ಸರಕಾರಿ ನಿಯಂತ್ರಣದಿಂದ ದೇಗುಲಗಳಿಗೆ ಬೇಕಿದೆ ಮುಕ್ತಿ
ಅಭಿಮತ
ಪ್ರಣೀತಾ ಸುಭಾಷ್
ಹಿಂದೂ ಪರಂಪರೆಯಲ್ಲಿ ದೇವಾಲಯಗಳಿಗೆ ಮಹತ್ತರವಾದ ಸ್ಥಾನವಿದೆ. ದೇವಾಲಯಗಳು ಕೇವಲ ಧಾರ್ಮಿಕ ಸ್ಥಳವಲ್ಲದೆ, ಜನರನ್ನು ಒಟ್ಟುಗೂಡಿಸಿ, ಧರ್ಮವನ್ನು ಎತ್ತಿ ಹಿಡಿಯುವ, ಜ್ಞಾನವನ್ನು ಪಸರಿಸುವ ಕಲಿಕೆಯ ಕೇಂದ್ರವಾಗಿದೆ. ದೇವಾಲಯಗಳು ಹಿಂದೂ ಸಂಪ್ರದಾಯ, ಸಂಸ್ಕೃತಿ, ಸಮಷ್ಟಿಯ ಪ್ರತೀಕ. ಅವು ಭಾರತೀಯ ಸಮಾಜದ ಪ್ರತಿಬಿಂಬ.
ಹಿಂದೂ ಧರ್ಮದ ಪ್ರಮುಖ ಅಂಗವಾಗಿರುವ ದೇವಾಲಯಗಳನ್ನು ಸ್ಥಳೀಯ ಸಮುದಾಯದವರು ನಿರ್ವಹಿಸುತ್ತಿದ್ದರು. ಪ್ರತಿಯೊಂದು ದೇವಾಲಯವುಸಮುದಾಯದ ಅನುಕೂಲಕ್ಕಾಗಿ ವಿಶ್ರಾಂತಿ ಗೃಹಗಳು, ಪಾಠಶಾಲೆಗಳು, ಆಹಾರ ಶಾಲೆಗಳನ್ನು ಸ್ಥಾಪಿಸಿ, ಸಮಾಜದ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತಿತ್ತು. ಆದರೆ ದೇವಾಲಯದ ಸಂಪತ್ತಿನ ಮೇಲೆ ಹಿಡಿತ ಸಾಧಿಸುವ ಪ್ರಕ್ರಿಯೆಯನ್ನು ಮೊಘಲರು ಪ್ರಾರಂಭಿಸಿದರು. ಬ್ರಿಟಿಷರು ಭಾರತಕ್ಕೆ ಬಂದ ನಂತರ, ವಸಾಹತುಶಾಹಿ ಮತ್ತು ಮತಾಂತರ ಆಳ್ವಿಕೆ ನಡೆಸುವ ಸಲುವಾಗಿ ದೇವಾಲಯಗಳನ್ನು ದುರ್ಬಲಗೊಳಿಸಲು ಮುಂದಾದರು. ಆದ್ದರಿಂದ, ದಕ್ಷಿಣ ಭಾರತದಲ್ಲಿದ್ದ ಭಾರಿ ಸಂಪತ್ತು ಹೊಂದಿರುವ ದೇವಾಲಯಗಳನ್ನು,೧೮೧೭ರ ಮದ್ರಾಸ್ ನಿಯಂತ್ರಣ ಅಧಿನಿಯಮ (   ) ಅಡಿಯಲ್ಲಿ ಸರಕಾರದ ನಿಯಂತ್ರಣಕ್ಕೆ ತಂದರು.
ನಂತರ೧೮೬೩ರಲ್ಲಿ ಧಾರ್ಮಿಕ ದತ್ತಿ ಅಧಿನಿಯಮವನ್ನು (   ) ಹೊರಡಿಸಿ, ದೇವಾಲಯ ಆಡಳಿತವನ್ನು ಬ್ರಿಟಿಷ್ಸರಕಾರದಿಂದ ಟ್ರಗಳಿಗೆ ಹಸ್ತಾಂತರಿಸಿದರು.೧೯೨೫ರಲ್ಲಿ ಮದ್ರಾಸ್ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಅಧಿನಿಯಮವನ್ನು (     ) ಪರಿಚಯಿಸಿದಾಗ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ದೊಡ್ಡ ಪ್ರತಿಭಟನೆಯನ್ನು ಮಾಡಿದರು. ಆದ್ದರಿಂದ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹೊರಗಿಟ್ಟು, ಹಿಂದುಗಳಿಗೆ ಮಾತ್ರ ಅನ್ವಯವಾಗುವಂತೆ೧೯೨೭ರಲ್ಲಿ ಪುನರ್‌ರಚಿಸಿ, ಮದ್ರಾಸ್ ಹಿಂದೂ ಧಾರ್ಮಿಕ ಮತ್ತು ದತ್ತಿ ಅಧಿನಿಯಮ (     ) ಎಂದು ಮರುನಾಮಕರಣ ಮಾಡಿದರು.
ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಧಿಕಾರದಲ್ಲಿದ್ದಾ,೧೯೫೧ರಲ್ಲಿ ಅಂಗೀಕರಿಸಲ್ಪಟ್ಟ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿಅಧಿನಿಯಮದ (      ) ಅಡಿಯಲ್ಲಿ ದೇವಾಲಯಗಳು ನಿರ್ವಹಣೆಯನ್ನು, ಮೊದಲು ತಮಿಳು ನಾಡು ಸರಕಾರವು ನಿಯಂತ್ರಣಕ್ಕೆತ್ತುಕೊಂಡಿತು. ಈ ಅಧಿನಿಯಮದ ನಿಬಂಧನೆಗಳನ್ನು ಮದ್ರಾಸ್ ಹೈಕೋಟ್‌ನಲ್ಲಿ ಮತ್ತು ಸುಪ್ರೀಂಕೋರ್ಟ್ ‌ನಲ್ಲಿ ಪ್ರಶ್ನಿಸಿ, ನಂತರ ಕೆಲವು ಬದಲಾವಣೆಗಳೊಂದಿಗೆ,೧೯೫೯ರಲ್ಲಿ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಅಧಿನಿಯಮ (        ) ಅಂಗೀಕರಿಸಲಾಯಿತು.
ಹೊಸ ಕಾಯಿದೆಯು, ಹಿಂದೂ ಧಾರ್ಮಿಕ ಮತ್ತು ದತ್ತಿಇಲಾಖೆಗೆ ದೇವಾಲಯಗಳನ್ನು ನಿಯಂತ್ರಿಸುವ ಅಧಿಕಾರ ನೀಡಿತು.೧೯೫೧ರಲ್ಲಿ ಜಾರಿಗೆ ಬಂದ ಕಾಯಿದೆಯೇ ಇಂದಿಗೂ ಚಾಲ್ತಿಯಲ್ಲಿದೆ. ಈ ಕಾಯಿದೆ ಅನುಸಾರವಾಗಿ, ನಿರ್ವಾಹಕರ ನೇಮಕದಿಂದ- ಸೇವಾ ಶುಲ್ಕವನ್ನು ಸಂಗ್ರಹಿಸುವವರೆಗೆ ಎಲ್ಲಾದೇವಾಲಯ ಸಂಬಂಧಿತ ಕಾರ್ಯಗಳನ್ನು ಸರಕಾರ ನಿರ್ವಹಿಸುತ್ತಿದೆ. ವಿಪರ್ಯಾಸವೇನೆಂದರೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಸಂಸ್ಥೆಗಳ ಮೇಲೆ ಇಂತಹ ನಿಯಂತ್ರಣವಿಲ್ಲ. ದೇವಾಲಯದ ವ್ಯವಹಾರಗಳಲ್ಲಿ ಸರಕಾರ ಭಾಗಿ ಆಗುವುದು ಜಾತ್ಯತೀತ ಪರಿಕಲ್ಪನೆಯನ್ನು ಉಲ್ಲಂಘಿಸುತ್ತದೆ.
ಜಾತ್ಯತೀತ’ ಪದವನ್ನು,೪೨ನೇ ತಿದ್ದುಪಡಿ ಕಾಯಿದೆಯ ಅನುಸಾರ೧೯೭೬ರಲ್ಲಿ, ಮುನ್ನುಡಿಯಲ್ಲಿ ಸೇರಿಸಲಾಯಿತು. ಜಾತ್ಯತೀತತೆ ಭಾರತದ ಸಂವಿಧಾನದ ಮೂಲ ಲಕ್ಷಣವಾಗಿದೆ. ಒಂದು ದೇಶದಲ್ಲಿ ಎಲ್ಲರೂ ಸಮಾನರು ಮತ್ತು ಧರ್ಮವನ್ನು, ದೇಶದ ಆಳ್ವಿಕೆ ಕಾರ್ಯದಲ್ಲಿ ಬೆರಸಬಾರದೆಂದು ಉತ್ತೇಜಿಸುತ್ತದೆ. ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವನ್ನು ಮಾಡಬಾರದು ಎಂದು ಭಾರತೀಯ ಸಂವಿಧಾನ ಆದೇಶಿಸಿದೆ. ಆದರೆ ಧಾರ್ಮಿಕ ಸಂಸ್ಥೆಗಳನ್ನುನಿಯಂತ್ರಿಸುವಾಗ ತಾರತಮ್ಯವಿದೆ.
ಬ್ರಿಟಿಷರು ಮತ್ತು ನಂತರ ನೆಹರು ಸರಕಾರ ಮಾಡಿದ ಐತಿಹಾಸಿಕ ತಪ್ಪನ್ನು ಈಗ ಸರಿಪಡಿಸಬೇಕು, ಹಿಂದೂ ಧಾರ್ಮಿಕ ಟ್ರಸ್ಟ್‌ಗಳನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಟ್ರಸ್ಟ್‌ಗಳಿಗೆ ಸಮನಾಗಿ ಪರಿಗಣಿಸಬೇಕು. ಸರಕಾರವು ದೇವಾಲಯಗಳನ್ನು ನಿಯಂತ್ರಿಸುವ ಕಾರ್ಯವು, ಜಾತ್ಯತೀತತೆಗೆ ವಿರುದ್ಧವಾಗಿದೆ. ಜಾತ್ಯತೀತತೆಯನ್ನು ಉಲಂಸುವುದಷ್ಟೇ ಅಲ್ಲದೆ, ಭಾರತೀಯ ಸಂವಿಧಾನದ೨೫ನೇ ಮತ್ತು೨೬ನೇ ವಿಧಿಯನ್ನು ಉಲ್ಲಂಘಿಸುತ್ತದೆ.
೨೬ನೇ ವಿಧಿ, ಸಮುದಾಯಗಳಿಗೆ ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸಲು, ನಡೆಸಲು, ಸ್ಥಾಪಿಸಲು ಮತ್ತು ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ದೇವಸ್ಥಾನದ ಆಡಳಿತ ನಿರ್ವಹಣೆ ಮತ್ತು ದೇವಾಲಯದ ಸಂಪತ್ತು ನಿರ್ವಹಣೆಯ ಯಾವುದೇ ಹಕ್ಕು ಸರಕಾರಕ್ಕಿಲ್ಲ. ಧಾರ್ಮಿಕ ಸ್ವಾಯತ್ತತೆಯನ್ನು ಮುಟ್ಟುವ ಹಕ್ಕು ಸರಕಾರಕ್ಕೆ ಇಲ್ಲ. ಸರಕಾರವೂ ಮಸೀದಿಗಳು ಮತ್ತು ಚರ್ಚುಗಳಿಂದ ದೂರವಿರಲು ಸಾಧ್ಯವಾದಾಗ, ದೇವಾಲಯಗಳಿಂದ ಏಕೆಇ?ಹಿಂದೂ ದೇವಾಲಯಗಳಿಗೆ ಮಾತ್ರ ಸರಿಯಾದ ಆಡಳಿತ ಮತ್ತು ಆದಾಯವನ್ನು ಸರಿಯಾದ’ ಉದ್ದೇಶಗಳಿಗಾಗಿ ಬಳಸಬೇಕೆಂದು ಸರ್ಕಾರ ಬಯಸುವುದು ಸರಿಯೇ ? ಭಾರತವು ವೈವಿಧ್ಯತೆಗೆ ಹೆಸರುವಾಸಿಯಾಗಿದೆ.
ವೈವಿಧ್ಯತೆಯನ್ನು ಎಲ್ಲಾ ಹಂತಗಳಲ್ಲಿ ಮತ್ತು ಎಲ್ಲಾ ಅಂಶಗಳಲ್ಲಿ ಕಾಣಬಹುದು. ಅದೇ ರೀತಿ, ವಿವಿಧ ದೇವಾಲಯಗಳಲ್ಲಿ ವೈವಿಧ್ಯಮಯಅಭ್ಯಾಸಗಳನ್ನು ಸಹ ನಾವು ನೋಡಬಹುದು. ಹೀಗಿರುವಾಗ ಎ ಚಟುವಟಿಕೆಗಳನ್ನು ನೋಡಿಕೊಳ್ಳಲು ಸರಕಾರ ಮಂಡಳಿಯನ್ನು ನೇಮಿಸುವುದುಎಷ್ಟು ಮಟ್ಟಿಗೆ ಸರಿ ? ದೇವಾಲಯದ ಕಾರ್ಯಗಳನ್ನು ನಿರ್ದಿಷ್ಟ ಸಮುದಾಯವು ಮಾಡುವುದು ಸೂಕ್ತ. ದೇವಾಲಯಗಳನ್ನು ಭಾರತೀಯ ತತ್ವಶಾಸಮತ್ತು ಸಂಪ್ರದಾಯವನ್ನು ಬೋಧಿಸಲು, ವೇದ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಬದಲಿಸಬೇಕು, ಆದರೆ ಅದು ಸಾಧ್ಯವಾಗುತ್ತಿಲ್ಲ, ಹೊರತಾಗಿದೇವಸ್ಥಾನದ ಭೂಮಿಯನ್ನು ಇತರೆ ಕಾರ್ಯಗಳಿಗೆ ಮಾರಲಾಗುತ್ತಿದೆ.
ಇತ್ತೀಚಿಗೆ ಒಡಿಶಾ ಸರಕಾರ ಜಗನ್ನಾಥ ದೇವಾಲಯಕ್ಕೆ ಸೇರಿದ೩೫,೦೦೦ಎಕರೆ ಭೂಮಿಯನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂಬ ವರದಿಗಳನ್ನು ಶ್ರೀ ಜಗನ್ನಾಥ ದೇವಾಲಯ ಆಡಳಿತ ತಳ್ಳಿಹಾಕಿರುವುದನ್ನು ನಾವು ನೋಡಬಹುದು. ಹಾಗೆಯೇ, ತಮಿಳುನಾಡಿನ ದೇವಾಲಯಗಳಲ್ಲಿ ಸುಮಾರು೨೨೦೦೦ಕಟ್ಟಡಗಳು ಮತ್ತು ಸುಮಾರು೩೩,೦೦೦ತಾಣಗಳಿವೆ. ಈ ಕಟ್ಟಡಗಳು ಮತ್ತು ಸೈಟ್‌ಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಮೌಲ್ಯಗಳಲ್ಲಿ ಗುತ್ತಿಗೆಗೆ ನೀಡಿ, ಭ್ರಷ್ಟ ಅಧಿಕಾರಿಗಳು ಮತ್ತು ಮಂತ್ರಿಗಳು ಗುತ್ತಿಗೆದಾರರ ಪರವಾಗಿ ಭಾರಿ ಮೊತ್ತವನ್ನುಅವರ ಜೇಬಿಗೆ ಹಾಕಿಕೊಳ್ಳುತ್ತಿರುವ ಪ್ರಸಂಗ ಕಂಡುಬಂದಿದೆ.
ದೇವಾಲಯದ ಆಸ್ತಿಯು, ವಾಸ್ತವಿಕವಾಗಿ ಸರಕಾರಿ ಆಸ್ತಿಯಂತೆ ಆಗಿಹೋಗಿದೆ. ಭಾರತದ ಪರಂಪರೆಯ ಭಾಗವಾದ ಪ್ರಾಚೀನ ದೇವಾಲಯಗಳ ವಿಗ್ರಹಗಳು ಕಾಣೆಯಾಗಿವೆ. ಇದರ ಬಗ್ಗೆ ಜವಾಬ್ದಾರಿಯುತರಾಗಿ ನಿಯಮ ಕೈಗೊಳ್ಳುವುದರಲ್ಲಿ ಸರಕಾರ ವಿಫಲವಾಗಿದೆ. ಸರಕಾರದ ನಿಯಂತ್ರಣವುಪೌರೋಹಿತ್ಯದ ಪ್ರಾಚೀನ ವಂಶಾವಳಿಯನ್ನು ಅಡ್ಡಿ ಪಡಿಸುವುದರ ಜತೆಗೆ ಅವರಿಗೆ ಸಿಗಬೇಕಾದ ಗೌರವಕ್ಕೆ ಧಕ್ಕೆ ತಂದಿದೆ. ದೇವಾಲಯಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಭೂ ಅತಿಕ್ರಮಣ , ಭ್ರಷ್ಟಾಚಾರ, ಇತರ ಸಂಸ್ಥೆಗಳಿಗೆ ಭೂಮಿಯನ್ನು ಗುತ್ತಿಗೆ ನೀಡುವುದು, ಹೀಗೆ ಅನೇಕ ಅಡತಡೆಗಳನ್ನು ಹಿಂದೂ ದೇವಾಲಯದಲ್ಲಿ ನೋಡಬಹುದಾಗಿದೆ.
ಈ ಶೋಷಣೆಯ ವಿರುದ್ಧ ದೇಶದಾದ್ಯಂತ ಅನೇಕರು ದನಿ ಎತ್ತಿದ್ದಾರೆ. ತಮಿಳುನಾಡಿನ ದೇವಾಲಯಗಳು ಕೊಳೆಯುವ ಹಂತದಲ್ಲಿದೆ ಎಂದು ಯುನೆಸ್ಕೋ ಹೇಗೆ ಉಲ್ಲೇಖಿಸಿದೆ ಎಂಬುದರ ಬಗ್ಗೆ ಸದ್ಗುರು ಮಾತನಾಡಿದ್ದಾರೆ. ಹಿಂದೂ ದೇವಾಲಯಗಳನ್ನು ನಿಯಂತ್ರಣದಿಂದ ಮುಕ್ತಿಗೊಳಿಸುವುದಕ್ಕೆ ಬೆಂಬಲವಾಗಿ ಸದ್ಗುರು ಟ್ವೀಟ್‌ಗಳನ್ನು ಹಾಕುವುದರ ಜತೆಗೆ ಹಿಂದೂ ದೇವಾಲಯಗಳು ಎದುರಿಸುತ್ತಿರುವ ಮೂಲಭೂತ ಅನ್ಯಾಯದ ಬಗ್ಗೆ ಇತ್ತೀಚೆಗೆ ಪ್ರಸ್ತಾಪಿಸಿರುವುದನ್ನು ನಾವು ಕಾಣಬಹುದು. ಹಿಂದೂ ದೇವಾಲಯಗಳ ನಿಯಂತ್ರಣವು, ಬ್ರಿಟಿಷರು ಆಸ್ತಿ- ಸಂಪತ್ತನ್ನು ಲೂಟಿ ಮಾಡಲು ಬಳಸಿದ ಯಂತ್ರವೇ ಹೊರತು ದೇವಾಲಯಗಳ ಪಾವಿತ್ರ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಅಲ್ಲ.
ಸ್ವಾತಂತ್ರ್ಯ ಸಿಕ್ಕಿ ಅನೇಕ ವರ್ಷಗಳು ಉರುಳಿದ ಮೇಲಾದರೂ, ದಬ್ಬಾಳಿಕೆ – ವಸಾಹತುಶಾಹಿ ಪರಂಪರೆಯನ್ನು ಕೊನೆಗೊಳಿಸಿ, ದೇವಾಲಯಗಳನ್ನು ಸರಕಾರ ನಿಯಂತ್ರಣದಿಂದ ಮುಕ್ತಗೊಳಿಸಬೇಕು. ಒಟ್ಟಾಗಿ, ಜಾತ್ಯಾತೀತದ ನಿಜ ಅರ್ಥಕ್ಕಾಗಿ ಹೋರಾಡಬೇಕು. ಈ ನಿಟ್ಟಿನಲ್ಲಿ, ಚಿದಂಬರಂ ದೇವಸ್ಥಾನ ಮತ್ತು ಪದ್ಮನಾಭ ಸ್ವಾಮಿ ದೇವಾಲಯದ ತೀರ್ಪುಗಳು ಹಿಂದೂ ಸಮುದಾಯಕ್ಕೆ ಭರವಸೆಯ ಕಿರಣವಾಗಿದೆ. ಎಲ್ಲರು ಒಗ್ಗೂಡಿ, ಹಿಂದೂ ಸಮುದಾಯದ ಒಳಿತಿಗಾಗಿ ಹಾಗೆಯೇ ದೇವಾಲಯದ ಉಳಿವಿಗಾಗಿ ದನಿ ಎತ್ತೋಣ. ಅನೇಕ ವರ್ಷಗಳ ದಬ್ಬಾಳಿಕೆಗೆ ನಾಂದಿ ಹಾಡಿ, ಭಾರತೀಯ ಸಮಾಜದ ಬುನಾದಿಯಾಗಿರುವ ದೇವಾಲಯಗಳ ಸಮೃದ್ಧಿಗಾಗಿ ಶ್ರಮಿಸೋಣ.