ದೇವಾಲಯದ ನಾಡಲ್ಲಿ, ದೇವಾಲಯ ಉಳಿಸೋ ಸಂಕಷ್ಟ
ವೀಕೆಂಡ್‌ ವಿಥ್‌ ಮೋಹನ್‌
ಮೋಹನ್‌ ವಿಶ್ವ
ದಕ್ಷಿಣ ಭಾರತದಲ್ಲಿ ದೇವಸ್ಥಾನಗಳೆಂದರೆ ಥಟ್ಟನೆ ನೆನಪಾಗುವುದು ‘ತಮಿಳುನಾಡು’, ಅಲ್ಲಿ ಕಾಣಸಿಗದ ದೇವಸ್ಥಾನವಿಲ್ಲವೆಂಬ ಮಾತಿದೆ. ಮನೆಯಲ್ಲಿನ ವಯಸ್ಸಾದ ಪೋಷಕರು ದಕ್ಷಿಣ ಭಾರತದ ತೀರ್ಥಯಾತ್ರೆಯೆಂದರೆ ಸಾಕು ತಮಿಳುನಾಡನ್ನು ನೆನಪಿಸಿ ಕೊಳ್ಳುತ್ತಾರೆ.
ದಕ್ಷಿಣ ತಮಿಳುನಾಡಿನ ’ಕನ್ಯಾಕುಮಾರಿ’ಯಿಂದ ಶುರುವಾಗಿ ಉತ್ತರ ತಮಿಳುನಾಡಿನ ‘ಕಂಚಿ ಕಾಮಾಕ್ಷಿ’ಯವರೆಗೂ ಪ್ರಮುಖ ದೇವಸ್ಥಾನಗಳ ಸರಮಾಲೆಯೇ ಕಾಣಸಿಗುತ್ತದೆ. ಇತ್ತ ಪೂರ್ವದಲ್ಲಿ ‘ತಂಜಾವೂರಿನ ಬೃಹದೇಶ್ವರ’ ದೇವಸ್ಥಾನದಿಂದ ಶುರುವಾಗಿ ಪಶ್ಚಿಮದಲ್ಲಿನ ‘ಭವಾನಿ’ಯ ದೇವಸ್ಥಾನದವರೆಗೂ ಮತ್ತಷ್ಟು ಪ್ರಮುಖ ದೇವಸ್ಥಾನಗಳ ಸರಮಾಲೆಯಿದೆ. ಇಡೀ ತಮಿಳುನಾಡಿನ ದೇವಸ್ಥಾನಗಳನ್ನು ಕೇವಲ ಪ್ರವೇಶಿಸಿ ದರ್ಶನ ಮಾಡಿ ಬರಲು ಕನಿಷ್ಠವೆಂದರೂ
ಒಂದು ತಿಂಗಳುಗಳ ಸಮಯವಾದರೂ ಬೇಕು. ಪ್ರತಿಯೊಂದು ದೇವಸ್ಥಾನವೂ ಬೃಹದಾಕಾರದ ಪ್ರಾಂಗಣಗಳನ್ನು ಹೊಂದಿದೆ. ತಮಿಳುನಾಡಿನ ಪ್ರಮುಖ ದೇವಸ್ಥಾನ ಗಳಿಗೆ ನಾಲ್ಕು ದಿಕ್ಕುಗಳಲ್ಲಿ ಪ್ರವೇಶ ಮಂದಿರಗಳನ್ನು ನೂರಾರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ‘ಪಾಂಡ್ಯರು’ ‘ಚೋಳರ’ ಆಡಳಿತದಲ್ಲಿ ತಮಿಳುನಾಡಿನ  ಪ್ರಮುಖ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ,ಪ್ರತಿಯೊಂದು ದೇವಸ್ಥಾನವು ತನ್ನದೇ ಆದಂತಹ ಸುದೀರ್ಘ ಇತಿಹಾಸವನ್ನು ಹೊಂದಿದೆ.
ಸಾವಿರಾರು ವರ್ಷಗಳ ಕೆಳಗೆ ತಮಿಳುನಾಡಿನಲ್ಲಿ ಹಿಂದೂ ಧರ್ಮವು ಎಷ್ಟು ಆಳವಾಗಿ ಬೇರೂರಿತ್ತೆಂಬುದಕ್ಕೆ ತಮಿಳುನಾಡಿನ ದೇವಾಲಯಗಳೇ ಸಾಕ್ಷಿ. ತಮಿಳುನಾಡಿನ ಪ್ರತಿಯೊಂದು ದೇವಸ್ಥಾನದಲ್ಲಿ ಇಂದಿಗೂ ಸಹ ನೂರಾರು ವರ್ಷಗಳ ಹಿಂದೆ ಅಲ್ಲಿನ ರಾಜಮಹಾರಾಜರು ಆಚರಿಸಿ ಕೊಂಡು ಬಂದಂತಹ ಸನಾತನ ಧರ್ಮದ ಕುರುಹುಗಳಿವೆ. ದೇವಸ್ಥಾನದ ಪ್ರತಿಯೊಂದು ಕಂಬದ ಮೇಲಿನ ಕೆತ್ತನೆಗಳಮೇಲೆ ಹಿಂದೂ ಧರ್ಮದ ಆಚರಣೆಗಳ ಲಕ್ಷಾಂತರ ಕುರುಹುಗಳಿವೆ. ಒಂದು ಅಂದಾಜಿನ ಪ್ರಕಾರ ತಮಿಳುನಾಡಿ ನಲ್ಲಿ ಸುಮಾರು 33000 ಪುರಾತನ ದೇಗುಲಗಳಿವೆ.
ಇವುಗಳಲ್ಲಿ ಬಹುತೇಕ ದೇವಾಲಯಗಳು 800 ರಿಂದ ದಕ್ಷಿಣ ಭಾರತದಲ್ಲಿ ದೇವಸ್ಥಾನಗಳೆಂದರೆ ಥಟ್ಟನೆ ನೆನಪಾಗುವುದು ‘ತಮಿಳುನಾಡು’, ಅಲ್ಲಿ ಕಾಣಸಿಗದ ದೇವಸ್ಥಾನವಿಲ್ಲವೆಂಬ ಮಾತಿದೆ. ಮನೆಯಲ್ಲಿನ ವಯಸ್ಸಾದ ಪೋಷಕರು ದಕ್ಷಿಣ ಭಾರತದ ತೀರ್ಥಯಾತ್ರೆಯೆಂದರೆ ಸಾಕು ತಮಿಳುನಾಡನ್ನು ನೆನಪಿಸಿಕೊಳ್ಳುತ್ತಾರೆ. ದಕ್ಷಿಣ ತಮಿಳುನಾಡಿನ ’ಕನ್ಯಾಕುಮಾರಿ’ಯಿಂದ ಶುರುವಾಗಿ ಉತ್ತರ ತಮಿಳುನಾಡಿನ ‘ಕಂಚಿ ಕಾಮಾಕ್ಷಿ’ಯವರೆಗೂ ಪ್ರಮುಖ ದೇವಸ್ಥಾನಗಳ ಸರಮಾಲೆಯೇ ಕಾಣಸಿಗುತ್ತದೆ.