ಸಿನಿಮಾ ಕತೆ ತೆರೆಯ ಮೇಲೆ ಉಸಿರಾಡುವುದೇ ಹಿನ್ನೆಲೆ ಸಂಗೀತದಿಂದ !
ಅಭಿಪ್ರಾಯ
ಅರುಣ್ ಕೋಟೆ
ಹಾಲಿವುಡ್ ಸಿನಿಮಾಗಳಲ್ಲಿ ಹಾಡುಗಳಿರುವುದಿಲ್ಲ. ಜಗತ್ತಿನ ಯಾವ ಭಾಷೆಯ ಸಿನಿಮಾದ್ದಾದರೂ ಅಷ್ಟೇ, ಹಾಡುಗಳು ಬಹುತೇಕ ಇರುವುದಿಲ್ಲ.
ಹಾಗಾಗೇ ಅವುಗಳ ಅವಧಿ ಒಂದೂವರೆ ಎರಡು ಘಂಟೆಗೆ ಸೀಮಿತವಾಗಿರುತ್ತವೆ. ಆದರೆ ಭಾರತೀಯ ಸಿನಿಮಾಗಳ ವಿಚಾರ ಹಾಗಲ್ಲ. ಇಲ್ಲಿ ಹಾಡು ಕುಣಿತ ಇಲ್ಲದೆ ಅವು ಸಿನಿಮಾಗಳೇ ಅಲ್ಲ ಎನ್ನುವ ನಂಬಿಕೆ ಇದೆ. ಭಾರತೀಯರಲ್ಲಿ ಹಾಡುಗಳಿ ಲ್ಲದೇ ಸಿನಿಮಾ ಮಾಡಿದರೆ ಅವು ತೋಪಾಗುವ ಸಾಧ್ಯತೆಯೇ ಹೆಚ್ಚು.
ಕತೆಯ ವಸ್ತುವನ್ನು ಚಿತ್ರಕತೆ ಪ್ರತಿ ದೃಶ್ಯದಲ್ಲೂ ಪ್ರಕಟಿಸುತ್ತದೆ. ಆದರೆ ಆ ಕತೆಯನ್ನು ಹಾಗೂ ವಸ್ತು ವನ್ನು ಮತ್ತಷ್ಟು ಕಾವ್ಯಮಯಗೊಳಿಸಲು, ಸಂಗೀತ ಮಯಗೊಳಿಸಲು ಹಾಡುಗಳನ್ನು ಸೇರಿಸುವ ನಾಟಕ ಗಳ ಪರಂಪರೆ ನಮ್ಮಲ್ಲಿ ಸಿನಿಮಾದಲ್ಲೂ ಮುಂದುವರೆದಿದೆ. ಹಾಗಾಗಿ ನಮ್ಮ ದೇಶದಲ್ಲಿ ಸಿನಿಮಾ ಸಂಗೀತ ಎಂಬ ಪ್ರಕಾರವೇ ಅಗಾಧವಾಗಿ ಬೆಳೆದು ನಿಂತಿದೆ.
ಹಾಗಾದರೆ ಇಂಗ್ಲಿಷ್ ಸಿನಿಮಾಗಳನ್ನು ಭಾರತೀಯರಾದ ನಾವು ಮೆಚ್ಚುವುದಿಲ್ಲವೇ? ಅವುಗಳಲ್ಲಿ ಕೇಳಲು ಇಂಪಾದ ಒಂದು ಹಾಡೂ ಇರುವುದಿಲ್ಲ, ಆದರೂ ನಾವು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿ, ರೋಮಾಂಚನಗೊಳ್ಳುತ್ತೇವೆ. ಅಲ್ಲಿ ನಾವು ಹಾಡುಗಳ ನಿರೀಕ್ಷೆಯನ್ನೇ ಮಾಡುವುದಿಲ್ಲ, ದೃಶ್ಯಗಳ ನಡುವೆ ನಮಗೆ ಹಾಡುಗಳ ಕೊರತೆಯಿದೆಯೆಂದು ಅನಿಸುವುದೇ ಇಲ್ಲ. ಹಾಡುಗಳಿಲ್ಲದ -ಪರದೇಶಿಯ ಸಿನಿಮಾ ಗಳು ತಾಂತ್ರಿಕವಾದ, ಪರಿಣಾಮಕಾರಿ ವೈಭವೀಕೃತ ದೃಶ್ಯಗಳಿಂದ ಮಾತ್ರವೇ ಪ್ರೇಕ್ಷಕರನ್ನು ಸಂಗೀತರಹಿತ ವಾಗಿ ಸೆಳೆಯಬಹುದೆಂಬುದಕ್ಕೆ ಸಾಕ್ಷಿಯಾದಂತಾಯಿ ತಲ್ಲವೇ? ಖಂಡಿತ ಇಲ್ಲ, ಪರದೇಶಿಯ ಸಿನಿಮಾಗಳು ಅದರಲ್ಲೂ ಪಾಶ್ಚಿಮಾತ್ಯ ಸಿನಿಮಾಗಳು ಸಂಗೀತಕ್ಕೆ ವಿಶೇಷವಾದ ಸ್ಥಾನವನ್ನು ಮಾಡಿಕೊಂಡಿವೆ.
ಅದೇ ಹಿನ್ನೆಲೆ ಸಂಗೀತ, ಅದನ್ನೇ  (  )  ತಂತ್ರಗಾರಿಕೆ ಎನ್ನುವುದು. ಹಾಲಿವುಡ್ ನಿರ್ದೇಶಕರು ಸಿನಿಮಾಗಳ ಹಿನ್ನೆಲೆ ಸಂಗೀತಕ್ಕಾಗಿ ನೀಡುವ ಪ್ರಾಮುಖ್ಯತೆ ನಿಜಕ್ಕೂ ಅಸಾಧಾರಣವಾದದ್ದು. ಒಂದು ಹಾಡು ಮಾಡಬೇಕೆಂದು ಅವರು ಸಾಹಿತ್ಯ ಬರೆಯುವುದಿಲ್ಲ ಬದಲಾಗಿ ಒಟ್ಟಾರೆ ಕತೆಯನ್ನೇ ಒಂದು ಸಾಹಿತ್ಯ ಕೃತಿಯಾಗಿ ಕಾದಂಬರಿಯಂತೆ ಭಾವಿಸಿ ಆಯಾ ಸನ್ನಿವೇಶ, ಪಾತ್ರಗಳಿಗೆ ತಕ್ಕಹಾಗೆ ಹಿನ್ನೆಲೆ ಸಂಗೀತವನ್ನು ಪರಿಣಾಮಕಾರಿಯಾಗಿ ಸಂಯೋಜಿಸುತ್ತಾರೆ.
ಕಥೆಯ ಪಾತ್ರಗಳಿಗೆ ಎದುರಾಗುವ ಸನ್ನಿವೇಶಗಳಗುವ ಭಾವನೆಗಳ ಏರಿಳಿತಗಳಿಗೆ ಅನುಸಾರವಾಗಿ ಆ ಸಂಗೀತ ನಿರ್ದೇಶಕರು ವೈವಿಧ್ಯ ಮಯವಾಗಿ ಹತ್ತಾರು ಬಗೆಯ ಥೀಮ್ ಮ್ಯೂಸಿಕ್ ಗಳನ್ನು ಕಂಪೋಸ್ ಮಾಡುತ್ತಾರೆ. ಇಂತಹ ಹಿನ್ನೆಲೆ ಸಂಗೀತವೇ ಸಿನಿಮಾಗಳಿಗೆ ಜೀವ ಎಂದು ಅಲ್ಲಿನ ತಂತ್ರಜ್ಞರು ಹಾಗೂ ಪ್ರೇಕ್ಷಕರು ಗಾಢವಾಗಿ ನಂಬುತ್ತಾರೆ.
ಇಂಗ್ಲಿಷ್ ಸಿನಿಮಾಗಳಲ್ಲಿ ಈ ರೀತಿಯಾ ಹಿನ್ನೆಲೆ ಸಂಗೀತದ ಬಳಕೆ ಹಿಂದಿನಿಂದಲೂ ಅತ್ಯಂತ ಪರಿಣಾಮಕಾರಿಯಾದ ಯಶಸ್ವಿ ತಂತ್ರವಾಗಿದೆ ಎಂದು ಸುಮ್ಮನೆ ಹೇಳಿದರೆ ಸಾಲದು, ಇಲ್ಲಿ ಒಂದೆರಡು ಉದಾಹರಣೆಗಳನ್ನು ನೀಡದಿದ್ದರೆ ಆ ತೀವ್ರತೆಯನ್ನುಅರ್ಥಮಾಡಿಕೊಳ್ಳುವುದು ಕಷ್ಟವಾಗುವುದು. ಏಕೆಂದರೆ ಕೆಲವು ಸಿನಿಮಾಗಳ ಹಿನ್ನೆಲೆ ಸಂಗೀತವಂತೂ ಸಿನಿಮಾ ಜಗತ್ತಿನ ಕ್ರಾಂತಿಕಾರಿ ಬದಲಾವಣೆಯನ್ನು ತಂದಿವೆ.
ಅಂತಹ ಸಂಗೀತದ ತುಣುಕುಗಳನ್ನು ಸಂಯೋಜಿಸದ ವರಿಗಾಗಲಿ ಅವುಗಳನ್ನು ಸಿನಿಮಾಗಳಲ್ಲಿ ಅಳವಡಿಸಿ ಕೊಂಡ ನಿರ್ದೇಶಕ ರುಗಳಿಗಾಗಲಿ ಇವು ಮುಂದಿನ ಎಲ್ಲಾ ಪೀಳಿಗೆಗಳನ್ನು ಆಕರ್ಷಿಸುವ, ಸಾರ್ವಕಾಲಿಕ ಆಧುನಿಕ ಶೈಲಿಯ ಪ್ರವಹಿಸುತ್ತವೆಂಬ ಊಹೆಯೂ ಇದ್ದಿರಲಾರದು. 1962 ರಲ್ಲಿ ತೆರೆಕಂಡ ಇಯನ್ ಫ್ಲೆಮಿಂಗ್ ಕಾದಂಬರಿ ಆಧಾರಿತ .  ಚಿತ್ರದಲ್ಲಿ ಮೊಂಟಿ ನಾರ್ಮನ್ ಕೊಟ್ಟಂತಹ ಸಂಗೀತದ ತುಣುಕು ಮಧ್ಯಮ ವಯಸ್ಸಿನ, ಅತ್ಯಂತ ಚಾಲಾಕಿ, ಧೈರ್ಯಶಾಲಿ, ರಸಿಕ, ಶಕ್ತಿಶಾಲಿ, ಅಪಾಯಕಾರಿ, ಸುಂದರ, ಪ್ರಾಮಾಣಿಕ, ಕ್ರೂರಿ, ಒಂಟಿಗ, ಭಂಡನಾದ ಬ್ರಿಟಿಷ್ ಸೀಕ್ರೆಟ್ ಏಜೆಂಟ್ ಜೇಮ್ಸ ಬಾಂಡ್007ಎಂಬುವನನ್ನು ಹೇಗೆ ಗ್ರಹಿಸಿಬೇಕು ಎಂಬುದನ್ನು ಹೇಳಿ ಕೊಟ್ಟಿತು.
ಮೊಂಟಿ ನಾರ್ಮನ್‌ನ ಇದೇ ತುಣುಕನ್ನೇ ಬೆಳೆಸಿ ಅದನ್ನು ಜೇಮ್ಸ ಬಾಂಡ್ ಸಂಗೀತ ಪ್ರಕಾರ ಎನ್ನುವ ಮಟ್ಟಿಗೆ ಪ್ರತಿ ಜೇಮ್ಸ ಬಾಂಡ್ ಸಿನಿಮಾದಲ್ಲೂ ಅಭಿವೃದ್ಧಿಪಡಿಸಿದ್ದು ಜಗತ್ತಿನ ಮೂಲೆಮೂಲೆಗೂ ತಲುಪುವಂತೆ ಮಾಡಿದ್ದು ಜಾನ್ ಬೆರ್ರಿ ಇಂಗ್ಲಿಷ್ಸಂಗೀತ ಸಂಯೋಜಕ. ಬಹುತೇಕ ಬಾಂಡ್ ಸಿನಿಮಾಗಳು ಆರಂಭವಾಗುವುದು ಒಂದು ಸಾಹಸಮಯ ಚೇಸಿಂಗ್ ದೃಶ್ಯದಿಂದನಂತರ ಶುರುವಾಗುವುದು ಆ ಸಿನಿಮಾದ ಆಕರ್ಷಕವಾದ ಸಮ್ಮೋಹಗೊಳಿಸುವ ಟೈಟಲ್ ಟ್ರ್ಯಾಕ್.
ಈಗಲೂ ನಾರ್ಮನ್ ಹಾಗೂ ಜಾನ್ ಬೆರ್ರಿ ಸಂಯೋಜಿಸಿರುವ ಸಂಗೀತದ ಮೂಲ ತುಣುಕನ್ನೇ ಆತ್ಮವಾಗಿಸಿಕೊಂಡು ಅದರ ವಿಸ್ತೃತ ರೂಪವಾಗಿ ವಿಭಿನ್ನ ಬಗೆಯ ಹಾಡುಗಳನ್ನು ಅನೇಕ ಸಂಗೀತ ನಿರ್ದೇಶಕರು ಹೊರ ತಂದರು. ಬಾಂಡ್ ಸಿನಿಮಾ ಟಿಕೆಟ್ ತೆಗೆದುಕೊಂಡು ಆರಂಭದ ಹಾಡು ಮುಗಿದ ನಂತರ ನೀವು ಥಿಯೇಟರ್ ಒಳಕ್ಕೆ ಕಾಲಿಡುವುದಕ್ಕಿಂತ ಟಿಕೆಟ್ ಹರಿದುಹಾಕಿಮನೆಗೆ ಹೋಗುವುದೇ ವಾಸಿ. ಬಾಂಡ್ ಸಿನಿಮಾದ ಆರಂಭಿಕ ಹಾಡಿಗೆ ಮತ್ತು ಸಿನಿಮಾದ ಉದ್ದಕ್ಕೂ ಕೇಳಿ ಬರುವ ಸಂಗೀತಕ್ಕೆ ಇರುವ ತೀವ್ರತೆಯೇ ಅಂತದ್ದು.
ಇದೇ ರೀತಿ ಅರವತ್ತರ ದಶಕದಲ್ಲಿ ಇಂಗ್ಲಿಷ್ ಹಾಗೂ ಇಟಾಲಿಯನ್ ಭಾಷೆಗಳಲ್ಲಿ ತೆರೆಕಂಡ    ನಿರ್ದೇಶನದ   ಅಥವಾ     ಸರಣಿಯ ಮೂರು ಸಿನಿಮಾಗಳು ವಿಶ್ವದಾದ್ಯಂತ ಸದ್ದು ಮಾಡಲು ಕಾರಣವಾದದ್ದೇ ಅದರಲ್ಲಿದ್ದ   ಎಂಬ ಇಟಾಲಿಯನ್ ಸಂಗೀತ ನಿರ್ದೇಶಕ ನೀಡಿದ ಹಿನ್ನೆಲೆ ಸಂಗೀತ. ಬಹುಶ ನಮ್ಮಲ್ಲಿ ಆ ಸಿನಿಮಾಗಳನ್ನು ನೋಡಿರುವ ಮಂದಿ ಕಡಿಮೆ ಇರಬಹುದು ಆದರೆ ಆ ಸಿನಿಮಾದ ಸಂಗೀತ ವನ್ನು ಕೇಳದವರೇ ಇರಲಿಕ್ಕಿಲ್ಲಏಕೆಂದರೆ ಆ ಹಿನ್ನೆಲೆ ಸಂಗೀತವನ್ನು ಜಗತ್ತಿನ ಎಲ್ಲಾ ಭಾಷೆಯ ಸಿನಿಮಾ ಗಳೂ ಅನುಕರಿಸಿವೆ.
ತಮ್ಮ ತಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ಅಳವಡಿಸಿಕೊಂಡಿವೆ. ಸರಳವಾಗಿ ಹೇಳುವುದಾದರೆ ನಮ್ಮಲ್ಲಿ ಅದನ್ನು    ಎನ್ನುತ್ತಾರೆ. ಪಾಶ್ಚಿಮಾತ್ಯ ಸಿನಿ ಪ್ರಪಂಚದಲ್ಲಿ ಹಿನ್ನೆಲೆ ಸಂಗೀತದ ಹುಚ್ಚು ವಿಪರೀತವಾಗಿದೆ, ಸದ್ಯಕ್ಕಂತೂ ಜರ್ಮನ್ ಸಂಗೀತ ಸಂಯೋಜಕ   ಹಾಲಿವುಡ್ ಸಂಗೀತಲೋಕದ ಸಾಮ್ರಾಟ, ಕಳೆದ ಒಂದೂವರೆ ದಶಕದಲ್ಲಿ ಹಾಲಿವುಡ್ ಮನೆಯಿಂದ ತಯಾರಾದ ಬಹುತೇಕ ದೊಡ್ಡ ಸಿನಿಮಾಗಳಿಗೆ ಆತನದ್ದೇ ಹಿನ್ನೆಲೆ ಸಂಗೀತ.
  ,    ಸಿನಿಮಾಗಳಿಗೆ ಮಾತ್ರವಲ್ಲದೆ ಜಗತ್ತಿನ ಶ್ರೇಷ್ಠ ನಿರ್ದೇಶಕನೆಂಬ ಖ್ಯಾತಿ ಪಡೆದಿರುವ   ಸಿನಿಮಾಗಳಾದ    ಹಾಗೂ , ,  ಗಳಂತಹ ಅದ್ಭುತವಾದ ನಿzಗೆಡಿಸುವ ಕಥಾಹಂದರ ಹೊಂದಿರುವ ಸಿನಿಮಾಗಳಿಗೆ ನೋಡುಗನನ್ನು ಬಾಹ್ಯಾಕಾಶದಲ್ಲಿ ತೇಲಿಸುವ ರೀತಿಯಲ್ಲಿ ಸಂಕೀರ್ಣವಾದ ಟ್ಯೂನುಗಳನ್ನು ವಿಭಿನ್ನ ಬಗೆಯ ಅಪರೂಪದ ವಾದ್ಯಗಳಿಂದ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸಿನಿಮಾ ಕತೆಯನ್ನು ಅರ್ಥ ಮಾಡಿಕೊಳ್ಳುವುದು, ಕತೆಯೊಳಗಿನ ಬಹುಮುಖ್ಯ ಭಾವನೆ ಹಾಗೂ ತಿರುವುಗಳಿಗೆ ಒಂದೊಂದು ಹೆಸರಿಟ್ಟು ಅವುಗಳಿಗೆಂದೇ ವಿಶೇಷವಾದ ಟ್ಯೂನುಗಳನ್ನು ಮಾಡುವುದರಲ್ಲಿ   ನಿಸ್ಸಿಮರು. ಉದಾಹರಣೆಗೆ ಸಿನಿಮಾದಲ್ಲಿ ಸಾವಿರಾರು ಎಕರೆಯ ವಿಸ್ತಾರದ ಮೆಕ್ಕೆಜೋಳದ ಹೊಲದ ಮೇಲೆ ಹಕ್ಕಿಯ ಹಾಗೆ ಹಾರಿ ಬರುವ ಭಾರತೀಯ ಡ್ರೋನ್ ಒಂದನ್ನು ಸಿನಿಮಾದ ನಾಯಕ ಮಾಜಿ ನಾಸಾದ ಪೈಲೆಟ್ ಜೀಪಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಬೆಳೆದ ಪೈರನ್ನು ಲೆಕ್ಕಿಸದೆ ಹೊಲದ ಆ ಡ್ರೋನ್ ಅನ್ನು ಬೆನ್ನು ಹತ್ತಿ ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದು ಕೊಳ್ಳುತ್ತಾನೆ.
ಇದೊಂದು   ಎಂಬ ಹೆಸರಿನ ಜನಪ್ರಿಯ ದೃಶ್ಯ.   ಎಂಬುದು ಕೇವಲ ದೃಶ್ಯವಾಗಿ ಹೆಸರು ಮಾಡಲಿಲ್ಲ, ಅದರಲ್ಲಿ ಹೊಮ್ಮುವ ಸಂಗೀತದ ತುಣುಕು ಕೋಟ್ಯಂತರ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ.   ನಿರ್ದೇಶನದ ಸಿನಿಮಾದಲ್ಲಿ   ಹೆಜ್ಜೆ ಹೆಜ್ಜೆಗೂ ಇಂತಹ ಸಂಗೀತದ ಮೋಡಿ ಮಾಡಿದ್ದಾರೆ.
ಪಾಶ್ಚಿಮಾತ್ಯರ ಹಿನ್ನೆಲೆ ಸಂಗೀತದ ತಂತ್ರಗಾರಿಕೆಯನ್ನು ಪರಿಣಾಮಕಾರಿಯಾಗಿ ಮೊಟ್ಟಮೊದಲಿಗೆ ಭಾರತೀಯ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟವರಲ್ಲಿ ಜಿ.ಕೆ. ವೆಂಕಟೇಶ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಜಿ.ಕೆ ವೆಂಕಟೇಶ್ ತಮ್ಮ ಸಂಗೀತನಿರ್ದೇಶನದಲ್ಲಿ ಬಳಸುತ್ತಿದ್ದ ವಾದ್ಯವೃಂದ ಎಷ್ಟು ವೈವಿದ್ಯಮಯವಾದ್ದೆಂದರೆ ನಮಗೆ ಗುಣಮಟ್ಟದಲ್ಲಿ ಅವು ಪಾಶ್ಚಿಮಾತ್ಯ  ಗಳಿಗೆ ಸಮನಾಗಿ ನಿಲ್ಲುವಂತಾ ಗಿದ್ದುದರಲ್ಲಿ ಅನುಮಾನವೇ ಇಲ್ಲ.
ಅವರು ನಮ್ಮ ಭಾರತೀಯ ವಾದ್ಯಗಳಷ್ಟೇ ಆಳವಾಗಿ ಪಾಶ್ಚಿಮಾತ್ಯ ವಾದ್ಯಗಳಾದ , , , , , , , , ,  ಗಳನ್ನು ವಿಭಿನ್ನವಾಗಿ ಬಳಸಿದರು. ಇದೇ ಸಂಸ್ಕೃತಿ ಭಾರತ ಚಿತ್ರರಂಗದ ಇಬ್ಬರು ಜನಪ್ರಿಯ ಸಂಗೀತ ನಿರ್ದೇಶಕರಿಗೆ ಪ್ರೇರಣೆಯಾದವು. ಒಬ್ಬರು ಜಿ.ಕೆ ವೆಂಕಟೇಶ್‌ರವರ ನೇರ ಶಿಷ್ಯರಾದಇಳಯರಾಜ ಮತ್ತೊಬ್ಬರು ಇಳಯರಾಜ ಗರಡಿಯಲ್ಲಿ ಪಳಗಿದ ಎ.ಆರ್. ರೆಹಮಾನ್. ಕತೆಗಾಗಿ ವಿಶೇಷವಾಗಿ ಸಂಗೀತ ಸಂಯೋಜನೆ ಮಾಡಿಸುವಲ್ಲಿ ಭಾರತೀಯ ಚಿತ್ರರಂಗದಲ್ಲಿ ಮಣಿರತ್ನಂ ನಿಪುಣರಾಗಿದ್ದರು.
ಒಂದಷ್ಟು ವರುಷಗಳ ಕಾಲ ಅವರು ಇಳಯರಾಜರಿಗಲ್ಲದೆ ಮತ್ತಾರಿಗೂ ತಮ್ಮ ಚಿತ್ರಗಳಲ್ಲಿ ಸಂಗೀತ ಮಾಡಲು ಬಿಟ್ಟವರಲ್ಲ,ನಂತರ ಅವರ ಚಿತ್ರಗಳಲ್ಲಿ ಇಳಯರಾಜರ ಸ್ಥಾನವನ್ನು ತುಂಬಿದ್ದು ಎ.ಆರ್ ರೆಹಮಾನ್. ಭಾರತೀಯ ಸಿನಿಮಾಗಳಲ್ಲಿ ಬಹುತೇಕ ನಮ್ಮ ನಿರ್ದೇಶಕರು ಐದು ಹಾಡಿಗೆ ಮಾತ್ರವಲ್ಲದೆ ಕತೆ ಹಾಗೂ ಪಾತ್ರಗಳಿಗೂ ಸಂಗೀತಗಾರರನ್ನು ಬಳಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಇಂದಿಗೂ ಯುರೋಪ್ ಅಮೆರಿಕ ದೇಶಗಳಲ್ಲಿಮಾರಿಯೋ ಪುಝೋ ಕಾದಂಬರಿ ಆಧಾರಿತ ‘ದಿ ಗಾಡ್ ಫಾದರ್’ ತರಹದ ಸಿನಿಮಾದ ಹಿನ್ನೆಲೆ ಸಂಗೀತವನ್ನು ಸಕಲ ನೈಜ ವಾದ್ಯಗಳ ಮುಖಾಂತರ ನುಡಿಸುವ  ನಡೆಯುತ್ತವೆ ಎಂಬ ಜಾಹಿರಾತು ಹೊರಬಿದ್ದರೆ ಸಾಕು ಅಂತಹ ಬೃಹತ್ ಥಿಯೇಟರ್‌ಗಳ ಸಾವಿರಾರು ಸೀಟುಗಳು ಕೆಲವೇ ಗಂಟೆಗಳಲ್ಲಿ ಬುಕ್ ಆಗಿರುತ್ತವೆ.
ಅಂತಹ  ಕಾರ್ಯಕ್ರಮದಲ್ಲಿ ಯಾರೂ ಒಂದು ಹಾಡನ್ನೂ ಹೇಳುವುದಿಲ್ಲ, ಅದೇನಿದ್ದರೂ ಸಿನಿಮಾದ ಹಿನ್ನೆಲೆ ಸಂಗೀತವನ್ನು ಲೈವ್ ಆಗಿ ನುಡಿಸುವ ಕಾರ್ಯಕ್ರಮವಾಗಿರುವುದಷ್ಟೇ. ಈಗ ಮತ್ತೆ ಭಾರತೀಯ ಸಿನಿಮಾ ಹಾಗು ವೆಬ್ ಸೀರೀಸ್ ಗಳಲ್ಲಿಅಂತಾಂದುಅಲೆ ಶುರುವಾಗಿದೆ. ಸಿನಿಮಾಗಳಲ್ಲಿ ಹಾಡುಗಳಷ್ಟೇ ಪ್ರಾಮುಖ್ಯತೆಯನ್ನು ಹಿನ್ನೆಲೆ ಸಂಗೀತಕ್ಕೂ ನೀಡಲಾಗುತ್ತಿದೆ. ಸಮಸ್ಯೆ ಏನೆಂದರೆ ಈಗ ಬಹುತೇಕ ವಾದ್ಯಗಳನ್ನು ಕಂಪ್ಯೂಟರ್ ನುಡಿಸುತ್ತದೆ. ಅಂತಹ ಸಂಗೀತಕ್ಕೆ ಆಯಸ್ಸು ಕಡಿಮೆಯೇ ಎನ್ನಬಹುದು.