ಆ ತಂತ್ರಜ್ಞಾನ ಜೆನೆಟಿಕ್ ಕಾಯಿಲೆಗಳನ್ನು ಅಂತ್ಯಗೊಳಿಸುವುದೇ?
ವೈದ್ಯವೈವಿಧ್ಯ
ಡಾ. ಎಚ್.ಎಸ್.ಮೋಹನ್
ಜುಲೈ 2019ರಲ್ಲಿ ಅಮೆರಿಕದ ನ್ಯಾಷ್ ನಲ್ ಕ್ಯಾನ್ಸರ್ ರೀಸರ್ಚ್ ಸಂಸ್ಥೆಯ ಆಸ್ಪತ್ರೆಯ ಹಾಸಿಗೆಯಲ್ಲಿ ವಿಕ್ಟೋರಿಯಾ ಗ್ರೇ ಮಲಗಿ ಹೊರಗೆ ದಿಟ್ಟಿಸುತ್ತಿದ್ದಳು.
ಆಕೆಯ ಹಾಸಿಗೆಯ ಬದಿಯಲ್ಲಿ ಆಕೆಯ ಜೆನೆಟಿಕಲಿ ಮಾರ್ಪಾಡಾದ () ರಕ್ತದ ಜೀವಕೋಶಗಳು ಇದ್ದವು. ಆಕೆ ನಾಲ್ಕು ಮಕ್ಕಳ ತಾಯಿ. ಸದ್ಯದ ಆಕೆ ಒಂದು ವೈದ್ಯಕೀಯ ಚರಿತ್ರಾರ್ಹ ಘಟನೆಗೆ ಸಾಕ್ಷಿ ಭೂತಳು ಅಥವಾ ಕಾರಣೀಕತೃ ಳಾಗಲಿದ್ದಳು. ಈಕೆ ವಿಕ್ಟೋರಿಯಾ ಗ್ರೇ 3 ತಿಂಗಳ ಮಗುವಾದಾಗ ಆಕೆಯ ಅಜ್ಜಿ ಒಮ್ಮೆಲೇ ಈಕೆಯನ್ನು ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕಕ್ಕೆ ಅರ್ಜೆಂಟ್ ಆಗಿ ಕರೆದುಕೊಂಡು ಹೋಗಿದ್ದಳು.
ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳನ್ನು ವಿವರವಾಗಿ ಕೈಗೊಂಡ ವೈದ್ಯರು ಆಕೆಗೆ ರಕ್ತದಲ್ಲಿ ಕಾಣಿಸಿಕೊಳ್ಳುವ ಸಿಕಲ್ ಸೆಲ್ ಕಾಯಿಲೆ (   & ) ಇದೆ ಎಂದು ಕಾಯಿಲೆ ಪತ್ತೆ ಹಚ್ಚಿದರು. ಈ ಕಾಯಿಲೆಯೂ ದೇಹದ ಮುಖ್ಯ ಅಂಗಗಳನ್ನು ಹಾಳುಗೆಡವುತ್ತದೆ. ಹಾಗೆಯೇ ವಿಪರೀತ ಅವಿರತ ನೋವನ್ನು ಕೊಡುತ್ತಿರುತ್ತದೆ. ಎಚ್.ಬಿ.ಬಿ ಜೀನ್‌ನಲ್ಲಿ ಆದ ಮ್ಯುಟೇಷನ್‌ ನಿಂದ ಈ ಸಿಕಲ್ ಸೆಲ್ ಕಾಯಿಲೆ ಬರುತ್ತದೆ. ಬೀಟಾ ಗ್ಲೋಬಿನ್ ಎಂಬ ಪ್ರೋಟೀನ್ ವಸ್ತು ಫೆರಿರ್ಆಮ್ಲಜನಕ ವಾಗಿ ಬದಲಾಗುವ ಬದಲು ದೇಹವು ಹಿಮೋಗ್ಲೋಬಿನ್ ಎಸ್ ಎಂಬ ಅಸಾಮಾನ್ಯ ವಸ್ತುವನ್ನು ಉತ್ಪಾದಿಸುತ್ತದೆ. ಇದರ ಪರಿಣಾಮ ಎಂದರೆ ರಕ್ತ ದಲ್ಲಿನ ಕೆಂಪು ರಕ್ತ ಕಣಗಳು ಕ್ರೆಸೆಂಟ್ ಆಕಾರ ತಳೆದು ವಿರೂಪಗೊಳ್ಳುತ್ತವೆ.
ಇದು ನಂತರ ದೇಹದ ರಕ್ತ ನಾಳಗಳಲ್ಲಿ ವಿವಿಧ ತೊಂದರೆ ಉಂಟುಮಾಡಿ ಹೃದಯಾಘಾತ ಮತ್ತು ಪಾರ್ಶ್ವವಾಯು ರೀತಿಯ ಕಾಯಿಲೆಗಳನ್ನು ಮಕ್ಕಳಲ್ಲಿಯೂ ಉಂಟು ಮಾಡಬಲ್ಲದು. ಆಗ ವೈದ್ಯರು ಈ ಮಗು 6 ವರ್ಷಕ್ಕಿಂತ ಜಾಸ್ತಿ ಬದುಕಲಾರಳು ಎಂದು ತಿಳಿಸಿದ್ದರು. ಆಕೆಗೆ ಈ ಕಾಯಿಲೆ ಅವಳ ತಂದೆ ತಾಯಿಯರಿಂದ ಬಂದಿದೆ. ದೇಹದಲ್ಲಿ ರಿಸೆಸಿವ್ ಆಗಿರುವ ಸಿಕಲ್ ಸೆಲ್ಜೀನ್ ಮೂಲಕ ತಾಯಿ ತಂದೆಯರಿಂದ ಇದು ಮಕ್ಕಳಿಗೆ ಬರುತ್ತದೆ. ತಂದೆ ತಾಯಿಯರಲ್ಲಿ  ಜೀನ್ ಇದ್ದು ಅವರಲ್ಲಿ ಕಾಯಿಲೆ ಇಲ್ಲದಿದ್ದರೆ ಮಕ್ಕಳಿಗೆ ಈ ಕಾಯಿಲೆ ಬರುವ ಸಾಧ್ಯತೆ ಶೇ.25 ಇರುತ್ತದೆ.
ತಂದೆ ತಾಯಿ ಇಬ್ಬರಲ್ಲೂ ಈ ಕಾಯಿಲೆ ಇzಗ ಮಕ್ಕಳಲ್ಲಿ ಈ ಕಾಯಿಲೆ ಬಂದೇ ಬರುತ್ತದೆ. ಇದು ಆಫ್ರಿಕಾ ಮೂಲದಿಂದ ಬಂದ ವ್ಯಕ್ತಿಗಳಲ್ಲಿ ಹೆಚ್ಚು ಕಂಡು ಬರುತ್ತದೆ ಎನ್ನಲಾಗಿದೆ. ಅಲ್ಲಿ ತೀವ್ರ ಹಂತದ ಮಲೇರಿಯಾ ಕಾಯಿಲೆಯ ವಿರುದ್ಧವಾಗಿ ಸೆಣೆಸಲು ಈ ಸಿಕಲ್ ಸೆಲ್ ಜೀನ್ ದೇಹದಲ್ಲಿ ಹುಟ್ಟಿಕೊಳ್ಳುತ್ತದೆ ಎನ್ನಲಾಗಿದೆ.
ಜೆನೆಟಿಕ್ ಕತ್ತರಿಯಿಂದ ಮಾರ್ಪಾಡು ಅಥವಾ ಎಡಿಟ್ಮಾಡುವುದು:ಕೆಲವು ವಾರಗಳ ಮೊದಲು ವಿಕ್ಟೋರಿಯಾ ಗ್ರೇಯ ವೈದ್ಯ ಡಾ. ಹೇಡರ್ ಫ್ರಾಂಗೌಲ್ಗ್ರೇಯ ಶರೀರದಿಂದ ಬಿಲಿಯನ್‌ಗಟ್ಟಲೆ ಆಕರ ಕೋಶಗಳನ್ನು ( ) ತೆಗೆದು ಯುರೋಪಿನ ಒಂದು ಅeತ ಪ್ರಯೋಗಾಲಯಕ್ಕೆ ಕಳಿಸಿದರು. ಡಾ.ಹೇಡರ್ ಅವರು ಸರಹಾ ಕ್ಯಾನನ್ ರೀಸರ್ಚ್ ಸಂಸ್ಥೆಯ ವೈದ್ಯಕೀಯ ನಿರ್ದೇಶಕರು. ಯುರೋಪಿನ ಆ ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ಆಕೆಯ ಜೀವಕೋಶದ ಪದರಗಳನ್ನು ಬೇರ್ಪಡಿಸಲು ಎಲೆಕ್ಟ್ರಿಕ್ ಪಲ್ಸರ್‌ಗಳನ್ನು ಉಪಯೋಗಿಸಿದರು.
ಆಕೆಯ ಜೆನೆಟಿಕ್ ಕೋಡ್ ಅನ್ನು ಸರಿಪಡಿಸಲು ಮಾಲಿಕ್ಯುಲಾರ್ ಸಿಜರ‍್ಸ್ ಅಥವಾ ಕತ್ತರಿಗಳನ್ನು ಒಳತೂರಿಸಿದರು. ಆನಂತರ ಜೀವಕೋಶಗಳನ್ನುರೀಎಂಜಿನಿಯರಿಂಗ್ ಮಾಡಲಾಯಿತು. ನಂತರ ಅವುಗಳನ್ನು ಶೀತಲೀಕರಿಸಿ () ವಿಕ್ಟೋರಿಯಾ ಗ್ರೇಯ ಮೊದಲಿನ ಕ್ಯಾನನ್ ಸಂಸ್ಥೆಗೆ ಕಳಿಸಲಾಯಿತು.
ಅಲ್ಲಿ ಈ ಜೀವಕೋಶಗಳನ್ನು ಸೂಕ್ತ ಸಿರಿಂಜ್ ಮೂಲಕ ಆಕೆಯ ರಕ್ತ ನಾಳಕ್ಕೆಇಂಜೆಕ್ಟ್ಮಾಡಲಾಯಿತು. ಕ್ರಮೇಣ ಆಕೆಯ ದೇಹದಲ್ಲಿ ಆರೋಗ್ಯವಂತ ಹಿಮೋಗ್ಲೋಬಿನ್ ಉತ್ಪಾದನೆ ಆರಂಭವಾಯಿತು. ಆಕೆಗೆ ಅಲ್ಲಿಯವರೆಗೆ ಇದ್ದ ತೀವ್ರ ಹೃದಯದ ಸಮಸ್ಯೆ ಮತ್ತು ತೀವ್ರ ನೋವಿನ ಸಮಸ್ಯೆ ಬಹಳ ಬೇಗ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಈಕೆಯಲ್ಲಿ ಉಪಯೋಗಿಸಿದ ಜೆನೆಟಿಕ್ ತಾಂತ್ರಿಕತೆ ಎಂದರೆ  – Cas9. ಜೆನೆಟಿಕ್ ಎಡಿಟಿಂಗ್‌ನ ಹಲವು ರೀತಿಯ ಕ್ರಮಗಳಲ್ಲಿ ಇದು ಬಹಳ ಸುಲಭವಾದದ್ದು, ಬಹಳ ಕಡಿಮೆ ಖರ್ಚಿನದ್ದು ಹಾಗೂ ಹೆಚ್ಚು ನಿಖರವಾದದ್ದು.
ಇದು 1990ರ ದಶಕದಿಂದಲೇ ಬಳಕೆಗೆ ಬಂದಿದ್ದರೂ ಹೆಚ್ಚು ಜನಪ್ರಿಯವಾಗಿದ್ದು ಇತ್ತೀಚೆಗಷ್ಟೇ. ಇದು ಡಿಎನ್‌ಎಯ ಮ್ಯುಟೇಷನ್ ಅಳಿಸಲು ಅಥವಾ ಪುನಃ ಸರಿಯಾಗಿ ಬರೆಯಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಇದು ಹಲವಾರು ಜೆನೆಟಿಕ್ ಮೂಲದಿಂದ ಬರುವ ಕಾಯಿಲೆಗಳಲ್ಲಿ ಚಿಕಿತ್ಸೆಯಾಗಿ ಬಳಸಬಹುದು. ಅಥವಾ ಅಂತಹ ಕಾಯಿಲೆ ಬರದಿರುವಂತೆ ಮಾಡಬಹುದು ಎನ್ನಲಾಗಿದೆ. ಅಂತಹ ಮುಖ್ಯ ಕಾಯಿಲೆಗಳೆಂದರೆ – ಸಿಸ್ಟಿಕ್ -ಬ್ರೋಸಿಸ್, ಡೌನ್ ಸಿಂಡ್ರೋಮ, ಜೆನೆಟಿಕ್ ಮೂಲದ ಅಂಧತ್ವ ಇತ್ಯಾದಿ.
ಥಿಯರಿಟಿಕಲಿ ಈ  ತಂತ್ರಜ್ಞಾನವನ್ನು ಭ್ರೂಣದ ಹಂತದಲ್ಲಿಯೇ ಉಪಯೋಗಿಸಬಹುದು. ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಮಾಲಿಕ್ಯುಲಾರ್ ಟ್ರೇಟ್‌ಗಳನ್ನು ದೃಢೀಕರಿಸಲು ಇದನ್ನು ಆ ಹಂತದಲ್ಲಿ ಉಪಯೋಗಿಸಬಹುದು. ಉದಾ  ಹರಣೆಗೆ ಹುಟ್ಟದೇ ಇರುವ ಮಗುವಿಗೆ ಕೂದಲಿಗೆ ಬೇಕಾದ ಬಣ್ಣ ಬರುವಂತೆ ಮಾಡಲು ಅಥವಾ ಕಣ್ಣಿಗೆ ನಿರ್ದಿಷ್ಟಬಣ್ಣ ಕೊಡಲು ಇತ್ಯಾದಿ. ಹಾಗೆಯೇ ಈ ತಂತ್ರಜ್ಞಾನವನ್ನು ಆಟಿಸಂ ಕಾಯಿಲೆಯಲ್ಲಿ ಬುದ್ದಿಯ ಮಟ್ಟವನ್ನು ವ್ಯತ್ಯಾಸ ಮಾಡಲು ಅಥವಾ ವೃದ್ಧಿಸಲು ಉಪಯೋಗಿಸಬಹುದು. ಮೇಲೆ ತಿಳಿಸಿದ ವಿಕ್ಟೋರಿಯಾ ಗ್ರೇಯ ಸಿಕಲ್ ಸೆಲ್ ಕಾಯಿಲೆಗೆ ಪದೇ ಪದೇ ಮೂಳೆಯ ಅಸ್ಥಿಮಜ್ಜೆಯ ಕಸಿ ಚಿಕಿತ್ಸೆ ಮಾಡಬೇಕಿತ್ತು. ಅದರ ಬದಲು ಈ ಹೊಸ ಚಿಕಿತ್ಸೆಯನ್ನು ಅವಳಲ್ಲಿ ಪ್ರಯೋಗಿಸುವುದಾಗಿ ಆಕೆಯ ವೈದ್ಯರಾದ ಡಾ. ಪ್ರಾಂಗೌಲ್ ತಿಳಿಸಿದಾಗ ಆಕೆ ಸಂತೋಷದಿಂದ ಒಪ್ಪಿದಳು.
 ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ?
ಒಂದು ದಶಕದ ಮೊದಲು ಜೆನ್ನಿಫರ್ ಡೌಡ್‌ನಾಅವರು ಪೆಟ್ರಿ ಡಿಷ್‌ನಲ್ಲಿನ ಬ್ಯಾಕ್ಟೀರಿಯಾಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಜೀವರಸಾಯನ ಶಾಸ್ತ್ರಜ್ಞೆಯಾದ ಆಕೆ ಈ ಬ್ಯಾಕ್ಟೀರಿಯಾಗಳು ವೈರಸ್ ಗಳ ಸೋಂಕನ್ನು ಹೇಗೆ ಎದುರಿಸುತ್ತವೆ ಎಂಬುದನ್ನು ಕಂಡುಕೊಂಡಳು.
ದೇಹವನ್ನು ಈಗಾಗಲೇ ಆಕ್ರಮಿಸಿದ್ದ ಸೂಕ್ಷ್ಮ ಜೀವಿಗಳ ಡಿಎನ್‌ಎ ಸೀಕ್ವೆ ಅನ್ನು ಆ ಬ್ಯಾಕ್ಟಿರಿಯಾಗಳು ಸರಿಯಾಗಿ ನೆನಪಿಟ್ಟು ಕೊಂಡು ಭವಿಷ್ಯದಲ್ಲಿ ಅವು ದೇಹವನ್ನು ಆಕ್ರಮಿಸಿದರೆ ಅವುಗಳ ವಿರುದ್ಧ ಹೋರಾಡಲು ಸನ್ನದ್ದರಾಗಿರುವಂತೆ ದೇಹದಪ್ರತಿರೋಧ ವ್ಯವಸ್ಥೆಯನ್ನು ಅಣಿಗೊಳಿಸುತ್ತಿದ್ದವು. ಈ ಕ್ರಿಸ್ಪ್ ಆರ್( ) ಇದು ಬ್ಯಾಕ್ಟಿರಿಯಾದ ಪ್ರತಿರೋಧ ವ್ಯವಸ್ಥೆಯ ಒಂದು ಭಾಗ. ಹೊರಗಿನಿಂದ ಆಕ್ರಮಿಸುವ ಸೂಕ್ಷ್ಮ ಜೀವಿಯ ಜೆನೆಟಿಕ್ ಕೋಡ್‌ನ ತುಣುಕುಗಳನ್ನು ಈ ಬ್ಯಾಕ್ಟಿರಿಯಾಗಳು ಅಪಹರಿಸುತ್ತವೆ. ಅವು ನಂತರ ತಮ್ಮದೇ ಡಿಎನ್‌ಎಗೆ ಆ ತುಣುಕುಗಳನ್ನು ಸೇರಿಸಿ ಹೊಲಿದುಕೊಂಡು ಹೊಸ ಆರ್‌ಎನ್ಎಯನ್ನು ಹುಟ್ಟು ಹಾಕುತ್ತವೆ. ಈ ಕ್ರಿಆರ್ ವ್ಯವಸ್ಥೆಯಲ್ಲಿರುವ ಇನ್ನೊಂದು ಎಂಜೈಮ್ Cas9, ವೈರಸ್ ಅನ್ನು ತುಂಡು ಮಾಡುತ್ತದೆ. ಪರಿಣಾಮ ಎಂದರೆ ಈ ವೈರಸ್‌ಗೆ ವೃದ್ಧಿಗೊಳ್ಳಲು ಸಾಧ್ಯವಾಗುವುದಿಲ್ಲ.
2012ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆದ ಡಾ. ಗೌಡ್ನಾ ಅವರು ಈ ತಂತ್ರಜ್ಞಾನದ ವಿವರಗಳನ್ನು ವಿವರಿಸುವ ಸಂಶೋಧನಾ ಪೇಪರ್ ಪ್ರಕಟಿಸಿದಾಗ ವೈದ್ಯಕೀಯ ಜಗತ್ತು ವಿಸ್ಮಯಗೊಂಡಿತು. 1987ರಲ್ಲಿಯೇ ಜಪಾನಿನ ವಿಜ್ಞಾನಿಗಳು ಈ ಕೋಲೈ ಬ್ಯಾಕ್ಟಿರಿಯಾಗಳಲ್ಲಿರುವ ಡಿಎನ್‌ಎ ಸೀಕ್ವೆನ ರಿಪಿಟಿಟಿವ್ ರೀತಿಯನ್ನು ಕಂಡು ಹಿಡಿದಿದ್ದರು. ಆದರೆ ಅದನ್ನು ಹೇಗೆ ಸುಲಭವಾಗಿ ಮಾರ್ಪಾಡು ಮಾಡಿ ನಾವು ಈ ತರಹದ ಕಾಯಿಲೆಗಳಲ್ಲಿ ಉಪಯೋಗಿಸಬಹುದು ಎಂಬುದನ್ನು ಡೌಡ್ನಾ ಅವರು ಸ್ಪಷ್ಟಪಡಿಸಿದರು.
ಎಲ್ಲರಿಗೆ ಗೊತ್ತಿರುವಂತೆ 2020ರಲ್ಲಿ ಡೌಡ್ನಾ ಮತ್ತು ಎಮಾನು ಚಾರ್ಪೆಂಟಿಯರ್ ಇವರುಗಳಿಗೆ ಜಂಟಿಯಾಗಿ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜೀವನದ ಕೋಡ್ ಹೊಸ ದಾಗಿ ಬರೆಯುವ ಈ ಸಂಶೋಧನೆಗೆ ಕೊಡಲಾಯಿತು. ಈ ಕ್ರಿಆರ್ ತಂತ್ರಜ್ಞಾನವನ್ನು ಜೀವವಿಜ್ಞಾನಿಗಳು ಕುರಿಗಳಲ್ಲಿ ಉದ್ದ ಕೂದಲು, ಜಾಸ್ತಿ ಮಾಂಸ ಮತ್ತು ಉಣ್ಣೆ ಉತ್ಪಾದಿಸಲು, ಚೀಸ್ ಮತ್ತು ಮೊಸರು ಮಾಡುವ ಬ್ಯಾಕ್ಟಿರಿಯಾಗಳನ್ನು ವೈರಸ್ ಸೋಂಕುಗಳಿಂದ ರಕ್ಷಿಸಲು, ಕಾಫಿ ಗಿಡಗಳಲ್ಲಿರುವಕಫೇನ್ಜೀನ್ ಅನ್ನು ನಾಶ ಮಾಡಲು ಮತ್ತು ಇನ್ನೂ ಹಲವು ರಂಗಗಳಲ್ಲಿ ಉಪಯೋಗಿಸಿದ್ದಾರೆ.
2018ರಲ್ಲಿ ಚೀನಾದ ವಿಜ್ಞಾನಿ ಹೇ ಜಿಯಾನ್ ಕುವೈ ಅವರು ಯೂ ಟ್ಯೂಬ್‌ನಲ್ಲಿ ವಿಡಿಯೊ ಹಾಕಿ ಜಗತ್ತಿನಲ್ಲಿ ಮನುಷ್ಯರ ಮೇಲೆ ಮೊದಲ ಕ್ರಿಆರ್ ಎಡಿಟ್ ಮಾಡಿದ ರೀತಿ ವಿವರಿಸಿದರು. ಭವಿಷ್ಯದಲ್ಲಿಏಡ್ಸ್ಬರದಂತೆ ಅವಳಿ ಸಹೋದರಿಯರ ಭ್ರೂಣವನ್ನು ತಾಯಿಯ ಗರ್ಭದಿಂದ ಹೊರತೆಗೆದು ಈ ತಂತ್ರಜ್ಞಾನ ಉಪಯೋಗಿಸಿ ಎಡಿಟ್ ಮಾಡಿ ಪುನಃ ತಾಯಿಯ ಗರ್ಭಕ್ಕೇ ವಾಪಸ್ ಇಡಲಾಯಿತು ಎಂದು ಘೋಷಿಸಿದರು. ಈ ತಂತ್ರಜ್ಞಾನವನ್ನು ಜೆರ್ಮ್ ಲೈನ್ ಎಡಿಟಿಂಗ್ ಎಂದು ಕರೆಯಲಾಗುತ್ತದೆ.
ತಕ್ಷಣವೇ ಜಗತ್ತಿನಾದ್ಯಂತ ಪ್ರಖರವಾದ ಪ್ರತಿಕ್ರಿಯೆಗಳು ಪ್ರಕಟವಾದವು. ಭ್ರೂಣ, ಅಂಡ ಅಥವಾ ವೀರ್ಯಾಣುಗಳ ಮೇಲೆ ಈ ತಂತ್ರಜ್ಞಾನವನ್ನು ಉಪಯೋಗಿಸಿ ಜೆನೆಟಿಕ್ ರೀತಿ ಬದಲಿಸಿ ಮಕ್ಕಳು ಹುಟ್ಟುವಂತೆ ಮಾಡಬಾರದೆಂದು ವಿಜ್ಞಾನಿಗಳುಒಕ್ಕೊರಲಿನಿಂದ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಪ್ರಕ್ರಿಯೆಯನ್ನು ತಡೆಯುವಂತಹ ಕಾನೂನುಗಳು ಇಲ್ಲ. ಆ ವಿಜ್ಞಾನಿ ಹೀಯವರಿಗೆ ಚೀನಾದ ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತು. ಆದರೆ ಸ್ವಲ್ಪ ಸಮಯದ ನಂತರ ರಷ್ಯಾದ ವಿಜ್ಞಾನಿಯೊಬ್ಬರು ಈ ತರಹ ಭ್ರೂಣದಲ್ಲಿಯೇ ಡಿಎನ್‌ಎ ಎಡಿಟ್ ಮಾಡಿ ಕಿವುಡುತನ ಬರುವ ಜೀನ್ ಹೊಂದಿರುವ ದಂಪತಿಗಳಲ್ಲಿ ಈ ತಂತ್ರಜ್ಞಾನಉಪಯೋಗಿಸಿ ಮಗುವಿನಲ್ಲಿ ಕೇಳುವ ಪ್ರಕ್ರಿಯೆ ಸಹಜವಾಗಿರುವಂತೆ ಮಾಡುವೆ ಎಂದು ಘೋಷಿಸಿದರು.
ಈ ತರಹದ ಚಿಕಿತ್ಸೆಗಳಲ್ಲಿ ವೈಜ್ಞಾನಿಕ ವೃಂದಕ್ಕೆ ನೈತಿಕತೆಯ ಪ್ರಶ್ನೆ ಯಾವಾಗಲೂ ಎದುರಾಗುತ್ತದೆ. ಮಾನವ ಕಷ್ಟ ಅನುಭವಿಸುವುದನ್ನು ತಡೆಯುವುದು ಮತ್ತು ಜೀನ್‌ಗಳಲ್ಲಿ ಅನಗತ್ಯ ಹಸ್ತಕ್ಷೇಪ – ಇವೆರಡರ ಮಧ್ಯೆ ಗೆರೆ ಎಳೆಯುವುದು ಹೇಗೆ ಎಂಬ ಸಂದಿಗ್ಧತೆ ವಿಜ್ಞಾನಿಗಳಿಗೆ ಯಾವಾಗಲೂ ಇದೆ. 2020 ರಲ್ಲಿ ಓರೆಗಾಂನ ವೈದ್ಯರು, ಹುಟ್ಟಿದಾಗಿನಿಂದಲೂ ಅಂಧತ್ವದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಅಕ್ಷಿಪಟಲಕ್ಕೆ ಈ ಕ್ರಿ ಆರ್ ತಂತ್ರಜ್ಞಾನಕ್ಕೆ ಒಳಪಡಿಸಿದ ದ್ರವವನ್ನುಇಂಜೆಕ್ಟ್‌ಮಾಡಲಾಯಿತು. ಇದು ಆ ವ್ಯಕ್ತಿಯ CEP290ಜೀನ್ ಅನ್ನು ರಿಪೇರಿ ಮಾಡಿ ದೃಷ್ಟಿ ತರುತ್ತದೆ ಎನ್ನಲಾಗಿದೆ.
ಇದರ ಫಲಿತಾಂಶ ಇನ್ನೂ ಹೊರಗೆ ಬಂದಿಲ್ಲ. ಸದ್ಯದ ಹೊರಬರಲಿದೆ ಎನ್ನಲಾಗಿದೆ. ಅದು ಜೀವವಿರುವ ವ್ಯಕ್ತಿಯಲ್ಲಿ ಉಪಯೋಗಿಸಿದ ಮೊಟ್ಟಮೊದಲಕ್ರಿಸ್ಪ್ ಆರ್ತಂತ್ರಜ್ಞಾನದ ಪ್ರಯೋಗ ಇದಾಗಿತ್ತು. ಈ ವ್ಯಕ್ತಿಯಲ್ಲಿ ಅಂಧತ್ವಕ್ಕೆ ಸಂಬಂಧ ಪಟ್ಟ ಜೀನ್ ಇನ್ನೂ ಇದೆ. ಭವಿಷ್ಯದಲ್ಲಿ ಆತನ ಮಕ್ಕಳಿಗೂ ಅದೇ ರೀತಿಯ ಅಂಧತ್ವ ಬರುವ ಸಾಧ್ಯತೆ ತುಂಬಾ ಇದೆ. ಹಾಗಾಗಿ ಈ ಕ್ರಿ ಆರ್ ತಂತ್ರಜ್ಞಾನ ತಪ್ಪಾದ್ದನ್ನು ಸರಿಪಡಿಸಲು, ಗುಣಪಡಿಸಲು, ಜೆನೆಟಿಕ್ ಮ್ಯುಟೇಷನ್ ಗಳನ್ನು ರಿವರ್ಸ್ ಮಾಡಲು ಒಂದು ಯುಕ್ತವಾದ ತಂತ್ರಜ್ಞಾನ.
ಹಿಂದಿನ ಜೀನ್ ಥೆರಪಿಯ ವಿಧಾನಗಳು ಕಾಯಿಲೆಗಳನ್ನು ಮಾತ್ರ ಗುಣಪಡಿಸುತ್ತಿದ್ದವು. ಆದರೆ ಈ ತಂತ್ರಜ್ಞಾನ ಈಗಾಗಲೇ ತಿಳಿಸಿರುವಂತೆ ಕಾಯಿಲೆಯ ಮೂಲದ ಜೀನ್ ಅನ್ನೇ ಹುಡುಕಿ ಅಲ್ಲಿಯೇ ರಿಪೇರಿ ಮಾಡಿ ಭವಿಷ್ಯದಲ್ಲಿ ಕಾಯಿಲೆ ಬರದಂತೆ ಮಾಡುತ್ತದೆ. ಈ ಬಗೆಯ ಪ್ರಯೋಗಗಳಲ್ಲಿ ಹೊಸ ತಾಂತ್ರಿಕತೆಯರಿಸ್ಕ್‌ಗಳನ್ನುಮತ್ತು ಪ್ರಯೋಜನಗಳನ್ನು ಯಾರು ಹೊರುತ್ತಾರೆ? ಎಂದು ಹಾರ್ವರ್ಡ್ ಮೆಡಿಕಲ್ ಕಾಲೇಜಿನ ಬಯೋಎಥಿಕ್ಸ್ರೀಸರ್ಚ್ ಪ್ರೊಫೆಸರ್ ಇನ್ ಸೂ ಹೈವುನ್ ಅವರು ಕೇಳುತ್ತಾರೆ.
ಮೊದಲು ತಿಳಿಸಿದ ಜೆರ್ಮ್ ಲೈನ್ ಎಡಿಟಿಂಗ್‌ನಲ್ಲಿ ಇದರ ಪ್ರಯೋಜನ ಆ ದಂಪತಿಗಳಿಗೆ ಆದರೂ ಅದರಲ್ಲಿನರಿಸ್ಕ್ನಅಂಶಗಳು ಟ್ಟದ ಮಗುವಿಗೆ ಮತ್ತು ಅದರ ಮುಂದಿನ ಪೀಳಿಗೆ ಯವರಿಗಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಈ ರೀತಿಯ ದಾರಿಯಲ್ಲಿ ನಾವು ಹೋಗಬೇಕೆ ಎಂದು ಅವರ ಮುಂದಿನ ಪ್ರಶ್ನೆ. ಆದರೆ ನಾವು ಈಗಾಗಲೇ ಈ ದಾರಿಯಲ್ಲಿ ಹಲವು ದೂರ ಕ್ರಮಿಸಿಯಾಗಿದೆ ಎಂದು ಹಲವು ವಿಜ್ಞಾನಿಗಳ ಅಭಿಮತ.
ಕ್ರಿಸ್ಪ್ಆರ್ ತಂತ್ರಜ್ಞಾನದಿಂದ ಇಲಿಗಳಲ್ಲಿ ಫ್ರಜೈಲ್ಎಕ್ಸ್ಸಿಂಡ್ರೋಮ್‌ನ ರೋಗ ಲಕ್ಷಣಗಳನ್ನು ನಿಲ್ಲಿಸಬಹುದು ಎಂದು ಪ್ರಯೋಗಗಳಿಂದ ಸಾಬೀತುಪಡಿಸಿಜ್ಞಾರೆ. ಈ ಫ್ರಜೈಲ್ಎಕ್ಸ್ಸಿಂಡ್ರೋಮ್ ಎಂದರೆ ಆಟಿಸಂ ಕಾಯಿಲೆಯ ಜೆನೆಟಿಕ್ ಕಾರಣ. ಇದರಲ್ಲಿ ಬೆಳಕು ಮತ್ತು ಶಬ್ದಗಳಿಗೆ ವಿಪರೀತ ಸೆನ್ಸಿಟಿವಿಟಿ ಇರುತ್ತದೆ. ಹಾಗೆಯೇ ಕೆಲವು ರೀತಿಯ ವರ್ತನೆಗಳನ್ನು ಅಂತಹಾ ಮಗು ಪದೇಪದೆ ಮಾಡುತ್ತಿರುತ್ತದೆ.
ಹಾಗೆಯೇ ಡ್ಯೂಷನ್ ಮಸ್ಕುಲಾರ್ ಡಿಸ್ಟ್ರೋಫಿ ಎಂಬ ಮಾಂಸ ಖಂಡಗಳು ಜೋತು ಬೀಳುವ ಕಾಯಿಲೆಯನ್ನು ಈ ತಂತ್ರಜ್ಞಾನ ದಿಂದ ನಾಯಿಗಳಲ್ಲಿ ವಾಸಿ ಮಾಡಲಾಗಿದೆ. ಈ ಡ್ಯೂಷನ್ ಮಸ್ಕುಲಾರ್ ಡಿಸ್ಟ್ರೋಫಿ ಕಾಯಿಲೆ ಹೆಚ್ಚಾಗಿ ಗಂಡು ಮಕ್ಕಳಲ್ಲಿ ಕಂಡು ಬರುತ್ತದೆ. ಹಾಕೆನ್ ಮಿಟಲ್ ಎಂಬ ಈ ಹುಡುಗ ಹುಟ್ಟವಾಗ11ಪೌಂಡುಗಳ ತೂಕವಿದ್ದು ಆರೋಗ್ಯ ವಾಗಿಯೇ ಇದ್ದ. ಆತನಿಗೆ 4 ವರ್ಷವಾದಾಗ ಆತ ಆಡಿ ಬಂದು ಪ್ರತಿನಿತ್ಯ ಅಳಲು ಆರಂಭಿಸಿದ. ಆತನ ತಾಯಿ ವೈದ್ಯರಲ್ಲಿ ಈತನಿಗೆ ಗಂಭೀರವಾದ ಕಾಯಿಲೆ ಇದೆ ಎಂದು ಹೇಳಿ ಒತ್ತಾಯಿಸಿದಾಗ ವೈದ್ಯರುಗಳು ಈತನ ಕಾಯಿಲೆಯನ್ನು ನಿಖರವಾಗಿ ಕಂಡು ಹಿಡಿಯಲು ಒಂದು ವರ್ಷ ತೆಗೆದುಕೊಂಡರು.
ಈತನಿಗೂ ಮೇಲೆ ತಿಳಿಸಿದ ಡ್ಯೂಷನ್ ಮಸ್ಕುಲಾರ್ ಡಿಸ್ಟ್ರೋಫಿ ಕಾಯಿಲೆ ಇತ್ತು. ಹುಟ್ಟುವಾಗ ಆರೋಗ್ಯವಾಗಿರುವ ಈ ಕಾಯಿಲೆಯ ಮಕ್ಕಳು ನಂತರ 4,5,6 ವರ್ಷಗಳಾಗುವಾಗ ಗಂಭೀರ ಲಕ್ಷಣಗಳು ಆರಂಭವಾಗುತ್ತವೆ. ಅವರ ಮಾಂಸಖಂಡ ಗಳಲ್ಲಿ ಶಾಕ್ ತಡೆದುಕೊಳ್ಳುವ ಮುಖ್ಯ ಪ್ರೋಟೀನ್ ಒಂದರ ಕೊರತೆಯಿಂದ ಮಾಂಸಖಂಡಗಳು ವಿಭಜನೆ ಹೊಂದುತ್ತಾ ತಮ್ಮ ಕಾರ್ಯ ಕ್ಷಮತೆ ಕಳೆದುಕೊಂಡು ಕೆಲವೇ ವರ್ಷಗಳಲ್ಲಿ ನಡೆಯಲು ಅಸಾಧ್ಯವಾಗುತ್ತದೆ.
ನಂತರ ಉಸಿರಾಡುವುದೂ ಕಷ್ಟವಾಗುತ್ತದೆ. ಹೆಚ್ಚಿನವರು 25-30 ವರ್ಷಗಳ ಕಾಲ ಬದುಕುವುದೂ ಕಷ್ಟ. ಇನ್ನೂ ಹೊಸದಾದ ಈ ತಂತ್ರeನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದಾಗ ಇದರ ನಿಜವಾದ ಉಪಯೋಗ ಮತ್ತು ಪ್ರಾಮುಖ್ಯತೆ ಗೊತ್ತಾಗುತ್ತದೆ.