ಮೆರೆದಾಡಿದಲ್ಲೇ ಮರೆಯಾಗುತ್ತಿದೆ ನೋಡಿ ಕಮ್ಯುನಿಸಂ
ಅವಲೋಕನ
ಕುಮಾರ್‌ ಶೇಣಿ
2011ರಲ್ಲಿ ಅಧಿಕಾರಕ್ಕೆ ಬಂದ ಮಮತಾ ಎದುರಾಳಿಯಾಗಿ ಇದ್ದದ್ದು ಅದೇ ಕಮ್ಯುನಿಸ್ಟರು. ಆದರೆ ಮೊದಲ ಬಾರಿಗೆ ಕಮ್ಯುನಿಸ್ಟರನ್ನು ಅಧಿಕಾರದಿಂದ ಹೊರಗಟ್ಟಿದ ಮಮತಾ ಮುಂದಿನ ಚುನಾವಣೆಯಲ್ಲೂ ಸಹ ತನ್ನದೇ ಪಕ್ಷವನ್ನು ಅಧಿಕಾರಕ್ಕೆ ಏರಿಸುವಲ್ಲಿ ಸಫಲರಾಗುತ್ತಾರೆ. ಅಲ್ಲಿಗೆ ಬಂಗಾಳದಲ್ಲಿ ಕಮ್ಯುನಿಸಂನ ಅಂತ್ಯ ಆರಂಭ ಎನ್ನಬಹುದು. ಬಿಜೆಪಿ ಕೂಡ ಸದ್ದಿಲ್ಲದೇ ಬಂಗಾಳದ ರಾಜಕಾರಣದಲ್ಲಿ ಏರುಗತಿಯನ್ನು ಕಾಣುವುದರ ಮೂಲಕ ಕಮ್ಯುನಿಸ್ಟರನ್ನು ಬದಿಗಟ್ಟಲು ಸಹಾಯ ಮಾಡಿತು ಎನ್ನಬಹುದು.
ಸಾತಂತ್ರ್ಯೋತ್ತರ ಭಾರತದಲ್ಲಿ ಉಳಿದುಕೊಂಡ ರಾಜಕೀಯ ಪಕ್ಷಗಳಲ್ಲಿ ಪ್ರಮುಖವಾದವುಗಳು ಕಾಂಗ್ರೆಸ್, ಜನಸಂಘ ಮತ್ತು ಕಮ್ಯುನಿಸ್ಟ್. ಸ್ವಾತಂತ್ರ್ಯ ಹೋರಾಟವನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರವನ್ನಾಗಿಸಿ ಕೊಂಡರೆ, ಜನ ಸಂಘ ಮತ್ತು ಕಮ್ಯುನಿಸ್ಟರದ್ದುಸೈದ್ಧಾಂತಿಕ ಹೋರಾಟ ಎನ್ನಬಹುದು. ಆದರೆ ಕೆಲ ದಶಕಗಳ ಕಾಲ ರಾಷ್ಟ್ರೀಯ ರಾಜಕಾರಣದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಿತು.
ಒಂದಷ್ಟು ಪಕ್ಷಗಳು ಹುಟ್ಟಿಕೊಂಡರೂ, ಅವುಗಳು ಕಾಂಗ್ರೆಸ್ಸಿಗೆ ಸರಿಸಮನಾಗಿ ಬೆಳೆಯಲು ಸಾಧ್ಯ ವಾಗಲಿಲ್ಲ.80ರ ದಶಕದ ಅಂತ್ಯದವರೆಗೆ ಕಾಂಗ್ರೆಸ್ ತನ್ನ ಪಾರಮ್ಯ ಸಾಧಿಸಿತು. ತುರ್ತು ಪರಿಸ್ಥಿತಿಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವಲ್ಲಿ ಜನತಾ ಸರಕಾರವೂ ವಿಫಲವಾಯಿತು. ಬಿಜೆಪಿ ಹುಟ್ಟಿ ನೊಂದಿಗೆ ಜನಸಂಘವೂ ಮರೆಯಾಗುತ್ತಾ ಸಾಗಿತು. ಆದರೆ ಕಮ್ಯುನಿಸ್ಟ್ ಪಕ್ಷವು ತನ್ನದೇ ಆದ ಸ್ಥಿರತೆಯನ್ನು ಸಾಧಿಸುತ್ತಾ ಬಂತು.
1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷವಾಗಿ ಗುರುತಿಸಿಕೊಂಡ ಕಮ್ಯುನಿಸ್ಟ್ ಪಕ್ಷವು, ಕ್ರಮೇಣ ಬೆಳೆಯುತ್ತಾ ಬಂದಿದ್ದು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ. ಇಂದಿರಾ ಅವಧಿಯ ತುರ್ತು ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರಿಗೆ ಶಕ್ತಿ ನೀಡಿತು. ಇದರಿಂದಾಗಿ1977ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ231ಸೀಟುಗಳನ್ನು ಗೆದ್ದು ಕೊಂಡ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಿತು.
ಜ್ಯೋತಿ ಬಸು ಬಂಗಾಳದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಂದಿನ ಮೂರು ದಶಕಗಳ ಕಾಲ ನಡೆದದ್ದು ಕಮ್ಯುನಿಸ್ಟರ ಮೆರೆದಾಟವೇ. ಸರಳತೆ, ಸರಳ ಉಡುಪು, ಮುಕ್ತ ಹಾಗೂ ಪರಿಣಾಮಕಾರಿ ಮಾತುಗಳು… ಹೀಗೆ ಜ್ಯೋತಿ ಬಸು ಅವರದ್ದು ಮಾರು ಹೋಗುವ ವ್ಯಕ್ತಿತ್ವವೇ. ಪಶ್ಚಿಮ ಬಂಗಾಳದ ಜನತೆ ಕೂಡ ಈ ವ್ಯಕ್ತಿತ್ವಕ್ಕೆ ಮಾರು ಹೋಗುವು ದರಲ್ಲಿ ಯಾವುದೇ ಅನುಮಾನವಿರಲಿಲ್ಲ.
ಆದರೆ ಜ್ಯೋತಿ ಬಸು ಅವರ ನೈಜ ವ್ಯಕ್ತಿತ್ವದ ಅನಾವರಣವಾಗಿದ್ದು ನಂತರದ ಕಾಲಘಟ್ಟದಲ್ಲಿ. ಎರಡು ದಶಕಕ್ಕೂ ಹೆಚ್ಚು ಸಮಯ ಕಿರೀಟವಿಲ್ಲದ ಚಕ್ರವರ್ತಿಯಂತೆ ಪಶ್ಚಿಮ ಬಂಗಾಳವನ್ನು ಜ್ಯೋತಿ ಬಸು ಆಳಿದರು. ಚುನಾವಣೆಯನ್ನು ಗೆಲ್ಲಲೂ ಎಲ್ಲಾ ರೀತಿಯ ಕುತಂತ್ರಗಳನ್ನು ಉಪಯೋಗಿದರು. ವಿರೋಧಿಸುವವರ ಬಾಯಿಯನ್ನು ಮುಚ್ಚಿಸಲು ಹಿಂಸಾತ್ಮಕ ಮಾರ್ಗ ವನ್ನೇ ಉಪಯೋಗಿಸಿದರು.
ಕಾನೂನು ವ್ಯವಸ್ಥೆ ದಿಕ್ಕೆಟ್ಟು ಹೋಯಿತು. ಕೋಲ್ಕತಾವನ್ನು ಸಾಯುತ್ತಿರುವ ನಗರ ಎಂದು ರಾಜೀವ್ ಗಾಂಧಿ ವಿಶ್ಲೇಷಣೆ ಮಾಡುವಷ್ಟರ ಮಟ್ಟಿಗೆ ಪಶ್ಚಿಮ ಬಂಗಾಳ ತಲುಪಿತು. ಪ್ರಜಾಪ್ರಭುತ್ವದ ನಾಡನ್ನು ತನ್ನದೇ ಹಾದಿಯಲ್ಲಿ ನಡೆಸಿದ ಕುಖ್ಯಾತಿ ಪಶ್ಚಿಮ ಬಂಗಾಳದ ಕಮ್ಯನಿಸಂಗೆ ಸಲ್ಲುತ್ತದೆ. ಚುನಾವಣೆಗಳನ್ನು ಕೇವಲ ಆಟದ ವಸ್ತುಗಳಂತೆ ಕಮ್ಯುನಿಸ್ಟರು ಬದಲಾಯಿಸಿ ದರು. ತಮ್ಮ ವಿರೋಧಿಗಳನ್ನು ಮತಗಟ್ಟೆಗೆ ಸುಳಿಯದಂತೆ ನೋಡಿಕೊಂಡರು.
ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋದಲ್ಲಿಯೂ ಕೂಡ ಜ್ಯೋತಿ ಬಸು ಅವರನ್ನು ಪ್ರಶ್ನಿಸುವವರು ಇರಲಿಲ್ಲ. ಅಲ್ಲಿಯವರೆಗೆಜ್ಯೋತಿ ಬಸು ತನ್ನ ಹಿಡಿತವನ್ನು ಸಾಧಿಸಿದ್ದರು. ಬಂದ್, ಮುಷ್ಕರಗಳಿಗೆ ರಾಜ್ಯ ಸರಕಾರದ ಬೆಂಬಲ ದೊರೆಯತೊಡಗಿದವು. ಕಮ್ಯನಿಸ್ಟ್ ಬೆಂಬಲಿಗರು ಪಶ್ಚಿಮ ಬಂಗಾಳದಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸತೊಡಗಿದರು.
ಪಶ್ಚಿಮ ಬಂಗಾಳದ ಕೈಗಾರಿಕೆ, ವ್ಯಾಪಾರ, ಉದ್ಯಮ ಎಲ್ಲವೂ ದಿಕ್ಕು ತಪ್ಪಿತು. ಸೆಣಬು ಕೈಗಾರಿಕೆ, ಲೋಹ ಉದ್ಯಮಗಳಿಗೆ ಹೆಸರಾಗಿದ್ದ ಕೋಲ್ಕತಾದಲ್ಲಿ ಉಸಿರೆತ್ತದಂತೆ ಮಾಡಲಾಯಿತು. ಬಡತನ ನಿರುದ್ಯೋಗ ತಾಂಡವವಾಡತೊಡಗಿತು. ಬಂಗಾಳಿಗಳು ಭಾರತದ ಉತ್ತರದಿಂದ ದಕ್ಷಿಣದವರೆಗೆ ಉದ್ಯೋಗ ಹುಡುಕುತ್ತಾ ಸಾಗಿದರು. ಹಲವು ಮಹಾನಗರಗಳಲ್ಲಿ ಬಂಗಾಳಿಗಳ ಸಂಖ್ಯೆ ಹೆಚ್ಚಲು ಇದು ಒಂದು ಕಾರಣ ಎನ್ನಬಹುದು. ಮಾನವ ಹಕ್ಕುಗಳ ಉಲ್ಲಂಘನೆ ಎಂಬುದು ಕಮ್ಯುನಿಸ್ಟರಿಗೆನೆನಪಾಗಲೇ ಇಲ್ಲ. ಇಂದು ಪ್ರಜಾಪ್ರಭುತ್ವ ನಶಿಸುತ್ತಿದೆ ಎಂದು ಕಿರುಚಾಡುವ ಕಾಂಗ್ರೆಸ್ ಕೂಡ ಮಾತನಾಡಲೇ ಇಲ್ಲ.
ನಂದಿಗ್ರಾಮ ಘಟನೆ, ಮರಿವಝಾಪಿ ಹತ್ಯಾಕಾಂಡ ಜ್ಯೋತಿ ಬಸು ಸರ್ವಾಧಿಕಾರಕ್ಕೆ ಒಂದೆರಡು ಉದಾಹರಣೆಗಳು ಅಷ್ಟೇ.ಹಿಂದೂ ವಿರೋಧಿ ನೀತಿಯನ್ನು ಮಾನದಂಡ ವನ್ನಾಗಿಸಿಕೊಂಡಿದ್ದ ಜ್ಯೋತಿ ಬಸು ಸರಕಾರ, ಹಿಂದೂಗಳನ್ನು ಹತ್ತಿಕ್ಕಲು ಎಲ್ಲಾ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿತು. ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದ ಮುಸಲ್ಮಾನರಿಗೆ ಎಲ್ಲಾ ರೀತಿಯ ದಾಖಲೆಗಳನ್ನು ಸೃಷ್ಟಿಸಲು ಆರಂಭಿಸಿದ್ದೇ ಜ್ಯೋತಿ ಬಸು ಸರಕಾರ. ಇದನ್ನು ಮುಂದುವರಿಸಿದ್ದು ಮಮತಾ ಸರಕಾರ. ಇಂದುಬಂಗಾಳದ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯ ಬಹುಸಂಖ್ಯಾತರಾಗಿ ಬೆಳೆದದ್ದು ಈ ಅಕ್ರಮ ವಲಸಿಗರನ್ನು ಸಕ್ರಮಗೊಳಿಸಿದ ಕಾರಣಕ್ಕಾಗಿಯೇ.
ಹೀಗೆ ಇಪ್ಪತ್ಮೂರು ವರ್ಷಗಳ ಕಾಲ ಬಂಗಾಳವನ್ನಾಳಿದ ಜ್ಯೋತಿ ಬಸು, ಇಡಿ ರಾಜ್ಯವನ್ನೇ ಕುಲಗೆಡಿಸಿಬಿಟ್ಟರು. ಆದರೆ ಯಾವಾಗಮಮತಾ ಸೆರಗಿಗೆ ಕಮ್ಯುನಿಸ್ಟರು ಕೈ ಹಾಕಿದರೋ, ಅದುವೇ ಕಮ್ಯುನಿಸ್ಟರ ಅಂತ್ಯಕ್ಕೆ ಕಾರಣವಾಯಿತು. ಮಮತಾ ಎಂದರೆ ಹಾಗೆಯೇ. ವೇಗದ ನಡಿಗೆ, ದಿಟ್ಟ ಮಾತುಗಳು, ಹೋರಾಟದ ನಡೆ ಇವೆಲ್ಲವೂ ಮಮತಾ ನಡವಳಿಕೆಗಳು. ಮಮತಾ ಬ್ಯಾನರ್ಜಿ ರಾಜಕೀಯದ ಬೆಳವಣಿಗೆಗೆ ಮುಖ್ಯ ಕಾರಣ ನಂದಿ ಗ್ರಾಮದ ಗಲಭೆ.
ಶೋಷಿತರ ಪರ ಎಂದು ಸ್ವಘೋಷಣೆ ಮಾಡಿಕೊಳ್ಳುವ ಕಮ್ಯುನಿಸ್ಟರು, ಪಶ್ಚಿಮ ಬಂಗಾಳದ ನಂದಿ ಗ್ರಾಮ ಎಂಬ ಪ್ರದೇಶದಲ್ಲಿ ಉದ್ಯಮವನ್ನು ಸ್ಥಾಪಿಸಲು, ಬಲವಂತವಾಗಿ ರೈತರಿಂದ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದರು. ಇದನ್ನು ವಿರೋಧಿಸಿದ ಗ್ರಾಮಸ್ಥರ ಮೇಲೆ ಪೊಲೀಸರು ಗುಂಡಿನ ದಾಳಿಯನ್ನು ನಡೆಸಿದರು. ಅನೇಕ ಜನರ ಹತ್ಯೆಯಾಯಿತು. ಮಮತಾ ಬ್ಯಾನರ್ಜಿನಂದಿ ಗ್ರಾಮದ ಹಿಂಸಾಚಾರವನ್ನು ನಿಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.
ಕೇಂದ್ರ ಸರಕಾರದ ಮಧ್ಯಪ್ರವೇಶದಿಂದ ನಂದಿ ಗ್ರಾಮದ ಗಲಭೆ ಅಂತ್ಯ ಕಂಡಿತು. ಇದು ಮಮತಾ ರಾಜಕಾರಣದ ಒಂದು ಮೈಲುಗಲ್ಲು. 2011ರಲ್ಲಿ ಅಧಿಕಾರಕ್ಕೆ ಬಂದ ಮಮತಾ ಎದುರಾಳಿಯಾಗಿ ಇದ್ದದ್ದು ಅದೇ ಕಮ್ಯುನಿಸ್ಟರು. ಆದರೆ ಮೊದಲ ಬಾರಿಗೆ ಕಮ್ಯುನಿಸ್ಟರನ್ನು ಅಧಿಕಾರದಿಂದ ಹೊರಗಟ್ಟಿದ ಮಮತಾ ಮುಂದಿನ ಚುನಾವಣೆಯಲ್ಲೂ ಸಹ ತನ್ನದೇ ಪಕ್ಷವನ್ನು ಅಧಿಕಾರಕ್ಕೆ ಏರಿಸುವಲ್ಲಿ ಸಫಲರಾಗುತ್ತಾರೆ. ಅಲ್ಲಿಗೆ ಬಂಗಾಳದಲ್ಲಿ ಕಮ್ಯುನಿಸಂನ ಅಂತ್ಯ ಆರಂಭ ಎನ್ನಬಹುದು. ಬಿಜೆಪಿ ಕೂಡ ಸದ್ದಿಲ್ಲದೇ ಬಂಗಾಳದ ರಾಜಕಾರಣದಲ್ಲಿ ಏರುಗತಿಯನ್ನು ಕಾಣುವುದರ ಮೂಲಕ ಕಮ್ಯುನಿಸ್ಟರನ್ನು ಬದಿಗಟ್ಟಲು ಸಹಾಯ ಮಾಡಿತು ಎನ್ನಬಹುದು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಹೋರಾಟ ನಡೆಯುತ್ತಿರುವುದು ಬಿಜೆಪಿ ಮತ್ತು ಮಮತಾ ಬ್ಯಾನರ್ಜಿಯ ನಡುವೆ. ಕಮ್ಯುನಿಸಂ ಸದ್ದಿಲ್ಲದೇ ಮರೆಯಾಗುತ್ತಿದೆ.
ಮೂರು ದಶಕಗಳ ಬಂಗಾಳವನ್ನು ಆಳಿದ, ಕಾಡಿದ ಕಮ್ಯುನಿಸಂ ಕೇವಲ ಹತ್ತು ವರ್ಷಗಳಲ್ಲಿ ಬಂಗಾಳದಿಂದ ಮರೆಯಾಗುತ್ತಿರು ವುದು ಅಚ್ಚರಿಯ ವಿಚಾರವಾದರೂ ಕಟು ಸತ್ಯ. ಈಗ ನಡೆಯುತ್ತಿರುವ ಬಂಗಾಳದ ವಿಧಾನಸಭೆ ಚುನಾವಣೆ ಕೇಂದ್ರಿಕರಣ ಗೊಂಡಿರುವುದು ಮೋದಿ, ಮಮತಾ, ಎನ್‌ಆರ್‌ಸಿ, ಪೌರತ್ವ, ಬಂಗಾಳಿ ಅಸ್ಮಿತೆ ಇತ್ಯಾದಿ ವಿಚಾರಗಳ ಮೇಲೆಯೇ. ಕಮ್ಯುನಿಸಂನತತ್ತ್ವ, ಸಿದ್ಧಾಂತಗಳು ಬಹಳ ಬೇಗನೇ ಬಂಗಾಳದಲ್ಲಿ ಮರೆಯಾಗಿಬಿಟ್ಟಿದೆ. ಶೋಷಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಮ್ಯುನಿಸ್ಟರು ಮತ್ತೊಂದು ಹಂತದ ಶೋಷಣೆಗೆ ಇಳಿದದ್ದು ಪಶ್ಚಿಮ ಬಂಗಾಳದ ಮಟ್ಟಿಗೆ ಕಟು ವಾಸ್ತವ.
ಆದರೆ ಅದೇ ರಾಜಕಾರಣವನ್ನು ವಿರೋಧಿಸುತ್ತಾ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ, ಅದೇ ಕಮ್ಯುನಿಸ್ಟರ ಹಾದಿ ಹಿಡಿದಿರು ವುದು ಮಾತ್ರ ದುರ್ದೈವ. 2019ರ ಲೋಕಸಭಾ ಚುನಾವಣೆಯಲ್ಲಿ18ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಮಮತಾ ಬ್ಯಾನರ್ಜಿಯ ತೃಣ ಮೂಲ ಕಾಂಗ್ರೆಸ್‌ಗೆ ಎದುರಾಳಿಯಾಗಿ ಬೆಳೆದದ್ದು ಬಿಜೆಪಿ. ಈಗ ನಡೆಯುತ್ತಿರುವ ವಿಧಾನ ಸಭಾ ಚುನಾವಣೆ ಯಲ್ಲಿಯೂ ಅದು ಮುಂದುವರಿದಿದೆ. ತನ್ನದೇ ಸಿದ್ಧಾಂತಗಳನ್ನು ನಿಷ್ಠೆಯಿಂದ ಅಳವಡಿಸಿಕೊಳ್ಳದ ಕಮ್ಯುನಿಸ್ಟರು ಬಂಗಾಳ ದಲ್ಲಿ ಮಾಯವಾಗುತ್ತಿದ್ದಾರೆ. ಮೂರು ದಶಕ ಗಳಿಂದ ಬಂಗಾಳವನ್ನು ಆಳಿದ, ಕಾಡಿದ, ದಬ್ಬಾಳಿಕೆ ಮೆರೆದ, ಶೋಷಿಸಿದ, ಒಟ್ಟಿನಲ್ಲಿ ಬಂಗಾಳದ ಉದ್ದಕ್ಕೂ ಮೆರೆದಾಡಿದ ಕಮ್ಯುನಿಸಂ, ಅದೇ ಬಂಗಾಳದಲ್ಲಿ ಮರೆಯಾಗುತ್ತಿದೆ.
1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷವಾಗಿ ಗುರುತಿಸಿಕೊಂಡ ಕಮ್ಯುನಿಸ್ಟ್ ಪಕ್ಷವು, ಕ್ರಮೇಣ ಬೆಳೆಯುತ್ತಾ ಬಂದಿದ್ದು ಕೇರಳ ಮತ್ತು ಪಶ್ಚಿಮ ಬಂಗಾಳ ದಲ್ಲಿ. ಇಂದಿರಾ ಅವಧಿಯ ತುರ್ತು ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರಿಗೆ ಶಕ್ತಿ ನೀಡಿತು. ಇದರಿಂದಾಗಿ 1977ರಲ್ಲಿ ನಡೆದ ವಿಧಾನ ಸಭಾ ಚುನಾವಣೆ ಯಲ್ಲಿ 231 ಸೀಟುಗಳನ್ನು ಗೆದ್ದು ಕೊಂಡ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಿತು.ಜ್ಯೋತಿ ಬಸು ಬಂಗಾಳದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಂದಿನ ಮೂರು ದಶಕಗಳ ಕಾಲ ನಡೆದದ್ದು ಕಮ್ಯುನಿಸ್ಟರ ಮೆರೆದಾಟವೇ. ಎರಡು ದಶಕಕ್ಕೂ ಹೆಚ್ಚು ಸಮಯ ಕಿರೀಟವಿಲ್ಲದ ಚಕ್ರವರ್ತಿ ಯಂತೆ ಪಶ್ಚಿಮಬಂಗಾಳವನ್ನು ಜ್ಯೋತಿ ಬಸು ಆಳಿದರು. ಚುನಾವಣೆಯನ್ನು ಗೆಲ್ಲಲೂ ಎಲ್ಲಾ ರೀತಿಯ ಕುತಂತ್ರಗಳನ್ನು ಉಪಯೋಗಿದರು.ವಿರೋಧಿಸುವವರ ಬಾಯಿಯನ್ನು ಮುಚ್ಚಿಸಲು ಹಿಂಸಾತ್ಮಕ ಮಾರ್ಗವನ್ನೇ ಉಪಯೋಗಿಸಿದರು. ಕಾನೂನು ವ್ಯವಸ್ಥೆ ದಿಕ್ಕೆಟ್ಟು ಹೋಯಿತು.