ಡಿಎನ್‌ಎ ಆಧಾರ ಮತ್ತು ಬಿಜೆಪಿಯ ಅನುಕೂಲ ಸಿಂಧು ರಾಜಕಾರಣ…
ವಿಶ್ಲೇಷಣೆ
ಡಾ.ರಾಜಶೇಖರ ಹತಗುಂದಿ
ಭಾರತೀಯ ಜನತಾಪಕ್ಷವು ಡಿಎನ್‌ಎ ಆಧಾರದಲ್ಲಿ ಟಿಕೇಟ್ ನೀಡುವುದಿಲ್ಲ ಎಂದು ಆ ಪಕ್ಷದ ರಾಷ್ಟ್ರೀಯ ಮುಖಂಡ ರೊಬ್ಬರುಕ್ರಾಂತಿಕಾರಿ ಹೇಳಿಕೆ ನೀಡಿ ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು.
ಸಂದರ್ಭ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಹಿರಿಯ ನಾಯಕ ದಿ.ಅನಂತ ಕುಮಾರ್ ಅವರ ಪತ್ನಿ ಡಾ. ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ನಿರಾಕರಿಸಿದಾಗ… ಕರ್ನಾಟಕ ದಲ್ಲಿ ಭಾರತೀಯ ಜನತಾ ಪಕ್ಷವನ್ನು ಕೆಳಹಂತದಿಂದ ಸಂಘಟಿಸಿ ಅಧಿಕಾರ ರಾಜಕಾರಣದ ಹೊಸ್ತಿಲಲ್ಲಿ ನಿಲ್ಲುವಂತೆ ಮಾಡಿದ್ದ ರಲ್ಲಿ ದಿ.ಅನಂತ ಕುಮಾರ್ ಅವರ ಪಾತ್ರ ದೊಡ್ಡದು.
ದಿ.ಅನಂತ ಕುಮಾರ್ ನಿಧನದ ನಂತರ ಅವರ ಅಭಿಮಾನಿಗಳು ಸಹಜವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಮತಕ್ಷೇತ್ರದಬಿಜೆಪಿ ಟಿಕೇಟ್ ಅವರ ಪತ್ನಿ ಡಾ.ತೇಜಸ್ವಿನಿ ಅನಂತಕುಮಾರ್ ಅವರಿಗೆ ಸಿಗುತ್ತದೆ ಎಂದು ಬಲವಾಗಿ ನಂಬಿದ್ದರು. ಹಾಗೆನೋಡಿದರೆ ಬಿಜೆಪಿಯಲ್ಲಿ ಹಿರಿಯ ನಾಯಕರ ನಿಧನಾ ನಂತರ ಅವರ ಕುಟುಂಬದ ಸದಸ್ಯರಿಗೆ ಟಿಕೇಟ್ ನೀಡಲೇಬಾರದೆಂಬಮಡಿವಂತಿಕೆ ಯೇನೂ ಇರಲಿಲ್ಲ. ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಅವರು ನಿಧನರಾದಮೇಲೆ ಅವರ ಮಗಳು ಪೂನಂ ಮಹಾಜನ್ ಅವರಿಗೆ ಮುಂಬಯಿ ದಕ್ಷಿಣ ಕೇಂದ್ರದ ಲೋಕಸಭಾ ಕ್ಷೇತ್ರದ ಟಿಕೇಟ್ ನೀಡಲಾ ಗಿತ್ತು.
ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಮತ್ತು ನಿರಂತರ ಗೆಲುವು ಸಾಧಿಸುತ್ತಿದ್ದಾರೆ. ಅದೇ ರಾಜ್ಯದ ಇನ್ನೊಬ್ಬ ಬಿಜೆಪಿ ಮುಖಂಡ ಗೋಪಿನಾಥ್ ಮುಂಡೆಯವರು ಬದುಕಿದ್ದಾಗಲೇ (2009) ಅವರ ಹಿರಿಯ ಪುತ್ರಿ ಪಂಕಜಾ ಮುಂಡೆಯವರಿಗೆ-ರಳಿವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿತ್ತು. ಗೋಪಿನಾಥ್ ಮುಂಡೆಯವರು ಅಪಘಾತದಲ್ಲಿ ನಿಧನರಾದ ಮೇಲೆ ಭೀಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವರ ಇನ್ನೊಬ್ಬ ಪುತ್ರಿ ಪ್ರೀತಂ ಮುಂಡೆಯವರಿಗೆ ಅವಕಾಶ ನೀಡಲಾಗಿತ್ತು.
ಪ್ರೀತಂ ಮುಂಡೆ ದಾಖಲೆ ಮತಗಳಿಂದ ಜಯಶಾಲಿಯಾಗಿದ್ದರು.2019ರ ಲೋಕಸಭಾ ಚುನಾವಣೆಯಲ್ಲಿ ಡಿಎನ್‌ಎ ಆಧಾರಟಿಕೇಟ್ ನೀಡಿಕೆಗೆ ಮಾನದಂಡವಾಗಲಾರದು ಎಂದು ಖಡಕ್ ಸಂದೇಶ ವೇನೊ ರವಾನಿಸಿದರು. ಆ ಮಾನದಂಡದ ಆಧಾರದಲ್ಲಿ ಡಾ.ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೇಟ್ ನಿರಾಕರಿಸಲಾಯಿತು. ಅಷ್ಟಕ್ಕೂ ಡಾ.ತೇಜಸ್ವಿನಿ ಮೇಡಂ ಅವರು ಕೇವಲ ಗೃಹಿಣಿಯಾಗಿರಲಿಲ್ಲ. ಸಂಘ ಪರಿವಾರ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯಲ್ಲಿ ಹಲವು ವರ್ಷಗಳ ಕಾಲ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಅವರು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳನ್ನು ನಿರರ್ಗಳವಾಗಿಮಾತನಾಡಬಲ್ಲ ಸಾಮರ್ಥ್ಯ ಪಡೆದವರು. ದಿ.ಅನಂತ ಕುಮಾರ್ ಅವರು ರಾಜ್ಯದಲ್ಲಿ ಬಿಜೆಪಿ ಸಂಘಟಿಸುವಲ್ಲಿ ಯಶಸ್ಸು ಪಡೆದಿದ್ದರೆ, ಆ ಯಶಸ್ಸಿನಲ್ಲಿ ಡಾ. ತೇಜಸ್ವಿನಿ ಮೇಡಂ ಅವರ ಪಾಲೂ ಇತ್ತು. ಅವಕಾಶ ವಂಚಿತ ಮಕ್ಕಳಿಗೆ ಅನ್ನ – ಅಕ್ಷರ – ಆರೋಗ್ಯ ನೀಡುವ ಆಶಯ ಹೊತ್ತ ಅದಮ್ಯ ಚೇತನ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದ ಕೀರ್ತಿ ಡಾ.ತೇಜಸ್ವಿನಿ ಮೇಡಂ ಅವರದು. ದಿ. ಅನಂತ ಕುಮಾರ್ ಅವರು ದೆಹಲಿಯಲ್ಲಿ ಹೆಚ್ಚು ಕ್ರಿಯಾಶೀಲರಾಗಿರುತ್ತಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರ ಕುಂದುಕೊರತೆಗಳಿಗೆ ಡಾ.ತೇಜಸ್ವಿನಿ ಅನಂತ ಕುಮಾರ್ ಅವರೇಸ್ಪಂದಿಸುತ್ತಿದ್ದರು. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಿದ್ದ ಅವರಿಗೆ ಟಿಕೆಟ್ ನಿರಾಕರಿಸಲುಕಾರಣಗಳೇ ಇರಲಿಲ್ಲ. ಡಿಎನ್‌ಎ ಆಧಾರದಲ್ಲಿ ಟಿಕೇಟ್ ನೀಡಲಾಗದು ಎಂಬ ಮಾನದಂಡವನ್ನು ಎಲ್ಲರ ವಿಷಯದಲ್ಲಿಕಟ್ಟುನಿಟ್ಟಾಗಿ ಪಾಲಿಸಿದ್ದರೆ ಮೆಚ್ಚಿಕೊಳ್ಳಬಹುದಿತ್ತು.2019ರ ಲೋಕಸಭಾ ಚುನಾವಣೆಯಲ್ಲಿ (ಚಿಕ್ಕೋಡಿ) ಹಾಲಿ ಸಚಿವೆಶಶಿಕಲಾ ಜೊಯವರ ಪತಿ ಅಣ್ಣಾಸಾಹೇಬ್ ಜೊಯವರಿಗೆ ಮಣೆ ಹಾಕಲಾಯಿತು. ಆ ಪತಿರಾಯರು2018ರ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಪಡೆದು ಹೀನಾಯವಾಗಿ ಸೋತಿದ್ದರು. ಈಗ ಮತ್ತೆ ಡಿಎನ್‌ಎ ಆಧಾರದ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಆಯ್ಕೆ ನಡೆದಿದೆ.
ಲೋಕಸಭೆಯಲ್ಲಿ ಬೆಳಗಾವಿಯನ್ನು ಪ್ರತಿನಿಧಿಸುತ್ತಿದ್ದ, ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿದ್ದ ಸುರೇಶ್ ಅಂಗಡಿಯವರು ಕರೋನಾದಿಂದಾಗಿ ನಿಧನ ಹೊಂದಿದ್ದರು. ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಏಪ್ರಿಲ್17ರಂದು ಉಪಚುನಾವಣೆ ನಡೆಯಲಿದೆ. ಡಾ.ತೇಜಸ್ವಿನಿ ಅನಂತ ಕುಮಾರ್ ಅವರ ವಿಷಯದಲ್ಲಿ ಅನುಸರಿಸಿದ ಮಾನದಂಡ ವನ್ನೇ ಇಲ್ಲಿಯೂ ಅನುಸರಿಸಿದ್ದರೆ ಭಾರತೀಯ ಜನತಾ ಪಕ್ಷದ ಬಗೆಗಿನ ಗೌರವ ನೂರ್ಮಡಿಯಾಗುತಿತ್ತು. ದಿ.ಸುರೇಶ್ ಅಂಗಡಿಯವರ ಪತ್ನಿಮಂಗಳಾ ಅಂಗಡಿಯವರಿಗೆ ಟಿಕೇಟ್ ನೀಡುವ ಮೂಲಕ ಬಿಜೆಪಿ ಅವರಿಗೊಂದು ನೀತಿ ಇವರಿಗೊಂದು ನ್ಯಾಯ ಎಂಬಂತೆ ನಡೆದುಕೊಂಡಿದೆ.
ಹಾಗೆ ನೋಡಿದರೆ ಮಂಗಳಾ ಅಂಗಡಿಯವರು ಅಪ್ಪಟ ಗೃಹಿಣಿ. ಸಂಘ ಪರಿವಾರ, ಬಿಜೆಪಿಯ ಕಾರ್ಯಚಟುವಟಿಕೆಗಳಲ್ಲಿ ತಪ್ಪಿಯೂ ಕಾಣಿಸಿಕೊಂಡವರಲ್ಲ. ಅವರಿಗೆ ಹಿಂದಿ, ಇಂಗ್ಲೀಷ್ ಜ್ಞಾನ ಇದೆಯೋ ಗೊತ್ತಿಲ್ಲ. ದಿ. ಸುರೇಶ್ ಅಂಗಡಿಯವರಸ್ಥಾನವನ್ನು, ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲರೋ ತಿಳಿದಿಲ್ಲ. ದಿ.ಸುರೇಶ್ ಅಂಗಡಿಯವರಪತ್ನಿ ಎಂಬ ಕಾರಣಕ್ಕೆ ಟಿಕೇಟ್ ನೀಡಲಾಗಿದೆ. ಅವರು ಚುನಾವಣೆಯಲ್ಲಿ ಗೆಲ್ಲಲೂಬಹುದು. ಪಾಪ ಅವರ ಬಗ್ಗೆ ತಕರಾರಿಲ್ಲ. ತಕರಾರು ಇರುವುದು ಬಿಜೆಪಿಯ ದ್ವಂದ್ವ ನೀತಿಯ ಕುರಿತು.
ಸೈದ್ಧಾಂತಿಕವಾಗಿ ಸಂಘ ಪರಿವಾರದ ಭಾಗವಾಗಿದ್ದ, ದಿ. ಅನಂತ ಕುಮಾರ್ ಅವರ ರಾಜಕೀಯ ಬದುಕಿನ ಎಲ್ಲ ಹಂತದಲ್ಲೂ ಹೆಗಲಿಗೆ ಹೆಗಲು ಕೊಟ್ಟು ದುಡಿದ ಡಾ.ತೇಜಸ್ವಿನಿ ಅನಂತ ಕುಮಾರ್ ವಿಷಯದಲ್ಲಿ ಯಾಕೆ ಡಿಎನ್‌ಎ ಒಂದು ಸಮಸ್ಯೆ ಯಾಯಿತು? ಡಾ.ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೇಟ್ ನೀಡಿದ್ದರೆ ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತಿದ್ದರು, ಮಾತ್ರವಲ್ಲ ಲೋಕಸಭೆಯೊಳಗೆ ಉತ್ತಮ ಸಂಸದೀಯ ಪಟುವಾಗಿ ಹೆಸರು ಮಾಡುತ್ತಿದ್ದರು.
ಯಡಿಯೂರಪ್ಪ ಮತ್ತು ಅನಂತ ಕುಮಾರ್ ಜೋಡೆತ್ತುಗಳಾಗಿ ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ದುಡಿದಿದ್ದರು. ಅವರಿಬ್ಬರನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದವು. ಆದರೆ ಯಡಿಯೂರಪ್ಪ ಡಾ.ತೇಜಸ್ವಿನಿ ಅನಂತ ಕುಮಾರ್ ಅವರಿಗೆಟಿಕೇಟ್ ನೀಡುವುದರ ಪರ ಇದ್ದರು. ಡಿಎನ್‌ಎ ಪ್ರಣೀತ ರಾಜಕಾರಣವನ್ನು ವಿರೋಧಿಸುವ ಆದರ್ಶವಾದಿಗಳು ಮೇಡಂ ಅವರ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕಿದರು.
ಕರ್ನಾಟಕದ ಪ್ರಜ್ಞಾವಂತ ಮತದಾರರು ಎಲ್ಲ ಬಗೆ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಸಮಯ ಬಂದಾಗ ಉತ್ತರ ಕೊಡುತ್ತಾರೆ.2023ರ ಚುನಾವಣೆವರೆಗೆ ಕಾಯಬೇಕಷ್ಟೇ. ಅನುಕೂಲ ಸಿಂಧು ಥಿಯರಿಗಳು ತಮ್ಮಷ್ಟಕ್ಕೆ ಅನಾವರಣ ಗೊಳ್ಳುತ್ತವೆ.