ಅವರು ಕ್ವೀನ್‌ ಗಂಡನಾದರೂ ಕಿಂಗ್ ಆಗಲಿಲ್ಲ !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್‌
ಮೊನ್ನೆ ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಪತಿ ಫಿಲಿಪ್ ತಮ್ಮ ತೊಂಬತ್ತೊಂಬತ್ತನೇ ವಯಸ್ಸಿನಲ್ಲಿ ನಿಧನರಾದರಷ್ಟೇ. ಫಿಲಿಪ್ ನೋಡಿದಾಗಲೆಲ್ಲ ನನಗೆ ನೆನಪಾಗುವುದು ಥೇಟು ಒಬ್ಬ ಆದರ್ಶ ಅಮ್ಮಾವ್ರ ಗಂಡ ಅಥವಾ ಹೆಣ್ ಪೆಕ್ಡ್ ಗಂಡ!
ಇಪ್ಪತ್ನಾಲ್ಕು ವರ್ಷಗಳ ಹಿಂದೆ, ನಾನು ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗ, ನಮ್ಮನ್ನು ಬಕಿಂಗ್ ಹ್ಯಾಮ್ ಅರಮನೆಗೆ ಕರೆದುಕೊಂಡು (ಮೀಡಿಯಾ ಟೂರ್) ಹೋಗಿದ್ದರು. ಆಗ ರಾಣಿ ಹಿಂಬದಿಯಲ್ಲಿ ಕೈಕಟ್ಟಿ ಫಿಲಿಪ್ ನಿಂತಿದ್ದರು. ಅವರ ಸುದೀರ್ಘ ದಾಂಪತ್ಯ ಜೀವನದಲ್ಲಿ ಫಿಲಿಪ್ ಈ ಪಾತ್ರ (ಪತ್ನಿ ಹಿಂದೆ ಕೈಕಟ್ಟಿ ನಿಂತಿದ್ದು) ನಿರ್ವಹಿಸಿದ್ದೇ ಜಾಸ್ತಿ. ಅದೇ ದೃಶ್ಯ ನನ್ನ ಮನಸ್ಸಿನಲ್ಲಿ ಈಗಲೂ ಸ್ಥಾಯಿಯಾಗಿ ನಿಂತುಬಿಟ್ಟಿದೆ.
ಕಾರಣ ಅವರು ಇರುತ್ತಿದ್ದುದೇ ಹಾಗೆ. ಸದಾ ರಾಣಿಯ ಹಿಂಬದಿ ವಿಧೇಯರಾಗಿ ಕೈಕಟ್ಟಿ ನಿಂತುಕೊಳ್ಳುತ್ತಿದ್ದರು. ಈ ರೀತಿ ಅವರು 73 ವರ್ಷ ನಿಂತು ಕೊಂಡಿದ್ದರು. ಅವರು ರಾಣಿ (ಕ್ವೀನ್) ಯನ್ನು ಮದುವೆಯಾದರೂ, ಎಂದೂ ರಾಜ (ಕಿಂಗ್) ಆಗಲಿಲ್ಲ. ಅವರನ್ನು ಕರೆಯುತ್ತಿದ್ದುದು ‘ಡ್ಯೂಕ್ ಆಫ್ ಎಡಿನ್ ಬರ್ಗ್’ ಎಂದು.
ಬ್ರಿಟಿಷ್ ಅರಸೊತ್ತಿಗೆಯಲ್ಲಿ ರಾಣಿಯೇ ಪ್ರಧಾನ. ಅವಳ ಗಂಡ ಎಷ್ಟಿದ್ದರೂ ಕಾಮಾಕ್ಷಮ್ಮನ ಗಂಡ! ಹೇಳಿದ್ದಕ್ಕೆ ತಲೆಯಾಡಿಸ ಬೇಕು, ಹಿಂದೆ ಅಂಗರಕ್ಷಕನಂತೆ ಕೈಕಟ್ಟಿ ನಿಲ್ಲಬೇಕು, ಹೌದಪ್ಪನಂತೆ ಗೋಣು ಹಾಕಬೇಕು, ರಾಣಿಯ ನೆರಳಿನಂತೆ ಅವಳ ಹಿಂದೆಂದೇ ಸುತ್ತುತ್ತಿರಬೇಕು, ರಾಣಿಗೆ ಸರಿಸಮಾನವಾಗಿ ವರ್ತಿಸಬಾರದು. ಸದಾ ರಾಣಿಯೊಬ್ಬಳನ್ನೇ ಮುಂದೆ ಮುಂದೆಬಿಟ್ಟು, ಹಿಂದೆ ಹಿಂದೆ ಹೆಜ್ಜೆ ಹಾಕಬೇಕು.
ಫಿಲಿಪ್ ಇವನ್ನೆ ಏಳು ದಶಕಗಳ ಕಾಲ ಭಕ್ತಿ, ನಿಷ್ಠೆಯಿಂದ ಮಾಡಿದರು. ತಾನು ಹುಟ್ಟಿದ್ದೇ ತನ್ನ ಹೆಂಡತಿ ಸೇವೆ ಮಾಡಲು ಎಂಬಂತೆ ಬದುಕಿದರು. ಅದರ ಆನಂದ ಕಂಡುಕೊಂಡರು. ‘ಅಮ್ಮಾವ್ರ ಗಂಡ’ ಎಂಬುದಕ್ಕೆ ಅನ್ವರ್ಥವಾಗಿ ಜೀವಿಸಿದರು.ಹೆಂಡತಿಯ ಅಡಿಯಾಳಾಗಿ ಬದುಕುವುದನ್ನು ಯಾವ ಸ್ವಾಭಿಮಾನಿ ಗಂಡನೂ ಬಯಸುವುದಿಲ್ಲ. ಆದರೆ ಈ ವಿಷಯದಲ್ಲಿ ಫಿಲಿಪ್ ತಕರಾರನ್ನೇ ಮಾಡಲಿಲ್ಲ. ತಾನು ಇರಬೇಕಾದುದೇ ‘ಅಮ್ಮಾವ್ರ ಗಂಡ’ನಂತೆ ಎಂಬ ನಿರ್ಧಾರಕ್ಕೆ ಬಂದರು. ಈ ವಿಷಯ ದಲ್ಲಿ ಅವರಿಗೆ ಸ್ಪಷ್ಟತೆ ಮತ್ತು ಖಚಿತತೆ ಇತ್ತು. ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಲಿಲ್ಲ.
ಪತ್ರಿಕೆಗಳಲ್ಲಿ ಟೀಕೆ ಮಾಡಿದಾಗಲೂ ಆ ಬಗ್ಗೆ ಬೇಸರ ಮಾಡಿಕೊಳ್ಳಲಿಲ್ಲ. ಫಿಲಿಪ್‌ಗೆ ತಮ್ಮ ಪಾತ್ರದ ಬಗ್ಗೆ ಗೊಂದಲವಿರಲಿಲ್ಲ. ತಾನೊಬ್ಬ ಅಲಂಕಾರಿಕ, ಔತಣಕೂಟದ ಪತಿ ಎಂಬುದು ಗೊತ್ತಿತ್ತು. ರಾಣಿಯ ಹಿಂದೆ ಔಪಚಾರಿಕವಾಗಿ ಇರಬೇಕಾದ ವ್ಯಕ್ತಿಎಂಬುದು ಸ್ಪಷ್ಟವಾಗಿತ್ತು. ಹೀಗಾಗಿ ಅವರು ತಮ್ಮ ‘ಅಮ್ಮಾವ್ರ ಗಂಡ’ ಸ್ಥಾನಮಾನದ ಬಗ್ಗೆ ಬೇಸರಿಸಿಕೊಳ್ಳಲಿಲ್ಲ. ತಾವುಇರಬೇಕಾದುದೇ ಹಾಗೆ ಮತ್ತು ಹಾಗಿದ್ದರೇ ಶೋಭೆ ಎಂದು ಅವರು ರಾಣಿಯನ್ನು ಕೈಹಿಡಿದ ಮೊದಲ ದಿನದಿಂದಲೇತೀರ್ಮಾನಕ್ಕೆ ಬಂದಿದ್ದಿರಬೇಕು.
ತಮ್ಮ ಮಾತಿಗೆ ಕಿಮ್ಮತ್ತಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಅಷ್ಟಕ್ಕೂ ತಮಗೆ ಮಾತಾಡಲು ಅವಕಾಶವೂ ಇಲ್ಲ ಎಂಬುದು ಗೊತ್ತಿತ್ತು. ರಾಣಿ ಎಲ್ಲಿಯೇ ಹೋಗಲಿ, ಬರಲಿ, ಇಡೀ ಗಮನ ಅವರ (ರಾಣಿ) ಮೇಲೆಯೇ ನೆಟ್ಟಿರುತ್ತಿತ್ತು. ತಮ್ಮನ್ನು ಯಾರೂದರಕರಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ರಾಣಿಯ ಜತೆ ಹೋದಾಗ ಅವರಿಗೆ ಎರಡನೇ ಮರ್ಯಾದೆ. ಪ್ರಥಮ ಪೂಜೆ ರಾಣಿಗೇ. ಕೆಲವು ಸಲ ಪ್ರಥಮ ಪೂಜೆಗೇ ಸಮಾರಂಭ ಮುಗಿಯುತ್ತಿತ್ತು. ತಮ್ಮನ್ನು ಕಡೆಗಣಿಸಲಾಯಿತು ಎಂದು ಫಿಲಿಪ್ ಬೇಸರಿಸಿ ಕೊಳ್ಳುತ್ತಿರಲಿಲ್ಲ. ರಾಣಿಯಿಂದಾಗಿ ತಮಗೆ ಮರ್ಯಾದೆ, ಗೌರವ ಎಂಬುದು ಅವರಿಗೆ ತಿಳಿದಿತ್ತು.
ಹೀಗಾಗಿ ಅವರು ಯಾವತ್ತೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಯಿತು ಎಂದು ಗೊಣಗಲಿಲ್ಲ, ತಮ್ಮ ಪರಿಸ್ಥಿತಿ ನೆನೆದು ಮರುಕ ಪಟ್ಟುಕೊಳ್ಳಲಿಲ್ಲ. ಫಿಲಿಪ್‌ಗೆ ರಾಣಿಯ ಗಂಡ ಎಂಬುದನ್ನು ಬಿಟ್ಟರೆ, ಅವರೊಬ್ಬರೇ ಮಾಡಬಹುದಾದ ಬೇರೆ ಯಾವ ಕೆಲಸವೂ ಇರಲಿಲ್ಲ, ಅಧಿಕಾರವೂ ಇರಲಿಲ್ಲ. ಕೆಲವು   ಸಮಾರಂಭಗಳಲ್ಲಿ ಠಾಕು – ಠೀಕಾಗಿ, ಸಾಂಪ್ರದಾಯಿಕ ಉಡುಪು ಧರಿಸಿ, ರಾಣಿಯ ಹಿಂದೆ ನಿಂತುಕೊಳ್ಳುವುದಷ್ಟೇ ಅವರ ಪಾಲಿನ ಪರಮ ಕರ್ತವ್ಯವಾಗಿತ್ತು.
ಅದನ್ನು ಸ್ವಲ್ಪವೂ ಬೇಸರವಿಲ್ಲದೇ ಪಾಲಿಸುತ್ತಿದ್ದರು. ಈ ರೀತಿ ಮುಖೇಡಿಯಾಗಿ, ತಮ್ಮತನ ಕಳೆದುಕೊಂಡು ಜೀವನ ಸಾಗಿಸು ವುದು ಸಣ್ಣ ಸಣ್ಣ ಕೆಲಸವಲ್ಲ. ತಾನು ದೇಶಕ್ಕೆ ರಾಜನಲ್ಲ, ಅರಮನೆಯ ಒಡೆಯನಲ್ಲ, ಆದರೆ ಅವೆಲ್ಲಕ್ಕಿಂತ ಮುಖ್ಯವಾಗಿ, ರಾಣಿಯ ಗಂಡ ಎಂಬುದು ಅವರಿಗೆ ಗೊತ್ತಿತ್ತು. ಅಷ್ಟಕ್ಕೇ ಸಂತೃಪ್ತರಾದರು.
ಅರಮನೆಯಾಗಲಿ, ಗುಡಿಸಲೇ ಆಗಲಿ, ಫಿಲಿಪ್ ರೀತಿ ಬದುಕುವುದು ಕಷ್ಟದ ಕೆಲಸ. ಆದರೆ ರಾಣಿ ಮತ್ತು ಫಿಲಿಪ್ ಮಧ್ಯೆ ಎಂದೂ ವಿರಸ, ತಪನೆ ಹೊಗೆಯಾಡಲಿಲ್ಲ. ಫಿಲಿಪ್ ನಿಧನರಾದಾಗ, ನ್ಯೂಯಾರ್ಕ್ ಟೈಮ್ಸ ನೀಡಿದ ಶೀರ್ಷಿಕೆಯೇ ಅದಕ್ಕೆ ಸಾಕ್ಷಿ. ಆ ಪತ್ರಿಕೆ ನೀಡಿದ Ü  ’  , ‘      loveಎಂಬ ಹೆಡ್ ಲೈನ್ ಅವರಿಬ್ಬರ ದಾಂಪತ್ಯಕ್ಕೆ ಬರೆದ ಒಂದು ಸಾಲಿನ ಟಿಪ್ಪಣಿ.
ಅರಮನೆ ವಿವಾದಗಳಿಂದ ಮುಕ್ತವಾಗಿರಲಿಲ್ಲ. ಅತ್ತೆ – ಸೊಸೆ (ರಾಣಿ ಎಲಿಜಬೆತ್ ಮತ್ತು ರಾಜಕುಮಾರಿ ಡಯಾನಾ) ರಾದ್ಧಾಂತ ವಂತೂ ಜಗತ್ತಿನ ಪತ್ರಿಕೆಗಳಿಗೆ ವರ್ಷಗಟ್ಟಲೆ ಆಹಾರವಾಯಿತು. ಆನಂತರ ಮಗ ರಾಜಕುಮಾರ ಚಾಲ್ಸ ಮತ್ತೊಂದು ಮದುವೆ ಯಾದ. ರಾಣಿಯ ಮೂವರು ಮಕ್ಕಳ ದಾಂಪತ್ಯ ನೆಗೆದು ಬಿದ್ದಿತು. ಮೊಮ್ಮಕ್ಕಳು ರಾಣಿಯ ಜತೆ ಜಗಳವಾಡಿದರು. ಇಷ್ಟೆ ಲಗಾಡಿ ಯೆದ್ದರೂ, ಫಿಲಿಪ್ ಮತ್ತು ರಾಣಿ ಎಲಿಜಬೆತ್ ಸಂಬಂಧದ ಬಗ್ಗೆ ಎಲ್ಲಿಯೂ ಅಪಸ್ವರ ಕೇಳಿ ಬರಲಿಲ್ಲ. ಫಿಲಿಪ್ ರಾಣಿಯ ಮುಂದೆ ಸಣ್ಣ ಬೇಸರವನ್ನೂ ವ್ಯಕ್ತಪಡಿಸಿದವರಲ್ಲ. ಒಂದು ವೇಳೆ ಹಾಗೆ ಆಗಿದ್ದಿದ್ದರೆ, ಅದು ಬ್ರಿಟಿಷ್ ಟ್ಯಾಬ್ಲಾಯಿಡ್‌ಗಳಿಗೆ ಆಹಾರ ವಾಗದೇ ಹೋಗುತ್ತಿರಲಿಲ್ಲ.
ಹಾಗೆಂದು ರಾಣಿಯ ಗಂಡನಾಗುವುದು ಸಾಮಾನ್ಯ ಕೆಲಸವಲ್ಲ. ಹೆಂಡತಿಯನ್ನು ಸಂಪೂರ್ಣ ಸಹಿಸಿಕೊಳ್ಳುವುದು ಎಂಥಾಗಂಡನಿಗಾದರೂ ಸವಾಲೇ ಸರಿ. ಅದರಲ್ಲೂ ಇಂಗ್ಲೆಂಡ್ ರಾಣಿಯನ್ನು ಸಹಿಸಿಕೊಳ್ಳದೇ ಅನ್ಯ ಮಾರ್ಗವೇ ಇಲ್ಲ. ಅಲ್ಲಿ ಗಂಡನ ಮಾತಿಗೆ ಬೆಲೆಯೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಗಂಡನಿಗೆ ಮಾತಾಡಲು ಅವಕಾಶವೂ ಸಿಗುವುದಿಲ್ಲ. ಹೀಗಿರುವಾಗ, ಫಿಲಿಪ್ ಆ ಎಲ್ಲಾ ‘ಕಷ್ಟ’ಗಳನ್ನು ನಗು ಮೊಗದಿಂದಲೇ ಸ್ವೀಕರಿಸಿದರು. ರಾಣಿ ಹೋದ ಹಿಂಬಾಲಿಸಿದರು. ರಾಣಿಗೆ ಸಿಗುವ ಪ್ರಾಧಾನ್ಯಕಂಡು ತಮ್ಮ ಸ್ಥಿತಿಗೆ ಮರುಕಪಟ್ಟುಕೊಳ್ಳಲಿಲ್ಲ.
ಅದನ್ನು ನೋಡಿ ಆನಂದಿಸಿದರು, ಸಮಾಧಾನಪಟ್ಟುಕೊಂಡರು. ಜಗತ್ತಿನ ಎಲ್ಲಾ ದೇಶಗಳಿಗೆ ರಾಣಿಯ ಹಿಂದೆ ಹೋದರು.ಚೆಂದವಾಗಿ ಸಿಂಗರಿಸಿಕೊಂಡು, ರಾಣಿಯ ಪಕ್ಕ ಅಂಗರಕ್ಷಕನನ್ನೂ ನಾಚುವಂತೆ ನಿಂತುಕೊಂಡರು. ಫಿಲಿಪ್ ಎಲ್ಲಿಯೂ ಮಾತಾಡುತ್ತಿರಲಿಲ್ಲ. ಪ್ರಾಯಶಃ ಅದಕ್ಕೆ ರಾಣಿಯ ಸೂಚನೆಯೂ ಇದ್ದಿರಲಿಕ್ಕೆ ಸಾಕು. ಕಾರಣ, ಫಿಲಿಪ್ ಮಾತಾಡಿದರೆ, ಏನಾದರೂ ಯಡವಟ್ಟು ಮಾಡುತ್ತಿದ್ದರು. ಅವರ ಭೋಳೆತನ ಸಮಸ್ಯೆಯನ್ನು ತಂದೊಡ್ಡುತ್ತಿತ್ತು.
ಅವರು ಪೆದ್ದುಪೆದ್ದಾಗಿ ಮಾತಾಡುತ್ತಿದ್ದರು. ಇದನ್ನೇ ಕೆಲವರು ತಪ್ಪಾಗಿ, ‘ಅವರು ಹಾಸ್ಯಪ್ರವೃತ್ತಿಯವರು’ ಎಂದು ಬಣ್ಣಿಸು ವಂತೆಯೂ ಮಾಡಿತ್ತು. ಒಮ್ಮೆ ಅರಮನೆಗೆ ಆಗಮಿಸಿದ ಬ್ರಿಟನ್ನಿನ ಕರಿಯ ರಾಜಕಾರಣಿಯೊಬ್ಬರನ್ನು ಫಿಲಿಪ್, ‘ನೀವುಅದ್ಯಾವ ವಿಲಕ್ಷಣ, ಸುಂದರ ದೇಶದಿಂದ ಬಂದಿರಿ ಎಂಬುದು ತಿಳಿಯಲಿಲ್ಲ’ ಎಂದು ಹೇಳಿ ವಿವಾದವನ್ನೆಬ್ಬಿಸಿದ್ದರು. ಅದಕ್ಕೆ ಆರಾಜಕಾರಣಿ, ‘ನಿಮ್ಮ ಬ್ರಿಟನ್ನಿನ ಬರ್ಮಿಂಗ್ ಹ್ಯಾಮ್ ನಿಂದ’ ಎಂದು ತಟ್ಟನೆ ಹೇಳಿದ್ದ.
ಒಮ್ಮೆ ಟಿವಿ ಸಂದರ್ಶಕನೊಬ್ಬ, ಫಿಲಿಪ್ ಮಗನಾದ ರಾಜಕುಮಾರ ಚಾಲ್ಸ ಕುರಿತು, ‘ನಿಮ್ಮ ಮಗ ಚಾಲ್ಸ ಬಗ್ಗೆ ಏನು ಹೇಳುತ್ತೀರಿ?’ ಎಂದು ಕೇಳಿದಾಗ, ‘ನನ್ನ ಮಗ ನನಗಿಂತ ಸುಂದರ, ಬುದ್ಧಿವಂತ ಮತ್ತು ಯುವಕ’ ಎಂದು ಹೇಳಿ ಗೇಲಿಗೊಳಗಾಗಿದ್ದರು. ಕೀನ್ಯಾಕ್ಕೆ ಹೋದಾಗ, ಹೆಣ್ಣುಮಗಳೊಬ್ಬಳಿಂದ ಕಾಣಿಕೆ ಸ್ವೀಕರಿಸಿದಾಗ ಅವಳಿಗೆ,    , ’ ? ಎಂದು ಕೇಳಿದ್ದು ದೊಡ್ಡ ಸುದ್ದಿಯಾಗಿತ್ತು.
ಕೆಲವು ವರ್ಷಗಳ ಹಿಂದೆ, ರಾಣಿಯ ಜತೆ ರೋಮ್‌ಗೆ ಭೇಟಿ ನೀಡಿದಾಗ, ಅಲ್ಲಿನ ಪ್ರಧಾನಿ ಔತಣಕೂಟ ಏರ್ಪಡಿಸಿದ್ದರು. ಡಿನ್ನರ್ ಟೇಬಲ್‌ನಲ್ಲಿ ಬೆಲೆಬಾಳುವ ವೈನ್ ಇಡಲಾಗಿತ್ತು. ಫಿಲಿಪ್‌ಗೆ ಏನನಿಸಿತೋ ಏನೋ, ಹತ್ತಿರದಲ್ಲಿದ್ದ ಪರಿಚಾರಕರಿಗೆ,    .  ’     ,     !  ಎಂದು ತಮ್ಮ ಅಸಹನೆ ವ್ಯಕ್ತಪಡಿಸಿದ್ದರು. ಕೆಲವು ವರ್ಷಗಳ ಹಿಂದಿನ ಘಟನೆ. ಪ್ಯಾಲೇಸ್ ಬೀಟ್ ಪತ್ರಕರ್ತನೊಬ್ಬ ಫಿಲಿಪ್‌ಗೆ, ನೀವು ಸೋವಿಯತ್ ರಷ್ಯಾಕ್ಕೆ ಭೇಟಿ ನೀಡಲು ಬಯಸುತ್ತೀರಾ? ಎಂದು ಕೇಳಿದಾಗ,          &        ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಅವರಿಗೆ ತಮ್ಮ ಹೇಳಿಕೆ ಎಂಥ ಇರುಸು – ಮುರುಸನ್ನು ಉಂಟು ಮಾಡಬಲ್ಲುದು ಎಂಬ ವಿವೇಚನೆ ಇರುತ್ತಿರಲಿಲ್ಲ.
ತಮ್ಮ ಮನಸ್ಸಿನ ಮಾತನ್ನು ಮುಕ್ತವಾಗಿ ತೋಡಿಕೊಂಡು ಪೇಚಿಗೆ ಸಿಲುಕುತ್ತಿದ್ದರು. ಹೀಗಾಗಿ ಅವರನ್ನು ಸಾರ್ವಜನಿಕ ಭಾಷಣ,ಸಂದರ್ಶನದಿಂದ ದೂರ ಇಡಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ, ಲಂಡನ್ನಿನ ಸಿಟಿ ಹಾಲ್ ಉದ್ಘಾಟನಾ ಸಮಾರಂಭದಲ್ಲಿ ಮಾತಾಡುತ್ತಾ, ‘ಲಂಡನ್ನಿನ ದೊಡ್ಡ ಸಮಸ್ಯೆಯೆಂದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು. ಅವರೇ ಟ್ರಾಫಿಕ್ ದಟ್ಟಣೆಗೆ ಕಾರಣ. ಪ್ರವಾಸಿಗರು ಬರದಂತೆ ಮಾಡಿದರೆ ಟ್ರಾಫಿಕ್ ದಟ್ಟಣೆಯನ್ನು ನಿಲ್ಲಿಸಬಹುದು’ ಎಂದು ಹೇಳಿ ಶುದ್ಧ ಪೆಕರನಂತೆ ಹೇಳಿ ಅಪಹಾಸ್ಯಕ್ಕೀಡಾಗಿದ್ದರು.
ಬಹಳ ವರ್ಷಗಳ ಹಿಂದೆ, ದಂತ ವೈದ್ಯರನ್ನುದ್ದೇಶಿಸಿ ಮಾತಾಡುವಾಗ ಅವರು ಹೇಳಿದ ಒಂದು ಮಾತನ್ನು ಅನೇಕ ವರ್ಷಗಳ ವರೆಗೂ ಮೆಲಕು ಹಾಕಲಾಗುತ್ತಿತ್ತು. ಮೊನ್ನೆ ಅವರು ನಿಧನರಾದಾಗಲೂ, ಆ ಪ್ರಸಂಗವನ್ನು ಕೆಲವು ಪತ್ರಿಕೆಗಳು ಪ್ರಸ್ತಾಪಿಸಿದವು. ಅಂದು ಫಿಲಿಪ್ ಅವರು,              ,            ಎಂದು ಹೇಳಿದ್ದರು. ಅಪರೂಪಕ್ಕೆ ಫಿಲಿಪ್ ಮನಸ್ಸಿನ ಮಾತನ್ನು ಹೇಳಿದ್ದಾರೆ ಮತ್ತು ಇಂಥ ಅವಕಾಶವನ್ನು ಬಕಿಂಗ್ ಹ್ಯಾಮ್ ಅರಮನೆ ಅವರಿಗೆ ಆಗಾಗ ಕಲ್ಪಿಸಿ ಕೊಡಬೇಕು ಎಂದು ಬ್ರಿಟಿಷ್ ಪತ್ರಿಕೆಗಳು ಬರೆದಿದ್ದವು.
ಒಮ್ಮೆ ಫಿಲಿಪ್ ಅವರನ್ನು ಯಶಸ್ವಿ ದಾಂಪತ್ಯದ ಬಗ್ಗೆ ಕೇಳಿದಾಗ, ‘ಗಂಡನಾದವನಿಗೆ ಸಹನೆಯಿರಬೇಕು. ಯಶಸ್ವಿ ದಾಂಪತ್ಯಕ್ಕೆ ಅದೇ ಮೂಲ ದ್ರವ್ಯ. ನಾನು ಸಹನೆಯ ಗಣಿ. ರಾಣಿ ಆಗಾಗ ನನ್ನಿಂದ ಸಹನೆಯನ್ನು ಮೊಗೆದುಕೊಳ್ಳುತ್ತಾಳೆ’ ಎಂದು ಹೇಳಿ ತಮ್ಮ ಸುಖೀ ದಾಂಪತ್ಯ ರಹಸ್ಯವನ್ನು ಬಿಟ್ಟುಕೊಟ್ಟಿದ್ದರು.
ಆಮೆಗಳನ್ನು ಸಂರಕ್ಷಿಸುವ ಯೋಜನೆಯ ಉದ್ಘಾಟನೆ ಸಮಾರಂಭವೊಂದರಲ್ಲಿ ಫಿಲಿಪ್, ‘ಮನುಷ್ಯರಿಗಿಂತ ಬೆಕ್ಕುಗಳು ಹೆಚ್ಚು ಪಕ್ಷಿಗಳು ಸಾಯಿಸುತ್ತವೆ. ಹೀಗಾಗಿ ನೀವೇಕೆ ಹೊಸ ಸ್ಲೋಗನ್ ಹೇಳಬಾರದು? ಬೆಕ್ಕುಗಳನ್ನು ಸಾಯಿಸಿ, ಪಕ್ಷಿಗಳನ್ನು ಉಳಿಸಿ ಎಂಬ ಸ್ಲೋಗನ್ ಹೇಳಬಹುದಲ್ಲ?’ ಎಂದು ಹೇಳಿ ನಗೆಪಾಟಲಿಗೆ ಗುರಿಯಾಗಿದ್ದರು. ಇಂಥ ಮಾತುಗಳಿಂದ ಅವರ ದಡ್ಡತನ ಅನಾವರಣಗೊಂಡರೂ, ಇದರಿಂದಾಗಿಯೇ ಅವರಿಗೆ ಬೆಂಬಲಿಗರನ್ನೂ ಗಳಿಸಿಕೊಟ್ಟಿದ್ದವು.
ಆದರೆ ಕಳೆದ ಮೂವತ್ತು ವರ್ಷಗಳಲ್ಲಿ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಮಾತಾಡುತ್ತಿರಲಿಲ್ಲ. ಸಂದರ್ಶನವನ್ನಂತೂ ನೀಡುತ್ತಿರಲಿಲ್ಲ. ಒಮ್ಮೆ ಅರಮನೆಯಲ್ಲಿ ಸಂಪಾದಕರಿಗಾಗಿ ಔತಣಕೂಟ ಏರ್ಪಡಿಸಿದಾಗ ನಡೆದ ಘಟನೆ.
ಫಿಲಿಪ್ : ನೀವು ಯಾರು?ಸೈಮನ್ ಕೆಲ್ನರ್ : ನಾನು ‘ದಿ ಇಂಡಿಪೆಂಡೆಂಟ್’ ಪತ್ರಿಕೆ ಸಂಪಾದಕ.ಫಿಲಿಪ್ : ನೀವು ಇಲ್ಲಿ ಏನು ಮಾಡುತ್ತಿದ್ದೀರಿ?ಕೆಲ್ನರ್ : ನೀವು ನನ್ನನ್ನು ಆಮಂತ್ರಿಸದ್ದೀರಿ, ಅದಕ್ಕಾಗಿ ಇಲ್ಲಿಗೆ ಬಂದೆ.ಫಿಲಿಪ್: ನಿಮ್ಮನ್ನು ಆಮಂತ್ರಿಸಲಾಗಿದೆ ಎಂಬುದನ್ನು ಮರೆತುಬಿಡಿ. ನೀವು ಇಲ್ಲಿ ಬರಬಾರದಾಗಿತ್ತು.
ಆ ಸಂಪಾದಕನ ಪರಿಸ್ಥಿತಿ ಹೇಗಾಗಿರಬೇಡ?ಇದ್ದರೆ ಫಿಲಿಪ್ ಥರಾ ಇರಬೇಕು, ಹೆಂಡತಿ ಹೇಳಿದ್ದಕ್ಕೆ ಹೌದೆನ್ನುತ್ತಿರಬೇಕು, ಅವಳ ಸೇವೆ ಮಾಡುತ್ತಿರಬೇಕು, ಅವಳನ್ನುಹೊಗಳುತ್ತಿರಬೇಕು, ಬೇರೆಯವರು ತಮ್ಮ ಹೆಂಡತಿಯನ್ನು ಹೊಗಳಿದರೂ ನಗುತ್ತಲೇ ಸುಮ್ಮನಿರಬೇಕು, ಯಾವತ್ತೂ ಅವಳನ್ನು ಪ್ರಶ್ನಿಸಬಾರದು… ಆಗ ಎಷ್ಟು ವರ್ಷ ಬೇಕಾದರೂ ಸುಖ (?) ದಾಂಪತ್ಯ ಜೀವನ ಸಾಗಿಸಬಹುದು.
ಯಶಸ್ವಿ ದಾಂಪತ್ಯದ ಗುಟ್ಟನ್ನು ಬಿಟ್ಟು ಹೋದ ಫಿಲಿಪ್ ಅವರನ್ನು ನೆನಪಿಸಿಕೊಂಡರೆ, ನಿಮಗೆ ಹೆಂಡತಿ ಜತೆ ಎಂದೂಜಗಳವಾಡುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ.
ಮೊದಲ ಆಫರ್ !ಕಾಲರ್ : ನಿಮ್ಮ ಹೆಸರು ಹನುಮಂತುನಾ?ಹನುಮಂತು : ಹೌದು, ನನ್ನ ಹೆಸರು ಹನುಮಂತುಕಾಲರ್ : ಕೇಂದ್ರ ಸರಕಾರ ಏರ್ ಇಂಡಿಯಾ ವಿಮಾನಸಂಸ್ಥೆಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ನಿನಗೆ ಖರೀದಿಸಲು ಆಸಕ್ತಿ ಇದೆಯಾ?ಹನುಮಂತು : ನಾನು ಖರೀದಿಸೋದಾ ?ಏನ್ ತಮಾಷೆ ಮಾಡ್ತೀರಾ? ನಾನೊಬ್ಬ ಮಧ್ಯಮ ವರ್ಗದ ಸಾಮಾನ್ಯ ಮನುಷ್ಯ. ನನ್ನಿಂದ ಅವೆ ಸಾಧ್ಯವಿಲ್ಲದ ಮಾತು.
ಕಾಲರ್: ತಮಾಷೆ ಮಾಡ್ತಿಲ್ಲ.. ಬಹಳ ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ನೀವೂ ಯಾಕೆ ಒಂದು ಕೈ ನೋಡಬಾರದು?ಹನುಮಂತು : ಅವೆ ಕನಸಿನ ಮಾತು. ನನ್ನಿಂದ ಆಗದ ಮಾತು, ಬಿಡಿ.ಕಾಲರ್: ಅದಕ್ಕೇ ನಿನಗೆ ಎರಡೆರಡು ಸಲ ಕೇಳಿದ್ದು. ನಂತರ ಕೇಂದ್ರ ಸರಕಾರ ಅಂಬಾನಿಗೆ, ಅದಾನಿಗೆ ಮಾರಾಟ ಮಾಡಿತುಅಂತ ಬೊಬ್ಬೆ ಹೊಡೆಯಬೇಡ. ನಿನಗೇ ಮೊದಲ ಆಫರ್ ಕೊಟ್ಟಿದ್ದು !