ಬುದ್ದನ ಶಾಂತಿಯ ಮಾರ್ಗ ಇಂದಿನ ಅಗತ್ಯ
ತನ್ನಿಮಿತ್ತ
ಶ್ರೀನಿವಾಸ ಜೋಕಟ್ಟೆ
ಬುದ್ಧ ಪೂರ್ಣಿಮೆ, ಬುದ್ಧ ಜಯಂತಿ. ‘ಇಂದಿನ ಅಗತ್ಯ ಯುದ್ಧ ಅಲ್ಲ, ಬುದ್ಧ’ ಎಂದು ಅನೇಕ ನಾಯಕರು ಸಾರುತ್ತಾ ಬಂದಿದ್ದಾರೆ. ಕಚ್ಚಾಟ, ಧಾರ್ಮಿಕ ಆಡಂಬರಗಳು ಮತ್ತು ಸಾಮಾಜಿಕ ಕೆಡುಕುಗಳಿಂದ ಪಾರಾಗುವಲ್ಲಿ ಬುದ್ಧ ತೋರಿಸಿದ ಶಾಂತಿಯ ಮಾರ್ಗವೇ ಜಗತ್ತಿಗೇ ಮಾದರಿ.
ಬೌದ್ಧರ ಯಾತ್ರಾ ಸ್ಥಳಗಳು ಸಾಕಷ್ಟಿದ್ದರೂ ನೇಪಾಳದ ಲುಂಬಿನಿ, ಭಾರತದ ಬೋಧ್‌ಗಯಾ, ಸಾರನಾಥ ಮತ್ತು ಕುಶೀನಗರ ಈ ನಾಲ್ಕು ಸ್ಥಳಗಳು ಹೆಚ್ಚು ಜನಪ್ರಿಯ. ಈ ನಾಲ್ಕು ಪವಿತ್ರ ಯಾತ್ರಾ ಸ್ಥಳಗಳನ್ನು ಬೌದ್ಧರ ಚಾರ್ ಧಾಮ್ ಎಂದೂ ಕರೆಯುವುದಿದೆ.2002ರಲ್ಲಿ ಯುನೆಸ್ಕೊ ಬಿಹಾರದಲ್ಲಿರುವ ಬೋಧ್‌ಗಯಾದ ಮಹಾಬೋಧಿ ಮಂದಿರಕ್ಕೆ ವಿಶ್ವ ವಿರಾಸತ್ ಮಾನ್ಯತೆಯನ್ನು ನೀಡಿದೆ.
ನೇಪಾಳದಲ್ಲಿರುವ ‘ಲುಂಬಿನಿ’ಯು ಗೌತಮ ಬುದ್ಧನ ಜನ್ಮಸ್ಥಳ. ಭಾರತದ ಬೋಧ್‌ಗಯಾ ಬುದ್ಧನಿಗೆ eನ ಪ್ರಾಪ್ತಿಯಾದ ಪವಿತ್ರ ಕ್ಷೇತ್ರ. ಸಾರನಾಥದಲ್ಲಿ ಮೊದಲ ಬಾರಿ ಉಪದೇಶ ಮಾಡಿದ ಗೌತಮ ಬುದ್ಧ, ಕುಶೀನಗರದಲ್ಲಿ ಮಹಾಪರಿನಿರ್ವಾಣ ಹೊಂದಿ ದ್ದರು. ಗೌತಮ ಬುದ್ಧ ಎಂದರೆ ಶಾಂತಿಯ ಮಹಾಕಾವ್ಯ. ಕರ್ಮಕಾಂಡ ಅಂಧ ವಿಶ್ವಾಸ ಮತ್ತು ಸುಳ್ಳುಗಳು ಸುತ್ತುವರಿದಿದ್ದಅಂದಿನ ಧಾರ್ಮಿಕ ಕ್ಷೇತ್ರ. ಆ ದಿನಗಳಲ್ಲಿ ಜನಸಾಮಾನ್ಯರಿಂದ ದೂರ ದೂರವಾಗುತ್ತಿತ್ತು.
ಎಲ್ಲಾ ಕಡೆ ಒಂದು ರೀತಿಯ ಕತ್ತಲೆ ಆವರಿಸಿತ್ತು. ಇದನ್ನು ದೂರಗೊಳಿಸಿ ಬೆಳಕಿಗಾಗಿ ಕಾಯುತ್ತಿದ್ದ ಸಮಾಜಕ್ಕೆ ಕ್ರಿಸ್ತಪೂರ್ವ563ರಲ್ಲಿ ಸಿದ್ಧಾರ್ಥ ಗೌತಮನ ಜನನವಾಯಿತು. ಯುದ್ಧ ವಿರೋಧಿಯಾಗಿದ್ದ ಸಿzರ್ಥ ತನ್ನ29ನೇ ವಯಸ್ಸಿನಿಂದ35ನೇ ವಯಸ್ಸಿನ ತನಕ ನಿರಂತರ ಚಿಂತನೆ ಧ್ಯಾನವನ್ನು ನಡೆಸಿದ ನಂತರ ಬೋಧ್‌ಗಯಾದಲ್ಲಿ ಭೋದಿ ವೃಕ್ಷದ ಕೆಳಗಡೆ ಜ್ಞಾನ ಪ್ರಾಪ್ತಿಯಾಗಿಸುವಲ್ಲಿ ಯಶಸ್ಸು ಪಡೆದರು.
ಶರೀರದ ಪ್ರಧಾನಪಾತ್ರ ಮನಸ್ಸಿನದು. ಮನಸ್ಸು ಆರೋಗ್ಯವಾಗಿಡಲು ಶರೀರದ ಆರೋಗ್ಯ ಕೂಡ ಅವಶ್ಯವೆಂದು ತಿಳಿದರು. ಕ್ರಿಸ್ತಪೂರ್ವ 528 ರಲ್ಲಿ ವೈಶಾಖ ಪೂರ್ಣಿಮೆಯ ರಾತ್ರಿಗೆ ಬುದ್ಧತ್ವ ಪ್ರಾಪ್ತಿಯಾಗಿಸಿದರು. ಯಾವ ವೃಕ್ಷದ ಕೆಳಗೆ ಧ್ಯಾನ ಮಾಡು ತ್ತಿದ್ದರೋ ಅದು ಬೋಧಿವೃಕ್ಷವೆಂದು ಪ್ರಖ್ಯಾತಿ ಪಡೆಯಿತು. ವೈಶಾಖ ಪೂರ್ಣಿಮೆಯನ್ನು ವಿಶ್ವದಲ್ಲಿ ಬುದ್ಧಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ವರ್ಷ ಮೇ26ರಂದು (2021) 2569ನೇ ಬುದ್ಧಪೂರ್ಣಿಮೆ.
ಮನುಷ್ಯನ ಮುಕ್ತಿಯ ಜತೆ ದೇವರು ಮತ್ತು ಆತ್ಮದ ಅಸ್ತಿತ್ವಕ್ಕೆ ದೂರದಿಂದಲೂ ಯಾವುದೇ ಸಂಬಂಧ ಇಲ್ಲ ಎನ್ನುವ ಬೌದ್ಧ ದರ್ಶನದ ವಿಚಾರವು ಆಗಿನ ವೈಚಾರಿಕ ಕ್ರಾಂತಿಯೇ ಆಯಿತು. eನ ಪ್ರಾಪ್ತಿಯ ನಂತರ ಸುಮಾರು ಐದು ದಶಕಗಳ ಕಾಲಪರ್ಯಟನೆ ಗೈಯುತ್ತಾ ಜನರನ್ನು ದುಃಖದಿಂದ ಮುಕ್ತಗೊಳಿಸುವುದಕ್ಕಾಗಿ ಸಮಯವನ್ನು ವಿನಿಯೋಗಿಸಿದರು. ಪ್ರೇಮಪೂರ್ಣ ಮನುಷ್ಯನೇ ಬುದ್ಧನ ಆದರ್ಶ.
ಬುದ್ಧನ ಜನ್ಮಸ್ಥಾನ ನೇಪಾಳದ ಲುಂಬಿನಿ, ಬುದ್ದನಿಗೆ ಜ್ಞಾನ ಪ್ರಾಪ್ತಿಯಾದ ಬಿಹಾರದ ಬೋಧ್‌ಗಯಾ ಮತ್ತು ಮೊದಲಬಾರಿಗೆ ಬುದ್ಧ ಉಪದೇಶ ಮಾಡಿದ ವಾರಾಣಸಿಯ ಸಾರನಾಥ ಈ ಮೂರೂ ಕ್ಷೇತ್ರಗಳಿಗೆ ಭೇಟಿ ನೀಡಿದ ಖುಷಿ ನನ್ನದು. ಬುದ್ಧನ ಜನ್ಮಸ್ಥಳ ಲುಂಬಿನಿಗೆ ೨ ಬಾರಿ ಸಂದರ್ಶಿಸುವ ಅವಕಾಶವೂ ನನ್ನ ಪಾಲಿಗೆ ಲಭ್ಯವಾಗಿತ್ತು.
ಲುಂಬಿನಿ:ಭಾರತ ನೇಪಾಳ ಸೊನೌಲಿ ಗಡಿ ಪ್ರದೇಶದಿಂದ (ಉತ್ತರ ಪ್ರದೇಶ) ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿರುವ ನೇಪಾಳದ ಲುಂಬಿನಿ ಗೌತಮನ ಜನ್ಮಸ್ಥಳ. ಶಾಕ್ಯ ವಂಶದ ಸಿದ್ಧಾರ್ಥ ಗೌತಮ ಗೋತ್ರದವರು. ಇವರನ್ನು ಶಾಕ್ಯಮುನಿ ಎಂದೂ ಕರೆಯುತ್ತಾರೆ. ಲುಂಬಿನಿಯಲ್ಲಿ ಸಿದ್ಧಾರ್ಥ ತನ್ನ ಬದುಕಿನ ೨೯ ವರ್ಷಗಳನ್ನು ಕಳೆದಿದ್ದರು. ಲುಂಬಿನಿಗೆ 22ಕಿಲೋಮೀಟರ್ ದೂರದಲ್ಲಿ ಕಪಿಲವಸ್ತು ಇದೆ. ಇಲ್ಲಿನ ರಾಜ ಶುದ್ಧೋದನ ಮತ್ತು ರಾಣಿ ಮಹಾಮಾಯಾ ಇವರ ಪುತ್ರನೇ ಸಿದ್ದಾರ್ಥ.
ರಾಣಿ ಮಹಾಮಾಯ ತನ್ನ ತವರು ಮನೆಗೆ ಹೋಗುವಾಗ ಲುಂಬಿನಿಯಲ್ಲಿ ನಿಂತರು. ಇಲ್ಲಿ ಸಿದ್ದಾರ್ಥನಿಗೆ ಜನ್ಮ ನೀಡಿದರು. ಇಲ್ಲಿ ಮಾಯಾದೇವಿ ಮಂದಿರ, ಪವಿತ್ರ ಕುಂಡ, ವಿದೇಶಿಯರು ಕಟ್ಟಿಸಿದ ಹತ್ತಾರು ಬೌದ್ಧ ವಿಹಾರಗಳು, ಮ್ಯೂಸಿಯಂ .. ಎಲ್ಲವೂ ಪ್ರವಾಸಿಗರನ್ನು ಆಕರ್ಷಿಸುವುದು.
ಬೋಧ್‌ಗಯಾ:ಸಿದ್ದಾರ್ಥ ಗೌತಮ ಸತ್ಯದ ಹುಡುಕಾಟದಲ್ಲಿ ತನ್ನ ಹೆಂಡತಿ, ಮಗು, ಅರಮನೆಯನ್ನು ತ್ಯಜಿಸಿ ನಿರಂಜನನದಿತೀರದಲ್ಲಿರುವ ಉರೂವೆಲಾ ಎಂಬ ಊರನ್ನು ತಲುಪಿ ದರು. ಅಲ್ಲಿ ಬೋಧಿವೃಕ್ಷದ ಕೆಳಗೆ ಆರು ವರ್ಷಗಳ ಕಾಲ ಧ್ಯಾನನಿರತರಾಗಿ ನನ್ನ35ನೇ ವಯಸ್ಸಿನಲ್ಲಿ ಕ್ರಿಸ್ತಪೂರ್ವ528ರಲ್ಲಿ ಜ್ಞಾನಪ್ರಾಪ್ತಿಯಾಗಿಸಿದರು.ಮುಂದೆ ಈ ಊರು ಮಹಾಬೋಧಿ (ಬಿಹಾರದ ಬೋಧ್ ಗಯಾ) ಎಂಬ ಹೆಸರನ್ನು ಪಡೆಯಿತು.
ನಿರಂಜನ ನದಿ ಇಲ್ಲಿ ಫಲ್ಗೂಹೆಸರಲ್ಲಿ ಪ್ರಸಿದ್ಧಿಯಾಯಿತು. ಬುದ್ಧ ಜ್ಞಾನ ಪ್ರಾಪ್ತಿಯಾದ ಏಳು ವಾರಗಳ ಕಾಲ ಈ ಪರಿಸರದಲ್ಲಿ ಇದ್ದರು. ಮಹಾಬೋಧಿ ಮಂದಿರದಲ್ಲಿ ಒಳಗೆ ಸುತ್ತು ಬರಲು ಅವಕಾಶವಿಲ್ಲ. ಹೊರಗಡೆ ಸುತ್ತು ಬರಲು ಜಾಗ ಇದೆ. ಮಹಾ ಬೋಧಿ ಮಂದಿರದ ಬುದ್ದನ ಪ್ರತಿಮೆ ವೀಕ್ಷಿಸುವುದೇ ಧನ್ಯತಾ ಭಾವ. ಈ ಮಂದಿರದ ಹಿಂದುಗಡೆ ಬೋಧಿವೃಕ್ಷ ಇದೆ. ಈ ವೃಕ್ಷ ತನ್ನ 5ನೇ ಪೀಳಿಗೆಯದ್ದು. ಶ್ರೀಲಂಕಾದ ಅನುರಾಧಪುರದಿಂದ ವಾಪಸ್ ಬೋಧ್ ಗಯಾಕ್ಕೆ ತರಲಾಗಿದೆ. (ಇಲ್ಲಿನ ವೃಕ್ಷದ ಭಾಗವನ್ನೇ ಸಾಮ್ರಾಟ ಅಶೋಕನ ಮಕ್ಕಳು ಶ್ರೀಲಂಕಾಕ್ಕೆ ಒಯ್ದಿದ್ದರು.) ಮಹಾಬೋಧಿ ಕ್ಷೇತ್ರದಲ್ಲೂ ಹತ್ತಾರು ವಿದೇಶಿ ಬೌದ್ಧ ಮಂದಿರ, ವಿಹಾರಗಳು ಗಮನ ಸೆಳೆಯುತ್ತವೆ.
ಸಾರನಾಥ:ವಾರಾಣಸಿಯಲ್ಲಿರುವ ಸಾರನಾಥದಲ್ಲಿ ಮೊದಲ ಬಾರಿಗೆ ಬುದ್ಧ ತನ್ನ eನ ಪ್ರಾಪ್ತಿಯ ಉಪದೇಶವನ್ನು ಶಿಷ್ಯರಿಗೆಹಂಚಿದರು. ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಸಾಮ್ರಾಟ ಅಶೋಕನು ಸಾರನಾಥ ಪ್ರವಾಸಮಾಡಿ ಇಲ್ಲಿ ಸ್ತೂಪ ಮತ್ತು ಧರ್ಮಲಿಪಿ ಅಂಕಿತದ ಸುಂದರ ಸ್ತಂಭವನ್ನು ನಿರ್ಮಿಸಿದರು. ಇದೇ ಸ್ತಂಭದ ಸಿಂಹ ಮತ್ತು ಧರ್ಮಚಕ್ರ ಅಶೋಕಚಕ್ರಈಗ ನಮ್ಮ ರಾಷ್ಟ್ರೀಯ ಚಿಹ್ನೆಯಾಗಿ ಗುರುತಿಸಿದೆ.
ಕುಶೀನಗರ:ಈ ಸ್ಥಳವನ್ನು ಕುಶಾವಟೀ ಎಂದು ಕರೆಯುತ್ತಾರೆ. ಬುದ್ಧ ಇಲ್ಲಿನ ಹೀರಾನ್ಯಾವತಿ ನದಿಯಬಳಿ ಮಹಾ ಪರಿನಿರ್ವಾಣ ಹೊಂದಿದರು. ರಾಮಾಯಣದಲ್ಲಿ ಭಗವಾನ್ ರಾಮನ ಪುತ್ರ ಕುಶನ ಹೆಸರು ಇಲ್ಲಿ ಉಖವಿದೆ. ರಾಷ್ಟ್ರೀಯ ಹೆದ್ದಾರಿ28ರಲ್ಲಿ ಈ ಸ್ಥಳ ಸಿಗುವುದು. ಚೀನೀ ಯಾತ್ರಿಕ ಹೂಗ್ಯಾನ್ ತ್ಸಾಂಗ್ ಮತ್ತುಫಾಹಿಯಾನಕೂಡ ಇದರ ಉಲ್ಲೇಖ ಮಾಡಿದ್ದಾರೆ. ಕುಶೀನಗರದಲ್ಲಿ ಬುದ್ಧ ಅಂತಿಮ ಉಪದೇಶ ನೀಡಿ ಮಹಾಪರಿನಿರ್ವಾಣ ಪ್ರಾಪ್ತಿಯಾಗಿಸಿದ್ದರು.