ಆರು ತಿಂಗಳು ಮೈಮರೆತರೆ ಕಾದಿದೆ ಕರೋನಾ ಗಂಡಾಂತರ
ವಿಶ್ವವಾಣಿ ಸಂದರ್ಶನ:ಡಾ.ಸಿ.ಎನ್‌.ಮಂಜುನಾಥ್‌,ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರು
ಕರೋನಾ ಎರಡನೇ ಅಲೆ ಬರುವ ಮುನ್ಸೂಚನೆ ಇದ್ದರೂ ಜನತೆಯ ನಿರ್ಲಕ್ಷ್ಯ ಮನೋಭಾವದಿಂದ ಸೋಂಕು ತೀವ್ರ ಸ್ವರೂಪ ಪಡೆಯುತ್ತಿದೆ. ಸರಕಾರಕ್ಕೆ ಸಹಕಾರ ನೀಡಿದರೆ ಮಾತ್ರ ಕರೋನಾ ಅಂತ್ಯಕ್ಕೆ ನಾಂದಿ. ರೂಪಾಂತರ ವೈರಸ್‌ನ ಆಯಸ್ಸು ಮುಂದಿನ 6 ತಿಂಗಳಿಗೆ ಮುಗಿಯಲಿದೆ. ಆದ್ದರಿಂದ ಎಚ್ಚರಿಕೆ ವಹಿಸಿ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡರೆ ಸೋಂಕಿನ ವಿರುದ್ಧ ಹೋರಾಡಬಹುದಾಗಿದೆ. ಇಲ್ಲದಿದ್ದರೆ ಮುಂದೆ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದು ‘ವಿಶ್ವವಾಣಿ’ಯೊಂದಿಗಿನ ಸಂದರ್ಶನದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.