ಡಾ.ಭೀಮ್ ರಾವ್‌ ಅಂಬೇಡ್ಕರ್‌ ಅನುಪಮ ರಾಷ್ಟ್ರ ನಿರ್ಮಾತೃ
ಸಾಂದರ್ಭಿಕ
ಅರ್ಜುನ್ ರಾಮ್ ಮೇಘಾವಾಲ್‌,
ಬೃಹತ್‌ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ರಾಜ್ಯ ಸಚಿವರು
ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಅದಮ್ಯ ಸೂರ್ತಿ ಮತ್ತು ಪ್ರೇರಣೆ ನೀಡುವ ಕಲ್ಪನೆಗಳನ್ನು ನೀಡಿದ ರಾಷ್ಟ್ರೀಯತಾವಾದಿ ಡಾ.ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ರಾಷ್ಟ್ರ ಆಚರಿಸುತ್ತಿದೆ.
ಸಮಾಜ ಸುಧಾರಕರಾಗಿ, ಭಾರತೀಯ ಸಂವಿಧಾನದ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ, ದೇಶದ ಪ್ರಥಮ ಕಾನೂನು ಸಚಿವ ರಾಗಿ ಅವರ ಪಾತ್ರ ಪ್ರಥಮತಃ ಎಲ್ಲರಿಗೂ ತಿಳಿದಿದೆ. ಅವರು ಅರ್ಥಶಾಸಜ್ಞರಾಗಿ, ಸಕ್ರಿಯ ರಾಜಕಾರಣಿಯಾಗಿ, ಪ್ರಖ್ಯಾತ ವಕೀಲ ರಾಗಿ, ಕಾರ್ಮಿಕ ಮುಖಂಡರಾಗಿ, ಶ್ರೇಷ್ಠ ಸಂಸದೀಯ ಪಟುವಾಗಿ, ಉತ್ತಮ ವಿದ್ವಾಂಸರಾಗಿ, ಮಾನವಶಾಸ್ತ್ರಜ್ಞರಾಗಿ, ನುರಿತ ಪ್ರಾಧ್ಯಾಪಕರಾಗಿ ಮತ್ತು ಅತ್ಯುತ್ತಮ ವಾಗ್ಮಿಗಳಾಗಿ ಗೌರವದ ಮಕುಟ ಧರಿಸಿದ್ದಾರೆ.
ಪ್ರಸ್ತುತ ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು,ಬಹುಮುಖಿ ವ್ಯಕ್ತಿತ್ವದ ಡಾ. ಅಂಬೇಡ್ಕರ್ ಅವರ ಆಲೋಚನೆಗಳ ಗುರುತ್ವ, ರಾಷ್ಟ್ರ ನಿರ್ಮಾತೃವಾಗಿ ಅವರ ಪಾತ್ರ ಮತ್ತು ನಂತರ ಕೈಗೊಂಡ ಕ್ರಮಗಳು, ಸಾಮಾಜಿಕ ನೆಲೆಯನ್ನು ಬಲಪಡಿಸಲು, ನ್ಯಾಯಸಮ್ಮತ ಸಮಾಜ ನಿರ್ಮಿಸಲು ಮತ್ತು ಬಲವಾದ ರಾಷ್ಟ್ರವನ್ನು ಕಟ್ಟುವಲ್ಲಿ ಅವರನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದು ಕಡ್ಡಾಯವಾಗುತ್ತದೆ.
ಡಾ. ಅಂಬೇಡ್ಕರ್ ಅವರು ಸಾಂಸ್ಥಿಕ ನಿರ್ಮಾತೃವಾಗಿ ಮುಂಚೂಣಿಯಲ್ಲಿದ್ದರೂ, ಇತಿಹಾಸದ ಪುಟಗಳಲ್ಲಿ ಅವರಿಗೆ ಅರ್ಹ ಗಮನ ದೊರಕಲಿಲ್ಲ. ದೇಶದ ಕೇಂದ್ರೀಯ ಬ್ಯಾಂಕ್, ಅಂದರೆ, ಭಾರತೀಯ ರಿಸರ್ವ್ ಬ್ಯಾಂಕ್, ಹಿಲ್ಟನ್ ಯಂಗ್ ಆಯೋಗದಶಿ-ರಸ್ಸಿನಿಂದ ಪರಿಕಲ್ಪನೆಗೊಂಡಿತಾದರೂ, ಇದನ್ನು ಡಾ. ಅಂಬೇಡ್ಕರ್ ಅವರ ಕೃತಿ ದಿ ಪ್ರಾಬ್ಲಮ್ ಆಫ್ ರೂಪಿ – ಇಟ್ಸ್ ಆರಿಜಿನ್ ಅಂಡ್ ಇಟ್ಸ್ ಸಲ್ಯೂಷನ್’ ಪುಸ್ತಕದಲ್ಲಿ ಮಾರ್ಗಸೂಚಿಗಳಿಂದ ಪ್ರಸ್ತಾಪಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ವೈಸ್‌ರಾಯ್ ಅವರ ಕಾರ್ಯನಿರ್ವಾಹಕ ಮಂಡಳಿಯಲ್ಲಿ 1942 ರಿಂದ 1946ರವರೆಗೆ ಕಾರ್ಮಿಕ ಸದಸ್ಯರಾಗಿ, ಅವರು ರಾಷ್ಟ್ರದ ಹಿತದೃಷ್ಟಿಯಿಂದ ಜಲ, ವಿದ್ಯುತ್ ಮತ್ತು ಕಾರ್ಮಿಕ ಕಲ್ಯಾಣ ಕ್ಷೇತ್ರದಲ್ಲಿ ಹಲವಾರು ನೀತಿಗಳನ್ನು ರೂಪಿಸಿದರು. ಅವರ ದೂರ ದೃಷ್ಟಿಯು ಕೇಂದ್ರೀಯ ಜಲಮಾರ್ಗ, ನೀರಾವರಿ ಮತ್ತು ಪಥಸಂಚಲನ ಆಯೋಗ (ಸಿ.ಡಬ್ಲ್ಯು.ಎನ್.ಸಿ) ರೂಪದಲ್ಲಿ ಕೇಂದ್ರೀಯ ಜಲ ಆಯೋಗ, ಕೇಂದ್ರ ತಾಂತ್ರಿಕ ವಿದ್ಯುತ್ ಮಂಡಳಿ, ನದಿ ಕಣಿವೆ ಪ್ರಾಧಿಕಾರ ಸ್ಥಾಪಿಸುವ ಮೂಲಕ ಸಮಗ್ರ ಜಲ ಸಂಪನ್ಮೂಲ ನಿರ್ವಹಣೆಗೆ ಕಾರಣವಾಯಿತು, ಇದು ದಾಮೋದರ್ ನದಿ ಕಣಿವೆ ಯೋಜನೆ, ಸೋನೆ ನದಿ ಕಣಿವೆ ಯೋಜನೆ, ಮಹಾನದಿ (ಹಿರಾಕುಡ್ ಯೋಜನೆ), ಕೋಸಿ ಮತ್ತು ಇತರರು ಚಂಬಲ್ ನದಿ ಮತ್ತು ಡೆಕ್ಕನ್ ಪ್ರದೇಶದ ನದಿಗಳ ಯೋಜನೆ ನಿರ್ವಹಿಸಿತು.
ಅಂತರ – ರಾಜ್ಯ ಜಲ ವಿವಾದ ಕಾಯಿದೆ 1956 ಮತ್ತು ನದಿ ಮಂಡಳಿ ಕಾಯಿದೆ 1956ಇವು, ಅವರ ಉತ್ತಮ ಚಿಂತನೆಯ ದೃಷ್ಟಿ ಯಾಗಿದೆ. ಡಾ. ಅಂಬೇಡ್ಕರ್ ಅವರು ಪ್ರತಿ ವೇದಿಕೆಯಲ್ಲಿಯೂ ಖಿನ್ನತೆಗೆ ಒಳಗಾದ ವರ್ಗದವರ ಧ್ವನಿಯಾಗಿದ್ದರು. ದುಂಡು ಮೇಜಿನ ಸಮ್ಮೇಳನದಲ್ಲಿ ಅವರ ಪ್ರತಿನಿಧಿಯಾಗಿ, ಅವರು ನಿರ್ದಯಿ ಭೂಮಾಲೀಕರ ಹಿಡಿತದಿಂದ ವಿಮುಕ್ತಿಗೊಳಿಸುವ ಮೂಲಕ ಕಾರ್ಮಿಕರ ಸ್ಥಿತಿಯನ್ನು ಮತ್ತು ರೈತರ ಸ್ಥಿತಿಯನ್ನು ಸುಧಾರಿಸಿದರು.
1937ರಲ್ಲಿ ಬಾಂಬೆ ವಿಧಾನಸಭೆಯ ಪೂನಾ ಅಧಿವೇಶನದಲ್ಲಿ, ಕೊಂಕಣದಲ್ಲಿ ಖೋತಿ ಭೂ ಅಧಿಕಾರದ ಅವಧಿಯನ್ನು ರದ್ದು ಗೊಳಿಸುವ ಮಸೂದೆಯನ್ನು ಮಂಡಿಸಿದರು. ಬಾಂಬೆಯಲ್ಲಿ, 1938ರಲ್ಲಿ ಕೌನ್ಸಿಲ್ ಹಾಲ್ ವರೆಗೆ ನಡೆದ ಐತಿಹಾಸಿಕ ರೈತರ ಪಾದಯಾತ್ರೆ ಇವರನ್ನು ರೈತರ, ಕಾರ್ಮಿಕರ ಮತ್ತು ಭೂಹೀನರ ಪರ ಜನಪ್ರಿಯ ನಾಯಕರನ್ನಾಗಿ ರೂಪಿಸಿತು.
ಅಂಬೇಡ್ಕರ್ ಕೃಷಿ ಊಳಿಗಮಾನ್ಯ ಪದ್ಧತಿಯನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿದ ದೇಶದ ಮೊದಲ ಶಾಸಕರು. ಭಾರತದಲ್ಲಿ ಸಣ್ಣ ಹಿಡುವಳಿ ಮತ್ತು ಅವುಗಳ ಪರಿಹಾರಗಳು’ (1918) ಎಂಬ ಅವರ ಪ್ರಬಂಧವು ಕೈಗಾರಿಕೀಕರಣವನ್ನು ಭಾರತದ ಕೃಷಿ ಸಮಸ್ಯೆಗೆ ಉತ್ತರವಾಗಿ ಪ್ರಸ್ತಾಪಿಸಿತು, ಇದು ಸಮಕಾಲೀನ ಆರ್ಥಿಕ ಚರ್ಚೆಗಳಲ್ಲಿ ಇನ್ನೂ ಪ್ರಸ್ತುತವಾಗಿದೆ.ಬಾಂಬೆ ಶಾಸನಸಭೆಯ ಸದಸ್ಯರಾಗಿ, ಕಾರ್ಮಿಕರ ಧ್ವನಿಯಾಗಿ, ಡಾ.ಅಂಬೇಡ್ಕರ್ ಅವರು ಕಾರ್ಮಿಕರ ಪ್ರತಿಭಟನೆಯ ಹಕ್ಕನ್ನು ತೆಗೆದುಹಾಕುವ ಕೈಗಾರಿಕಾ ವ್ಯಾಜ್ಯ ಮಸೂದೆ 1937ಮಂಡನೆಗೆ ನಖಶಿಖಾಂತ ವಿರೋಧ ವ್ಯಕ್ತಪಡಿಸಿದರು.
ಕಾರ್ಮಿಕರ ಸದಸ್ಯರಾಗಿ ಅವರು, ಕಲಸದ ನ್ಯಾಯಸಮ್ಮತ ಸ್ಥಿತಿಗೆ ಬದಲಾಗಿ ಕಾರ್ಮಿಕರ ನ್ಯಾಯಯುತ ಜೀವನ ಸ್ಥಿತಿಗಾಗಿಪ್ರತಿಪಾದಿಸಿದರು ಮತ್ತು ಸರಕಾರದ ಕಾರ್ಮಿಕ ನೀತಿಯ ಮೂಲಭೂತ ವಿನ್ಯಾಸ ನೀಡಿದರು. ಅವರ ಪ್ರಯತ್ನ ಪ್ರಗತಿಪರ ಕಾರ್ಮಿಕ ಕಲ್ಯಾಣ ಕ್ರಮಗಳನ್ನು ಮತ್ತು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ಅವರನ್ನು ತರಲು ಕಾರಣವಾಯಿತು.
ವಾರಕ್ಕೆ 48 ಗಂಟೆಗಳ ಕೆಲಸದ ಅವಧಿಗೆ ಇಳಿಕೆ, ಕಲ್ಲಿದ್ದಲು ಗಣಿಗಳಲ್ಲಿ ಭೂಮಿಯೊಳಗೆ ಮಾಡುವ ಕಾಮಗಾರಿಯಲ್ಲಿಮಹಿಳೆಯರ ಉದ್ಯೋಗ ನಿಷೇಧ, ಹೆಚ್ಚುವರಿ ಕೆಲಸದ ಅವಧಿ ಮತ್ತು ವೇತನ ಸಹಿತ ರಜೆ, ಕನಿಷ್ಠ ವೇತನದ ಸ್ಥಿರೀಕರಣ ಮತ್ತು ಭದ್ರತೆಯ ನಿಬಂಧನೆಗಳ ಪರಿಚಯ, ‘ಹೆಣ್ಣು ಗಂಡೆಂಬ ತಾರತಮ್ಯವಿಲ್ಲದೆ, ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ತತ್ತ್ವಸ್ಥಾಪನೆ, ಹೆರಿಗೆ ಸೌಲಭ್ಯ ಖಾತರಿಪಡಿಸುವುದು, ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪನೆಗೆ ಅಂಗೀಕಾರ, ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ಕೊಡಿಸುವಲ್ಲಿ ಅವರು ಗಮನಾರ್ಹವಾದ ಕೊಡುಗೆ ನೀಡಿದರು.
ಈ ಎಲ್ಲಾ ಪ್ರಯತ್ನಗಳನ್ನು ಕೈಗೊಂಡ ಡಾ. ಅಂಬೇಡ್ಕರ್ ಅವರು ಕಮ್ಯುನಿಸ್ಟ್ ಕಾರ್ಮಿಕ ಚಳವಳಿಗಳು, ಅವರ ಭೂಮ್ಯತೀತ ನಿಷ್ಠೆ ಮತ್ತು ಎಲ್ಲ ಸ್ವರೂಪದ ಉತ್ಪಾದನಾ ವಿಧಾನಗಳನ್ನು ನಿಯಂತ್ರಿಸುವ ಮಾರ್ಕ್ಸ್ ವಾದವನ್ನು ಸಂಪೂರ್ಣವಾಗಿ ವಿರೋಧಿಸಿದರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ತ್ವಗಳಮೂಲಕ ಭಾರತದಲ್ಲಿ ನ್ಯಾಯಯುತ ಸಮಾಜವನ್ನು ನಿರ್ಮಿಸಲು ಅವರು ಸೂಕ್ಷ್ಮ ಕ್ರಮಗಳನ್ನು ಕೈಗೊಂಡರು.
ವಯಸ್ಕರ ಸಾರ್ವತ್ರಿಕತೆಗಾಗಿ ಅವರ ಪ್ರತಿಪಾದನೆ ಸ್ವಾತಂತ್ರ್ಯಾನಂತರ ಮಹಿಳೆಯರ ಮತದಾನವನ್ನು ಖಚಿತಪಡಿಸಿತು. ಹಿಂದೂ ಸಂಹಿತೆ ಮಸೂದೆಗಾಗಿ ಅವರ ಸಲಹೆ, ದತ್ತು ಮತ್ತು ಪಿತ್ರಾರ್ಜಿತ ಆಸ್ತಿ ಹಕ್ಕುಗಳನ್ನು ನೀಡುವ ಮೂಲಕ ಮಹಿಳೆಯರ ಸ್ಥಿತಿ ಯನ್ನು ಸುಧಾರಿಸುವ ಒಂದು ಕ್ರಾಂತಿಕಾರಿ ಕ್ರಮವಾಗಿದೆ. ಕೇಂದ್ರ ಮತ್ತು ರಾಜ್ಯಗಳಿಗೆ ತಮ್ಮ ಆರ್ಥಿಕ ಮಟ್ಟವನ್ನು ಹಂತಹಂತ ವಾಗಿ ಹೆಚ್ಚಿಸಿಕೊಳ್ಳಲು ಮತ್ತು ಅವರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಒಕ್ಕೂಟ ಹಣಕಾಸು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅವರು ಪ್ರಮುಖ ಕೊಡುಗೆ ನೀಡಿದ್ದಾರೆ.
ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತ್ವ ಬಲಪಡಿಸಲು ಬಲವಾದ ಬೆಂಬಲಿಗರಾಗಿ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದಕ್ಕೆ ಯೋಜನೆಯ ಕಲ್ಪನೆಯ ಹಂತದ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಅದನ್ನು ಸಂವಿಧಾನದ ಕರಡಿನಲ್ಲೂ ಸೇರಿಸಿರಲಿಲ್ಲ. ಏಕಾಏಕಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಯು.ಎನ್.ಓ.ಗೆ ತೆಗೆದುಕೊಂಡು ಹೋದ ನೆಹರೂ ಅವರ ವಿದೇಶಾಂಗ ನೀತಿಗಳ ಬಗ್ಗೆ ಅವರು, ಸ್ಪಷ್ಟವಾಗಿ ಅತೃಪ್ತಿ ವ್ಯಕ್ತಪಡಿಸಿದ್ದರು.
1951ರ ಅಕ್ಟೋಬರ್ 10ರಂದು ಕೇಂದ್ರ ಸಂಪುಟ ಸಭೆಯಲ್ಲಿ ತಮ್ಮ ಹೇಳಿಕೆ ಮೂಲಕ ಇದನ್ನು ದಾಖಲಿಸಿದ್ದರು. ಡಾ. ಅಂಬೇಡ್ಕರ್ ಅವರ ಮಹಾನ್ ವ್ಯಕ್ತಿತ್ವವು, ಮಾನವ ಅಸ್ತಿತ್ವಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಅವರ ಬುದ್ಧಿವಂತಿಕೆಯ ಕಿರಣಗಳ ಮೂಲಕ ರಾಷ್ಟ್ರದ ಎಲ್ಲಾ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಿದೆ. ವಿಭಿನ್ನ ಆರಾಧನಾ ವ್ಯವಸ್ಥೆಯ ಮೂಲಕ, ಅವರುಬೌದ್ಧಧರ್ಮದ ಮೂಲಕ ದಯೆ, ಔದಾರ್ಯ ಮತ್ತು ಸಹಾನುಭೂತಿಯ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಅಂಗೀಕರಿಸಿದ್ದರು.
ಡಾ.ಅಂಬೇಡ್ಕರ್ ಅವರ ಚಿಂತನೆಯ ಮಾರ್ಗವು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಜನರ ಪರ, ಬಡವರ ಪರ ಮತ್ತು ಸಾರ್ವಜನಿಕ ಕಲ್ಯಾಣ ನೀತಿಗಳು ಮತ್ತು ಸರಕಾರದ ಕಾರ್ಯಕ್ರಮಗಳಲ್ಲಿ ಪ್ರತಿಫಲಿಸುತ್ತಿದೆ. ತಮ್ಮ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಬಲೀಕರಣದ ಮೂಲಕ ನಾಗರಿಕರ ಜೀವನ ಸುಧಾರಿಸಲು ಮತ್ತು ಸರಾಗಗೊಳಿಸಲು ಕೇಂದ್ರಸರಕಾರವು ಯಾವುದೇ ಅವಕಾಶ ಕೈಚೆಲ್ಲಿಲ್ಲ. ಪಂಚತೀರ್ಥಗಳ ಅಭಿವೃದ್ಧಿ ಅಂದರೆ ಜನ್ಮಭೂಮಿ (ಮಹೋವ್), ಶಿಕ್ಷಾಭೂಮಿ(ಲಂಡನ್), ಚೈತಿ ಭೂಮಿ (ಮುಂಬೈ), ದೀಕ್ಷಾ ಭೂಮಿ (ನಾಗ್ಪುರ), ಮಹಾ ಪರಿನಿರ್ವಾಣ್ ಭೂಮಿ (ದೆಹಲಿ), ರಾಷ್ಟ್ರೀಯವಾದಿ ಸುಧಾರಕನಿಗೆ ಸೂಕ್ತವಾದ ಪರಂಪರೆ ಮತ್ತು ಗೌರವವನ್ನು ನೀಡುವ ಕ್ರಮಗಳಾಗಿವೆ.
ಸಾಲ ಪಡೆಯಲು ಮುದ್ರಾ ಯೋಜನೆ ಯನ್ನು ಯಶಸ್ವಿ ಯಾಗಿ ಅನುಷ್ಠಾನ ಗೊಳಿಸುವುದು, ಪ.ಜಾ ಮತ್ತು ಪ.ಪಂ. ಸಮುದಾಯದಲ್ಲಿ ಉದ್ಯಮಶೀಲತೆ ಯನ್ನು ಉತ್ತೇಜಿಸಲು ಸ್ಟ್ಯಾಂಡ್ – ಅಪ್ ಇಂಡಿಯಾ, ನವೋದ್ಯಮ ಭಾರತ, ವೆಂಚರ್ಬಂಡವಾಳ ನಿಧಿ, ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿವೇತನ, ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ ಯೋಜನೆ, ಪಿಎಂವಸತಿ ಯೋಜನೆ, ಉಜ್ವಲಾ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಮಾತೃತ್ವ ರಜೆ 26 ವಾರ ಗಳವರೆಗೆ ವಿಸ್ತರಣೆ, ಸಂಹಿತೆಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಿರುವುದು ಡಾ.ಅಂಬೇಡ್ಕರ್ ಅವರ ಶ್ರೇಷ್ಠ ದೇಶದ ಕನಸುಗಳನ್ನು ಈಡೇರಿಸುವಲ್ಲಿ ಸರಕಾರದ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಅವರ ಜಯಂತಿಯಂದು, ನಾವು ಡಾ. ಅಂಬೇಡ್ಕರ್ ಅವರ ವಿಶಾಲ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ಮತ್ತು ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಿಕೊಳ್ಳುವ ಬದ್ಧತೆಯ ಕ್ರಮಗಳ ಪ್ರತಿಜ್ಞೆಯ ಮೂಲಕ ಸೂಕ್ತ ಶ್ರದ್ಧಾಂಜಲಿ ಸಲ್ಲಿಸೋಣ.