ಜನರ ವಿಶ್ವಾಸ ಕಳೆದುಕೊಂಡು ತಣ್ಣಗಾಗುತ್ತಿರುವ ರೈತ ಹೋರಾಟ
ಅವಲೋಕನ
ಗಣೇಶ್ ಭಟ್ ವಾರಣಾಸಿ
ಕೇಂದ್ರ ಸರಕಾರವು ಜಾರಿ ಮಾಡಿದ ಹೊಸ ರೈತ ಕಾಯಿದೆಯನ್ನು ವಿರೋಧಿಸಿ ದೇಶದ ರೈತ ಸಂಘಟನೆಗಳು ಹಲವು ತಿಂಗಳು ಗಳಿಂದ ಪ್ರತಿಭಟನೆ ನಡೆಸುತ್ತಿವೆ. ಮಾರ್ಚ್ ತಿಂಗಳ21ರಂದು ಸಂಯುಕ್ತ ಕಿಸಾನ್ ಮೋರ್ಚಾವು ಕಾಯಿದೆ ವಿರೋಧಿಸಿ ಭಾರತ್ ಬಂದ್‌ಗೆ ಕರೆ ಕೊಟ್ಟಿತ್ತು. ಆದರೆ ಈ ಬಂದ್ ಕರೆಗೆ ಜನರು ಅದರಲ್ಲೂ ರೈತರು ಬಹಳ ನೀರಸ ಪ್ರತಿಕ್ರಿಯೆ ಕೊಟ್ಟಿರುವುದು ಕಂಡು ಬಂದಿದೆ.
2020ರ ನವೆಂಬರ್ ತಿಂಗಳಲ್ಲಿ ರೈತರ ಪ್ರತಿಭಟನೆಗಳು ಆರಂಭವಾದಾಗ ಈ ಹೋರಾಟಕ್ಕೆ ಭಾರೀ ಜನ ಬೆಂಬಲವಿತ್ತು. ಪಂಜಾಬ, ಹರಿಯಾಣಾ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗಗದ ರೈತರಿಂದ ಬಹಳ ಬೆಂಬಲ ವ್ಯಕ್ತವಾಗಿತ್ತು. ಡಿಸೆಂಬರ್ತಿಂಗಳಿಂದಲೇ ದೆಹಲಿಯ ಸಿಂಘು ಬಾರ್ಡರ್, ಘಾಜೀಪುರ್, ತಿಕ್ರಿ, ಔಚಾಂಡಿ, ಪಿಯಾವು ಮನಿಯಾರಿ, ಮಂಗೇಶ್ ಮೊದಲಾದ ಗಡಿಗಳಲ್ಲಿ ಸಾವಿರಗಟ್ಟಲೆ ಸಂಖ್ಯೆಯಲ್ಲಿ ರೈತರು ಬೀಡುಬಿಟ್ಟಿದ್ದರು.
ಭಾರತೀಯ ಕಿಸಾನ್ ಯೂನಿಯನ್ ಇದರ ಮುಖ್ಯಸ್ಥ ರಾಕೇಶ್ ಟಿಕಾಯತ್‌ನ ಸಭೆಗಳಲ್ಲಿ ರೈತರು ತುಂಬಿ ತುಳುಕುತ್ತಿದ್ದರು. ಆದರೆ ನಂತರ ನಡೆದ ಅನಪೇಕ್ಷಿಸಿತ ಬೆಳವಣಿಗೆಗಳ ನಂತರ ರೈತರ ಹೋರಾಟಕ್ಕೆ ಜನ ಬೆಂಬಲವು ಬಹಳ ವೇಗವಾಗಿ ಇಳಿಯು ತ್ತಿರುವುದು ಕಂಡುಬರುತ್ತಿದೆ. ಮಾರ್ಚ್21ರ ಭಾರತ್ ಬಂದ ಸಂಪೂರ್ಣವಾಗಿ ವಿಫಲವಾಗಿರುವುದೂ ರೈತರ ಹೋರಾಟಕ್ಕೆ ಜನ ಬೆಂಬಲವು ಕಡಿಮೆಯಾಗುತ್ತಿರು ವುದರ ಸೂಚನೆಯೇ.
ಭಾರತದ ಗಣರಾಜ್ಯೋತ್ಸವ ದಿನವಾದ ಜನವರಿ26ರಂದು ಸಾವಿರಾರು ಸಂಖ್ಯೆಯಲ್ಲಿ ರೈತರು ನವದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಬಹಳ ದಾಂಧಲೆ ನಡೆಸಿದರು. ದೆಹಲಿ ಪೊಲೀಸರು ಶಾಂತಿಯುತ ಪ್ರತಿಭಟನೆ ನಡೆಸಲು ರೈತ ಮುಖಂಡರಿಗೆ ಅನುಮತಿ ಕೊಟ್ಟಿದ್ದರು. ಆದರೆ ರೈತರು ಪೊಲೀಸರು ರಚಿಸಿದ್ದ ತಡೆಗೋಡೆಗಳಿಗೆ ಟ್ರ್ಯಾಕ್ಟರ್‌ಗಳನ್ನು ಡಿಕ್ಕಿ ಹೊಡೆಸಿ ತಡೆಗೋಡೆ ಗಳನ್ನು ಮುರಿದು ದೆಹಲಿಗೆ ನುಗ್ಗಿದರು.
ದೆಹಲಿಯ ರಸ್ತೆಗಳಲ್ಲಿ ರೈತರು ಯದ್ವಾ ತದ್ವಾ ಟ್ರ್ಯಾಕ್ಟರ್ ಗಳನ್ನು ಓಡಿಸಿದರು. ಪೊಲೀಸರನ್ನು ಮೇಲೆಯೇ ಟ್ರ್ಯಾಕ್ಟರ್ ಹತ್ತಿಸುವ ಪ್ರಯತ್ನವನ್ನೂ ಮಾಡಲಾಯಿತು. ಕೈಗಳಲ್ಲಿ ಖಡ್ಗ, ಚಂದ್ರಾಯುಧ ಗಳಂಥ ಮಾರಕಾಸಗಳನ್ನು ಹಿಡಿದಿದ್ದ ಪಂಜಾಬಿ ರೈತರುಪೊಲೀಸರ ಮೇಲೆ ಆಕ್ರಮಣವನ್ನು ಮಾಡಿದರು. ರೈತರ ಆಕ್ರಮಣದಿಂದಾಗಿ300ಕ್ಕೂ ಹೆಚ್ಚಿನ ಸಂಖ್ಯೆಯ ಪೊಲೀಸರು ಗಾಯಾಳುಗಳಾಗಿ ಆಸ್ಪತ್ರೆ ಸೇರುವಂತಾಯಿತು. ಸಾರ್ವಜನಿಕ ಸಾರಿಗೆಯ ಬಸ್, ಪೊಲೀಸ್ ಬಸ್‌ಗಳಿಗೂ ಬಹಳ ಹಾನಿ ಮಾಡಲಾ ಯಿತು.
ಪ್ರತೀ ವರ್ಷ ಸ್ವಾತಂತ್ರ್ಯೋತ್ಸವದಂದು ಪ್ರಧಾನಿಗಳು ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡುವ ಸ್ಥಳವಾದ ಐತಿಹಾಸಿಕ ಕೆಂಪುಕೋಟೆಗೂ ನುಗ್ಗಿದ ಪುಂಡ ರೈತರು ಅಲ್ಲಿದ್ದ ರಾಷ್ಟ್ರಧ್ವಜವನ್ನು ಕಿತ್ತು ತೆಗೆದು ಅಲ್ಲಿ ನಿಶಾನ್ ಸಾಹಿಬ್ ಪತಾಕೆ ಯನ್ನು ಹಾರಿಸಿದರು. ಕೆಂಪುಕೋಟೆಯ ಒಳಗೆ ಸಂಗ್ರಹಿಸಿಡಲಾದ ಅಮೂಲ್ಯ ವಸ್ತುಗಳನ್ನೂ ಇವರು ಹಾಳುಗೆಡವಿದರು. ಈಎದೃಶ್ಯಗಳು ಬಹುತೇಕ ಎಲ್ಲಾ ನ್ಯೂಸ್ ಚ್ಯಾನೆಲ್‌ಗಳಲ್ಲಿ ನೇರ ಪ್ರಸಾರವಾದವು.
ಇದೊಂದು ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಹೀನ ಘಟನೆಗಳಲ್ಲಿ ಒಂದಾಗಿ ದಾಖಲಾಯಿತು.26ರಂದು ದೆಹಲಿಯಲ್ಲಿ ಹಾಗೂ ಕೆಂಪುಕೋಟೆಯಲ್ಲಿ ನಡೆಸಿದ ಅರಾಜಕತೆ, ಹಿಂಸಾಚಾರ ಹಾಗೂ ದುಂಡಾವರ್ತನೆ ರೈತರ ಪ್ರತಿಭಟನೆಯ ವಿಶ್ವಾಸಾ ರ್ಹತೆಗೆ ಕುಂದನ್ನುಂಟುಮಾಡಿತು. ಈ ನಡುವೆ ರೈತರನ್ನು ಪ್ರಚೋದಿಸುವ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಕೆಲಸವನ್ನು ಕೆಲವು ಮಾಧ್ಯಮ ಹಾಗೂ ಪತ್ರಕರ್ತರು ಮಾಡಿದರು.
ರೈತನೊಬ್ಬ ಟ್ರ್ಯಾಕ್ಟರ್‌ಗಳನ್ನು ವೇಗವಾಗಿ ಓಡಿಸಿ, ವ್ಹೀಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡು ಅಲ್ಲೇ ಸಾವಿಗೀಡಾಗುತ್ತಾನೆ. ರೈತನು ಸಾವಿಗೀಡಾದುದು ಅಪಘಾತದಿಂದಲ್ಲ ಬದಲಾಗಿ ಪೊಲೀಸರ ಗುಂಡಿನಿಂದ ಎಂದು ಸುಳ್ಳು ವರದಿ ಮಾಡಿ ರೈತರನ್ನು ಇನ್ನಷ್ಟು ಹಿಂಸೆಗೆ ಪ್ರೇರೇಪಿಸುವ ಕೆಟ್ಟ ಕೆಲಸವನ್ನು ಪತ್ರಕರ್ತರೊಬ್ಬರುಮಾಡಿದರು. ಇದು ಸುಳ್ಳೆಂದು ದೆಹಲಿ ಪೊಲೀಸರು ಸಾಬೀತುಪಡಿಸಿದಾಗ ಇಂಡಿಯಾ ಟುಡೇ ಟಿವಿ ವಾರ್ತಾ ಸಂಸ್ಥೆಯು ರಾಜ್ ದೀಪ್ ಸರ್ದೇಸಾಯಿಯನ್ನು ಒಂದು ತಿಂಗಳ ಮಟ್ಟಿಗೆ ಅಮಾನತು ಮಾಡಿತು.
ರೈತ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದ ಬಹುತೇಕ ರೈತರು ಸಿಖ್ಖ್ ಹಾಗೂ ಜಾಠ್ ಸಮುದಾಯದವರು. ಇವರಲ್ಲಿ ಹೆಚ್ಚಿನವರು ಸಿಖ್ಖ್ ಸಮುದಾಯದವರೇ. ಇವರನ್ನು ರೈತ ಮಸೂದೆಯ ವಿರೋಧಿ ಪ್ರತಿಭಟನೆಯ ನೆಪದಲ್ಲಿ ಭಾರತ ಸರಕಾರದವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡಿದ್ದು ನಿಷೇಧಿತ ಸಿಖ್ಖ್ ಉಗ್ರವಾದಿ ಸಂಘಟನೆಯಾದ ಖಾಲಿಸ್ತಾನ್. ಆರಂಭದಿಂದಲೂ ಈ ಹೋರಾಟವನ್ನು ಸಂಘಟಿಸುವಲ್ಲಿ ಸಿಖ್ಖ್ ಉಗ್ರಗಾಮಿ ಸಂಘಟನೆಯಾದ ಖಾಲಿಸ್ತಾನ್‌ನ ವ್ಯಾಪಕ ಸಂಚಿನ ಬಗ್ಗೆ ಗುಮಾನಿ ಯಿತ್ತು.
ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಭಟನೆಗಳ ಹಿಂದೆ ಉಗ್ರಗಾಮಿ ಸಂಘಟನೆಯಾದ ಖಾಲಿಸ್ತಾನ್‌ನ ಕೈವಾಡವಿದೆ ಎಂದು ಕೇಂದ್ರ ಸರಕಾರವು ಹೇಳಿಕೆ ಕೊಟ್ಟಿತ್ತು. ಖಾಲಿಸ್ತಾನ್ ಸಂಘಟನೆಯು ಈ ಹೋರಾಟಕ್ಕೆ ಆರ್ಥಿಕ ಸಹಾಯವನ್ನು ನೀಡಿದ್ದು ಸಾಬೀತಾಗಿದೆ. ನಿಷೇಧಿತ ಸಂಘಟನೆಯಾದ ಸಿಖ್ಖ್ ಫಾರ್ ಜಸ್ಟೀಸ್ ಕೂಡಾ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ. ಕೆನಡಾ, ಅಮೆರಿಕಾ, ಬ್ರಿಟನ್ ಮೊದಲಾದ ದೇಶಗಳಲ್ಲಿ ಖಾಲಿಸ್ತಾನ್ ಸಿಖ್ಖ್ ಫಾರ್ ಜಸ್ಟೀಸ್ ಮೊದಲಾದ ಸಂಘಟನೆಗಳು ಭಾರತದ ರೈತ ಮಸೂದೆ ಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದ್ದವು.
ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಇಮ್ರಾನ್ ಖಾನ್‌ನ ರಾಜಕೀಯ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾ- ಪಕ್ಷವು ಟ್ವಿಟ್ಟರ್‌ನ ಮೂಲಕ ಅಧಿಕೃತ ಹೇಳಿಕೆಯನ್ನು ಕೊಟ್ಟು ಭಾರತದ ರೈತರ ಹೋರಾಟವನ್ನು ಬೆಂಬಲಿಸಿತ್ತು. ಈ ಎಲ್ಲಾ ಮಾಹಿತಿಗಳುಜನಸಾಮಾನ್ಯರನ್ನು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಿದಾಗ, ಜನರು ರೈತರ ಹೋರಾಟದ ಹಿಂದಿನ ಉದ್ದೇಶವನ್ನು ಸಂಶಯಿಸುವಂತಾಯಿತು.
ಭಾರತ ವಿರೋಧಿ ಚಟುವಟಿಕೆಗಳಿಗೆ ಸದಾ ಬೆಂಬಲ ಹಾಗೂ ಆರ್ಥಿಕ ಸಹಾಯವನ್ನು ನೀಡುತ್ತಿರುವ ಜಾರ್ಜ್ ಸೋರೊಸ್‌ನ ಓಪನ್ ಸೊಸೈಟಿ ಫೌಂಡೇಶನ್ ಗೂ ರೈತರ ಹೋರಾಟಕ್ಕೂ ಸಂಬಂಧವಿದೆ. ಅಮೆರಿಕ ನಿವಾಸಿಯಾದ ಅಮರ್ ದೀಪ್ ಸಿಂಗ್ ಅನ್ನುವ ವ್ಯಕ್ತಿ ಸಿಖ್ಖ್ ಕೋವಲೇಶನ್ ಎಂಬ ಹೆಸರಿನ ಅಮೆರಿಕದ ಸರಕಾರೇತರ ಸಂಘಟನೆಯ ಸಹ ಸಂಸ್ಥಾಪಕ. ಆದರೆಅಮರ್ ದೀಪ್ ಸಿಂಗ್ ಜಾರ್ಜ್ ಸೋರೊಸ್‌ನ ಓಪನ್ ಸೊಸೈಟಿ ಫೌಂಡೇಶನ್‌ನ ಪ್ರೋಗ್ರಾಮ್ ಆಫೀಸರ್ ಕೂಡಾ ಹೌದು. ಸಿಖ್ಖ್ ಕೊವಲೇಶನ್ ಸಂಸ್ಥೆಯು ರೈತರ ಕಾಯಿದೆಗಳನ್ನು ವಿರೋಧಿಸಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಭಾರತದ ರೈತರ ಕಾಯಿದೆಯನ್ನು ವಿರೋಧಸುವಂತೆ ಅಮೆರಿಕದ ಜನಪ್ರತಿನಿಧಿಗಳು ಹಾಗೂ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಈ ಸಿಖ್ಖ್ ಕೋವಲೇಶನ್ ಸಂಸ್ಥೆಯು ಮಾಡುತ್ತಿದೆ. ಭಾರತ ಸರಕಾರವು ಶಾಂತಿಯುತ ಪ್ರತಿಭಟನಾಕಾರರ ಮೇಲೆಅಶ್ರುವಾಯು ದಾಳಿ, ಲಾಠೀಚಾರ್ಜ್ ಮಾಡುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ. ಸಿಖ್ಖ್ ಕೋವಲೇಶನ್ ಸಂಸ್ಥೆಯು ತನ್ನ ವೆಬ್ಸೈಟ್ ನಲ್ಲಿ ತಾನು ಓಪನ್ ಸೊಸೈಟಿ -ಂಡೇಶನ್ ಬಳಿಯಿಂದ ಆರ್ಥಿಕ ಅನುದಾನಗಳನ್ನು ಪಡೆಯುತ್ತಿದ್ದೇನೆ ಎಂದುಪ್ರಕಟಿಸಿದೆ. ಇದು ರೈತರ ಪ್ರತಿಭಟನೆಗಳಲ್ಲಿ ಜಾರ್ಜ್ ಸೊರೊಸ್‌ನ ಪಾತ್ರವನ್ನು ಸಾಬೀತುಪಡಿಸುತ್ತದೆ.
ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಭಾರತದ ಬಗ್ಗೆ ಏನೇನೂ ಗೊತ್ತಿಲ್ಲದ ವಿದೇಶಿ ಸೆಲೆಬ್ರಿಟಿಗಳು ಬೆಂಬಲವನ್ನು ಸೂಚಿಸಿದುದು, ಪ್ರತಿಭಟನೆಯ ಉದ್ದೇಶದ ಕುರಿತಾಗಿನ ಅನುಮಾನ ವನ್ನು ಇನ್ನಷ್ಟು ಹೆಚ್ಚಿಸಿತು. ಬಾಬರ್‌ಡೊಸ್ ಮೂಲದಅಮೆರಿಕನ್ ಹಾಡುಗಾರ್ತಿ ರಿಹಾನ್ನಾ ರೈತರ ಪ್ರತಿಭಟನೆಗಳನ್ನು ಬೆಂಬಲಿಸಿದಳು, ಹಣಕ್ಕಾಗಿ ನೀಲಿಚಿತ್ರಗಳಲ್ಲಿ ನಟಿಸುವ ಮಿಯಾ ಖಲೀಫಾ ಕೂಡಾ ಭಾರತದ ಪ್ರತಿಭಟನೆಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದಳು!
ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ರೈತರ ಪ್ರತಿಭಟನೆಗಳನ್ನು ಬೆಂಬಲಿಸಿ ಪ್ರಕಟಿಸಿದ ಟ್ವೀಟ್‌ನಲ್ಲಿ ಭಾರತದ ದಿಶಾ ರವಿ ಕಳುಹಿಸಿದ್ದ ಟೂಲ್ ಕಿಟ್ ಅನ್ನು ಕೂಡಾ ಪ್ರಕಟಿಸಿ ರೈತರ ಪ್ರತಿಭಟನೆಯನ್ನು ಅಂತಾರಾಷ್ಟ್ರೀಯಸುದ್ದಿಯಾಗಿಸುವ ಹುನ್ನಾರವನ್ನು ತನಗರಿವಿಲ್ಲದಂತೆ ಜಗಜ್ಜಾಹೀರಾತು ಮಾಡಿದಳು.
ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಈ ಗೂಗುಲ್ ಡಾಕ್ಯುಮೆಂಟ್ ಟೂಲ್ ಕಿಟ್ ಅನ್ನು ತಯಾರಿಸಿದವಳಲ್ಲಿ ಒಬ್ಬಳಾಗಿದ್ದು ಆ ಟೂಲ್ ಕಿಟ್ ರೈತರ ಪ್ರತಿಭಟನೆಯ ವಿಚಾರವಗಿ ಬಹಷ್ಟು ಸುಳ್ಳು ಮಾಹಿತಿಗಳನ್ನು ಹೊಂದಿತ್ತು ಹಾಗೂ ಜನವರಿ 26ರ ಮೊದಲು ರೈತರ ಪ್ರತಿಭಟನೆಗಳ ಸಮರ್ಥನೆಯಲ್ಲಿ ಟ್ವೀಟರ್‌ನಲ್ಲಿ ಹ್ಯಾಶ್ ಟ್ಯಾಗ್‌ಗಳನ್ನು ಸೃಷ್ಟಿಸಿ ಟ್ರೆಂಡ್ಗಳನ್ನು ನಿರ್ಮಿಸುವ ಯೊಜನೆಯೂ ಟೂಲ್ ಕಿಟ್ ನಲ್ಲಿತ್ತು. ದಿಶಾ ರವಿ ಟೂಲ್ ಕಿಟ್ ಅನ್ನು ಗೇಟಾ ಜತೆಗೆ ಹಂಚಿಕೊಂಡು ನಂತರ ತನಿಖೆಗಾಗಿ ಪೊಲೀಸರಿಂದ ಬಂಧಿಸಲ್ಪಟ್ಟಳು.
ಟೂಲ್ ಕಿಟ್ ಪ್ರಕರಣವು ರೈತರ ಪ್ರತಿಭಟನೆಯ ಕುರಿತಾಗಿ ಪ್ರಸಿದ್ಧರ ಸಮರ್ಥನೆಯ ಹಿಂದಿನ ಹುನ್ನಾರವನ್ನು ಬಯಲು ಮಾಡಿತು. ದೊಂಬಿಕೊರರು ದೆಹಲಿಯಲ್ಲಿ ನಡೆಸಿದ ದಾಂಧಲೆಯ ನಂತರ ಬಹಳ ರೈತ ಸಂಘಟನೆಗಳು ರೈತರ ಹೋರಾಟದಿಂದ ಹಿಂದೆ ಸರಿದವು. ಭಾರತ್ ಕಿಸಾನ್ ಯೂನಿಯನ್‌ನ ಅಧ್ಯಕ್ಷರಾದ ನರೇಶ್ ಟಿಕೈಟ್ ಪ್ರತಿಭಟನೆಯಿಂದ ಹಿಂದೆ ಸರಿದರು.
ಭಾರತೀಯ ಕಿಸಾನ್ ಯೂನಿಯನ್ (ಭಾನು ತಂಡ) ಹಾಗೂ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್‌ಗಳೂ ಪ್ರತಿಭಟನೆ ಯಿಂದ ಹಿಂದೆ ಸರಿದವು. ಕಿಸಾನ್ ಮಹಾಪಂಚಾಯತ್ ಸಂಸ್ಥೆ ಪ್ರತಿಭಟನೆ ಯಿಂದ ಹಿಂದೆ ಸರಿಯಿತು. ಭಾರತ್ ಕಿಸಾನ್ಯೂನಿಯನ್(ಲೋಕ್ ಶಕ್ತಿ) ಹಾಗೂ ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ) ಸಂಘಟನೆಗಳು ಕೇಂದ್ರ ಕೃಷಿ ಮಂತ್ರಿ ನರೇಂದ್ರ ತೋಮರ್ ಅವರನ್ನು ಭೇಟಿಯಾಗಿ ತಾವಿನ್ನು ರೈತರ ಪ್ರತಿಭಟನೆಗಳಲ್ಲಿ ಮುಂದುವರಿಯುವುದಿಲ್ಲ ಎಂದು ಆಶ್ವಾಸನೆ ನೀಡಿ ಪ್ರತಿಭಟನೆಯಿಂದ ಹೊರನಡೆದವು.
ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ರೈತರು ಅವರವರ ಊರುಗಳಿಗೆ ಮರಳಿದರು. ಈ ನಡುವೆ ಹಿಂಸಾಚಾರಕ್ಕೆ ಕಾರಣರಾದವ ರನ್ನು ದೆಹಲಿ ಪೊಲೀಸರು ಹುಡುಕಲು ಆರಂಭಿಸಿದಾಗ ಇನ್ನಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮನೆಗಳಿಗೆ ತೆರಳಿದರು.ದೆಹಲಿ ಹಿಂಸಾಚಾರದ ನಂತರ ಸಾರ್ವಜನಿಕ ಆಕ್ರೋಶವನ್ನು ಎದುರಿಸಿದ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು.
ಶೇ.95ರಷ್ಟು ರೈತರು ತಮ್ಮ ಮನೆಗಳಿಗೆ ಹಿಂತಿರುಗಿಯಾಗಿತ್ತು. ಜನವರಿ28ರಂದು ಭಾರತೀಯ ಕಿಸಾನ್ ಯೂನಿಯನ್‌ನವಕ್ತಾರ ರಾಕೇಶ್ ಟಿಕೈಟ್ ಪತ್ರಿಕಾ ಗೋಷ್ಠಿಯಲ್ಲಿ ಕಣ್ಣೀರು ಹಾಕಿ ರೈತರ ಹೋರಾಟವನ್ನು ನಿಲ್ಲಿಸಬಾರದು ಎಂದು ರೈತರನ್ನು ಮನವಿ ಮಾಡಿದರು. ಪತ್ರಿಕಾಗೋಷ್ಠಿಯ ಮೊದಲು ಖಾಲಿಸ್ತಾನ್ ಉಗ್ರ ಸಂಘಟನೆಯ ಕೆಲವು ವ್ಯಕ್ತಿಗಳು ಪ್ರತಿಭಟನೆಯನ್ನು ಹಿಂದೆಗೆಯಲು ಉದ್ದೇಶಿಸಿದ್ದ ರಾಕೇಶ್ ಟಿಕೈಟ್ ಮೇಲೆ ಹಲ್ಲೆ ಮಾಡಿ, ಬೆದರಿಕೆ ಹಾಕಿ ಟಿಕೈಟ್ ಪ್ರತಿಭಟನೆಯನ್ನು ಹಿಂತೆಗೆದು ಕೊಳ್ಳದಂತೆ ಮಾಡಿದ್ದರು ಎಂದು ಓಪಿಂಡಿಯಾ ಆನ್‌ಲೈನ್ ಪತ್ರಿಕೆಯು ವರದಿ ಮಾಡಿದೆ.
ಈ ನಡುವೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಕಮ್ಯುನಿಸ್ಟ್‌ನ ನಾಯಕರುಗಳು ಟ್ವೀಟರ್ ಸಂದೇಶಗಳ ಮೂಲಕ ರೈತರಪ್ರತಿಭಟನೆಯನ್ನು ಮುಂದುವರಿಸುವುದಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು. ಹರಿಯಾಣಾದಿಂದ ಒಂದಷ್ಟು ರೈತರು ಹಾಗೂರಾಜಕೀಯ ಪಕ್ಷಗಳ ಸದಸ್ಯರು ಪುನಃ ಪ್ರತಿಭಟನೆಗೆ ಸೇರಿದರೂ ದಿನಕಳೆದಂತೆ ಪ್ರತಿಭಟನೆ ಕಳೆಗುಂದಿತು. ಪ್ರಧಾನಿಯಿಂದ ಆಂದೋಲನ ಜೀವಿಗಳು ಎಂದು ಕರೆಯಿಸಲ್ಪಟ್ಟ ಯೋಗೇಂದ್ರ ಯಾದವ್ ಅಂಥವರಿಗೂ ಪ್ರತಿಭಟನೆಯ ಕಾವನ್ನು ಉಳಿಸಿ ಕೊಳ್ಳಲಾಗಲಿಲ್ಲ.
ಬಹುತೇಕ ರೈತರು ಹೊಸ ರೈತರ ಮಸೂದೆಯಿಂದಾಗಿ ತಮಗೆ ಲಾಭವೇ ಹೆಚ್ಚು ಹಾಗೂ ಇದರಿಂದಾಗಿ ಮಂಡಿಯಲ್ಲಿನ ಏಜೆಂಟ್ ಗಳಿಗೆ ಕಮಿಷನ್ ಕೊಡುವುದು ತಪ್ಪುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡರು. ಹೊಸ ಮಸೂದೆಯಿಂದಾಗಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಯಾವುದೇ ತೊಂದರೆ ಆಗದು ಎಂಬುದೂ ರೈತರಿಗೆ ಖಾತ್ರಿಯಾಯಿತು. ಈ ನಡುವೆ ಕೇಂದ್ರ ಸರಕಾರವು ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿತು. ಇದನ್ನು ಪಂಜಾಬ್ ಸರಕಾರವು ವಿರೋಧಿಸಿದೆ.
ಪಂಜಾಬ್ ಸರಕಾರವು ಎಂಎಸ್‌ಪಿಯನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡದೆ ಅರ್ಥಿಯಾಗಳ( ಮಂಡಿ ಏಜೆಂಟ್‌ಗಳ) ಮೂಲಕ ಪಾವತಿ ಮಾಡಬೇಕು ಎಂದಿರುವುದರ ಉದ್ದೇಶ ಏನೆಂಬುದು ಇದೀಗ ರೈತರಿಗೂ ಅರ್ಥವಾಗುತ್ತಿದೆ. ಹೊಸ ಕೃಷಿಕಾಯಿದೆಯನ್ನುವಿರೋಽಸುತ್ತಿರುವುದು ರೈತರಲ್ಲ, ತಮ್ಮ ಕಮಿಷನ್ ಕಳೆದುಕೊಳ್ಳುವ ಮಂಡಿ ಏಜೆಂಟ್‌ಗಳು ಎನ್ನುವುದು ಎಲ್ಲರಿಗೂ ಅರ್ಥವಾಗಿದೆ.
ಇದೀಗ ರಾಕೇಶ್ ಟಿಕೈಟ್ ಪಶ್ಚಿಮ ಬಂಗಾಲ, ಅಸ್ಸಾಂ, ತಮಿಳುನಾಡುಗಳಲ್ಲಿ ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರಕ್ಕೆಹೊರಟಿzರೆ. ಟಿಕೈಟ್‌ಗೆ ಒಂದು ರಾಜಕೀಯ ನೆಲೆ ಬೇಕಾಗಿದೆ, ಜಾರ್ಜ್ ಸೋರೋಸ್‌ನಂಥವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹಿನ್ನೆಡೆಯಾಗಬೇಕಿದೆ, ಖಾಲಿಸ್ತಾನಿಗಳಿಗೆ ಭಾರತದಲ್ಲಿ ತಮ್ಮ ಬೇರುಗಳನ್ನು ಗಟ್ಟಿ ಮಾಡಿಕೊಳ್ಳಬೇಕಿದೆ, ಕೇಂದ್ರಸರಕಾರವನ್ನು ಮಟ್ಟಹಾಕಲು ವಿರೋಧಪಕ್ಷಗಳಿಗೆ ಒಂದು ಬಲವಾದ ಅಸ ಬೇಕಿದೆ, ಮಂಡಿಗಳ ಕಮಿಷನ್ ಏಜೆಂಟ್‌ಗಳಿಗೆ ತಮ್ಮ ಕಮಿಷನ್ ಅನ್ನು ಉಳಿಸಿಕೊಳ್ಳಬೇಕಿದೆ.
ಹಾಗಾಗಿ ಇವರೆಲ್ಲ ರೈತರನ್ನು ತಮ್ಮ ಹೋರಾಟದ ಗುರಾಣಿಯನ್ನಾಗಿ ಮಾಡಿಕೊಂಡಿದ್ದಾರೆ ಅಷ್ಟೇ! ಈ ವಿಷಯ ಜನರಿಗೂಅರಿವಾಗಿದೆ, ರೈತರಿಗೂ ಅರ್ಥವಾಗಿದೆ. ಹೀಗಾಗಿ ರೈತರ ಪ್ರತಿಭಟನೆ ದಿನೇ ದಿನೇ ತನ್ನ ಕಾವನ್ನು ಕಳೆದುಕೊಳ್ಳುತ್ತಿದೆ.