ಸಾವರ್ಕರ್‌ ಕುರಿತ ಸತ್ಯ ಅರಿವಾಗುವುದೆಂದು ?
ಪ್ರಚಲಿತ
ಪ್ರಶಾಂತ ಕುಮಾರ್‌, ಲಂಡನ್‌
ಸಾವರ್ಕರ್ ಒಬ್ಬ ಹೇಡಿ ಹಾಗೂ ಬ್ರಿಟಿಷರಿಗೆ ಕ್ಷಮೆ ಅರ್ಜಿ ಬರೆದು ಅವರೊಂದಿಗೆ ಶಾಮೀಲಾರಾಗಿದ್ದರು..!! ಇದು ಸಾವರ್ಕರ್ವಿರೋಧಿಗಳು ಸಾವರ್ಕರ್ ಬಗ್ಗೆ ಕಂಡುಕಂಡಲ್ಲಿ ಹೇಳಿ, ಅವರನ್ನು ತಪ್ಪಾದ ಕಾರಣಗಳಿಗೆ ಸುದ್ದಿಯಲ್ಲಿರಿಸುವ ರೀತಿ.
ಯಾಕೋ ಸಾವರ್ಕರ್ ಪದೇಪದೆ ನೆನಪಾಗುತ್ತಿರುತ್ತಾರೆ. ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ವಿಷಯ ಹೊರಗೆಳೆದು ಪುನಃ ವಾರ್ ರೂಮ್‌ಗೆ ಹೋಗಿ ಕ್ಷಮೆ ಕೇಳಿದರು ಎಂದಾಗ, ಮೊನ್ನೆ ಬಾಬಾ ರಾಮ್‌ದೇವ್ ಅಲೋಪತಿ ಔಷಧದ ಬಗ್ಗೆ ಮಾತನಾಡಿ ಆಮೇಲೆ ಕ್ಷಮೆ ಕೇಳಿದರು ಎಂದಾಗ ಬಹಳಷ್ಟು ಬುದ್ದಿ ಜೀವಿಗಳು, ಪ್ರಗತಿಪರರು, ಅಸಂಬದ್ಧವಾಗಿ ಮಾತನಾಡಿ ಹಾಸ್ಯ ಎನ್ನುವ ಸ್ಟಾಂಡ್-ಅಪ್ ಕಾಮಿಡಿಯನ್‌ಗಳು ಸಾವರ್ಕರ್‌ರನ್ನು ನೆನಪಿಸಿಕೊಂಡು ವಿಷಕಾರುತ್ತಿರುತ್ತಾರೆ.
ಬಾಲಿವುಡ್ ಸೆಲೆಬ್ರೆಟಿಗಳ ಟ್ವೀಟ್‌ನಿಂದ ಹಿಡಿದು ರಾಹುಲ್ ಗಾಂಧಿ ಭಾಷಣದವರೆಗೂ ಸಾವರ್ಕರ್ ಹಾಗೂ ಅವರು ಬ್ರಿಟಿಷರನ್ನು ಕೇಳಿದರು ಎನ್ನಲಾದ ಕ್ಷಮೆಯ ವಿಚಾರ ಪ್ರಸ್ತಾಪವಾಗುತ್ತಲೇ ಇರುತ್ತದೆ. ಸರಿ, ಸಾವರ್ಕರ್ ರವರ ವಿರೋಧಿಗಳು, ಬಹಳವಾಗಿ ಬಳಸುವ ವ್ಯಾಖ್ಯಾನಗಳಲ್ಲಿ ಬ್ರಿಟಿಷರ ಕ್ಷಮೆ ಕೇಳಿದರು, ಬ್ರಿಟಿಷರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದರು ಎಂಬುದರಿಂದಹಿಡಿದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲಿಲ್ಲ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡಿರಲಿಲ್ಲ, ಚಿತ್ರಗುಪ್ತಎಂಬ ಹೆಸರಿನಲ್ಲಿ ತಮ್ಮ ಬಗ್ಗೆ ತಾವೇ ಬರೆದುಕೊಂಡರು, ಭಾರತ ವಿಭಜನೆಯ ಪ್ರತಿಪಾದಕರಾಗಿದ್ದರು.
ಗಾಂಧಿ ಹತ್ಯೆಯ ಆರೋಪ, ಕಪೂರ್ ಕಮಿಷನ್ ಇತ್ಯಾದಿಗಳನ್ನು ವಿಷಯಗಳ ಪ್ರಮುಖವಾದವು. ಏನಿದು ಕ್ಷಮೆಯ ವಿಚಾರ: ಇದರ ಕಥೆ ಎಎಂಟಿ ಜಾಕ್ಸನ್ ಹತ್ಯೆಯಿಂದ ಶುರುವಾಗುತ್ತದೆ. ಅನಂತ ಲಕ್ಷಣ ಕಾನ್ಹೇರೆ, ಜಾಕ್ಸನ್ ಹತ್ಯೆ ಮಾಡಿದ ನಂತರ ಬ್ರಿಟಿಷ್ ಅಧಿಕಾರ ವರ್ಗದಲ್ಲಿ ನಡುಕ ಶುರುವಾಗಿತ್ತು. ಭಾರತೀಯರ ಕೈಗೆ ಬ್ರೌನಿಂಗ್ ಪಿಸ್ತೂಲ್ ಸಿಕ್ಕಿದ್ದು ಹೇಗೆ ಎಂಬ ವಿಚಾರ ಬ್ರಿಟಿಷ್ ವಲಯದಲ್ಲಿ ಅಲ ಕಲ ಸೃಷ್ಟಿಸಿತ್ತು.
ಅಲ್ಲಿಂದ ಶುರುವಾದ ಬ್ರಿಟಿಷ್‌ರ ಕಾರ್ಯಚರಣೆ, ಸ್ಕಾಟ್‌ಲ್ಯಾಂಡ್ ಯಾರ್ಡಿನ ತ್ವರಿತವಾದ ತನಿಖೆಯ ಮೂಲಕ ಭಾರತಕ್ಕೆ ಗುಟ್ಟಾಗಿ ಬ್ರೌನಿಂಗ್ ಪಿಸ್ತೂಲ್ ರವಾನಿಸಿದ್ದ ಸಾವರ್ಕರ್ ಹಾಗು ಇತರೆ ಕ್ರಾಂತಿಕಾರಿ ದೇಶಭಕ್ತರು ವಾಸವಾಗಿದ್ದ ಲಂಡನ್‌ನ ಇಂಡಿಯಾ ಹೌಸ್ ಸುತ್ತುವರೆದಿತ್ತು. ಹೇಳಿಕೇಳಿ ಸಾವರ್ಕರ್ ಮೇಲೆ ಬ್ರಿಟಿಷರ ಹದ್ದುಗಣ್ಣಿಟ್ಟಿದ್ದರು.
ಇದರ ವಾಸನೆ ಮೊದಲೇ ತಿಳಿದಿದ್ದ ಬಹುತೇಕ ಎಲ್ಲಾ ಕ್ರಾಂತಿಕಾರಿಗಳು ಬ್ರಿಟನ್ ಹಾಗೂ ಯೂರೋಪಿನ ಹಲವಾರು ರಹಸ್ಯ ಸ್ಥಳಗಳಲ್ಲಿ ಭೂಗತರಾಗಿದ್ದರು. ಶ್ಯಾಮ್ ಜಿ ಕೃಷ್ಣವರ್ಮ ಮುಂಚೆಯೇ ಲಂಡನ್‌ನಿಂದ ಫ್ರಾನ್ಸ್‌ಗೆತೆರಳಿ ಭೂಗತರಾಗಿದ್ದರಿಂದ, ತಮ್ಮ ಬಹಳಷ್ಟು ಸ್ನೇಹಿತರ ಸಲಹೆ ಮೇರೆಗೆ ಸಾವರ್ಕರ್ ಕೂಡ ಫ್ರಾನ್ಸ್‌ಗೆತೆರಳಿ ಭೂಗತರಾದರು. ಆದರೆ ಅಷ್ಟರಲ್ಲಿ ತಮ್ಮ ಅಣ್ಣಬಾಬಾರಾವ್ ಸಾವರ್ಕರ್ (ಗಣೇಶ್ ಸಾವರ್ಕರ್) ರನ್ನು ಬ್ರಿಟಿಷ್‌ರು ಇದೇ ಪ್ರಕರಣದಲ್ಲಿ ಬಂಧಿಸಿ, ಕಾಲಾಪಾನಿಗೆ ಕಳುಹಿಸಿ ಚಿತ್ರಹಿಂಸೆ ಕೊಡುತ್ತಿದ್ದ ಸುದ್ದಿಯಿಂದ ಸಾವರ್ಕರ್ ವಿಚಲಿತರಾಗಿದ್ದರು.
ಬ್ರಿಟಿಷ್‌ರ ಕಾನೂನು ಓದಿದ್ದ ಸಾವರ್ಕರ್, ಅವರ ಕಾನೂನಿಂದಲೇ ಎದುರಿಸುವ ನಿರ್ಧಾರ ಮಾಡಿ ಲಂಡನ್ ಬಂದಿಳಿಯಲು ಸಜ್ಜಾಗುತ್ತಿದ್ದರು. ಆದಾಗಲೇ ಸಾವರ್ಕರ್‌ರನ್ನು ಬೇಹುಗಾರಿಕೆ ಮಾಡುತ್ತಿದ್ದ ಬ್ರಿಟಿಷ್‌ರಿಗೆ ಸಾವರ್ಕರ್ ಲಂಡನ್‌ಗೆ ಬರುವಸುದ್ದಿ ಮೊದಲೇ ತಲುಪಿತ್ತು. ಅವರನ್ನು ಲಂಡನ್‌ನ ವಿಕ್ಟೋರಿಯ ರೈಲ್ವೆ ನಿಲ್ದಾಣದಲ್ಲಿಯೇ ಬಂಧಿಸಿ, ಇಂಗ್ಲೆಂಡ್‌ನ ಅವರ ಕಾನೂನಿನ ಪ್ರಕಾರ ವಿಚಾರಣೆ ನಡೆಸಿದರೆ, ಸಾವರ್ಕರ್ ಅವರ ಕಾನೂನನ್ನು ಅವರಿಗೆ ಹೇಳಿ, ಬಿಡುಗಡೆ ಹೊಂದುವ ಸಾಧ್ಯತೆ ಇದ್ದಿದ್ದರಿಂದ, ತಕ್ಷಣವೇ ಶದ್ರೋಹ ಅರೋಪ ಹೊರಿಸಿ ಭಾರತಕ್ಕೆ ರವಾನಿಸಿದರು.
ಇದರ ಮಧ್ಯೆ ಸಾವರ್ಕರ್ ಫ್ರಾನ್ಸ್‌ನಲ್ಲಿ ಹಡಗು ನಿಂತಿದ್ದಾಗ ಹಡಗಿನಿಂದ ಹಾರಿ, ತಪ್ಪಿಸಿಕೊಳ್ಳವ ಯತ್ನ ಮಾಡಿ, ಫ್ರಾನ್ಸ್‌ನಪೋಲಿಸರಿಗೆ ಸಿಕ್ಕಿಬಿದ್ದರು. ಈ ಪ್ರಕರಣ, ಅಂದಿಗೆ ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಕ್ಕೇರಿತ್ತು. ಅಲ್ಲಿ ಸಾವರ್ಕರ್ ತಾನು ಭಾರತೀಯ ಪ್ರಜೆ, ಈಗ–ನಲ್ಲಿ ಇರುವುದರಿಂದ ಬ್ರಿಟಿನ್ ತಮ್ಮ ಮೇಲೆ ಹಕ್ಕು ಕಳೆದುಕೊಂಡಿದೆ ಎಂದು ಬಹಳ ಗಟ್ಟಿಯಾಗಿ ವಾದಮಾಡಿದ್ದರು. ಯೂರೋಪ್ ನಲ್ಲಿ ನೆಲೆಸಿದ್ದ ಬಹಳಷ್ಟು ಭಾರತೀಯ ಕ್ರಾಂತಿಕಾರಿಗಳು, ಐರ್ಲಾಂಡ್ ಹಾಗೂ ಇಟಲಿಯ ಕ್ರಾಂತಿಕಾರಿಗಳು, ಅಲ್ಲಿನ ಕಮ್ಯುನಿರು ಸಾವರ್ಕರ್‌ರ ಪರ ದೊಡ್ಡ ಆಂದೊಲನವನ್ನೇ ಮಾಡಿ ಬಿರುಗಾಳಿ ಎಬ್ಬಿಸಿದ್ದರು.
ಆದರೆ ಬ್ರಿಟನ್ ತನ್ನ ಪ್ರಭಾವ ಬೆಳಸಿ,–ಸರಕಾರವನ್ನು ತಮ್ಮ ಪರವಾಗಿ ಮಾಡಿಕೊಂಡು, ಅಂತಾರಾಷ್ಟ್ರೀಯ ನ್ಯಾಯಾಲಯ ದಲ್ಲಿ ಒತ್ತಡ ಹೇರಿ ಸಾವರ್ಕರ್ ರನ್ನು ಭಾರತಕ್ಕೆ ಗಡಿಪಾರು ಮಾಡಲು ನಿರ್ಧಾರ ಮಾಡಿತ್ತು. ಇನ್ನು ಭಾರತಕ್ಕೆ ಬಂದಿಳಿದಸಾವರ್ಕರ್ ರನ್ನು , ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡದೆ, ತನಗೆ ಬೇಕಾದ ನ್ಯಾಯಾಧೀಶರನ್ನು ಹಾಕಿಸಿಕೊಂಡು, ಮೇಲ್ಮನವಿಗೂ ಅವಕಾಶವನ್ನು ಕೊಡದೇ,    ಅಂದರೆ ಒಟ್ಟು50ವರ್ಷಗಳ ಕಾಲಾಪಾನಿ ಶಿಕ್ಷೆಯನ್ನು ನೀಡಿತ್ತು.
ಅಪ್ರತಿಮ ದೇಶಭಕ್ತ, ಕ್ರಾಂತಿಕಾರಿ ವಿನಾಯಕ ದಾಮೋದರ್ ಸಾವರ್ಕರ್ ಬೇರಯದೇ ಜಗತ್ತು ನೊಡಲು ಸಜ್ಜಾಗಬೇಕಾಗಿತ್ತು. ಅಂಡಮಾನಿನ ಕಾಲಾಪಾನಿ ಜೈಲು ಅವರನ್ನು ಸ್ವಾಗತಿಸಲು ಕಾಯುತ್ತಿತ್ತು. ಕಾಲಾಪಾನಿ ಅಕ್ಷರಶಃ ನರಕ!! ನೀವೆ ಕಾಲಾಪಾನಿಯ ಬಗ್ಗೆ ಹೆಚ್ಚುಕಮ್ಮಿ ಗೊತ್ತಿರುತ್ತದೆ ಹಾಗೂ ಕೇಳೇ ಇರುತ್ತೀರಿ. ಸಾವರ್ಕರ್ ಸೇರಿದಂತೆ ಅಲ್ಲೇ ಇದ್ದ ಬೇರೆ ಕೈದಿಗಳಿಗೆ ಕೊಡುತ್ತಿದ್ದ ಚಿತ್ರಹಿಂಸೆ, ಕೈದಿಗಳನ್ನು ಗಾಣದ ಎತ್ತಿನ ತರಹ ದುಡಿಸಿಕೊಳ್ಳುತ್ತಿದ್ದ ರೀತಿ, ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿರುತ್ತಿರಿ!!
ಅಲ್ಲಿ ಗಾಣದಿಂದ ಎಣ್ಣೆ ತೆಗೆಯುವ ಪೂರ್ತಿ ಪ್ರಕ್ರಿಯೆಯಲ್ಲಿ ಎಲ್ಲಾ ಕೈದಿಗಳು ಗೋಣಿಚೀಲದಿಂದ ಮಾಡಿದ ಜೈಲಿನ ಬಟ್ಟೆಗಳನ್ನೇ ಹಾಕಿಕೊಳ್ಳಬೇಕಾಗಿತ್ತು. ಪೋರ್ಟ್ ಬ್ಲೇರ್‌ನ40ಡಿಗ್ರಿ ಬಿಸಿಲಿನ ತಾಪಕ್ಕೆ ಗೋಣಿಚೀಲದಿಂದ ಮಾಡಿದ ಬಟ್ಟೆ ಧರಿಸಿ ದಿನಕ್ಕೆ30ಪೌಂಡ್ (14ಲೀಟರ್) ಎಣ್ಣೆ ತೆಗೆಯಬೇಕೆನ್ನುವ ಸನ್ನಿವೇಶವನ್ನು ಒಮ್ಮೆ ಕಲ್ಪಿಸಿಕೊಳ್ಳಿ!!
ಕೊಡುತ್ತಿದ್ದ ಆಹಾರ ಮನುಷ್ಯರು ತಿನ್ನವಂತೆ ಇರುತ್ತಿರಲಿಲ್ಲ. ಹುಳ ಹುಪ್ಪಟ್ಟೆಗಳು ಇರುವ ಊಟ.. ತಿಂದು ಬೇಧಿಯಾದರೆ, ಶೌಚಾಲಯಕ್ಕೆ ಹೋಗುವಂತಿರಲಿಲ್ಲ.. ಇರುವ೧೦ಚದರದಡಿಯ ಕೊಠಡಿಯ ಶೌಚಕ್ಕೆ ಹೋಗಬೇಕು. ಅದರ ಮಧ್ಯದ ಮಲಗಬೇಕು, ಅಲ್ಲೇ ಊಟ ಮಾಡ ಬೇಕು. ಎಂತಹ ಪರಿಸ್ಥಿತಿ ಇರಬಹುದೆಂದು ಊಹಿಸಿಕೊಳ್ಳಿ!!
ಸಾವರ್ಕರ್ ಅವರನ್ನು ಆರು ತಿಂಗಳುಗಳ ಕಾಲ ಸಾಲಿಟರಿಕಂಫೈನ್‌ಮೆಂಟ್‌ನಲ್ಲಿ ಇಟ್ಟಾಗ, ಆತನಿಗೆ ಯಾವುದೇ ಮನುಷ್ಯರ ಸಂಪರ್ಕವೇ ಇರಲಿಲ್ಲ. ಆತನ ಜೈಲು ಕೊಠಡಿ ಸಣ್ಣ ಕಿಟಕಿ ಮುಖ ಮಾಡುತ್ತಿದ್ದದ್ದು ಕಾಲಪಾನಿಯ ಗಲ್ಲುಶಿಕ್ಷೆ ನೀಡುವ ಸ್ಥಳದ ಕಡೆಗೆ. ಸಾವರ್ಕರ್‌ಗೆ ಸಿಗುತ್ತಿದ್ದ ಒಂದೇ ಒಂದು ಮನುಷ್ಯನ ಸಂಪರ್ಕವೆಂದರೆ, ಅದು ಗಲ್ಲಿಗೇರಿಸಲು ಕರೆದುಕೊಂಡು ಹೋಗು ತ್ತಿದ್ದ ಕೈದಿಗಳ ಚೀರಾಟ, ಕಿರುಚಾಟ ಮಾತ್ರ. ಈ ಚಿತ್ರಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಇಂಧೂ ಭೂಷಣ್ ರಾಯ, ಮಾನಸಿಕ ಸ್ಥಿಮಿತ ಕಳೆದುಕೊಂಡ ಉಸ್ಕರ್ ದತ್ತ್ ತರಹದವರ ಕೂಗು ಇತಿಹಾಸದ ಪುಟಗಳಲ್ಲಿ ಕಳೆದುಹೋಗುವೆ.
ಅಂಡಮಾನಿನ ಹಡ್ಡೋ ದ್ವೀಪದಲ್ಲಿ ಬ್ರಿಟಿಷರು ಆರಂಭಿಸಿದ ಹುಚ್ಚಾಸ್ಪತ್ರೆ, ಅಲ್ಲಿ ಇದ್ದ ಇಂದಿನ ಪೀಳಿಕೆಗೆ ಗೊತ್ತೇ ಇಲ್ಲದ ಬಹುತೇಕ ಕ್ರಾಂತಿಕಾರಿಗಳ ನಿಟ್ಟುಸಿರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅಧ್ಯಯದಲ್ಲಿ ಕಳೆದು ಹೋಗಿವೆ. ಸಾವರ್ಕರ್ ಬರೆಯಲು ಹಾಳೆ ಹಾಗೂ ಪೆನ್ನು ಕೇಳಿದಾಗ, ಜೈಲರ್ ಬ್ಯಾರಿ ನಿರಾಕರಿಸುತ್ತಿದ್ದನು.. ಸಾವರ್ಕರ್ ತಮ್ಮ ಉಗುರುಗಳಿಂದ ಜೈಲಿನ ಗೋಡೆಯ ಮೇಲೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಹಾಗೆ ಬರೆದ ಅದ್ಭುತ ಕಾವ್ಯಗಳು ಕಮಲ, ಸಪ್ತರ್ಷಿ ಮುಂತಾದವುಗಳು. ಅದನ್ನು ಸಹಿಸದ ಬ್ಯಾರಿ ತಿಂಗಳಿಗೊಮ್ಮೆ ಸಾವರ್ಕರ್ ಇದ್ದ ಜೈಲಿನ ಕೋಣೆಗೆ ಸುಣ್ಣ ಹೊಡೆಸಿ ಕ್ರೌರ್ಯ ತೋರಿಸುತ್ತಿದ್ದ. ಬಹಳ ತೀಕ್ಷ್ಣ ನೆನಪಿನ ಶಕ್ತಿ ಇದ್ದ ಸಾವರ್ಕರ್, ಜೈಲಿನಿಂದ ಬಿಡುಗಡೆಯಾದ ಬಳಕ ಕಾಲಪಾನಿಯಲ್ಲಿ ಗೋಡೆಗಳ ಮೇಲೆ ಉಗುರಿನಿಂದ ಬರೆದ ಆರು ಸಾವಿರ ಸಾಲುಗಳ ಕವನಗಳ ಸಂಕಲನ ವನ್ನು ಹೊರತಂದರು!!
ಇದನ್ನು ಮಾನವೀಯ ದೃಷ್ಟಿಯಿಂದ ನೋಡದ ಜೀವ ಪರತೆ, ಬಂದೂಕಿನ ಮೇಲೆ ಗುಬ್ಬಿ ಗೂಡು ಕಟ್ಟಲಿ ಪುಂಖಾನುಪುಂಖ ವಾಗಿ ಮಾತನಾಡುವ ಬುದ್ದಿಜೀವಿಗಳ ದ್ವಂದ್ವವೂ ನನಗೆ ಅವರ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ. ಅವರಿಗೆಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆ ಅಂತಲೂ ಅನ್ನಿಸುವುದಿಲ್ಲ. ಇರಲಿ, ಈ ಕ್ಷಮಾ ಅರ್ಜಿಯ ವ್ಯಾಖ್ಯಾನವನ್ನು, ಮೇಲಿನ ಇಷ್ಟೂ ವಿಷಯಗಳ ದೃಷ್ಟಿಕೋನದಿಂದ ನೋಡಬೇಕು..
ಅಸಲಿಗೆ ಅವು ಕ್ಷಮೆಯ ಅರ್ಜಿಗಳೇ ಅಲ್ಲ:ಸಾವರ್ಕರ್ ಒಟ್ಟು ಆರು ಅರ್ಜಿಗಳ ಬರೆದಿದ್ದಾರೆ. ಅವರ ಧರ್ಮಪತ್ನಿ ಯಮುನ ಭಾಯಿ ಸಾವರ್ಕರ್ ಎರಡು ಅರ್ಜಿಗಳನ್ನು ಬರೆದಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು, ಗಾಂಧಿಯೂ ಕೂಡ ಸಾವರ್ಕರ್ ಸಹೋದರರ ಪರವಾಗಿ ಒಂದು ಅರ್ಜಿಯನ್ನು ಬರೆದಿದ್ದಾರೆ!!  ಕಾಲಾಪಾನಿಯಲ್ಲಿ ಕೇವಲ ಸ್ವಾತಂತ್ರ್ಯ ಹೋರಾಟ ಗಾರು ಮಾತ್ರ ಇರಲಿಲ್ಲ.. ಅದರಲ್ಲಿ ಇದ್ದಿದ್ದು ಬಹುತೇಕ ಕೈದಿಗಳು ಕೊಲೆ, ಕಳ್ಳತನ, ದರೋಡೆ ಇತ್ಯಾದಿ ಅಪರಾಧಗಳಲ್ಲಿ ಶಿಕ್ಷೆಗೆ ಒಳಪಟ್ಟಿದ್ದವ ರಿದ್ದರು. ಅವರುಗಳ ನಡತೆ ಆಧರಿಸಿ ಒಂದೆರಡು ವರ್ಷಗಳ ನಂತರ ಅವರ ಕಠಿಣ ಸಜೆಯನ್ನು ಕಡಿಮೆಗೊಳಿಸ ಲಾಗುತ್ತಿತ್ತು. ಇನ್ನೂಂದು ಕಡೆ ಭಾರತದಲ್ಲಿ ಗಾಂಧಿ ಪಟಾಲಂನ ಜೈಲುವಾಸದ ಐಷಾರಾಮಿ ಜೀವನದ ಬಗ್ಗೆಯೂ ನಿಮಗೆ ಗೊತ್ತೇ ಇದೆ.
ಹೇಳಿ ಕೇಳಿ ಸಾವರ್ಕರ್ ಲಂಡನ್‌ನ ಕಾನೂನು ಓದಿದ ಬ್ಯಾರಿಷ್ಟರ್. ಮೊದಲ ಅರ್ಜಿಯಲ್ಲಿ ಸಾವರ್ಕರ್ ಇದನ್ನೇ ಪ್ರಶ್ನೆ ಮಾಡಿದ್ದರು. ತಾವೂ ಸೇರಿದಂತೆ ಕಾಲಾ ಪಾನಿಯಲ್ಲಿ ಇದ್ದ ಇತರೆ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರಕಾರ ಹೇಗೆ ನೋಡುತ್ತದೆ.. ತಾವು ಸಾಮಾನ್ಯ ಕೈದಿಗಳೋ, ಅಥವಾ ರಾಜಕೀಯ ಕೈದಿಗಳೋ ಅನ್ನುವುದನ್ನು ಸ್ಪಷ್ಟ ಪಡಿಸಲು ಕೇಳಿದ್ದರು. ಒಂದು ಕಡೆ ಸಾಮಾನ್ಯ ಕೈದಿಗಳಿಗೆ ಸಿಗುವ ಸವಲತ್ತುಗಳ ಸಿಗುತ್ತಿಲ್ಲ, ಇನ್ನೊಂದು ಕಡೆ ರಾಜಕೀಯ ಕೈದಿಗಳ ಹಾಗೂ ನಡೆಸಿಕೊಳ್ಳತ್ತಿಲ್ಲ..ಹಾಗಾಗಿ ಬ್ರಿಟಿಷ್ ಸರಕಾರದ ಈ ದ್ವಂದ್ವದ ನಡೆಯ ಬಗ್ಗೆ ಸಾವರ್ಕರ್ ಪ್ರಶ್ನೆ ಮಾಡಿದ್ದರು.
ಸಾವರ್ಕರ್ ಮುಂದಿನ ಅರ್ಜಿಗಳಲ್ಲಿ, ತಮ್ಮ ಬಿಡುಗಡೆ ಬೇರೆ ಕ್ರಾಂತಿಕಾರಿಗಳ ಬಿಡುಗಡೆಗೆ ಮುಳ್ಳಗಿದ್ದರೆ, ಅವರ ಅರ್ಜಿಯನ್ನು ಪಕ್ಕಕ್ಕೆ ಇಟ್ಟು ಬೇರೆ ಕ್ರಾಂತಿಕಾರಿಗಳನ್ನು ಬಿಡುಗಡೆಗೊಳಿಸಿದರೆ ತಮ್ಮ ಬಿಡುಗಡೆ ಆದಷ್ಟೇ ಸಂತೋಷವಾಗುತ್ತದೆ ಎಂದೂ ಬರೆದಿದ್ದರು. ನಂದ ಗೋಪಾಲ, ಬರೀಂದ್ರ ಘೋಷ್ (ಅರಬಿಂದೋ ಸಹೋದರ), ಸಚೀಂದ್ರನಾಥ ಸನ್ಯಾಲ, ಸುಧೀರ್ಸರ್ಕಾರ್ ಮುಂತಾದ ಅನೇಕ ಕ್ರಾಂತಿಕಾರಿಗಳು ಮತ್ತು ರಾಜಕೀಯ ಕೈದಿಗಳು ಇದೇ ರೀತಿಯ ಅರ್ಜಿಗಳನ್ನು ಬರೆದಿದ್ದರು.
ವಾಸ್ತವವಾಗಿ, ಸಚೀಂದ್ರನಾಥ ಸನ್ಯಾಲ್ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ ಬಿಡುಗಡೆ ಮಾಡಲಾಯಿತು. ಆದರೆ ಸಾವರ್ಕರ್ ಅವರನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಸನ್ಯಾಲ್ ತನ್ನ ಆತ್ಮಚರಿತ್ರೆ ಬಂಧಿ ಜೀವನ್ ನಲ್ಲಿ ಇದರ ಬಗ್ಗೆ ಬರೆಯುತ್ತಾ, ನಾನು ಅವರಂತೆಯೇ ಅದೇ ತರಹ ಅರ್ಜಿಯನ್ನು ಬರೆದಿದ್ದರೂ ನನ್ನನ್ನು ಮಾತ್ರ ಬಿಡುಗಡೆ ಮಾಡಿ ಸಾವರ್ಕರ್‌ ರನ್ನು ಬಿಡುಗಡೆ ಮಾಡಲಿಲ್ಲ ಎಂದು ಬರೆಯುತ್ತಾರೆ.
ಇದು ಬ್ರಿಟಿಷ್ ಸರಕಾರಕ್ಕೆ ಸಾವರ್ಕರ್ ಬಗ್ಗೆ ಇದ್ದ ಭಯವೂ ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೊಂದು ಆಶ್ಚರ್ಯವೆನಿಸುವವಿಷಯವೆಂದರೆ ಸಾವರ್ಕರ್ ಸಹೋದರರು ಜೈಲಿನಲ್ಲಿ ಬಾಂಬ್ ತಯಾರಿಸುವ ಯೋಜನೆ ಬ್ರಿಟಿಷ್ ಅಧಿಕಾರಿಗಳಿಗೆ ಗೊತ್ತಾಗಿ ಅದರ ಬಗ್ಗೆ ತನಿಖೆ ಮಾಡಲು ರಿಜಿನೈಲ್ ಕ್ರೆಡಾಲ್ ಎಂಬ ಅಧಿಕಾರಿಯನ್ನು ಪೋಟ್‌ರ್ ಬ್ಲೇರ್‌ಗೆ ಕಳುಹಿಸಿದ್ದರು. ಆತ ಸಾವರ್ಕರ್ ಸಹೋದರರನ್ನು ವಿಚಾರಣೆಗೊಳಪಡಿಸಿ, ತನ್ನ ವರದಿಯಲ್ಲಿ ಸಾವರ್ಕರ್‌ರಿಗೆ ತಾನು ಬ್ರಿಟಿಷ್ ಸರಕಾರದ ವಿರುದ್ಧ ತಾನು ಮಾಡಿದ ಕೆಲಸಗಳಿಗೆ ಎಳ್ಳಷ್ಟು ಪಶ್ಚಾತ್ತಾಪ ಇಲ್ಲ, ಇಂದಿಗೂ ಆತನಿಗೆ ಅದೇ ದರ್ಪ ಹಾಗೂ ಅಹಂಕಾರವಿದೆ, ಬ್ರಿಟಿಷರ ಬಗ್ಗೆತಿರಸ್ಕರಿಸವಿದೆ ಎಂದು ವರದಿ ಕೊಟ್ಟಿದ್ದರು.
ಸಾವರ್ಕರ್ ಅವರ ತಮ್ಮ ನಾರಾಯಣ್ ಸಾವರ್ಕರ್, ತಮ್ಮ ಇಬ್ಬರು ಅಣ್ಣಂದಿರ ಬಿಡುಗಡೆ ಅವಿರತ ಪ್ರಯತ್ನ ನಡೆಸುತ್ತಲೇ ಇದ್ದರು. ಗಾಂಽಯನ್ನು ಭೇಟಿಯಾಗಿ ತಮ್ಮ ಇಬ್ಬರು ಅಣ್ಣಂದಿರ ಬಿಡುಗಡೆ ಸಹಾಯ ಮಾಡಬೇಕೆಂದು ಕೇಳಿಕೊಂಡಾಗ ಗಾಂಧಿ ಇನ್ನೊಂದು ಅರ್ಜಿಯನ್ನು ಬರೆಯಲು ಹೇಳಿದರು ಹಾಗೂ ತಾವು ಒಂದು ಸಾವರ್ಕರ್ ಸಹೋದರರ ಪರವಾಗಿ ಅರ್ಜಿಯನ್ನು ಬರೆದರು.
ಅಷ್ಟೊತ್ತಿಗಾಗಲೇ1919ರ ಮಾನ್ಟೆಗೋಚೆಮ್ಸಫಾರ್ಡ್ರಿಫಾರ್ಮ್‌ನ ನಿಯಮಗಳು ಅನುಷ್ಠಾನವಾಗುವುದಕ್ಕೆ ಶುರುವಾಗಿತ್ತು. ಅದರ ಬಗ್ಗೆ ಗಾಂಧಿಗೆ ಅಸಮಾಧಾನವಿದ್ದರೂ, ಗಾಂಧಿ ನೇತೃತ್ವದ ಕಾಂಗ್ರೆಸ್ ಬ್ರಿಟಿಷ್‌ರ ಜತೆ ಸೇರಿ ಸರಕಾರ ನಡೆಸುವ ಬಗ್ಗೆ, ಸರಕಾರದಲ್ಲಿ ಭಾರತೀಯರ ಪಾಲುದಾರಿಕೆ, ಭಾರತೀಯರಿಗೆ ಕಾನೂನು ಹಕ್ಕು, ಸಂವಿಧಾನದಲ್ಲಿ ಭಾರತದ ಪಾಲು ಇತ್ಯಾದಿ ವಿಷಯಗಳು ಮಾತುಕತೆ ಮುಂದುವರೆದಿದ್ದವು.
ಅದರಂತೆ ಗಾಂಽ, ಸಾವರ್ಕರ್ ಸಹೋದರರ ಬಗ್ಗೆ ಬ್ರಿಟಷ್ ಸರಕಾರಕ್ಕೆ ಬರೆಯುತ್ತಾ, ಸಾವರ್ಕರ್ ಸಹೋದರರು ಭಾರತ ತಾಯಿಯ ಹೆಮ್ಮೆ ಮಕ್ಕಳು, ಕಾಲಾಪಾನಿಯಲ್ಲಿ ಸಾಕಷ್ಟು ನೋವು ಅನುಭವಿಸಿzರೆ, ಈಗ ಬ್ರಿಟಿಷ್ ಕಾನೂನಿನ ಅನ್ವಯ ಸಂವಿಧಾನತ್ಮಕವಾಗಿ ನಡೆದುಕೊಳ್ಳಲು ತಯಾರಿದ್ದಾರೆ ಎಂದು ಅರ್ಜಿ ಬರೆದಿದ್ದರು. ಹಾಗಾಗಿ ಅರ್ಜಿ ಬರೆಯುವುದೇ ಅಪರಾಧ ಎನ್ನುವುದಾದರೆ, ಗಾಂಧಿಯು ಅರ್ಜಿ ಬರೆದರು ಅನ್ನುವುದು ಗಮನಿಸಬೇಕಾಗುತ್ತದೆ.
ನಾನು ಅಷ್ಟು ಅರ್ಜಿಗಳನ್ನು ಒಂದಕ್ಷರವೂ ಬಿಡದೇ ಓದಿದ್ದೇನೆ. ಯಾವುದೇ ಪತ್ರದಲ್ಲೂ ಕ್ಷಮಿಸಿ, ಮಾಡಿದ್ದ ತಪ್ಪಯಿತು (, , ) ಇತ್ಯಾದಿ ಯಾವುದೇ ಪದವೂ ಇಲ್ಲ. ಇನ್ನೂ ಚಿಕ್ಕ ವಯಸ್ಸಿನಿಂದ ಶಿವಾಜಿ ಮಹರಾಜ ಕಟ್ಟಾ ಅನುಯಾಯಿ ಯಾಗಿ, ಅವರ ಬಗ್ಗೆ ಸಮಗ್ರವಾಗಿ ತಿಳಿದುಕೊಂಡಿದ್ದ ಸಾವರ್ಕರ್, ಶಿವಾಜಿ ಮಹರಾಜರು ಅಫ್ಜಲ್ ಖಾನ್‌ಗೆ ಕ್ಷಮಾಪಣೆ ಕೇಳಿ ಆನಂತರ ಸೇಡು ತೀರಿಸಿಕೊಂಡಿದ್ದ ಹಾಗೆ ಅದನ್ನೇ ಸಾವರ್ಕರ್ ಬಳಸಿ ಹೇಗಾದರೂ ಜೈಲಿನಿಂದ ಹೊರಬರ ಬೇಕು ಎಂಬುದು ಅವರ ಮನಸ್ಸಿನಲ್ಲಿತ್ತು.
1909ರಲ್ಲಿ ಕಾಲಾಪಾನಿ ಶಿಕ್ಷೆಯಾದಾಗ ಸಾವರ್ಕರ್26ವರ್ಷದ ತರುಣ. ಕಾಲಾಪಾನಿಯ ನರಕ ಅನುಭವಿಸಿ ಬದುಕಿದ್ದರೆ,50ವರ್ಷ ಶಿಕ್ಷೆ ಮುಗಿಸಿ ಹೊರ ಬರುವಷ್ಟರಲ್ಲಿ76ವರ್ಷವಾಗಿರುತ್ತಿತ್ತು. ಅಲ್ಲಿ ಕೊಳೆಯುವುದ್ದಕ್ಕಿಂತ ಅರ್ಜಿ ಬರೆದು  ಹೊರ ಬರುವುದು ಕೂಡ ವ್ಯವಹಾರಿಕವಾಗಿ ಎಲ್ಲಾ ತರಹ ಸರಿಯಾದ ನಿರ್ಧಾರವಾಗಿತ್ತು. ಇನ್ನು ಅಂದಿಗೆ ಯಾವುದೇ ಪತ್ರದ ಕೊನೆ ಯಲ್ಲಿ    ಎಂದು ಬರೆಯುವುದು ಇಂಗ್ಲಿಷ್ ಭಾಷೆಯ ಕ್ರಮ. ಇಂಗ್ಲಿಷ್ ಶಿಕ್ಷಣ ಪಡೆದ ಸಾವರ್ಕರ್ ಅದನ್ನು ತಮ್ಮ ಅರ್ಜಿಯಲ್ಲಿ ಬಳಸಿದ್ದರು.
ಆಗಿನ ಕಾಲದಲ್ಲಿ ಆ ತರಹ ಬರೆಯುವುದು ಬಹಳ ಸಾಮಾನ್ಯವಾಗಿತ್ತು. ಗಾಂಧಿ ಬ್ರಿಟಿಷ್‌ರಿಗೆ ಬರೆದ ಪತ್ರದಲ್ಲಿ, ಅಮೆರಿಕ ಸೇರಿದಂತೆ ಎಲ್ಲಾ ಇಂಗ್ಲಿಷ್ ಬಳಸುವ ದೇಶದ ಅಧ್ಯಕ್ಷರುಗಳು ಪತ್ರ ಬರೆಯುತ್ತಿದ್ದೇ ಹಾಗೆ. ಹಾಗೆ ಬರೆದ ಮಾತ್ರಕ್ಕೆ ಅವರು ಮನೆಯ ಕೆಲಸದವರು, ನಾಳೆಯಿಂದ ಕಸ,ಮುಸರೆ ತೊಳೆಯುತ್ತಾರೆ ಎಂಬ ಅರ್ಥವಿಲ್ಲ! ಸಾವರ್ಕರ್ ಬಿಡುಗಡೆಯಾಗುವುದು ಯಾವುದೇ ಕಾರಣಕ್ಕೂ ಬ್ರಿಟಿಷ್‌ರಿಗೆ ಬೇಕಾಗಿರಲಿಲ್ಲ. ಸಾವರ್ಕರ್ ಸಹೋದರರು ಬಿಡುಗಡೆಯಾದರೆ, ಮಹಾರಾಷ್ಟ್ರ ಪ್ರಾಂತ್ಯ ದಲ್ಲಿ ಆರಿದ್ದ ಕಿಚ್ಚು, ಪುನಃ ಶುರುವಾಗುವ ಭಯ ದಟ್ಟವಾಗಿತ್ತು. ಇದು ಬ್ರಿಟಿಷ್ ಅಧಿಕಾರಿಗಳ ಆಂತರಿಕ ಪತ್ರಗಳಲ್ಲೂ ಸ್ಪಷ್ಟ ವಾಗಿ ಗೋಚರಿಸುತ್ತದೆ. ಹಾಗಾಗಿ ಕೊನೆಗೆ ಸಾವರ್ಕರ್ ಕಾಲಾಪಾನಿಯಿಂದ ಯರವಾಡ ಜೈಲಿಗೆ ಸ್ಥಳಾಂತರವಾಗಿ1924ರಲ್ಲಿ ಬಿಡುಗಡೆಯಾದಾಗ ಸಾವರ್ಕರ್ ಮಾನಸಿಕವಾಗಿ ಹಾಗೂ ದೈಹಿಕ ಜರ್ಜರಿತರಾಗಿ ಹೋಗಿದ್ದರು.
ಕಾಲಾಪಾನಿ ಹಿಂಸೆ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಕೊನೆಗೂ ಇನ್ನು5ವರ್ಷ ಭಾರತದ ರಾಜಕೀಯದಲ್ಲಿ ಪಾಲ್ಗೊಳ್ಳುವುದಿಲ್ಲ ಹಾಗೂ ರತ್ನಗಿರಿ ಬಿಟ್ಟು ಎಲ್ಲೂ ಹೋಗುವುದಿಲ್ಲ ಅನ್ನುವ ಕರಾರಿನ ಮೇಲೆ ಬಿಡುಗಡೆಯಾದರು!! ಏನೇ ಆದರೂ ಸಾವರ್ಕರ್‌ರನ್ನು ನಂಬದ ಬ್ರಿಟಿಷರು5ವರ್ಷಗಳ ಕರಾರನ್ನು ಮುಂದೆ13ವರ್ಷಕ್ಕೆ ಏರಿಸಿದ್ದರು.1909ಕ್ಕೆ ಅಂಡಮಾನಿನ ಜೈಲಿಗೆ ಹೋದ ಸಾವರ್ಕರ್ ಸಂಪೂರ್ಣ ಬಿಡುಗಡೆಯಾಗಿ, ನೆಮ್ಮದಿಯಾಗಿ ಉಸಿರಾಡಿದ್ದೇ1937ರಲ್ಲಿ!!
ಕೊನೆಯ ಮಾತು:ಮೊದಲನೆ ವಿಶ್ವ ಯುದ್ದದಲ್ಲಿ ಬ್ರಿಟಿಷರಿಗೆ ಮುಜಗರವಾಗುವಂತಹ ನಡವಳಿಕೆ ಮಾಡಬಾರದೆಂದು ಹೇಳಿದ, ಬ್ರಿಟಿಷರ ಪರವಾಗಿ ಮೊದಲನೇ ವಿಶ್ವ ಯುದ್ದದಲ್ಲಿ ಕಾದಾಡಲು ಬ್ರಿಟಿಷ್ ಸೇನೆಗೆ ಭಾರತೀಯರನ್ನು ಭರ್ತಿ ಮಾಡಿಸಿದ,1942ಭಾರತ ಬಿಟ್ಟು ತೋಲಗಿ ಅಂದೋಲನದಲ್ಲಿ ಅಶಾಂತಿಯಿಂದ ವರ್ತಿಸಿದ ಭಾರತೀಯರ ಪರವಾಗಿ ಬ್ರಿಟಿಷರ ಕ್ಷಮೆ ಕೇಳಿ ಮಹಾತ್ಮನಾದ ಗಾಂಧಿ ಹಾಗೂ ಅವರ ಅನುಯಾಯಿಗಳಿಗಾಗಲಿ, ಪಂಜಾಬಿನ ನಭಾ ಜಿಲ್ಲೆಯ ಜೈತು ಎಂಬ ಊರಿನಲ್ಲಿ ಎರಡೇ ದಿನ ಕಾರಾಗೃಹಕ್ಕೆ ಸಾಕಾಗಿ, ಪುನಃ ನಭಾಕ್ಕೆ ಕಾಲಿಡುವುದಿಲ್ಲ ಎಂದು ಕರಾರು ಬರೆದು, ಬಿಡುಗಡೆಯಾಗಿ ಪುನಃ ಎಂದೂ ನಭಾಕ್ಕೆ ಕಾಲಿಡದೆ, ಜೈತುವಿನಲ್ಲಿ ಎರಡೇ ದಿನದ ಕಾರಾಗೃಹ ಶಿಕ್ಷೆಗೆ ಎರಡು ವಾರ ಟೈಫಾಯಿಡ್ ನಿಂದ ಬಳಲಿ ಚಾಚಾ ನಾದ ನೆಹರೂ ಹಾಗೂ ಅವರ ಹಿಂಬಾಲಕರಿಗೆ ಸಾವರ್ಕರ್ ಅರ್ಥವಾಗುವುದಿಲ್ಲ..