ಮೋದಿಯ ಕರೋನಾ ’ಕ್ರೈ’ಸಿಸ್‌
ತುಂಟರಗಾಳಿ
ಹರಿಪರಾಕ್‌
ಚಿತ್ರರಂಗದ ಕಲಾವಿದ, ತಂತ್ರಜ್ಞರತ್ತ ನೆರವಿನ ಹಸ್ತ ಚಾಚುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕರೋನಾ ಸೋಂಕಿತರಿಗೆ ಕೆವಿಎನ್ ಫೌಂಡೇಷನ್ ಸ್ಪಂದಿಸುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ನೀಡುತ್ತಿದೆ. ಆದರೆ, ಗುಣಮುಖರಾಗುತ್ತಿದ್ದಂತೆ ಅದನ್ನು ಮರಳಿ ಅವರ ತಂಡಕ್ಕೆ ಮರಳಿಸಬೇಕು.
ಸದ್ಯ 200 ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳು ಇವರ ಬಳಿ ಇದ್ದು, ನ್ಯೂಯಾರ್ಕ್‌ನಿಂದ ಹೆಚ್ಚುವರಿ 400 ಕಾನ್ಸನ್ ಟ್ರೇಟರ್‌ಗಳು ಆಗಮಿಸಿವೆ. ಅವೆಲ್ಲವುಗಳ ಸದ್ಬಳಕೆ ಆಗಲಿ ಎಂಬುದು ಕೆವಿಎನ್ ಫೌಂಡೇಷನ್ ಉದ್ದೇಶ. ಕೇವಲ ಸಿನಿಮಾ, ಕಿರುತೆರೆ ಕೆಲಸ ಗಾರರು, ಕಲಾವಿದರು, ತಂತ್ರಜ್ಞರು, ಕ್ಯಾಬ್ ಚಾಲಕರು, ಹೀಗೆ ಒಟ್ಟಾರೆ ಸಿನಿಮಾರಂಗಕ್ಕೆ ಉಚಿತವಾಗಿ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಗಳನ್ನು ನೀಡಲು ಮುಂದೆ ಬಂದಿದೆ ಈ ಫೌಂಡೇಷನ್. ಈಗಾಗಲೇ ನಟಿ ಶ್ವೇತಾ ಚೆಂಗಪ್ಪ, ಅನು ಪ್ರಭಾಕರ್, ಲಕ್ಷ್ಮೀ ಗೋಪಾಲ ಸ್ವಾಮಿ ಕೆವಿಎನ್ ಫೌಂಡೇಷನ್ ಜೊತೆ ಕೈ ಜೋಡಿಸಿದ್ದಾರೆ.
.. ವೆಬ್ಸೈ‌ಟ್‌ಗೆ ಹೋಗಿ ಸೂಕ್ತ ಮಾಹಿತಿಯನ್ನು ಅದರಲ್ಲಿ ಸಲ್ಲಿಕೆ ಮಾಡಿದರೆ, ಯಾವುದೇ ವ್ಯಕ್ತಿಯ ಮಧ್ಯಸ್ಥಿಕೆ ಮತ್ತು ಸಂಪರ್ಕ ಇರದೇ ಆಕ್ಸಿಜನ್ ಕಾನ್ಸನ್ ಟ್ರೇಟರ್ ಪಡೆಯಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಕಾನ್ಸನ್‌ ಟ್ರೇಟರ್ ಪಡೆಯುವಾಗ ಒರಿಜಿನಲ್ ಆಧಾರ್ ಕಾರ್ಡ್ ಅನ್ನು ನೀಡಬೇಕು.
ಸ್ಯಾಚುರೇಷನ್ ಲೆವಲ್ 90-92 ಇದ್ದವರಿಗೆ ನೀಡಲಾಗುತ್ತದೆ. ಇವರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಅವಶ್ಯಕತೆ ಇದೆ ಎಂದು ವೈದ್ಯರು ಬರೆದ ಚೀಟಿ ಇದ್ದರೆ ಸಾಕು. 5 ಲೀಟರ್‌ನ ಆಕ್ಸಿಜನ್ ಕಾನ್ಸನ್‌ಟ್ರೇರ್ಟ ಗಳು ಕೆವಿಎನ್ ಫೌಂಡೇಷನ್ ಬಳಿ ಇದ್ದು, ವಾರ,15ದಿನಗಳ ಅಥವಾ ಸೋಂಕಿತರು ಗುಣಮುಖವಾಗುವ ತನಕ ಯಾವುದೇಹಣ ಪಾವತಿಸದೇ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಬಳಕೆ ಮಾಡಬಹುದು. ಗುಣಮುಖರಾದ ಬಳಿಕ ಅದನ್ನು ಕೆವಿಎನ್ ಫೌಂಡೇಷನ್‌ಗೆ ಮರಳಿಸಬೇಕಾಗುತ್ತದೆ. ಅಲ್ಲಿ ಅದರ ರೀ ಸೈಕಲ್ ಮಾಡಿ ಮತ್ತೆ ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತದೆ.
ನೆಟ್ ಪಿಕ್ಸ್ಖೇಮು ಸಣ್ಣ ಹುಡುಗ ಆಗಿದ್ದಾಗ ಅವರ ಅಪ್ಪ ಅಮ್ಮ ಹಳ್ಳಿಯಲ್ಲಿ ಇದ್ದರು. ಮನೆಯ ಸುತ್ತ ಕಾಡುಮೇಡಿನಂಥ ಪ್ರದೇಶ. ಖೇಮು ಆಗಾಗ ಕಾಡಿನೊಳಗೆ ಹೋಗಿ ಓಡಾಡಿಕೊಂಡು ಬರುತ್ತಿದ್ದ. ಹೀಗೇ ಒಂದು ದಿನ ಕಾಡಿನೊಳಗೆ ಬಹುದೂರ ಹೋದಾಗ ಅಲ್ಲಿ ಅವನ ಕಣ್ಣಿಗೆ ಆಗ ತಾನೇ ಹುಟ್ಟಿದಂತಿದ್ದ ಸಣ್ಣ ಬೆಕ್ಕಿನ ಮರಿ ಕಾಣಿಸಿತು. ಸುತ್ತಮುತ್ತ ಯಾರೂ ಇರಲಿಲ್ಲ.
ಬಹುಷಃ ತಾಯಿಬೆಕ್ಕು ಅದನ್ನು ಅಲ್ಲಿಯೇ ಬಿಟ್ಟು ಹೋಗಿತ್ತು. ಅದನ್ನು ನೋಡಿದ ಖೇಮು ಕೂಡಲೇ ಅದನ್ನು ಎತ್ತಿಕೊಂಡು ಅದನ್ನು ಎತ್ತಿಕೊಂಡು ಸುತ್ತಮುತ್ತ ಅಲೆದಾಡಿದ. ತಾಯಿಬೆಕ್ಕು ಕಾಣಿಸಲೇ ಇಲ್ಲ. ಕೊನೆಗೆ ಖೇಮು ಆ ಮರಿಯನ್ನು ಮನೆಗೆ ಕರೆದುಕೊಂಡು ಬಂದ. ಅಂದಿನಿಂದ ಆ ಬೆಕ್ಕಿನ ಮರಿ ಅವನ ಜೊತೆ ಅನ್ಯೋನ್ಯವಾಗಿ ಹೊಂದಿಕೊಂಡಿತು. ಖೇಮು ಮತ್ತು ಅದು ಒಬ್ಬರನ್ನೊಬ್ಬರು ಬಿಟ್ಟಿರಲಾರದಂಥ ಮಟ್ಟಿಗೆ ಅವರ ಮಧ್ಯೆ ಬಾಂಧವ್ಯ ಇತ್ತು.
ಒಂದು ದಿನ ಅರಣ್ಯಾಧಿಕಾರಿಗಳು ಖೇಮು ಮನೆಗೆ ಬಂದರು. ಅವರಬ್ಬ ಆಫೀಸರ್ ಈ ಬೆಕ್ಕಿನ ಮರಿಯನ್ನು ಹತ್ತಿರದಿಂದ ನೋಡಿ, ಇದು ಬೆಕ್ಕಲ್ಲ, ಇದು ಹುಲಿ ಮರಿ, ಇದನ್ನು ಮನೆಯಲ್ಲಿ ಸಾಕಬಾರದು, ಮರಿಯನ್ನು ಸರಕಾರದ ವಶಕ್ಕೆ ಕೊಡಬೇಕು ಎಂದು ಹೇಳಿ, ಅದನ್ನು ಹತ್ತಿರದ ಇದ್ದ ಝೂಗೆ ತೆಗೆದುಕೊಂಡು ಹೋದರು. ಕೆಲವು ದಿನಗಳವರೆಗೆ ಖೇಮು ಅಲ್ಲಿಗೆ ಹೋಗಿ ಆಗಾಗ ಮರಿಯನ್ನು ನೋಡಿಕೊಂಡು ಬರುತ್ತಿದ್ದ. ಆನಂತರ ಕೆಲವು ವರ್ಷಗಳ ನಂತರ ಆ ಮರಿಯನ್ನು ದೇಶದ ಇನ್ಯಾವುದೋ ಝೂಗೆ ಕರೆದುಕೊಂಡು ಹೋಗಲಾಯಿತು. ನಂತರ ಖೇಮು ಬೆಳೆದು ದೊಡ್ಡವನಾದ.
ಒಮ್ಮೆ ಕಾಲೇಜು ಟ್ರಿಪ್‌ನಲ್ಲಿ ಅವನನ್ನು ಆಲ್ ಇಂಡಿಯಾ ಟೂರ್‌ಗೆ ಕರೆದುಕೊಂಡು ಹೋದರು. ಅಲ್ಲಿ ಉತ್ತರಭಾರತದಒಂದು ಝೂಗೆ ಹೋದಾಗ ಅಲ್ಲಿನ ಪಂಜರದೊಳಗಿದ್ದ ಹುಲಿಯೊಂದು ಖೇಮುವನ್ನೇ ದಿಟ್ಟಿಸಿ ನೋಡುತ್ತಿತ್ತು. ಖೇಮು ಕೂಡ ಅದರ ಕಣ್ಣುಗಳನ್ನೇ ನೋಡುತ್ತಿದ್ದ. ಆ ಕಣ್ಣುಗಳು ಏನೋ ಹೇಳುತ್ತಿವೆ ಎಂದು ಖೇಮುಗೆ ಅನಿಸಿತು. ಹಾಗಾಗಿ ಪಂಜರದ ಹತ್ತಿರ ಹೋಗಿ ನಿಂತ. ಆ ಹುಲಿ ಅವನನ್ನೇ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿತ್ತು. ಆಗ ಖೇಮು ಅಲ್ಲಿನ ಮೇಲಧಿಕಾರಿಗಳನ್ನು ಕರೆದು ಈ ಹುಲಿಯನ್ನು ನಾನು ಒಳಗೆ ಹೋಗಿ ನೋಡಬೇಕು ಅಂತ. ಮೊದಮೊದಲು ಅವರು ಒಪ್ಪಲಿಲ್ಲ.
ನಂತರ ಖೇಮು ಎಮೋಷನಲ್ ಆಗಿ ಹೇಳಿದ ಮಾತುಗಳನ್ನೆ ಕೇಳಿ, ಖೇಮುವನ್ನು ಪಂಜರದ ಒಳಗೆ ಹೋಗಲು ಬಿಟ್ಟರು.ಪಂಜರದ ಬಾಗಿಲು ತೆರೆದು ಖೇಮು ಒಳಗೆ ಹೋದ. ಎರಡೇ ನಿಮಿಷ, ಆ ಹುಲಿ ಛಂಗನೆ ಖೇಮು ಮೇಲೆ ಹಾರಿ ಅವನನ್ನು ಕೊಂದು ತಿಂದು ಹಾಕಿತು. ಮೋಸ್ಟ್ ಲೀ, ಅದು ಆ ಹುಲಿ ಅಲ್ಲ ಅನ್ಸುತ್ತೆ, ಹೋಗ್ಲಿ ಬಿಡಿ.
ಲೂಸ್ ಟಾಕ್(ಕಾಲ್ಪನಿಕ ಸಂದರ್ಶನ): ಪೊಲೀಸ್ ಕಾನ್ಸ್‌ಟೇಬಲ್ಏನ್ ಸಾರ್, ಮತ್ತೆ ನಿಮಗೆ ಜನರ ಮೇಲೆ ಲಾಠಿ ಚಾರ್ಜ್ ಮಾಡೋಕೆ ಅವಕಾಶಕೊಟ್ಟಿದ್ದಾರಂತೆ. ಮತ್ತೆ ಐಪಿಎಲ, ಐ ಮೀನ್, ಇಂಡಿಯನ್ ಪೊಲೀಸ್ ಲೀಗ್ ಶುರುನಾ?
ಮತ್ತೆ, ಛಾನ್ಸ್ ಸಿಕ್ರೆ ಬಿಟ್ಬಿಡ್ತೀವಾ, ಜನ ನಮ್ಮನ್ನ ಬರೀ ಲೂಟಿಕೋರರು ಅಂತ ತಿಳ್ಕೊಂಡಿದ್ದಾರೆ. ನಾವು ಲಾಠಿಕೋರರು ಕೂಡಾ ಅಂತ ತೋರಿಸಬೇಕಲ್ಲ.
ಅದ್ಸರಿ, ಜನಗಳ ಮೇಲೆ ಲಾಠಿ ಬೀಸೋದು ಅಂದ್ರೆ ನಿಮಗೇನ್ ಅಷ್ಟೊಂದು ಖುಷಿ?ಜನ ನಿಮ್ಮನ್ನ ಬ್ಯಾಕ್ ಫಂಗಸ್ ಅಂತ ಬಯ್ತಾ ಇದ್ದಾರೆ ಗೊತ್ತಾ ?
ನೋಡ್ರೀ, ಇದೆ ನಮಗೆ ಮಾಮೂಲು. ನಮಗೆ ಸಂಬಳ, ಮಾಮೂಲು ಕೊಡದೇ ಇದ್ರೂ ಪರವಾಗಿಲ್ಲ, ಕೈಗೆ ಲಾಠಿ ಕೊಟ್ಟು ಪರವಾನಗಿ ಕೊಟ್ರೆ ಸಾಕು. ಹಬ್ಬ ಮಾಡ್ತೀವಿ.
ಅಲ್ಲಾ, ಜನ ಹಿಂಗೆ ಹೊಡೆದು ಬಡಿದು ಹೇಳಿದ್ರೆ ಮಾತು ಕೇಳ್ತಾರಾ?ಇದೇ ಕಣ್ರೀ ವರ್ಕ್ ಆಗೋದು, ಸುಮ್ನೆ ಆ ಡಾಕ್ಟರ್ಸ್ ಕೊಡೋ ಎರಡೆರಡು ಡೋಸ್ ವ್ಯಾಕ್ಸಿನ್ ಎ ವೇಸ್ಟ್. ನಾವ್ ಒಂದ್ ಡೋಸ್ ಕೊಟ್ರೆ ಸಾಕು, ಕರೋನಾ ಎಲ್ಲ ಮಂಗಮಾಯ ನೋಡ್ತಾ ಇರಿ.
ಅದ್ಸರಿ, ನಿಮ್ಮ ಅಟ್ಯಾಕ್ ಎಲ್ಲ ಬರೀ ಸಿಟಿ ಕಡೆ ಮಾತ್ರ ಸುದ್ದಿ ಆಗ್ತಾ ಇದೆ. ಹಳ್ಳಿ ಕಡೆ ಹೆಂಗೆ ನಿಮ್ ಡ್ಯೂಟಿ?ಅಯ್ಯೋ, ಹಳ್ಳಿಗಳಿಗೆ ಹೋಗುವಾಗ ಊರು ಹತ್ರ ಬರ್ತಾ ಇದ್ದಂಗೆ, ನಮ್ ಜೀಪ್ ಸೈರನ್ ಆನ್ ಮಾಡ್ಕೊಂಡೇ ಹೋಗ್ತೀವಿ. ಯಾರಾದ್ರೂ ಹೊರಗಡೆ ಇದ್ರೆ, ಮನೆ ಸೇರಿಕೊಳ್ಳಲಿ ಅಂತ. ಹಳ್ಳಿ ಜನರ ಬ್ಯಾಕ್ ಮುಟ್ಟೋದು ಅಂದ್ರೆ ಅವರನ್ನ ಎದುರು ಹಾಕ್ಕೊಂಡಂಗೆ. ಯಾಕ್ ಬೇಕು?
ಆಹಾ ಬುದ್ಧಿವಂತ್ರು, ಅಲ್ಲೇ ಹಿಂಗೆ ಹೊಡಿತೀರಲ್ಲ, ಅದಕ್ಕೆ ನಿಮಗೆ ಅವಾರ್ಡ್ ಏದ್ರೂ ಕೊಡ್ತಾರಾ ಅಂತ?ಹ್ಞೂ, ಕಣ್ರೀ. ನಮ್ಮ ಡಿಪಾರ್ಟ್‌ಮೆಂಟ್ ಕಡೆಯಿಂದ ನಂಗೆ ಮೊನ್ನೆ ತಾನೇ ಬ್ಯಾಕ್ ಬಸ್ಟರ್ ಆಫ್ ದಿ ವೀಕ್ ಅಂತ ಅವಾರ್ಡ್ ಬಂತು.
ಲೈನ್ ಮ್ಯಾನ್ರಾಧೆ ಸಿನಿಮಾ ನೋಡಿದ್ರಾ?ಸಾರಿ, ಅಷ್ಟೊಂದು ನೆಗೆಟಿವ್ ಫೀಡ್ ಬ್ಯಾಕ್ ಬಂದಮೇಲೆ ನೋಡುವ ಇ‘ರಾದೆ’ ಇಲ್ಲ
ನಮ್ಮ ಪ್ರೀತಿಯ ರಾಮು ಸಿನಿಮಾ ನೋಡಿ ದರ್ಶನ್ ಅಭಿಮಾನಿಯಾದವನು‘ಅಂಧಾ’ ಭಿಮಾನಿಆಸ್ಪತ್ರೆಗೆ ಹೋಗದೇ ಮನೆಯ ಆಗುವ ಹೆರಿಗೆಹೋಮ್ ಡೆಲಿವರಿಪೊಲೀಸರೇ ಹೆಚ್ಚಾಗಿ ಇರುವ ಜಾಗಪೊಲೀಸ್ ‘ಬೆಲ್ಟ’ಆಸ್ತಿಕರನ್ನು ಗಲ್ಲಿಗೇರಿಸುವ ಪ್ರಕ್ರಿಯೆಗೊಂದು ಧಾರ್ಮಿಕ ಹೆಸರು‘ಉರುಳು’ ಸೇವೆ೧೦೦ಕ್ಕೆ ನೂರು ಅಂಕ ತೆಗೆಯುವ ವಿದ್ಯಾರ್ಥಿ‘ಉತ್ತರ’ ಕುಮಾರಮೋದಿ ಅತ್ತಿದ್ದಕ್ಕೆ ಅವರ ಅಭಿಮಾನಿಗಳ ಕಣ್ಣಲ್ಲೂ ನೀರು ಬಂತಂತೆಅದು ‘ಭಕ್ತ’ ಕಣ್ಣೀರುಮೋದಿ ಕಣ್ಣೀರಿಗೆ ಕಾರಣವಾದ್ರೂ ಏನು?ಕರೋನಾ ‘ಕ್ರೈ’ ಸಿಸ್ಮನೆಯಲ್ಲಿ ಸಾಕಿದ ಕೋಳಿ ಸತ್ರೆ ಶ್ರದ್ಧಾಂಜಲಿ ಸಲ್ಲಿಸುವ ಬಗೆರೆಸ್ಟ್ ಇನ್ ‘ಪೀಸ್’