ಪ್ರತಿಭಾನ್ವಿತ ವಿಜ್ಞಾನಿ ಡಾ.ಶಿವಕುಮಾರ್‌
ನೆನಪು
ಮಂಜುನಾಥ ಡಿ.ಎಸ್‌.
ವಿಜ್ಞಾನವನ್ನು ಜನಪ್ರಿಯಗೊಳಿಸಿ, ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಸ್ಥಾಪನೆಗೊಂಡ ಕರ್ನಾಟಕ ವಿಜ್ಞಾನಮತ್ತು ತಂತ್ರಜ್ಞಾನ ಪರಿಷತ್ತಿನ ಅಧ್ಯಕ್ಷರಾಗಿ ಡಾ.ಎಸ್.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡಿದ್ದರು.
ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ2019ರ ಫೆಬ್ರವರಿ28ರಂದು ಆಕಾಶವಾಣಿಯಲ್ಲಿ ಪ್ರಸಾರವಾದ ಸಂದರ್ಶನವನ್ನು(ಆಪ್ತವಲಯದಲ್ಲಿ ಶಿವು ಎಂದೇ ಚಿರಪರಿಚಿತರಾಗಿದ್ದ) ಬಾಹ್ಯಾಕಾಶ ವಿಜ್ಞಾನಿ ಡಾ.ಶಿವಕುಮಾರ್ ನಮ್ಮೊಡನೆ ಹಂಚಿಕೊಂಡಿ ದ್ದರು. ವಿಜ್ಞಾನವನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಡಾ.ಶಿವಕುಮಾರ್ ಹೊಸತನ್ನು ನೀಡುತ್ತಾರೆ ಎಂದು ಜನ ನಿರೀಕ್ಷಿಸುತ್ತಿದ್ದಾರೆಂದು ಸಂದರ್ಶಕಿ ತಿಳಿಸಿದ್ದರು.
ಆದರೆ ತಾನೊಂದು ಬಗೆದರೆ ದೈವವೊಂದು ಬಗೆದಿತ್ತು.2019ರ ಏಪ್ರಿಲ್13ರ ಬೆಳಗ್ಗೆ ದೈವ ಅವರನ್ನು ನಮ್ಮಿಂದ ಕಸಿದು ಕೊಂಡಿತ್ತು. ಇವರ ಹೊಸತನ ಕಾರ್ಯಗತವಾಗುವುದನ್ನು ಕಾಣುವ ಭಾಗ್ಯದಿಂದ ನಮ್ಮನ್ನು ವಂಚಿತರನ್ನಾಗಿಸಿತ್ತು. ಇವರು ನಮ್ಮನ್ನಗಲಿ ಎರಡು ವರ್ಷಗಳು ಸಂದಿವೆ. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿಜ್ಞಾನಿ ಡಾ.ಶಿವಕುಮಾರ್ ಅವರ ನೆನಪಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿ ಯಾಗಿದ್ದ ಶಿವಕುಮಾರ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ಬಿ.ಇ.(ಇಸಿಇ) ಮತ್ತು ಎಂ.ಟೆಕ್.(ಫಿಸಿಕಲ್ ಎಂಜಿನಿಯರಿಂಗ್) ಪೂರೈಸಿದರು.
ಶದಲ್ಲಿದ್ದುಕೊಂಡು ಮಾತೃಭೂಮಿಯ ಸೇವೆ ಮಾಡಬೇಕೆಂಬ ಆಶಯ ಇವರದ್ದಾಗಿತ್ತು.1976ರಲ್ಲಿ ಶ್ರೀಹರಿಕೋಟದ ಇಸ್ರೊ ಟೆಲಿಮಿಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಸೇರುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿ ದರು. ಆರ್ಯಭಟ ಒಂದನ್ನು ಬಿಟ್ಟು ಇತರ ಎಲ್ಲ ಭಾರತೀಯ ಉಪಗ್ರಹಗಳ ಯೋಜನೆಗಳಲ್ಲಿ ಸಕ್ರಿಯ ಪಾತ್ರ ವಹಿಸಿರುವುದು ಇವರ ಹೆಗ್ಗಳಿಕೆ. ಸುಮಾರು ನಾಲ್ಕು ದಶಕಗಳ ಸೇವಾ ಅವಧಿಯಲ್ಲಿ ಇವರು ಇಸ್ರೋ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಭಾರತದ ಪ್ರಥಮ ಚಂದ್ರಯಾನ ಯೋಜನೆಗೆ ಟೆಲಿಮಿಟ್ರಿ ಅಭಿವೃದ್ಧಿಗೊಳಿಸಿದ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡೀಪ್ ಸ್ಪೇಸ್ ಸಂವಹನ ಸಾಧನದ ವಿನ್ಯಾಸದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿಸವಾಲುಗಳು ಎದುರಾದಾಗ ಎದೆಗುಂದದೆ ಅವುಗಳನ್ನು ಅವಕಾಶಗಳನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಇದರ ನಡುವೆಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಸಹ ಪಡೆದಿದ್ದಾರೆ.
ಅವರು ಪಠಿಸುತ್ತಿದ್ದುದು ನಾವು ಎಂಬ ಮಂತ್ರ! ತಮ್ಮ ನಾಯಕತ್ವದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಕೌಶಲ್ಯ ಅವರಿಗೆ ಕರಗತವಾಗಿತ್ತು. ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಆತ್ಮವಿಶ್ವಾಸ ಮತ್ತು ನಿರ್ವಹಿಸಿದ ತೃಪ್ತಿ ಅವರಲ್ಲಿ ಕಾಣಬಹುದಾಗಿತ್ತು. ಅವರು ತಮ್ಮ ಸರಳತೆ ಮತ್ತು ಸ್ನೇಹಮಯ ಗುಣಗಳಿಂದ ಜನಾನುರಾಗಿ ಯಾಗಿದ್ದರು. ಇವು ಅವರ ಸಾಧನೆಯ ಸೋಪಾನಗಳಾದವು ಎನ್ನಬಹುದು.
ಇಂಡಿಯನ್ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್‌ಗಳಾದ ಐ.ಆರ್.ಎಸ್.1ಬಿ ಮತ್ತು1ಸಿ ಉಪಗ್ರಹ ಯೋಜನೆಗಳ ಮಿಷನ್ ಡೈರೆಕ್ಟರ್, ಐಎಸ್‌ಟಿಆರ್‌ಎಸಿ ನಿರ್ದೇಶಕರು, ಇಸ್ರೊ ಉಪಗ್ರಹ ಕೇಂದ್ರದ ಸಹ ನಿರ್ದೇಶಕರು, ಇವೇ ಮೊದಲಾದ ಅನೇಕ ಉನ್ನತ ಹುದ್ದೆಗಳಿಗೆ ಇವರು ನೇಮಕಗೊಂಡಿದ್ದಾರೆ. ಚಂದ್ರಯಾನ ಕಾರ್ಯಕ್ರಮದಲ್ಲಿ ಇವರು ನಿರ್ವಹಿಸಿದ ಹಿರಿಯ ಪಾತ್ರವನ್ನು ಸ್ವತಃ ಡಾ.ಅಬ್ದುಲ್ ಕಲಾಂ ಅವರೇ ಪ್ರಶಂಸಿಸಿರುವುದು ಡಾ. ಶಿವಕುಮಾರ್ ಅವರ ಕಾರ್ಯದಕ್ಷತೆಗೆ ನಿದರ್ಶನವಾಗಿದೆ.
ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್, ಇಂಟರ್ ನ್ಯಾಷನಲ್ ಅಕಾಡೆಮಿ ಆ- ಆಸ್ಟ್ರೋನಾಟ್ಸ್, ಏರೋನಾಟಿಕಲ್ ಸೊಸೈಟಿ ಆ- ಇಂಡಿಯ, ಮುಂತಾದ ಪ್ರಖ್ಯಾತ ಸಂಸ್ಥೆಗಳು ಭಾರತೀಯ ಬಾಹ್ಯಾಕಾಶ ವಿಜ್ಞಾನ ಕೇತ್ರದಲ್ಲಿ ಇವರು ಮಾಡಿರುವ ಸಾಧನೆಗಳನ್ನು ಗುರುತಿಸಿ ಗೌರವಿಸಿವೆ.2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,2012ರಲ್ಲಿ ಹಂಸರತ್ನ ಪ್ರಶಸ್ತಿ,2013ರಲ್ಲಿ ನಾಡೋಜ ಪ್ರಶಸ್ತಿ,2015ರಲ್ಲಿ ಪದ್ಮಶ್ರೀ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಮುಂತಾದ ಪ್ರಶಸ್ತಿಗಳು ಇವರ ಮುಡಿಗೇರಿವೆ.