ಬದಲಾಗುತ್ತಿರುವ ಕರ್ನಾಟಕ ರೈಲ್ವೆ ಅಭಿವೃದ್ದಿ ನಕ್ಷೆ
ಅವಲೋಕನ
ಪ್ರಕಾಶ್‌ ಶೇಷರಾಘವಾಚಾರ್‌
ಮೂಲ ಸೌಕರ್ಯ ಯೋಜನೆಗಳಲ್ಲಿ ರೈಲ್ವೆ ಇಲಾಖೆಗೆ ಅತ್ಯಂತ ಮಹತ್ವ ವಾದ ಪಾತ್ರವಿದೆ. ಅಭಿವೃದ್ಧಿ ಮತ್ತು ಆರ್ಥಿಕಬೆಳವಣಿಗೆ ರೈಲ್ವೇ ಗಾಲಿಯಾಗಿದೆ ಎಂದರೆ ತಪ್ಪಾಗಲಾರದು. ಭಾರತೀಯ ರೈಲ್ವೇ ಕಳೆದ7ವರ್ಷದಲ್ಲಿ ಹೊಸ ರೂಪ ಮತ್ತುಹೊಸ ವೇಗವನ್ನು ಪಡೆದುಕೊಂಡಿದೆ. ತನ್ನ ಜಾಲವನ್ನು ವೇಗವಾಗಿವಿಸ್ತರಿಸಿ ದೇಶದ ಅಭಿವೃದ್ಧಿಯ ನಕ್ಷೆಯನ್ನೇ ಬದಲಾಯಿಸುತ್ತಿದೆ.
2014ರಮೊದಲು ರೈಲ್ವೆ ಯೋಜನೆಗಳು ಬಹುತೇಕವಾಗಿ ವಾರ್ಷಿಕವಾಗಿ ಸಂಗ್ರಹವಾಗುವ ಆದಾಯದ ಪಾಲಿನಲ್ಲಿ ಕೈಗೊಳ್ಳ ಲಾಗುತ್ತಿತ್ತು. ಒಂದೊಂದು ಯೋಜನೆಗಳು ಪೂರ್ಣ ಗೊಳ್ಳಲು ದಶಕಗಳು ಕಳೆಯುತ್ತಿತ್ತು. ಸಂಪನ್ಮೂಲ ಕೊರತೆಯಿಂದ ಅನುಷ್ಠಾನ ವಿಳಂಬವಾಗಿ ಯೋಜನಾ ವೆಚ್ಚ ಎರಡರಿಂದ ಮೂರು ಪಟ್ಟು ಹೆಚ್ಚಾಗುತ್ತಿತ್ತು. ಮೋದಿ ಸರಕಾರವು ಬಂದ ತರುವಾಯ ರೈಲ್ವೆ ಇಲಾಖೆಯ ಮಾನಸಿಕತೆಯು ಬದಲಾಗಿದೆ. ರೈಲ್ವೆಯಲ್ಲಿ ಹೂಡುವ ಬಂಡವಾ ಳವು ಅಭಿವೃದ್ಧಿಗೆ ಎಂಜಿನ್ ಎಂಬುದನ್ನು ಮನಗಂಡಿರುವ ಕಾರಣ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯು ಆರಂಭವಾಗಿದೆ.
ಕಳೆದ7ವರ್ಷದಲ್ಲಿ ರಾಜ್ಯದ ರೈಲ್ವೇ ಅಭಿವೃದ್ಧಿಯಲ್ಲೂ ಸಾಕಷ್ಟು ಬೆಳವಣಿಗೆಗಳಾಗಿವೆ. ದಶಕಗಳಿಂದ ರೈಲ್ವೇ ಪ್ರಗತಿಯಲ್ಲಿರಾಜ್ಯವು ಸಾಕಷ್ಟು ಹಿಂದೆ ಬಿದ್ದಿದ್ದು ಕಟುಸತ್ಯ. ಆದರೆ ಮೋದಿ ಸರಕಾರವು ಬಂದ ತರುವಾಯ ರಾಜ್ಯದ ರೈಲ್ವೆ ಯೋಜನೆಯಲ್ಲಿಸಮಾಧಾನಕರ ಪ್ರಗತಿಯನ್ನು ಕಾಣಬಹುದಾಗಿದೆ.2014ರ ಮೊದಲು ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳು ಜಾರಿಯಾಗುತ್ತಿದ್ದ ವೈಖರಿ ಹೇಗಿತ್ತು ಎಂಬುದಕ್ಕೆ ಈ ಮೂರು ಉದಾಹರಣೆಗಳೆ ಸಾಕ್ಷಿ.
1.ಬೆಂಗಳೂರು – ಹಾಸನ ರೈಲು ಮಾರ್ಗವು ಪೂರ್ಣಗೊಳ್ಳಲು21ವರ್ಷಗಳನ್ನು ತೆಗೆದುಕೊಂಡಿತ್ತು. ಕುಣಿಗಲ್ ಸಮೀಪ7ಎಕರೆ ಭೂಸ್ವಾಧೀನವಾಗದೆ ಯೋಜನೆಯು ಸ್ಥಗಿತಗೊಂಡಿತ್ತು. ಮೋದಿ ಸರಕಾರವು ಬಂದ ತರುವಾಯ ಆದ್ಯತೆ ಮೇಲೆ ಈ ಸಮಸ್ಯೆಗೆ ಪರಿಹಾರ ಒದಗಿಸಿ ರೈಲು ಮಾರ್ಗದ ಕಾಮಗಾರಿ ಮುಗಿಸಲಾಯಿತು.400ಕೋಟಿ ಅಂದಾಜು ವೆಚ್ಚದ ಯೋಜನೆ ಪೂರ್ಣಗೊಂಡಾಗ1200ಕೋಟಿ ವೆಚ್ಚವಾಗಿತ್ತು.
2.ಬೆಂಗಳೂರು ಮತ್ತು ಮೈಸೂರು ಜೋಡಿ ಮಾರ್ಗ ನಿರ್ಮಾಣವು ಶ್ರೀರಂಗ ಪಟ್ಟಣ ಸಮೀಪ ಟಿಪ್ಪು ಶಸ್ತ್ರಕೋಠಿ ಸ್ಥಳಾಂತರ ವಾಗದೆ ಹತ್ತು ವರ್ಷವಾ ದರೂ ಕಾಮಗಾರಿ ಮುಗಿದಿರಲಿಲ್ಲ. ಸದಾನಂದ ಗೌಡರು ರೈಲ್ವೆ ಸಚಿವರಾದ ಸಂದರ್ಭದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹರವರ ಪ್ರಯತ್ನದಿಂದ ಟಿಪ್ಪು ಶಸಕೋಠಿಯನ್ನು ಸ್ಥಳಾಂತರ ಮಾಡಿ ಕಾಮಗಾರಿ ಪೂರ್ಣಗೊಳಿಸ ಲಾಯಿತು.480ಕೋಟಿ ಯೋಜನೆಯ ವೆಚ್ಚವು4ವರ್ಷಗಳ ವಿಳಂಬದಿಂದ900ಕೋಟಿಗೆ ಹೆಚ್ಚಳವಾಗಿತ್ತು.
3.ಗುಲ್ಬರ್ಗಾ ಮತ್ತು ಬೀದರ್ ನಡುವೆ ಹೊಸ ರೈಲು ಮಾರ್ಗದ ಕತೆಯು ಭಿನ್ನವಲ್ಲ.370ಕೋಟಿ ಯೋಜನೆಯು ಮುಕ್ತಾಯ ಗೊಳ್ಳಲು16ವರ್ಷವಾಗಿ ಅಂತಿಮವಾಗಿ1500ಕೋಟಿ ವೆಚ್ಚದಲ್ಲಿ2018ರಲ್ಲಿ ಕಾಮಗಾರಿ ಪೂರ್ಣವಾಯಿತು.
ಹಲವು ಪ್ರಥಮಗಳ ಗರಿಮೆ:2008ರಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರವು ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿಯನ್ನು ಹಿಡಿದ ತರುವಾಯ ರೈಲ್ವೇ ಯೋಜನೆಗಳನ್ನು ಚುರುಕುಗೊಳಿಸಲು ರಾಜ್ಯ ಸರಕಾರವು ಯೋಜನೆಯ ವೆಚ್ಚದ ಶೇ.50ರಷ್ಟು ಭರಿಸುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡರು. ದೇಶದಲ್ಲೇ ಈ ನಿರ್ಣಯ ಕೈಗೊಂಡ ಮೊದಲ ರಾಜ್ಯ ಕರ್ನಾಟಕವು ಇತರರಾಜ್ಯಗಳಿಗೆ ಮಾದರಿಯಾಗಿ ಈಗ17ಕ್ಕೂ ಹೆಚ್ಚು ರಾಜ್ಯಗಳು ಇದನ್ನು ಅನುಸರಿಸುತ್ತಿದ್ದಾರೆ.
ರೈಲ್ವೆ ಸಚಿವರಾಗಿದ್ದ ಸುರೇಶ್ ಪ್ರಭುರವರು2015ರಲ್ಲಿ ಚೊಚ್ಚಲ ರೈಲ್ವೆ ಮುಂಗಡ ಪತ್ರವನ್ನು ಮಂಡಿಸುವ ಸಂದರ್ಭದಲ್ಲಿಸಂಸದ ಪಿ.ಸಿ.ಮೋಹನ್ ಅವರು ತಮ್ಮ ಸಂಸದರ ನಿಧಿಯಿಂದ ನಗರದ ವೈಟ್‌ಫೀಲ್ಡ್ ನಿಲ್ದಾಣದ ಕಾಮಗಾರಿಗೆ ಒಂದು ಕೋಟಿಅನುದಾನವನ್ನು ನೀಡಿದ್ದನ್ನು ಉಲ್ಲೇಖಿಸಿ ಪ್ರಶಂಸಿಸಿದ್ದರು. ಈ ಮಾದರಿಯನ್ನೂ ಈಗ ಹಲವಾರು ಸಂಸದರು ಅನುಸರಿಸು ತ್ತಿದ್ದಾರೆ. ಬೈಯಪ್ಪನಹಳ್ಳಿ ಸರ್.ಎಂ. ವಿಶ್ವೇಶ್ವರಯ್ಯ ಕೋಚಿಂಗ್ ಟರ್ಮಿನಲ್ ದೇಶದಲ್ಲೇ ಮೊಟ್ಟ ಮೊದಲ ಹವಾ ನಿಯಂತ್ರಿತ ರೈಲು ನಿಲ್ದಾಣದ ಖ್ಯಾತಿ ಪಡೆದಿದೆ.
ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಮತ್ತು ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರ ಪ್ರಯತ್ನದಫಲ ನಗರಕ್ಕೆ ಮತ್ತೊಂದು ಗರಿಯು ಲಭಿಸಿದೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲೂ ಈ ಮಾದರಿಯ ರೈಲ್ವೆ ನಿಲ್ದಾಣನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ಹುಬ್ಬಳ್ಳಿಯಲ್ಲಿ ವಿಶ್ವದಲ್ಲೇ ಅತಿ ಉದ್ದದ ಪ್ಲಾಟ್ ಫಾರಂ ಉದ್ಘಾಟನೆಗೆ ಸಿದ್ಧವಾಗಿದೆ. ಇಲ್ಲಿಯತನಕ ಉತ್ತರ ಪ್ರದೇಶದ ಗೋರಖ್‌ಪುರ ರೈಲು ನಿಲ್ದಾಣದ 1,366,33 ಮೀಟರ್ ಉದ್ದದ ಪ್ಲಾಟ್ ಫಾರಂ ಈ ಕೀರ್ತಿಗೆ ಪಾತ್ರವಾಗಿತ್ತು. ಸಂಸದ ಪ್ರಹ್ಲಾದ್ ಜೋಶಿಯವರ ಪ್ರಯತ್ನದ ಫಲ ಈಗ1400ಮೀಟರ್ ಉದ್ದದ ಪ್ಲಾಟ್ ಫಾರಂ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿ ಆ ದಾಖಲೆಯನ್ನು ಮುರಿದಿದೆ.
2016ರಿಂದ ಪ್ರತ್ಯೇಕ ರೈಲ್ವೇ ಮುಂಗಡ ಪತ್ರವನ್ನು ಮಂಡಿಸುವ ಪದ್ಧತಿಗೆ ಕೇಂದ್ರ ಸರಕಾರ ಇತಿಶ್ರೀ ಹಾಡಿತು. ರೈಲ್ವೇಸಚಿವ ರಾಗಿದ್ದವರು ತಮ್ಮ ಕ್ಷೇತ್ರ ಮತ್ತು ರಾಜ್ಯಗಳಿಗೆ ಭರಪೂರ ಅನುದಾನ ಮತ್ತು ಯೋಜನೆಗಳನ್ನು ಘೋಷಿಸಿಕೊಳ್ಳುವ ಕೆಟ್ಟಪರಂಪರೆಗೆ ದಾರಿಯಾಗಿತ್ತು. ಕಳೆದ30ವರ್ಷದಲ್ಲಿ450000ಕೋಟಿ ವೆಚ್ಚದ ಹಲವಾರು ಯೋಜನೆಗಳನ್ನು ಘೋಷಿಸಿ ಅದನ್ನು ಕೇವಲ ಕಾಗದಕ್ಕೆ ಸೀಮಿತಗೊಳಿಸಿದ್ದರು. ನೂರಾರು ಕೋಟಿ ವೆಚ್ಚದ ಯೋಜನೆಗಳನ್ನು ಘೋಷಿಸಿ ಅವುಗಳಿಗೆ ಕೇವಲ ಒಂದು ಲಕ್ಷ ಅನುದಾನವನ್ನು ನೀಡಲಾಗುತ್ತಿತ್ತು.
ಕಳೆದ ಕೆಲವು ದಶಕಗಳಿಂದ1200ಹೊಸ ರೈಲುಗಳ ಆರಂಭವನ್ನು ರೈಲ್ವೆ ಮುಂಗಡ ಪತ್ರದಲ್ಲಿ ಘೋಷಿಸಲಾಗಿತ್ತು. ವಾಸ್ತವ ವಾಗಿ ಸಂಚಾರ ಆರಂಭಿಸಿದ್ದು ಕೇವಲ300ಮಾತ್ರ. ಅದೇ ರೀತಿ ರೈಲ್ವೆಗೆ ಸಂಬಂಧಿಸಿದ425ವಿವಿಧ ಯೋಜನೆ ಗಳನ್ನು ಮುಂಗಡ ಪತ್ರದಲ್ಲಿ ಘೋಷಿಸಲಾಗಿತ್ತು. ಆದರೆ ಜಾರಿಯಾಗಿದ್ದು ಕೇವಲ125ಯೋಜನೆಗಳು ಮಾತ್ರ. ಜಾರಿಯಾಗದಯೋಜನೆಗಳನ್ನು ಘೋಷಿಸಿ ರೈಲ್ವೆ ಸಚಿವರುಗಳು ಮುಂಗಡ ಪತ್ರದ ಪಾವಿತ್ರ್ಯತೆಯನ್ನೇ ಹಾಳು ಮಾಡಿದ್ದರು. ಯಾರನ್ನೊ ಮೆಚ್ಚಿಸಲು ಮತ್ತು ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಬಹುತೇಕ ರೈಲ್ವೇ ಸಚಿವರು ನಡೆಸಿಕೊಂಡು ಬಂದಿದ್ದರು. ಈ ಕೆಟ್ಟ ಸಂಪ್ರದಾಯಕ್ಕೆ ಮೋದಿ ಸರಕಾರವು2014ರಲ್ಲಿ ಈ ಅಂತಿಮವಾಗಿ ತೆರೆ ಎಳೆಯಿತು.
2014ರ ಮೊದಲು50ಕೋಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ರೈಲ್ವೇ ಬೋರ್ಡ್ ಅನುಮತಿ ಅಗತ್ಯವಿತ್ತು. ಬೆಂಗಳೂರಿನಿಂದ-ಲ್ಅನುಮೋದನೆಗೆ ದೆಹಲಿಗೆ ತಲುಪಿ ಅಲ್ಲಿ ಟೇಬಲ್‌ನಿಂದ ಟೇಬಲ್ ಗೆ ಅಲೆದು ಮತ್ತೆ ಬೆಂಗಳೂರಿಗೆ ಬರುವಷ್ಟರಲ್ಲಿ7ವರ್ಷ ಗಳಾಗುತ್ತಿತ್ತು. ಅನೇಕ ಸಂದರ್ಭದಲ್ಲಿ ಇಡಿ ಯೋಜನೆಯೇ ಅಪ್ರಸ್ತುತವಾಗಿ ಕೈಬಿಡಲಾಗುತ್ತಿತ್ತು.2015ರಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭುರವರು ಆಯಾ ವಲಯದ ಜನರಲ್ ಮ್ಯಾನೇಜರ್‌ಗಳಿಗೆ ಕಾಮಗಾರಿ ಕೈಗೊಳ್ಳಲು ಅಧಿಕಾರ ನೀಡಿದರು ಎಂಬ ಮಾಹಿತಿ ನೈರುತ್ಯ ವಲಯ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ತಿಳಿಸುತ್ತಾರೆ.
ತತ್ಪರಿಣಾಮ ರೈಲ್ವೇ ಕಾಮಗಾರಿಗಳಿಗೆ ವೇಗ ದೊರೆತು ಯೋಜನೆಯ ವೆಚ್ಚದಲ್ಲಿಯೂ ಉಳಿಕೆಯಾಗಿದೆ. ರೈಲ್ವೆ ಅಭಿವೃದ್ಧಿ ಯಾದರೆ ಆ ಪ್ರದೇಶದ ಕೈಗಾರಿಕೆಗಳಿಗೆ ಅನುಕೂಲ, ರಿಯಲ್ ಎಸ್ಟೇಟ್ ಬೆಳೆಯುತ್ತದೆ. ಆ ಪ್ರದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಪೂರಕ ಎಂಬುದನ್ನು ಮನಗಂಡಿರುವ ಕೇಂದ್ರ ಸರಕಾರವು ರೈಲ್ವೆ ಕಾಮಗಾರಿಗಳಿಗೆ ಬಂಡವಾಳ ಹೂಡುವುದಕ್ಕೆ ಆರಂಭಿಸಿದೆ.21-22ರ ಮುಂಗಡ ಪತ್ರದಲ್ಲಿ1.1ಲಕ್ಷ ಕೋಟಿ ಮೀಸಲಿಡಲಾಗಿದೆ. ಮತ್ತು ಬಂಡವಾಳ ವೆಚ್ಚದಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಶೇ.33ರಷ್ಟು ಹೆಚ್ಚಳವಾಗಿದೆ.
ಕರ್ನಾಟಕದ ವಿಚಾರದಲ್ಲಿ2009ರಿಂದ2014ರವರೆಗೆ835ಕೋಟಿ ನೀಡಲಾಗುತ್ತಿತ್ತು.2021ರಲ್ಲಿ3897ಕೋಟಿ ಅನುದಾನ ನೀಡಲಾಗಿದೆ. ಒಟ್ಟಾರೆ4ಪಟ್ಟಿಗೂ ಹೆಚ್ಚು ಅನುದಾನ ದೊರೆಯುತ್ತಿದೆ. ಸಂತಸದ ಸಂಗತಿಯೆಂದರೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಈ ಯೋಜನೆಯು ಜಾರಿಯಾಗುತ್ತಿರುವ ಬೆಂಗಳೂರಿಗೆ ಉಪನಗರರೈಲಿಗೆಕೇಂದ್ರ ಸರಕಾರವು ಅನುಮತಿಯನ್ನು ನೀಡಿದೆ.17500ಕೋಟಿ ವೆಚ್ಚದ ಈ ಯೋಜನೆಯ ಜಾರಿಗೆ ಈ ಬಾರಿಯ ಮುಂಗಡ ಪತ್ರದಲ್ಲಿ800ಕೋಟಿ ಮೀಸಲಿಡಲಾಗಿದೆ. ಈ ಯೋಜನೆ ಸಾಕಾರವಾಗಲು ದಿವಂಗತ ಅನಂತ್ ಕುಮಾರ್ ಅವರ ಕೊಡುಗೆ ಅಪಾರ. ಅವರ ನಂತರ ಪಿ.ಸಿ.ಮೋಹನ್ ಇದರ ಬಗ್ಗೆ ಕಾಳಜಿ ವಹಿಸಿ ಉಪನಗರ ರೈಲು ಯೋಜನೆಯನ್ನು ಕನಸು ನನಸಾಗು ವಂತೆ ಮಾಡಿದ್ದಾರೆ.
ಸರಕು ಸಾಗಣೆಯಲ್ಲಿಯೂ ರಾಜ್ಯದಲ್ಲಿ ರೈಲ್ವೆ ಇಲಾಖೆ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಸರಕು ಸಾಗಣೆಯು ನಿರಂತರವಾಗಿ ಕೈಗೊಂಡು ದಾಖಲೆಯ ಪ್ರಮಾಣದಲ್ಲಿ ಸರಕು ಸಾಗಿಸುವ ಮೂಲಕ ಆಹಾರ ಮತ್ತು ಅಗತ್ಯವಸ್ತುಗಳ ಅಭಾವ ತಲೆದೂರದಂತೆ ಕಾರ್ಯ ನಿರ್ವಹಿಸಿದೆ. ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಮಂತ್ರಿಯಾದ ಸಂದರ್ಭದಲ್ಲಿ ಕಲ್ಬುರ್ಗಿ ಪ್ರತ್ಯೇಕ ರೈಲ್ವೆ ವಲಯ ಮಾಡಲಾಗುವುದು ಎಂದು ಚುನಾವಣೆಗೆ ಮುನ್ನ ಘೋಷಿಸಿದ್ದರು. ಈ ಪ್ರಸ್ತಾವನೆಯ ಸಾಧಕ ಬಾಧಕವನ್ನು ಚರ್ಚೆ ಮಾಡದೆ ಮತ್ತು ರೈಲ್ವೇ ಬೋರ್ಡ್‌ನಲ್ಲಿ ಅನುಮೋದನೆ ಪಡೆಯದೆ ಪ್ರತ್ಯೇಕ ವಲಯದ ರಚನೆಯನ್ನು ಘೋಷಿಸಿದ್ದರು.
ಆದರೆ ಇದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಮತ್ತು ಕೇವಲ ಇದೊಂದು ಬಿಳಿಯಾನೆಯಾಗುತ್ತದೆ ಎಂದು ರೈಲ್ವೆ ಇಲಾಖೆಯುಈ ಪ್ರಸ್ತಾವನೆಯನ್ನು ಕೈಬಿಟ್ಟಿದ್ದಾರೆ. ರಾಜ್ಯಸಭೆಯಲ್ಲಿ ಖರ್ಗೆಯವರು ಈ ವಿಚಾರವನ್ನು ಪ್ರಸ್ತಾಪಿಸಿದಾಗ ರೈಲ್ವೆ ಸಚಿವರು ವಲಯ ರಚನೆ ಕೇವಲ ಆರ್ಥಿಕ ಹೊರೆಯಾಗುತ್ತದೆ. ಇದರಿಂದ ಯಾವ ವಿಶೇಷ ಲಾಭವಿಲ್ಲ ಎಂದು ವಿನಯವಾಗಿ ವಲಯ ರಚನೆಯನ್ನು ಪಕ್ಕಕ್ಕೆ ಸರಿಸಿದರು. ಗಮನಾರ್ಹ ಸಂಗತಿಯಂದರೆ ಖರ್ಗೆಯವರು ಈ ಉತ್ತರವನ್ನು ಮೌನವಾಗಿ ಒಪ್ಪಿಕೊಂಡಿದ್ದು. ಕರ್ನಾಟಕದಲ್ಲಿ ಈಗಾಗಲೇ 252ಕಿ.ಮೀ ಹೊಸ ರೈಲು ಮಾರ್ಗವನ್ನು ಹಾಕಲಾಗಿದೆ. ಮತ್ತು 982ಕಿ.ಮೀ ಹೊಸ ಮಾರ್ಗಗಳ ಕಾಮಗಾರಿಯು ಪ್ರಗತಿಯಲ್ಲಿರುವುದು.
ರೈಲ್ವೆ ಇಲಾಖೆಯು ಶೇ.100ರಷ್ಟು ಭೂಸ್ವಾಧೀನವಾಗದೆ ಯಾವುದೇ ಕಾಮಗಾರಿಯನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದ ಯೋಜನಾ ವೆಚ್ಚ ಅನಗತ್ಯವಾಗಿ ಹೆಚ್ಚಳವಾಗುವುದನ್ನು ತಪ್ಪಿಸಲಾಗಿದೆ. ತುಮಕೂರು ಮತ್ತು ಚಿತ್ರದುರ್ಗ ರೈಲು ಮಾರ್ಗಕ್ಕೆಈಗಾಗಲೇ ಹಣವು ಲಭ್ಯವಿದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿದೆ.ಸದ್ಯ ರಾಜ್ಯದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಕಾಮಗಾರಿಗಳು1500ಕಿ.ಮೀ.ಗಳ ಹೊಸಲೈನ್‌ಗಳು12ಸಾವಿರ ಕೋಟಿ ವೆಚ್ಚದಲ್ಲಿನಡೆಯುತ್ತಿದೆ. ಮತ್ತು2500ಕಿ.ಮೀ.ಗಳ ಡಬ್ಲಿಂಗ್ ಯೋಜನೆಯು7000ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿದೆ.
ರಾಜ್ಯದ ಎಲ್ಲಾ ಮಾರ್ಗಗಳು ಜೋಡಿ ಮಾರ್ಗ ಪರಿವರ್ತನೆಗೆ ಹಾಗೂ ವಿದ್ಯುದ್ದೀಕರಣಕ್ಕೆ ಇಲಾಖೆಯ ಮಂಜೂರಾತಿ ನೀಡಲಾಗಿದೆ. ದೇಶಾದ್ಯಂತ್ಯ ಎಲ್ಲಾ ರೈಲು ಮಾರ್ಗಗಳನ್ನು2023ರೊಳಗೆ ವಿದ್ಯುದ್ದೀಕರಣ ಮಾಡುವ ಯೋಜನೆಯುಶರವೇಗದಿಂದ ನಡೆಯುತ್ತಿದೆ. ರೈಲ್ವೇ ಸಚಿವರು ಕರ್ನಾಟಕದ ಎಲ್ಲಾ ಮಾರ್ಗಗಳನ್ನು2023ರೊಳಗೆ ವಿದ್ಯುದ್ದೀಕರಣಮಾಡಲಾಗುವುದು ಎಂದು ಘೋಷಿಸಿದ್ದಾರೆ. ಈಗಾಗಲೇ750ಕಿ.ಮೀ ಮಾರ್ಗದಲ್ಲಿ ವಿದ್ಯುದ್ದೀಕರಣವಾಗಿದೆ ಹಾಗೂ21-22ರಲ್ಲಿ849ಕಿ.ಮೀ. ವಿದ್ಯುದ್ದೀಕರಣ ಮಾಡಲು ಕಾಮಗಾರಿಯು ಭರದಿಂದ ಸಾಗುತ್ತಿದೆ.
ಕೇಂದ್ರ ಸರಕಾರದ ನೀತಿಯನ್ವಯ ಎಲ್ಲಾ ಬ್ರಾಡ್‌ಗೇಜ್ ಮಾರ್ಗಗಳನ್ನು ಜೋಡಿ ಮಾರ್ಗಗಳಾಗಿ ಪರಿವರ್ತಿಸಲಾಗುತ್ತಿದೆ. ಇದರ ಲಾಭವು ಕರ್ನಾಟಕಕ್ಕೆ ದೊರೆತಿದೆ. ಈಗಾಗಲೇ440ಕಿ.ಮೀ ಉದ್ದ ಜೋಡಿ ಮಾರ್ಗದ ಕಾಮಗಾರಿ ಮುಕ್ತಾಯವಾಗಿದೆ.2021-22ರಲ್ಲಿ203ಕಿ.ಮೀ ಜೋಡಿ ಮಾರ್ಗದ ಗುರಿಯನ್ನು ಹೊಂದಿದೆ.2024ರೊಳಗೆ ದೇಶದ ಎಲ್ಲಾ ಬ್ರ್ಯಾಡ್‌ಗೇಜ್ ಮಾರ್ಗಗಳನ್ನು ಜೋಡಿಮಾರ್ಗ ಮಾಡಲು ಕೇಂದ್ರ ಸರಕಾರ ಉದ್ದೇಶಿಸಿದೆ.
ರೈಲು ಮಾರ್ಗಗಳ ವಿದ್ಯುದ್ದೀಕರಣದಿಂದ ಪರಿಸರಕ್ಕೆ ಲಾಭವಾಗುತ್ತಿರುವುದಲ್ಲದೆ ಡೀಸೆಲ್ ಉಳಿತಾಯದಿಂದ ರೈಲ್ವೆ ಇಲಾಖೆಗೆ ವಾರ್ಷಿಕ ೧೪,೬೦೦ ಕೋಟಿ ಉಳಿತಾಯವಾಗಲಿದೆ. ರೈಲುಗಳ ವೇಗವು ಹೆಚ್ಚಳವಾಗಿದೆ. ಗಂಟೆಗೆ80ಕಿ.ಮೀ ವೇಗವು ಇದೀಗ105ಕಿ.ಮೀ.ಗೆ ಹೆಚ್ಚಳವಾಗಿದೆ. ಇದರಿಂದ ಪ್ರಯಾಣಿಕರಿಗೂ ಅನುಕೂಲ ಮತ್ತು ರೈಲ್ವೆ ಇಲಾಖೆಯು ಹೆಚ್ಚಿನ ರೈಲು ಸಂಚರಿಸಲು ಸಾಧ್ಯವಾಗುತ್ತಿದೆ. ಗುಣಮಟ್ಟದ ಟ್ರಾಕ್‌ಗಳ ನಿರ್ವಹಣೆ ಮತ್ತು ರೈಲು ಮಾರ್ಗಗಳ ವಿದ್ಯುದ್ಧೀಕರಣದಿಂದ ಗೂಡ್ಸ್ ರೈಲು ಸಂಚಾರ ವೇಗದಲ್ಲಿಯೂ ಗಣನೀಯವಾಗಿ ಏರಿಕೆಯಾಗಿ23ಕಿ.ಮೀ. ವೇಗದಿಂದ ಸಂಚರಿಸುತ್ತಿದ್ದ ಗೂಡ್ಸ್ ರೈಲುಗಳ ವೇಗ46ಕಿ.ಮೀ.ಗೆ ಹೆಚ್ಚಳವಾಗಿದೆ.
ಬೆಂಗಳೂರಿನ ಎರಡನೆ ರೈಲು ಟರ್ಮಿನಲ್ ಯಶವಂತಪುರ ನಿಲ್ದಾಣವನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ. ಪ್ರಯಾಣಿಕರಅನುಕೂಲಕ್ಕೆ ಹೆಚ್ಚಿನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಹಾಗೆಯೇ ನೆಲಮಂಗಲ ರೈಲು ನಿಲ್ದಾಣವನ್ನು ಗೂಡ್ಸ್ ಶೆಡ್ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಕೃಷಿ ಹಾಗೂ ಕೈಗಾರಿಕಾ ಉತ್ಪನ್ನಗಳನ್ನು ಈ ನಿಲ್ದಾಣದಿಂದ ಸಾಗಣೆ ಮಾಡಲುಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕರ್ನಾಟಕದ ರೈಲು ಅಭಿವೃದ್ಧಿಯ ನಕಾಶೆ ಬದಲಾಗುತ್ತಿದೆ.
ರೈಲು ಮಾರ್ಗದ ಅಭಿವೃದ್ಧಿಯಿಂದ ಆರ್ಥಿಕ ಬದಲಾಣೆಯ ಕಾರಣ ರೈಲ್ವೆ ಪ್ರಗತಿಯು ಶರವೇಗದಲ್ಲಿ ಸಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಕರ್ನಾಟಕ ದೇಶದ ಇತರ ರಾಜ್ಯಗಳ ಸಮನಾಗಿ ರೈಲ್ವೆ ಕ್ಷೇತ್ರದಲ್ಲಿ ಮಹತ್ತರ ಪ್ರಗತಿಯನ್ನು ಕಾಣುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ7ವರ್ಷದಲ್ಲಿ50ಕ್ಕೂ ಹೆಚ್ಚು ಹೊಸ ರೈಲು ಸಂಚಾರ ಪ್ರಾರಂಭವಾಗಿದೆ.13ರೈಲುಗಳ ಸಂಚಾರ ವಿಸ್ತರಿಸಲಾಗಿದೆ. ಮೈಸೂರು ಚೆನ್ನೆ ಹೈಸ್ಪೀಡ್ ರೈಲು ಸಂಚಾರಕ್ಕೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ.
75ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ಒದಗಿಸಲಾಗಿದೆ. ರಾಜ್ಯದ22ರೈಲ್ವೆ ನಿಲ್ದಾಣಗಳನ್ನು ನವೀಕರಿಸ ಲಾಗಿದೆ. ಯಲಹಂಕ ಮತ್ತು ಕೆ.ಆರ್.ಪುರಂನಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಯಾದಗರಿಯಲ್ಲಿನ ರೈಲು ಕೋಚ್ ನಿರ್ಮಾಣ ಕಾರ್ಖಾನೆಯು ಉತ್ಪಾದನೆಯನ್ನು ಆರಂಭಿಸಿದೆ . ಮೇಕ್ ಇನ್ ಇಂಡಿಯಾ ಯೋಜನೆಯಡಿ ಇದೊಂದು ಮಹತ್ತರ ಹೆಜ್ಜೆ ಯಾಗಿದೆ.