ಫುಡ್ ಡೆಲಿವರಿ ಹುಡುಗರ ಬವಣೆ ಕೇಳುವವರು ಯಾರು ?
ಅಭಿವ್ಯಕ್ತಿ
ರಮಾನಂದ ಶರ್ಮಾ
ಬೆಂಗಳೂರಿನ ಸಿಲ್ಕ್ ಬೋರ್ಡ್‌ನಲ್ಲಿ ಕಾರಿನಲ್ಲಿ ಕುಳಿತು ಸಿಗ್ನಲ್‌ಗಾಗಿ ಕಾಯುತ್ತಿರುವಾಗ ಸಮವಸ್ತ್ರ ಧರಿಸಿ ಬೈಕ್‌ನ ಕ್ಯಾರೇಜ್‌ನಲ್ಲಿಮತ್ತು ಬೆನ್ನಿನ ಮೇಲೆ ಭಾರವಾದ ಫುಡ್ ಪ್ಯಾಕೆಟ್ ಇಟ್ಟುಕೊಂಡು ರೈಡ್ ಮಾಡುತಿದ್ದ ಫುಡ್ ಡೆಲಿವರಿ ಹುಡುಗನೊಬ್ಬ ಗಡಿಬಿಡಿಯಲ್ಲಿ ಬೈಕ್‌ನನ್ನು ನುಗ್ಗಿಸಿ ಸೈಡ್ ಮಾಡಿಕೊಂಡು ಶರವೇಗ ದಲ್ಲಿ ರೇಸ್ ಕುದುರೆಗಳು ಮತ್ತು ರಾಜಧಾನಿ ಎಕ್ಸ್ ಪ್ರೆಸ್ ಟ್ರೈನ್ ಕೂಡಾ ನಾಚುವಂತೆ ಮುಂದೆ ಸಾಗುತ್ತಾನೆ.
ಸಮಯುಕ್ಕೆ ಸರಿಯಾಗಿ ಫುಡ್ ಡೆಲಿವರಿ ಮಾಡದಿದ್ದರೆ ಅವರಿಗೆ ರೇಟಿಂಗ್ ಕಡಿಮೆಯಾಗುತ್ತದೆ ಮತ್ತು ಸಂಬಳವೂ ಕಡಿಮೆ ಯಾಗುವ ಸಾಧ್ಯತೆ ಇರುತ್ತಿದ್ದು, ಅಂತೆಯೇ ಅವರು ಬುಲೆಟ್ ಟ್ರೈನ್ ವೇಗದಲ್ಲಿ ಇರುತ್ತಾರೆ ಎಂದು ನನ್ನ ಪಕ್ಕದಲ್ಲಿ ನನ್ನಂತೆ ಸಿಗ್ನಲ್ ಕಾಯತ್ತಿರುವವರು ಮಾತನಾಡಿಕೊಳ್ಳುವುದನ್ನು ಕೇಳುತ್ತೇನೆ.
ಇಂಥ ದೃಶ್ಯಾವಳಿ ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿರದೇ ಫುಡ್ ಡೆಲಿವರಿ ವ್ಯವಸ್ಥೆ ಜಾರಿಯಲ್ಲಿರುವ ಬಹುತೇಕ ಎಲ್ಲಾ ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ನಿತ್ಯ ಕಾಣುವ ಸತ್ಯ. ಈ ವ್ಯವಸ್ಥೆಗಾಗಿಯೇ ಇರುವ ಹೋಟೆಲ್ಲುಗಳು ಗ್ರಾಹಕರಿಂದ ಅರ್ಡರ್ ಪಡೆದು, ಗ್ರಾಹಕರಿಗೆ ಒಂದು ನಿರ್ದಿಷ್ಟ ಸಮಯ ಪರಿಮಿತಿಯಲ್ಲಿ ಡೆಲಿವರಿ ಮಾಡುತ್ತವೆ. ಗ್ರಾಹಕರಿಗೆ ಅವರು ಕ್ವಾಲಿಟಿ ಫುಡ್ ನ್ನು ನೀಟಾಗಿ ಪ್ಯಾಕೆಟ್ ಮಾಡಿ ಡೆಲಿವರಿ ಹುಡುಗರ ಮೂಲಕ ಗ್ರಾಹಕರಿಗೆ ಪೂರೈಸುತ್ತವೆ.
ಫುಡ್ ಕ್ವಾಲಿಟಿಯ ಬಗೆಗೂ ಹೆಚ್ಚಾಗಿ ಮೆಚ್ಚುಗೆಯ ಮಾತು ಕೇಳಿ ಬರುತ್ತದೆ. ಈ -ಡ್‌ಗಳಿಗೆ ಬಿಲ್ ಮುಂಗಡವಾಗಿ ಡಿಜಿಟಲ್ಮೋಡ್‌ನಲ್ಲಿ ಪೇಮೆಂಟ್ ಅಗುತ್ತದೆ ಅಥವಾ ಡೆಲಿವರಿ ಪಾಯಿಂಟ್‌ನಲ್ಲಿ ಡಿಜಿಟಲ್ ಮೋಡ್‌ನಲ್ಲಿ ಅಥವಾ ನಗದು ಮೂಲಕ ಸಂದಾಯವಾಗುತ್ತದೆ. ಫುಡ್ ಡೆಲಿವರಿ ಮಾಡುವವರು ಸಾಮಾನ್ಯವಾಗಿ ಹುಡುಗರು ಅಥವಾ ಯುವಕರು ಇರುತ್ತಾರೆ. ಇವರಿಗೆ ಸಮವಸ್ತ್ರ ನೀಡಲಾಗುತ್ತಿದ್ದು, ಅವರ ಬಳಿ ಬೈಕ್ ಇರಬೇಕು.
ಇವರ ಕೆಲಸದ ಅವಧಿ ಸುಮಾರು ಎಂಟು ತಾಸು ಇರುತ್ತದೆ. ಹೋಟೆಲ್ ತೆರೆದಿರುವವರೆಗೆ ಇವರ ಡ್ಯೂಟಿ ಇರುತ್ತದೆ. ಪಾಳಿಯ ಮೇಲೆ ಹುಡುಗರು ಕೆಲಸಮಾಡುತ್ತಾರೆ. ಮುಂಜಾನೆ ಆರರಿಂದ ರಾತ್ರಿ ಒಂದರಿಂದ ಎರಡು ಘಂಟೆವರೆಗೂ ಅವರು ಫುಡ್ಡೆಲಿವರಿಗಾಗಿ ನಗರಾದ್ಯಂತ ಬೈಕ್‌ನಲ್ಲಿ ತಿರುಗಾಡುವುದನ್ನು ನೋಡಬಹುದು. ಮಳೆ ಇರಲಿ, ಚಳಿ ಇರಲಿ, ಬಿಸಿಲಿರಲಿ ಅವರು ಹಸಿದವರ ಹೊಟ್ಟೆಯನ್ನು ತಣ್ಣಗಾಗಿರಿಸಲು ಒಡಾಡುತ್ತಲೇ ಸಾಮಾನ್ಯವಾಗಿ ಮೌ ಸಮಯಕ್ಕೆ ಕೆಲಸಮಾಡುವ ಟೆಕ್ಕಿಗಳೇ ಇವರ ಮುಖ್ಯ ಗ್ರಾಹಕರೆನ್ನುವ ಭಾವನೆ ಇದ್ದರೂ ಬ್ಯಾಚಲರ್ಸ್, ಶಿಫ್ಟ್ ಡ್ಯೂಟಿ ಇದ್ದು ಮನೆಯಲ್ಲಿ ಅಡುಗೆ ಮಾಡಲಾಗದವರು, ರಾತ್ರಿ ತಡವಾಗಿ ಡ್ಯೂಟಿ ಮುಗಿಸಿ ಮನೆಗೆ ಬರುವವರು, ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದು ಅಡುಗೆ ಮಾಡಲಾಗದಅನಿವಾರ್ಯತೆ ಯಲ್ಲಿರುವವರು, ಧುತ್ತೆಂದು ಮನೆಗೆ ಅತಿಥಿಗಳು ಬಂದಾಗ, ಮನೆ ಊಟ ಬೋರ್ ಆದಾಗ ಬದಲಾವಣೆ ಬಯಸುವವರು, ಹೀಗೆ ಇವರೆ ಇವರ ಚಂದಾದಾರರು. ಈ ಪಟ್ಟಿ ಇನ್ನೂ ಉದ್ದವಿದೆ.
ಯಾವುದಾದರೂ ಕಾರಣಕ್ಕಾಗಿ ಹೋಟೆಲ್ಲುಗಳಲ್ಲಿ ಟೇಬಲ್ ಸೇವೆ ಬಂದಾದಾಗ, ಇವರಿಗೆ ಕೆಲಸ ಇನ್ನೂ ಹೆಚ್ಚು. ಕೊರೋನಾ – ಕೋವಿಡ್ ಸಮಯದಲ್ಲಿ ,  ಟ್ಟಣ – ನಗರಗಳು ಲಾಕ್ ಡೌನ್ ಅದಾಗ ಇವರಿಗೆ ಓವರ್ ಟೈಮ್ ಎನ್ನ ಬಹುದು. ಇವರ ಸಂಬಳ – ಸೌಲಭ್ಯ ಮತ್ತು ಸೌಕರ್ಯಗಳ ಬಗೆಗೆ ವಿಶೇಷವಾಗಿ ತಿಳಿದು ಬರುತ್ತಿಲ್ಲ.
ಇದು ಹೈಪೇಡ್ ಉದ್ಯೋಗವಂತೂ ಅಲ್ಲ. ಇವರ ಸಂಬಳ ಗರಿಷ್ಠ ೨೫೦೦೦ ಇರಬಹುದು. ದಿನವಿಡಿ ಕಾಲಿಗೆ ಚಕ್ರ   ಟ್ಟಿಕೊಂಡು ಮಳೆ, ಚಳಿ, ಬಿಸಿಲು, ಹಗಲು-ರಾತ್ರಿ , ಮುಖ್ಯ ರಸ್ತೆ, ಒಳ ರಸ್ತೆ, ಗಲ್ಲಿ ಗಲ್ಲಿ , ಪಾಳ್ಯ, ಬಡಾವಣೆ ಕೊರಕಲು ಬಿದ್ದಿರುವ ಹೊಂಡ ದಿಂದ ತುಂಬಿರುವ ಸ್ತೆಯಲ್ಲಿ ತಿರುಗಾಡುವ ಈ ಕೆಲಸಕ್ಕೆ ಯಾರೂ ಇಷ್ಟಪಟ್ಟು ಬರುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತದೆ.
ಕೆಲಸದ ಅನಿವಾರ್ಯತೆಗಾಗಿ ಯುವಕರು ಇಲ್ಲಿ ಕಾಣುತ್ತಿದ್ದು, ದೊರಕಿದ ಮೊದಲ ಅವಕಾಶದಲ್ಲಿ ಕಳಚಿಕೊಳ್ಳುತ್ತಾರೆ ಎಂದು ಕೆಲವು ಪ್ಲೇಸ್‌ಮೆಂಟ್ ಏಜೆನ್ಸಿಗಳು ಹೇಳುತ್ತಾರೆ. ಅಂತೆಯೇ ಈ ಉದ್ಯಮದಲ್ಲಿ ಅಟ್ರಿಷನ್ ರೇಟ್ ಕೂಡಾ ತುಸು ಹೆಚ್ಚು.ಎನ್ನುತ್ತಾರೆ ಕಳೆದ ಮಾರ್ಚ್ ತಿಂಗಳನಲ್ಲಿ ಫುಡ್ ಡೆಲಿವೆರಿ ವಿಳಂಬವಾದದ್ದಕ್ಕೆ ಮಹಿಳಾ ಗ್ರಾಹಕರೊಬ್ಬರು ಡೆಲಿವರಿ ಹುಡುಗನ ಮೇಲೆ ಹ ಮಾಡಿದ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿ ಯಾಗಿತ್ತು. ವರದಿಗಳ ಪ್ರಕಾರ ಕೆಟ್ಟ ರಸ್ತೆ ಮತ್ತು ಸುತ್ತುಬಳಸಿದರಸ್ತೆಯಿಂದಾಗಿ ಫುಎಡ್ ಡೆಲಿವರಿ ಮಾಡಲು ೧೫ ನಿಮಿಷ ತಡವಾಗಿತ್ತು. ಈ ವಿಳಂಬವನ್ನು ಸಹಿಸದ ಗ್ರಾಹಕಿ ಕಂಪನಿಯ ಹಿರಿಯ ಅಽಕಾರಿಗಳಿಗೆ ದೂರು ನೀಡಿದ್ದಲ್ಲದೇ, ಡೆಲಿವರಿ ಹುಡುಗನಿಗೆ ಪೇಮೆಂ  ಮಾಡಲು ನಿರಾಕರಿಸಿದ್ದಾರೆ.
ಅವನ ಮೇಲೆ ಹಲ್ಲೆ ಕೂಡಾ ಮಾಡಿದ್ದರಂತೆ. ಇಬ್ಬರೂ ಪರಸ್ಪರರ ವಿರುದ್ಧ ಹಲ್ಲೆ ಮಾಡಿದ ಬಗೆಗೆ ಪೊಲೀಸ್ ಕಂಪ್ಲೇಂಟ್ ನೀಡಿದ್ದು ಸದ್ಯ ವಿಚಾರಣೆಯ ಹಂತದಲ್ಲಿದೆ. ಇಂಥ ವಿಚಾರಗಳಲ್ಲಿ ಕಂಪನಿಗಳು ಭವಿಷ್ಯದ ಬಿಜಿನೆಸ್ ಹೆಸರಿನಲ್ಲಿ ಗ್ರಾಹಕರ ಪರ ಇರುತ್ತಿವೆ. ತಮ್ಮ ಸಿಬ್ಬಂದಿ ಮೇಲೇಯೇ ಕ್ರಮ ತೆಗೆದುಕೊಳ್ಳುತ್ತಾರೆ. ಅಂತೆಯೇ ಆ ಹುಡುಗನನ್ನು ವಿಚಾರಣೆ ಮುಗಿದು ಸತ್ಯ ಹೊರಗೆ ಬರುವವರೆಗೆ ಕೆಲಸದಿಂದ ಅಮಾನತ್ತು ಮಾಡಲಾಯಿತು. ಈ ಘಟನೆ ನಂತರದ ಎರಡು ದಿನ ಸಾಮಾಜಿಕ ಜಾಲತಾಣವು ಮಹಿಳಾ ಗ್ರಾಹಕಿಯ ಪರ ವಾದಿಸಿತು.
ಕ್ರಮೇಣ ಸತ್ಯವು ಒಂದೊಂದಾಗಿ ಹೊರಬರಲು ಸಾಮಾಜಿಕ ಜಾಲತಾಣವು ತನ್ನ ರಾಗವನ್ನು ಬದಲಿಸಿ ಡೆಲಿವರಿ ಹುಡುಗನನ್ನುಸಬೆಂಬಲಿಸತೊಡಗಿತು. ಕೆಲವು ಕನ್ನಡಪರ ಸಂಘಟನೆಗಳು ಕೂಡಾ ಈ ಹುಡುಗನನ್ನು ಬೆಂಬಲಿಸಿದ್ದು ಘಟನೆ ಕೆಲವು ದಿನ ವೈರಲ್ ಆಗಿತ್ತು. ಸದ್ಯ ಆ ಹುಡುಗ ಜಾಮಿನಿನ ಮೇಲೆ ಹೊರ ಬಂದಿದ್ದು ವಿಚಾರಣೆಯ ನಂತರ ಸತ್ಯ ಹೊರಬರಲಿದೆ. ಈ ಘಟನೆ ಡೆಲಿವರಿ ಹುಡುಗರ ಬದುಕಿನ ಬವಣೆಯನ್ನು ಜಗತ್ತಿಗೆ ತೋರಿಸಿದೆ. ಅವರು ಡೆಲಿವರಿಯಲ್ಲಿ ಸಮಯ ಪರಿಮಿತಿ ಯನ್ನು ಕಾಯ್ದುಕೊಳ್ಳಬೇಕು ಮತ್ತು ಸಮಯ ಪರಿಪಾಲನೆ ಮಾಡಬೇಕು ಎಂದು ನಿರ್ದೇಶಿಸುವವರಿಗೆ ವಾಸ್ತವದ ಪರಿಜ್ಞಾನ ಇಲ್ಲವೆನ್ನುವುದನ್ನು ಎತ್ತಿ ತೋರಿಸುತ್ತದೆ.
ವೇಗವಾಗಿ ಚಲಿಸುವ ಬದುಕಿನಲ್ಲಿ ಸಮಯವೇ ಹಣ ಮತ್ತು ಬಿಜಿನೆಸ್ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. ಸಮಯದ ಮಹತ್ವ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಸದಾ ಏರುತ್ತಿರುವ ಜನರ ಮತ್ತು ವಾಹನಗಳ ದಟ್ಟನೆಯ ವ್ಯೂಹವನ್ನು ಭೇದಿಸಿ ಹೊಂಡಮಯವಾಗಿರುವ ಮತ್ತು ಕೊರಕಲು ತುಂಬಿರುವ ರಸ್ತೆಗಳಲ್ಲಿ ಪಾದಚಾರಿಗಳನ್ನು ರಕ್ಷಿಸಿಕೊಂಡು ಮತ್ತು ತಮ್ಮಜೀವವನ್ನೂ ಉಳಿಸಿಕೊಂಡು ನಿಗದಿತ ಸಮಯದಲ್ಲಿ ಡೆಲಿವರಿ ಸ್ಥಳವನ್ನು ಬೈಕ್‌ನಲ್ಲಿ ತಲುಪಲಾದೀತೇ ಎನ್ನುವುದು ಮುಖ್ಯ ಪ್ರಶ್ನೆ. ಸಿಲ್ಕ್ ಬೋರ್ಡ್‌ನಿಂದ ಕ್ಯಾಬ್‌ನಲ್ಲಿ ಜೆಪಿ ನಗರ ತಲುಪವ ಹೊತ್ತಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟುವಿಮಾನದಲ್ಲಿ ಮುಂಬೈಯನ್ನು ತಲುಪಬಹುದು ಎನ್ನುವುದು ತಮಾಷೆಯಾಗಿರದೇ ಬೆಂಗಳೂರಿನ ಸಂಚಾರ ದಟ್ಟನೆಯ ವಾಸ್ತವಕ್ಕೆ ಹಿಡಿದ ಕನ್ನಡಿ ಎನ್ನಬಹುದು.
ಎಷ್ಟೋ ಟೆಕ್ಕಿಗಳು ಕ್ಯಾಬ್‌ನಲ್ಲಿಯೇ ತಮ್ಮ ವರ್ಕ್ ಫ್ರಮ್ ಹೋಮ್‌ನ್ನು ಪೂರೈಸುತ್ತಾರಂತೆ. ಕೆಲವು ಮಹಿಳೆಯರು ಸಂಜೆಊಟದ ತರಕಾರಿಯನ್ನು ಕ್ಯಾಬ್‌ನಲ್ಲಿ ಇರುವಾಗಲೇ ಹೆಚ್ಚಿಕೊಳ್ಳುತ್ತಾರಂತೆ. ಬರೆಯುವ ಹವ್ಯಾಸ ಉಳ್ಳವರು ತಮ್ಮ ಲ್ಯಾಪ್ ಟ್ಯಾಪ್‌ನಲ್ಲಿ ಈ ಕೆಲಸವನ್ನು ಮುಗಿಸಿ ಮನೆಗೆ ಹೋದ ಮೇಲೆ ಫೈನಲ್ ಟಚ್ ನೀಡುತ್ತಾರಂತೆ. ಈ ಲೇಖಕರೂ ಕೆಲವು ಬಾರಿ ತಮ್ಮಲೇಖನಗಳ ಕಚ್ಚಾಪ್ರತಿಯನ್ನು ಸಿದ್ದಪಡಿಸಿದ್ದು ಇಂಥ ಟ್ರಾಫಿಕ್ ಜಾಮ್‌ಗಳಲ್ಲಿ ಸಮಯಕ್ಕೆ ಸರಿಯಾಗಿ ವಿತರಣೆ ಮಾಡಿ ಎನ್ನುವುದು ಮತ್ತು ಡೆಲಿವರಿಯನ್ನು ಬಯಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಚಿಂತನ ಮಂಥನಕ್ಕೆ ಒಳಪಡಬೇಕು. ಒಂದು ಐಡಿಯಲ್ ಕಂಡಿಷನ್‌ನಲ್ಲಿ ಇಂಥ ಸ್ಪೆಸಿಫಿಕೇಷನ್‌ಗಳಿಗೆ ಅರ್ಥ ಇರುತ್ತದೆ.
ವಾಹನಗಳ ಮೈಲೇಜ್ ಪರೀಕ್ಷಿಸುವಾಗ ಉತ್ಪಾದಕರು     ಎನ್ನುವ ಟ್ಯಾಗ್ ಹಾಕುತ್ತಾರೆ. ಯಾವುದೋ ರಸ್ತೆಯಲ್ಲಿ ಅಥವಾ ಜನನಿಬಿಡ ರಸ್ತೆಲ್ಲಿಯ ಡ್ರೈವ್ ಮಾಡಿ ಮೈಲೇಜ್ ಬರುತ್ತಿಲ್ಲ ಎಂದು ತಗಾದೆ ಮಾಡುವಂತಿಲ್ಲ. ಈ ಹುಡುಗ ರಿಗೆ ನಿಗದಿತ ವೇಳೆಗೆ ಸ್ವಲ್ಪ ಕಮಿಷನ್ ನೀಡಬೇಕು. ಸಾಮಾನ್ಯವಾಗಿ ಅವರೆಂದೂ ವಿಳಂಬಮಾಡುವುದಿಲ್ಲ. ಅವರ ಬಳಿ ಒಂದೇ ಫುಡ್ ಪ್ಯಾಕೆಟ್ ಇದ್ದರೆ ಆ ಮಾತು ಬೇರೆ. ಅವರ ಬಳಿ ಕನಿಷ್ಠ ಐದಾರು ಪ್ಯಾಕೆಟ್ ಇದ್ದು, ಅವುಗಳನ್ನೆಲ್ಲ ಡೆಲಿವರಿ ಮಾಡ ಬೇಕಾಗಿದ್ದು ಅವರು ಎಲ್ಲಿಯೂ ಟೈಮ್ ವೇಸ್ಟ್ ಮಾಡುವಂತಿಲ್ಲ. ಟ್ರಾಫಿಕ್ ನಲ್ಲಿ ಟೈಮ್ ವೇಸ್ಟ್ ಆಗುವಂತೆಯೇ ಫುಡ್ ಪ್ಯಾಕೆಟ್ ಡೆಲಿವರಿ ಸಮಯದಲ್ಲೂ ಸಾಕಷ್ಟು ಟೈಮ್ ವೇಸ್ಟ್ ಆಗುತ್ತದೆ. ವಿಳಾಸ ಹುಡುಕುವಾಗ ಹುಡುಗರು ಸುಸ್ತಾಗಿರುತ್ತಾರೆ.
ಅಪಾರ್ಟ್ ಮೆಂಟ್ ಬಿಲ್ಡಿಂಗ್ ಆದರೆ ಎಷ್ಟೋ ಕಡೆ ಈ ಹುಡುಗರನ್ನು ಒಳಗೆ ಬಿಡುವುದಿಲ್ಲ. ವಿಳಾಸದಾರರೇ ಸೆಕ್ಯುರಿಟಿ ಹತ್ತಿರ ಬರಬೇಕು. ಅವರು ಬರುವವರೆಗೆ ಇವರು ಕಾಯಬೇಕು. ಕೆಲವರು ಪ್ಯಾಕೆಟ್ ಚೆಕ್ ಮಾಡಬೇಕು ಎಂದು ತಗಾದೆ ತೆಗೆಯುತ್ತಾರೆ. ಕೆಲವು ಬಾರಿ ಆರ್ಡರ್ ಮಾಡಿದ ಫುಡ್ ಬದಲಿಗೆ ಬೇರೆ ಕಳಿಸಿದ್ದಾರೆ ಎನ್ನುವ ದೂರು ಬೇರೆ.
ಕೆಲವರ       ಎನ್ನುವ ಧಿಮಾಕು. ಡೆಲಿವೆರಿ ವಿಳಂಬವಾಯಿತು ಎಂದು ಪೇಮೆಂಟ್‌ಗೆ ತಗಾದೆ. ಕೆಲವರ ಬಳಿ ನಗದು ಇರುವುದಿಲ್ಲ. ಅವರು ಡಿಜಿಟಲ್ ಪೇಮೆಂಟ್ ಎನ್ನುತ್ತಾರೆ. ಕೆಲವು ಬಾರಿ ಕಾರ್ಡ್ ವರ್ಕ್ ಆಗುವು ದಿಲ್ಲ. ಗೂಗಲ್ ಪೇ ಅಥವಾ ಫೋನ್ ಪೇ ಹಲವು ಬಾರಿ ಕೈ ಕೊಡುತ್ತದೆ. ಕೆಲವರು ಕಾಲಿಂಗ್ ಬೆಲ್‌ಗೆ ಸ್ಪಂದಿಸಲು ಸಮಯ ತೆಗೆದು ಕೊಳ್ಳುತ್ತಾರೆ, ಕೆಲವರು ಫುಡ್ ಆರ್ಡರ್ ಮಾಡಿ ಮಲಗಿರುತ್ತಾರೆ.
ಅವರನ್ನು ಎಬ್ಬಿಸ ಬೇಕಾಗುತ್ತದೆ. ಕೆಲವರ ಮನೆಗೆ ಕಾಲಿಂಗ್ ಬೆಲ್ ಗೇಟ್‌ಗೆ ಇರದೇ, ಬಾಗಿಲಿಗೆ ಇರುತ್ತಿದ್ದು, ಈ ಹುಡುಗರು ಪೋನಾಯಿಸಿ ಮನೆಯವರನ್ನು ಎಬ್ಬಿಸಬೇಕಾಗುತ್ತದೆ. ಒಂದು ಕಡೆ ವಿಳಂಬವಾದರೆ ಅದು ಚೇನ್ ರಿಯಾಕ್ಷನ್‌ನಂತೆ ಮುಂದು ವರಿಯುತ್ತಾ ಹೋಗುತ್ತಿದ್ದು ಈ ಹುಡುಗರು ಎಲ್ಲರಿಂದಲೂ ಅನಿಸಿಕೊಳ್ಳಬೇಕಾಗುತ್ತದೆ ಮತ್ತು ವಿಳಂಬ ಡೆಲಿವರಿಗಾಗಿ ಅವರ  ರೇಟಿಂಗ್ ಖೊತಾ ಅಗುತ್ತದೆ. ಅವರ ಈ ಬವಣೆ ಬಹುಷಃ ಯಾರ ಗಮನಕ್ಕೂ ಬರುವುದಿಲ್ಲ. ಅವರು ವಿಳಂಬವಾಗಿ ಫುಡ್ ಪ್ಯಾಕೆಟ್ ಡೆಲಿವರಿ ಮಾಡಿದರು ಎನ್ನುವದಷ್ಟೇ ಮೇಲ್ಮೆ ಗೆ ಬಂದು ವೈರಲ್ ಆಗುತ್ತದೆ.
ಬದುಕಿನ ಬಂಡಿ ಓಡಿಸಲು ಕಷ್ಟ ಪಟ್ಟು ದುಡಿಯುವ ತಮ್ಮನ್ನು ಗ್ರಾಹಕರು ನೋಡುವ ದೃಷ್ಟಿಯೇ ಬೇರೆ ಎಂದು ಈ ಹುಡುಗರು ಅಲವತ್ತು ಕೊಳ್ಳುತ್ತಾರೆ. ಇದರಲ್ಲಿ ಅರ್ಥವಿಲ್ಲದಿಲ್ಲ. ಇವರ ಸೇವೆಯನ್ನು ಅನ್ನದಾತರು ಎಂದು ಮೆಚ್ಚುಗೆಯಿಂದ ಶ್ಲಾಘಿಸು ವವರು ಸಾಕಷ್ಟು ಜನರು ಇದ್ದರೂ, ಕೆಲವರು ತಮ್ಮನ್ನು ನಡೆಸಿಕೊಳ್ಳುವ ರೀತಿಗೆ ವ್ಯಾಕುಲದಿಂದ ಪ್ರತಿಕ್ರಿಯಿಸುತ್ತಾರೆ. ಈ ಉದ್ಯೋಗದ ವಿಶಿಷ್ಟತೆ ಏನೆಂದರೆ ಇದು ಬಿಳಿ ಕಾಲರ್ ಜಾಬ್ ಅಲ್ಲ, ಹಾಗೆಯೇ ನೀಲಿ ಕಾಲರ್ ಜಾಬ್ ಎಂದೂ ಪರಿಗಣಿಸು ವಂತಿಲ್ಲ. ಅಂತೆಯೇ ಈ ಇಲ್ಲ ಗಳ ನಡುವೆ ಸಂಘಟನೆ ಇಲ್ಲದಿರುವುದರಿಂದ ಇವರ ಬವಣೆಯನ್ನು ಕೇಳುವವರು ಯಾರೂ ಇಲ್ಲ. ಸಂಘಟಿತರ ಕೂಗೇ ಕೇಳದಿರುವ ಈ ಕಾಲದಲ್ಲಿ ಒಂದೆರಡು ಒಂಟಿ ಕೂಗುಗಳು ಕೇಳಬೇಕಾದವರ ಕಿವಿಯ ಮೇಲೆ ಬೀಳಬಹುದೇ?