ಆವಿಷ್ಕಾರಗಳ ಮನ್ವಂತರದಲ್ಲಿ ಕಾಮಧೇನು ಕಟ್ಟಿಕೊಡಬಹುದೇ ಬಂಗಾರದ ಬದುಕು !
ಅಭಿವ್ಯಕ್ತಿ
ವಿಶ್ವನಾಥ ಹೆಗಡೆ
ಕೃಷಿಕ್ಷೇತ್ರದಲ್ಲಿ ಹಲವಾರು ಹೊಸ ಯೋಜನೆಗಳು ಹುಟ್ಟಿಕೊಂಡಿದ್ದರೂ ಸಹ ಕಾರ್ಯಗತವಾಗಿ ಮುಂದುವರಿದಿದ್ದು ಬೆರಳಣಿಕೆಯಷ್ಟು ಎಂದರೆ ತಪ್ಪಾಗಲಿಕ್ಕಿಲ್ಲ. ಕೆಲವೊಮ್ಮೆ ನಮ್ಮದೇ ಹೊಸ ನೀತಿಯ ಅರ್ಥೈಸಲಾಗದೇ ಸೋತರೇ, ಕೆಲವೊಮ್ಮೆ ರಾಜಕೀಯದ ಬಣ್ಣದಲ್ಲಿ ಬೆರಸಿ ಹೊಸ ಯೋಜನೆ ಯನ್ನು ನಾವು ಸ್ವೀಕರಿಸುವ ರೀತಿ. ಒಂದೊಂದು ರಾಜ್ಯದಲ್ಲಿ ಒಂದೊಂದು ರಾಜಕೀಯ ಪಕ್ಷಗಳದ್ದು ಒಂದೊಂದು ಕ್ಯಾತೆ. ಕೊನೆಗೆ ಯಾವುದೂ ಅರ್ಥವಾಗದೇ, ಯೋಜನೆಯ -ಲವು ಸಿಗದೇ, ರೈತರ ಜೀವನವೇ ಶಾಪ ಎಂಬಲ್ಲಿಗೆ ಪ್ರಹಸನ ಮುಗಿಯುತ್ತದೆ.
೨೦೨೦ಕರೋನಾ ಸಮಯವೆಂದರೂ, ಕೆಲವೊಂದು ವಿಷಯದಲ್ಲಿ ನಾವು ಸಾಧಿಸುತ್ತಿರುವ ಪ್ರಗತಿ ಮನಸ್ಸಿಗೆ ಸಮಾಧಾವನ್ನೇನೋ ತರುತ್ತಿದೆ. ಇನ್ನೂ ಸಾಧಿಸುವುದು ಬಹಳವಿದ್ದರೂ ಹಿರಿಯರೊಬ್ಬರು ಹೇಳಿದಂತೆ ಕನಿಷ್ಠ ರೈತ ಮಲಗುವಾಗ ಕೆಟ್ಟದ್ದನ್ನು ಮರೆತು ಸುಂದರ ಕನಸನ್ನು ಕಾಣುವ ಮಟ್ಟಿಗೆ ಕೆಲವೊಂದು ಬೆಳವಣಿಗೆಯಂತೂ ನಡೆಯುತ್ತಿದೆ.
ಇಂದು ರೈತನಿಗೆ ಸಂಬಂಧಿಸಿದಂತೆ ಎರಡು ವಿಷಯಗಳ ಬಗ್ಗೆ ದೇಶದೆಡೆ ಚರ್ಚಿತವಾಗುತ್ತಿರುವುದು ಒಂದು ಕೃಷಿಯ ಕಾನೂನಿನ ಮೇಲಿನ ಹೋರಾಟ,ಇನ್ನೊಂದು ಸದ್ದಿಲ್ಲದೇ ನಡೆಯುತ್ತಿರುವ ರೈತರ ಆದಾಯದ ದ್ವಿಗುಣತೆ. ಕೃಷಿ ಕಾನೂನಿನ ಹೋರಾಟ ದಲ್ಲಿ ನಮಗೆ ಹಳೆಯ ಮಾದರಿಯಲ್ಲಿಯೇಜೀವನ ಸಾಗಿಸುವ ಮಾರ್ಗದಲ್ಲಿ ರೈತರಿದ್ದರೆ, ಇನ್ನೊಂದು ಬಣಕ್ಕೆ ಬೇಕಾಗಿರುವುದು ರೈತರು ಇತರ ದೇಶಗಳಿಗೆ ಸಮನಾದ ಪೈಪೋಟಿ ನೀಡಬಲ್ಲಸರ್ವತೋಮುಖ ಅಭಿವೃದ್ಧಿ.
ಕೃಷಿಕ್ಷೇತ್ರದಲ್ಲಿ ಹಲವಾರು ಹೊಸ ಯೋಜನೆಗಳು ಹುಟ್ಟಿಕೊಂಡಿದ್ದರೂ ಸಹ ಕಾರ್ಯಗತವಾಗಿ ಮುಂದುವರಿದಿದ್ದು ಬೆರಳಣಿಕೆಯಷ್ಟು ಎಂದರೆತಪ್ಪಾಗಲಿಕ್ಕಿಲ್ಲ. ಕೆಲವೊಮ್ಮೆ ನಮ್ಮದೇ ಹೊಸ ನೀತಿಯ ಅರ್ಥೈಸಲಾಗದೇ ಸೋತರೇ, ಕೆಲವೊಮ್ಮೆ ರಾಜಕೀಯದ ಬಣ್ಣದಲ್ಲಿ ಬೆರಸಿ ಹೊಸ ಯೋಜನೆಯನ್ನು ನಾವು ಸ್ವೀಕರಿಸುವ ರೀತಿ. ಒಂದೊಂದು ರಾಜ್ಯದಲ್ಲಿ ಒಂದೊಂದು ರಾಜಕೀಯ ಪಕ್ಷಗಳದ್ದು ಒಂದೊಂದು ಕ್ಯಾತೆ. ಕೊನೆಗೆ ಯಾವುದೂಅರ್ಥವಾಗದೇ, ಯೋಜನೆಯ ಫಲವು ಸಿಗದೇ, ರೈತರ ಜೀವನವೇ ಶಾಪ ಎಂಬಲ್ಲಿಗೆ ಪ್ರಹಸನ ಮುಗಿಯುತ್ತದೆ.
ಇದನ್ನೆಲ್ಲ ನೋಡುವಾಗ ಕುರುಡರು ಮತ್ತು ಆನೆಯ ಕಥೆ ದೃಷ್ಠಾಂತದ ರೂಪದಲ್ಲಿ ಕಣ್ಣೆದುರಿಗೆ ಬರುತ್ತದೆ. ಮಾವುತನೊಬ್ಬ, ಬೆಳೆದ ಸೊಂಡಿಲೇರಿಸಿದ ದಂತದ ದೊಡ್ಡಾನೆಯನ್ನು ಅಂಧರೆ ಹೆಚ್ಚು ತುಂಬಿದ್ದ ಊರಿಗೆ ತಂದ. ಕುರುಡರೆಲ್ಲರೂ ಆನೆಗೆ ಮುತ್ತಿಗೆ ಹಾಕಿ, ಮೈತಟ್ಟಿ, ಮೈದೊಡವಿ, ಅನ್ವೇಷಿಸಿ ಖುಷಿ ಪಟ್ಟರು. ಅತ್ತ ಆನೆ ಮತ್ತೊಂದು ಊರಿಗೆ ಹೋಗುತ್ತಿದ್ದಂತೆ ಅಂಧರ ಚರ್ಚಾಗೋಷ್ಠಿ ಭರ್ಜರಿಯಾಗಿಯೇ ಆರಂಭ ಆಯ್ತು. ಆನೆಯ ಬಾಲವನ್ನಷ್ಟೇ ಸವರಿದ್ದ ಒಬ್ಬ ಅಂಧನ ಪ್ರಕಾರ ಅದು ಹಾವಾಗಿಯೂ , ಕಿವಿಯನ್ನು ಮುಟ್ಟಿದ್ದ ಇನ್ನೊಬ್ಬನ ಪ್ರಕಾರ ಅದು ಮರದಂತೆಯೂ, ದಂತ ಆಯುಧ ವಾಗಿಯೂ, ಸೊಂಡಿಲು ಕಂಬವಾಗಿಯೂ ಅವರಿಗೆ ಗೋಚರಿಸಿತ್ತು.
ವಾದ ವಿವಾದವೇ ಪ್ರಥಮವಾಗಿತ್ತೇ ಹೊರತು, ಅವರವರ ಅಹಂ ಮೊದಲಾಗಿತ್ತೇ ಹೊರತು, ತಿಳಿದವರನ್ನು ಕೇಳುವ, ಹೊಸ ವಿಷಯವನ್ನು ತಿಳಿಯುವ ಮನಸ್ಥಿತಿ ಅವರದಾಗಿರಲಿಲ್ಲ. ನಮ್ಮಲ್ಲೂ ಅದೇ ಆಗಿರುವುದು. ಇಂದು ಗೋವಿನ ವಿಚಾರದ ಜತೆಗೆ ಎರಡು ಹೊಸ ವಿಚಾರಗಳನ್ನು ನಾವು ಅವಲೋಕಿಸ ಲೇಬೇಕು. ಒಂದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಅಡಿಯಲ್ಲಿ ಹೊಸದಾಗಿ ಮುನ್ನಲೆಗೆ ಬಂದ ಹೊಸ ಮಾಹಿತಿ. ಇದು ಹಸುವಿನ ಸಗಣಿ ಯಿಂದ ತಯಾರಾಗುವ ಡಿಸ್ಟೆಂಪರ್ ಪೇಂಟ್ ಮತ್ತು ಎಮಲ್ಷನ್ ಬಳಕೆಗೆ ಬಗ್ಗೆ ಬರುತ್ತಿರುವ ಹೊಸ ಆಶಾಭಾವದ ಬದಲಾವಣೆಗಳು. ಇನ್ನೂ ಡಿಸ್ಟೆಂಪರ್ ಪೇಂಟ್ ಅನ್ನು ಸಿಮೆಂಟ್ ಪೇಂಟ್ ಎಂದೂ ಕರೆಯುತ್ತಾರೆ.
ಪ್ರೈಮರ್ ಅನ್ನು ಬಳಸದೆ ಅಂಥ ಬಣ್ಣವನ್ನು ನೇರವಾಗಿ ಸಿಮೆಂಟ್ ಗೋಡೆಗಳ ಮೇಲೆ ಬೇರೆ ಯಾವುದೇ ಲೇಪನವಿಲ್ಲದೆ ಅನ್ವಯಿಸಬಹುದು. ಒಳಾಂಗಣ ಮತ್ತು ಬಾಹ್ಯ ಗೋಡೆಗಳಿಗೆ ಡಿಸ್ಟೆಂಪರ್ ಪೇಂಟ್‌ಗಳನ್ನು ಬೆಂಗಳೂರಿನಲ್ಲಿ ವರ್ಣಚಿತ್ರಕಾರರು ಬಳಸುತ್ತಾರೆ ಎನ್ನಲಾಗುತ್ತದೆ. ಎಮಲ್ಷನ್ ಹೆಚ್ಚಾಗಿ ಗೋಡೆಗಳು ಮತ್ತು ಚಾವಣಿಗಳಿಗೆ ಬಳಸುವ ಬಣ್ಣವನ್ನು ಸೂಚಿಸುತ್ತದೆ. ಇದು ಬಾಳಿಕೆಗಾಗಿ ಸೇರಿಸಲಾದ ವಿನೈಲ್ ಅಥವಾ ಅಕ್ರಿಲಿಕ್‌ನೊಂದಿಗೆನೀರು ಆಧಾರಿತವಾಗಿದೆ. ದೇಶೀಯ ಬಣ್ಣದ ಉದ್ಯಮವು೫೦ಸಾವಿರ ಕೋಟಿ ರು.ಗಳ ಉದ್ಯಮವೆಂದು ಅಂದಾಜಿಸಲಾಗಿದ್ದು, ಅದರಲ್ಲಿ೧೫ಸಾವಿರ ಕೋಟಿ ಕೇವಲ ಡಿಸ್ಟೆಂಪರ್ ಪೇಂಟ್ ವಹಿವಾಟು ಎಂದೇ ಹೇಳಲಾಗಿದೆ. ಈ ನವೋದ್ಯಮದ ಅಡಿಯಲ್ಲಿ ಖಾದಿ ಇಂಡಿಯಾ ಹೇಳುವಂತೆ ೬,೦೦೦ಕೋಟಿಯ ವಹಿವಾಟಿನ ಗುರಿ ಇರಿಸಿಕೊಂಡಿದೆ.
ಹೋಳಿ ಹಬ್ಬಕ್ಕೆ, ಖಾದಿ ಪ್ರಕೃತಿ ಪೇಂಟ್‌ನೊಂದಿಗೆ ಹಬ್ಬದ ಉತ್ಸಾಹವನ್ನು ಹೊಂದಿಸಲು ನಿಮ್ಮ ಮನೆಗಳನ್ನು ಅಲಂಕರಿಸಿ ಮತ್ತು ಕ್ರಾಂತಿಕಾರಿಉತ್ಪನ್ನವು ನೈಸರ್ಗಿಕ, ವೆಚ್ಚ – ಪರಿಣಾಮಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ – ವಿರೋಽ ಗುಣಗಳನ್ನು ಸಹ ಹೊಂದಿದೆ ಎಂದು ಖಾದಿ ಇಂಡಿಯಾ ಹೇಳಿಕೊಂಡಿದೆ.
ಛತ್ತೀಸ್‌ಗಢದ ಮಹತ್ವಾಕಾಂಕ್ಷೆಯ ಸೂರಜಿ ಗ್ರಾಮ ಯೋಜನೆಯಡಿ ನರ್ವಾ, ಗಾರ್ವಾ, ಘುರ್ವಾ ಮತ್ತು ಬ್ಯಾರಿ ಎಂಬ ಹಳ್ಳಿಗಳಲ್ಲಿ ಅಲ್ಲಿಯ ಸರಕಾರ ರೈತರಿಗಾಗಿ ತಂದ ಹೊಸ ಯೋಜನೆ ಈ  ದೇಶದೊಂದು ಹೊಸ ಅಧ್ಯಾಯ ಆರಂಭಿಸುವಂತೆ ಕಾಣುತ್ತಿದೆ. ಈ ಕಾರಣದಿಂದಾಗಿಯೇ, ಗೋಧನ್ ನ್ಯಾಯ ಯೋಜನೆಯ ಬಗ್ಗೆ ಇಂದು ಇಡೀ ದೇಶದಲ್ಲಿ ಮಾತನಾಡಲಾಗುತ್ತಿದೆ. ಈ ಯೋಜನೆ ಯನ್ನು ಪ್ರಶಂಸಿಸುವುದು ಮಾತ್ರವಲ್ಲ, ವಿವಿಧ ಹಂತಗಳಲ್ಲಿ ಗೌರವಿಸಲಾಗುತ್ತಿದೆ. ೨೦೨೦ರ ಜುಲೈ ೨೦ರಂದು ಪ್ರಾರಂಭವಾದ ಈ ಯೋಜನೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಒಂದು ಹೆಜ್ಜೆಯಾಗಿದೆ. ಗೋಧನ್ ನ್ಯಾಯ ಯೋಜನೆಯಡಿಯಲ್ಲಿ ಸುಮಾರು೧ಲಕ್ಷ೧೮ಸಾವಿರ೬೧೧ಕ್ವಿಂಟಲ್ ಎರೆಹುಳು ಗೊಬ್ಬರ ಉತ್ಪಾದಿಸ ಲಾಗಿದ್ದು, ಈ ಪೈಕಿ ೮೩ಸಾವಿರ ೯೦೦ ಕ್ವಿಂಟಲ್ ಎರೆಹುಳು ಗೊಬ್ಬರ ಈಗಾಗಲೇ ಮಾರಾಟ ಮಾಡಲಾಗಿದೆ.
ಈ ಯೋಜನೆಯಿಂದಾಗಿ ಛತ್ತೀಸ್‌ಗಡ ರಾಜ್ಯದ ಸುಮಾರು೧ಲಕ್ಷ೬೨ಸಾವಿರದ ೪೯೭ ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲವಾಗುತ್ತಿದೆ. ಇದರಲ್ಲಿ೭೦ಸಾವಿರ೨೯೯ಭೂಹೀನ ಗ್ರಾಮಸ್ಥರು ಸೇರಿzರೆ ಎಂದು ಅದರ ಮಾಹಿತಿ ಹೇಳುತ್ತಿದೆ. ಈ ಯೋಜನೆಯಡಿ ಈವರೆಗೆ ೪೪ ಲಕ್ಷಕ್ವಿಂಟಾಲ್ ಹಸುವಿನ ಸಗಣಿ ದನ ಸಾಕುವವರಿಂದ ಖರೀದಿಸಲಾಗಿದೆ. ಇದು ರಾಜ್ಯದಲ್ಲಿ ಸಾವಯವ ಕೃಷಿಗೆ ಪ್ರಚೋದನೆ ನೀಡುತ್ತಿದೆ. ಕೃಷಿ ಉತ್ಪನ್ನಗಳಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಆ ಮೂಲಕ ಗ್ರಾಮಸ್ಥರಿಗೆ ಉತ್ತಮ ಆದಾಯದ ಮೂಲವನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ. ಗೋ-ಧನ್ ನ್ಯಾಯ ಯೋಜನೆ ಛತ್ತೀಸ್‌ಗಡ ಸರಕಾರದ ಗೋವು ಸಗಣಿ ಖರೀದಿ ಯೋಜನೆಯನ್ನು ಉಲ್ಲೇಖಿಸಿ ಕೃಷಿಯ ಸ್ಥಾಯಿ ಸಮಿತಿಯು ರೈತರಿಂದ ಜಾನುವಾರುಗಳನ್ನು ಸಂಗ್ರಹಿಸುವ ಯೋಜನೆಯನ್ನು ಪ್ರಾರಂಭಿಸಲು ಕೇಂದ್ರವನ್ನು ಕೇಳಿತು.
ಲೋಕಸಭೆ ಯಲ್ಲೂ ಇದರ ಬಗ್ಗೆ ಮಾಹಿತಿ ಕೇಳಲಾಗಿದ್ದು ಪ್ರಶಂಸೆ ಕೇಳಿಬರುತ್ತಿದೆ. ಇದರ ನಡುವೆಯೂ ಕಾಡುವ ಕುತೂಹಲವೆಂದರೆ ಈ ಎರಡು ಯೋಜನೆಗಳೆಷ್ಟು ಬಲಗೊಳ್ಳಬಹುದೆಂಬುದು ಮಾತ್ರ. ಒಂದು ವೇಳೆ ಯಾವುದೇ ರಾಜಕೀಯದ ವಾಸನೆಯ ಜಾಡು ಹಿಡಿಯದೆ ಹೋದಲ್ಲಿ ಮಾತ್ರ ಇವೆರಡೂ ಗುರಿ ಕಾಣಬಹುದೇನೋ. ಮುಂದೆ ಅಮ್ಮ ಹೋಟೆಲ, ಹಾಲಿನ ಧನ ಸಹಾಯ, ಸಾಲಮನ್ನಾದಂತೆ ಸಗಣಿ ರಾಜಕೀಯ ತುಂಬದೇ, ನಿಜವಾದ ಕಾಳಜಿ ಇದ್ದಲ್ಲಿ ಮಾತ್ರ ಇದಕ್ಕೊಂದು ಅರ್ಥ ಸಿಗಬಹುದು.
ಕರ್ನಾಟಕದಲ್ಲಿ ನೋಡಿದರೆ ಸರಕಾರಗಳು ಪೈಪೋಟಿಯ ಮೇಲೆ ರೈತರಿಗೆ ಹಾಲಿಗೆ ಧನ ಸಹಾಯ ನೀಡಿದ್ದೇವೆ ಹೊರತು ಹಾಲಿನ ಉದ್ಯಮದಲ್ಲಿಕ್ರಾಂತಿಕಾರಿ ಚೇತನ ಏನೂ ಕಾಣಲಿಲ್ಲ. ರೈತರಿಗೆ ಹಾಲಿನ ದರ ಹೆಚ್ಚಾಯಿತೇ ಹೊರತು ಅವರ ಆದಾಯದಲ್ಲಿ ಮಹತ್ತರ ಬದಲಾವಣೆ ಕಂಡು ಬಂದಿದ್ದು ಕಡಿಮೆ. ಯಾವುದೇ ಹೊಸ ಯೋಜನೆಗಳು ರಾಜಕೀಯ, ಮತ, ಜಾತಿ ಮತ್ತು ಕಮಿಷನ್ ಎಂಬ ರಾಕ್ಷಸತೆಯ ಮಧ್ಯೆ ಹಂಚಿ ಹೋಗಿದ್ದೇ ಹೆಚ್ಚು. ನಮ್ಮಲ್ಲಿಬದಲಾವಣೆ ಇಲ್ಲವೆಂದಲ್ಲ, ಆದರೆ ನಾವು ತೆಗೆದುಕೊಂಡ ನಿರ್ಧಾರ ಮತ್ತು ಸಾಧಿಸಿದ ವೇಗ ನಿರೀಕ್ಷಿತವಾಗಿಲ್ಲ ಅಷ್ಟೇ.
ಏನಾದರೂ ಹೊಸ ಬದಲಾವಣೆಗಳು ಹುಟ್ಟಿದ್ದು ಹೊಸತಲೆಮಾರಿನ ಆಲೋಚನೆಯ ರೈತರು ಮತ್ತು ನವ ಉದ್ಯಮ ಗಳಿಂದಲೇ ಎಂಬುದು ಎಲ್ಲರಿಗೂ ಗೊತ್ತು.೨೦೨೨ಕ್ಕೆ೨೦೨೦ಕರೋನಾ ಸಮಯವೆಂದರೂ, ಕೆಲವೊಂದು ವಿಷಯದಲ್ಲಿ ನಾವು ಸಾಧಿಸುತ್ತಿರುವ ಪ್ರಗತಿ ಮನಸ್ಸಿಗೆ ಸಮಾಧಾನವನ್ನೇನೋ ತರುತ್ತಿದೆ. ಇನ್ನೂ ಸಾಧಿಸುವುದು ಬಹಳವಿದ್ದರೂ ಹಿರಿಯರೊಬ್ಬರು ಹೇಳಿದಂತೆ ಕನಿಷ್ಠ ರೈತ ಮಲಗುವಾಗ ಕೆಟ್ಟದ್ದನ್ನು ಮರೆತು ಸುಂದರಕನಸನ್ನು ಕಾಣುವ ಮಟ್ಟಿಗೆ ಕೆಲವೊಂದು ಬೆಳವಣಿಗೆ ಯಂತೂ ನಡೆಯುತ್ತಿದೆ.
ಇಂದು ರೈತನಿಗೆ ಸಂಬಂಧಿಸಿದಂತೆ ಎರಡು ವಿಷಯಗಳ ಬಗ್ಗೆ ದೇಶದೆಡೆ ಚರ್ಚಿತವಾಗುತ್ತಿರುವುದು ಒಂದು ಕೃಷಿಯ ಕಾನೂನಿನ ಮೇಲಿನ ಹೋರಾಟ, ಇನ್ನೊಂದು ಸದ್ದಿಲ್ಲದೇ ನಡೆಯುತ್ತಿರುವ ರೈತರ ಆದಾಯದ ದ್ವಿಗುಣತೆ. ಕೃಷಿ ಕಾನೂನಿನ ಹೋರಾಟದಲ್ಲಿ ನಮಗೆ ಹಳೆಯ ಮಾದರಿಯಲ್ಲಿಯೇಜೀವನ ಸಾಗಿಸುವ ಮಾರ್ಗದಲ್ಲಿ ರೈತರಿದ್ದರೆ, ಇನ್ನೊಂದು ಬಣಕ್ಕೆ ಬೇಕಾಗಿರುವುದು ರೈತರು ಇತರ ದೇಶಗಳಿಗೆ ಸಮನಾದ ಪೈಪೋಟಿ ನೀಡಬಲ್ಲಸರ್ವತೋಮುಖ ಅಭಿವೃದ್ಧಿ.
ಕೃಷಿಕ್ಷೇತ್ರದಲ್ಲಿ ಹಲವಾರು ಹೊಸ ಯೋಜನೆಗಳು ಹುಟ್ಟಿಕೊಂಡಿದ್ದರೂ ಸಹ ಕಾರ್ಯಗತವಾಗಿ ಮುಂದುವರಿದಿದ್ದು ಬೆರಳಣಿಕೆಯಷ್ಟು ಎಂದರೆತಪ್ಪಾಗಲಿಕ್ಕಿಲ್ಲ. ಕೆಲವೊಮ್ಮೆ ನಮ್ಮದೇ ಹೊಸ ನೀತಿಯ ಅರ್ಥೈಸಲಾಗದೇ ಸೋತರೇ, ಕೆಲವೊಮ್ಮೆ ರಾಜಕೀಯದ ಬಣ್ಣದಲ್ಲಿ ಬೆರಸಿ ಹೊಸ ಯೋಜನೆಯನ್ನು ನಾವು ಸ್ವೀಕರಿಸುವ ರೀತಿ. ಒಂದೊಂದು ರಾಜ್ಯದಲ್ಲಿ ಒಂದೊಂದು ರಾಜಕೀಯ ಪಕ್ಷಗಳದ್ದು ಒಂದೊಂದು ಕ್ಯಾತೆ. ಕೊನೆಗೆ ಯಾವುದೂಅರ್ಥವಾಗದೇ, ಯೋಜನೆಯ ಫಲವು ಸಿಗದೇ, ರೈತರ ಜೀವನವೇ ಶಾಪ ಎಂಬಲ್ಲಿಗೆ ಪ್ರಹಸನ ಮುಗಿಯುತ್ತದೆ. ಇದನ್ನೆಲ್ಲ ನೋಡುವಾಗ ಕುರುಡರುಮತ್ತು ಆನೆಯ ಕಥೆ ದೃಷ್ಠಾಂತದ ರೂಪದಲ್ಲಿ ಕಣ್ಣೆದುರಿಗೆ ಬರುತ್ತದೆ. ಮಾವುತನೊಬ್ಬ, ಬೆಳೆದ ಸೊಂಡಿಲೇರಿಸಿದ ದಂತದ ದೊಡ್ಡಾನೆಯನ್ನು ಅಂಧರೆಹೆಚ್ಚು ತುಂಬಿದ್ದ ಊರಿಗೆ ತಂದ.
ಕುರುಡರೆಲ್ಲರೂ ಆನೆಗೆ ಮುತ್ತಿಗೆ ಹಾಕಿ, ಮೈತಟ್ಟಿ, ಮೈದೊಡವಿ, ಅನ್ವೇಷಿಸಿ ಖುಷಿ ಪಟ್ಟರು. ಅತ್ತ ಆನೆ ಮತ್ತೊಂದು ಊರಿಗೆ ಹೋಗುತ್ತಿದ್ದಂತೆ ಅಂಧರ ಚರ್ಚಾಗೋಷ್ಠಿ ಭರ್ಜರಿಯಾಗಿಯೇ ಆರಂಭ ಆಯ್ತು. ಆನೆಯ ಬಾಲವನ್ನಷ್ಟೇ ಸವರಿದ್ದ ಒಬ್ಬ ಅಂಧನ ಪ್ರಕಾರ ಅದು ಹಾವಾಗಿಯೂ , ಕಿವಿಯನ್ನು ಮುಟ್ಟಿದ್ದ ಇನ್ನೊಬ್ಬನ ಪ್ರಕಾರ ಅದು ಮರದಂತೆಯೂ, ದಂತ ಆಯುಧವಾಗಿಯು, ಸೊಂಡಿಲು ಕಂಬವಾಗಿಯು ಅವರಿಗೆ ಗೋಚರಿಸಿತ್ತು. ವಾದ ವಿವಾದವೇ ಪ್ರಥಮವಾಗಿತ್ತೇ ಹೊರತು, ಅವರವರ ಅಹಂ ಮೊದಲಾಗಿತ್ತೇ ಹೊರತು, ತಿಳಿದವರನ್ನು ಕೇಳುವ, ಹೊಸ ವಿಷಯವನ್ನು ತಿಳಿಯುವ ಮನಸ್ಥಿತಿ ಅವರದಾಗಿರಲಿಲ್ಲ. ನಮ್ಮಲ್ಲೂ ಅದೇ ಆಗಿರುವುದು.
ಇಂದು ಗೋವಿನ ವಿಚಾರದ ಜತೆಗೆ ಎರಡು ಹೊಸ ವಿಚಾರಗಳನ್ನು ನಾವು ಅವಲೋಕಿಸಲೇಬೇಕು. ಒಂದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಅಡಿಯಲ್ಲಿ ಹೊಸದಾಗಿ ಮುನ್ನಲೆಗೆ ಬಂದ ಹೊಸ ಮಾಹಿತಿ. ಇದು ಹಸುವಿನ ಸಗಣಿಯಿಂದ ತಯಾರಾಗುವ ಡಿಸ್ಟೆಂಪರ್ ಪೇಂಟ್ ಮತ್ತು ಎಮಲ್ಷನ್ ಬಳಕೆಗೆ ಬಗ್ಗೆ ಬರುತ್ತಿರುವ ಹೊಸ ಆಶಾಭಾವದ ಬದಲಾವಣೆಗಳು. ಇನ್ನೂ ಡಿಸ್ಟೆಂಪರ್ ಪೇಂಟ್ ಅನ್ನು ಸಿಮೆಂಟ್ ಪೇಂಟ್ ಎಂದೂ ಕರೆಯುತ್ತಾರೆ. ಪ್ರೈಮರ್ ಅನ್ನು ಬಳಸದೆ ಅಂಥಬಣ್ಣವನ್ನು ನೇರವಾಗಿ ಸಿಮೆಂಟ್ ಗೋಡೆಗಳ ಮೇಲೆ ಬೇರೆ ಯಾವುದೇ ಲೇಪನವಿಲ್ಲದೆ ಅನ್ವಯಿಸಬಹುದು.
ಒಳಾಂಗಣ ಮತ್ತು ಬಾಹ್ಯ ಗೋಡೆಗಳಿಗೆ ಡಿಸ್ಟೆಂಪರ್ ಪೇಂಟ್‌ಗಳನ್ನು ಬೆಂಗಳೂರಿನಲ್ಲಿ ವರ್ಣಚಿತ್ರಕಾರರು ಬಳಸುತ್ತಾರೆ ಎನ್ನಲಾಗುತ್ತದೆ. ಎಮಲ್ಷನ್ ಹೆಚ್ಚಾಗಿ ಗೋಡೆಗಳು ಮತ್ತು ಚಾವಣಿಗಳಿಗೆ ಬಳಸುವ ಬಣ್ಣವನ್ನು ಸೂಚಿಸುತ್ತದೆ. ಇದು ಬಾಳಿಕೆಗಾಗಿ ಸೇರಿಸಲಾದ ವಿನೈಲ್ ಅಥವಾ ಅಕ್ರಿಲಿಕ್‌ನೊಂದಿಗೆನೀರು ಆಧಾರಿತವಾಗಿದೆ. ದೇಶೀಯ ಬಣ್ಣದ ಉದ್ಯಮವು೫೦ಸಾವಿರ ಕೋಟಿ ರು.ಗಳ ಉದ್ಯಮವೆಂದು ಅಂದಾಜಿಸಲಾಗಿದ್ದು, ಅದರಲ್ಲಿ೧೫ಸಾವಿರ ಕೋಟಿ ಕೇವಲ ಡಿಸ್ಟೆಂಪರ್ ಪೇಂಟ್ ವಹಿವಾಟು ಎಂದೇ ಹೇಳಲಾಗಿದೆ. ಈ ನವೋದ್ಯಮದ ಅಡಿಯಲ್ಲಿ ಖಾದಿ ಇಂಡಿಯಾ ಹೇಳುವಂತೆ೬,೦೦೦ಕೋಟಿಯ ವಹಿವಾಟಿನ ಗುರಿ ಇರಿಸಿಕೊಂಡಿದೆ.
ಹೋಳಿ ಹಬ್ಬಕ್ಕೆ, ಖಾದಿ ಪ್ರಕೃತಿ ಪೇಂಟ್‌ನೊಂದಿಗೆ ಹಬ್ಬದ ಉತ್ಸಾಹವನ್ನು ಹೊಂದಿಸಲು ನಿಮ್ಮ ಮನೆಗಳನ್ನು ಅಲಂಕರಿಸಿ ಮತ್ತು ಕ್ರಾಂತಿಕಾರಿಉತ್ಪನ್ನವು ನೈಸರ್ಗಿಕ, ವೆಚ್ಚ – ಪರಿಣಾಮಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ – ವಿರೋಧಿ ಗುಣಗಳನ್ನು ಸಹ ಹೊಂದಿದೆ ಎಂದು ಖಾದಿ ಇಂಡಿಯಾ ಹೇಳಿಕೊಂಡಿದೆ. ಛತ್ತೀಸ್‌ಗಢದ ಮಹತ್ವಾಕಾಂಕ್ಷೆಯ ಸೂರಜಿ ಗ್ರಾಮ ಯೋಜನೆಯಡಿ ನರ್ವಾ, ಗಾರ್ವಾ, ಘುರ್ವಾ ಮತ್ತು ಬ್ಯಾರಿ ಎಂಬ ಹಳ್ಳಿಗಳಲ್ಲಿ ಅಲ್ಲಿಯ ಸರಕಾರ ರೈತರಿಗಾಗಿ ತಂದ ಹೊಸ ಯೋಜನೆ ಈ ದೇಶದೊಂದು ಹೊಸ ಅಧ್ಯಾಯ ಆರಂಭಿಸುವಂತೆ ಕಾಣುತ್ತಿದೆ. ಈ ಕಾರಣದಿಂದಾಗಿಯೇ, ಗೋಧನ್ ನ್ಯಾಯ ಯೋಜನೆಯ ಬಗ್ಗೆ ಇಂದು ಇಡೀ ದೇಶದಲ್ಲಿ ಮಾತನಾಡಲಾಗುತ್ತಿದೆ. ಈ ಯೋಜನೆಯನ್ನು ಪ್ರಶಂಸಿಸುವುದು ಮಾತ್ರವಲ್ಲ, ವಿವಿಧ ಹಂತಗಳಲ್ಲಿ ಗೌರವಿಸಲಾಗುತ್ತಿದೆ.
೨೦೨೦ರ ಜುಲೈ೨೦ರಂದು ಪ್ರಾರಂಭವಾದ ಈ ಯೋಜನೆ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಒಂದು ಹೆಜ್ಜೆಯಾಗಿದೆ. ಗೋಧನ್ ನ್ಯಾಯ ಯೋಜನೆಯಡಿಯಲ್ಲಿ ಸುಮಾರು೧ಲಕ್ಷ೧೮ಸಾವಿರ೬೧೧ಕ್ವಿಂಟಲ್ ಎರೆಹುಳು ಗೊಬ್ಬರ ಉತ್ಪಾದಿಸ ಲಾಗಿದ್ದು, ಈ ಪೈಕಿ೮೩ಸಾವಿರ೯೦೦ಕ್ವಿಂಟಲ್ ಎರೆಹುಳು ಗೊಬ್ಬರ ಈಗಾಗಲೇ ಮಾರಾಟ ಮಾಡಲಾಗಿದೆ. ಈ ಯೋಜನೆಯಿಂದಾಗಿ ಛತ್ತೀಸ್‌ಗಡ ರಾಜ್ಯದ ಸುಮಾರು೧ಲಕ್ಷ೬೨ಸಾವಿರದ೪೯೭ಜಾನುವಾರು ಸಾಕಾಣಿಕೆದಾರರಿಗೆ ಅನುಕೂಲವಾಗುತ್ತಿದೆ. ಇದರಲ್ಲಿ೭೦ಸಾವಿರ೨೯೯ಭೂಹೀನ ಗ್ರಾಮಸ್ಥರು ಸೇರಿದ್ದಾರೆ ಎಂದು ಅದರ ಮಾಹಿತಿ ಹೇಳುತ್ತಿದೆ. ಈ ಯೋಜನೆಯಡಿ ಈವರೆಗೆ೪೪ಲಕ್ಷ ಕ್ವಿಂಟಾಲ್ ಹಸುವಿನ ಸಗಣಿ ದನ ಸಾಕುವವರಿಂದ ಖರೀದಿಸಲಾಗಿದೆ.
ಇದು ರಾಜ್ಯದಲ್ಲಿ ಸಾವಯವ ಕೃಷಿಗೆ ಪ್ರಚೋದನೆ ನೀಡುತ್ತಿದೆ. ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಆ ಮೂಲಕ ಗ್ರಾಮಸ್ಥರಿಗೆ ಉತ್ತಮ ಆದಾಯದ ಮೂಲವನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ.ಗೋ-ಧನ್ನ್ಯಾಯ ಯೋಜನೆ ಛತ್ತೀಸ್‌ಗಡ ಸರಕಾರದ ಗೋವು ಸಗಣಿ ಖರೀದಿ ಯೋಜನೆಯನ್ನು ಉಲ್ಲೇಖಿಸಿ ಕೃಷಿಯ ಸ್ಥಾಯಿ ಸಮಿತಿಯು ರೈತರಿಂದ ಜಾನುವಾರು ಗಳನ್ನು ಸಂಗ್ರಹಿಸುವ ಯೋಜನೆಯನ್ನು ಪ್ರಾರಂಭಿಸಲು ಕೇಂದ್ರವನ್ನು ಕೇಳಿತು. ಲೋಕಸಭೆಯಲ್ಲೂ ಇದರ ಬಗ್ಗೆ ಮಾಹಿತಿ ಕೇಳಲಾಗಿದ್ದು ಪ್ರಶಂಸೆ ಕೇಳಿಬರುತ್ತಿದೆ.
ಇದರ ನಡುವೆಯೂ ಕಾಡುವ ಕುತೂಹಲವೆಂದರೆ ಈ ಎರಡು ಯೋಜನೆಗಳೆಷ್ಟು ಬಲಗೊಳ್ಳಬಹುದೆಂಬುದು ಮಾತ್ರ. ಒಂದು ವೇಳೆ ಯಾವುದೇರಾಜಕೀಯದ ವಾಸನೆಯ ಜಾಡು ಹಿಡಿಯದೆ ಹೋದಲ್ಲಿ ಮಾತ್ರ ಇವೆರಡೂ ಗುರಿ ಕಾಣಬಹುದೇನೋ. ಮುಂದೆ ಅಮ್ಮ ಹೋಟೆಲ್, ಹಾಲಿನ ಧನ ಸಹಾಯ, ಸಾಲಮನ್ನಾದಂತೆ ಸಗಣಿ ರಾಜಕೀಯ ತುಂಬದೇ, ನಿಜವಾದ ಕಾಳಜಿ ಇದ್ದಲ್ಲಿ ಮಾತ್ರ ಇದಕ್ಕೊಂದು ಅರ್ಥ ಸಿಗಬಹುದು.
ಕರ್ನಾಟಕದಲ್ಲಿ ನೋಡಿದರೆ ಸರಕಾರಗಳು ಪೈಪೋಟಿಯ ಮೇಲೆ ರೈತರಿಗೆ ಹಾಲಿಗೆ ಧನ ಸಹಾಯ ನೀಡಿದ್ದೇವೆ ಹೊರತು ಹಾಲಿನ ಉದ್ಯಮದಲ್ಲಿಕ್ರಾಂತಿಕಾರಿ ಚೇತನ ಏನೂ ಕಾಣಲಿಲ್ಲ. ರೈತರಿಗೆ ಹಾಲಿನ ದರ ಹೆಚ್ಚಾಯಿತೇ ಹೊರತು ಅವರ ಆದಾಯದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದ್ದು ಕಡಿಮೆ. ಯಾವುದೇ ಹೊಸ ಯೋಜನೆಗಳು ರಾಜಕೀಯ, ಮತ, ಜಾತಿ ಮತ್ತು ಕಮಿಷನ್ ಎಂಬ ರಾಕ್ಷಸತೆಯ ಮಧ್ಯೆ ಹಂಚಿ ಹೋಗಿದ್ದೇ ಹೆಚ್ಚು. ನಮ್ಮಲ್ಲಿ ಬದಲಾವಣೆ ಇಲ್ಲವೆಂದಲ್ಲ, ಆದರೆ ನಾವು ತೆಗೆದುಕೊಂಡ ನಿರ್ಧಾರ ಮತ್ತು ಸಾಧಿಸಿದ ವೇಗ ನಿರೀಕ್ಷಿತವಾಗಿಲ್ಲ ಅಷ್ಟೇ.
ಏನಾದರೂ ಹೊಸ ಬದಲಾವಣೆಗಳು ಹುಟ್ಟಿದ್ದು ಹೊಸತಲೆಮಾರಿನ ಆಲೋಚನೆಯ ರೈತರು ಮತ್ತು ನವ ಉದ್ಯಮ ಗಳಿಂದಲೇ ಎಂಬುದು ಎಲ್ಲರಿಗೂ ಗೊತ್ತು.೨೦೨೨ಕ್ಕೆ ರೈತರ ಆದಾಯ ದುಪ್ಪಟ್ಟು ಹೆಚ್ಚಿಸುವ ಯೋಜನೆಗಳು, ಕಲ್ಯಾಣ ಯೋಜನೆಗಳು ಆದಾಗ ಮಾತ್ರ ಹೊಸ ಆವಿಷ್ಕಾರಗಳ ಮನ್ವಂತರದಲ್ಲಿ ಕಾಮಧೇನು ನಿಜವಾಗಿಯೂ ರೈತರಿಗೆ ಬಂಗಾರದಂಥ ಬದುಕಿಗೆ ಮತ್ತೊಂದು ಆಧಾರವಾಗಬಹುದು.
ರೈತರ ಆದಾಯ ದುಪ್ಪಟ್ಟು ಹೆಚ್ಚಿಸುವ ಯೋಜನೆಗಳು, ಕಲ್ಯಾಣ ಯೋಜನೆಗಳು ಆದಾಗ ಮಾತ್ರ ಹೊಸ ಆವಿಷ್ಕಾರಗಳ ಮನ್ವಂತರದಲ್ಲಿ ಕಾಮಧೇನುನಿಜವಾಗಿಯೂ ರೈತರಿಗೆ ಬಂಗಾರದಂಥ ಬದುಕಿಗೆ ಮತ್ತೊಂದು ಆಧಾರವಾಗಬಹುದು.
ಇಂದು ಗೋವಿನ ವಿಚಾರದ ಜತೆಗೆ ಎರಡು ಹೊಸ ವಿಚಾರಗಳನ್ನು ನಾವು ಅವಲೋಕಿಸಲೇಬೇಕು. ಒಂದು ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಅಡಿಯಲ್ಲಿ ಹೊಸದಾಗಿ ಮುನ್ನಲೆಗೆ ಬಂದ ಹೊಸ ಮಾಹಿತಿ. ಇದು ಹಸುವಿನ ಸಗಣಿಯಿಂದ ತಯಾರಾಗುವ ಡಿಸ್ಟೆಂಪರ್ ಪೇಂಟ್ ಮತ್ತು ಎಮಲ್ಷನ್ಬಳಕೆಗೆ ಬಗ್ಗೆ ಬರುತ್ತಿರುವ ಹೊಸ ಆಶಾಭಾವದ ಬದಲಾವಣೆಗಳು. ಇನ್ನೂ ಡಿಸ್ಟೆಂಪರ್ ಪೇಂಟ್ ಅನ್ನು ಸಿಮೆಂಟ್ ಪೇಂಟ್ ಎಂದೂ ಕರೆಯುತ್ತಾರೆ.ಪ್ರೈಮರ್ ಅನ್ನು ಬಳಸದೆ ಅಂಥ ಬಣ್ಣವನ್ನು ನೇರವಾಗಿ ಸಿಮೆಂಟ್ ಗೋಡೆಗಳ ಮೇಲೆ ಬೇರೆ ಯಾವುದೇ ಲೇಪನವಿಲ್ಲದೆ ಅನ್ವಯಿಸಬಹುದು.