ಸಾಮಾಜಿಕ ಅಂತರ, ಮಾಸ್ಕ್: ಆರೋಗ್ಯ ನಿರಂತರ
ಡಾ.ಸಿ.ರಾಮಚಂದ್ರ
ನಿರ್ದೇಶಕರು. ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ
ದೇಶದಲ್ಲಿ ಸಾಂಕ್ರಾಮಿಕ ರೋಗ ಕರೋನಾ ಮನುಕುಲಕ್ಕೆ ಬೆದರಿಕೆಯೊಡ್ಡಿ ಎಲ್ಲೆ ಮೀರಿ ಮೆರೆಯುತ್ತಿದೆ. ಶತಮಾನಗಳಿಂದಲೂ ಭಯಾನಕ ವೈರಸ್‌ಗಳು ಕಾಡುತ್ತಲೇ ಇವೆ, ಆದರೆ ಕರೋನಾ ವಿಭಿನ್ನ. ಆದ್ದರಿಂದ ಕರೋನಾ ವಿರುದ್ಧ ಹೋರಾಟದಲ್ಲಿ ಜನ ಸಾಮಾನ್ಯರು ನಡೆದುಕೊಳ್ಳುವ ರೀತಿ ಮೇಲೆ ಸೋಂಕು ಅಂತ್ಯ ಕಾಣಬಹುದು.
ಸದ್ಯಕ್ಕೆ ಸರಕಾರಗಳ ಜತೆ ಜನರ ಸಹಕಾರದಿಂದ ಸೋಂಕು ದೂರವಾಗಿಸಬಹುದು. ಹಾಗೆಯೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದಾಗಿದೆ. ಸಾಂಕ್ರಾಮಿಕ ಎನ್ನುವ ಪದವನ್ನು ಲಘುವಾಗಿ ಬಳಸುವ ಹಾಗಿಲ್ಲ. ಈ ಪದವನ್ನು ಅಜಾಗರೂಕತೆಯಿಂದಬಳಸುವ ಆಗಿಲ್ಲ. ಬಳಸಿದರೆ ಅಗತ್ಯ ಭಯ ಉಂಟಾಗುತ್ತದೆ. ಅಥವಾ ಅದರ ಮುಂದೆ ಶಕ್ತಿ ಸಾಲದು.
ನಾವು ಸೋತೆವು, ಹೋರಾಟ ಮುಗಿದಿದೆ ಎಂಬಂತಹ ನ್ಯಾಯ ಸಮ್ಮತವಲ್ಲದ ಸೋಲಿನ ಸ್ವೀಕಾರಕ್ಕೆ ಕಾರಣವಾಗಬಹುದು. ಸಾಂಕ್ರಾಮಿಕ ರೋಗಗಳು ಸಾವಿನ ಭಯವನ್ನು ಉಂಟು ಮಾಡಿ ನಮ್ಮನ್ನು ಬೆದರಿಸುತ್ತವೆ, ವೈದ್ಯಕೀಯ ವಲಯಕ್ಕೆ ಸಾಂಕ್ರಾಮಿಕ ರೋಗ ಹೋಗಲಾಡಿಸುವುದು ಸವಾಲಾಗಿ ಪರಿಣಮಿಸಿದೆ. ಪ್ರತಿ ನೂರು ವರ್ಷಗಳಿಗೊಮ್ಮೆ 1720ರಲ್ಲಿ ಪ್ಲೇಗ್, 1820ರಲ್ಲಿ ಕಾಲರಾ, 1918ರಲ್ಲಿ ಸ್ಪ್ಯಾನಿಶ್ ಜ್ವರ ಮುಂತಾದ ದೊಡ್ಡ ಸಾಂಕ್ರಾಮಿಕ ರೋಗಗಳು ಕಂಡು ಬಂದಿವೆ. ಇವೆಲ್ಲವನ್ನೂ ಗೆದ್ದಿರುವ ಮನುಕುಲ ಕರೋನಾ ಗೆಲ್ಲುವುದು ದೊಡ್ಡ ವಿಷಯವೇನಲ್ಲ.
ಆದ್ದರಿಂದ ಎಚ್ಚರಿಕೆಯೇ ಇದಕ್ಕೆ ರಾಮಬಾಣ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಆಳುವ ಸರಕಾರಗಳು ಪ್ರತಿ ಯೊಂದು ಜೀವ ಉಳಿಸಲು ಎಚ್ಚರಿಕೆಯ ನಡೆ ನಿಜಕ್ಕೂ ಶ್ಲಾಘನೀಯ. ಪ್ರತಿಯೊಂದು ಸಾಂಕ್ರಾಮಿಕ, ರೋಗದ ವಿರುದ್ಧ ಹೋರಾಟವೂ ಇತಿಹಾಸದ ಪುಟಗಳು ಸೇರಿವೆ. ಕಳೆದ ಒಂದೂವರೆ ವರ್ಷ ದಿಂದ ಕಾಡುತ್ತಿರುವ ಕರೋನಾ ಸಾಂಕ್ರಾಮಿಕರೋಗದಿಂದ ಮುಕ್ತಿ ಪಡೆಯಬೇಕಾಗಿದೆ. ಈಗಾಗಲೇ ಎರಡನೇ ಅಲೆ ಆರ್ಭಟ ಜೋರಾಗಿದ್ದು, ಮೂರನೇ ಅಲೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ಅಲೆ ಹೋಗಲಾಡಿಸಲು ಸರಕಾರದ ಜತೆ ಜನಸಾಮಾನ್ಯರೂ ಕೈಜೋಡಿಸಬೇಕಿದೆ. ಮಾಸ್ಕ್, ಸಾಮಾಜಿಕ ಅಂತರಕಾಪಾಡಿಕೊಂಡು, ಉತ್ತಮ ಆರೋಗ್ಯದಿಂದ ಇರುವುದರ ಜತೆಗೆ ಸೋಂಕಿನ ವಿರುದ್ಧ ಹೋರಾಡುವ ಅಸ್ತ್ರವಾಗಿದೆ. ಕರೋನಾಗೆ ಅನೇಕ ಅಮಾಯಕ ಜೀವಗಳು ಬಲಿಯಾಗಿವೆ. ಸುಮಾರು ಕುಟುಂಬಗಳು ಅನಾಥವಾಗಿವೆ. ಪ್ರತಿಯೊಂದು ಜೀವ ಉಳಿಸುವುದುಸರಕಾರದ ಪ್ರಮುಖ ಅಂಶವಾಗಿರುತ್ತದೆ. ರೋಗಿಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಆಕ್ಸಿಜನ್, ಐಸಿಯು, ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸುವುದು ತುರ್ತು ಸಂದರ್ಭದಲ್ಲಿ ಈ ಸೌಕರ್ಯ ಹೊಂದಾಣಿಕೆ ಮಾಡುವುದು ಸವಾಲಿನ ಕೆಲಸ.
ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವೇ ಎಚ್ಚರಿಕೆವಹಿಸಿದರೆ ಯಾವ ರೋಗವು ನಮ್ಮನ್ನು ಮುಟ್ಟುವುದಿಲ್ಲ. ಕಳೆದ ಒಂದು ತಿಂಗಳಿನಿಂದ ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಐಸಿಯುನಲ್ಲಿ ದೀರ್ಘಕಾಲ ಇದ್ದ ರೋಗಿಗಳು ಸಾವನ್ನಪ್ಪುತ್ತಿರುವುದು.ಸಾವಿನ ಪ್ರಮಾಣ ಕಡಿಮೆ ಮಾಡಲು ಬೆಂಗಳೂರಿನಲ್ಲಿ 200 ಬೆಡ್ ಸೌಕರ್ಯವುಳ್ಳ ಮೇಕ್‌ಶಿಫ್ಟ್ ಘಟಕ ತೆರೆಯಲಾಗುತ್ತಿದೆ. ಇದರ ಹೊಣೆಗಾರಿಕೆ ಜಯದೇವ ಹೃದ್ರೋಗ ಸಂಸ್ಥೆ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ರಾಜೀವ್‌ಗಾಂಧಿ ಸಂಸ್ಥೆಯ ನಿರ್ದೇಶಕರಿಗೆವಹಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಸರಕಾರ ಕಲ್ಪಿಸುತ್ತಿದೆ.
ಕೊಟ್ಟಿರುವ ಜವಾಬ್ದಾರಿ ನಿಭಾಯಿಸುವ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಲಾಗುತ್ತದೆ. ಕರೋನಾ ಲಸಿಕೆ ಹಾಕಿಸಿ ಕೊಳ್ಳುವುದರಿಂದ ಕರೋನಾ ಸೋಂಕು ನಿಯಂತ್ರಣ ಮಾಡಬಹುದಾಗಿದೆ. ಇತ್ತೀಚಿಗೆ ರೇಡಿಯೋಥೆರಪಿ ಕರೋನಾಗೆ ಚಿಕಿತ್ಸೆ ಯಾಗಿ ಬಳಸಲಾಗುತ್ತಿದೆ. ಈ ಚಿಕಿತ್ಸೆ ನೀಡಲು ಪ್ರಾಯೋಗಿಕ ಹಂತ ಎಂದು ಪರಿಗಣಿಸಲಾಗುತ್ತದೆ. ಈ ಕುರಿತು ಐಸಿಎಂಆರ್‌ನಿಂದಯಾವುದೇ ಅನುಮತಿ ಸಿಕ್ಕಿಲ್ಲ. ಈಗಾಗಲೇ ರಾಜ್ಯದ ಕೆಲವೊಂದು ಆಸ್ಪತ್ರೆಗಳನ್ನು ಕರೋನಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸ ಲಾಗಿದೆ.
ಅಗತ್ಯ ಸಿಬ್ಬಂದಿ ಸೌಲಭ್ಯ ಸರಕಾರ ಒದಗಿಸಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆವಹಿಸಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ ನೀಡಲಾಗುತ್ತಿದೆ. ಹಾಗೆಯೇ 18 ವರ್ಷದೊಳಗಿನವರೆಗೂ ನೀಡುವಂತಹ ಕೆಲಸ ಸರಕಾರ ಮಾಡಲಿದೆ. ಹಾಗೆಯೇ ಕರೋನಾ ಇಲ್ಲದ ಸಾಮಾನ್ಯ ರೋಗಿಗಳ ಹಿತ ಕಾಪಾಡಲಾಗುತ್ತಿದೆ. ಕರೋನಾ ವಾರಿಯರ್ಸ್‌ಗಳಪರಿಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆರೋಗ್ಯವು ನಮ್ಮಲ್ಲಿರುವ ಪ್ರಮುಖ ಆಸ್ತಿಯಾಗಿದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಲವಾದ ರೋಗ ನಿರೋಧಕ ಶಕ್ತಿ ಯೊಂದಿಗೆ ನಮ್ಮನ್ನು ಆರೋಗ್ಯವಾಗಿರಿಸಿಕೊಳ್ಳುವುದು ಉತ್ತಮದ ರಕ್ಷಣೆಯಾಗಿದೆ, ಎರಡನೇ ಪ್ರಮುಖ ವಿಷಯವೇನೆಂದರೆ ನಮ್ಮ ಪರಿಸರ ಮತ್ತು ಪ್ರಕೃತಿಯನ್ನು ಸಾಮಾನ್ಯವಾಗಿ ಗೌರವಿಸುವುದನ್ನು ಕಲಿಯೋಣ. ಇದರಿಂದ ನಾವು ಪರಿಸರ ವ್ಯವಸ್ಥೆಯಭಾಗವಾಗಿದ್ದೇವೆ ಮತ್ತು ಅದನ್ನು ನಿಯಂತ್ರಿಸುವುದಿಲ್ಲ ಎಂಬುದನ್ನು ತಿಳಿಯಬೇಕಾಗಿದೆ.
ಪ್ರಕೃತಿ ಯಾವಾಗಲೂ ನಮಗಿಂತ ಕೆಲವು ಹೆಜ್ಜೆ ಮುಂದಿರುತ್ತದೆ, ಆದ್ದರಿಂದ ನಾವು ಪ್ರಕೃತಿಯನ್ನು ಗೌರವಿಸಲು ಕಲಿಯಬೇಕು.ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಕರೋನಾ ಸೋಂಕಿನ ಕೊಂಡಿ ಕತ್ತರಿಸಲು ಮಾರ್ಗಸೂಚಿ ಪಾಲನೆಯೇ ಅಸ್ತ್ರ.ಕೊನೆಯದಾಗಿ ಹೇಳುವುದೆಂದರೆ ಜನ ಜವಾಬ್ದಾರಿಯುತವಾಗಿ ಸಾಮಾಜಿ ಅಂತರ ಕಾಪಾಡಿಕೊಂಡು, ಜನಸಂದಣಿ ಸೇರುವುದು ನಿಲ್ಲಿಸುವ ಮೂಲಕ ಕರೋನಾ ಸೋಂಕಿನ ಕೊಂಡಿ ನಿರ್ನಾಮ ಮಾಡಬೇಕು. ಲಾಕ್ ಡೌನ್ ವೇಳೆಯಲ್ಲಿ ಸುಖಾಸುಮ್ಮನೆ ಓಡಾಡುವುದು ನಿಲ್ಲಿಸಬೇಕು. ಲಾಕ್‌ಡೌನ್ ಸಂದರ್ಭದಲ್ಲಿ 6 ರಿಂದ 10ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.
ಇದನ್ನೇ ಬಂಡವಾಳವನ್ನಾಗಿಸಿಕೊಂಡು ಅನಗತ್ಯವಾಗಿ ಸುತ್ತಾಡುವುದರಿಂದ ಸಾಂಕ್ರಾಮಿಕ ರೋಗ ವೇಗವಾಗಿ ಹರಡಲು ದಾರಿಮಾಡಿಕೊಟ್ಟಂತಾಗುತ್ತದೆ. ಸಾಂಕ್ರಾಮಿಕ ರೋಗ ಮುಂದುವರಿದರೆ ಲಾಕ್‌ಡೌನ್‌ಗೆ ಅಂತ್ಯವಿಲ್ಲದಂತಾಗುತ್ತದೆ. ಹಾಗಾಗಿ ಇದು ಪರಿವರ್ತನೆಯ ಕಾಲವಾಗಿದ್ದು, ಕರೋನಾವನ್ನು ಆದಷ್ಟು ಬೇಗ ಕೊನೆಗಾಣಿಸಲು ಸರಕಾರದ ಜತೆ ಕೈಜೋಡಿಸಬೇಕಿದೆ.ಪ್ರತಿಯೊಬ್ಬರ ಜೀವನ ಸುಧಾರಣೆಗೆ ಅನುಕೂಲಕರವಾಗಲಿದೆ.
ದೊಡ್ಡ ರಾಷ್ಟ್ರಗಳಾದ ಅಮೆರಿಕ ಮತ್ತು ಇಂಗ್ಲೆಂಡ್ ಕರೋನಾ ವಿರುದ್ಧ ಹೋರಾಟದಲ್ಲಿ ಜಯ ಸಾಧಿಸಿವೆ. ಇದೇಹಾದಿಯಲ್ಲಿ ನಮ್ಮ ಭಾರತ ದೇಶ ಸಾಗುತ್ತಿದೆ. ಇದಕ್ಕೆ ನಮ್ಮೆಲ್ಲರ ಸಹಕಾರ ಮುಖ್ಯ.