ಸುಭಾಷ್ ಚಂದ್ರ ಬೋಸ್ – ವಿವೇಕಾನಂದರ ಬಳಗದ ಗತವೈಭವ ಮರುಕಳಿಸುವುದೇ ?
ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳ ಎಂದರೆ ಬ್ರಿಟಿಷರ ವಿರುದ್ಧ ಹೋರಾಟ ಮಾಡುವವರಿಗೆ ಸ್ವರ್ಗವಾಗಿತ್ತು. ದೇಶದ ಯಾವುದೇ ಮೂಲೆಯಲ್ಲಿ ಕ್ರಾಂತಿಕಾರಕ ಚಳವಳಿಗಳು ಶುರುವಾಗಬೇಕೆಂದರೆ ‘ಬಂಗಾಳ’ದ ನಾಯಕರ ನೇತೃತ್ವ ಮಹತ್ವದ್ದಾಗಿರುತ್ತಿತ್ತು. ಬ್ರಿಟಿಷರ ವಿರುದ್ಧ ಹೋರಾಡುವ ಮಹಾನ್ ಕ್ರಾಂತಿಕಾರಿಗಳ ರಾಜ್ಯವಾಗಿತ್ತು ಬಂಗಾಳ.
ಸುಭಾಷ್ ಚಂದ್ರ ಬೋಸರ ಬಂಗಾಳದಲ್ಲಿ ಶುರುವಾಗಿದ್ದಂಥ ಸ್ವಾತಂತ್ರ್ಯದ ಕಿಚ್ಚಿನ ಭಯದಿಂದ ಬ್ರಿಟಿಷರು ರಾಜಧಾನಿಯನ್ನು ಬಂಗಾಳದಿಂದ ‘ದೆಹಲಿ’ಗೆ ವರ್ಗಾಯಿಸಬೇಕಾಯಿತು. ಶತ ಶತಮಾನಗಳಿಂದಲೂ ವ್ಯಾಪಾರ ವಹಿವಾಟುಗಳಿಗೆ ಬಂಗಾಳ ಪ್ರಮುಖ ಕೇಂದ್ರವಾಗಿತ್ತು. ಜಗತ್ತಿನಾದ್ಯಂತ ನಡೆಯುತ್ತಿದ್ದಂಥ ಸಾವಿರಾರು ಕೋಟಿಯ ವ್ಯಾಪಾರ ವಹಿವಾಟುಗಳು ಬಂಗಾಳದ ಬಂದರುಗಳ ಮೂಲಕ ನಡೆಯುತ್ತಿತ್ತು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಂಗಾಳದವರೆಂದರೆ ಸಾಕು ದೇಶಭಕ್ತರು, ಬುದ್ಧಿವಂತರು, ಕಾನೂನಿನ ವಿಚಾರಗಳನ್ನು ಹೆಚ್ಚು ಅರಿತವರು, ಅಪ್ರತಿಮ ಕ್ರಾಂತಿಕಾರಿಗಳೆಂದು ದೇಶದ ಜನ ಮಾತನಾಡಿಕೊಳ್ಳುತ್ತಿದ್ದರು. ‘ಸುಭಾಷ್ ಚಂದ್ರ ಬೋಸ್‌ರಂಥಮಹಾನ್ ಕ್ರಾಂತಿಕಾರರನ್ನು ಭಾರತ ಮಾತೆಯ ಸೇವೆಗೆ ನೀಡಿದ ರಾಜ್ಯ ‘ಬಂಗಾಳ’. ಬೋಸರು ಅಹಿಂಸಾವಾದದಿಂದ ಸ್ವತಂತ್ರ ಸಿಗುವುದಿಲ್ಲವೆಂದು ಅರಿತ ಮೇಲೆ, ‘ವೀರ ಸಾವರ್ಕರ’ರ ಸಲಹೆ ಅನ್ವಯ ಜರ್ಮನಿ ಹಾಗೂ ಜಪಾನ್ ದೇಶದಲ್ಲಿದ್ದಂಥ ಭಾರತೀಯ ಬ್ರಿಟಿಷ್ ಯುದ್ಧ ಕೈದಿಗಳನ್ನು ಒಂದೆಡೆ ಸೇರಿಸಿ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಕಟ್ಟಿ ಬ್ರಿಟಿಷರ ಮೇಲೆ ಆಕ್ರಮಣ ಮಾಡಲಿಲ್ಲವೆಂದಿದ್ದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ.
ಮೊಟ್ಟ ಮೊದಲ ಬ್ರಿಟಿಷೇತರ ‘ಸಂಪೂರ್ಣ ಭಾರತೀಯ ಸರಕಾರ’ ಸ್ಥಾಪಿಸಿದ ಕೀರ್ತಿ ಬೋಸರಿಗೆ ಸಲ್ಲಬೇಕು. ಬ್ರಿಟಿಷರ ‘ಗೃಹಬಂಧನ’ದಿಂದ ತಪ್ಪಿಸಿಕೊಂಡು ದೇಶಬಿಟ್ಟು, ತಿಂಗಳುಗಟ್ಟಲೆ ಹಡಗುಗಳಲ್ಲಿ, ‘ಸಬ್ ಮರೀನ್’ಗಳಲ್ಲಿ ಕದ್ದುಮುಚ್ಚಿ ಜರ್ಮನ್‌ಗೆ ತೆರಳಿ ‘ಹಿಟ್ಲರ್’ನ ಸ್ನೇಹ ಸಂಪಾದಿಸಿ ಭಾರತೀಯ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಇಂತಹ ಮಹಾನ್ ಕಾರ್ಯ ವನ್ನು ಮಾಡಿದಂಥ ಬೋಸರು ಹುಟ್ಟಿದ ನಾಡು ‘ಬಂಗಾಳ’.
ಬ್ರಿಟಿಷರನ್ನು ಭಾರತದಿಂದ ಓಡಿಸಲು ಬಹುದೊಡ್ಡ ಸೈನ್ಯವನ್ನೇ ಕಟ್ಟಿದ ಬೋಸರ ‘ಬಂಗಾಳದ’ ಇಂದಿನ ಪರಿಸ್ಥಿತಿ ಏನಾಗಿದೆ? ಪಕ್ಕದ ಬಾಂಗ್ಲಾದೇಶದಿಂದ ಲಕ್ಷಾಂತರ ಮುಸ್ಲಿಮರನ್ನು ಅಲ್ಲಿನ ಕಮ್ಯುನಿಸ್ಟ್ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ಅಕ್ರಮವಾಗಿ ಒಳಗೆ ಬಿಟ್ಟುಕೊಂಡಿದೆ. ಅವರಿಗೆ ಇಲ್ಲಸಲ್ಲದ ಸವಲತ್ತುಗಳೆಲ್ಲವನ್ನೂ ನೀಡಿ ಭದ್ರವಾದಂಥ ಮತ ಬ್ಯಾಂಕ್ ಮಾಡಿಕೊಂಡಿದೆ. ಬೋಸರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರೆ, ಕಮ್ಯುನಿಸ್ಟರು ತಮ್ಮ ಸ್ವಾರ್ಥಕ್ಕಾಗಿ ಅಸಂಖ್ಯಾತ ಮೂಲ ಬಂಗಾಳಿಗರ ರಕ್ತ ಚೆಲ್ಲುವ ಕೆಲಸವನ್ನು ಸುಮಾರು೨೭ವರ್ಷಗಳ ಆಡಳಿತದಲ್ಲಿ ಮಾಡಿzರೆ. ಬ್ರಿಟಿಷರನ್ನು ದೇಶದಿಂದ ಓಡಿಸಿದ ಬೋಸರ ಬಂಗಾಳದ ಇಂದಿನ ಪರಿಸ್ಥಿತಿಯಂತೂ ಎಷ್ಟು ಹೀನಾಯವಾಗಿದೆಯೆಂದರೆ, ಹಿಂದುಗಳಿಗೆ ಹಬ್ಬ ಹರಿದಿನದ ಆಚರಣೆಗಳನ್ನು ಸಾರ್ವಜನಿಕವಾಗಿ ಸಂಭ್ರಮಿಸಲು ಸಂಪೂರ್ಣ ಸ್ವಾತಂತ್ರ್ಯವಿಲ್ಲ, ಆದರೆಮುಸಲ್ಮಾನರಿಗೆ ಮಾತ್ರ ತಮ್ಮ ಹಬ್ಬಗಳನ್ನು ಆಚರಿಸಲು ಎಲ್ಲಿಲ್ಲದ ಸ್ವಾತಂತ್ರ್ಯ ಬಂಗಾಳದಲ್ಲಿದೆ.
ತನ್ನ ಆಡಳಿತ ವಽಯುದ್ದಕ್ಕೂ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ಮಮತಾ ಬ್ಯಾನರ್ಜಿ ನೂರಾರು ಹಿಂದೂ ಕಾರ್ಯಕರ್ತಕರ ಕೊಲೆಗಳಾದರೂ ತಲೆ ಕೆಡಿಸಿಕೊಳ್ಳಲಿಲ್ಲ. ಅ ಹುಟ್ಟಿ ಅಲ್ಲೇ ಬೆಳೆದ ಬಂಗಾಳದ ಮೂಲ ಜನರ ಜತೆಗೆ ನಿಲ್ಲದೇಬಾಂಗ್ಲಾದೇಶದಿಂದ ಬಂದಂಥ ಮುಸಲ್ಮಾನರ ಜತೆಗೆ ನಿಲ್ಲುವ ಮೂಲಕ ಬಂಗಾಳದ ಸ್ವಾತಂತ್ರ್ಯ ವೀರರಿಗೆ ಬಹುದೊಡ್ಡಅವಮಾನ ಮಾಡಿಕೊಂಡು ಬಂದಿದ್ದಾರೆ.
ತರುಣರ ಆಶಾಕಿರಣ ‘ಸ್ವಾಮಿ ವಿವೇಕಾನಂದ’ರು ಜನಿಸಿದಂಥ ನಾಡು ಬಂಗಾಳ, ಹತ್ತೊಂಬತ್ತನೆಯ ಶತಮಾನದಲ್ಲಿ ಬಂಗಾಳದಿಂದ ಇಡೀ ದೇಶದ ಯುವಕರನ್ನು ಪ್ರೇರೇಪಿಸಿ ದೇಶ ಕಟ್ಟುವ ಸಲುವಾಗಿ ಇಡೀ ದೇಶವನ್ನೇ ಸುತ್ತಿ ದೊಡ್ಡದೊಂದು ಯುವ ಪಡೆಯನ್ನೇ ಸಜ್ಜಾಗಿಸಿದವರು ಸ್ವಾಮಿ ವಿವೇಕಾನಂದರು. ಸುಮಾರು ನೂರು ವರ್ಷಗಳ  ಹಿಂದೆ ಅವರು ಕಂಡಿದ್ದಂಥ ಯುವ ಭಾರತದ ಕನಸು ಇಂದಿಗೂ ಸಂಪೂರ್ಣವಾಗಿ ನನಸಾಗಿಲ್ಲ. ನೂರು ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳನ್ನು ಕೇಳಿದರೆ ಇಂದಿಗೂ ಯುವ ಜನಾಂಗದ ರೋಮ ರೋಮಗಳು ಎದ್ದು ನಿಲ್ಲುತ್ತವೆ.
ವಿವೇಕಾನಂದರ ಸುಂದರ ಭಾರತದ ಕಲ್ಪನೆಯ ಹಿಂದಿನ ಶಕ್ತಿ ನವ ತರುಣರು. ಅವರು ಹಾಕಿದ ಭದ್ರ ಬುನಾದಿಯು ಇಂದಿಗೂ ಸಮಾಜ ಕಟ್ಟುವಲ್ಲಿ ತರುಣರಿಗೆ ಯಥಾಪ್ರಕಾರ ಅನ್ವಯವಾಗುತ್ತದೆ. ವಿವೇಕಾನಂದರ ದೂರದೃಷ್ಟಿ ಅದೆಷ್ಟಿಯೆಂದರೆ ನಾವು ಈಗ ಯೋಚಿಸುವ ಭವ್ಯ ಭಾರತದ ಕನಸನ್ನು ನೂರು ವರ್ಷಗಳ ಹಿಂದೆಯೇ ಕಟ್ಟಿದ್ದರು. ತರುಣ ಪಡೆಯನ್ನು ದೇಶದ ಅಭಿವೃದ್ಧಿಗಾಗಿ ಸಜ್ಜುಗೊಳಿಸಿದರೆ ಭಾರತವು ಪಾಶ್ಚಿಮಾತ್ಯ ದೇಶಗಳಿಗಿಂತಲೂ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬ ಕನಸು ಅವರದ್ದಾಗಿತ್ತು.
ಅಮೆರಿಕಾದ ‘ಚಿಕಾಗೊ’ ಸಮ್ಮೇಳನದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಹಿಂದೂ ಧರ್ಮದ ಬಗ್ಗೆ ಅವರು ಮಾಡಿದ ಭಾಷಣವು ಇಡೀ ವಿಶ್ವವನ್ನೇ ಮಂತ್ರಮುಗ್ದರನ್ನಾಗಿ ಮಾಡಿತ್ತು. ನಮ್ಮ ಧರ್ಮವನ್ನು ಆಡಿಕೊಂಡು ನಗುತ್ತಿದ್ದವರ ಮುಂದೆ ಭಾರತೀಯರ ಶಕ್ತಿಯನ್ನು ಆಳವಾಗಿ ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು. ಕಿರಿಯ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ದೇಶದ ಒಳಿತಿಗಾಗಿ ತರುಣರ ಪಡೆಯನ್ನುಸಜ್ಜುಪಡಿಸಿ, ತಮ್ಮ ವಾಕ್ಚತುರ್ಯದ ಮೂಲಕ ಯುವಕರನ್ನು ದೇಶ ಕಟ್ಟುವ ಕೆಲಸದೆಡೆಗೆ ಕರೆತಂದಂಥ ಮಹಾನ್ ಸಂತನುಜನಿಸಿದ ‘ಬಂಗಾಳ’ದಲ್ಲಿ ಇಂದು ಹಿಂದೂಗಳ ಪರಿಸ್ಥಿತಿ ಏನಾಗಿದೆ? ‘ದುರ್ಗಾಷ್ಟಮಿ’ಯ ದಿನದ ಮೆರವಣಿಗೆಯನ್ನು ನಡೆಸಲು ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರದ ಅನುಮತಿ ಕೇಳಬೇಕಾದಂಥ ಪರಿಸ್ಥಿತಿ ಒದಗಿ ಬಂದಿದೆ.
ಅನುಮತಿ ನೀಡಿದರೂ ಸಹ ರಾತ್ರಿ ಹತ್ತು ಘಂಟೆಯ ಮೇಲೆ ಮೆರವಣಿಗೆ ಮಾಡುವಂತಿಲ್ಲ. ಅನ್ಯ ಧರ್ಮದವರಿಗೆಧಕ್ಕೆಯುಂಟಾಗುತ್ತದೆಯೆಂಬ ಕಾರಣ ನೀಡಿ ಹಲವೆಡೆ ಅನುಮತಿಯನ್ನೇ ನೀಡುತ್ತಿರಲಿಲ್ಲ. ನೂರು ವರ್ಷಗಳ ಹಿಂದೆಪಾಶ್ಚಿಮಾತ್ಯರ ಮುಂದೆ ನಮ್ಮ ಧರ್ಮದ ಬಗ್ಗೆ ಆಳವಾದ ವಿಷಯವನ್ನು ಮಂಡಿಸಿದ ‘ಸ್ವಾಮಿ ವಿವೇಕಾನಂದ’ರ ಬಂಗಾಳದಲ್ಲಿ ಇಂದು ನಮ್ಮದೇ ಧರ್ಮದ ಆಚರಣೆಗಳಿಗೆ ಯಾವ ರೀತಿಯ ತೊಡಕುಂಟಾಗಿದೆ.
ಹಿಂದೂ ಧರ್ಮದ ಪರವಾಗಿ ಮಾತನಾಡುವ ‘ಯುವ ತರುಣ’ರ ಕೊ ಲೆಗಳಾಗುತ್ತವೆ. ದಶಕಗಳ ಕಾಲ ಆಳಿದ ಕಮ್ಯುನಿಸ್ಟರುಬಂಗಾಳದ ಯುವಕರನ್ನು ಸರಿಯಾಗಿ ಬಳಸಿಕೊಳ್ಳದೇ ನಿರುದ್ಯೋಗಿಗಳನ್ನಾಗಿ ಮಾಡಿದರು. ‘ಸ್ವಾಮಿ ವಿವೇಕಾನಂದ’ರ ಆಶಯದಂತೆ ಬಂಗಾಳದ ಯುವಕರನ್ನು ಬಳಸಿಕೊಂಡು ದೇಶ ಕಟ್ಟುವುದು ಬೇಡ, ಕನಿಷ್ಠ ಪಕ್ಷ ಬಂಗಾಳ ರಾಜ್ಯವನ್ನಾದರೂ ಉತ್ತಮವಾಗಿ ಕಟ್ಟುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಆಡಳಿತ ನಡೆಸಲಿಲ್ಲ.
ಹಿಂದುಳಿದ ರಾಜ್ಯಗಳ ಟ್ಟಿಯಲ್ಲಿ ‘ಪಶ್ಚಿಮ ಬಂಗಾಳ’ ರಾಜ್ಯವೂ ಸೇರುವಂತೆ ಮಾಡಿದ ಕೀರ್ತಿ ಬ್ಯಾನರ್ಜಿಗೆ ಸಲ್ಲಬೇಕು.  ಕೆಲಸ ವಿಲ್ಲದ ಕೋಲ್ಕತಾದ ತರುಣರು ಕೆಲಸ ಅರಸಿ ದೇಶದ ವಿವಿಧ ನಗರಗಳಿಗೆ ವಲಸೆ ಬರುವಂತಾಯಿತು. ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಲಸಿಗ ಬಂಗಾಳಿಗಳರ ಸಂಖ್ಯೆ ಅದೆಷ್ಟು ಹೆಚ್ಚಾಗಿದೆಯೆಂದರೆ ತಮಿಳರಗಿಂತಲೂ ಹೆಚ್ಚಾಗಿ ಎಲ್ಲೂ ಬಂಗಾಳಿಗಳು ಕಾಣಸಿಗುತ್ತಾರೆ. ಮಮತಾ ಬ್ಯಾನರ್ಜಿ ಉತ್ತಮ ಆಡಳಿತ ನೀಡಿದ್ದರೆ ಅಲ್ಲಿನ ತರುಣರು ಕೆಲಸ ಅರಸಿ ಯಾಕೆ ಬೆಂಗಳೂರಿಗೆ ಬರಬೇಕಿತ್ತು ? ಕಾವಿ ತೊಟ್ಟು ಸರ್ವ ಧರ್ಮ ಸಮ್ಮೇಳನದಲ್ಲಿ ಪಾಶ್ಚಿಮಾತ್ಯರ ಮುಂದೆ ನಿಂತಂಥ ಬಂಗಾಳದ ‘ಸ್ವಾಮಿ ವಿವೇಕಾನಂದ’ರ ನಾಡಿನಲ್ಲಿ ಕೇಸರಿಯ ಕಾವಿಯ ಬಣ್ಣ ಕಂಡರೆ ಸಾಕು ‘ಕಮ್ಯುನಿಸ್ಟರು’ ಹಾಗೂ ‘ಮಮತಾ ಬ್ಯಾನರ್ಜಿ’ ಉರಿದು ಬೀಳುತ್ತಾರೆ.
ಇಂಥ ನಾಡಿನಲ್ಲಿ ಕಾವಿಗಿರುವ ಪ್ರಸ್ತುತ ಬೆಲೆಯಿದು. ‘ಜೈ ಶ್ರೀ ರಾಮ್’ ಘೋಷಣೆ ಕೂಗಿದವರ ಕೊಲೆಗಳಾಗುತ್ತವೆ, ಪಾಕಿಸ್ತಾನದ ಉಗ್ರ ಸಂಘಟನೆಗಳಿಗಿಂತಲೂ ಉಗ್ರವಾಗಿ ಹಿಂದೂ ಕಾರ್ಯಕರ್ತರ ಬರ್ಬರ ಕೊಲೆಗಳು ಬಂಗಾಳದಲ್ಲಿ ಕಳೆದ ಒಂದು ದಶಕದಗಿವೆ. ಒಂದು ಕಾಲದಲ್ಲಿ ಬ್ರಿಟಿಷರ ರಾಜಧಾನಿಯಾಗಿದ್ದಂಥ ಕೋಲ್ಕತಾ ನಗರದಲ್ಲಿ ಇಂದಿಗೂ ಸಹ ‘ಸಾರ್ವಜನಿಕಸಾರಿಗೆ’ಯಲ್ಲಿ ಓಡಾಡಲು ಕಷ್ಟವಾಗುತ್ತದೆ. ಅಲ್ಲಿ ಓಡಾಡುವ ಸಾರ್ವಜನಿಕ ಬಸ್ಸುಗಳ ಪರಿಸ್ಥಿತಿ ಅಷ್ಟೊಂದು ಚಿಂತಾಜನಕವಾಗಿದೆ. ಕಮ್ಯುನಿಸ್ಟರ ಹಾವಳಿ ಅದೆಷ್ಟಿದೆಯೆಂದರೆ ಪಶ್ಚಿಮ ಬಂಗಾಳದಲ್ಲಿ ನೂತನ ಕಂಪನಿಗಳು ಹೊಸದೊಂದು ಕಾರ್ಖಾನೆಯನ್ನು ಶುರುಮಾಡಬೇಕಾದರೆ ಭಯಪಡುತ್ತವೆ.
ಕಮ್ಯುನಿಸ್ಟರಿಗೆ ತಾವು ಉzರವಾಗಬಾರದು, ಮಾಲೀಕನೂ ಉದ್ದಾರವಾಗಬಾರದು, ತನ್ನ ಪ್ರಜೆಗಳೂ ಸಹ ಉದ್ದಾರವಾಗಬಾರದು. ತಾನು ಅಳುತ್ತಿರುವ ರಾಜ್ಯ ಬಡತನದಿಂದಲೇ ಕೂಡಿರಬೇಕು, ಜಗತ್ತಿಗೆ ಅದನ್ನೇ ತೋರಿಸಿ ತಮ್ಮ ಪ್ರಾಬಲ್ಯ ಮೆರೆಯಬೇಕು. ಬಂಗಾಳದಲ್ಲಿ ಕಮ್ಯುನಿಸ್ಟರ ಹಾವಳಿ ಅದೆಷ್ಟಿತ್ತೆಂದರೆ,೧೯೬೨ರ ಚೀನಾ ಯುದ್ಧದಲ್ಲಿ ಭಾರತಕ್ಕೆ ಅಮೆರಿಕಾ ಕಳುಹಿಸಿಕೊಟ್ಟಂಥ ಶಸ್ತಾಸಗಳು ‘ಕೋಲ್ಕತಾ’ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಅಸಗಳನ್ನು ವಿಮಾನದಿಂದ ಕೆಳಗಿಳಿಸಲು ಕೂಲಿಯಾಳುಗಳು ವಿಮಾನ ನಿಲ್ದಾಣವನ್ನು ಪ್ರವೇಶಿಸದಂತೆ ದೊಡ್ಡದೊಂದು ಪ್ರತಿಭಟನೆ ಯನ್ನು ಮಾಡಿಸಲಾಯಿತು.
ಒಂದು ವಾರಗಳ ಕಾಲ ಪ್ರತಿಭಟನೆಯನ್ನು ಮಾಡಿ ನಮ್ಮಸೈನಿಕರಿಗೆ ಶಸ್ತ್ರಾಸ್ತ್ರಗಳಿಲ್ಲದಂತೆ ಮಾಡಲಾಯಿತು. ಇಂತಹ ದೇಶ ದ್ರೋಹಿ ಕಮ್ಯುನಿಸ್ಟರಿಂದ ಹೇಗೆ ತಾನೇ ‘ಬಂಗಾಳ’ ಉದ್ಧಾರವಾಗಲು ಸಾಧ್ಯ? ‘ಜ್ಯೋತಿ ಬಸು’ವೆಂಬ ಕಮ್ಯುನಿಸ್ಟ್ ಮುಖ್ಯಮಂತ್ರಿ೨೩ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತವನ್ನು ನಡೆಸಿ ರಾಜ್ಯವನ್ನು ಅಧಃಪತನದೆಡೆಗೆ ತೆಗೆದುಕೊಂಡು ಹೋಗಿದ್ದನ್ನು ಮರೆಯುವ ಹಾಗಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ಅಲ್ಲಿನ ಜನರು ಇವರ ಆಡಳಿತವೇ ಅಂತಿಮ ವೆಂಬಂತೆ ಹೊರಜಗತ್ತಿನ ಸ್ಪರ್ಧೆಯ ಬಗ್ಗೆ ಚಿಂತಿಸಲೇ ಇಲ್ಲ.
ತಮ್ಮ ರಾಜ್ಯದ ಅಭಿವೃದ್ಧಿಯೆಂಬುದಿಷ್ಟೇ, ಇದರಿಂದಾಚೆಗೆ ಏನು ಇಲ್ಲವೆಂಬುದು ಅಂದಿನ ಜನರ ಯೋಚನೆಯಾಗಿತ್ತು.‘ಸ್ವಾಮಿ ವಿವೇಕಾನಂದ’ರ ಆದರ್ಶಗಳನ್ನು ನೆಲಮಟ್ಟದಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ’ಸಿಸ್ಟರ್ ನಿವೇದಿತ’ರಿಗೆ ಸಲ್ಲಬೇಕು. ದೂರದ ಯೂರೋಪಿನಿಂದ ಬಂದು ಸ್ವಾಮೀಜಿಯ ಚಿಂತನೆಗಳನ್ನು ಅಂದಿನ ಕಾಲದಲ್ಲಿಯೇ ಬಂಗಾಳದ ಯುವಕ, ಯುವತಿಯರಿಗೆ ಆದರ್ಶವನ್ನಾಗಿಸಿದ ಕೀರ್ತಿ ಸಿಸ್ಟರ್ ನಿವೇದಿತಾರಿಗೆ ಸಲ್ಲಬೇಕು.
ರಾಜಕೀಯ ವಾಗಿಯೂ ನಿವೇದಿತಾ ಅದೆಷ್ಟು ಪ್ರಬುದ್ಧರಾಗಿದ್ದರೆಂದರೆ ದೊಡ್ಡ ದೊಡ್ಡ ರಾಜಕೀಯ ನಾಯಕರೆಲ್ಲರೂ ಅವರ ಸಲಹೆ ಪಡೆಯುತ್ತಿದ್ದರು. ಜಗದೀಶ್ ಚಂದ್ರ ಬೋಸ್‌ರಂಥ ಬಂಗಾಳದ ಖ್ಯಾತ ವಿಜ್ಞಾನಿಯೂ ಸಹ ಸಿಸ್ಟರ್ ನಿವೇದಿತಾರಸಲಹೆಯನ್ನು ಪಡೆಯುತ್ತಿದ್ದರು. ವಿಜ್ಞಾನ ಜಗತ್ತಿಗೆ ಬಂಗಾಳದ ‘ಜಗದೀಶ್ ಚಂದ್ರ’ ಬೋಸರ ಕೊಡುಗೆಯನ್ನು =ಹೇಗೆ ತಾನೇ ಮರೆಯಲು ಸಾಧ್ಯ? ಭೌತಶಾಸ, ಸಸ್ಯಶಾಸ್ತ್ರ ರೇಡಿಯೋ ವಿಜ್ಞಾನಗಳಲ್ಲಿ ಅಪಾರ ಸಾಧನೆಗೈದ ವಿಜ್ಞಾನಿಯೋರ್ವ ಬಂಗಾಳದವರಾಗಿರುವುದು ಅಲ್ಲಿನ ಜನರ ಹೆಮ್ಮೆ.
ಇಂಥ ವಿಜ್ಞಾನಿ ಹುಟ್ಟಿದ ಬಂಗಾಳದ ಇಂದಿನ ವಿಜ್ಞಾನದ ಪರಿಸ್ಥಿತಿ ಏನಾಗಿದೆ? ಬಂಗಾಳವನ್ನಾಳಿದ ಕಮ್ಯುನಿಸ್ಟರು ಬಂಗಾಳದಲ್ಲಿ ವಿಜ್ಞಾನದ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಕಮ್ಯುನಿಸ್ಟ್ ಮಂದಿಯ ತಲೆ ಯಾವಾಗಲೂ ಕಾರ್ಖಾನೆಗಳಲ್ಲಿ ಹೇಗೆ ಪ್ರತಿಭಟನೆ ಮಾಡಬೇಕು, ಕೆಂಪು ಭಾವುಟ ಯಾವಾಗ ಹಿಡಿಯಬೇಕು, ಯಾವ ಕಂಪನಿಯನ್ನು ಮುಚ್ಚಿಸಬೇಕೆಂದೇ ಯೋಚಿಸುತ್ತಿರುತ್ತದೆ. ವಿಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಬಂಗಾಳದ ಜನರು ಬುದ್ಧಿವಂತ ರಾಗುತ್ತಾರೆಂಬ ಭಯ ಅವರನ್ನು ಸದಾ ಕಾಡುತ್ತಿರುತ್ತದೆ.
೨೩ವರ್ಷಗಳ ಕಾಲ ಆಳಿದ ‘ಜ್ಯೋತಿ ಬಸು’ ಜಗದೀಶ್ ಚಂದ್ರ ಬೋಸರ ಹೆಸರಿನಲ್ಲಿ ಬಂಗಾಳದಲ್ಲಿ ಪ್ರಚಾರಮಾಡಿದವಿಜ್ಞಾನದ ಆವಿಷ್ಕಾರಗಳು ತೃಣಮಾತ್ರವೆಂದೇ ಹೇಳಬಹುದು. ‘ಮಮತಾ ಬ್ಯಾನರ್ಜಿ’ಯ ಆಡಳಿತ ದಲ್ಲಿಯೂ ಅಷ್ಟೇ ಮತ್ತದೇ ಹಳೆಯ ಕಮ್ಯುನಿಸ್ಟ್ ನೀತಿಗಳೇ ಮುಂದುವರಿದಿದ್ದದ್ದು ಬಿಟ್ಟರೆ ವಿಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳದದ ಚಳವಳಿಗಳು, ಕ್ರಾಂತಿಕಾರಕ ನಿರ್ಧಾರಗಳು, ಬ್ರಿಟಿಷರ ವಿರುದ್ಧದ ಹೋರಾಟಗಳು, ವಿಜ್ಞಾನದದಂಥ ಆವಿಷ್ಕಾರಗಳು, ತರುಣರನ್ನು ಹುರಿದುಂಬಿಸಿದ ಘಟನೆಗಳನ್ನೊಮ್ಮೆ ನೆನೆದು ಇಂದಿನ ಬಂಗಾಳದ ಪರಿಸ್ಥಿತಿಯನ್ನು ನೆನೆದರೆಕಣ್ಣುಗಳು ಒzಯಾಗುತ್ತವೆ. ಎಂತೆಂಥ ಘಟಾನುಘಟಿಗಳನ್ನು ಭಾರತಾಂಬೆಯ ಸೇವೆಗೆ ನೀಡಿದ ರಾಜ್ಯದಲ್ಲಿ ದೇಶ ವಿರೋಧಿ ಕೃತ್ಯಗಳು ದಶಕಗಳಿಂದ ನಡೆದುಕೊಂಡು ಬರುತ್ತಿರುವುದು ದುರದೃಷ್ಟಕರ ಸಂಗತಿ.
ಭಾರತಕ್ಕೆ ‘ರಾಷ್ಟ್ರಗೀತೆ’ಯನ್ನು ಕೊಡುಗೆಯಾಗಿ ನೀಡಿದಂಥ ‘ರವೀಂದ್ರನಾಥ ಟಾಗೋರ್’ ಬಂಗಾಳದವರು. ಇಂಥ ಬಂಗಾಳ ದಲ್ಲಿ ‘ರಾಷ್ಟ್ರಗೀತೆ’ಯನ್ನು ಹಾಡಿ ಪೊಲೀಸರಿಂದ ಏಟು ತಿಂದಂಥ ಪ್ರಸಂಗಗಳು ಕಮ್ಯುನಿಸ್ಟ್ ಹಾಗೂ ಮಮತಾ ಬ್ಯಾನರ್ಜಿಯ ಆಡಳಿತದಲ್ಲಿ ಆಗಾಗ ಕೇಳಿಬರುತ್ತಲೇ ಇವೆ. ಬಾಂಗ್ಲಾದೇಶದ ಅದೆಷ್ಟು ಮುಸಲ್ಮಾನರು ನಮ್ಮ ‘ರಾಷ್ಟ್ರಗೀತೆ’ಯನ್ನು ಹಾಡುತ್ತಾರೆ? ಹಾಡುವುದಿಲ್ಲ, ಅಂತಹವರಿಗೆ ಸರಕಾರದಿಂದ ಎಲ್ಲ ಸವಲತ್ತು ಗಳನ್ನೂ ಮಮತಾ ಬ್ಯಾನರ್ಜಿ ನೀಡುತ್ತಾ ಬಂದಿದ್ದಾರೆ.
ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಿದರೆ, ಬೀದಿಗಿಳಿದು ಕಮ್ಯುನಿಸ್ಟರು ಪ್ರತಿಭಟನೆ ಮಾಡುತ್ತಾರೆ. ಇಂಥ ಕಮ್ಯುನಿಸ್ಟರು ಚುನಾವಣೆ ಯಲ್ಲಿ ತನಗೆ ಸಹಕಾರ ನೀಡಬೇಕೆಂದು ಮಮತಾ ಬ್ಯಾನರ್ಜಿ ಸಾರ್ವಜನಿಕಭಾಷಣದಲ್ಲಿ ಬಹಿರಂಗವಾಗಿ ಹೇಳುತ್ತಾರೆ. ಅತಿ ಹೆಚ್ಚು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ‘ರೋಹಿಂಗ್ಯಾ’ಮುಸಲ್ಮಾನ ರಿಗಂತೂ ಮಮತಾ ಬ್ಯಾನರ್ಜಿ ಮಾಡಿರುವ ಸಹಾಯ ಅಂತಿಂಥದ್ದಲ್ಲ, ಬಂಗಾಳದ ಮೂಲ ನಾಗರಿಕರಿಗೆಸಿಗದ ಸೌಲಭ್ಯಗಳನ್ನು ರೋಹಿಂಗ್ಯಗಳಿಗೆ ಮಮತಾ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಪಡಬಾರದ ಕಷ್ಟ ಪಡುತ್ತಿರುವ ಅಲ್ಪಸಂಖ್ಯಾತ ಹಿಂದುಗಳನ್ನು ಭಾರತದೊಳಗೆ ಕರೆತಂದರೆ, ಬಂಗಾಳದ ಕಮ್ಯುನಿಸ್ಟರಿಗೆ ತೊಂದರೆ ಯಾಗುತ್ತದೆ. ಆದರೆ ಬಾಂಗ್ಲಾದೇಶದ ಮುಸಲ್ಮಾನರಿಗೆ ಇಲ್ಲಸಲ್ಲದ ಸವಲತ್ತು ಗಳನ್ನು ನೀಡಿದರೆ ಮಮತಾ ಬ್ಯಾನರ್ಜಿಗೆ ಯಾವ ತೊಂದರೆಯೂ ಆಗುವುದಿಲ್ಲ. ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಹಾಗೂ ಮಮತಾ ಬ್ಯಾನರ್ಜಿ ಸರಕಾರದ ಈ ನಡೆಯಿಂದ, ಬಂಗಾಳದ ಪ್ರಸಿದ್ಧ ಕವಿ ‘ಬಂಕಿಮ ಚಂದ್ರ ಚಟರ್ಜೀ’ ಬರೆದ ‘ವಂದೇ ಮಾತರಂ’ ಪದ್ಯವನ್ನುಪ್ರತಿಯೊಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಯಲ್ಲಿ ಹಾಡುವ ಅಸಂಖ್ಯಾತ ಭಾರತೀಯನ ಮನಸ್ಥಿತಿ ಏನಾಗಬೇಡ? ‘ವಂದೇ ಮಾತರಂ’ ಇಡೀ ಭಾರತೀಯರು ಹೆಮ್ಮೆ ಪಟ್ಟು ಭಾರತಾಂಬೆಯ ನೆನೆದು ಹಾಡುವ ಹಾಡು, ಭಾರತೀಯ ಸೈನಿಕರು ಗಡಿಯಲ್ಲಿ ಶತ್ರುಗಳನ್ನು ಸದೆಬಡಿಯಬೇಕಾದರೆ ತಮ್ಮ ಆತ್ಮಸ್ಥೈರ್ಯಕ್ಕಾಗಿ ಹಾಡುವ ಹಾಡು, ಕ್ರೀಡೆಯಲ್ಲಿ ವಿಜೇತರಾದ ಬಳಿಕ ಪ್ರತಿಯೊಬ್ಬ ಭಾರತೀಯನ ಸಂಭ್ರಮದಲ್ಲಿ ಅಡಗಿರುವ ಹಾಡು, ಇಂಥ ಹಾಡನ್ನು ಬರೆದ ಕವಿಯನ್ನು ಕೊಟ್ಟಂಥ ರಾಜ್ಯ ಬಂಗಾಳದಲ್ಲಿ ಇಂದು ‘ವಂದೇ ಮಾತರಂ’ಎಂದು ಹೇಳಿದರೆ ಮಮತಾ ಬ್ಯಾನರ್ಜಿಗೆ ಮೆಣಸಿನಕಾಯಿ ತಿಂದಂಥ ಅನುಭವ ವಾಗುತ್ತದೆ.
ಆಕೆಯ ಪ್ರಕಾರ ‘ವಂದೇ ಮಾತರಂ’ ಹಾಡಿದವರು ಕೋಮುವಾದಿಗಳಂತೆ ಕಾಣುತ್ತಾರೆ, ಕೇವಲ ಹಸಿರು ಬಣ್ಣದವರು ಮಾತ್ರ‘ಜಾತ್ಯತೀತ’ರಂತೆ ಕಾಣುತ್ತಾರೆ. ‘ರಾಮಕೃಷ್ಣ ಪರಮಹಂಸ’, ‘ಸ್ವಾಮಿ ವಿವೇಕಾನಂದ’, ‘ಸುಭಾಷ್ ಚಂದ್ರ ಬೋಸ್’, ‘ಸಿಸ್ಟರ್ ನಿವೇದಿತಾ’, ‘ಬಂಕಿಮ ಚಂದ್ರ ಚಟರ್ಜೀ’, ‘ಜಗದೀಶ್ ಚಂದ್ರ ಬೋಸ್’ ,‘ರವೀಂದ್ರನಾಥ್ ಠಾಗೋರ್’ರಂಥ ಅಪ್ರತಿಮ ದೇಶಭಕ್ತರು, ವಿಜ್ಞಾನಿಗಳು, ಕವಿಗಳನ್ನು ದೇಶಕ್ಕೆ ನೀಡಿದಂಥ ಬಂಗಾಳದ ಸ್ವಾತಂತ್ರ್ಯ ನಂತರದ ಇತಿಹಾಸ ತುಂಬಾ ಕಠಿಣವಾಗಿತ್ತು.
ಬ್ರಿಟಿಷರು ಹೆದರಿ ರಾಜಧಾನಿಯನ್ನು ಕೋಲ್ಕತಾದಿಂದ ದೆಹಲಿಗೆ ಸ್ಥಳಾಂತರಿಸಿದರು. ಬ್ರಿಟಿಷರು ಸ್ಥಳಾಂತರಿಸಿದ ಮೇಲೆಬಂಗಾಳದೆಡೆಗೆ ಯಾರೂ ಸಹ ತಲೆ ಹಾಕಲಿಲ್ಲ. ಸ್ವಾತಂತ್ರ್ಯ ನಂತರ ಆಳಿದ ಪಕ್ಷಗಳು ಬಂಗಾಳದ ಐತಿಹಾಸಿಕ ಸಾಧನೆಗಳನ್ನು ಮರೆತವು, ಪಶ್ಚಿಮ ಬಂಗಾಳವೆಂದರೆ ಸಾಕು ಹಲವರಿಗೆ ವಾಕರಿಕೆ ಬರುವ ರೀತಿಯಲ್ಲಿ ಆಡಳಿತ ನಡೆಸಿದ ಕೀರ್ತಿ ಕಮ್ಯುನಿಸ್ಟ್ ಹಾಗೂ ಮಮತಾ ಬ್ಯಾನರ್ಜಿಗೆ ಸಲ್ಲಬೇಕು. ಇವರುಗಳ ಆಡಳಿತದಲ್ಲಿ ಬಂಗಾಳದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಬೆಲೆಯಿಲ್ಲದಂತಾಯಿತು, ಬ್ರಿಟಿಷರ ವಿರುದ್ಧ ಸುಭಾಷ್ ಚಂದ್ರ ಬೋಸರಿಗಿದ್ದಂಥ ಕ್ರಾಂತಿಕಾರಿ ನಿಲುವುಗಳು ಪುನಃ ಪುಟಿದೇಳಲಿಲ್ಲ.
ಬೋಸರ ಅನುಮಾನಾಸ್ಪದ ಸಾವಿನ ತನಿಖೆಯನ್ನೂ ಮುಚ್ಚಿ ಹಾಕಿ ಬಂಗಾಳದ ಜನತೆಗೆ ನ್ಯಾಯ ಒದಗಿಸುವ ಕೆಲಸವನ್ನುಮಾಡಲಿಲ್ಲ. ‘ರವೀಂದ್ರನಾಥ್ ಠಾಗೂರ’ರು ರಚಿಸಿದ ರಾಷ್ಟ್ರಗೀತೆಗೆ ಎಗ್ಗಿಲ್ಲದೆ ಅಪಮಾನ ಗಳಾದರೂ ಸಹ ಅದನ್ನು ಖಂಡಿಸುವ ಸರಕಾರವು ಬಂಗಾಳದಲ್ಲಿ ಅಽಕಾರಕ್ಕೇರಲಿಲ್ಲ, ‘ವಂದೇ ಮಾತರಂ’ ಎಂದು ಕೂಗಿದವರನ್ನು ಅನುಮಾನದಿಂದ ನೋಡುವ ಮಮತಾ ಬ್ಯಾನರ್ಜಿ ಸರಕಾರವೇ ಹತ್ತು ವರ್ಷಗಳ ಕಾಲ ಬಂಗಾಳದಲ್ಲಿ ಆಡಳಿತ ನಡೆಸುತ್ತಾ ಬಂದಿರುವುದು ಬಂಗಾಳದ ಬಹುದೊಡ್ಡ ವಿಪರ್ಯಾಸವೇ ಸರಿ.
ಭಾರತ ದೇಶಕ್ಕೆ ಅತ್ಯುತ್ತಮ ಮುತ್ತು ರತ್ನಗಳನ್ನು ನೀಡಿದ ಬಂಗಾಳ ರಾಜ್ಯಕ್ಕೆ ಈಗಲಾದರೂ ಮುಕ್ತಿ ದೊರಕಿ ಇಲ್ಲಿಯವರೆಗೂ ಆದಂಥ ಅನ್ಯಾಯಗಳಿಗೆ ಈಗ ನಡೆಯುವ ಚುನಾವಣೆ ಯಲ್ಲಿ ನ್ಯಾಯ ದೊರಕಿದರೆ ಒಬ್ಬ ರಾಷ್ಟ್ರೀಯವಾದಿಯಾಗಿ ಎಲ್ಲಿಲ್ಲದ ಸಂತಸವಾಗುತ್ತದೆ.