ಕೋವಿಡ್‌ ಲಸಿಕೆಗಳಿಗೆ ಅಂಟಿದ ಪರವಾನಗಿ ರಾಜಕೀಯದ ರಗಳೆ ಮತ್ತು ಭಾರತದ ಬೇಲಿ
ಆಹ್ವಾನಿತ ಲೇಖನ:ಡಾ.ಶ್ರೀಕಾಂತ ಭಟ್ ವಿಜ್ಞಾನಿ, ಜರ್ಮನಿ
ನಾನು ಯಾವುದೇ ಲಸಿಕಾ ಕಂಪನಿಯ ಪರವಾಗಿ ಕೆಲಸ ಮಾಡುತ್ತಿಲ್ಲ. ಬರಹದ ಉದ್ದೇಶವೂ ಅದಲ್ಲ. ಜಗತ್ತಿಗೆ ಬೆಳಕಿನ ವೇಗದಲ್ಲಿ ಬಂದ ಲಸಿಕೆ ಭಾರತದ ಬಾಗಿಲಲ್ಲಿ ಎಡವಿ ಬಿತ್ತು. ಎಡವಿದ್ದು ವೈಜ್ಞಾನಿಕವೋ, ರಾಜಕೀಯವೋ ಎಂದು ವಿಶ್ಲೇಷಿಸಲು ಇಷ್ಟು ಹೇಳಬೇಕಾಯಿತು ಅಷ್ಟೇ.
ನುರಿತ ವಿಜ್ಞಾನಿಯ ಇಂದಿನ ಆಲೋಚನೆ ಇಪತ್ತು ವರ್ಷಗಳ ನಂತರ ಅಳತೆಗೆ ಸಿಗುತ್ತದೆ. ಬಳಕೆಗೆ ಬರುತ್ತದೆ. ಆಲೋಚನೆಗಳಿಗೆಸಂಭಾವನೆ ಸಿಗುವ ವೃತ್ತಿಯೊಂದು ಇದೆ ಎಂದಾದರೆ, ಅದಕ್ಕೆ ವಿeನವೇ ತಳಹದಿ. ವಿಸ್ಮಯವೇ ಭಂಡಾರ. ಅರ್ಪಣೆಯೇ ಆಧಾರ. ಲಸಿಕೆಯ ವಿಷಯದಲ್ಲಿ ವಿಜ್ಞಾನ ಏರಿಗೆಳೆದರೆ, ರಾಜಕೀಯ ನೀರಿಗಿಳಿಯಿತು! ಎಂಬುದು ನನ್ನ ಖಚಿತ ನಿಲುವು.
ವಿವಿಧ ದೇಶಗಳು ತುರ್ತು ಅನುಮತಿ ಪದ್ಧತಿ ಅನುಸರಿಸಿದರು. ಆದರೂ ಅಲ್ಲಿಯೂ ಬೇರೆ ಬೇರೆ ದೇಶಗಳ ಸಮನ್ವಯದ ಕೊರತೆ, ಇಚ್ಛಾಶಕ್ತಿಯ ಕೊರತೆ ಢಾಳಾಗಿ ಗೋಚರಿಸಿತು. ಗ್ರೇಟ್ ಬ್ರಿಟನ್ ಯುರೋಪಿನಿಂದ ಹೊರಬಿದ್ದ (ಬ್ರೆಕ್ಸಿಟ್) ಅನುಕೂಲವನ್ನು ಎತ್ತಿ ತೋರಿಸಲು, ಪೈಪೋಟಿ ಎಂಬಂತೆ ಎಲ್ಲ ದೇಶಗಳಿಗೂ ಮುಂಚೆ ಲಸಿಕೆಗಳ ಅನುಮತಿಗೆ ಒಪ್ಪಿಗೆ ಸೂಚಿಸುತ್ತಾ ಹೋಯಿತು.
ಲಸಿಕೆ ಕಂಪನಿ ಅರ್ಜಿ ಸಲ್ಲಿಸುವದನ್ನೇ ತಡ ಎಂಬ ಸಂದೇಶ ರವಾನಿಸಿತು. ಅಮೆರಿಕ ಮೊದಲು ಬ್ರಿಟನ್ನಿನ ನಿಲುವನ್ನು ಟೀಕಿಸಿ ದರೂ ಕೊನೆಗೆ ತ್ವರಿತ ಅನುಮೋದನೆಗೆ ಒತ್ತು ನೀಡಿತು. ಎಲ್ಲಕ್ಕಿಂತ ಹಿಂದೆ (3-4ವಾರ) ಬಿದ್ದದ್ದು ಯುರೋಪ್.
ಲಸಿಕೆಯ ಚುಚ್ಚುವಿಕೆಯ ಓಟದಲ್ಲಿ ಕ್ರಮವಾಗಿ ಇಸ್ರೇಲ್ (63%), ಗ್ರೇಟ್ ಬ್ರಿಟನ್ (55%), ಮಂಗೋಲಿಯಾ (53%), ಹಂಗೇರಿ (52%) ಬಹರೈನ್ (521%), ಕೆನಡಾ (50%), ಚಿಲಿ (50%), ಅಮೆರಿಕ (50%) ಅತಿ ಹೆಚ್ಚು ಜನರಿಗೆ ಲಸಿಕೆಯನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಸಿಕೆಯ ಪ್ರಮಾಣ ಹೆಚ್ಚಾದಂತೆಲ್ಲ ಸೋಂಕಿತರ ಪ್ರಮಾಣವೂ ಕಡಿಮೆಗೊಂಡಿದೆ ಎಂಬುದುಸಂತಸದ ಸಮಾಚಾರ.
ಇಸ್ರೇಲ್ ಜಾಣ ನಿರ್ಧಾರ
ಇಸ್ರೇಲ್ ಲಸಿಕೆಯ ಅಭಿಯಾನದಲ್ಲಿ ಮೇಲುಗೈ ಸಾಧಿಸಲು ತತ್ ಕ್ಷಣದ ನಿರ್ಧಾರ ಮತ್ತು ಸರತಿಸಾಲಿನಲ್ಲಿ ಮೊದಲು ನಿಂತಿದ್ದು ಕಾರಣ ಎಂದು ಹೇಳಲಾಗುತ್ತಿದೆ. ವಿಜ್ಞಾನದ ಪರಿಮಳವನ್ನು ಎಲ್ಲಿದ್ದರೂ ಹೀರುವ ಇಸ್ರೇಲ್ ವಿಜ್ಞಾನಿಗಳು, ಬಯೋ-ಎನ್-ಟೆ ಫೈಜರ್ ಲಸಿಕೆಯ ಬಗ್ಗೆ ಮೊದಲೇ ಮನಗಂಡಿದ್ದರು. ಅದೆಷ್ಟೇ ಬೆಲೆಯನ್ನಾದರೂ ತೆತ್ತಲು ಸಿದ್ಧರಿದ್ದರು. ಒಂದು ಮಾಹಿತಿಯ ಪ್ರಕಾರ ಪ್ರಧಾನಿ ನೆತನ್ಯಾಹು ಅವರೇ ಬಯೋ-ಎನ್-ಟೆಕ್ ಸಿಇಒ ಡಾ.ಉರ್ಗು ಸಾಹಿನ್ ಅವರಿಗೆ ಕರೆ ಮಾಡಿ ವ್ಯಾಪಾರ ಕುದುರಿಸಿದ್ದರು ಎನ್ನಲಾಗುತ್ತಿದೆ. ಅದೂ2020ಆಗ-ಸೆಪ್ಟೆಂಬರ್ ಆಸುಪಾಸಿನಲ್ಲಿ.
ಇಸ್ರೇಲ್ ಹಿಂದೆ ಮುಂದೆ ನೋಡದೆ ತನ್ನ ಲಸಿಕಾ ಅಭಿಯಾನದ ಎಲ್ಲ ದತ್ತಾಂಶಗಳನ್ನೂ ಫೈಜರ್ ಕಂಪನಿಗೆ ನೀಡಲು ತ್ವರಿತ ವಾಗಿ ಒಪ್ಪಿಗೆ ಸೂಚಿಸಿತು. ಲಸಿಕೆಯ ದಕ್ಷತೆ ಅಥವಾ ಕ್ಷಮತೆಯ ಅಧ್ಯಯನದ ದೃಷ್ಟಿಯಿಂದ ಕಂಪನಿಯೂ ಇಂತಹ ದತ್ತಾಂಶ ಗಳ ಬೇಡಿಕೆ ಇಟ್ಟಿತ್ತು. ಇದೇ ಒಪ್ಪಂದದ ಫಲವಾಗಿ ಇಸ್ರೇಲಿಗೆ ಅಂತ್ಯಂತ ಶೀಘ್ರವಾಗಿ, ಅಧಿಕ ಲಸಿಕೆಗಳು ಸಿಕ್ಕವು.
ಇಂದು ಕೋವಿಡ್-19ಜತೆ ಒಂದೇ ಅಲ್ಲ, ಪಕ್ಕದ ಹಮಾಸ್ ಮೇಲೆಯೂ ಯುದ್ಧ ಸಾರಿ ಗೆದ್ದು ಬೀಗುತ್ತಿದೆ ಇಸ್ರೇಲ್. ಮೇಲಿನ ಪಟ್ಟಿಯಲ್ಲಿ ಹಿಂದೆ ಬಿದ್ದಿದ್ದು ಯುರೋಪಿಯನ್ ಯೂನಿಯನ್. ಅನುಮತಿಗೆ ಅನುಮಾನ ಮಾಡಿದ್ದನ್ನು ಮುಂಚೆ ಹೇಳಿದ್ದು ತಾನೇ. ಲಸಿಕೆಯ ವ್ಯಾಪಾರ ವಹಿವಾಟುಗಳು ಅಭಿವೃದ್ಧಿಯ ಹಂತದ ನಡೆಯಿತು ಎಂಬುದನ್ನು ಗಮನಿಸಬೇಕು. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಹೊತ್ತಿಗಾಗಲೇ ಕಂಪನಿಗಳು ಉತ್ಪಾದನೆಯ ಮಿತಿಗೂ ಮೀರಿದ್ದನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಜರ್ಮನಿ ಬಯೋ-ಎನ್-ಟೆಕ್ ಕಂಪನಿಗೆ ಲಸಿಕಾ ಅಭಿವೃದ್ಧಿಯ ಹಂತದ2000ಕೋಟಿ ರುಪಾಯಿ ಸಾಲ ನೀಡಿದ್ದರೂ ಲಸಿಕೆಗಳ ವ್ಯಾಪಾರಕ್ಕೆ, ಪೂರೈಕೆಗೆ ಯೂರೋಪಿನ ಬಾಗಿಲ ಬಳಿ ನಿಂತಿತು. ತಾನೇ ನೇರವಾಗಿ ಲಸಿಕೆಯನ್ನೂ ಖರಿದೀಸಲೇ ಇಲ್ಲ.ಯುರೋಪ್ (27ದೇಶಗಳ) ಎಂಬ ದೊಡ್ಡ ಹಡಗು ಅಗ್ಗದ ಲಸಿಕೆಗೆ ಮೊದಲು ಮಣೆ ಹಾಕಿತು. ಅಗ್ಗದ ಲಸಿಕೆಗಳಾದ ಆಸ್ಟ್ರಾ ಜೆನಿಕ್ ಮತ್ತು ಜೋನ್ಸನ್ ಜೋನ್ಸನ್ ಕಂಪನಿಗಳು ಉತ್ಪಾದನೆಯ ಹಂತದಲ್ಲಿ ಎಡವಿದವು. ತಮ್ಮ ಪೂರೈಕೆಯ ಭರವಸೆಈಡೇರಿಸಲಾಗದೇ ಸೋತುಹೋದವು. ಅ
ಷ್ಟರಲ್ಲಿ ಈ ಎರಡು ಲಸಿಕೆಗಳಲ್ಲಿ ಕೆಲವು ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ಕೇಳಿಬಂದು ಉಂಟಾದ ತೊಡಕು ಬೇರೆ ಸೇರಿಕೊಂಡಿತು. ಒಟ್ಟಿನಲ್ಲಿ ಲಸಿಕೆಯ ಅಭಿವೃದ್ಧಿ ಹಂತದ ನಿರ್ಧಾರಗಳು ಜರ್ಮನಿ, -, ಇಟಲಿಯಂತಹ ಶ್ರೀಮಂತ ಯೂರೋಪಿನ ದೇಶಗಳನ್ನು ಕಟ್ಟಿ ಹಾಕಿದವು. ಇಂದು ಯುರೋಪ್ ಶೇಕಡಾ30-40ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ನೀಡಿದೆ.
ಮುಂದಿನ2-3ತಿಂಗಳಿನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲು ತವಕಿಸುತ್ತಿದೆ. ಇದರಿಂದ ನಾವು ತಿಳಿಯಬೇಕಾದ ಅಂಶ ಇಷ್ಟೇ; ನಿರ್ಧಾರ ಸರಿಯಾಗಿಯೂ ಇರಬೇಕು, ಸಮಯಕ್ಕೂ ಇರಬೇಕು. ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಅಲ್ಲವೇ?
ಭಾರತದ್ದೂ ಇದೇ ಕಥೆಭಾರತದ ಕಥೆಯೂ ಹೊರತಾಗಿಲ್ಲ. ಈ ವರ್ಷದ ಜನವರಿ ಮೊದಲ ವಾರದ ಕೋವಿಶೀಲ್ಡ್ (ಆಸ್ಟ್ರಾಜೆನಿಕ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ-ಖಐಐ) ಮತ್ತು ಕೋವ್ಯಾಕ್ಸೀನ್ (ಭಾರತ ಬಯೋಟೆಕ್) ಲಸಿಕೆಗಳಿಗೆ ತುರ್ತು ಬಳಕೆಗೆಅನುಮತಿ ನೀಡಲಾಯಿತು. ಆಸ್ಟ್ರಾಜೆನಿಕ್ ಲಸಿಕೆಗೆ ಆಗಲೇ ಬ್ರಿಟನ್ ಕೂಡ ತನ್ನ ಒಪ್ಪಿಗೆ ನೀಡಿತ್ತು. ಆದರೆ ನಮ್ಮ ನೆಲದ ಸಿದ್ಧವಾದ ಮೂರನೇ ಹಂತದ ಕ್ಲಿನಿಕಲ್ ಟ್ರೈಯಲ್ ದತ್ತಾಂಶವಿಲ್ಲದೆಯೇ ಕೋವ್ಯಾಕ್ಸೀನ್ ಲಸಿಕೆಗೆ ಆತುರದಲ್ಲಿ ಒಪ್ಪಿಗೆ ಸೂಚಿಸಲಾಯಿತು.
ವಿರೋಧಿ ಮಿತ್ರರು ಅದನ್ನೇ ಅಸ್ತವಾಗಿ ಬಳಸಿಕೊಂಡು ಜನರಲ್ಲಿ ಅನುಮಾನದ ಬೀಜ ಬಿತ್ತಿದರು. ಅನುಮಾನಂ ಪೆದ್ದ ರೋಗಂ!ಎಂಬ ಮಾತಿನಂತೆ ಜನರು ಮೊದಲ ಹಂತದಲ್ಲಿ ಹಿಂದೇಟು ಹಾಕಲು ಇದೂ ಒಂದು ಕಾರಣವೇ. ಇಲ್ಲಿ ಯಾರ ಒಬ್ಬರನ್ನು ದೂರುವುದು ಕಷ್ಟ. ಆದರೆ ಅದು ರಾಜಕೀಯ ಮೇಲಾಟವಾಗಿರದೆ, ವಿಜ್ಞಾನಿಗಳ ಕಾದಾಟ ಆಗಿದ್ದರೆ ಜನತೆ ಗೆಲ್ಲುತ್ತಿತ್ತು. ಕೊನೆಗೆಮಾರ್ಚ್‌ನಲ್ಲಿ ಬಿಡುಗಡೆಗೊಳಿಸಿದ ಅಂಕಿ ಅಂಶಗಳ ಪ್ರಕಾರ ಕೋವ್ಯಾಕ್ಸೀನ್ ಶೇ.80ಕ್ಕೂ ಹೆಚ್ಚು ದಕ್ಷತೆ ಹೊಂದಿದ್ದು ಕಂಡು ಬಂತು, ಅದು ಸ್ವಾಗತಾರ್ಹವೇ.
ಆದರೆ ಅದು ಶೇ.50ಕ್ಕಿಂತ ಕಡಿಮೆ ಇದ್ದಿದ್ದರೆ ಹೊಣೆ ಕಂಪೆನಿಯದ್ದೇ? ಸರಕಾರದ್ದೇ? ಉತ್ತರ ಹೇಳುವುದು ಕಷ್ಟ. ಲಸಿಕೆ ಬಂದ ಮೊದ ಮೊದಲು ಭಾರತ್ ಬಯೋಟೆಕ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್‌ಗಳು ತಮ್ಮಲ್ಲಿಯೇ ಕಚ್ಚಾಡಿದವು. ಒಬ್ಬರು ಇನ್ನೊಬ್ಬರಿಗೆ ನೀರು ಹಾಕಿ ಚುಚ್ಚುತ್ತಿದ್ದಾರೆ ಎಂದು ಮೂದಲಿಸಿದರೆ, ಇನ್ನೊಬ್ಬರು ಲಸಿಕೆಯ ಅಡ್ಡಪರಿಣಾಮವನ್ನು ಮುಚ್ಚಿಡಲಾಗಿದೆ ಎಂದು ಆಪಾದಿಸಿದರು. ಅಂತೂ ಕೊನೆಯಲ್ಲಿ ಯಾರು ತೇಪೆ ಹಾಕಿದರೋ ಗೊತ್ತಿಲ್ಲ, ಒಟ್ಟಿನಲ್ಲಿ ಬೇರೆಯವರಯನ್ನು ನೋಡಿ ಊಟಮಾಡುವ ಕೆಲಸಕ್ಕೆ ವಿರಾಮ ದೊರಕಿತು.
ಅಷ್ಟಾದರೂ ವಿದೇಶಿ ಲಸಿಕೆಗಳನ್ನು ಆಗಾಗ ನಮ್ಮಲ್ಲಿಯ ಕಂಪನಿಗಳು ದೂರುತ್ತಲೇ ಬಂದಿವೆ. ಬಯೋ-ಎನ್-ಟೆಕ್ ಫೈಜರ್ ಲಸಿಕೆ ಮೊದಲು ಮಾರುಕಟ್ಟೆ ತಲುಪಲಿದೆ ಎಂದು ಖಚಿತವಾದಾಗ, ನಮ್ಮಲ್ಲಿಯ ದೊಡ್ಡ ಲಸಿಕೆಯ ಉತ್ಪಾದನೆಯ ಸಂಸ್ಥೆಯ ಸಿಇಒ ಒಬ್ಬರು ಹೀಗೆ ಟ್ವೀಟ್ ಮಾಡಿದ್ದರು. ಒಳ್ಳೆಯ ಲಸಿಕೆ ಎಂಬುದು1) ಸುರಕ್ಷಿತವಾದದ್ದು ಅಥವಾ ಅಡ್ಡಪರಿಣಾಮ ಇಲ್ಲದೇ ಹೋದದ್ದು 2) ರೋಗ ನಿರೋಧಕ ಅಂಶ ಅಂತ್ಯತ ಜಾಸ್ತಿ ಇದ್ದದ್ದು3) ಸಂಗ್ರಹ ಮತ್ತು ಸಾಗಣೆಯನ್ನು ಸಾಧ್ಯವಿರುವತಾಪಮಾನದಲ್ಲಿ ಮಾಡಲು ಅನುವು ಮಾಡಿಕೊಟ್ಟಿದ್ದು4) ಎಲ್ಲರಿಗೂ ಕೈಗೆ ಎಟಕುವ ದರಕ್ಕೆ ಸಿಗುವಂತಹದ್ದು. ಈ ಟ್ವೀಟ್‌ನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.
ಆದರೆ ಮುಂದೆ ಭಾರತವು ಲಸಿಕೆಯ ಅನುಮೋದನೆಗೆ ತೆಗೆದುಕೊಂಡ ನಿಲುವುಗಳಿಗೆ ಈ ನಿಯಮಾವಳಿಗಳು ಭಾಷ್ಯವಾದವು ಎಂಬುದೂ ಸತ್ಯ. ಕೋವ್ಯಾಕ್ಸೀನ್ ಲಸಿಕೆಗೆ ಅತ್ಯಂತ ಅವಸರದಲ್ಲಿ ಅನುಮತಿ ನೀಡಿದ ಇಂಡಿಯನ್ ಕೌನ್ಸಿಲ್ ಆಫ್ಮೆಡಿಕಲ್ ರಿಸರ್ಚ್ ಸಂಸ್ಥೆ, ಬಯೋ-ಎನ್-ಟೆಕ್ ಫೈಜರ್ ಕಂಪನಿ ಎಲ್ಲ ಕ್ಲಿನಿಕಲ್ ಟ್ರೈಯಲ್‌ನ ಮಾಹಿತಿಯೊಂದಿಗೆ ತನ್ನ ಲಸಿಕೆಗೆ ಭಾರತದಲ್ಲಿ ಬಳಕೆಗೆ ಅನುಮತಿ ಕೋರಿದಾಗ ಸಾಧ್ಯವಿಲ್ಲ ಎಂದಿತು.
ಇದಕ್ಕೆ ಸರಿಯಾದ ವೈಜ್ಞಾನಿಕ ಕಾರಣವನ್ನು  ಐಸಿಎಂಆರ್ ಇನ್ನೂ ನೀಡಲಿಲ್ಲ ಎಂಬುದನ್ನು ಗಮಸಿಬೇಕು. ಮೊದಲು ಭಾರತೀಯರ ಮೇಲೆ ಲಸಿಕೆ ಪ್ರಯೋಗದ ದತ್ತಾಂಶಗಳಿಲ್ಲ, ಆಮೇಲೆ –70ಕೆಸಿ ತಾಪಮಾನದಲ್ಲಿ ಲಸಿಕೆಯನ್ನು ಉಳಿಯುವಂತೆನೋಡಿಕೊಳ್ಳುವುದು ಕಷ್ಟ, ಭಾರತೀಯರ ಲಸಿಕಾ ಪ್ರಯೋಗದ ವಿವರಗಳನ್ನು ಕಂಪನಿ ಕೇಳುತ್ತಿದೆ, ಹೊಸ ತಂತ್ರಜ್ಞಾನ ಇನ್ನೂ ಪಕ್ವ ವಾಗಿಲ್ಲ, ಲಸಿಕೆಯಿಂದ ಅಡ್ಡ ಪರಿಣಾಮಗಳಿವೆ, ಎಂಬಅಡಾ-ಪಡಾಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದವು.
ಇಂದಿಗೆ ಜಗತ್ತಿನ60ಕ್ಕೂ ಹೆಚ್ಚು ದೇಶಗಳಲ್ಲಿ ಅನುಮತಿ ಸಿಕ್ಕಿರುವ ಲಸಿಕೆಗೆ ಭಾರತ ಕಣ್ಣು ಮುಚ್ಚಿ ಕುಳಿತಿರುವುದು ಸಾಂದರ್ಭಿಕಲೋಪವಾಗಿರಲು ಸಾಧ್ಯವಿಲ್ಲ. ಕಾಣದ ಕೈಗಳು ಕೆಲಸ ಮಾಡಿರಲೇಬೇಕು ಎಂಬುದು ನನ್ನ ನಿಲುವು. ಇದೇ ದೃಷ್ಟಿಯಲ್ಲಿ, ಬಯೋ-ಎನ್ ಟೆಕ್ ಲಸಿಕೆಯ ಮೇಲಿನ ಕೆಲವು ಆರೋಪಗಳನ್ನು ವಿಶ್ಲೇಷಿಸುವ ಕೆಲಸ ಮಾಡಿದ್ದೇನೆ. ಮೊದಲ ಅನುಮತಿ ವೇಳೆ –೭೦ಕೆಸಿ ತಾಪಮಾನದಲ್ಲಿ ಸಂಗ್ರಹಣೆ ಮತ್ತು ಸಾಗಣೆ ಮಾಡಬೇಕು ಎಂದು ಕಂಪನಿಯೇ ದೃಢಪಡಿಸಿತ್ತು.
ಮಾಮೂಲಿ ಶೈತ್ಯಾಗಾರಗಳಲ್ಲಿ-70ಕೆಸಿ ಲಸಿಕೆಗಳ ನಿರ್ವಹಣೆ ಭಾರತದಲ್ಲಿ ಕಷ್ಟವೇ. ಆದರೆ ಸಾಧ್ಯವಿಲ್ಲದ್ದು ಅಲ್ಲ, ಅಷ್ಟಕ್ಕೂ ಲಸಿಕಾ ಕೇಂದ್ರಗಳಿಗೆ ಸರಿಯಾದ ರೀತಿಯಲ್ಲಿ ಲಸಿಕೆ ತಲುಪಿಸುವುದು ಕಂಪನಿಯ ಜವಾಬ್ದಾರಿಯೇ ಹೊರತು ಭಾರತ ಸರಕಾರದ್ದಲ್ಲ.  ಜತೆಗೆ ಅಮೆರಿಕದ ಎಫ್ಡಿಎ ಮತ್ತು ಯೂರೋಪಿನ ಮೆಡಿಕಲ್ ಏಜನ್ಸಿಗಳು ಈಗ ಪ್ರಸ್ತುತ ಫೈಜರ್ ಲಸಿಕೆಗೆ25ಕೆಸಿ ತಾಪಮಾನದಲ್ಲಿ ಸಂಗ್ರಹಕ್ಕೆ ಅನುಮತಿಯನ್ನೂ ನೀಡಿದೆ. ಮೊನ್ನೆ ಎಫ್ಡಿಎಯ ಸುತ್ತೋಲೆಯ ಪ್ರಕಾರ ಎಲ್ಲ ಲಸಿಕೆಯಂತೆಯೇ2-7ಕೆಸಿ ತಾಪಮಾನದಲ್ಲಿ ಕೂಡ ಲಸಿಕೆ ಶೇಖರಿಸಬಹುದು ಎಂಬುದು ದಾಖಲೆಯ ಮೂಲಕ ಸಾಬೀತುಪಡಿಸಿದೆ.
ಅಂದರೆ ಮಾಮೂಲಿ ರೆಫ್ರಿಜಿರೇಟರ್‌ಗಳಲ್ಲಿಯೂ ಲಸಿಕೆ ಸಂಗ್ರಹಣೆ, ಸಾಗಣೆ ಮಾಡಬಹುದು. ಇಲ್ಲಿಗೆ ತಾಪಮಾನದ ವಾದ ತಣ್ಣಗಾಗಿ ರೆಫ್ರಿಜಿರೇಟರ್ ತಲುಪುತ್ತದೆ.
ದುಬಾರಿ ಎಂದು ಕೂರಲಾಗದು
ಸರಿಞ್ಕಘೆಅಲಸಿಕೆ ದುಬಾರಿಯೇ ಹೌದು. ಮೊಡರ್ನಾ ಮತ್ತು ಫೈಜರ್ ಕಂಪನಿಗಳು ಒಂದೊಂದು ಸರಕಾರಕ್ಕೆ ಒಂದೊಂದು ಬೆಲೆಗೆ ತಮ್ಮ ಲಸಿಕೆಯನ್ನು ಮಾರಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ ಎರಡು ಲಸಿಕೆಗಳಿಗೆ ಸರಾಸರಿ ಮೂರು ಸಾವಿರ ರುಪಾಯಿಗಳು ಎಂದು ಅಂದಾಜಿಸಬಹುದು.
ನಮ್ಮಲ್ಲಿಯೇ ಉತ್ಪಾದಿಸಲಾದ ಲಸಿಕೆಗೆ ಹೋಲಿಸಿದರೆ ಹತ್ತು ಪಟ್ಟು ದುಬಾರಿಯೇ ಸರಿ. ನಮ್ಮ ಸರಕಾರಕ್ಕೂ ಅದು ಭಾರಿಹೊರೆಯೇ ಆಗುತಿತ್ತು. ಆದರೆ ಎಲ್ಲವನ್ನೂ ಸರಕಾರ ಉಚಿತವಾಗಿ ಕೊಡಬೇಕು ಎನ್ನುವ ನಿಯಮ ಇಲ್ಲ ಅಲ್ಲವೇ. ಈ ಲಸಿಕೆಯನ್ನು ಖಾಸಗಿ ಆಸ್ಪತ್ರೆ, ಔಷಧ ಕೇಂದ್ರಗಳಿಗೆ ಒದಗಿಸಿ ಮತ್ತೊಂದು ಲಸಿಕೆಯ ಹಾದಿಗೆ ಅವಕಾಶ ಮಾಡಿಕೊಟ್ಟಿದ್ದರೆ ಉಳಿದ ಲಸಿಕೆಗಳು ಇನ್ನೂ ಹೆಚ್ಚಿನ ಜನರನ್ನು, ಅದೂ ಬಡವರನ್ನು ತಲುಪುತ್ತಿತ್ತು ಅಲ್ಲವೇ? ನಾವು ಈಗ ಇದರ ಬಗ್ಗೆ ಎಚ್ಚೆತ್ತುಕೊಳ್ಳ ತೊಡಗಿದ್ದೇವೆ.
ನೆನಪಿರಲಿ ಈಗ ಲಸಿಕೆ ಬೇಕು ಅಂದರೆ ಮುಂದಿನ ವರ್ಷದವರೆಗೆ ಫೈಜರ್ ಭಾರತಕ್ಕೆ ಲಸಿಕೆಯನ್ನು ಒದಗಿಸಿವುವುದು ಕಷ್ಟ ಸಾಧ್ಯವೇ ಸರಿ. ಕೆಲವು ಮಾಹಿತಿಗಳ ಪ್ರಕಾರ ಫೈಜರ್ ಕಂಪನಿಯ ಜೂನ್ 2022ರ ವರೆಗಿನ ಲಸಿಕೆಗಳೆಲ್ಲವೂ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಹೋಗಿವೆ. ಈಗಲೇ ನಮಗೆ ಬೇಕು ಅಂದರೂ ಸಿಗುವುದು ಆನಂತರವೇ.
ಫೈಜರ್ ಲಸಿಕೆಗೆ ಮುಂಚೆಯೇ ಒಪ್ಪಿಗೆ ಸಿಕ್ಕಿತ್ತು ಎಂದು ಒಮ್ಮೆ ಅಂದುಕೊಳ್ಳಿ, ಈ ವರ್ಷ ಕೇವಲ10ಲಕ್ಷ ಡೋಸ್ ಸಿಕ್ಕಿತ್ತು ಅಂದುಕೊಳ್ಳೋಣ. ಅಷ್ಟು ಜನ ನಮ್ಮಲ್ಲಿ ತಯಾರಾದ ಲಸಿಕೆಗೆ ಸರತಿ ಸಾಲಿನಲ್ಲಿ ಜೋತು ಬೀಳುವ ಒತ್ತಡ ಕಡಿಮೆ ಆಗುತಿತ್ತು ಅಲ್ಲವೇ? ಅವರೇ ದುಡ್ಡು ಕೊಟ್ಟು ಕೊಂಡುಕೊಳ್ಳುತ್ತಿದ್ದರು. ಅನುಮತಿ ನೀಡಿದ್ದರ ಫಲವಾಗಿ, ಹತ್ತು ಲಕ್ಷ ಜನರಿಗೆ ಮೂನ್ನೂರು ರುಪಾಯಿ ಲೆಕ್ಕದಲ್ಲಿ ನಮ್ಮಲ್ಲಿಯ ಕೋವಿಡ್ ಲಸಿಕೆ ವಿತರಿಸಲು ಬೇಕಾಗುವ30ಕೋಟಿ ರುಪಾಯಿ ಸರಕಾರದ ಬೊಕ್ಕಸಕ್ಕೆ ಉಳಿತಾಯವೂ ಆಗುತ್ತಿತ್ತು.
ಎಲ್ಲರೂ ಕೊಟ್ಟಿದ್ದಾರೆಮತ್ತೊಂದು ಆಪಾದನೆ ಎಂದರೆ ನಮ್ಮ ನಾಗರಿಕರ ಅಂಕಿ ಅಂಶಗಳನ್ನು ಫೈಜರ್ ಕೇಳುತಿತ್ತು ಎಂಬುದು. ಅವರಿಗೆಲ್ಲ ನನ್ನ ಉತ್ತರ ಒಂದೇ, ಇಸ್ರೇಲ್ ಅಂತಹ ದೇಶವೇ ಒಪ್ಪಿ ಲಸಿಕೆಗೆ ದಾರಿ ಮಾಡಿಕೊಟ್ಟಿರುವಾಗ, ನಮ್ಮದು ಯಾವ ಲೆಕ್ಕ.
ಫೈಜರ್/ಬಯೋ-ಎನ್ -ಟೆಕ್ ಅವರ ಲಸಿಕೆ ತೆಗೆದುಕೊಂಡರವ ವಯಸ್ಸು, ಹಿಂದಿನ ಖಾಯಿಲೆಗಳು, ಮುಂದೆ ಕೋವಿಡ್ಸೋಕಿತರಾದರೆ ಎಂಬ ಕೆಲವು ದತ್ತಾಂಶಗಳನ್ನು ಕೇಳಿದ್ದು ನಿಜವೇ ಹೌದು; ಆದರೆ ಅದು ಮುಂದಿನ ಅಧ್ಯಯನ ದೃಷ್ಟಿಯಿಂದ. ಅದೂ ಹೊಸ ತಂತ್ರಜ್ಞಾನದಿಂದ ಹೊರ ಹೊಮ್ಮಿದ ಲಸಿಕೆಯ ಬಗ್ಗೆ ಅಷ್ಟಾದರೂ ಅಧ್ಯಯನ ಬೇಕು ಅಲ್ಲವೇ? ಅಂತಹದತ್ತಾಂಶಗಳನ್ನು ಮೂಲ ರೂಪದಲ್ಲಿಯೇ ಹಂಚಿಕೊಳ್ಳಬೇಕು ಅಂತ ಇರಲಿಲ್ಲ. ಅವರು ಚಂದ್ರಶೇಖರನಿಗೆ ಕೋಲೆ ಬಸವ ಅಂತ ಹೆಸರು ಬದಲಿಸಿ ಕೊಟ್ಟರೂ (ಕೋಡಿಂಗ್ ಮಾಡಿ) ತೆಗೆದುಕೊಳ್ಳುತ್ತಿದ್ದರು.
ಅವರಿಗೆ ವೈದ್ಯಕೀಯ ದಾಖಲೆಗಳು ಮಹತ್ವದ್ದೇ ಹೊರತು, ಅವನು ತಿಮ್ಮಪ್ಪನೇ! ಅಥವಾ ರಾಮಯ್ಯನೇ ! ಎಂಬುದು ಅಲ್ಲ. ಈಗೀಗ, ಕೆಲವರು ಫೈಜರ್ ಲಸಿಕೆ ಅಡ್ಡಪರಿಣಾಮ ಬೀರುತ್ತದೆ ಎಂದು ಹೊಸದಾಗಿ ಸಾರುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು. ರಕ್ತ ಹೆಪ್ಪುಗಟ್ಟಿವಿಕೆಯ ಅಡ್ಡಪರಿಣಾಮ ಕೇಳಿಬಂದ ಹಿನ್ನೆಲೆಯಲ್ಲಿ ಆಸ್ಟ್ರಾಜೆನಿಕ್ ಲಸಿಕೆಯನ್ನು ಹಲವು ಯೂರೋಪಿನ ದೇಶಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದವು.
ನಮ್ಮಲ್ಲಿಯ ಪತ್ರಿಕೆಗಳೂ ಅದರ ಬಗ್ಗೆ ವರದಿ ಮಾಡಿದ್ದವು. ಅಷ್ಟೇ ಅಲ್ಲದೇ ಮೊನ್ನೆ ಮೊನ್ನೆ ಐಸಿಎಂಆರ್ ನಮ್ಮಲ್ಲಿಯೂ ಇಂತಹ ಘಟನೆ ನಡೆದಿವೆ ಎಂದು ಒಪ್ಪಿಕೊಂಡಿದೆ. ಆದರೆ ಫೈಜರ್ ಅಥವಾ ಮೊಡರ್ನಾ ಲಸಿಕೆಗಳಿಂದ ಯಾವುದೇ ಅಹಿತಕರ ಘಟನೆ ನಡೆದದ್ದು ನನ್ನ ಗಮನಕ್ಕೆ ಬಂದಿಲ್ಲ.
ಮುಗಿಸುವ ಮುನ್ನ ಕೆಲವು ಅಂಶಗಳನ್ನು ಸ್ಪಷ್ಟಪಡಿಸುತ್ತೇನೆ. ನಾನು ಯಾವುದೇ ಲಸಿಕಾ ಕಂಪನಿಯ ಪರವಾಗಿ ಕೆಲಸ ಮಾಡುತ್ತಿಲ್ಲ. ಅಂಕಣದ ಉದ್ದೇಶವೂ ಅದಲ್ಲ. ಜಗತ್ತಿಗೆ ಬೆಳಕಿನ ವೇಗದಲ್ಲಿ ಬಂದ ಲಸಿಕೆ ಭಾರತದ ಬಾಗಿಲಲ್ಲಿ ಎಡವಿ ಬಿತ್ತು.ಎಡವಿದ್ದು ವೈಜ್ಞಾನಿಕವೋ, ರಾಜಕೀಯವೋ ಎಂದು ವಿಶ್ಲೇಷಿಸಲು ಇಷ್ಟು ಹೇಳಬೇಕಾಯಿತು ಅಷ್ಟೇ.
ನನಗೆ ಆಸಕ್ತಿ ಇರುವುದು ವಿಜ್ಞಾನದಲ್ಲಿ. ಲಸಿಕೆಯ ಅಭಿವೃದ್ಧಿಯಲ್ಲಿ. (ವಿ)ಜ್ಞಾನದ ಪರಿಧಿ, ದೇಶ, ಭಾಷೆಗಳ ಪರಿಧಿಯನ್ನು ಮೀರಿ ಉತ್ತುಂಗ ತಲುಪಿದ್ದು ಎದ್ದು ಕಾಣುತ್ತದೆ. ಟರ್ಕಿಶ್ ಮೂಲದ ದಂಪತಿಗಳು ಜರ್ಮನಿಯಲ್ಲಿ ಲಸಿಕೆ ಕಂಡುಹಿಡಿಯುತ್ತಾರೆ. ಅದನ್ನು ವಿಶ್ವವ್ಯಾಪಿ ಉತ್ಪಾದನೆಗೆ ಅಮೆರಿಕದ ಕಂಪನಿಯ ಗ್ರೀಕ್ ಮೂಲದಸಿಇಒಸಹಾಯ ಕೇಳುತ್ತಾರೆ. ಪರವಾನಗಿ ಸಿಕ್ಕ ಮೊದಲ ಲಸಿಕೆಗಳು ಬ್ರಿಟನ್ ಹಿರಿಯ ನಾಗರಿಕರ ತೋಳಲ್ಲಿ ಬಂದಿಯಾಗುತ್ತವೆ. ಎಲ್ಲಿಯ ಟರ್ಕಿ, ಎಲ್ಲಿಯ ಗ್ರೀಸ್, ಎಲ್ಲಿಯ ಜರ್ಮನಿ, ಎಲ್ಲಿಯ ಅಮೆರಿಕ, ಎಲ್ಲಿಯ ಬ್ರಿಟನ್! ಒಮ್ಮೆ ಯೋಚಿಸಿ ನೋಡಿ ಭಾರತ ಮಾತ್ರ ತಾನೇ ಬೇಲಿ ಹಾಕಿಕೊಂಡಿದೆ ಅನ್ನಿಸುವುದಿಲ್ಲವೇ?
ಕೊನೆಮಾತು:ವಿಜ್ಞಾನಕ್ಕೆ ರಾಜಕೀಯ ಬೆರೆಸಿದರೆ (ಲಸಿಕೆಯ) ಅಡ್ಡಪರಿಣಾಮ ಸಮಾಜದ ಮೇಲೆ!
ಞ್ಕಘೆಅಲಸಿಕೆ ದುಬಾರಿಯೇ ಹೌದು. ಮೊಡರ್ನಾ ಮತ್ತು ಫೈಜರ್ ಕಂಪನಿಗಳು ಒಂದೊಂದು ಸರಕಾರಕ್ಕೆ ಒಂದೊಂದು ಬೆಲೆಗೆ ತಮ್ಮ ಲಸಿಕೆಯನ್ನು ಮಾರಿವೆ. ಲಭ್ಯವಿರುವ ಮಾಹಿತಿ ಪ್ರಕಾರ ಎರಡು ಲಸಿಕೆಗೆ ಸರಾಸರಿ ಮೂರು ಸಾವಿರ ರುಪಾಯಿಗಳು ಎಂದು ಅಂದಾಜಿಸಬಹುದು. ನಮ್ಮಲ್ಲಿಯೇ ಉತ್ಪಾದಿಸಲಾದ ಲಸಿಕೆಗೆ ಹೋಲಿಸಿದರೆ10ಪಟ್ಟು ದುಬಾರಿಯೇ ಸರಿ.
ನಮ್ಮ ಸರಕಾರಕ್ಕೂ ಅದು ಭಾರಿ ಹೊರೆಯೇ ಆಗುತಿತ್ತು. ಆದರೆ ಎಲ್ಲವನ್ನೂ ಸರಕಾರ ಉಚಿತವಾಗಿ ಕೊಡಬೇಕು ಎನ್ನುವ ನಿಯಮ ಇಲ್ಲ ಅಲ್ಲವೇ. ಈ ಲಸಿಕೆಯನ್ನು ಖಾಸಗಿ ಆಸ್ಪತ್ರೆ, ಔಷಧ ಕೇಂದ್ರಗಳಿಗೆ ಒದಗಿಸಿ ಮತ್ತೊಂದು ಲಸಿಕೆಯ ಹಾದಿಗೆ ಅವಕಾಶ ಮಾಡಿಕೊಟ್ಟಿದ್ದರೆ ಉಳಿದ ಲಸಿಕೆಗಳು ಇನ್ನೂ ಹೆಚ್ಚಿನ ಜನರನ್ನು, ಅದೂ ಬಡವರನ್ನು ತಲುಪುತ್ತಿತ್ತು ಅಲ್ಲವೇ?ನಾವು ಈಗ ಇದರ ಬಗ್ಗೆ ಎಚ್ಚೆತ್ತುಕೊಳ್ಳತೊಡಗಿದ್ದೇವೆ.
ನೆನಪಿರಲಿ ಈಗ ಲಸಿಕೆ ಬೇಕು ಅಂದರೆ ಮುಂದಿನ ವರ್ಷದವರೆಗೆ ಫೈಜರ್ ಭಾರತಕ್ಕೆ ಲಸಿಕೆಯನ್ನು ಒದಗಿಸಿವುದು ಕಷ್ಟ ಸಾಧ್ಯವೇ ಸರಿ. ಕೆಲವು ಮಾಹಿತಿಗಳ ಪ್ರಕಾರ ಫೈಜರ್ ಕಂಪನಿಯ ಜೂನ್ 2022ರ ವರೆಗಿನ ಲಸಿಕೆಗಳೆಲ್ಲವೂ ಮಾರುಕಟ್ಟೆಯಲ್ಲಿ ಬಿಕರಿಯಾಗಿ ಹೋಗಿವೆ. ಈಗಲೇ ನಮಗೆ ಬೇಕು ಅಂದರೂ ಸಿಗುವುದು ಆನಂತರವೇ.