ಪರಿಸರ ಕಾಳಜಿಯಿಂದ ಪ್ರಮಾದಗಳ ತಡೆ ಸಾಧ್ಯ
ತನ್ನಿಮಿತ್ತ
ಗುರುರಾಜ್ ಎಸ್.ದಾವಣಗೆರೆ
ಐದು ವರ್ಷಗಳ ಹಿಂದೆ ಕೊರೆಯುವ ಚಳಿಯ ಪ್ಯಾರಿಸ್ ನಗರದಲ್ಲಿ ವಾಯುಗುಣ ಬದಲಾವಣೆ ಮತ್ತು ಭೂಮಿ ಬಿಸಿ ನಿಯಂತ್ರಣ ಕ್ಕಾಗಿ167ದೇಶಗಳು ಒಟ್ಟಿಗೆ ಸೇರಿ ಮಾಡಿಕೊಂಡ ಒಪ್ಪಂದ ಈ ಪರಿ ಅಟಕಾಯಿಸಿಕೊಳ್ಳುತ್ತದೆಂದು ಯಾರಿಗೂ ಅನಿಸಿರಲಿಲ್ಲ. ಮಾಡಿದ ಭಾಷಣಗಳು ಮರೆತು ಹೋಗಿ, ಹಾಕಿದ ಸಹಿ ಮಾಸಿ ಹೋಗಿದೆ.
ಒಪ್ಪಂದದ ಪ್ರಕಾರ2050ರ ವೇಳೆಗೆ ಭೂಮಿಯ ಬಿಸಿಯನ್ನು ನಿಯಂತ್ರಿಸಿ ಅದು1.5ಡಿಗ್ರಿ ಸೆಲ್ಷಿಯಸ್‌ಗಿಂತ ಹೆಚ್ಚಾಗದಂತೆ ನೋಡಿಕೊಳ್ಳುತ್ತೇವೆ ಎಂದು ಘೋಷಿಸಿದವರಿಗೆ ಅದು ಅಷ್ಟು ಸುಲಭವಲ್ಲ ಎಂದು ಅರಿವಾಗಿ ಅವಸರದಲ್ಲಿ ನಿರ್ಧಾರ ಮಾಡಿದೆ ವೇನೋ ಎಂದು ತಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಕೆಲವರಂತೂ ಹತ್ತು ವರ್ಷ ಮುಂಚೆಯೇ ಅದನ್ನು ಮಾಡಿ ತೋರಿಸುತ್ತೇವೆ ಎಂದಿದ್ದರು. ರಿಯೋ ಶೃಂಗ ಸಭೆಯ ನಂತರ ಹತ್ತಾರು ಒಪ್ಪಂದಗಳಾಗಿದ್ದರೂ ಸಾಧನೆ ಮಾತ್ರ ನಿರೀಕ್ಷಿತ ಮಟ್ಟ ತಲುಪಿಲ್ಲ.
ಇತ್ತೀಚಿನ ಕ್ಲೈಮೇಟ್ ಛೇಂಜ್ ಇಂಡೆಕ್ಸ್‌ನ ಪ್ರಕಾರ ಒಪ್ಪಂದದಲ್ಲಿ ಭಾಗಿಯಾದ ಯಾವ ರಾಷ್ಟ್ರವೂ ಅಂದುಕೊಂಡಂತೆ ಕೆಲಸ ಮಾಡಿಲ್ಲ. ಜಿ-20ರಾಷ್ಟ್ರಗಳ ಪೈಕಿ, ಯುರೋಪಿನ ಕೆಲ ರಾಷ್ಟ್ರಗಳು ನಾಲ್ಕು ಐದನೆಯ ಸ್ಥಾನದಲ್ಲಿವೆ. ಕಾರ್ಯಕ್ಷಮತೆಯಪಟ್ಟಿಯಲ್ಲಿ ನಾವು ಹತ್ತನೆಯ ರ‍್ಯಾಂಕ್ ಗಳಿಸಿದ್ದೇವೆ.
ವಾಯುಗುಣ ನಿಯಂತ್ರಣ ಮತ್ತು ಸಾಧನೆಯನ್ನು ನಾಲ್ಕು ಪ್ರಮುಖ ವಿಭಾಗಗಳಾದ ಶಾಖವರ್ಧಕ ಅನಿಲ ಹೊಮ್ಮುವಿಕೆ (ಗ್ರೀನ್ ಹೌಸ್ ಗ್ಯಾಸ್ ಎಮಿಷನ್ಸ್), ನವೀಕರಿಸಬಹುದಾದ ಇಂಧನ ಬಳಕೆ (ರೆನೆವಬಲ್ ಚನರ್ಜಿ ಯೂಸ್), ಬಳಸಿದ ಇಂಧನ ಕ್ಷಮತೆ (ಎನರ್ಜಿ ಯೂಸ್ ಎಫಿಶಿಯನ್ಸಿ) ಮತ್ತು ವಾಯುಗುಣ ನೀತಿ (ಕ್ಲೆ ಮೇಟ್ ಪಾಲಿಸಿ) ಗಳವಿಷಯದಲ್ಲಿಒಪ್ಪಂದಕ್ಕೆ ಸಹಿ ಮಾಡಿದರಾಷ್ಟ್ರಗಳು ಎಷ್ಟರ ಮಟ್ಟಿಗೆ ಅನುವರಿಸಿವೆ ಎಂಬುದರ ಆಧಾರದ ಮೇಲೆ ಅವುಗಳ ಕಾರ್ಯ ಕ್ಷಮತೆಯನ್ನು ಗುರುತಿಸಲಾಗುತ್ತದೆ.
ಮೊದಲ ವಿಭಾಗದಲ್ಲಿ ಸ್ವೀಡನ್, ಈಜಿಪ್ಟ್, ಚಿಲಿ, ಯುನೆಟೆಡ್ ಕಿಂಗ್‌ಡಂ ಮತ್ತು ಮಾಲ್ಟಾ ದೇಶಗಳು ಮೊದಲ ಐದುಸ್ಥಾನದಲ್ಲಿವೆ. ಭಾರತ12ಸ್ಥಾನದಲ್ಲಿದೆ. ಕಜಕಿಸ್ತಾನ, ಸೌದಿ ಅರೇಬಿಯ, ಇರಾನ್, ತೈಪೇ ಮತ್ತು ಕೊರಿಯ ದೇಶಗಳು ಕೊನೆಯ ಸ್ಥಾನಗಳಲ್ಲಿವೆ. ಅಮೆರಿಕ, ಚೀನಾ ಮತ್ತು ರಷ್ಯಾಗಳು ಪಟ್ಟಿಯ ತಳದಲ್ಲಿದ್ದು ಅತ್ಯಂತ ಕಳಪೆ ಪ್ರದರ್ಶನ ನೀಡಿವೆ.
ಎರಡನೆಯ ವಿಭಾಗದಲ್ಲಿ ಲಟಿವ, ನಾರ್ವೆ, ಸ್ವೀಡನ್, ಡೆನ್ ಮಾರ್ಕ್ ಮತ್ತು ಫಿನ್‌ಲ್ಯಾಂಡ್‌ಗಳ ಉತ್ತಮ ಸಾಧನೆ ಮಾಡಿದ್ದು ಮೊದಲ ಐದು ಸ್ಥಾನಗಳಲ್ಲಿದ್ದರೆ ಭಾರತ27ನೆಯ ಸ್ಥಾನದಲ್ಲಿದೆ. ಇರಾನ್, ರಷ್ಯಾ, ಮಲೇಷ್ಯಾ, ಬೆಲಾರಸ್, ಮೆಕ್ಸಿಕೊ,ಈಜಿಪ್ಟ್, ಕೆನಡಾಗಳು ಅತ್ಯಂತ ಕಡಿಮೆ ರೇಟಿಂಗ್ ಗಳಿಸಿವೆ. ಮೂರನೆಯ ಶಕ್ತಿ ಬಳಕೆ ( )ಯಲ್ಲಿ ಉಕ್ರೇನ್, ಮಾಲ್ಟಾ, ಮೆಕ್ಸಿಕೊ, ಮೊರಕ್ಕೊ ಮತ್ತು ಸ್ವಿಟ್ಜರ್‌ಲೆಂಡ್‌ಗಳು ಉತ್ತಮ ಸಾಧನೆ ಮಾಡಿ ಪಟ್ಟಿಯಲ್ಲಿ ಅತ್ಯಂತ ಮೇಲಿವೆ.
ಭಾರತ೧೦ನೆ ರ‍್ಯಾಂಕ್ ಗಳಿಸಿದೆ. ಚೀನಾ, ಆಸ್ಟ್ರೇಲಿಯ, ಕೆನಡ, ಸೌದಿ ಅರೇಬಿಯ, ಅಮೆರಿಕ, ಕೊರಿಯ, ಫಿನ್‌ಲ್ಯಾಂಡ್‌ಗಳು ಭಾರೀ ಕಳಪೆ ಸಾಧನೆ ಮಾಡಿವೆ. ಇನ್ನು ನಾಲ್ಕನೆಯ, ಅಂದರೆ ವಾಯುಗುಣ ನೀತಿ ಪಾಲನೆಯಲ್ಲಿ ಫಿನ್‌ಲ್ಯಾಂಡ್, ಪೋರ್ಚುಗಲ್,ಸ್ವೀಡನ್, ಡೆನ್‌ಮಾರ್ಕ್‌ಗಳನ್ನು ಅತ್ಯುತ್ತಮ ಸಾಧನೆ ಮಾಡಿದ ದೇಶಗಳೆಂದು ಗುರುತಿಸಿದ್ದು ಭಾರತ13ನೆಯ ರ‍್ಯಾಂಕ್‌ಗೆ ತೃಪ್ತಿ ಪಟ್ಟುಕೊಂಡಿದೆ.
ಹೇಳಿದ್ದನ್ನು, ಒಪ್ಪಿಕೊಂಡದ್ದನ್ನು ಪಾಲಿಸಲಾಗದ ದೇಶಗಳ ಪೈಕಿ ಅಮೆರಿಕ, ಚೀನಾ, ಬ್ರೆಜಿಲ್, ಜಪಾನ್, ಟರ್ಕಿ, ಅಲ್ಜೀರಿಯ, ಆಸ್ಟ್ರೇಲಿಯಗಳು ಅಗ್ರಸ್ಥಾನ ಗಳಿಸಿವೆ!
ವಾಯುಗುಣ ತಜ್ಞರ ಪ್ರಕಾರ,1880ರ ಕೈಗಾರಿಕಾ ಕ್ರಾಂತಿ ಪೂರ್ವದ ದಿನಗಳಿಂದ ಇಲ್ಲಿಯವರೆಗೆ ಭೂಮಿಯ ತಾಪಮಾನ ವನ್ನು1.2ಡಿಗ್ರಿ ಸೆಲ್ಷಿಯಸ್ ನಷ್ಟು ಈಗಾಗಲೇ ಹೆಚ್ಚಿಸಿದ್ದೇವೆ.2050ರ ವೇಳೆಗೆ ಅದು1.5ಡಿಗ್ರಿ ಸೆಲ್ಷಿಯಸ್‌ನ್ನು ದಾಟಿ ಈ ಶತಮಾನದ ಕೊನೆಯ ವೇಳೆಗೆ2.90ರಿಂದ3.90ಡಿಗ್ರಿ ಸೆಲ್ಷಿಯಸ್‌ವರೆಗೆ ಏರುವ ಎಲ್ಲ ಸಾಧ್ಯತೆಗಳೂ ಇವೆ ಎಂದಿರುವ ತಜ್ಞರು, ತಾಪಮಾನ ನಿಯಂತ್ರಣಕ್ಕೆ ನಿಗದಿಗೊಳಿಸಲಾದ ಶ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲೇಬೇಕಾದ ಅನಿವಾರ್ಯತೆ ಈಗಾಗಲೇ ಸೃಷ್ಟಿಯಾಗಿದ್ದು ಕ್ಲೆ ಮೇಟ್ ಎಮರ್ಜೆನ್ಸಿ ತನ್ನ ಆಗಮನ ಮತ್ತು ಇರುವಿಕೆಯನ್ನು ಪ್ರಾಕೃತಿಕ ವಿಕೋಪಗಳ ಮೂಲಕ ಪದೇ ಪದೆ ತೋರಿಸುತ್ತಲೇ ಇದೆ.
ಅಮೆರಿಕ ಚೀನಾಗಳು ತಾವು ಕಮಿಟ್ ಮಾಡಿದ್ದರ ಶೇ.25ರಷ್ಟನ್ನೂ ಪಾಲಿಸಿಲ್ಲ.2016ರಲ್ಲಿ ಹೊಮ್ಮಿಸಿದ್ದಕ್ಕಿಂತ ಹೆಚ್ಚಿನ ಕಾರ್ಬನ್2019ರಲ್ಲಿ ಹೊಮ್ಮಿದೆ. ಇದು ಹೀಗೇ ಮುಂದುವರಿದರೆ ಪ್ರತಿ ದೇಶಕ್ಕೆ ನಿಗದಿಯಾಗಿರುವ ಕಾರ್ಬನ್ ಬಡ್ಜೆಟ್2030ಕ್ಕೇ ಮುಗಿಯಲಿದೆ. ಅಭಿವೃದ್ಧಿ ಸಾಧಿಸುತ್ತಿರುವ ದೇಶಗಳು ನಮಗೆ2050ರವರೆಗೆ ಸಮಯ ಬೇಕೇ ಬೇಕು ಎಂದಿವೆ.
ಭಾರತವೂ ಸೇರಿದಂತೆ ಅಭಿವೃದ್ಧಿಯ ಹಾದಿಯಲ್ಲಿರುವ ಮುಕ್ಕಾಲು ಪಾಲು ದೇಶಗಳು ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲವನ್ನು ಸುಡಲೇ ಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿವೆ. ಜಿಡಿಪಿ ಮತ್ತು ಜೀವನ ಗುಣಮಟ್ಟ ಎರಡ ರಲ್ಲೂ ಕನಿಷ್ಠ ಸ್ಥಾನದಲ್ಲಿರುವ ನಾವು ನಮ್ಮ ಅಭಿವೃದ್ಧಿಗಾಗಿ ಮೇಲಿನ ಎರಡೂ ಇಂಧನಗಳನ್ನು ಹೆಚ್ಚು ಹೆಚ್ಚುಉರಿಸಲೇ ಬೇಕಿದೆ. ನವೀಕರಿಸಬಹುದಾದ ಸೋಲಾರ್ ಮತ್ತು ಗಾಳಿ ಶಕ್ತಿಯನ್ನು ಬಳಸಿಕೊಳ್ಳುವ ಹಲವು ಸಾಧ್ಯತೆಗಳಿವೆಯಾದರೂ ಅವುಗಳ ಉತ್ಪಾದನೆ ಮತ್ತು ಬಳಕೆ ಯೋಜಿಸಿದ ವೇಗದಲ್ಲಿ ಆಗುತ್ತಿಲ್ಲ.
ನಮ್ಮಲ್ಲಷ್ಟೇ ಅಲ್ಲ ಕಡಿಮೆ ಕಾರ್ಬನ್ ಹೊಮ್ಮಿಸುವ ಯುರೋಪಿನ ದೇಶಗಳೂ ಸಹ ಮಾತಿಗಾಗಿ ಕಾರ್ಬನ್ ಮುಕ್ತತೆಯ ಬಗ್ಗೆ ತೋರಿಕೆಯ ಹೇಳಿಕೆ ನೀಡುತ್ತವಾದರೂ ವಾಸ್ತವವಾಗಿ ಹೆಚ್ಚಿನ ಕಲ್ಲಿದ್ದಲನ್ನು ಸುಡುತ್ತಿವೆ. ಅಧ್ಯಯನದ ಪ್ರಕಾರ ಜಗತ್ತಿನ ಏಳು ಮುಂದುವರಿದ ದೇಶಗಳು ಹೊಮ್ಮಿಸುವ ಕಾರ್ಬನ್‌ನ ಪ್ರಮಾಣ ಇಡೀ ವಿಶ್ವದ ಒಟ್ಟು ಹೊಮ್ಮುವಿಕೆಯ ಶೇ36ರಷ್ಟಿದೆ. ಜಗತ್ತಿನಶೇ.15ರಷ್ಟು ಜನಸಂಖ್ಯೆಯನ್ನು ಮಾತ್ರ ಸಲಹುತ್ತಿರುವ ಈ ದೇಶಗಳು ಹೆಚ್ಚು ಇಂಗಾಲ ಉಗುಳುತ್ತಿರುವುದು ಆತಂಕದ ವಿಷಯವಾಗಿದೆ.
ವಿಶ್ವ ಜನಸಂಖ್ಯೆಯ ಶೇ.42ರಷ್ಟು ಜನಬಾಹುಳ್ಯವಿರುವ ಚೀನಾ, ಭಾರತ, ಬ್ರೆಜಿಲ್, ನೈಜೀರಿಯ, ದಕ್ಷಿಣ ಆಫ್ರಿಕಾ, ಹಯಟಿ, ಮಾಲ್ಟೀವ್ಸ್ ಸುರಿನಾಮ್ ಮತ್ತು ಭೂತಾನ್‌ಗಳು ಜಗತ್ತಿನ ಶೇ.39ರಷ್ಟು ಇಂಗಾಲದ ಡೈ ಆಕ್ಸೆ ಡ್‌ನ್ನು ಉಗುಳುತ್ತಿವೆ. ಅಮೆರಿಕಮತ್ತು ಯುರೋಪಿಯನ್ ಸಮುದಾಯದ ಜಿಡಿಪಿ ಸುರಿನಾಮ್ ಮತ್ತು ಭೂತಾನ್‌ಗಳ ಜಿಡಿಪಿಗಿಂತ5718ಪಟ್ಟು ಹೆಚ್ಚು ಇದೆ. ಅವುಗಳ ಇಂಗಾಲದ ಹೊಮ್ಮುವಿಕೆ ಕೈಗಾರಿಕಾ ಕ್ರಾಂತಿಯ ಪೂರ್ವದಲ್ಲಿ ಇದ್ದುದಕ್ಕಿಂತ 18,921 ಪಟ್ಟು ಹೆಚ್ಚಿದೆ.
ಪ್ಯಾರಿಸ್ ಒಪ್ಪಂದದ ಷರತ್ತುಗಳ ಜತೆ ಪ್ರತಿ ರಾಷ್ಟ್ರವೂ ತನ್ನ ಸ್ವಯಂ ನಿಯಂತ್ರಣಕ್ಕಾಗಿ ನ್ಯಾಶನಲಿ ಡಿಟರ್ ಮೈನಡ್ ಕಾಂಟ್ರಿ ಬ್ಯೂಷನ್ಸ್ ಅನ್ವಯ ನಾವೂ ಸಹ ನಮ್ಮ ಎಮಿಶನ್‌ನ ವಿಷಯದಲ್ಲಿ ತುಂಬಾ ಸುಧಾರಿಸಬೇಕಿದೆ. ಜರ್ಮನಿಯ ಲಾಭಾಪೇಕ್ಷೆ ಇಲ್ಲದ ಸಮೀಕ್ಷಾ ಸಂಸ್ಥೆ ಕ್ಲೆ ಮೇಟ್ ಟ್ರ್ಯಾಕರ್‌ನ ಪ್ರಕಾರ ಸದ್ಯಕ್ಕೆ ನಾವು ಉರಿಸುತ್ತಿರುವ ಕಲ್ಲಿದ್ದಲು ಮತ್ತು ಮೀಥೇನ್ ನಿಂದ ಪ್ಯಾರಿಸ್ ಒಪ್ಪಂದದ1.5ಡಿಗ್ರಿ ಸೆಂಟಿಗ್ರೇಡ್‌ನ ಕೆಳಗಿರುವುದಕ್ಕೆ ಸಾಧ್ಯ ವಾಗುವುದಿಲ್ಲ.
ಆದರೆ2ಡಿಗ್ರಿ ಸೆಂಟಿಗ್ರೇಡ್ ತಲುಪುವ ಎಲ್ಲ ಸಾಧ್ಯತೆಗಳಿವೆ ಎಂದಿದೆ. ಆದರೆ ಅತಿ ಹೆಚ್ಚು ಸುಡುತ್ತಿರುವ ಅಮೆರಿಕ, ರಷ್ಯಾ, ಚೀನಾ, ಜಪಾನ್‌ಗಳು4ಡಿಗ್ರಿ ಸೆಂಟಿಗ್ರೇಡ್‌ನ ಹಾದಿಯಲ್ಲಿವೆ. ಕೆನಡ, ಆಸ್ಟ್ರೇಲಿಯಗಳು3ಡಿಗ್ರಿ ಸೆಂಟಿಗ್ರೇಡ್ ಹೆಚ್ಚಳದ ಸಮೀಪ ಇವೆ ಎಂದು ಕ್ಲೆ ಮೇಟ್ ಟ್ರ್ಯಾಕರ್ ದೃಢಪಡಿಸಿದೆ.
2025ರಲ್ಲಿ ಕೆಬಿಎ (ನ್ಯಾಷನಲೀ ಡಿಟರ್‌ಮೈನಡ್ ಕಾಂಟ್ರಿಬ್ಯೂಷನ್ಸ್)ಗಳನ್ನು ಪುನರ್‌ರೂಪಿಸಬೇಕಿದೆ. ಕರೋನಾ ಪಿಡುಗಿಗಿಂತ ಮುಂಚೆ ಇಂಡೊನೇಷ್ಯಾ ಮತ್ತು ಅಮೆರಿಕ ತಾವು ಕಡಿಮೆ ಕಲ್ಲಿದ್ದಲು ಸುಡಲು ನಿರ್ಧರಿಸಿದ್ದೇವೆ ಎಂಬ ಸೂಚನೆ ನೀಡಿದ್ದವು. ಆದರೆ ರಷ್ಯಾ ಅಳತೆ ಮೀರಿ ಸುಡಲು ಶುರುಮಾಡಿದೆ. ಕೆನಡಾ, ಆಸ್ಟ್ರೇಲಿಯ, ಅಮೆರಿಕಗಳು ತಾವು ಹೆಚ್ಚಿನ ತೈಲ ಮತ್ತು ಅನಿಲ ಉತ್ಪಾದನೆಗೆ ಕೈ ಹಾಕಿರುವುದರಿಂದ ಹೆಚ್ಚಿನ ಕಾರ್ಬನ್ ಎಮಿಷನ್ ಅನಿವಾರ್ಯ ಎಂದು ಹೇಳಿವೆ.
ವಾಸ್ತವವಾಗಿ ಅಭಿವೃದ್ಧಿಕಂಡ ದೇಶಗಳು ಕಲ್ಲಿದ್ದಲನ್ನು ಕಡಿಮೆ ಮಾಡಿ ಮಿಥೇನ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಇದು ಹಸಿರುಮನೆ ಅನಿಲ (ಶಾಖವರ್ಧಕ) ವಾಗಿರುವುದರಿಂದ ಭೂಮಿಯ ಬಿಸಿ ಹೆಚ್ಚುತ್ತಲೇ ಹೋಗುತ್ತದೆ.2050ರ ವೇಳೆಗೆ ಭೂಮಿ ಬಿಸಿಯನ್ನು1.5ಡಿಗ್ರಿಯಷ್ಟು ಏರದಂತೆ ತಡೆಯಲು ಪಳೆಯುಳಿಕೆ ಇಂಧನದ ಉತ್ಪಾದನೆಯನ್ನು ಮುಂದಿನ ಇಡೀ ದಶಕದುದ್ದಕ್ಕೂ ಶೇ.ಅರರಷ್ಟು ಕಡಿಮೆಗೊಳಿಸಬೇಕು ಮತ್ತು ಕಲ್ಲಿದ್ದಲಿನ ಉತ್ಪಾದನೆಯನ್ನು ಶೇ11ರಷ್ಟು ಕಡಿತಗೊಳಿಸಬೇಕು ಎಂದು ಯುಎನ್‌ಇಡಿ ಶಿಫಾರಸು ಮಾಡಿದೆ. ಹಾಗೆ ಮಾಡಲು ತೈಲ ಮತ್ತು ಅನಿಲ ಉತ್ಪಾದನೆಯನ್ನು4ಮತ್ತು3ಪರ್ಸೆಂಟ್ಕಡಿಮೆ ಮಾಡಬೇಕಿದೆ.
ಇಷ್ಟೆಲ್ಲ ಲೆಕ್ಕಾಚಾರಗಳ ನಡುವೆ ಮತ್ತೊಂದು ವಿಶ್ವ ಪರಿಸರ ದಿನಾಚರಣೆ ಬಂದಿದೆ. ಈ ಸಲದ ಅತಿಥೇಯ ದೇಶ ಪಾಕಿಸ್ತಾನ ಇಕೊಸಿಸ್ಟಮ್ ರಿಸ್ಟೋರೇಶನ್ (ಜೀವಿ ಪರಿಸರ ಪುನರ್‌ಸ್ಥಾಪನೆ) ಎಂಬ ಧ್ಯೇಯದೊಂದಿಗೆ ಮುಂದಿನ ಐದು ವರ್ಷಗಳಲ್ಲಿ ಒಂದು ಸಾವಿರ ಕೋಟಿ ಸಸಿ ನೆಡುವ ಯೋಜನೆ ಹಾಕಿಕೊಂಡು, ತನ್ನ ದೇಶದ ಇದ್ದ ಬದ್ದ ಖಾಲಿ ಜಾಗವನ್ನೆಲ್ಲ ಹಸಿರಿನಿಂದ ತುಂಬಲುನಿರ್ಧರಿಸಿದೆ.
ಧ್ಯೇಯದ ವಿಶ್ವವ್ಯಾಪಿ ಅನುಷ್ಠಾನಕ್ಕೆ, ವಿಶ್ವ ಸಂಸ್ಥೆ 2021-2030ರ ಅವಧಿಯನ್ನು ಮೀಸಲಿರಿಸಿದೆ. ದಶಕದ ಕೊನೆಯ ವೇಳೆಗೆ ಶೇ.25ರಷ್ಟು ಇಂಗಾಲದ ಹೊಮ್ಮುವಿಕೆಯನ್ನು ಕಡಿಮೆಮಾಡಬಹುದು ಮತ್ತು ಪ್ರತೀ ದೇಶವೂ ತಾವು ಈಗಾಗಲೇ ಕಳೆದು ಕೊಂಡಿರುವ ಜೀವಿ ಪರಿಸರವನ್ನು ಪುನಃ ಸೃಷ್ಟಿಸಿಕೊಳ್ಳಬಹುದು. ಅದಕ್ಕಾಗಿ ಮಾತು ಕಡಿಮೆ ಮಾಡಿ ಪ್ಯಾರಿಸ್ ಒಪ್ಪಂದಮತ್ತು17ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹೊಂದಿಕೊಂಡಂತೆ ಸೀರಿಯಸ್ಸಾಗಿ ಕೆಲಸ ಮಾಡಬೇಕಿದೆ.
ಇನ್ನು ಮುಂದೆ ಸಭೆ ಸೇರಿ ಒಪ್ಪಂದ ಮಾಡಿಕೊಳ್ಳುವಾಗ ವಾಸ್ತವದ ನೆಲೆಯಲ್ಲಿ ಯೋಚಿಸಿ ಅಲ್ಲಿ ಬರೆದಿರುವುದನ್ನು ಸಾಧಿಸ ಲಾಗುತ್ತದೆಯೆ? ಎಂಬುದನ್ನು ಪರಿಶೀಲಿಸಿ ನಂತರ ಒಪ್ಪಿಗೆ ನೀಡಬೇಕಾದ ಜಾಣ್ಮೆ ಮತ್ತು ಪ್ರಾಯೋಗಿಕ ಜ್ಞಾನ ಬಳಸಿಕೊಂಡು ಹೆಜ್ಜೆ ಇಡಬೇಕಾಗಿದೆ. ಪೃಥ್ವಿಯನ್ನು ಈಗಿರುವ ಸ್ಥಿತಿಯಲ್ಲಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕನಿಷ್ಠ ಕಾಳಜಿ ಇದ್ದರೂ ಇಂಥ ಪ್ರಮಾದಗಳಾಗುವುದಿಲ್ಲ.