ರಾಜ್ಯಗಳಿಗೆ ಸ್ವಲ್ಪವಾದರೂ ಜವಾಬ್ದಾರಿ ಇದೆಯಾ…?
ಪ್ರಚಲಿತ
ಸೂರ್ಯ ಪ್ರಕಾಶ್, ಮಾಜಿ ಅಧ್ಯಕ್ಷರು, ಪ್ರಸಾರ ಭಾರತಿ
ಕರೋನಾ 2ನೇ ಅಲೆಯ ಬಿರುಗಾಳಿಗೆ ಇಡೀ ದೇಶವೇ ತತ್ತರಿಸುತ್ತಿದೆ. ಸೋಂಕಿತರಿಗೆ ಇನ್ನೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಹಲವಾರು ಸೋಂಕಿತರು ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಒದ್ದಾಡಿ ಕಣ್ಣೆದುರಲ್ಲೇ ಅಲ್ಲಲ್ಲೇ ಪ್ರಾಣ ಬಿಡುತ್ತಿದ್ದಾರೆ. ಒಂದು ಕಡೆ ಯಮಯಾತನೆಯ ಪರಿಸ್ಥಿತಿ. ಇನ್ನೊಂದು ಕಡೆ ಸಾವು, ಹೆಣದ ರಾಶಿ. ಅಂತ್ಯ ಸಂಸ್ಕಾರಕ್ಕೂ ಸಿಗದ ಜಾಗ. ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿವಿಧ ರಾಜ್ಯ ಸರಕಾರಗಳು ಅಸಹಾಯಕವಾಗಿ ಕೈಚೆಲ್ಲಿ ಕುಳಿತಿವೆ… ಪರಿಸ್ಥಿತಿಯನ್ನ ನಿಭಾಯಿಸಲಾಗದೆ ಇಂತಹಪರಿಸ್ಥಿತಿಯನ್ನು ಖ್ಯಾತ ಪತ್ರಕರ್ತ ಎ.ಸೂರ್ಯ ಪ್ರಕಾಶ್ ಖಡಕ್ ಲೇಖನದ ಮೂಲಕ ಟೀಕಿಸಿದ್ದಾರೆ. ಈ ಲೇಖನದ ಪೂರ್ಣ ಸಾರಾಂಶ ಇಲ್ಲಿದೆ ಓದಿ…
ಕರೋನಾ ಸೋಂಕಿತರ ಪರಿಸ್ಥಿತಿಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಅದಕ್ಕೂ ನಿಲುಕದ ನೋವಿನ ನರಕ ಯಾತನೆಯ ಲೋಕವೊಂದು ಈಗ ನಮ್ಮ ಕಣ್ಣೆದುರೇ ಸೃಷ್ಟಿಯಾಗಿದೆ. ಕರೋನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆಯಿಲ್ಲ. ಜತೆಗೆ ಸಾಕಷ್ಟು ಔಷಧಿಗಳ ಕೊರತೆಯೂ ಇದೆ.
ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು ಒಂದು ರೀತಿಯ ಅತಂತ್ರ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ದೆಹಲಿ ಸೇರಿದಂತೆಹಲವು ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದ ಹಲವಾರು ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಇದು ನಮ್ಮ ಆತ್ಮಸಾಕ್ಷಿಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ರೋಗಿಗಳ ಸಾವಿಗೆ ಕಾರಣವಾಗುತ್ತಿರುವ ನಿರ್ಲಕ್ಷ್ಯ ಹಾಗೂ ಭೀಕರ ಆಡಳಿತ ವೈಫಲ್ಯದ ಕಥೆಗಳು ಅನೇಕ ರಾಜ್ಯಗಳಿಂದ ಹೊರ ಬರುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.
ಕರ್ನಾಟಕದಲ್ಲಿ ಮೇ. 2 ಮತ್ತು3ರಂದು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ24ಕರೋನಾ ಸೋಂಕಿತರು ಉಸಿರುಗಟ್ಟಿ ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ನೇಮಿಸಿದ್ದ ತ್ರಿಸದಸ್ಯರ ಸಮಿತಿಯು ಜಿಲ್ಲಾಡಳಿತ ಮತ್ತು ಆಸ್ಪತ್ರೆಯ ಅಧಿಕಾರಿಗಳು ಆಮ್ಲಜನಕ ನೀಡಲು ವಿಫಲವಾಗಿದ್ದಾರೆ ಎಂದು ವರದಿ ನೀಡಿತ್ತು.
ಮಾತ್ರವಲ್ಲ ವಿವಿಧ ಹಂತಗಳಲ್ಲಿ ಆಸ್ಪತ್ರೆಯಲ್ಲಿ ಎದುರಾದ ಆಕ್ಸಿಜನ್ ಕೊರತೆಯೇ ದುರಂತಕ್ಕೆ ಕಾರಣವಾದ ಅಂಶ ಎಂದು ಪ್ರತಿಪಾದನೆ ನಡೆಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲ…ದೇಶದ ವಿವಿಧ ಕಡೆ ಇಂತಹ ನಿರ್ಲಕ್ಷ್ಯ ಕಂಡು ಬಂದಿರುವ ಘಟನೆಗಳುನಡೆದಿವೆ. ಗೋವಾದಿಂದ ಬಂದಿರುವ ವರದಿಯ ಪ್ರಕಾರ 90ಕ್ಕೂ ಹೆಚ್ಚು ರೋಗಿಗಳು ಅಲ್ಲಿ ಆಮ್ಲಜನಕ ಸಿಗದೆ ಮೃತಪಟ್ಟಿ ದ್ದಾರೆ.
ಕರ್ನಾಟಕಕ್ಕಿಂತಲೂ ಭೀಕರವಾದ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಇನ್ನು ಗೋವಾ ಮೆಡಿಕಲ್ ಹಾಸ್ಪಿಟಲ್ ಮತ್ತು ಆಸ್ಪತ್ರೆ ಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ ಏನೂ ಮಾಡಲಾಗದೆ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ. ನೋಡ ನೋಡುತ್ತಿದ್ದಂತೆಸೋಂಕಿತರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಆಮ್ಲಜನಕ ಪೂರೈಕೆಯು ಪ್ರಾಚೀನ ವ್ಯವಸ್ಥೆಯಾಗಿದೆ. ಜತೆಗೆ ಸಾಕಷ್ಟು ಶೇಖರಣಾ ಸಾಮರ್ಥ್ಯವು ಕೂಡ ಹೊಂದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ದೂರುತ್ತಾರೆ.
ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಲಾಜಿಸ್ಟಿಕ್ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಮಾಡಿದ್ದರೆ ಇಂತಹ ದುರಂತ ಸಂಭವಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹರಿಯಾಣದ ಗುರುಗ್ರಾಮ, ರೇವಾರಿ ಮತ್ತು ಹಿಸಾರ್ ಆಸ್ಪತ್ರೆಗಳಲ್ಲಿ ಇದೇ ರೀತಿಯ ಸಾವುಗಳು ಏರ್ಪಟ್ಟಿದೆ. ಮಹಾರಾಷ್ಟ್ರದಲ್ಲೂ ಪರಿಸ್ಥಿತಿ ಕೈ ಮೀರಿ ಹೋಗಿದೆ. ಆಮ್ಲಜನಕ ಸಿಗದೆ ಆಸ್ಪತ್ರೆಗಳಲ್ಲಿಸೋಂಕಿತರ ಪರಿಸ್ಥಿತಿಯನ್ನು ಹೇಳತೀರದು. ಮಾಲೆಗಾಂವ್ ಮತ್ತು ನಾಸಿಕ್‌ನಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಆಮ್ಲಜನಕದ ಕೊರತೆಯಿಂದ ಮೃತಪಟ್ಟರೆ ಇನ್ನೂ ಕೆಲವು ನತದೃಷ್ಟರು ಆಕಸ್ಮಿಕ ಬೆಂಕಿಗಾಹುತಿಯಾದರು.
ದೇಶದಾದ್ಯಂತ ಆಕ್ಸಿಜನ್ ಹಾಹಾಕಾರ..! ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ , ಉತ್ತರಾಖಂಡ ,ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು ಮತ್ತು ಗೋವಾದಲ್ಲಿ ಆಮ್ಲಜನಕ ಕೊರತೆ ಉಂಟಾಗಿದೆ. ದೇಶದ 14 ರಾಜ್ಯಗಳಲ್ಲಿ ಆಕ್ಸಿಜನ್ ಅಭಾವ ತೀವ್ರ ಗತಿಯಲ್ಲಿದೆ. ಬಿಜೆಪಿ, ಕಾಂಗ್ರೆಸ್, ಎಎಪಿ, ಶಿವಸೇನೆ, ವೈಎಸ್‌ಆರ್ ಕಾಂಗ್ರೆಸ್, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಡಿಎಂಕೆ ಸೇರಿದಂತೆ ಹೆಚ್ಚಿನ ರಾಜಕೀಯ ಪಕ್ಷಗಳು ಪರಿಸ್ಥಿತಿ ನಿಭಾಯಿಸಲು ಭಾರೀ ಹಿನ್ನಡೆಯನ್ನು ಅನುಭವಿಸಿದೆ.
ಪ್ರತಿಯೊಬ್ಬರು ಕೂಡ ತಮ್ಮ ವೈ-ಲ್ಯದ ಬಗ್ಗೆ ಈಗ ಮಾತನಾಡುತ್ತಿಲ್ಲ. ಎಲ್ಲರೂ ಪರಸ್ಪರ ಕಚ್ಚಾಟ ನಡೆಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ ಈ ವಿಷಯದಲ್ಲಿ ಯಾರನ್ನೂ ದೂರುತ್ತಿಲ್ಲ ಅನ್ನುವುದನ್ನು ಗಮನಿಸಬೇಕು, ಹೀಗಿದ್ದರೂ ಇಲ್ಲಿ ಕೆಲವು ಮೂಲಭೂತ ಅಂಶಗಳನ್ನು ಅರ್ಥ ಮಾಡಿಕೊಳ್ಳಲೇಬೇಕಿದೆ. ಸಂವಿಧಾನದ ಪ್ರಕಾರ ರಾಜ್ಯಗಳಲ್ಲಿ ಆಗಿರುವ ದುರಂತಗಳಿಗೆ ಅಲ್ಲಿನ ವ್ಯವಸ್ಥೆಗಳೇ ಮೂಲ ಕಾರಣ. ಹೀಗಿದ್ದರೂ ಅನಗತ್ಯವಾಗಿ ಕೆಸರೆರಚಾಟ ಮಾಡುವುದಲ್ಲದೆತಮ್ಮದೇನೂ ತಪ್ಪೇ ಇಲ್ಲ. ಎಲ್ಲವನ್ನು ಕೇಂದ್ರ ಸರಕಾರವೇ ಮಾಡುತ್ತಿದೆ ಅನ್ನುವಂತೆ ದೂರುತ್ತಿವೆ.
ಅಧಿಕಾರ ಹಂಚಿಕೆಯನ್ನು ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗಿದೆ. ಇದನ್ನು ಸಂವಿಧಾನದ 7ನೇ ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದೇ ಸಂವಿಧಾನದ 5ನೇ ಕಾಲಂ ಪ್ರಕಾರ ಸಾರ್ವಜನಿಕ ಮತ್ತು ಆರೋಗ್ಯ ಸೇವೆಗಳು, ಇದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರಕಾರಗಳದ್ದೇ ಆಗಿದೆ. ಹೀಗಾಗಿ ಅವರು ತಮ್ಮ ತಪ್ಪಿದ್ದರೂ ಅದನ್ನು ಮತ್ತೊಬ್ಬರತ್ತ ಬೆರಳಲು ತೋರಿಸಲು ಆಗುವುದಿಲ್ಲ, ಸಾಂಕ್ರಾಮಿಕ ರೋಗವನ್ನು ತಡೆಯುವುದು ಆಯಾ ರಾಜ್ಯದಕರ್ತವ್ಯವೂ ಹೌದು.
ಕಳೆದ ತಿಂಗಳಲ್ಲಿ ಕರೋನಾ ವಿಪರೀತ ಹಂತಕ್ಕೆ ತಿರುಗಿ ಒಂದು ರೀತಿಯ ಆಡಳಿತ ವೈಫಲ್ಯ ಕಂಡು ಬಂದಾಗ ಹಲವಾರು ಮಂದಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಣೆ ಮಾಡಿ ಟೀಕಿಸುತ್ತಿದ್ದಾರೆ. ತಮ್ಮ ಶಕ್ತಿಯನ್ನೆಲ್ಲ ಪ್ರಯೋಗಿಸಿತಮಗೆ ತಕ್ಕಂತೆ ವಾತಾವರಣ ನಿರ್ಮಿಸಿಕೊಂಡು ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಹಾಗಾದರೆ ಕೇಂದ್ರ ಆರೋಗ್ಯ ಸಚಿವಾಲಯನ್ನು ಹೊರತುಪಡಿಸಿ ಮುಖ್ಯಮಂತ್ರಿಗಳು, ರಾಜ್ಯ ಆರೋಗ್ಯ ಮಂತ್ರಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಆಡಳಿತ ವಿಭಾಗ.
ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಏನು ಮಾಡುತ್ತಿವೆ. ಕಳೆದ ವರ್ಷ ಕರೋನಾ ಒಂದನೇ ಅಲೆಯಲ್ಲಿ ಸಮಸ್ಯೆ ಉಂಟಾದಾಗ ಮಾಡಬೇಕಿದ್ದ ತಯಾರಿಯನ್ನು ಮಾಡಿಕೊಳ್ಳದೆ ಈಗ ಟೀಕೆ ಮಾಡಿದರೆ ಏನೂ ಪ್ರಯೋಜನ..! ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಮತ್ತು ಸಂಗ್ರಹಣೆಯನ್ನು ಹೆಚ್ಚಿಸಲು ಯಾವುದೇ ಕ್ರಮವನ್ನು ಏಕೆ ತೆಗೆದುಕೊಂಡಿಲ್ಲ. ಇದು ತಯಾರಿಯೇ ಅಲ್ಲ ಅನ್ನುವಂತೆ ಸುಮ್ಮನಿದ್ದು ಈಗ ಬೊಬ್ಬೆ ಹೊಡೆಯುತ್ತಿವೆ ಹಲವು ರಾಜ್ಯದ ಸರಕಾರಗಳು.. ದುರಂತದ ಬಗ್ಗೆ ಕೇಂದ್ರ ಸರಕಾರವು ಮೊದಲೇ ಎಚ್ಚರವಾಗಿರಬೇಕಿತ್ತು ಅನ್ನೋದು ನಿಜ.
ಆರ್‌ಎಸ್ ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಮುಖ್ಯಸ್ಥ ಮೋಹನ್ ಭಾಗವತ್ ಈ ಬಗ್ಗೆ ಮುನ್ಸೂಚನೆ ನೀಡಿದ್ದರು. “ಸರಕಾರ, ಆಡಳಿತ ಮತ್ತು ಸಾರ್ವಜನಿಕರು ತಮ್ಮ ರಕ್ಷಕನನ್ನು ಕೈಬಿಟ್ಟರು, ಅದಾಗ್ಯೂ ಇದು ಯಾರತ್ತಲೂ ಬೆರಳು ತೋರಿಸುವ ಸಮಯವಲ್ಲ. ನಾವು ಸಕಾರಾತ್ಮಕವಾಗಿರಬೇಕು.  ರೋನಾ ನೆಗೆಟಿವ್ ಆಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಮುಂದುವರಿದು ಪರಿಸ್ಥಿತಿಯನ್ನು ವ್ಯಾಖ್ಯಾನಿಸಿದ ಅವರು ಮಹಾಯುದ್ಧದಲ್ಲಿ ಇಂಗ್ಲೆಂಡ್ ಯುದ್ಧವನ್ನು ಕಳೆದುಕೊಳ್ಳುತ್ತಿವಂತೆ ಭಾಸವಾಗುತ್ತಿದೆ ಎಂದು ಅವರು ಒಂದು ನಿರ್ದಿಷ್ಟ ಹಂತವನ್ನು ಉಲ್ಲೇಖಿಸಿದ್ದರು.
ಹೀಗಿದ್ದರೂ ಪ್ರಧಾನಮಂತ್ರಿ ವಿನ್ ಸ್ಟನ್ ಚರ್ಚಿಲ್ ಅವರ ಮೇಜಿನ ಮೇಲೆ ಒಂದು ಟಿಪ್ಪಣಿ ಇತ್ತು. ಅದರಲ್ಲಿ ಹೀಗಿತ್ತು, ‘ಈ ಕಚೇರಿಯಲ್ಲಿ ನಿರಾಶಾವಾದವಿಲ್ಲ. ಸೋಲಿನ ಅಪಾಯದ ಬಗ್ಗೆ ನಮಗೆ ಆಸಕ್ತಿ ಇಲ್ಲ. ಅವು ಇಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಬರೆಯಲಾಗಿತ್ತು. ಕರೋನಾ ಎಂಬ ಮಹಾಮಾರಿಯನ್ನು ಎದುರಿಸಲು ಭಾರತಕ್ಕೂ ಅಂತಹುದೇ ಧೈರ್ಯದ ಅಗತ್ಯ ಇದೇ ಎಂದು ಅವರು ವಿವರಿಸಿದ್ದರು.
ಅವರು ಹೇಳಿರುವುದು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕಾದ ವಿಚಾರ. ಒಂದು ಶಕ್ತಿ ಸಂಪೂರ್ಣವಾಗಿ ಜನರ ಜೀವನವನ್ನು ಹಾಳು ಮಾಡಿದಾಗ ಅಥವಾ ಅತಿರೇಕದ ಹಂತಕ್ಕೆ ತಲುಪಿದಾಗ ಅದನ್ನು ನಿಯಂತ್ರಿಸಲು ಧೈರ್ಯ, ಸಂಕಲ್ಪ ಮತ್ತು ಸಕರಾತ್ಮಕತೆಯನ್ನು ಹೋರಾಟವನ್ನು ಪ್ರದರ್ಶಿಸುವ ಅಗತ್ಯತೆ ಇದೆ ಎನ್ನುವುದನ್ನು ಮನಗಾಣಬೇಕಿದೆ.