ಬಾಂಗ್ಲಾದೇಶದಲ್ಲಿ ಇನ್ನೂ ಜೀವಂತವಿರುವ ಪಾಕಿಸ್ತಾನ !
ಅಭಿಪ್ರಾಯ
ಶರತ್‌ ಚಂದ್ರ
ಕೊನೆಗೆ ೧೯೭೧ರಲ್ಲಿ ಭಾರತೀಯ ಸೈನ್ಯ ಪೂರ್ವ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ವಿಮೋಚನೆಗೆ ದಾರಿ ಮಾಡಿಕೊಟ್ಟಿತು. ಪಾಕಿಸ್ತಾನ ವಾಪಸು ಹೋದರೂ ಅದರ ಬುದ್ಧಿ ಬಿಡದೇ, ಹಲವು ಸಂಘಟನೆಗಳು ಅದೇ ಅಲ್ಪ ಸಂಖ್ಯಾತವಿರೋಧಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿವೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಚಟುವಟಿಕೆ ಯೆಂದರೆ ಪ್ರತಿಭಟನೆ, ಸತ್ಯಾಗ್ರಹವಲ್ಲ. ಲೂಟಿ, ಧ್ವಂಸ, ಅತ್ಯಾಚಾರ. 1965ರಿಂದ 2013ರವರೆಗೆ 1.3 ಕೋಟಿ ಹಿಂದೂಗಳು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಬಾಂಗ್ಲಾದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದ ಮೇಲೂ ಅಲ್ಲಿ ಹಿಂಸಾ ಚಾರ ನಿಂತಿಲ್ಲ. ಮೋದಿ ಭೇಟಿಯ ಹಿನ್ನೆಲೆಯಲ್ಲಿ ತೀವ್ರಗಾಮಿ ಇಸ್ಲಾಮಿಕ್ ಗುಂಪು ಹೆಫಝತ್-ಇ-ಇಸ್ಲಾಂನ ನೂರಾರುಜನ, ಅಲ್ಪಸಂಖ್ಯಾತ ಹಿಂದೂಗಳ ಮನೆ, ದೇವಸ್ಥಾನಗಳ ಮೇಲೆ ದಾಳಿ ನಡೆಸಿದೆ.
ಘರ್ಷಣೆಯಲ್ಲಿ11ಜನ ಸತ್ತ ಮೇಲೂ ಬೆಂಕಿ ಆರಿಲ್ಲ. ಈ ತೀವ್ರಗಾಮಿ ಸಂಘಟನೆಗಳ ಪ್ರಕಾರ ಮೋದಿ ಮುಸ್ಲಿಂ ವಿರೋಧಿ. ಇದು ಅವರ ಗಲಭೆಗೆ ಕಾರಣವಾದರೆ, ಇಸ್ಲಾಮಿಕ್ ದೇಶದಲ್ಲಿ ಜೆಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿ ಪೂಜೆ ಮಾಡಿದ್ದು ಇವರ ನಿದ್ದೆಗೆಡಿಸಿದೆ.2017ರಲ್ಲಿ ಇದೇ ಸಂಘಟನೆ ಅವಾಮಿ ಓಲಾಮ ಲೀಗ್ ಜತೆಗೂಡಿ ಬಾಂಗ್ಲಾದೇಶ ಸರ್ವೋಚ್ಚನ್ಯಾಯಾಲಯದ ಮುಂದೆ ಇರುವ ನ್ಯಾಯದೇವತೆಯ ಮೂರ್ತಿಯನ್ನು ತೆಗೆದು ಹಾಕಲು ಪ್ರತಿಭಟನೆ ನಡೆಸಿತು.
ಸಾವಿರಾರು ಜನ ರಸ್ತೆಗಿಳಿದು ನ್ಯಾಯಾಲಯದ ಮುಂದೆ ಪ್ರತಿಭಟಿಸಿದರು. ಕೊನೆಗೂ ಇವರ ಬೇಡಿಕೆಗೆ ಒಪ್ಪಿದ ಶೇಖ್ ಹಸೀನಾ ಸರಕಾರ ಮೂರ್ತಿಯನ್ನು ನ್ಯಾಯಾಲಯದ ಮುಂದಿನಿಂದ ತೆಗೆದು ಅಲ್ಲಿಂದ ಸ್ವಲ್ಪ ದೂರ, ಜನರ ಗಮನಕ್ಕೆ ಬಾರದ ಜಾಗಕ್ಕೆಸ್ಥಳಾಂತರಿಸಿತು. ಇದರ ಮುಖಂಡ ಜುನೈದ್ ಬಾಬುನಗರಿ ಇತ್ತೀಚಿಗೆ ಸರಕಾರಕ್ಕೆ ಮಾಡಿದ4ಬೇಡಿಕೆ ನೀವು ಓದಬೇಕು. ಇಸ್ಕಾನ್ ಅವರ ಚಟುವಟಿಕೆಗಳನ್ನು ನಿಲ್ಲಿಸುವುದು, ಅಹ್ಮದೀಯರನ್ನು ಮುಸಲ್ಮಾನರಲ್ಲ ಎಂದು ಘೋಷಿಸುವುದು, – ರಾಯಭಾರಿಕಚೇರಿಯನ್ನು ಮುಚ್ಚಿಸುವುದು ಹಾಗು – ವಿರುದ್ಧ ಸದನದಲ್ಲಿ ನಿರ್ಧಾರ ತೆಗೆದುಕೊಳ್ಳುವುದು.
ಇವನ್ನು ಓದಿದಾಗ ಕಾಝಿನಜ್ರುಲ್ ಇಸ್ಲಾಂ ಅವರ ನೆನಪಾಗುತ್ತದೆ. ಬಾಂಗ್ಲಾದೇಶದ ರಾಷ್ಟ್ರ ಕವಿಯಾದ ಇವರು ಕಾಳಿ ದೇವಿಗೆ ಅರ್ಪಣೆಯಾಗಿ ಶ್ಯಾಮಾ ಸಂಗೀತವನ್ನು ರಚಿಸಿದರು. ಇವರು ರಚಿಸಿದ ಭಕ್ತಿಗೀತೆಗಳು ಇಂದಿಗೂ ಕಲ್ಕತ್ತಾದ ದೇವಸ್ಥಾನಗಳಲ್ಲಿಹಾಡುತ್ತಾರೆ. ಎಲ್ಲಿಯ ಕಾಝಿನಜ್ರುಲ್ ಇಸ್ಲಾಂ, ಎಲ್ಲಿಯ ಈ ತೀವ್ರಗಾಮಿಗಳು? ಬಂಗಾಳದಲ್ಲಿ ಇಸ್ಲಾಮಿನ ಪ್ರಾಬಲ್ಯ13ನೇಶತಮಾನದಿಂದಲೇ ಪ್ರಾರಂಭವಾಯಿತು.
ಮುಂದಿನ700ವರ್ಷ ಖಿಲ್ಜಿ, ಮೊಘಲರು, ನವಾಬರು, ಆಂಗ್ಲರು ಇವರೆಲ್ಲರೂ ಬಂಗಾಳವನ್ನು ಆಳಿದರು.1901ರ ಜನಗಣತಿ ಮಾಡುವ ವೇಳೆಗೆ ಬಂಗಾಳದಲ್ಲಿ ಹಿಂದೂಗಳು ಶೇ.33ರಷ್ಟು ಇದ್ದರು. ಬಂಗಾಳದ ಕ್ರಾಂತಿಕಾರಿಗಳಿಂದ, ಬುದ್ಧಿಜೀವಿಗಳಿಂದತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅರಿತ ಆಂಗ್ಲರು ಧರ್ಮದ ಆಧಾರದ ಮೇಲೆ1905ರಲ್ಲಿ ಬಂಗಾಳದ ವಿಭಜನೆ ಮಾಡಿ ಬಿಟ್ಟರು. ಈ ವಿಷಬೀಜ ಹೆಮ್ಮರವಾಗಿ1943ರ ವೇಳೆಗೆ ಫಜ್ಲುಲ್ ಹಕ್ ನೇತೃತ್ವದಲ್ಲಿ ಪ್ರತ್ಯೇಕ ದೇಶದ ಬೇಡಿಕೆ ಇಟ್ಟರು.
1947ರ ಸ್ವಾತಂತ್ರ್ಯ ನಂತರ ಬಂಗಾಳವನ್ನು ಪಾಕಿಸ್ತಾನ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ತನ್ನ ಭಾರತ ವಿರೋಧಿ ಕಾರ್ಯಕ್ಕೆಪೂರ್ವ ಪಾಕಿಸ್ತಾನದ ಅಲ್ಪಸಂಖ್ಯಾತರನ್ನು ತನ್ನ ಪ್ರಯೋಗಾಲಯದ ಬಲಿಪಶುವನ್ನಾಗಿ ಮಾಡಿಕೊಂಡಿತು.1965ರ ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭದ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಪ್ರಾರಂಭವಾಯಿತು. ಇದು ತಾರಕಕ್ಕೇರಿದ್ದು1971ರಲ್ಲಿ.
ಪ್ರತ್ಯೇಕ ದೇಶದ ಬೇಡಿಕೆ ಎತ್ತಿದ್ದ ಬಾಂಗ್ಲಾದೇಶೀಯರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೈನ್ಯ ‘ ’ ಮೂಲಕ ವಿವರಿಸಲಾಗದ ಅಸಂಖ್ಯಾತ ಅತ್ಯಾಚಾರ, ಕಗ್ಗೊಲೆಗಳನ್ನು ಮಾಡಿತು. ಲಕ್ಷಾಂತರ ಜನ ಭಾರತಕ್ಕೆ ಶರಣಾರ್ಥಿಯಾಗಿ ಬಂದರು. ಕೊನೆಗೆ1971ರಲ್ಲಿ ಭಾರತೀಯ ಸೈನ್ಯ ಪೂರ್ವ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ವಿಮೋಚನೆಗೆ ದಾರಿಮಾಡಿಕೊಟ್ಟಿತು.
ಪಾಕಿಸ್ತಾನ ವಾಪಸು ಹೋದರೂ ಅದರ ಬುದ್ಧಿ ಬಿಡದೇ, ಹಲವು ಸಂಘಟನೆಗಳು ಅದೇ ಅಲ್ಪಸಂಖ್ಯಾತ ವಿರೋಧಿ ಚಟುವಟಿಕೆ ಗಳನ್ನು ನಡೆಸಿಕೊಂಡು ಬರುತ್ತಿವೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಚಟುವಟಿಕೆಯೆಂದರೆ ಪ್ರತಿಭಟನೆ, ಸತ್ಯಾಗ್ರಹ ವಲ್ಲ. ಲೂಟಿ, ಧ್ವಂಸ, ಅತ್ಯಾಚಾರ.1965ರಿಂದ2013ರವರೆಗೆ 1.3 ಕೋಟಿ ಹಿಂದೂಗಳು ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ. ಜಾತ್ಯತೀತತೆಯ ಡಂಗೂರ ಬಾರಿಸುವ ಬುದ್ಧಿಜೀವಿ, ಅಂತಾರಾಷ್ಟ್ರೀಯ ಸಂಘ-ಸಂಸ್ಥೆಗಳಿಗೆಲ್ಲ ಭಾರತವು ನಾಲಗೆಯ ಮೇಲಿರುತ್ತದೆ.
ಆದರೆ ಬಾಂಗ್ಲಾದೇಶದಲ್ಲಿ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿಷಯ ಬಂದಾಗ ಅದೇನೋ ಹಿಂಜರಿಕೆ, ಜಾಣ ಮರೆವು. ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ, ಪೂರ್ವ ಅಥವಾ ಪಶ್ಚಿಮ ಪಾಕಿಸ್ತಾನದಿಂದ ಭಾರತಕ್ಕೆ ಬರುವಪ್ರತಿಯೊಬ್ಬರಿಗೂ ಪೌರತ್ವ ನೀಡುವುದರಲ್ಲಿ ಸಂದೇಹವಿಲ್ಲ. ಇದರಲ್ಲಿ ಕಾನೂನು ತೊಡಕಾದರೆ ಅಂತಹ ಕಾನೂನನ್ನು ಬದಲಾಯಿಸಬೇಕು ಎಂದು 1950ರ ಅಧಿವೇಶನದಲ್ಲಿ ನೆಹರು ಹೇಳಿದ್ದರು.
ಅಂತಹ ಕಾನೂನಿಗೆ ರಾಜಕೀಯ ಬಣ್ಣ ಲೇಪಿಸಿ, ಭಾರತದ ಅಲ್ಪಸಂಖ್ಯಾತ ಜನರನ್ನು ಉದ್ರೇಕಿಸಿ, ಜೀವವನ್ನು ಹಿಡಿದು ಹೇಗೋ ಭಾರತದೆಡೆಗೆ ಧಾವಿಸಿ ಬರುತ್ತಿರುವ ಬಾಂಗ್ಲಾದೇಶಿ ಅಲ್ಪಸಂಖ್ಯಾತರನ್ನು ಹೊರಗಿಟ್ಟಿರುವುದು ಬೇಸರತರಿಸುತ್ತದೆ.
ಕೊನೆಯ ಮಾತು:ಇಂತಹ ದೇಶಕ್ಕೆ ಭಾರತವು ಹಿಂದಿನ ಶನಿವಾರ ೧೨ಲಕ್ಷ ಕರೋನಾ ಲಸಿಕೆ ಕೊಟ್ಟಿದೆ. ಆದರೆ ಬಾಂಗ್ಲಾದೇಶ ದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಓದಿದಾಗ ಇಂತಹ ದೇಶಕ್ಕೆ ನಾವು ಸಹಾಯ ಮಾಡಬೇಕೆ? ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ವಿದೇಶಾಂಗ-ವ್ಯವಹಾರ ಮಂತ್ರಿ ಜೈ ಶಂಕರ್ ಅವರ ಮಾತು ಪ್ರಸ್ತುತ, “ಇಂದಿನ ಜಾಗತೀಕರಣದ ಪ್ರಪಂಚದಲ್ಲಿ ನಿಮ್ಮ ಸುತ್ತವಿರುವ ರಾಷ್ಟ್ರಗಳು ಆರೋಗ್ಯವಿಲ್ಲದಿದ್ದಲ್ಲಿ ನೀವು ಆರೋಗ್ಯವಾಗಿರುವುದು ಸಾಧ್ಯವಿಲ್ಲ. ಅದರ ಜತೆಗೆ, ಆಪತ್ಕಾಲದಲ್ಲಿ ವೈರತ್ವವನ್ನು ಮರೆತು ಮಾನವತ್ವಕ್ಕೆ ಒತ್ತು ನೀಡುವುದು ಭಾರತದ ಸಂಸ್ಕಾರ. ಇದು ನಮ್ಮಿಬ್ಬರ ನಡುವಿರುವ ಅಂತರ.’