ಮೊದಲು ಮಟ್ಟ ಹಾಕಬೇಕಿದೆ ನಗರದ ನಕ್ಸಲ್‌ಗಳನ್ನು
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಮಂಗಳೂರಿನ ಎಮ್ಮೆಕೆರೆಯಲ್ಲಿರುವ ಕೊರಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಗೂ ಅಶ್ಲೀಲ ಬರಹದ ಚೀಟಿಗಳನ್ನು ಹಾಕಿ ಅಪಚಾರ ಎಸಗಿದವರಲ್ಲಿ ಒಬ್ಬ ಹುಚ್ಚನಂತಾಗಿ ತಲೆಯನ್ನು ಗೋಡೆಗೆ ಹೊಡೆದುಕೊಂಡು ರಕ್ತಕಕ್ಕಿ ಸತ್ತಿದ್ದಾನೆ.
ಇನ್ನಿಬ್ಬರು ಮಾನಸಿಕ ಹಿಂಸೆಗೆ ಒಳಗಾಗಿ ವಿಧಿಯಿಲ್ಲದೆ ಕೊರಗಜ್ಜನಿಗೆ ತಪ್ಪುಕಾಣಿಕೆ ಸಲ್ಲಿಸಿ ಪೊಲೀಸರಿಗೆ ಶರಣಾಗುತ್ತಾರೆ. ಸತ್ತವನ ಹೆಸರು ನವಾಜ್ ಮತ್ತು ಸಿಕ್ಕಿಬಿದ್ದಿರುವವರ ಹೆಸರು ತೌಫಿಕ್ ಮತ್ತು ರಹೀಂ. ಈ ಘಟನೆ ಬಹಳ ಸುದ್ದಿಯಾಗಿ ಕೊರಗಜ್ಜನ ಕಾರ್ಣಿಕ ಶಕ್ತಿ ಅನಾವರಣಗೊಂಡು ಇದೇನು ಪವಾಡವೋ ಅಥವಾ ಕಾಕತಾಳಿಯವೋ ಎಂಬುದು ಚರ್ಚೆಯಾಗುತ್ತಿದೆ.
ಆದರೆ ದೇಶಾಭಿಮಾನಿಗಳು ಇಂಥ ಕೊರಗಜ್ಜನ ಮಹಿಮೆ ಇಡೀ ದೇಶಕ್ಕೆ ಅನುಭೂತಿಯಾಗಿ ದುಷ್ಟರು ದೇಶದ್ರೋಹಿಗಳೆಲ್ಲಾ ಇಂಥ ದೈವೀಶಕ್ತಿಯ ಶಾಪಕ್ಕೆ ಒಳಗಾಗಿ ಬುದ್ಧಿಕಲಿಯಲಿ ಅಥವಾ ಸರ್ವನಾಶವಾಗಿ ಹೋಗಲಿ ಎಂದು ಬಯಸುತ್ತಿರುವುದು ಇಂದಿನ ಸಮಾಜದಲ್ಲಿನ ದೌರ್ಭಾಗ್ಯಗಳನ್ನು ಎತ್ತಿಹಿಡಿಯುತ್ತಿದೆ.
ಕಳೆದ ಶನಿವಾರ ಛತ್ತೀಸ್‌ಗಢದಲ್ಲಿ ನಕ್ಸಲರು ನಮ್ಮ ಯೋಧರನ್ನೇ ದಿಕ್ಕುತಪ್ಪಿಸಿ ಇಪ್ಪತ್ತೆರಡು ಮಂದಿ ಯೋಧರನ್ನು ಕೊಂದು ಒಬ್ಬ ಯೋಧನ ಕೈಯನ್ನು ಕತ್ತರಿಸಿ ಕೊಂಡೊಯ್ದಿದ್ದಾರೆ. ಅಲ್ಲದೇ ಮತ್ತೊಬ್ಬ ಯೋಧರಾದ ರಾಕೇಶ್ವರ್ ಸಿಂಗ್ ಮನ್ಹಾ ಎಂಬುವವರು ಕಾಣೆಯಾಗಿರುವುದು ಇಡೀ ದೇಶಕ್ಕೆ ಗಾಬರಿ ಹುಟ್ಟಿಸಿದೆ. ಇವರಿಗೆ ಅಂಥ ವ್ಯವಸ್ಥಿತ ಆಧುನಿಕ ಶಸ್ತ್ರಾಸ್ತ್ರಗಳು ಹೇಗೆಮತ್ತು ಯಾರಿಂದ ದೊರಕಿದೆ ಎಂಬುದು ಆತಂಕಕಾರಿ ವಿಚಾರ. ನಮ್ಮ ದೇಶಕ್ಕೆ ಕಂಕಟವಾಗಿರುವುದು ಇಸ್ಲಾಂ ಪ್ರಚೋದಿತ ಭಯೋತ್ಪಾದನೆ ಎಂಬುದು ಅಕ್ಷರಶಃ ಸತ್ಯ.
ಆದರೆ ಪರದೇಶದ ಮನೆಹಾಳು ಸಿದ್ಧಾಂತದವನ್ನು ತಲೆಯಲ್ಲಿ ತುಂಬಿಕೊಂಡಿರುವ ನಕ್ಸಲ್ ಸಂತತಿಯನ್ನೂ ನಮ್ಮ ದೇಶ ಕಾಲ ಕಾಲಕ್ಕೆ ಎದುರಿಸುತ್ತಾ ಬಂದಿದೆ. ಯೋಧರು ಪೊಲೀಸರು ನಾಗರಿಕರೂ ಈ ನಕ್ಸಲರಿಗೆ ಬಲಿಯಾಗಿದ್ದಾರೆ. ಒಂದು ಕಾಲದಲ್ಲಿ ದೇಶದೊಳಗಿನ ಆತಂಕವಾದಿಗಳಾಗಿದ್ದ ನಕ್ಸಲರ ಅಟ್ಟಹಾಸ ಇತ್ತೀಚೆಗೆ ಹಲವಾರು ರಾಜ್ಯಗಳಲ್ಲಿ ಕ್ಷೀಣಿಸುತ್ತಾ ಬಂದಿದೆ. ಆದರೂಈ ಸಂತತಿಯನ್ನು ಮುದ್ದಾಡಿಕೊಂಡು ಸದಾ ಜಾರಿಯಲ್ಲಿರುವಂತೆ ನೋಡಿಕೊಂಡ ಪಾಪ ಈ ದೇಶದ ಹರ್ಬನ್ ನಕ್ಸಲರಿಗೆ (ನಗರ ನಕ್ಸಲರಿಗೆ) ಸಲ್ಲುತ್ತದೆ. ನಮ್ಮ ದೇಶದ ದೌರ್ಭಾಗ್ಯವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಸಂವಿಧಾನಿಕ ಹಕ್ಕು ಅನುಕೂಲಗಳನ್ನು ಕೆಟ್ಟದಾಗಿ ಬಳಸಿಕೊಂಡ ಅಯೋಗ್ಯರು ಇಂದು ಸಮಾಜವಿರೋಧಿಗಳಾಗಿ ಸಮಾಜದೊಳಗೆಯೇ ರಾಜಾರೋಷವಾಗಿಬದುಕುತ್ತಿದ್ದಾರೆ.
ಇದು ಎಷ್ಟರ ಮಟ್ಟಿಗೆ ಎಂದರೆ ಯಾವ ನಾಚಿಕೆ ಅಂಜಿಕೆಯಿಲ್ಲದೇ ನಾನು ನಗರ ನಕ್ಸಲ್? ಎಂದು ಎದೆಮೇಲೆ ಫಲಕ ನೇತು ಹಾಕಿಕೊಂಡು ನಕ್ಸಲ್ ವಾದವನ್ನು ಬೆಂಬಲಿಸುವ ಎಡಬಿಡಂಗಿಗಳ ಒಂದು ದೊಡ್ಡ ಸಮೂಹವೇ ದೇಶದೊಳಗಿದೆ. ಅಹಂಕಾರ, ಆಕ್ರಮಣ, ಸ್ವವೈಭವೀಕರಣ, ದರ್ಪ, ಸರ್ವಾಧಿಕಾರ, ಇವುಗಳ ಸಂತೈಸುವಿಕೆಗಾಗಿ ಹುಟ್ಟಿಕೊಂಡಿದ್ದೇ ಸಮಾಜ ವಿರೋಧಿ ಸಿದ್ಧಾಂತ. ಇದರಿಂದ ಹುಟ್ಟಿಕೊಂಡ ಕಾಲ್‌ಮಾರ್ಕ್ಸ್, ಲೆನಿನ್, ಸ್ಟಾಲೀನ್ ಟ್ರಾಟಸ್ಕಿ ,ಪಾಲ್‌ಪಾಟ್, ಮಾವೋ ಎಂಬ ಮಾನವ ವಿರೋಧಿ ಕಿರಾತಕರಿಂದ ಆಯಾ ದೇಶಗಳಲ್ಲಿ ರಕ್ತಪಾತಗಳಾಗಿವೆ.
ಆದರೆ ನಮ್ಮ ದೇಶ ಸರ್ವೇ ಜನಃ ಸುಖಿನೋ ಭವಂತು ಎಂಬ ಸಂದೇಶವನ್ನು ಜಗತ್ತಿಗೆ ನೀಡಿದೆ. ರಾಮಾಯಣವೇ ಆಗಲಿ ಮಹಾಭಾರತವೇ ಆಗಲಿ ಧರ್ಮದ ಮೇಲೆ ಅಧರ್ಮ ಆಕ್ರಮಣ ಮಾಡಿದಾಗಲೇ ಮಾತ್ರ ಯುದ್ಧಗಳಾಗಿವೆ. ಪರಂತು, ಏಕಾಏಕಿ ವಿನಾಕಾರಣ ಅನ್ಯರ ಮೇಲೆ ದಂಡೆತ್ತಿ ದಾಳಿ ಮಾಡಿದ್ದಿಲ್ಲ. ಆದರೆ ಈ ಕಮ್ಯುನಿಸ್ಟರು ಸಮಾಜವಿರೋಧಿ ಸಿದ್ಧಾಂತವನ್ನು ನಮ್ಮ ಭಾರತದಲ್ಲಿ ಪ್ರಯೋಗಿಸಿ ಅದಕ್ಕೆ ರಾಜಕೀಯ ವೇದಿಕೆ ಕಲ್ಪಿಸಿ ಇಡೀ ರಾಜ್ಯಗಳನ್ನೇ ತನ್ನ ಕಂತ್ರಿಮುಷ್ಠಿಯಲ್ಲಿರಿಸಿಕೊಳ್ಳಲಾಗಿದೆ.
ಅಷ್ಟೇ ಅಲ್ಲದೇ ಇಂಥ ದುಷ್ಟ ಸಿದ್ಧಾಂತಕ್ಕೂ ನಮ್ಮ ದೇಶದಲ್ಲಿ ಪವಿತ್ರವಾದ ಸಂವಿಧಾನಾತ್ಮಕ ಚೌಕಟ್ಟು ದೊರಕಿರುವುದು ದುರಂತ. ಇಂಥ ಅಸಹಜ ಅವೈಜ್ಞಾನಿಕವಾದ ಅಪಾಯಕಾರಿ ಚಿಂತನೆಗಳಿಂದ ಪ್ರೇರಣೆ ಪಡೆದ ಕಮ್ಯುನಿಸ್ಟರ ಹಿಂಸಾತ್ಮಕಸಮಾಜವಾದವನ್ನು ಆದರ್ಶವಾಗಿಸಿಕೊಂಡ ಅದೆಷ್ಟೋ ಹಳ್ಳಿಗಾಡಿನ ಯುವಕ ಯುವತಿಯರು ತಮ್ಮ ಬದುಕನ್ನು ಹಾಳು ಮಾಡಿಕೊಂಡಿದ್ದಾರೆ.
ಶೋಷಣೆ ಅಸಮಾನತೆ ಅನ್ಯಾಯವನ್ನು ಎದುರಿಸಲು ಇಂಥ ಪರದೇಶಿ ಚಿಂತನೆ ಗಳನ್ನು ತಲೆಗೂಡಿಸಿಕೊಂಡು ದಾರಿತಪ್ಪಿ ಭಯೋತ್ಪಾದಕರಾಗಿದ್ದಾರೆ. ಇಂಥ ನಕ್ಸಲರು ಮೊದಲೆಲ್ಲಾ ಸಮಾಜವನ್ನು ತಿದ್ದುವ ನೆಪಮಾಡಿಕೊಂಡು ಜನವಸತಿ ಪ್ರದೇಶ ಗಳಾಚೆ ಸೇರಿಕೊಂಡು ಸಂಚುಗಳನ್ನು ರೂಪಿಸಿ ರಾಜಕಾರಣಿಗಳನ್ನು ಬೆದರಿಸಿ ಸಮಾಜಕ್ಕೆ ಹಿಂಸಾವಾದದ ಸಂದೇಶಗಳನ್ನು ನೀಡುತ್ತಿದ್ದರು.
ಕಾಲಾಂತರದಲ್ಲಿ ಇಂಥ ಬೌದ್ಧಿಕ ನಕ್ಸಲಿಸಂನ್ನು ಅನುಸರಿಸಿದ್ದು ಭಾರತದಲ್ಲಿನ ಕೆಲ ವಿಶ್ವವಿದ್ಯಾಲಯ ಮಟ್ಟದ ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು, ಸಿನಿಮಾ ನಟರು, ಕಾಲ್ಪನಿಕ ಸ್ವಾತಂತ್ರ್ಯ ಹೋರಾಟಗಾರರು, ಅಸಹಿಷ್ಣುಗಳಲ್ಲದೆ, ಕೆಲ ತಲೆಕೆಟ್ಟಕಾವಿಧಾರಿಗಳೂ ಪ್ರೇರಣೆ ಪಡೆದುಬಿಟ್ಟರು. ಇವರುಗಳು ನಮ್ಮ ದೇಶದ ನಾಗರಿಕತೆಯಲ್ಲಿ ನಕ್ಸಲಿಸಂ ಇತಿಹಾಸ ವಿಲ್ಲದಿದ್ದರೂ ಅದನ್ನು ಬಲವಂತವಾಗಿ ಬೀದಿನಾಯಿಯನ್ನು ಸಾಕುವಂತೆ ಸಾಕಿಕೊಂಡು ಬಂದು ಜವಾಬ್ದಾರಿ ಇಲ್ಲದ ಸುಖವನ್ನೇ ಅನುಭವಿಸಿಕೊಂಡು ಬಂದರು.
ಯಾವ ನಕ್ಸಲಿಸಂ ಸಮಾಜವಿರೋಧಿ ಎಂದು ಕರೆಸಿಕೊಂಡಿತೋ ಅದನ್ನೇ ತಮ್ಮ ತುಕ್ಕುಹಿಡಿದ ಇಮೇಜನ್ನು ವೃದ್ಧಿಸಿಕೊಳ್ಳಲು ಎನರ್ಜಿಯಾಗಿ ಬಳಸಿಕೊಂಡು ಬಂದರು. ಕಾಲೇಜು ವಿಶ್ವವಿದ್ಯಾಲಯಗಳು, ವಿದ್ಯಾರ್ಥಿ ಕ್ಷೇತ್ರ, ಕಾರ್ಮಿಕ ಸಂಘಟನೆಗಳು,ಕೊನೆಗೆ ದೈವಸ್ವರೂಪನಾದ ಅನ್ನದಾತನನ್ನೂ ಇದರ ಸೋಂಕಿಗೆ ಒಳಪಡಿಸಿ ಸರಕಾರಗಳ ವಿರುದ್ಧ ಸಮಾಜದ ವಿರುದ್ಧ ಎತ್ತಿಕಟ್ಟುತ್ತಾ ಬಂದರು. ಇಂಥ ದರಿದ್ರ ಆಕೃತಿಗಳ ಸಹವಾಸದಿಂದ ಇಂದು ಅನ್ನದಾತ ರೈತನ ಮೇಲಿನ ಪೂಜ್ಯ ಭಾವನೆಯೇ ಹಾಳಾಗುತ್ತಿದೆ.
ಇವರಿಂದ ಪ್ರೇರಣೆ ಪಡೆದ ಸಮಾಜದಲ್ಲಿನ ಅನೇಕ ದಂಡಪಿಂಡಗಳು, ರೌಡಿಗಳು, ಮೈಗಳ್ಳರು ತಮ್ಮ ಹೊಟ್ಟೆಪಾಡಿಗಾಗಿ ರೋಲ್‌ಕಾಲ್‌ಗಳಿಗಾಗಿ ಬೀದಿ ಬೀದಿಗೂ ಮಾನವಹಕ್ಕು – ಭ್ರಷ್ಟಾಚಾರ ನಿರ್ಮೂಲನೆ ಎಂಬ ಪದಗಳನ್ನು ಬಳಸಿಕೊಂಡು ಜನಸಾಮಾನ್ಯರನ್ನು ಅಮಾಯಕರನ್ನು ಬೆದರಿಸಿ ಜೀವನ ನಡೆಸಲಾರಂಭಿಸಿದರು. ಈಗಲೂ ರಸ್ತೆಯ ಮೇಲಿನ ದುಬಾರಿ ಕಾರುಗಳ ಮೇಲೆ ಅಧ್ಯಕ್ಷ, ಸಂಸ್ಥಾಪಕ ಎಂಬ ಬೋರ್ಡನ್ನು ಕಂಡರೆ ಜನರಿಗೆ ಅಸಹ್ಯವಾಗುತ್ತದೆ.
ಇನ್ನು ಮೇಲುಕೀಳು, ಶೋಷಣೆ, ಮೀಸಲಾತಿ, ಜಾತಿವಾದ ಇವುಗಳನ್ನು ಈಗಿನ ರಾಜಕಾರಣಿಗಳು, ಜಾತಿ ಮಠಾಧಿಪತಿಗಳು ಅಗ್ಯತಕ್ಕಿಂತ ಹೆಚ್ಚಾಗಿಯೇ ನಿಭಾಯಿಸುತ್ತಿದ್ದಾರೆ. ಹೀಗಾಗಿ ಕಾಡುಮೇಡುಗಳಲ್ಲಿನ ನಕ್ಸಲರಿಗಿಂತ ಹೆಚ್ಚು ಈ ನಗರದ ನಕ್ಸಲರೇ ಸದ್ದು ಮಾಡಲಾರಂಭಿಸಿದನ್ನು ಕಂಡು ದಂಗಾದ ಅನೇಕ ನಕ್ಸಲ್ ಸಂಘಟನೆಗಳು ಇನ್ನು ನಮಗೇನು ಕೆಲಸ ಎಂದು ತಮ್ಮಚಟುವಟಿಕೆಗಳನ್ನು ಕೈಬಿಟ್ಟು ಸಮಾಜದೊಳಗೊಂದಾಗಿದ್ದಾರೆ. ಆದರೆ ಹೆಣಸುಟ್ಟಮೇಲೆ ಕೆಟ್ಟ ಹೊಗೆಯಾಡುವಂತೆ ಇಂದಿಗೂ ನಮ್ಮ ಸಮಾಜದಲ್ಲಿ ಈ ಕಮ್ಯುನಿಸ್ಟರ ಸಿದ್ಧಾಂತವನ್ನು ಪ್ರಚೋದಿಸಿಕೊಂಡು ಬರುತ್ತಿರುವ ದಿಢೀರ್ ಬುದ್ಧಿಜೀವಿಗಳಾಗಿರುವ ಕೆಲಸಿನಿಮಾ ನಟರುಗಳು, ಸಾಹಿತಿಗಳು ತಮ್ಮ ಅಸಹ್ಯ ಅಸ್ತಿತ್ವವನ್ನು ಸಾಬೀತುಪಡಿಸಿಕೊಂಡು ಬರುತ್ತಿದ್ದಾರೆ.
ಬಾಯಿಬಿಟ್ಟರೆ ಮಾನವಹಕ್ಕುಗಳ ಬಗ್ಗೆ ಮಾತನಾಡುವ ಇವರು ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಹುತಾತ್ಮರಾದ ಇಪ್ಪತ್ತೆರಡು ಮಂದಿ ಯೋಧರ ಬಲಿದಾನವಾದಾಗ ಹೇಸಿಗೆ ಮುಖಗಳ ಅಹಿಂಸಾ ನಿಶ್ಚೇಚೇತನಗಳು, ಆಸ್‌ಕಿಂಗ್ (ಕತ್ತೆರಾಜ) ಒಂದು ರುಪಾಯಿ ಬೆಲೆಯ ಖಳನಟರು, ಹೆಸರಿಗೆ ತಕ್ಕಂತೆ ಹರಹರ ಮಹದೇವ್ ಎನ್ನದ ಸಮಯವಾದಿಗಳು, ಎಡಬಿಡಂಗಿ ಸಾಹಿತಿಗಳು, ಪ್ರೇಮಿಗಳ ದಿನಕ್ಕಾಗಿ ರಸ್ತೆಗಿಳಿದು ಉರುಳಾಡುವವವರು, ಹೊಟ್ಟೆಪಾಡಿನ ಸಂಘಟನೆಗಳು, ದಳ್ಳಾಳಿ ನಾಯಕರು,ಮಹಾನ್ ಮಾನವತಾವಾದಿ ರಾಜಕಾರಣಿಗಳು ಈಗ ಮೌನವಹಿಸಿರುವುದು ದುರದೃಷ್ಟಕರ.
ಇಂಥವರಿಗೆ ಯೋಧರ ಮೇಲೆ, ಅದರಲ್ಲೂ ನಕ್ಸಲರಿಂದ ಹುತಾತ್ಮರಾದ ಯೋಧರ ಮೇಲೆ ಮರುಕ ಅನುಕಂಪ ಹುಟ್ಟುವುದನ್ನು ಇಂದಿನ ಯಾವ ಪ್ರಜ್ಞಾವಂತನೂ ನಿರೀಕ್ಷಿಸಲಾರ. ಏಕೆಂದರೆ ಇವರ ಯೋಗ್ಯತೆಯನ್ನು ಕಂಡಿರುವ ದೇಶಾಭಿಮಾನಿ ನಾಗರಿಕರ ಮುಂದೆ ಇವರುಗಳು ಎಂದೋ ನೈತಿಕ ಬೆತ್ತಲಾಗಿದ್ದಾರೆ. ಇಂಥ ಅನಿಷ್ಟರ ಪ್ರಭಾವ ಮತ್ತು ಕುಮ್ಮಕ್ಕಿನಿಂದಾಗಿ ಇತ್ತೀಚೆಗೆನಮ್ಮ ಯೋಧರು ಹುತಾತ್ಮರಾದಾಗ ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಎಮೊಜಿಗಳನ್ನು ಪ್ರಕಟಿಸಿದವರು ಮಾತ್ರ ಅದೇ ಮುಸ್ಲಿಂ ಹೆಸರಿನ ವಿಕೃತ ಆಕೃತಿಗಳೇ.
ದೇಶದ ಸನಾತನ ವೈಚಾರಿಕತೆಯನ್ನು ಹಾಳುಮಾಡುವುದು, ಸರ್ವಾಧಿಕಾರ, ಸಮಾಜ ನಿಯಂತ್ರಣ, ಮಾನವ ಮೌಲ್ಯಗಳನ್ನು ನಾಶಪಡಿಸುವ ಮೂಲೋದ್ಧೇಶ ಹೊಂದಿರುವ ಕಮ್ಯೂನಿಸ್ಟರ ಸಿದ್ಧಾಂತ ಮತ್ತು ಇದರ ಅನೈತಿಕ ಕೂಸಿನಂತಿರುವ ನಕ್ಸಲಿಸಂ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಜೀವಂತವಾಗಿದ್ದುದೇ ರಷ್ಯಾ ಮತ್ತು ಚೀನಾದಂಥವರ ಪರೋಕ್ಷ ಬೆಂಬಲದಿಂದ ಮತ್ತುಅಂಥವರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದ ನಮ್ಮದೇ ದೇಶದ ರಾಜಕೀಯ ಪಕ್ಷಗಳ ತಲೆಯಿಲ್ಲದ ನಾಯಕರುಗಳಿಂದ.
ಯಾವಾಗ ಮೋದಿಯವರ ಸರಕಾರ ಅಸ್ತಿತ್ವಕ್ಕೆ ಬಂದು ಕಾಶ್ಮೀರಕ್ಕೆ ಶಾಪವಾಗಿದ್ದ 370ವಿಧಿ ಬರಹವೇ ಕಳಚಿಬಿತ್ತೋ, ಭಯೋತ್ಪಾದಕರ ವಿರುದ್ಧ ಸರ್ಜಿಕಲ್ ಮತ್ತು ಏರ್‌ಸ್ಟ್ರೆ ಕ್‌ಗಳಾಗಿ ದೇಶದೊಳಗಿನ ದ್ರೋಹಿಗಳ ನಿದ್ದೆಗೆಟ್ಟಿತೋ, ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆರಂಭವಾಯಿತೋ, ಸಿಎಎ, ಎನ್‌ಆರ್‌ಸಿ ಕಾಯಿದೆಗಳು ಮೇಲಿದ್ದಿತೋ, ಅನೇಕ ಮನೆಹಾಳು ಎನ್ ಜಿಒಗಳಿಗೆ ಹರಿದು ಬರುತ್ತಿದ್ದ ಹಣಕ್ಕೆ ಕತ್ತರಿಬಿತ್ತೋ, ಮುಂದಿನ ಪ್ರಧಾನಿಗಳಾಗಿ ಅಮಿತ್‌ಶಾ, ಯೋಗಿಜೀಅವರ ಹೆಸರುಗಳು ಪ್ರಸ್ತಾಪವಾಯಿತೋ, ಅದಕ್ಕಿಂತ ಹೆಚ್ಚಾಗಿ ದೇಶದಲ್ಲಿ ಗುಲಾಮರು ಮತ್ತು ಭಕ್ತರು ಎಂಬ ವರ್ಗೀಕರಣ ಹುಟ್ಟಿಕೊಂಡಿತೋ ಆಗಲೇ ನೋಡಿ ಇವರೆಲ್ಲಾ ಕಂಗಾಲಾಗಿಹೋದರು.
ಚುನಾವಣೆಯಲ್ಲಿ ಸೋಲುಗಳು ಖಚಿತ ಎಂದು ಮನಗಂಡ ಸಂತ್ರಸ್ತರು ಅಸಹಿಷ್ಣು ಸಾಹಿತಿಗಳನ್ನು, ಮಾರುಕಟ್ಟೆಯ ದಳ್ಳಾಳಿಗಳನ್ನು, ಕೊನೆಗೆ ನಕ್ಸಲಿಸಂನ್ನು ಪ್ರಚೋದಿಸುವ ಕೆಲಸಕ್ಕಿಳಿದುಬಿಟ್ಟರು. ಇವರ ಉದ್ದೇಶ ಸ್ಪಷ್ಟ. ಸಮಾಜದಲ್ಲಿ ಆತಂಕ ಹುಟ್ಟಿಸುವುದು, ವ್ಯವಸ್ಥೆಯನ್ನು ಹಾಳುಗೆಡಿಸುವುದು, ಜಾಗತಿಕವಾಗಿ ದೇಶದ ಘನತೆ ಯನ್ನು ಕೆಡಿಸುವುದು, ಜಾತಿಧರ್ಮ ಭೇದಗಳನ್ನು ಜಾರಿಯಲ್ಲಿಟ್ಟು ಸಮಾನತೆ ಸಹಬಾಳ್ವೆಯನ್ನು ನಾಶಮಾಡುವುದು. ಮತ್ತು ಇವಿಷ್ಟನ್ನು ಮಾಡಿಕೊಂಡುದೇಶದ ಭವಿಷ್ಯವನ್ನು ಹಾಳುಮಾಡುವುದು.
ಒಂದಾನೊಂದು ಕಾಲದ ಪ್ರಧಾನಿ ಎಂದು ಬಿಂಬಿಸಿಕೊಂಡಿರುವ ಮಹಾಪುರುಷ ರಾಹುಲ್‌ಗಾಂಧಿ ಪಕ್ಕದ ಮನೆಯವನ ಹತ್ತಿರ ಹೋಗಿ ನಮ್ಮಪ್ಪನನ್ನು ಸ್ವಲ್ಪ ವಿಚಾರಿಸಿಕೋ ಎಂದು ಗೋಗರೆದಂತೆ ಭಾರತದಲ್ಲಿ ನಡೆಯುತ್ತಿರುವ ಯಾವೊಂದು ಬೆಳವಣಿಗೆಗಳ ವಿರುದ್ಧವೂ ಅಮೆರಿಕಾ ದನಿಯೆತ್ತುತಿಲ್ಲ, ಭಾರತವನ್ನು ಅಮೆರಿಕ ಪ್ರಶ್ನಿಸಬೇಕು? ಎಂಬ ಹೇಳಿಕೆ ನೀಡುತ್ತಾರೆಂದರೆ ಈತನ ಮನಸ್ಥಿತಿ ಇನ್ನಾವ ಗತಿಗೆ ಬಂದಿರಬಹುದು ಊಹಿಸಿ.
ಇಷ್ಟಕ್ಕೂ ಮೋದಿಯವರು ಪ್ರಧಾನಿಯಾಗುವವರೆಗೂ ನಮ್ಮ ದೇಶದ ಪ್ರಮುಖ ಸಚಿವಾಲಯಗಳನ್ನು ಹಂಚಿಕೆ ಮಾಡುತ್ತಿದ್ದದ್ದು ಅಮೆರಿಕ ಸಂಸತ್ತೆ ಎಂಬ ಭಯಾನಕ ಸತ್ಯವನ್ನು ಹೊರಹಾಕಿದ್ದು ಸಾಕ್ಷಾತ್ ಕಾಂಗ್ರೆಸ್‌ನ ಹಿರಿಯ ನಾಯಕ ನಟ್ವರ್‌ಸಿಂಗ್ ಎಂಬುದು ಉಲ್ಲೇಖನೀಯ. ಎಂಥ ದುರಂತವೋ ನೋಡಿ. ನಕ್ಸಲರನ್ನು ದೇಶದ್ರೋಹಿಗಳನ್ನು ಪಾಪಿಗಳನ್ನು ದೇಶದೊಳಗೆ ಸುರಕ್ಷಿತವಾಗಿಟ್ಟುಕೊಂಡು ಕಾಯುತ್ತಿರುವುದು ನಮ್ಮ ದೇಶದ ಸೇನೆ ಮತ್ತು ಸಂವಿಧಾನ.
ಶಿಕ್ಷಕರಿಂದ ಹಿಡಿದು ಸ್ವಾಮೀಜಿಗಳವರೆಗೂ ನಮ್ಮ ದೇಶದೊಳಗೆ ವಿಕೃತರಿರಬಹುದು. ಆದರೆ ಸೇನೆಯೊಳಗೆ ಅಂಥವರಿರಲುಸಾಧ್ಯವೇ ಇಲ್ಲ. ಪರಮವೈರಿ ಪಾಕಿಸ್ತಾನದ ಭಯೋತ್ಪಾದಕರನ್ನೂ ಮೀರಿಸುವ ಪೀಡೆಗಳು ದೇಶದೊಳಗಿದ್ದರೂ ಅವರನ್ನೂ ರಕ್ಷಿಸಿಕೊಂಡು ಬರುವಂಥ ಕರ್ಮ ನಮ್ಮ ಸೈನಿಕರದ್ದು. ಅಂದು ನೇತಾಜಿಯವರ ಭಾರತೀಯ ರಾಷ್ಟ್ರೀಯ ಸೇನೆಯಿಂದಪ್ರೇರಣೆಗೊಂಡ (ಬ್ರಿಟಿಷ್ ಆಡಳಿತದ) ಭಾರತೀಯ ಸೇನೆ ತಿರುಗಿಬಿದ್ದ ದಿಗಿಲಿನಿಂದ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರವನ್ನು ನೀಡಿ ರಾತ್ರೋರಾತ್ರಿ ಓಡಿಹೋಗಿದ್ದರು.
ಅಂಥ ದಂಗೆಯೆದ್ದ ಯೋಧರಂತೆ ಇಂದೇನಾದರು ನಮ್ಮ ಯೋಧರು ದೇಶದೊಳಗೆ ಮುಖಮಾಡಿ ಇಂಥ ನಕ್ಸಲರನ್ನು, ಸಮಾಜಕ್ಕೆ ಮಾರಕವಾಗಿರುವ ನಗರ ನಕ್ಸಲರನ್ನು, ದೇಶದ್ರೋಹಿ ಬುದ್ಧಿಜೀವಿಗಳನ್ನು, ನೀಚ ವೋಟ್‌ಬ್ಯಾಂಕ್ ರಾಜಕಾರಣಿ ಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸಿ ದೇಶವನ್ನು ಸುರಕ್ಷಿತವಾಗಿರಿಸಬಹುದು.
ಆದರೆ ನಮ್ಮದು ಸಂವಿಧಾನಾತ್ಮಕ ದೇಶ. ಅದಕ್ಕೂಮಿಗಿಲಾಗಿ ವಸುದೈವ ಕುಟುಂಬಕಂ ಎಂಬ ಸುಂದರ ಸಹಬಾಳ್ವೆಯ ಸಹಿಷ್ಣುತೆಯ ಧರ್ಮವಿರುವ ಸನಾತನ ದೇಶ. ಹೀಗಾಗಿ ಇಲ್ಲಿ ನಾಯಿ ನರಿ ಹೆಗ್ಗಣ ಗೂಬೆಗಳೆಲ್ಲಾ ಕ್ಕನ್ನು ಪಡೆದುಕೊಂಡ ದೇಶಕ್ಕೆ ಭಾರವಾಗಿ ಬದುಕುತ್ತಿದ್ದಾರೆ. ಹೀಗೆ, ನಗರ ನಕ್ಸಲರಿಗೆ ಚಿಂತೆಗೀಡುಮಾಡಿರುವ ವಿಚಾರವೆಂದರೆ 2014ರಲ್ಲಿನ ಮಾಹಿತಿಯಂತೆ ನಮ್ಮ ದೇಶದಲ್ಲಿ 20 ರಾಜ್ಯಗಳ 182 ಜಿಲ್ಲೆಗಳು ನಕ್ಸಲ್ ಪೀಡಿತವಾಗಿದ್ದವು.
2018ರ ವೇಳೆಗೆ ನಕ್ಸಲರ ಚಟುವಟಿಕೆಗಳು 60 ಜಿಲ್ಲೆಗಳಿಗೆ ಇಳಿದಿದೆ. ಇದೀಗ 2020ರ ಮಧ್ಯಂತರ ವರ್ಷಕ್ಕೆ ದೇಶದಲ್ಲಿ ಕೇವಲ 46ನಕ್ಸಲ್ ಪೀಡಿತ ಜಿಲ್ಲೆಗಳಿವೆಯಷ್ಟೆ. ಅಂದರೆ ಮೋದಿಯವರ ಸರಕಾರ ಅಸ್ತಿತ್ವಕ್ಕೆ ಬಂದಮೇಲೆ 2014ರಲ್ಲಿ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿದ್ದ ನಕ್ಸಲಿಸಂ ಇಂದು ಕೇವಲ ಎರಡು ರಾಜ್ಯಗಳಿಗೆ ಸೀಮಿತವಾಗಿದೆ. ಕಾರಣ ಕೇಂದ್ರ ಸರಕಾರ ನಕ್ಸಲರನ್ನು ಬೇಟೆಯಾಡುತ್ತಾ ಮಟ್ಟಹಾಕುತ್ತಾ ಬರುತ್ತಿರುವುದು ನಗರ ನಕ್ಸಲರಿಗೆ ರವರವ ನರಕ, ಕೆಟ್ಟಕನಸಾಗಿ ಕಾಡುತ್ತಿದೆ.
ಹೀಗಾಗಿ ಇತ್ತೀಚೆಗೆ ನಡೆದ ಯೋಧರ ಮೇಲಿನ ನಕ್ಸಲರ ದಾಳಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳೊಂದಿಗೆ ನ್ಯಾಯಾಲಯ ಗಳೂ ಗಂಭೀರವಾಗಿ  ಪರಿಗಣಿಸಿ ಮೊದಲು ಈ ನಗರದ ನಕ್ಸಲರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಸರಿಯಾಗಿ ಮಟ್ಟಹಾಕಲೇ ಬೇಕಿದೆ. ಜತೆಗೆ ಸಾರ್ವಜನಿಕರು ಸಿನಿಮಾನಟರ ಸೋಗಿನಲ್ಲಿರುವ ತಿಕ್ಕಲು ವಿಚಾರ ವ್ಯಾದಿಗಳನ್ನು, ಡೋಂಗಿ  ಅಹಿಂಸಾವಾದಿ ಗಳನ್ನು ಸರಿಪಡಿಸಬೇಕಿದೆ. ಯೋಧರಪರ ದೇಶದಪರ ಆತ್ಮಾಭಿಮಾನವನ್ನು ಬೆಳಸಿಕೊಂಡು ದೇಶದ ಭದ್ರತೆಯಲ್ಲಿ ಪ್ರತಿಯೊಬ್ಬರೂ ಹೊಣೆಗಾರಿಕೆ ತೋರಬೇಕಿದೆ.
ಉಳಿದದ್ದನ್ನು ನೋಡಿಕೊಳ್ಳಲು ನಮ್ಮ ಕೊರಗಜ್ಜ ಇದ್ದೇ ಇರುತ್ತಾರೆ ಅಲ್ಲವೇ?.