ನಾ ಕಂಡ ಅಧಿವೇಶನ
ಅಭಿಮತ
ಪವನ್‌ ವಶಿಷ್ಠ
ಸರ್.ಮಿರ್ಜಾ ಇಸ್ಮಾಯಿಲ್ ಅವರ ಅಂತ್ಯ ಸಂಸ್ಕಾರಕ್ಕೆ ಸಾಕಷ್ಟು ಜನ ಬರುತ್ತಲೇ ಇದ್ದರು. ರಾತ್ರಿ ಸುಮಾರು10ಗಂಟೆ ಆಗಿತ್ತು, ಡಿ.ವಿ.ಜಿ ಅವರು ಕೂಡ ಆ ಸಮಯಕ್ಕೆ ಅಲ್ಲಿಗೆ ಬಂದಿರುತ್ತಾರೆ. ಬರಬೇಕಾದರೆ ಗೇಟ್‌ನ ಬಳಿ ಒಬ್ಬ ಹುಡುಗ ಬಿಕ್ಕಿ ಬಿಕ್ಕಿ ಅಳುತ್ತಿರುತ್ತಾನೆ. ಅದನ್ನು ಕಂಡ ಡಿವಿಜಿ ‘ಯಾಕಪ್ಪ ಹೀಗೆ ಅಳ್ತಿದಿಯಾ?’ ಅಂಥ ಕೇಳ್ತಾರೆ, ಮೈಲಿ ದೂರದಿಂದ ಹೊರಲಾರದೆ ನನ್ನ ಮಡದಿ ನೀರಿನ ಕೊಡ ಹೊತ್ತು ಬರಬೇಕಾಗಿತ್ತು, ಆಕೆ ಬಸುರಿ ಬೇರೆ.
ಅಂತಹ ಸಂದರ್ಭದಲ್ಲಿ ದಿವಾನರು ಎಂಜಿನಿಯರ್ ಮುಖಾಂತರ ನಮ್ಮ ಮನೆ ಬಾಗಿಲ ಬಳಿ ನಲ್ಲಿ ಹಾಕಿಸುವ ಮೂಲಕ ನಮ್ಮನೀರಿನ ದಾಹ ತೀರಿಸಿದರು. ಬೇರೆಯವರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ನಮ್ಮ ಧಣಿ ಈಗಿಲ್ಲ, ಮುಂದೆ ನಮ್ಮನ್ನ ನೋಡಿಕೊಳ್ಳುವವರುಯಾರು ಎಂದು ಆತ ಡಿವಿಜಿ ಅವರ ಮುಂದೆ ಗೋಳಿಟ್ಟ. ಜನ ಸಾಮಾನ್ಯರು ಮತ್ತು ರಾಜಕಾರಣಿಗಳ ನಡುವಿನ ಈ ರೀತಿಯ ಅಂತಃಕರಣ ಇಂದು ಉಳಿದಿಲ್ಲ. ಈಗ ಏನಿದ್ದರೂ ಉಳ್ಳವರ ಮಧ್ಯೆಯೇ ಚುನಾವಣೆ ನಾವು ಉಳ್ಳವರನ್ನೇ ಹುಡಕಬೇಕು ನೀವು ಉಳ್ಳವರನ್ನೇ ಹುಡುಕಬೇಕು. ಉಳ್ಳವರು ಅಂದರೆ ಯಾರು? ಯೋಗ್ಯತೆ ಉಳ್ಳವರಾ? ಮಾನ ಉಳಿಸಿಕೊಂಡವರಾ? ಇದೇನು ಬಂಡವಾಳ ವಿನಿಮಯ ಕೇಂದ್ರವೇ ಸದ್ಯದ ರಾಜಕೀಯ ಪರಿಸ್ಥಿತಿ ನೆನೆದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರುಸದನದಲ್ಲಿ ತಮ್ಮ ಅಸಮಾಧಾನ ಹೊರಹಾಕಿದ ಪರಿ ಇದು.
ಜಾತಿ, ಮತ, ಪಕ್ಷ ಎಲ್ಲವನ್ನೂ ಮೀರಿ ಎಲ್ಲರೂ ಒಪ್ಪುವಂಥ ಮಾತು ಇದಾಗಿತ್ತು. ಈ ರೀತಿ ಹತ್ತು ಹಲವು ಸೃಜನಾತ್ಮಕ ಮತ್ತು ಕಾನೂನಾತ್ಮಕ ಚರ್ಚೆಗೆ ಇತ್ತೀಚಿನ ಅಧಿವೇಶನ ಸಾಕ್ಷಿಯಾಗಿದ್ದಂತು ಸತ್ಯ. ಕಟಕ ವಿಧಾನಸಭೆಯ15ನೇ ವಿಧಾನ ಸಭೆ9ನೇ ಅಧಿವೇಶನಕ್ಕೆ ನಮ್ಮ ಜನಪ್ರತಿನಿಧಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ಚರ್ಚೆ ನಡೆಸುತ್ತಿರುವುದು ಗಮನಿಸಿದರೆ ನಿಜಕ್ಕೂದೇಶದ ಇತರೆ ವಿಧಾನಸಭೆಗಳಿಗೆ ಹೋಲಿಸಿದರೆ ಕರ್ನಾಟಕ ವಿಧಾನ ಸಭೆ ನಿಜಕ್ಕೂ ಮಾದರಿ ಎಂದೆನಿಸಿತು.
ಕೋವಿಡ್ –19ಮಹಾಮಾರಿ ನಮ್ಮ ದೇಶಕ್ಕೆ ಕಾಲಿಟ್ಟ ನಂತರ ನಡೆಯುತ್ತಿರುವ4ನೇ ಅಧಿವೇಶನ. ಇದು ಒಂದು ರೀತಿ ದಾಖಲೆಯೇ ಸರಿ. ಬಹುಶಃ ಕೋವಿಡ್-19ರ ಬಿಕ್ಕಟ್ಟಿನ ಸಮಯದಲ್ಲೂ ಅಧಿವೇಶನ ಎಂಬ ಇಕ್ಕಟ್ಟಿಗೆ ಸಿಕ್ಕಿಹಾಕಿ ಕೊಂಡಿರು ವುದು ಯಾರಾದರೂ ಇದ್ದರೆ ಅದು ಕರ್ನಾಟಕ ರಾಜ್ಯದ ಜನಪ್ರತಿನಿಧಿಗಳು ಮಾತ್ರ ಎಂದರೆ ತಪ್ಪಾಗಲಾರದು. ಅದೇನೇ ಇರಲಿ ಜನಪ್ರತಿನಿಧಿಗಳ ಉತ್ಸಾಹ ಹೀಗೆ ಮುಂದುವರಿಯಲಿ. ನಾನೇನು ರಾಜ ತಾಂತ್ರಿಕನಲ್ಲ, ಕಾನೂನು ಪಂಡಿತನಲ್ಲ ಅಥವಾ ರಾಜಕೀಯ ಹಿನ್ನೆಲೆಯಿಂದ ಬಂದವನಲ್ಲ.
ಅಧಿವೇಶನ ಎಂದರೆ ಗದ್ದಲ ಎಂದು ಎಡೆ ಪ್ರಚಲಿತವಾದ್ದರಿಂದ ಅದನ್ನೇ ನಾನು ಕೂಡ ನಂಬಿದ್ದೆ. ಸ್ವಲ್ಪ ಸಮಯ ಸಿಕ್ಕ ಪರಿಣಾಮ ಅದೇನು ಗದ್ದಲ ನೋಡಿಯೇ ಬಿಡೋಣ ಎಂದು ಅಽವೇಶನ ಮತ್ತು ಅದರ ನಡವಳಿಗಳನ್ನು ನಾನೊಬ್ಬ ಜನ ಸಾಮಾನ್ಯವಾಗಿ ಗಮನಿಸುತ್ತಾ ಹೋದೆ. ನಿಜಕ್ಕೂ ನನಗೆ ಆಶ್ಚರ್ಯ ಕಾದಿತ್ತು. ಮಾನ್ಯ ಸಿದ್ಧರಾಮಯ್ಯ, ಎಚ್.ಕೆ.ಪಾಟೀಲ, ಎ.ಟಿ.ರಾಮಸ್ವಾಮಿ, ರಮೇಶ್ ಕುಮಾರ್, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಎಚ್.ಡಿ.ರೇವಣ್ಣ ರಂಥ ಘಟಾನುಘಟಿ ನಾಯಕರು ಅಧಿವೇಶನದಲ್ಲಿ ಮಾತನಾಡಿದ್ದು ಗಮನಿಸುತ್ತಾ ಹೋದರೆ ನಿಜಕ್ಕೂ ರಾಜಕೀಯ ಅಂದ್ರೆ ಕೇವಲ ದುಡ್ಡು ಮಾಡೋದು ಎಂಬ ಗುಂಗಲ್ಲಿದ್ದ ನಮ್ಮಂಥ ಎಷ್ಟೋ ಜನರಿಗೆ ಅದರ ಚಿತ್ರಣವನ್ನೇ ಬುಡ ಮೇಲೂ ಮಾಡಿದೆ. ಅಽವೇಶನ ಎಂದರೆ ಗದ್ದಲ ಎಂದು ನನ್ನಂಥ ಜನ ಸಾಮಾನ್ಯರ ತಲೆಗೆ (ಅಪ)ಪ್ರಚಾರ ಮಾಡಿದ ವ್ಯಕ್ತಿಗಳಿಗೊಂದು ದಿಕ್ಕಾರವಿರಲಿಅನಿಸಿದ್ದು ಮಾತ್ರ ಸುಳ್ಳಲ್ಲ.
ಆದರೆ ಇಂಥ ಆರೋಗ್ಯಕರ ಚರ್ಚೆ ಮಾಡಿ ನಂತರ ಕಳೆದ 2-3 ದಿನದಿಂದ ಬೇಡದ ಸೀಡಿ ವಿಚಾರಕ್ಕೆ ಕಲಾಪದ ಸಮಯ ಹಾಳು ಮಾಡುತ್ತಿರುವುದು ಇದೇ ನಾಯಕರುಗಳು ಎಂಬ ಆಶ್ಚರ್ಯ ಮನೆಮಾಡಿತು. ವಿಧಾನಸಭೆ ಕಲಾಪದ ಸಮಯ ವ್ಯರ್ಥ ಮಾಡುವ ಮೂಲಕ ಈ ನಾಯಕರು ತಮ್ಮ ಮೇಲಿದ್ದ ಗೌರವವನ್ನ ಕುಗ್ಗಿಸಿಕೊಂಡಿರುವುದು ಬೇಸರದ ಸಂಗತಿ.