ಪ್ರೈಮ್ ಕೊಟ್ರೂ ಚೀಫ್‌ ಕೊಡ್ಲಿಲ್ಲ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಅಮೇಜಾನ್ ಪ್ರೈಮ್‌ನಲ್ಲಿ ಪುನೀತ್ ಅಭಿನಯದ ಯುವರತ್ನ ಬಿಡುಗಡೆ ಆಗಿದೆ. ಮೊದಲ ಎಂಟು ದಿನಗಳಲ್ಲಿ ಬಹುತೇಕ ಅಭಿಮಾನಿಗಳೇ ಸಿನಿಮಾ ನೋಡಿದ್ದರಿಂದ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯವಷ್ಟೇ ಕೇಳಿಬಂದಿತ್ತು. ಆದರೆ ಈಗ ನಿಧಾನವಾಗಿ ಚಿತ್ರದ ಬಗ್ಗೆ ಅಪಸ್ವರ ಮೂಡಲಾರಂಭಿಸಿದೆ. ಅದಕ್ಕೆ ಕಾರಣವೂ ಇದೆ.
ಸಿನಿಮಾ ನೋಡಿದವರಿಗೆ ಅಮೇಜಾನ್ ಪ್ರೈಮ್ ನಲ್ಲಿ ಬೇಗನೇ ಬಿಡುಗಡೆ ಮಾಡಿದ್ದು ಒಳ್ಳೆಯದೇ ಆಯಿತು ಬಿಡಿ ಎನಿಸಿದರೆ ತಪ್ಪಿಲ್ಲ. ಶಿಕ್ಷಣ ವ್ಯವಸ್ಥೆ ಬಗ್ಗೆ ಸಿನಿಮಾ ಮಾಡಿರುವ ಸಂತೋಷ್ ಆನಂದ್ ರಾಮ್ ಥಿಯರಿ ಬಗ್ಗೆ ಗಮನ ಕೊಟ್ಟಿದ್ದಾರೆ. ಆದರೆ ಪ್ರಾಕ್ಟಿಕಲ್ ಆಗಿ ನೋಡಿದರೆ ಅವರ ಪ್ರಾಕ್ಟಿಕಲ್ಸ ಪರಿಣಾಮಕಾರಿಯಾಗಿಲ್ಲ ಎನಿಸುತ್ತದೆ. ಹಾಗಾಗಿ ಕಾಲೇಜುಗಳ ಬಗ್ಗೆ ಸಿನಿಮಾ ಮಾಡಿರುವ ಸಂತೋಷ್ ಆನಂದ್ ರಾಮ್ ಸಿನಿಮಾ ಸ್ಕೂಲ್ ಗೆ ಹೋಗಬೇಕು ಅನ್ನಿಸಿದರೆ ತಪ್ಪಿಲ್ಲ.
ಮೊದಲ ಅರ್ಧದಲ್ಲಿ ಆಕ್ಷನ್ ಝಲಕ್ ಇದ್ದರೆ ಸೆಕೆಂಡ್ ಹಾಫ್’ನಲ್ಲಿ ಸಿನಿಮಾ ಅನೇಕ ಭಾಗಗಳಾಗಿ ಹೋಗಿದೆ. ಪೋಷಕರನ್ನು ಕಾಲೇಜಿಗೆ ಸೇರಿಸಿಕೊಂಡು ಅವರಿಗೆ ಪಾಠ ಮಾಡೋ ಎಪಿಸೋಡ್ ಅಂತೂ ಕಿರಿಕಿರಿ ಮಾಡುತ್ತದೆ. ಅಲ್ಲದೆ ಇದ್ದಕ್ಕಿದ್ದಂತೆ ಲಾಕ್ಡೌನ್ ಆಗುವ ಕಾಲೇಜ್, ಮತ್ತೆ ಇದ್ದಕ್ಕಿದ್ದಂತೆ ಓಪನ್ ಆಗುತ್ತದೆ. ಅದರ ಜೊತೆಗೆ ಲಾಕ್ ಡೌನ್ ಆಗುವ ಮುನ್ನ ಕಾಲೇಜಿಗೆ ಸರಿಯಾಗಿ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಕಾಲೇಜ್ ಓಪನ್ ಆದಮೇಲೆ ಓದಿನ ಬಗ್ಗೆ ಅದ್ಯಾಕೋ ನಿರಾಸಕ್ತಿ.
ಇಂಥ ಸನ್ನಿವೇಶಗಳಲ್ಲಿ ಪ್ರೇಕ್ಷಕನಿಗೂ ನಿರಾಸಕ್ತಿ. ಬೆಲ್ ಹೊಡೆಯುವ ಜವಾನನ ಪಾತ್ರಕ್ಕೆ ಆನ್‌ಲೈನ್‌ನಲ್ಲಿ ಕೆಲವು ಜನ ಕೊಟ್ಟ ಬಿಲ್ಡ ಅಪ್ ನೋಡಿ ಏನೇನೋ ನಿರೀಕ್ಷೆ ಮಾಡಿದರೆ ನಿಮಗೆ ನಿರಾಸೆ ಖಂಡಿತ. ಜತೆಗೆ ಅನಗತ್ಯವಾದ ಅಸಂಖ್ಯ ಕಲಾವಿದರು. ಪಾಪ ಡೈಲಾಗೇ ಇಲ್ಲದೆ ಸೊರಗುವ ಲೆಜೆಂಡರಿ ನಟರು. ಒಂದೇ ಕ್ಯಾಂಪಸ್ ನಲ್ಲಿರೋ ಪ್ರಪಂಚದ ಎಲ್ಲಾ ಪದವಿಯ ಕಾಲೇಜುಗಳು, ಸೈಡ್ ಆಕ್ಟರ್‌ನಂತಿರೋ ನಾಯಕಿ, ಗಟ್ಟಿತನವಿಲ್ಲದೆ ದಿಗಂತ್ ಪಾತ್ರ, ಸಾಧು ಕೋಕಿಲಾ ಕಿರಿಕಿರಿ, ಎಲ್ಲವೂ ನಿರಾಸೆ ಮೂಡಿಸುತ್ತದೆ.
ಇದ್ದುದರಲ್ಲಿ ಧನಂಜಯ್ ಪಾತ್ರ ಕೊಂಚ ರಿಲೀ- ಕೊಡುತ್ತದೆ. ಒಟ್ಟಾರೆ, ಯುವರತ್ನ ಚಿತ್ರ ನೋಡಿದ ಮೇಲೆ ಅನ್ನಿಸೋದು, ಇದು ಕಾಲೇಜ್ ಲೈಫಿನಷ್ಟು ಜಾಲಿಯಾಗಿಲ್ಲ ಬಿಡಿ.
ನೆಟ್ ಪಿಕ್ಸ್ನ್ಯಾಷನಲ್ ಹೈ ವೇ ನಲ್ಲಿ ಎರಡು ಕಾರುಗಳು ಡಿಕ್ಕಿಯಾಗಿ ದೊಡ್ಡ ಅಪಘಾತವೇ ಆಯಿತು. ಕಾರು ಚಲಾಯಿಸುತ್ತಿದ್ದ ಖೇಮು ಕೆಳಗಿಳಿದು ಬಂದು ನೋಡಿದ. ಇನ್ನೊಂದು ಕಾರಿನಲ್ಲಿದ್ದಿದ್ದು ಒಂದು ಹುಡುಗಿ. ಹಾಗೆ ನೋಡಿದರೆ ಖೇಮುದೇನೂ ತಪ್ಪಿರಲಿಲ್ಲ. ಆಕೆಯೇ ಫಸ್ಟ್ ಆಗಿ ರಾಂಗ್ ಸೈಡಲ್ಲಿ ಬಂದು ಗುದ್ದಿದ್ದಳು. ಇಬ್ಬರ ಕಾರಿಗೂ ಡ್ಯಾಮೇಜ್ ಆಗಿತ್ತು. ಖೇಮು ಅವಳ ಬಳಿ ಎಲ್ಲದರಖರ್ಚು ವಸೂಲಿ ಮಾಡಬೇಕು ಎಂದುಕೊಂಡು ಬಂದ. ಆದರೆ ಹುಡುಗಿಯನ್ನ ನೋಡಿ ಒಂದು ಕ್ಷಣ ಮೈಮರೆತ. ಅಷ್ಟು ಚೆನ್ನಾಗಿದ್ಳು ಹುಡುಗಿ. ಅವಳು ಸೀದಾ ಇವನ ಬಳಿ ಬಂದವಳೇ, ಕಾಮ್ ಆಗಿ ಮಾತಾಡಿದಳು. ಇಲ್ನೋಡಿ ಇಬ್ಬರ ಕಾರೂ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿದೆ. ಆದರೆ ನಮಗಿಬ್ಬರಿಗೂ ಏನೂ ಆಗಿಲ್ಲ. ಇದರ ಅರ್ಥ ಏನು ಅಂತ ಕೇಳಿದಳು. ಏನು ಅಂದ ಖೇಮು. ನೋಡಿ, ನಮ್ಮಿಬ್ಬರನ್ನು ಸೇರಿಸೋಕೆ ಅಂತನೇ ದೇವರು ಈ ರೀತಿ ಮಾಡಿದ್ದಾನೆ. ಅವನ ಮನಸ್ಸಿನಲ್ಲಿ ನಾವಿಬ್ಬರೂ ಜೊತೆಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಇದೆ ಅನ್ನಿಸುತ್ತೆ.
ಹಾಗಾಗಿ ನಮ್ಮನ್ನ ಈ ರೀತಿ ಭೇಟಿ ಮಾಡಿಸಿzನೆ ಅಂತ ರೊಮ್ಯಾಂಟಿಕ್ ಆಗಿ ಹೇಳಿದಳು. ಅದನ್ನು ಖೇಮು ಒಂದೇ ನಿಮಿಷದಲ್ಲಿ ಅವಳ ಕಡೆ ಆಕರ್ಷಿತನಾದ. ಆ ಹುಡುಗಿ ಮತ್ತೆ ಹೇಳಿದಳು, ಅಲ್ನೋಡಿ, ನನ್ನ ಕಾರು ಅಷ್ಟೊಂದ್ ಡ್ಯಾಮೇಜ್ ಆಗಿದ್ದರೂ, ಅದರಲ್ಲಿದ್ದ ಈ ವಿಸ್ಕಿ ಬಾಟಲ್ ಮಾತ್ರ ಹಾಗೇ ಇದೆ. ಇದರ ಅರ್ಥ, ದೇವರು ನಮ್ಮ ಜೀವನದ ಈ ಪ್ರಮುಖ ಘಳಿಗೆಯನ್ನು ಎಂಜಾಯ್ ಮಾಡಿ ಅಂತ ನಮಗೆ ಹೇಳ್ತಾ ಇzನೆ. ಖೇಮು ಹೌದು ಅಂತ ತಲೆ ಆಡಿಸಿದ. ತಕ್ಷಣ, ಖೇಮುಗೆ ಒಂದು ಗ್ಲಾಸಿನಲ್ಲಿ ವಿಸ್ಕಿ ಸುರಿದು ಕೊಟ್ಟಳು. ಅವಳನ್ನು ನೋಡುತ್ತಾ ವಿಸ್ಕಿ ಹೀರುತ್ತಿದ್ದ ಖೇಮುಗೆ ಗ್ಲಾಸ್ ಖಾಲಿ ಆಗಿದ್ದೇ ಗೊತ್ತಾಗಲಿಲ್ಲ. ಮತ್ತೆ ವಿಸ್ಕಿ ಹಾಕಿದಳು ಹುಡುಗಿ. ಅದನ್ನೂ ಹೀರುತ್ತಾ ಖೇಮು, ಅರೇ, ಬರೀ ನನಗೇ ಕುಡಿಸುತ್ತಿದ್ದೀಯ, ನೀನು ಕುಡಿಯಲ್ವಾ ಅಂತ ಕೇಳಿದ. ಅದಕ್ಕೆ ಹುಡುಗಿ ಹೇಳಿದಳು, ಇಲ್ಲ, ನಾನು ಪೊಲೀಸ್ ಬರ್ಲಿ ಅಂತ ಕಾಯ್ತಾ ಇದ್ದೀನಿ.
ಲೂಸ್ ಟಾಕ್ಪುನೀತ್ ರಾಜ್ ಕುಮಾರ್ (ಕಾಲ್ಪನಿಕ ಸಂದರ್ಶನ)ಯುವರತ್ನ ಸಿನಿಮಾದಲ್ಲಿ ಅಪ್ಪ ಅಮ್ಮಂದಿರನ್ನೆ ಕಾಲೇಜಿಗೆ ಸೇರಿಸಿಕೊಂಡು ಪಾಠಮಾಡೋದು ಅತಿಯಾದ ಸಿನಿಕತನ ಅನ್ನಿಸಲಿಲ್ವಾಸಿನಿಕತನ ಇರ್ಬೋದು, ಆದ್ರೆ ಸಿನಿಕಥನ ಹೆಂಗಿದೆ ಅನ್ನೋದು ಮುಖ್ಯ ಕಣ್ರೀ. ಅದಕ್ಕೇ ಎಲ್ಲರಿಗೂ ಸಿನಿಮಾ ಇಷ್ಟ ಆಗಿದೆ.
ಅದ್ ಸರಿ ಬಿಡಿ, ಆದ್ರೆ ಪುನೀತ್ ರಾಜ್ ಕುಮಾರ್ ಅಂಥ ಸ್ಟಾರ್ ಸಿನಿಮಾ ಒಂದೇ ವಾರಕ್ಕೆಓಟಿಟಿಲಿ ಬಂದ್ರೆ ಹೆಂಗೆ?ಎಜ್ಯುಕೇಶನ್ ಸಿಸ್ಟಮ್ ಬಗ್ಗೆ ಸಿನಿಮಾ ಮಾಡಿ ಜನಕ್ಕೆ ಪಾಠ ಮಾಡೋಣ ಅಂದ್ಕೊಂಡ್ವಿ, ಕರೋನಾ ನಮಗೇ ಪಾಠ ಕಲಿಸಿಬಿಡ್ತು
ಆದ್ರೂ ಥಿಯೇಟರ್‌ನಿಂದ ತೆಗೆದು, ಓಟಿಟಿಯಲ್ಲಿ ನೋಡಿ ಅನ್ನೋದು ಸ್ಕೂಲ್‌ನಿಂದಉಪಯೋಗ ಇಲ್ಲ, ಟ್ಯೂಷನ್‌ಗೆ ಹೋಗಿ ಅಂತ ನೀವೇ ಹೇಳಿದಂಗಾಯ್ತು ಅಲ್ವಾ?
ಅಯ್ಯೋ, ನೀವು ವಿಷ್ಯನಾ ಎಲ್ಲಿಂದ ಎಲ್ಲಿಗೋ ತಗೊಂಡ್ ಹೋಗ್ತಾ ಇದ್ದೀರಾ, ಹಂಗೇನಿಲ್ಲ, ಕ್ಯಾಂಟೀನ್ ಅನ್ನೇ ಕ್ಲಾಸ್ ರೂಮ್ ಮಾಡಿದೋರು ನಾವು.
ಸರಿ, ಆದ್ರೂ ಇಷ್ಟು ಬೇಗ ಅಮೆಜಾನ್ ಪ್ರೈಮ್‌ಗೆ ಹೋಗೋ ಅವಸರ ಏನಿತ್ತು ಅಂತಹೇಳಲಿಲ್ಲ ನೀವು
ಏನ್ ಮಾಡೋದು, ಮುಖ್ಯಮಂತ್ರಿಗಳ ಹತ್ರ ಹೋಗಿದ್ವಿ, ಅವ್ರು ಬೆಂಬಲ ಕೊಡ್ಲಿಲ್ಲ, ಅದಕ್ಕೇ ಚೀಫ್ ಕೊಡಲಿಲ್ಲ ಅಂತ ಪ್ರೈಮ್ ಹತ್ರ ಹೋದ್ವಿ.
ಅಂದಹಾಗೆ, ನಿಮ್ಮ ಸಿನಿಮಾ ತೆಗೆದು ತೆಲುಗಿನ ಪವನ್ ಕಲ್ಯಾಣ್ ಸಿನಿಮಾ ಹಾಕಿದ್ದಾರೆ ಅಂತನಿಮ್ಮ ಅಭಿಮಾನಿಗಳು ಬೇಜಾರಾಗಿದ್ದಾರಂತೆ
ಹಂಗೇನಿಲ್ಲ, ಪವರ್ ಸ್ಟಾರ್ ಸಿನಿಮಾ ತೆಗೆದು ಪವರ್ ಸ್ಟಾರ್ ಸಿನಿಮಾನೇ ಹಾಕಿದ್ದಾರೆ ಅಂತ ಸಮಾಧಾನ ಮಾಡ್ಕೊತಾರೆ ಬಿಡಿ
ಲೈನ್ ಮ್ಯಾನ್
ಆರ್‌ಸಿಬಿ ಫ್ಯಾನ್ಸ್ ಹೊಸ ಜೋಕ್ಗ್ರಹಾಂಬೆಲ್ ಆಗ ತಾನೇ ಟೆಲಿಫೋನ್ ಕಂಡು ಹಿಡಿದು ಹುರ್ರೇ ಅಂತಿದ್ದ. ತಕ್ಷಣ ಫೋನ್ ರಿಂಗಾಯ್ತು. ಗ್ರಹಾಂಬೆಲ್‌ಗೆ ಯಾಕೋ ಅನುಮಾನ ಬಂತು. ಫೋನ್ ಎತ್ತಿ, ‘ಹಲೋ, ಯಾರು? ರಜಿನಿಕಾಂತಾ?’ ಅಂದ. ಆ ಕಡೆಯಿಂದ ವಾಯ್ಸ್ ಬಂತು ‘ರಜಿನಿ ಫೋನ್ ಹ್ಯಾಕ್ ಮಾಡಿದ್ದೀನಿ, ದಿಸ್ ಈಸ್ 
ವ್ಯಾಕ್ಸಿನ್ ಹಾಕಿಸಿಕೊಳ್ಳೋಕೆ ಸೋಂಬೇರಿತನ ಮಾಡಿದ್ರೆ, ಅದುಆ‘ಲಸಿಕೆ’
ಕುಡುಕನ ಹತ್ರ ಹೋಗಿ ನಿನ್ನ ಮೇಲೆ ಕೇಸ್ ಹಾಕ್ತೀವಿ ಅಂತ ಹೇಳಿದ್ರೆ ಏನಂತಾನೆಯಾವ ಬ್ರ್ಯಾಂಡು, ಎಷ್ಟ್ ಕೇಸು? ಹಾಕಿ ಹಾಕಿ ಕೇಸಿದ್ರೆ ಕೈಲಾಸ.
ವಿದೇಶ ಸುತ್ತೋ ಚಟ ಇರುವವನುಅಬ್ರಾಡ್ ಮೈಂಡೆಡ್
ಹೆಂಡ್ತಿ ಹತ್ರ ಜಗಳ ಆಡಿಕೊಂಡು ಬಂದ ಸುದೀಪ್ ಅಭಿಮಾನಿ ಸ್ನೇಹಿತರ ಹತ್ರ ಅದನ್ನ ಹೇಗೆಹೇಳ್ತಾನೆನಂಗಂತೂ ಸಾಕಾಗಿದೆ, ನಂ೭೩ ಶಾಂತಿನಿವಾಸದ ಥರ ಇದ್ದ ಮನೆ ಈಗ ಬಿಗ್ ಬಾಸ್ ಮನೆ ಥರ ಆಗೋಗಿದೆ.
ಬೇಸಿಗೆ ಕಾಲದ ವಿಶೇಷಎಲ್ಲರೂ ಬೆವರುವುದರಿಂದ, ತಪ್ಪು ಮಾಡಿದವರು ಸಿಕ್ಕಿಹಾಕಿಕೊಳ್ಳೋ ಸಾಧ್ಯತೆ ಕಡಿಮೆ ಇರುತ್ತೆ.
ಕನ್ನಡದ ಎವರ್ ಗ್ರೀನ್ ಸಿನಿಮಾಹಸಿರು ತೋರಣ
ಯುವರತ್ನನ ಪ್ರಕಾರ ಲಾಸ್ಟ್ ಬೆಂಚಲ್ಲಿ ಕೂತು ಡೆಸ್ಕ್ ಮೇಲೆ ಗೀಚೋರುಡೆಸ್ಕ್ ಟಾಪ್ ಐಕಾನ್ಸ್
ಉಳಿದವರ ಪಾಲಿಗೆ, ಅಂಥ ಲಾಸ್ಟ್ ಬೆಂಚ್‌ನವರು ಬರೆಯೋ ಸಾಹಿತ್ಯ.ಬೆಂಚ್ ಮಾರ್ಕ್