ಸಮಾಧಿ ಮೇಲೆ ಮಮತಾಧಿಪತ್ಯ
ಅಭಿಮತ
ಡಾ.ಸುಧಾಕರ ಹೊಸಳ್ಳಿ
ಸಹಜವಾಗಿ ಮೇ ತಿಂಗಳು ಅನೇಕ ಕಾರಣಕ್ಕೆ ವಿಶೇಷವಾಗಿದೆ. ಆದರೆ ಬಹಳ ಮುಖ್ಯವಾಗಿ ಮೇ ಒಂದನೇ ತಾರೀಕನ್ನು ವಿಶ್ವ ಕಾರ್ಮಿಕರ ದಿನವಾಗಿ ಆಚರಣೆ ಮಾಡಲಾಗುತ್ತದೆ. ಈ ದಿವಸ ಶ್ರಮಿಕವರ್ಗದ ತ್ಯಾಗ ಮತ್ತು ಪರಿಶ್ರಮಕ್ಕೆ ಗೌರವಪೂರ್ವಕವಾಗಿ ಮೀಸಲಿರಿಸಲಾಗಿದೆ.
ಕಾರ್ಮಿಕರ ಹಕ್ಕಿಗಾಗಿ ಬಹುದೊಡ್ಡ ಹೋರಾಟ ಮಾಡಿದ, ಮೂಲಭೂತ ಹಕ್ಕುಗಳಲ್ಲಿ, ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಕಾರ್ಮಿಕರ ಹಕ್ಕುಗಳನ್ನು ಅಡಕ ಮಾಡಿದ ಅಂಬೇಡ್ಕರರನ್ನು, ಜತೆ ಜತೆಯಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಕಾಯ್ದೆಗಳು ರೂಪವಾಗುವಂತೆ ಪರಿಶ್ರಮಿಸಿದ ಬಾಬು ಜಗಜೀವನ್ ರಾಮ್‌ರವರನ್ನು ಸ್ಮರಿಸಲಾಗುತ್ತದೆ.
ಅದರಲ್ಲೂ ಕಾಂಗ್ರೆಸ್, ಈ ದಿವಸ ಕಾರ್ಮಿಕ ವರ್ಗಕ್ಕೆ ಎಷ್ಟು ಮುಖ್ಯವೋ, ನಮಗೂ ಅದೇ ಮಟ್ಟದ ಅಧಿಕಾರವಿದೆ ಅನ್ನುವಷ್ಟರ ಮಟ್ಟಿಗೆ ಘೋಷಣೆ ಮಾಡಿಕೊಂಡಿರುತ್ತಾರೆ. ಅಲ್ಲಲ್ಲಿ ಕಾರ್ಮಿಕರ ಪರವಾಗಿ ಭಾಷಣಗಳನ್ನು ಮಾಡುತ್ತಿರುತ್ತಾರೆ. ಬಂಡವಾಳಶಾಹಿಗಳ ವಿರುದ್ಧ ಘೋಷಣೆಗಳು ಘಟಿಸುತ್ತವೆ. ದಲಿತ, ಹಿಂದುಳಿದ ವರ್ಗಗಳ ಪರವಾಗಿ, ಬ್ರಾಹ್ಮಣರ ವಿರುದ್ಧ ಅಂತಿಮ ಘಟ್ಟದ ಉದ್ಗಾರ ಮತ್ತು ಈರ್ಷೆ ಎರಡನ್ನು ಹೊರಹಾಕಲಾಗುತ್ತದೆ.
ಪ್ರತಿ ಮೇ ತಿಂಗಳು ಇದಕ್ಕೆ ಸಾಕ್ಷಿಯಾಗುತ್ತದೆ. ಆದರೆ, 2021ರ ಮೇ21ನೇ ತಾರೀಕು ನಮ್ಮದೇ ನೆಲದ ಪಶ್ಚಿಮ ಬಂಗಾಳದಲ್ಲಿಕಾರ್ಮಿಕ ನಾಯಕನ ಸಾಂವಿಧಾನಿಕ ಹಕ್ಕುಗಳನ್ನು (ಅಂಬೇಡ್ಕರರು ಕೊಡಲ್ಪಟ್ಟ) ತಮ್ಮ ಅಧಿಪತ್ಯ ಮುಂದುವರಿಕೆಗಾಗಿ ವಾಮಮಾರ್ಗದಲ್ಲಿ ಬಲಿ ಕೊಡಲಾಗಿದೆ. ಬಲಿ ಕೊಟ್ಟದ್ದು ಬ್ರಾಹ್ಮಣ್ಯ ನಾಯಕಿ ಎಂಬುದು ವಿಶೇಷ. ಸೋಹನ್ ದೆಬ್ ಚಟೋ ಪಾಧ್ಯಾಯ ಬಲಿಯಾದ ಕಾರ್ಮಿಕ ನಾಯಕ.
 ಫೌಂಡರ್ ಪ್ರೆಸಿಡೆಂಟ್ ತೃಣಮೂಲ ಕಾಂಗ್ರೆಸ್‌ನ ಲೇಬರ್ ವಿಂಗ್‌ನ ಅಧ್ಯಕ್ಷರು.  ಟ್ರೇಡ್ ಯೂನಿಯನ್‌ನಅಧ್ಯಕ್ಷರು. ಕಲ್ಕೊತ್ತಾ ಆಟೊರಿಕ್ಷಾ ಆಪರೇಟರ್ ಸಂಘದ ಅಧ್ಯಕ್ಷರು. ಹೀಗೆ ತಮ್ಮ ಜೀವನವನ್ನು ಕಾರ್ಮಿಕ ನಾಯಕನೆಂದು ಗುರುತಿಸಿಕೊಂಡವರು, ವಿಜ್ಞಾನ ಮತ್ತು ಕಾನೂನು ಪದವಿ ಪಡೆದ ಸುಶಿಕ್ಷಿತರು ಹೌದು. ಟಿಎಂಸಿ ಮೊದಲ ಚುನಾಯಿತ ಎಂಎಲ್ಎ (1998) 1991ರಿಂದಲೂ ಎಂಎಲ್ಎ‌ ಆಗಿ ಆಯ್ಕೆಯಾಗುತ್ತಾ ಬಂದವರು.
ನಂದಿಗ್ರಾಮದಲ್ಲಿ ಸೋತ, ಪ್ರಜಾ ತಿರಸ್ಕೃತ ವ್ಯಕ್ತಿಯೊಬ್ಬರು, ಮುಖ್ಯಮಂತ್ರಿ ಗಾದಿಗೆ ಏರಲೇಬೇಕೆಂಬ ಹಕ್ಕೊತ್ತಾಯಕ್ಕೆ ಕಾಂಗ್ರೆಸ್ಸಿ ಗರು, ವಾಮಪಂಥೀಯರು ತಮ್ಮ ಪವರ್ ಆಫ್ ಅಟಾರ್ನಿಯನ್ನು ಒತ್ತಿದ್ದಾರೆ. ಸೋಲಿಗೆ ಅನೇಕ ಸಮಜಾಯಿಷಿ ಪೂರಕ ಕಾರಣ ಗಳನ್ನು ಹೆಣೆಯುತ್ತಾ, ಗದ್ದುಗೆಯೇರಿದ ನಡೆಯನ್ನು ಸಮರ್ಥಿಸುತ್ತ ಬಂದಿzರೆ. ಆದರೆ ಕಾರ್ಮಿಕ ನಾಯಕನ ಸಾಂವಿ ಧಾನಿಕ ಹಕ್ಕು ಮೊಟಕ ಗೊಂಡದ್ದರ ಬಗೆಗೆ ಚಕಾರವೆತ್ತುತ್ತಿಲ್ಲ? ಕಸಿದುಕೊಂಡ ಸಾಂವಿಧಾನಿಕ ಅಧಿಕಾರ ಅದು ಕಾರ್ಮಿಕ ನಾಯಕ ನದ್ದೇ? ಕಾಂಗ್ರೆಸ್ ಮತ್ತು ವಾಮಪಂಥೀಯರು ಕಾರ್ಮಿಕರ ಪರ ಧ್ವನಿಯೆತ್ತುವವರೇ? ಅದು ಹೌದು. ಆದಾಗಿಯೂ ಮೌನ! ಕಾರಣಗಳು ಬಿಡಿಸಲಾರದಷ್ಟು ಜಟಿಲ.
ಸಮಾಜವಾದಿಗಳಿಗೆ ಬೇಕಾಗಿರುವುದು ಎರಡು ಸಂಗತಿಗಳು, ಮೊದಲನೆಯದಾಗಿ ಅವರ ಕೈಗಳಿಗೆ ಅಧಿಕಾರ ಸಿಕ್ಕಿದಲ್ಲಿ ಯಾವುದೇ ಪ್ರತಿಫಲ ನೀಡದೆ ಖಾಸಗಿ ಆಸ್ತಿ ಸಂಪತ್ತಿನ ರಾಷ್ಟ್ರೀಕರಣಕ್ಕಾಗಿ ಸಂವಿಧಾನದ ಆಶ್ರಯದಲ್ಲಿ ಸ್ವಾತಂತ್ರ್ಯವಿರಬೇಕು ಎರಡನೆಯ ದಾಗಿ ಸಂವಿಧಾನದಲ್ಲಿ ಉಲ್ಲೇಖವಾಗಿರುವ ಮೂಲಭೂತ ಹಕ್ಕುಗಳು ನಿರಂಕುಶ ಮತ್ತು ಇತಿ ಮಿತಿ ಇಲ್ಲದಾಗಿರಬೇಕು ಅಂದರೆ ಅವರ ಪಕ್ಷ ಏನಾದರೂ ಆಡಳಿತಗಳಿಸದಿದ್ದರೆ ಆಗ ಅವರಿಗೆ ಟೀಕೆ ಮಾಡುವುದಷ್ಟೇ ಅಲ್ಲ ಆಡಳಿತವನ್ನು ಉರುಳಿಸಲು ಸಹ ಅನಿರ್ಬಂಧಿತ ಸ್ವಾತಂತ್ರ್ಯ ಸಿಗುತ್ತದೆ.
ಮಾತು ಮತ್ತು ಕೃತಿಯ ನಡುವೆ ಅಗಾದ ಅಂತರ. ದಲಿತೋದ್ಧಾರಕ್ಕಾಗಿ ಸದಾ ಬ್ರಾಹ್ಮಣರನ್ನು ನಿಂದಿಸುವವರು ಸೋಲುಂಡ ಬ್ರಾಹ್ಮಣ ಮುಖ್ಯಮಂತ್ರಿ ಪರ ನಿಲ್ಲುತ್ತಾರೆ. ಸದಾ ಕಾರ್ಮಿಕ ವರ್ಗದ ಪರ ಹೋರಾಟ ಮಾಡುತ್ತೇವೆ ಎಂದು ಸ್ವಘೋಷಣೆ ಮಾಡು ವವರು ಚಟ್ಟೋಪಾಧ್ಯಾಯರ ಬಲಿ ಪಡೆಯುವಿಕೆಯನ್ನು ಬಲಿದಾನ ವೆಂದು ಮೌನ ಬೆಂಬಲ ನೀಡುತ್ತಾರೆ. ಹಾಗಾದರೆ, ವಾಮ ಪಂಥೀಯರು, ಕಾಂಗ್ರೆಸ್ಸಿಗರು ಯಾರ ವಿರುದ್ಧ? ಯಾರ ಪರ? ಮೋದಿ ವಿರೋಧಿಸುವವರು ಬ್ರಾಹ್ಮಣರಾಗಿದ್ದರೂ, ಅವರೂ ಸಮರ್ಥನೆಗೆ ಅರ್ಹರು.
ಮೋದಿ ವಿರೋಧಿಸುವ ದೀದಿ ಅಧಿಕಾರ ಉಳಿವಿಗಾಗಿ, ಕಾರ್ಮಿಕ ನಾಯಕನ ಅಧಿಕಾರ ಕಸಿದುಕೊಳ್ಳಿವಿಕೆಯು ಸಮರ್ಥನೀಯವೆ. ಮೋದಿ ವಿಷಯ ಬಂದಾಗ ಜಾತಿ, ವರ್ಗ, ಭೇದ ಮಾಡುವಂತಿಲ್ಲ ಮೋದಿ ಸೋಲಿಗಾಗಿ ಬ್ರಾಹ್ಮಣ್ಯ ಗೆಲ್ಲಲೂಬಹುದು. ಇಂದು ವೈರುಧ್ಯದ ನಡುವೆ ಸಮೀಕರಿಸಬಹುದಾದ ಅಂಶವೆಂದರೆ, ರಾಷ್ಟ್ರ ಪ್ರೀತಿಸುವ, ರಾಷ್ಟ್ರ ಮೊದಲ ಎನ್ನುವವರು ಮೋದಿಮುಖ್ಯವೆಂದರೆ, ಪ್ರಭುತ್ವದ ವಿರುದ್ಧ ಇರುವವರು ಕೂಡ ನಮ್ಮ ಗುರಿ ಮೋದಿಯೇ ಎನ್ನುತ್ತಿರುವುದು.
ಬಂಗಾಳದ ಒಟ್ಟು 294 ಕ್ಷೇತ್ರಗಳಲ್ಲಿ ,ಆರು ಕ್ಷೇತ್ರಗಳು ಖಾಲಿ ಇವೆ. ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮೃತಪಟ್ಟಿದ್ದಾರೆ. ಬಿಜೆಪಿಯ ಇಬ್ಬರು ಎಂಎಲ್‌ಎ ಗಳು ರಾಜೀನಾಮೆ ನೀಡಿದ್ದಾರೆ. ಮತ್ತೊಂದು ಕ್ಷೇತ್ರಕ್ಕೆ ಚುನಾವಣೆ ಆಗಿಲ್ಲ. ಇಷ್ಟೆಲ್ಲ ಅವಕಾಶ ವಿದ್ದರೂ, ಕಾರ್ಮಿಕ ನಾಯಕನ ಬಲಿ ಪಡೆಯುವಿಕೆ ಏಕೆ? ಸ್ವೀಕೃತ ಎಂಬುದು ಆಳ ವಿಮರ್ಶೆ, ನಿರೀಕ್ಷಾ ಹೊರಮೂಡುವಿಕೆ. ಅದು, ಚಟ್ಟೋಪಾಧ್ಯಾಯ ಹಿರಿಯ, ವಿದ್ಯಾವಂತ ಹಾಗೂ ಕಾರ್ಮಿಕ ನಾಯಕ. ತನಗೆ ಆಲ್ಟರ್‌ನೇಟಿವ್ ಆಗಬಲ್ಲ, ಟಿಎಂಸಿ ಬಹುಪಾಲು ಸದಸ್ಯರು ಒಪ್ಪಬಲ್ಲ ವ್ಯಕ್ತಿ. ಅಂಕಿ-ಸಂಖ್ಯೆಗಳು ದೃಡಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಬ್ಯಾನರ್ಜಿ ದುರ-ದೃಷ್ಟಿ ಕಾರ್ಮಿಕ ನಾಯಕನ ಮೇಲೆ ಬಿದ್ದಿರುವುದು ಸಾರ್ವತ್ರಿಕ ಸತ್ಯ.