನಡೆಯುತ್ತಿದ್ದು, ತಿಂಗಳಿಗೆ೩ರಿಂದ೪ಲಕ್ಷ ಕೋಟಿ ರು.ಗಳ ವಹಿವಾಟು ನಡೆಯುತ್ತಿದೆ.
ಸಂಪೂರ್ಣ ಭಾರತೀಯವಾಗಿರುವ ಡೆಬಿಟ್ ಕಾರ್ಡ್ ರುಪೇ ಕಾರ್ಡ್‌ಗಳನ್ನು೬೦ಕೋಟಿ ಭಾರತೀಯರು ಬಳಸುತ್ತಿದ್ದಾರೆ.ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ ಫರ್ (ನೇರ ಲಾಭ ವರ್ಗಾವಣೆಯ) ಮೂಲಕ ಸರಕಾರಿ ಸಹಾಯಧನ, ಸಬ್ಸಿಡಿ, ಪೆನ್ಷನ್ ಮೊದಲಾದವುಗಳು ಫಲಾನುಭವಿಗಳ ಖಾತೆಗಳಿಗೆ ನೇರ ವರ್ಗಾವಣೆಯಾಗುತ್ತಿದೆ. ಜಾಮ್ ಹೆಸರಿನ ,ಜನಧನ್ ಅಕೌಂಟ್, ಅಧಾರ್ ಹಾಗೂ ಮೊಬೈಲ್ ನಂಬರ್‌ಗಳನ್ನು ಪರಸ್ಪರ ಬೆಸೆದು(ಜೆಎಎಂ) ಫಲಾನುಭಾವಿಗಳ ಬ್ಯಾಂಕ್ ಖಾತೆಗೆ ಸಹಾಯಧನವನ್ನು ನೇರವಾಗಿ ವರ್ಗಾಯಿಸುವ ವ್ಯವಸ್ಥೆಯು, ಸಹಾಯಧನವು ಸ್ವಲ್ಪವೂ ಸೋರಿಕೆಯಾಗದೆ ನೇರವಾಗಿ ಫಲಾನುಭವಿಗಳಿಗೆ ಸಂಪೂರ್ಣವಾಗಿ ದೊರಕುವಂತೆ ಮಾಡಿದೆ. ಈ ವರ್ಷ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ೯ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕವಾಗಿ ತಲಾ೬೦೦೦ರು.ಗಳಂತೆ೫೪,೦೦೦ಕೋಟಿ ರು.ಗಳನ್ನು ವರ್ಗಾಯಿಸಲಾಗಿದೆ.
ಕರೋನಾ ಸಂದಿಗ್ಧ ಕಾಲದಲ್ಲಿ ಜನಧನ್ ಖಾತೆ ಹೊಂದಿರುವ೪೨ಕೋಟಿ ಬಡವರ ಬ್ಯಾಂಕ್ ಖಾತೆಗಳಿಗೆ ತಿಂಗಳೊಂದಕ್ಕೆ ತಲಾ೫೦೦ರು. ಗಳಂತೆ೬ತಿಂಗಳುಗಳ ಕಾಲ ಸಹಾಯಧನವನ್ನು ಜಮಾ ಮಾಡಲಾಗಿದೆ. ಒಟ್ಟು೬೯,೮೨೦ಕೋಟಿ ರು. ಗಳನ್ನು ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ವಿತರಣೆ ಮಾಡಲಾಗಿದೆ. ಈಗ ಪಡಿತರ ವಸ್ತುಗಳ ವಿತರಣೆ, ವಿದ್ಯಾರ್ಥಿವೇತನ, ರಸಗೊಬ್ಬರ ಸಬ್ಸಿಡಿ, ವೃದ್ಧರು ಹಾಗೂ ದಿವ್ಯಾಂಗರ ಪೆನ್ಷನ್, ಮೊದಲಾದವುಗಳು ಡಿಜಿಟಲ್ ಮಾಧ್ಯಮದ ಮೂಲಕವಾಗುತ್ತಿದೆ.ಸರಕಾರವು ಬಿಡುಗಡೆ ಮಾಡುವ ಎ ರೀತಿಯ ಅನುದಾನಗಳು ಹಾಗೂ ಸಬ್ಸಿಡಿಗಳು ನಗದು ಮುಖೇನ ಆಗದೆ ಫಲಾನುಭವಿಗಳ ಖಾತೆಗೇ ನೇರವಾಗಿ ವರ್ಗಾವಣೆಗೊಳ್ಳುವುದರಿಂದ ಲಂಚ, ಭ್ರಷ್ಟಾಚಾರ, ಸೋರಿಕೆಗಳು ಬಹಳಷ್ಟು ಕಡಿಮೆಯಾಗಿದೆ.
ಕರೋನಾವನ್ನು ತಡೆಗಟ್ಟುವ ಉದ್ದೇಶದಿಂದ ಸರಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಎನ್ನುವ ಆಪ್ ದೇಶದ೧೭.೨ಕೋಟಿ ಜನರು ಬಳಸುತ್ತಿದ್ದಾರೆ. ಕರೋನಾ ಜಾಗೃತಿಯನ್ನು ಮೂಡಿಸುವುದು ಹಾಗೂ ಸಮೀಪದಲ್ಲಿ ಇರುವ ಕರೋನಾ ಬಾಧಿತರ ಮಾಹಿತಿ ಕೊಡುವುದು ಆರೋಗ್ಯ ಸೇತುವಿನ ಆರಂಭಿಕ ಉದ್ದೇಶವಾಗಿತ್ತು. ಈಗ ಆರೋಗ್ಯ ಸೇತುವಿ ನಲ್ಲಿರುವ್ಕೋವಿನ್ ಅನ್ನುವ ಲಿಂಕ್ ಮೂಲಕ ಕರೋನಾ ವ್ಯಾಕ್ಸಿನೇಶನ್‌ನ ನೊಂದಣಿಯನ್ನು ಮಾಡಬಹುದು.
ಕೋವಿನ್ ಮೂಲಕ ಜನರು ಬಹಳ ಸುಲಭವಾಗಿ ಲಸಿಕೆಗೆ ಆನ್‌ಲೈನ್ ನೋಂದಣಿ ಮಾಡುವ ವ್ಯವಸ್ಥೆಯು ಎಲ್ಲ ಬಳಕೆದಾರರ  ಶ್ಲಾಘನೆಗೆ ಒಳಗಾಗಿದೆ. ದೇಶದೊಳಗಿನ ಬಹುತೇಕ ವ್ಯಾಪಾರ ವಹಿವಾಟು ಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಪೇಟಿಯಂ, ಗೂಗಲ್ ಪೇ, ಫೋನ್ ಪೇ, ಅಮೆಜಾನ್ ಪೇ, ಭೀಮ, ಮೊಬಿಕ್ವಿಕ್ ಮೊದಲಾದ ಹಣ ವರ್ಗಾವಣೆ ಆಪ್‌ಗಳು ಈಗ ಭಾರತದಲ್ಲಿ ತುಂಬಾ ಜನಪ್ರಿಯವಾಗಿವೆ.೨೦೧೯ನೇ ಇಸವಿಯಲ್ಲಿ೨೮೯ಶತಕೋಟಿ ಡಾಲರ್‌ಗಳಷ್ಟು (೨೦ಲಕ್ಷ ಕೋಟಿರು.ಗಳಷ್ಟು) ಹಣ ಪೇಮೆಂಟ್ ಆಪ್ ಮೂಲಕ ಸಂದಾಯ ವಾಗಿದೆ.
ಭಾರತೀಯರು ಆನ್‌ಲೈನ್ ಶಾಪಿಂಗ್‌ಗಳಿಗೂ ದೊಡ್ಡಮಟ್ಟಿಗೆ ತೆರೆದುಕೊಳ್ಳುತ್ತಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್, ಮೈಂತ್ರಾ,ಸ್ನ್ಯಾಪ್ ಡೀಲ್, ಟಾಟಾ ಕ್ಲಿಕ್, ಕ್ಲಬ್ ಫ್ಯಾಕ್ಟರಿ, ಶಾಪ್ ಕ್ಲೂ ಮೊದಲಾದ ಸಂಸ್ಥೆಗಳು ದೊಡ್ಡಮಟ್ಟಿನ ಆನ್ಲೈನ್ ವ್ಯಾಪಾರ ಮಾಡುತ್ತಿವೆ, ಭಾರತದಲ್ಲಿ ಜನರಿಗೆ ಸಿದ್ಧ ಆಹಾರ ವಸ್ತುಗಳ ಪೂರೈಕೆಯ ಆಪ್‌ಗಳೂ ಬಹಳ ಜನಪ್ರಿಯ ವಾಗುತ್ತಿದೆ. ಸ್ವಿಗ್ಗಿ, ಝೊಮ್ಯಾಟೋ, ಫುಡ್ ಪಾಂಡಾ, ಊಬರ್ ಈಟ್ಸ್, ಡೆಲಿವೆರೋ ಮೊದಲಾದ೧೬ಆಪ್ ಆಧಾರಿತ ಆಹಾರ ಪೂರೈಕೆಯ ವ್ಯವಸ್ಥೆ ಇಲ್ಲಿವೆ.
ಓಲಾ, ಊಬರ್, ಮೆರು ಕ್ಯಾಬ್ಸ್, ಕಾರ್ ಜೋನ್ ರೆಂಟ್, ಸವಾರಿ ರೆಂಟಲ್ಸ, ಟ್ಯಾಬ್ ಕ್ಯಾಬ್, ಝೂಮ್ ಕಾರ್ ಮೊದಲಾದ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಜನರು ಬಳಸಿಕೊಳ್ಳುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಡಿಜಿಟಲ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ಬೈಜೂಸ್, ಅನ್ ಅಕಾಡೆಮಿ, ವೇದಾಂತು, ಟಾಪರ್ ಮೊದಲಾದ ಶೈಕ್ಷಣಿಕ ಆಪ್‌ಗಳು ಚಾಲ್ತಿಯಲ್ಲಿವೆ. ಕರೋನಾ ಲಾಕ್ಡೌನ್ ಸಂದರ್ಭದಲ್ಲಂತೂ ಈ ಆಪ್‌ಗಳು ಮುಂಚೂಣಿಯಲ್ಲಿದ್ದವು. ಝೂಮ್ ಮೀಟಿಂಗ್, ಗೂಗಲ್ ಮೀಟ್, ಜಿಯೋ ಮೀಟ್ ಮೊದಲಾದ ಆಪ್‌ಗಳು ಆನ್‌ಲೈನ್ ಮೀಟಿಂಗ್ ಹಾಗೂ ಪಾಠ ಪ್ರವಚನಗಳಿಗೆ ಬಳಕೆಯಾಗುತ್ತಿವೆ. ಹೈವೇ ಟೋಲ್ ಶುಲ್ಕವು ಈಗ ಫಾಸ್ಟ್‌ಟ್ಯಾಗ್ ಎನ್ನುವ ಡಿಜಿಟಲ್ ಮಾಧ್ಯಮದಲ್ಲಿ ನಡೆಸಲ್ಪಡುತ್ತಿದ್ದು,೨ಕೋಟಿಗಿಂತಲೂ ಹೆಚ್ಚು ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಳವಡಿಸಿಕೊಳ್ಳಲಾಗಿದೆ.
ಫಾಸ್ಟ್‌ಟ್ಯಾಗ್ ಮೂಲಕ ಆನ್‌ಲೈನ್ ಟೋಲ್ ಸಂಗ್ರಹ ಆರಂಭವಾದ ನಂತರ ಟೋಲ್ ಸಂಗ್ರಹದಲ್ಲಿ ಶೇ.೨೭ಏರಿಕೆಯಾಗಿದೆ. ಈಗ ದೇಶದಲ್ಲಿ ದಿನವೊಂದಕ್ಕೆ೧೦೪ಕೋಟಿ ರು.ಗಳಷ್ಟು ಟೋಲ್ ಚಾರ್ಜ್ ಸಂಗ್ರಹವಾಗುತ್ತಿದೆ. ನಗದು ಮೂಲಕ ಟೋಲ್ ಸಂಗ್ರಹವಾಗುತ್ತಿದ್ದ ಕಾಲದಲ್ಲಿ ದಿನವೊಂದಕ್ಕೆ ಸುಮಾರು೮೦ಕೋಟಿ ರು.ಗಳು ಮಾತ್ರ ಸಂಗ್ರಹವಾಗುತ್ತಿತ್ತು. ದಿನವೊಂದರಲ್ಲಿ೨೫ಕೋಟಿ ರು.ಗಳಷ್ಟು ಹಣವು ಸೋರಿಕೆಯಾಗುವುದನ್ನು ಫಾಸ್ಟ್‌ಟ್ಯಾಗ್ ವ್ಯವಸ್ಥೆಯು ತಡೆಗಟ್ಟಿದೆ.
ವಾಹನಗಳು ಟೋಲ್ ಬೂತ್‌ನ ಸರದಿಯಲ್ಲಿ ಕಾಯುವುದೂ ತಪ್ಪಿದೆ. ಸಾಮಾಜಿಕ ಮಾಧ್ಯಮದ ಬಳಕೆಯಲ್ಲೂ ಭಾರತೀಯರು ಬಹಳ ಮುಂದಿದ್ದಾರೆ. ಇಲ್ಲಿ೫೩ಕೋಟಿ ಜನರು ವಾಟ್ಸ್‌ಆಪ್,೪೮.೮ಕೋಟಿ ಮಂದಿ ಯೂಟ್ಯೂಬ್,೪೧ಕೋಟಿ ಮಂದಿ ಫೇಸ್ ಬುಕ್,೨೧ಕೋಟಿ ಇನ್‌ಸ್ಟಾಗ್ರಾಂ ಹಾಗೂ೧.೭೫ಕೋಟಿ ಜನರು ಟ್ವೀಟರ್‌ಗಳನ್ನು ಬಳಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯರು ಡಿಜಿಟಲ್ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ.
ಡಿಜಿಟಲ್ ಇಂಡಿಯಾದಿಂದಾಗಿ ಸರಕಾರವು ಜನರ ಬಳಿಗೆ ಬಂದಿದೆ, ವ್ಯಾಪಾರ ಹಾಗೂ ಇತರ ಸೇವೆಗಳು ಮೊಬೈಲ್ಮೂಲಕ ಅಂಗೈಯಿಂದಲೇ ನಿಯಂತ್ರಿಸ ಲ್ಪಡುತ್ತಿವೆ. ಭಾರತದಲ್ಲಿ ದೊರಕುತ್ತಿರುವ ಅಗ್ಗದ ಬೆಲೆಯ ಇಂಟರ್ ನೆಟ್ ಡಾಟಾವೂ ಭಾರತದ ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುತ್ತಿದೆ.