ಆಡಳಿತ ಪಕ್ಷಗಳು ಕಚ್ಚಾಟದಿಂದ ದೂರವಿದ್ದು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿ
ಅವಲೋಕನ
ಶ್ಯಾಮ್ ಹಂದೆ
ಕರೋನಾ ಮತ್ತು ಲಾಕ್‌ಡೌನ್ ಛಾಯೆಯಲ್ಲಿರುವ ಮಹಾರಾಷ್ಟ್ರ ಬೊಕ್ಕಸದ ಅವಸ್ಥೆ ಹೇಳುವಂತಿಲ್ಲ. ರಾಜ್ಯದ ತೆರಿಗೆ ಆದಾಯದಲ್ಲಿ ಒಂದು ಲಕ್ಷ ಕೋಟಿ ರುಪಾಯಿಯ ಕೊರತೆ ಬಿದ್ದಿದೆ. ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಧೈರ್ಯದ ನಾಯಕರಾಗಿದ್ದರೂ, ತುಂಬಿ ತುಳುಕುವ ಮಹಾರಾಷ್ಟ್ರದ ಖಜಾನೆಯ ಸೋರಿಕೆಯಿಂದ ಅವರು ಚಿಂತೆಯಲ್ಲಿರಬಹುದು.
ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಿಂದ ರಾಜ್ಯವನ್ನು ಹೊರತರಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನು ಇತ್ತೀಚೆಗೆ ನೇಮಿಸಲಾಗಿತ್ತು. ಆದರೆ ಇತರ ಸಮಿತಿಗಳಂತೆ ಅದರ ಗತಿ ಯಾಗಿರಬೇಕು. ಆರ್ಥಿಕ ಶಿಸ್ತಿಗಾಗಿ ಆಡಳಿತ ಎಷ್ಟೇ ಕಠಿಣ ಕ್ರಮಗಳನ್ನು ಸೂಚಿಸಿದರೂ, ಅದರ ಅನುಷ್ಠಾನದ ಧೈರ್ಯ ರಾಜಕಾರಣಿಗಳಿಗಿಲ್ಲ. ಕಾರಣ ಜನಕ್ಷೋಬೆ. ಅಜಿತ್ ಪವಾರ್ ಧೈರ್ಯ ಮಾಡಬಹುದು, ಆದರೆ ತ್ರಿಚಕ್ರ ಸರಕಾರದಿಂದಾಗಿ ಅವರಿಗೂ ಮಿತಿಗಳಿವೆ.
ಕರೋನಾ ಬಿಕ್ಕಟ್ಟಿನಲ್ಲಿ ಕಠಿಣ ಆರ್ಥಿಕ ಕ್ರಮಗಳನ್ನು ತೆಗೆದುಕೊಂಡರೆ ತಾವೇ ತೋಡಿದ ಹೊಂಡದಲ್ಲಿ ಬೀಳಬಹುದೆಂಬ ಭೀತಿ ಸರಕಾರಕ್ಕಿರಬಹುದು. ಸಿಬ್ಬಂದಿ ವೇತನ ಸೇರಿದಂತೆ ರಾಜ್ಯಕ್ಕೆ ತಿಂಗಳಿಗೆ ಇಪ್ಪತ್ತು ಸಾವಿರ ಕೋಟಿ ರು.ಖರ್ಚಿದೆ. ಸಿಬ್ಬಂದಿಯನ್ನುಕಡಿತಗೊಳಿಸದೆ ಈ ವೆಚ್ಚವನ್ನು ಕಡಿಮೆ ಮಾಡಬಹುದು ಮತ್ತು ಉಳಿತಾಯದ ಹಣವನ್ನು ಉದ್ಯೋಗ ಸೃಷ್ಟಿಸಲೂ ಬಳಸ ಬಹುದು, ಆದರೆ ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ. ರಾಜ್ಯದ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಲು ಕಠಿಣ ನಿರ್ಧಾರ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳುವ ಧೈರ್ಯ ಪ್ರಸ್ತುತ ಪರಿಸ್ಥಿತಿಯಲ್ಲಿ ಆಡಳಿತಗಾರರಿಗಿಲ್ಲ.
ಎರಡು ವಿಷಯಗಳಿಗೆ ಸರ್ವಪಕ್ಷ ಸಮಿತಿಯನ್ನು ನೇಮಿಸಬೇಕು. ಒಂದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಇನ್ನೊಂದು ಕೇಂದ್ರದಿಂದ ಹಣವನ್ನು ಪಡೆಯಲು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ರಾಜ್ಯದ ಆರ್ಥಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಚ್ಚಾಟ ಬದಿಗಿಟ್ಟು ಪರಸ್ಪರ ನಂಬಿಕೆ ಇಟ್ಟು ಸಮನ್ವಯ ಸಾಧಿಸುವುದು ರಾಜ್ಯದ ಹಿತದೃಷ್ಟಿಯಿಂದ ಅಗತ್ಯದಾಗಿದೆ. ಸಚಿನ್ ವಾಜೇದ್ದು ಏನುಬೇಕಾದರೂ ಆಗಲಿ; ಲಾಕ್‌ಡೌನ್ ಛಾಯೆಯಡಿ ಭಯಭೀತರಾದ ಸಾಮಾನ್ಯಜನರದೇನಾಗುತ್ತದೆ ಎಂಬುದು ಮುಖ್ಯ!
ಕೊಹ್ಲಿ ಒಂದು ಸ್ಟಂಪ್‌ನಿಂದ ಮತ್ತೊಂದಕ್ಕೆ ಓಡಿ ಕೋಟ್ಯಂತರ ರುಪಾಯಿಗಳನ್ನು ಗಳಿಸುತ್ತಾನೆ. ಹೊಲದ ಒಂದು ತುದಿಯಿಂದ ಇನ್ನೊಂದು ತುದಿಗೆ ದಣಿವರಿಯಿಲ್ಲದೆ ಕೆಲಸ ಮಾಡುವ ರೈತರ ಬಗ್ಗೆ ಯೋಚಿಸುವವರಾರು? ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಪರಸ್ಪರರ ಬಟ್ಟೆಗಳನ್ನು ಹರಿಯುವ ಬದಲು, ಒಗ್ಗೂಡಿ ರಾಜ್ಯದ ಖಜಾನೆಯನ್ನು ಹೊಲಿಯುವುದು ಉತ್ತಮ. ಆದಾಯ ಕಡಿಮೆಯಾದ ಸಂದರ್ಭದಲ್ಲಿ ತೆರಿಗೆಗಳನ್ನು ಹೆಚ್ಚಿಸುವುದು ಒಂದು ಮಾರ್ಗವಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ವ್ಯವಹಾರಕೌಶಲ್ಯ ಮತ್ತು ಮಾನವೀಯತೆಯ ಮಗ್ಗಲು ಅಗತ್ಯ.
ಖರ್ಚಿಗೆ ಆದ್ಯತೆ ನೀಡುವಾಗ ನಾವು ಅನೇಕ ವರ್ಷಗಳಿಂದ ಅನೇಕ ತಪ್ಪುಗಳನ್ನು ಮಾಡಿದ್ದೇವೆ, ಆದರೆ ಈಗ ಅವು ಮುಂದು ವರಿಸುವಂತಿಲ್ಲ. ಕರೋನಾ ನಮಗೆ ತಂತ್ರಜ್ಞಾನದ ಹೊಸ ಜಗತ್ತನ್ನು ತೋರಿಸಿದೆ. ತಹಶೀಲ್ದಾರರಿಂದ ಹಿಡಿದು ಮುಖ್ಯ ಕಾರ್ಯದರ್ಶಿ, ಸಚಿವರು ಮತ್ತು ಜನಪ್ರತಿನಿಽಗಳು ಕರೆದ ಸಭೆಗಳು ಮತ್ತು ಕಾಗದ ರಹಿತ ಆಡಳಿತದ ಕೊರತೆಯಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ ನಾಲ್ಕರಿಂದ ಐದು ಸಾವಿರ ಕೋಟಿ ರು. ಖರ್ಚಾಗುತ್ತವೆ.
ಕಾರ್ಪೊರೇಟ್ ವಲಯದಲ್ಲಿ, 1000-2000 ಕೋಟಿ ರು. ನಿರ್ಣಯ ಜೂಮ್ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ರಾಜ್ಯ ಸರಕಾರವು ಅದೇ ಮಾರ್ಗದಲ್ಲಿ ತಾಂತ್ರಿಕ ನಿಯಮಾವಳಿಯನ್ನು ಸಿದ್ಧಪಡಿಸಿ ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ತಂತ್ರಜ್ಞಾನ ಸ್ನೇಹಿ ಮತ್ತು ಭ್ರಷ್ಟಾಚಾರ – ವಿರೋಧಿ ಕಾರ್ಯವಿಧಾನವನ್ನು ಸ್ಥಾಪಿಸುವುದು ಅಗತ್ಯದಾಗಿದೆ. ಎಲ್ಲಾ ನಿಗಮಗಳನ್ನು ಒಂದೇ ಸೂರಿನಡಿ ತಂದು ಅವುಗಳ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.
ಖಾಲಿ ಇರುವ ಸರಕಾರಿ ಜಮೀನುಗಳ ಮಾಲೀಕತ್ವವನ್ನು ತಮ್ಮ ಉಳಿಸಿ ಅವುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಯೋಜನೆಯನ್ನು ಸರಕಾರ ಒಮ್ಮೆ ತಂದಿತ್ತು, ಆದರೆ ರಾಜ್ಯ ಮಾರಾಟಕ್ಕೆ ತೆಗೆದಿದ್ದಾರೆ ಎಂದು ಆರೋಪಿಸಲಾದ ನಂತರ ಕೈ ಬಿಡಲಾಯಿತು. ಬದಲಾಗುತ್ತಿರುವ ಸಂದರ್ಭಗಳಲ್ಲಿ ಈ ಆಯ್ಕೆಯನ್ನು ಅನ್ವೇಷಿಸಬೇಕು…
ನೀವು ನನ್ನನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ!:ಕಳೆದ ವಾರ ಸಂಜಯ್ ರಾವುತ್ ಮಿತ್ರ ಪಕ್ಷಗಳಿಗೆ ಚುಚ್ಚುವ ಹಾಗೇ ಎರಡು ಹೇಳಿಕೆಗಳನ್ನು ನೀಡಿದ್ದರು. ಶರದ್ ಪವಾರ್ ಯುಪಿಎ ಅಧ್ಯಕ್ಷರಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದಲ್ಲದೇ ಅನಿಲ್ ದೇಶ್ಮುಖ್ ಅವರು ಆಕಸ್ಮಿಕ ಗೃಹ ಸಚಿವರು ಎಂದು ತಮ್ಮ ಲೇಖನದಲ್ಲಿ ಬರೆದರು. ಎನ್‌ಸಿಪಿ ಮತ್ತು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ನಾನಾ ಪಾಟೋಲೆ ಈ ವಿಷಯದಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಸರಕಾರ ಪ್ರಸ್ತುತ ಪರಿಸ್ಥಿತಿಯಲ್ಲಿ ತೊಂದರೆಯಲ್ಲಿದೆ. ಅಧಿಕಾರದಲ್ಲಿರುವ ಮೂರು ಪಕ್ಷಗಳ ನಡುವಿನ ಸಂಬಂಧ ಬಿಗಡಾಯಿ ಸುತ್ತಿದೆ. ರಾವುತ್ ಅವರ ಹೇಳಿಕೆ ಮೈತ್ರಿ ಸರಕಾರಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ ಎಂದು ತರ್ಕ – ವಿರ್ತಕ ಮಾಡಲಾದರೂ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಪುನಃ ಪಕ್ಷದ ಮುಖ್ಯ ವಕ್ತಾರರಾಗಿ ನೇಮಿಸಿದ್ದಾರೆ. ಈ ನೇಮಕಾತಿ ಮಾಡುವಾಗ,ಅರವಿಂದ ಸಾವಂತ್ ಅವರನ್ನು ಎರಡನೇ ಮುಖ್ಯ ವಕ್ತಾರರನ್ನಾಗಿ ನೇಮಿಸಲಾಗಿದೆ. ಇದು ರಾವುತ್‌ರಿಗೆ ಎಚ್ಚರಿಕೆಯ ಗಂಟೆಯೆ? ಎಂಬ ಚರ್ಚೆ ಕಾವೇರಿದೆ.
ರಾವುತ್ ಶಿವಸೇನೆಯ ಭೂಮಿಕೆ ಮಂಡಿಸುತ್ತಾರೋ ಅಥವಾ ಅವರು ಮಂಡಿಸಿದ ಪಾತ್ರವನ್ನು ಶಿವಸೇನೆ ಪಕ್ಷಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯೇ ಸರಿ. ಮೂರು ಬಾರಿ ಸಂಸದರಾಗಿದ್ದ ಅವರು ಮೂಲತಃ ಪತ್ರಕರ್ತರು. ಅನೇಕ ಪತ್ರಕರ್ತರಿಗೆ ಅಹಂಭಾವವಿರುತ್ತದೆ. ನನ್ನ ಆಜ್ಞೆಯ ಮೇರೆಗೆ ಸೂರ್ಯ ಉದಯಿಸಿ ನನ್ನ ಆಜ್ಞೆಯಂತೆ ಅಸ್ತಮಿಸುತ್ತಾನೆ. ನಾನೇ ಸರಿ ಎಂಬ ವ್ಯಾನಿಟಿ ಇರುತ್ತದೆ. ಇಂಥ ಅಹಂಭಾವ ರಾವುತ್‌ರಲ್ಲೂ ಇದೆ. ಆದರೆ ಅವರ ಯಶಸ್ಸಿನ ರಹಸ್ಯವೆಂದರೆ ಅದನ್ನು ಸರಿಯಾದ ಸ್ಥಳದಲ್ಲಿ ಬಳಸುವ ಸಾಮರ್ಥ್ಯ!
ರಾಜಕೀಯ ಆಟದಲ್ಲಿ ಚದುರಂಗದಂಥ ವ್ಯೂಹರಚನೆ ಮಾಡುವಲ್ಲಿ ಶಿವಸೇನೆ ಎಂದಿಗೂ ಆಸಕ್ತಿ ಹೊಂದಿಲ್ಲ. ರಾಜಕೀಯ ತರ್ಕ ಶಾಸ್ತ್ರದಲ್ಲಿ ಪಕ್ಷಕ್ಕೆ ಮೊದಲಿನಿಂದಲ್ಲೂ ಆಸಕ್ತಿ ಇರಲಿಲ್ಲ. ಬಹುಶಃ ಇದ್ದರೂ ಅದರ ಗೌಜಿಗೆ ಹೋಗುತಿರಲಿಲ್ಲ. ಆದರೆ ಈ ವಿಷಯದಲ್ಲಿ ಗಮನ ಹರಿಸದಿದ್ದರೆ ನಷ್ಟವಾಗುತ್ತದೆ ಎಂದು ತಿಳಿದ ಮೇಲೆ ರಾವುತ್ ಅವರಂಥ ವ್ಯಕ್ತಿಯ ಪ್ರಾಮುಖ್ಯತೆ ಪಕ್ಷದಲ್ಲಿ ಹೆಚ್ಚಾಯಿತು. ಅದಕ್ಕಾಗಿಯೇ ಅವರು ಇಂದು ಅನಿವಾರ್ಯವಾಗಿಲ್ಲದೇ ಮೀಡಿಯಾ ಡಾರ್ಲಿಂಗ್ ಆಗಿದ್ದಾರೆ. ಮಾಧ್ಯಮಗಳಲ್ಲಿಶಿವಸೇನೆ ಪಕ್ಷವನ್ನು ಲೈವ್ ಆಗಿರಿಸುತ್ತಾರೆ. ಕಟುವಾದ ಪಾತ್ರವನ್ನು ವಹಿಸುತ್ತಾರೆ ಎಂದು ಅವರನ್ನು ಇಷ್ಟಪಡದವರುಭಾವಿಸುತ್ತಾರೆ. ಅದೇ ಅವರ ಕಟುವಾದ ಟೀಕೆ – ಟಿಪ್ಪಣಿಗಳನ್ನು ಅಭಿಮಾನಿಗಳು ಇಷ್ಟ ಪಡುತ್ತಾರೆ.
ಇಂಥ ನಾಯಕರಲ್ಲಿ ಅಧ್ಯ-ಮಧ್ಯ ಏನು ಇರುವುದಿಲ್ಲ. ನೀವು ನನ್ನನ್ನು ಇಷ್ಟಪಡಬಹುದು, ನೀವು ನನ್ನನ್ನು ಇಷ್ಟಪಡದಿರಲೂ ಬಹುದು, ಆದರೆ ನೀವು ನನ್ನನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’. ಇದು ರಾವುತರ ಪರಿಯಾಗಿದೆ. ಪ್ರತಿ ಬಾರಿಯೂ ಅಂಥ ಪಾತ್ರ ವನ್ನು ತೆಗೆದುಕೊಳ್ಳುವಲ್ಲಿ ಅಪಾಯವಿದೆ. ಕೆಲವೊಮ್ಮೆ ಗುರಿ ತಪ್ಪಬಹುದು. ಆದರೆ ರಾವುತ್ ಕಿಲಾಡಿ ಆಟಗಾರರಾಗಿದ್ದಾರೆ. ಆದ್ದರಿಂದ ಅಪಾಯ ಕೂಡ ರಾವುತರಿಗೆ ಪ್ರತೀಬಾರಿ ವರವಾಗಿಯೂ ಪರಿಣಮಿಸುತ್ತಾ ಇರಬಹುದು.