ಎರಡು ಸಾವಿರ ವರ್ಷಗಳ ’ರೋಮ್’ ಭೂಮಿಯೊಳಗಿನ ಅಗೋಚರ ಪ್ರಪಂಚ
ವೀಕೆಂಡ್ ವಿಥ್‌ ಮೋಹನ್‌
ಮೋಹನ್‌ ವಿಶ್ವ
ಜಗತ್ತಿನ ಬಹುತೇಕ ಪ್ರೇಮಿಗಳಿಗೆ ‘ರೋಮ್ ’ ಎಂದರೆ ರೋಮಾಂಚನವಾಗುತ್ತದೆ, ಜೀವಿತಾವಧಿಯಲ್ಲಿ ಒಮ್ಮೆಯಾದರೂ ರೋಮ್ ನಗರಕ್ಕೆ ಭೇಟಿ ನೀಡಬೇಕೆಂಬ ಅಸೆ ಬಹಳಷ್ಟು ಪ್ರೇಮಿಗಳಿರುತ್ತದೆ.
ರೋಮೆಂದರೆ ಒಂದು ಅದ್ಭುತ ಮಾಯಾನಗರಿ, ಅದು ವಾಸ್ತುಶಿಲ್ಪಗಳ ಮಾಯಾಲೋಕ, ರೋಮ್ ನಗರದ ಬೀದಿ ಬೀದಿಗಳಲ್ಲಿ ಓಡಾಡುವುದೇ ಒಂದು ಅದ್ಭುತ ಅನುಭವ, ರೋಮ್ ನಗರದಲ್ಲಿ ನೂರಾರು ವರ್ಷಗಳಿಂದ ಗಟ್ಟಿಯಾಗಿ ನೆಲೆಯೂರಿರುವ ಪ್ರಾಚೀನ ಮನೆಗಳ ಮೆಟ್ಟಿಲುಗಳ ಮೇಲೆ ಓಡಾಡುವುದೇ ಒಂದು ಅದ್ಭುತ ಅನುಭವ, ರೋಮ್ ನಗರದ ಹಲವು ಮನೆಗಳ ಮುಖ್ಯ ದ್ವಾರಗಳು ಕಡಿಮೆಯೆಂದರೂ ಒಂದು ಕ್ವಿಂಟಾಲ್ ಇರುತ್ತವೆ, ಅವುಗಳನ್ನು ದೂಡಿಕೊಂಡು ಒಳಹೊಕ್ಕುವುದೇ ಒಂದು ಮಜಾ.
ಕ್ರಿಸ್ತಶಕ80ರ ದಶಕದಲ್ಲಿ ರೋಮನ್ನರು ತಮ್ಮ ಸಾಮ್ರಾಜ್ಯವನ್ನು ಮೆಡಿಟರೇನಿಯನ್ ವರೆಗೂ ವಿಸ್ತರಿಸಿದ್ದರು. ರಾಜ್ಯ ವಿಸ್ತರಣೆಯ ಜತೆಗೆ ತಮ್ಮ ಪ್ರಜೆಗಳ ನಾಗರಿಕತೆಯ ಬಗ್ಗೆ ರೋಮನ್ನರು ಹೆಚ್ಚಿನ ಗಮನವನ್ನರಿಸಿದ್ದರು. ಒಂದು ಅಂದಾಜಿನ ಪ್ರಕಾರ ಕ್ರಿಸ್ತಶಕ 80ರ ದಶಕದಲ್ಲಿ ‘ರೋಮ’ ನಗರದ ಜನಸಂಖ್ಯೆಯು ಹತ್ತು ಲಕ್ಷವಿತ್ತು. ಎರಡು ಸಾವಿರ ವರ್ಷಗಳ ಹಿಂದೆ ಹತ್ತು ಲಕ್ಷ ಜನಸಂಖ್ಯೆಯ ಬೃಹತ್ ನಗರವೊಂದಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಇಂದಿನ ಕಾಲದ ಮೆಟ್ರೋ ನಗರಗಳಿಗೆ ಸರಿಸಮಾನ ವಾದಂಥ ಮೂಲಭೂತ ಯೋಜನೆಗಳನ್ನು ರೋಮನ್ನರು ತಮ್ಮ ಪ್ರಜೆಗಳಿಗೆ ನೀಡಿದ್ದರೆಂಬುದಕ್ಕೆ ಇಂದಿಗೂ ಅಲ್ಲಿ ಅಳಿದು ಉಳಿದಿರುವ ಹಲವು ಯೋಜನೆಗಳ ಕುರುಹುಗಳುಸಾಕ್ಷಿಯಾಗಿವೆ.
ರೋಮನ್ನರು ವಾಸ್ತುಶಿಲ್ಪ ಗಳಿಗೆ ಹೆಸರುವಾಸಿ ಯಾದವರು, ವಿವಿಧ ರೀತಿಯ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ರೋಮನ್ನರು ಪ್ರಸಿದ್ಧ ರಾಗಿದ್ದರು. ಇಂದಿಗೂ ಅಷ್ಟೇ ‘ಇಟಾಲಿಯನ್’ ಶೈಲಿಯ ಬೃಹತ್ ಮನೆಗಳು, ಇಟಾಲಿಯನ್ ಅಡುಗೆ ಮನೆಗಳು ಜಗತ್ತಿನೆಡೆ ಪ್ರಸಿದ್ಧವಾಗಿವೆ. ಎರಡು ಸಾವಿರ ವರ್ಷಗಳ ಹಿಂದೆಯೇ ರೋಮನ್ನರು ‘ಸಿಮೆಂಟ್ ಕಾಂಕ್ರೀಟ್’ ಬಳಸು ತ್ತಿದ್ದರು.
ರೋಮನ್ ಕಾಂಕ್ರೀಟ್ ಇಂದಿಗೂ ಜಗತ್ ಪ್ರಸಿದ್ಧ ಕಾಂಕ್ರೀಟ್. ರೋಮಿನಲ್ಲಿ ತಯಾರಿಸುವ ಕಾಂಕ್ರೀಟ್ ಮಿಶ್ರಣ ಜಗತ್ತಿನಲ್ಲಿಎಲ್ಲಿಯೂ ಸಿಗುವುದಿಲ್ಲ, ಆ ಮಿಶ್ರಣವೇ ಇಂದಿಗೂ ಜಗತ್ತಿನ ಅತ್ಯಂತ ಬಲವಾದಂಥ ಕಾಂಕ್ರೀಟ್ ಮಿಶ್ರಣ. ಈ ಮಿಶ್ರಣಗಳನ್ನು ಬಳಸಿ ಎರಡು ಸಾವಿರ ವರ್ಷಗಳ ಹಿಂದೆ ಕಟ್ಟಿದ ಕಟ್ಟಡಗಳು ರೋಮಿನಲ್ಲಿ ಇಂದಿಗೂ ಜೀವಂತವಾಗಿವೆ. ಜ್ವಾಲಾಮುಖಿಯ ಬೂದಿ, ಸುಣ್ಣ, ಸಮುದ್ರದ ನೀರು, (ರಾಸಾಯನಿಕ) ಬಳಸಿ ರೋಮನ್ ಕಾಂಕ್ರೀಟ್ ತಯಾರಿಸಲಾಗುತ್ತದೆ.
ಈ ಕಾಂಕ್ರೀಟ್ ಮಿಶ್ರಣವು ಕೇವಲ36ಘಂಟೆಗಳಲ್ಲಿ ಗಟ್ಟಿಯಾಗಿ ಬಿಡುತ್ತದೆ. ಈ ವೈಜ್ಞಾನಿಕ ಸೂತ್ರವನ್ನು ರೋಮನ್ನರು ಎರಡು ಸಾವಿರ ವರ್ಷಗಳ ಹಿಂದೆಯೇ ಬಳಸಿ ನೂರಾರು ಕಟ್ಟಡಗಳನ್ನು ನಿರ್ಮಿಸಿದ್ದರು. ಕೆಲವು ವಿಜ್ಞಾನಿಗಳು ಇಂದಿನ ಕಾಲದಲ್ಲಿ ಈ ಮಿಶ್ರಣವನ್ನು ಬಳಸುವುದರಿಂದ ಕಟ್ಟಡಗಳಲ್ಲಿ ರಾಸಾಯನಿಕ ಪ್ರಕ್ರಿಯೆಯುಂಟಾಗಿ ಬಿರುಕು ಬಿಡಬಹುದೆಂದು ಹೇಳುತ್ತಾರೆ, ಆದರೆ ಎರಡು ಸಾವಿರ ವರ್ಷಗಳ ಹಿಂದೆ ಇದೇ ಮಿಶ್ರಣವನ್ನು ಬಳಸಿ ರೋಮನ್ನರು ಕಟ್ಟಿದ ಕಟ್ಟಡಗಳು ಇಂದಿಗೂ ಜೀವಂತ ವಾಗಿವೆ.
ರೋಮನ್ನರಿಗೆ ಪ್ರಕೃತಿಯಲ್ಲಿ ಸಿಗುತ್ತಿದ್ದಂಥ ನೈಸರ್ಗಿಕ ಸಂಪನ್ಮೂಲಗಳು ತುಂಬಾ ಅನುಕೂಲಕರವಾಗಿದ್ದವು. ಈ ಸಂಪನ್ಮೂಲ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕಲೆ ರೋಮನ್ನರಿಗೆ ಚೆನ್ನಾಗಿ ತಿಳಿದಿತ್ತು. ಇಂದಿಗೂ ರೋಮ್ ನಗರದ ಹಲವು ಭಾಗ ಗಳಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ರೋಮನ್ನರು ನೈಸರ್ಗಿಕ ಸಂಪನ್ಮೂಲಗಳನ್ನು ಅಗೆದು ತೆಗೆಯಲು ತೋಡಿದ್ದಂಥ‘ಗಣಿ’ಗಳಿವೆ. ರೋಮ್ ನಗರದಲ್ಲಿ ನಾವು ಓಡಾಡುವ ರಸ್ತೆಗಳ ಕೆಳಗೆ ಅದೆಷ್ಟೋ ಗಣಿಗಳಿವೆ, ಉಳಿದುಕೊಳ್ಳುವ ಹೋಟೆಲುರೂಮುಗಳ ಕೆಳಗೆ ಗಣಿಗಳಿವೆ, ರೋಮ್ ನಗರದ ಮೆಟ್ರೋ ರೈಲುಗಳು ಸಂಚರಿಸುವ ಕಂಬಿಗಳ ಕೆಳಗೆ ಗಣಿಗಳಿವೆ. ಈ ಗಣಿಗಳನ್ನು ಇಂದಿಗೂ ಇಟಲಿ ಸರಕಾರ ಉಳಿಸಿಕೊಂಡಿದೆ.
ಗಣಿಗಳಲ್ಲಿ ಕೆಲಸ ಮಾಡುತ್ತಿದ್ದಂಥ ಸಾವಿರಾರು ಕೂಲಿಯಾಳುಗಳಿಗೆ ಅನುಕೂಲವಾಗುವಂತೆ ರೋಮನ್ನರು ಬಳಸಿರುವ ಹಲವು ತಾಂತ್ರಿಕ ಆವಿಷ್ಕಾರ ಗಳನ್ನು ಇಂದಿಗೂ ಗಣಿಗಳೊಳಗೆ ಕಾಣಬಹುದು. ಒಂದು ಗಣಿಯಿಂದ ಮತ್ತೊಂದು ಗಣಿಗೆ ಹೋಗಲು ಮಾಡಿರುವ ದಾರಿಗಳು, ಗಣಿಗಳಿಂದ ಸಂಪನ್ಮೂಲಗಳನ್ನು ಹೊರತೆಗೆಯಲು ಅಲ್ಲಲ್ಲಿ ಮಾಡಿರುವ ವೃತ್ತಾಕಾರದ ಬಾಗಿಲುಗಳು, ಕೂಲಿಯಾಳುಗಳು ಹತ್ತಿ ಇಳಿಯಲು ಗಣಿಯೊಳಗೆ ಕಟ್ಟಿರುವ ಮೆಟ್ಟಿಲುಗಳು ಇಂದಿಗೂ ಜೀವಂತವಾಗಿದೆ.
ಇಡೀ ರೋಮ್ ನಗರದಲ್ಲಿ ಇಂದಿಗೂ ಅಂದಾಜು70ಗಣಿಗಳು ಹಾಗೆಯೇ ಇವೆಯಂತೆ, ಇವೆಲ್ಲದುರ ಮೇಲೆ ರೋಮ್ ನಗರ ತನ್ನ ಪ್ರಾಚೀನತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಆಧುನಿಕ ಅಭಿವೃದ್ಧಿಯನ್ನೂ ಸಹ ಕೈಗೊಂಡಿರುವುದು ವಿಶೇಷ. ರೋಮನ್ನರ ವಾಸ್ತುಶಿಲ್ಪ ಹಾಗೂ ವೈಜ್ಞಾನಿಕ ಆವಿಷ್ಕಾರ ಗಳಿಗೆ ಅದ್ಭುತ ಸಾಕ್ಷಿಯೆಂಬಂತೆ ರೋಮ್ ನಗರದ ಹೃದಯಭಾಗದಲ್ಲಿ “’ ದೇವಸ್ಥಾನವಿದೆ.
ಕ್ರಿಸ್ತಶಕ113ರಿಂದ125ರ ನಡುವೆ ಕಟ್ಟಿರುವ ಈ ದೇವಸ್ಥಾನದ ವಾಸ್ತುಶಿಲ್ಪ ಇಂದಿಗೂ ಜೀವಂತವಾಗಿ ಪ್ರವಾಸಿಗರನ್ನುಆಕರ್ಷಿಸುತ್ತಿದೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆ ದೇವಸ್ಥಾನದ ಮೇಲಿರುವ ಬೃಹತ್ ‘’, ಕಂಬಿಗಳಿಲ್ಲದೆ ವೃತ್ತಾ ಕಾರದ ‘”’ ಕಟ್ಟುವುದು ಸಾಧ್ಯವಿಲ್ಲದಂಥ ಕಾಲದಲ್ಲಿ ಕೇವಲ ಸಿಮೆಂಟ್ ಕಾಂಕ್ರೀಟ್ ಬಳಸಿ ಈ ಬೃಹತ್ Domeಕಟ್ಟ ಲಾಗಿದೆ.
ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಿರುವ ಈ ಈಟಞಛಿ ಇಂದಿಗೂ ಜಗತ್ತಿನ ಅತಿ ದೊಡ್ಡ ಪುರಾತನ  ಆಗಿದೆ. ಸುಮಾರು20ಮೀಟರ್ ಸುತ್ತಳತೆಯ ಈ Domeಕಟ್ಟಲು ಸುತ್ತಲೂ ಎಂಟು ಕಂಬಗಳನ್ನು ಬಳಸಲಾಗಿದೆ. ಈ   ನಿರ್ಮಿ ಸಲು ‘ಆಟೊಮನ್ ತುರ್ಕ’ರ ಸಹಾಯವನ್ನು ಅಂದಿನ ರೋಮನ್ನರ ರಾಜ ಬಳಸಿಕೊಂಡಿದ್ದನೆಂದು ಹೇಳಲಾಗುತ್ತದೆ. ಈ  ನಿರ್ಮಾಣದ ಹಿಂದಿನ ವಿಜ್ಞಾನವೇ ಒಂದು ಅಚ್ಚರಿ, ಕಂಬಿಗಳನ್ನು ಬಳಸದೆ ಇಷ್ಟು ದೊಡ್ಡ  ಕಟ್ಟಿರುವ ರೋಮನ್ನರು ಇಂದಿಗೂ ಈ Domeಗೆ ಏನು ಆಗದಂತೆ ನೋಡಿಕೊಂಡಿದ್ದಾರೆ.
ಈ Domeನ ನಿರ್ಮಾಣದ ವಿಷಯವನ್ನೊಮ್ಮೆ ತಿಳಿಯಲೇ ಬೇಕು. ಸುಮಾರು ಇಪ್ಪತ್ತು ಮೀಟರ್ ಸುತ್ತಳತೆಯ ಈ  ಕಟ್ಟುವಾಗ ‘ತೂಕ’ ಹಾಗೂ ‘ಕಾಂಕ್ರೀಟ್ ಮಿಶ್ರಣ’ವನ್ನು ಅದ್ಭುತವಾಗಿ ಬಳಸಿಕೊಳ್ಳಲಾಗಿದೆ.  ನ ಮೊದಲ ಸುತ್ತಳತೆಯತೂಕವನ್ನು ಹೆಚ್ಚಿಸಿ ಬಲವಾದಂತಹ ಕಾಂಕ್ರೀಟ್ ಮಿಶ್ರಣವನ್ನು ಬಳಸಿಕೊಳ್ಳಲಾಗಿದೆ, ನಂತರದ ಸುತ್ತಳತೆಯ Domeನ ಭಾಗ ವನ್ನು ನಿಧಾನವಾಗಿ ಕಡಿಮೆ ತೂಕದ ಕಾಂಕ್ರೀಟ್ ಮಿಶ್ರಣದಿಂದ ಮಾಡಲಾಗಿದೆ, Domeನ ಎತ್ತರ ಹೆಚ್ಚಾದಂತೆ ಕಾಂಕ್ರೀಟ್ ಮಿಶ್ರಣದ ತೂಕವನ್ನು ಕಡಿಮೆ ಮಾಡುತ್ತಾ ಬರಲಾಗಿದೆ.
ಹೆಚ್ಚಿನ ತೂಕದಿಂದ ಶುರುಮಾಡಿ, ನಿಧಾನವಾಗಿ ವೈಜ್ಞಾನಿಕ ರೀತಿಯಲ್ಲಿ ತೂಕವನ್ನು ಕಡಿಮೆಮಾಡುತ್ತ  ನನಿರ್ಮಾಣ ವನ್ನು ಸಂಪೂರ್ಣ ಮಾಡಲಾಗಿದೆ.  ನ ಕೆಳಗಿನ ಎಂಟು ಕಂಬಗಳ ಮೇಲೆ  ನ ತೂಕವನ್ನು ಎಂಟು ದಿಕ್ಕು ಗಳಿಂದಲೂ ಸಮತೋಲನವಾಗಿ ಇರುವಂತೆ ಈ ವಾಸ್ತುಶಿಲ್ಪವನ್ನು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ವಿಧಾನದ ಫಲವಾಗಿ ಇಂದಿಗೂ ಕೂಡ ಕಂಬಿಗಳ ಸಹಾಯವಿಲ್ಲದೆಯೇ ಬೃಹತ್  ಕೊಂಚವೂ ಹಾನಿಯಾಗದೆ ಸುಮಾರು ಎರಡು ಸಾವಿರ ವರ್ಷಗಳ ನಂತರವೂ ನಿಂತಿದೆ.
‘”’’ ದೇವಸ್ಥಾನದ ಒಳಬಾಗದಲ್ಲಿ ಗ್ರಾನೈಟ್ ರೂಪದ ಕಲ್ಲು ಗಳನ್ನು ಇಂದಿಗೂ ಕಾಣಬಹುದಾಗಿದೆ, ಗೋಡೆಗಳ ಮೇಲಿನ ಪುರಾತನ ಚಿತ್ರಕಲೆಗಳನ್ನು ಕಾಣಬಹುದು. ರೋಮನ್ನರ ಅಂದಿನ ಕಾಲದ ನಾಗರೀಕತೆಯ ಚಿತ್ರಗಳನ್ನು ಈ ದೇವಸ್ಥಾನದ ಗೋಡೆಗಳ ಮೇಲೆ ಇಂದೂ ಕಾಣಬಹುದು. ‘ರೋಮ’ನಗರಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು ‘’ಗೆ ಭೇಟಿ ನೀಡದೆ ಇರುವುದಿಲ್ಲ, ರೋಮನ್ನರ ಯುದ್ದೋನ್ಮಾನ ಸಾಧನೆಗಳನ್ನು ಪ್ರಜೆಗಳಿಗೆ ಪ್ರದರ್ಶಿಸಲು ಬಳಸುತ್ತಿದ್ದಂಥ ಅತ್ಯಂತ ಪ್ರಮುಖ ಕ್ರೀಡಾಂಗಣವಿದು.
ಕ್ರಿಸ್ತ  ಶಕ80ರ ದಶಕದಲ್ಲಿ ರೋಮನ್ನರು ಈ ಕ್ರೀಡಾಂಗಣ ವನ್ನು ನಿರ್ಮಿಸಿದ್ದರು. ಸುಮಾರು60ಸಾವಿರ ಜನರು ಕೂರಬಹು ದಾದಂಥ ಬಹುದೊಡ್ಡ ಕ್ರೀಡಾಂಗಣವಿದು. ಅಂದಿನ ಕಾಲದಲ್ಲಿಯೇ ವೀಕ್ಷಕರಿಗಾಗಿ ಸಾರ್ವಜನಿಕ ಶೌಚಾಲಯಗಳನ್ನು ಈ ಕ್ರೀಡಾಂಗದಲ್ಲಿ ಕಟ್ಟಲಾಗಿತ್ತು. ತಮ್ಮ ಶಕ್ತಿ ಪ್ರದರ್ಶಿಸಲು ‘’ ಗಳಿಗೆ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿತ್ತು.
‘’ಗಳಿಗೆ ತಾವು ಸೆಣಸಾಡಿ ಕೊಲ್ಲಲು ಯಾವ ಪ್ರಾಣಿಯು ವೇದಿಕೆಯ ಮೇಲೆ ಬರುತ್ತದೆಯೆಂಬ ಊಹೆಯು ಇರುತ್ತಿರಲಿಲ್ಲ. ನೆಲಮಾಳಿಗೆಯಿಂದ ಅವರ ಮುಂದೆ ಯಾವ ಕಾಡುಮೃಗವು ಬೇಕಾದರೂ ಬರಬಹುದಿತ್ತು. ನೆಲಮಾಳಿಗೆ ಯಲ್ಲಿ ಈ ಮೃಗ ಗಳನ್ನು ಮೇಲಕ್ಕೆ ಕಳುಹಿಸಲು ‘ ’ಗಳನ್ನು ರೋಮನ್ನರು ಬಳಸುತ್ತಿದ್ದರು, ಅಪ್ಪಿ ತಪ್ಪಿ ಈ ‘” ’ಗ ಳು ಕೈ ಕೊಟ್ಟರೆ ಮೆಟ್ಟಿಲುಗಳ ಮೂಲಕ ಸೇವಕರು ಪಂಜರದೊಳಗಿನ ಕಾಡುಮೃಗಳನ್ನು ಮೇಲೆತ್ತಲು ವ್ಯವಸ್ಥೆಯನ್ನು ಮಾಡಲಾಗಿತ್ತು.
ತಮ್ಮ ಮುಂದೆ ಬಂದಂಥ ಕಾಡುಮೃಗಗಳ ಜತೆ ‘’ ಗಳು ಕಾದಾಡಿಕೊಳ್ಳುವ ಮೂಲಕ ತಮ್ಮ ಶಕ್ತಿ ಪ್ರದರ್ಶನಮಾಡುತ್ತಿದ್ದರು. ಲಕ್ಷಾಂತರ ಕಾಡುಮೃಗಗಳ ಹತ್ಯೆಯನ್ನು ನೂರಾರು ವರ್ಷಗಳಲ್ಲಿ ‘’ ಕ್ರೀಡಾಂಗಣ ಕಂಡಿದೆ. ಇಂದಿನ ಕಾಲದ ಕ್ರೀಡಾಂಗಣದಲ್ಲಿ ‘ವಿ.ಐ.ಪಿ’ ಗಳು ಕುಳಿತುಕೊಳ್ಳುವ ವ್ಯವಸ್ಥೆ ಇರುವ ಹಾಗೆ,  ನಲ್ಲಿಯೂ ‘ವಿ.ಐ.ಪಿ’ ಗಳಿಗಾಗಿಯೇ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ರೋಮ್ ನಗರದ ಮಧ್ಯಭಾಗದಲ್ಲಿರುವ ಈ ವಾಸ್ತುಶಿಲ್ಪ ಜಗತ್ತಿನ ಪ್ರವಾಸಿಗರನ್ನು ವರ್ಷವಿಡೀ  ಆಕರ್ಷಿಸುತ್ತಲೇ ಇರುತ್ತದೆ. ‘” ಕೂಡ ರೋಮನ್ನರ’ ಸಿಮೆಂಟ್ ಕಾಂಕ್ರೀಟ್’ನಿಂದಲೇ ನಿರ್ಮಾಣ ವಾಗಿರುವುದರಿಂದ  ಹಲವು ದಾಳಿಗಳ ನಂತರವೂ ಸಹ2000ವರ್ಷಗಳ ಬಳಿಕ ತನ್ನ ಕುರುಹುಗಳನ್ನು ಉಳಿಸಿಕೊಂಡಿದೆ. ಇಡೀ ಯೂರೋಪಿನಲ್ಲಿ ‘ ’ ಕುಡಿಯುವು ದೆಂದರೆ ನಗೆಪಾಟಲಿಗೆ ಗುರಿಯಾದ ಹಾಗೆ, ಯೂರೋಪಿನ ಬಹುತೇಕ ದೇಶಗಳಲ್ಲಿ ಶೌಚಾಲಯದಲ್ಲಿ ಬರುವ ನೀರನ್ನೂ ಸಹ ಕುಡಿಯಬಹುದು.
ಪರಿಶುದ್ಧ ವಾದಂಥ ನೀರಿನ ಪೂರೈಕೆಯನ್ನು ಯೂರೋಪಿನ ದೇಶಗಳು ತನ್ನ ಪ್ರಜೆಗಳಿಗೆ ಮಾಡುತ್ತವೆ. ರೋಮ್ ನಗರ ದಲ್ಲಿಯೂ ಅಷ್ಟೇ ಹಾದಿ ಬೀದಿಯಲ್ಲಿ ಕಾಣ ಸಿಗುವ ನಲ್ಲಿಗಳಲ್ಲಿ ನೀರು ಕುಡಿಯಬಹುದು. ರೋಮ್ ನಗರದ ಬಹುತೇಕ ಗಲ್ಲಿಗಳಲ್ಲಿ ಕಾಣಸಿಗುವ ನೀರಿನ ನಲ್ಲಿಗಳಲ್ಲಿನ ನೀರು ಕುಡಿಯಲು ಯೋಗ್ಯ ವಾಗಿವೆ, ಇದರ ಜತೆಗೆ ನಗರದ ನೀರಿನ ಕಾರಂಜಿ ಗಳಲ್ಲಿನ ನೀರೂ ಸಹ ಕುಡಿಯಲು ಯೋಗ್ಯವಾದದ್ದು. ರೋಮ್ ನಗರಕ್ಕೆ ನೀರನ್ನು ಒದಗಿಸುವ ನದಿ ‘ಟೈಬರ್’. ಸುಮಾರು ಎರಡು ಸಾವಿರ ವರ್ಷಗಳಿಂದ ಈ ನದಿಯ ನೀರನ್ನು ಇಲ್ಲಿಯ ಜನರು ಕುಡಿಯುತ್ತಾರೆ.
ಕ್ರಿಸ್ತಶಕ100ರ ಆಸುಪಾಸಿನಲ್ಲಿ ರೋಮ್ ನಗರದ ಜನತೆಯ ನೀರಿನ ದಾಹ ನೀಗಿಸುವ ಸಲುವಾಗಿ ಅಂದಿನ ರಾಜ ಟೈಬರ್ ನದಿಯಿಂದ ಸುಮಾರು20ಕಿಲೋ ಮೀಟರ್‌ಗಳ ಉದ್ದದ ದೊಡ್ಡ ದೊಡ್ಡ ಸುರಂಗಗಳನ್ನು ನಿರ್ಮಿಸಿ ಅದರ ಮೂಲಕ ಜನರಿಗೆ ನೀರನ್ನು ಒದಗಿಸುತ್ತಿದ್ದ. ರೋಮ್ ನಗರದ ಸುಮಾರು25ಮೀಟರ್ ಆಳಕ್ಕೆ ಹೋದರೆ ಇಂದಿಗೂ ಆ ಸುರಂಗವನ್ನು ಕಾಣ ಬಹುದು, ಇಂದಿಗೂ ಸಹ ಆ ಸುರಂಗದಲ್ಲಿ ನೀರು ಹರಿಯುತ್ತದೆ.
ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿತವಾದ ಈ ಸುರಂಗ ರೋಮ್ ನಗರದ ಜನರ ನೀರಿನ ಜೀವನಾಡಿಯಾಗಿತ್ತು. ಭೌತಶಾಸ್ತ್ರದ ಪ್ರಯೋಗದ ಮೂಲಕ2000ವರ್ಷಗಳ ಹಿಂದೆಯೇ ನೀರು ಸುಗಮವಾಗಿ ಹರಿಯಲೆಂದು ಈ ದೊಡ್ಡ ಸುರಂಗ ವನ್ನು ನಿರ್ಮಿಸಲಾಗಿತ್ತು.20ಕಿಲೋ ಮೀಟರು ಉದ್ದದ ಈ ಸುರಂಗವು ಮೊದಲಿನಿಂದ ಕೊನೆಯವರೆಗೂ ಸುಮಾರು4ಮೀಟರ್‌ ಗಳ ಇಳಿಜಾರನ್ನು ಮಾತ್ರ ಹೊಂದಿದೆ. ಈ ಸುರಂಗದ ಅಕ್ಕಪಕ್ಕದ ಗೋಡೆಗಳನ್ನು ಕಟ್ಟಲು ರೋಮನ್ನರು ಬಳಸಿ ಕೊಂಡದ್ದು ಮತ್ತದೇ ‘ರೋಮನ್ ಸಿಮೆಂಟ್ ಕಾಂಕ್ರೀಟ್’.
2000ವರ್ಷಗಳು ಕಳೆದರೂ ಸಹ ‘ಜಲ ನಿರೋಧಕ’ ಸಿಮೆಂಟಿನ ಪ್ರಭಾವದಿಂದ ಈ ಸುರಂಗ ಇಂದಿಗೂ ಸುರಕ್ಷಿತವಾಗಿದೆ. ಈ ಸುರಂಗದ ಮೇಲೆ ಇಂದು ಬಸ್ಸುಗಳು ಓಡಾಡುತ್ತವೆ, ಮೆಟ್ರೋ ರೈಲುಗಳು ಓಡಾಡುತ್ತವೆ, ಟ್ರಾಮ್‌ಗಳು ಓಡಾಡುತ್ತವೆ. ಆದರೂ ಈ ಸುರಂಗ ಸುರಕ್ಷಿತವಾಗಿ ಏನು ತೊಂದರೆಯಾಗದೆ ತನ್ನ ಗಥಾ ವೈಭವವನ್ನು ಉಳಿಸಿಕೊಂಡಿದೆ. ‘ಟೈಬರ್’ ನದಿಯಿಂದ ನೀರನ್ನು ಪೂರೈಸಲು ಈ ಮಾದರಿಯ ಸುಮಾರು20ಸುರಂಗಗಳು ರೋಮ್ ನಗರದಲ್ಲಿವೆ.
ರೋಮ್ ನಗರದ ವಿಶ್ವವಿಖ್ಯಾತ ‘ ’ಗೆ ಇಂದಿಗೂ ಸಹ ಈ ಸುರಂಗದಿಂದ ಮೂಲಕವೇ ನೀರಿನ ಪೂರೈಕೆಯಾಗುತ್ತಿರುವುದು ವಿಶೇಷ. ರೋಮನ್ ನಾಗರಿಕತೆಯ ಮತ್ತೊಂದು ಪ್ರಮುಖ ಸಾಧನೆಯೆಂದರೆ, ಸಾರ್ವಜನಿಕ ಶೌಚ ಹಾಗೂ ಸ್ನಾನ ಗೃಹಗಳು.2000ಸಾವಿರ ವರ್ಷಗಳ ಹಿಂದೆ ರೋಮನ್ನರು ನಗರದ ಹಲವೆಡೆ ಸಾರ್ವಜನಿಕ ಶೌಚ ಹಾಗೂ ಸ್ನಾನ ಗೃಹ ಗಳನ್ನು ನಿರ್ಮಿಸಿದ್ದರು. ಈ ಶೌಚಗೃಹಗಳಿಂದ ಹೊರಬರುವ ನೀರನ್ನು ಜಾಗರೂಕತೆಯಿಂದ ನಗರದ ಹೊರಗಡೆ ಕಳುಹಿಸ ಬೇಕಿತ್ತು.
ನೀರಿನ ಪೂರೈಕೆಗೆ ಸುರಂಗ ವನ್ನು ನಿರ್ಮಿಸಿದ ರೀತಿಯಲ್ಲಿ ರೋಮನ್ನರು ಈ ನೀರನ್ನು ನಗರದಿಂದ ಹೊರಹಾಕಲು ಮತ್ತೊಂದು ದೊಡ್ಡ ಸುರಂಗವನ್ನು ಕೊರೆದಿದ್ದರು. ಎರಡು ಸಾವಿರ ವರ್ಷಗಳ ಹಿಂದೆ ಕೊರೆದ ಈ ಸುರಂಗವು ರೋಮ್ ನಗರದಲ್ಲಿ ಇಂದಿಗೂ ಇದೆ, ಇಂದಿಗೂ ಸಹ ಇಲ್ಲಿ ನೀರು ಹರಿಯುತ್ತದೆ. ಈ ಸುರಂಗವನ್ನೂ ಸಹ ‘ರೋಮನ್ ಸಿಮೆಂಟ್ ಕಾಂಕ್ರೀಟ್’ನಿಂದ ನಿರ್ಮಾಣ ಮಾಡಲಾಗಿದೆ. ಸುರಂಗದ ಒಳಹೊಕ್ಕರೆ ರೋಮನ್ನರು ಸುರಂಗದ ಮೇಲ್ಪದರವನ್ನು ಸಿಮೆಂಟ್‌ನಿಂದ ಮುಚ್ಚಿರುವು ದನ್ನು ಕಾಣಬಹುದು, ಸುರಂಗದ ಮೈಮೇಲೆ ನಾಗರಿಕತೆಯ ಅಭಿವೃದ್ಧಿಯಿಂದ ರೋಮ್ ನಗರ ಅದೆಷ್ಟೇ ಅಭಿವೃದ್ಧಿ ಹೊಂದಿದ್ದರೂ ಸಹ ಏಳಷ್ಟು ಹಾನಿಯಾಗದೆ ಸುರಂಗ ಇಂದಿಗೂ ಸುರಕ್ಷಿತವಾಗಿದೆ.
ಈ ಸುರಂಗದ ತಳಬಾಗ, ಅಂದರೆ ನೀರು ಹರಿಯುವ ಬಾಗದ ಮೇಲೆ ಹಾಸಿರುವ ಕಲ್ಲು ಬಹಳ ವಿಶಿಷ್ಟವಾಗಿದೆ. ನೀರಿನ ಸರಾಗ ವನ್ನು ಹೆಚ್ಚಿಸಲು ಈ ವಿಶಿಷ್ಟ ಕಲ್ಲನ್ನು ಬಳಸಿಕೊಳ್ಳಲಾಗಿದೆ. ಈ ಸುರಂಗದೊಳಗೆ ಪ್ರವಾಹ ಬಂದಾಗ ಹರಿದಿರುವ ನೀರಿನ ಸಾಕ್ಷಿಗಳ ಗುರುತುಗಳನ್ನು ಇಂದಿಗೂ ಕಾಣಬಹುದು. ಕಲುಷಿತ ನೀರನ್ನು ಹೊರಹಾಕಲು ಬಹುಷ್ಯ ಈ ಮಟ್ಟದ ಸುರಕ್ಷಿತ ಸುರಂಗವನ್ನು ರೋಮನ್ನರು ನಿರ್ಮಿಸಿದ್ದುರ ಫಲವಾಗಿ ‘ಮಲೇರಿಯಾ’ದಂಥ ರೋಗಗಳು ಇತರ ದೇಶಗಳ ಜನರನ್ನು ಬಲಿ ಪಡೆದ ರೀತಿಯಲ್ಲಿ ರೋಮನ್ನರನ್ನು ಬಲಿ ಪಡೆಯಲಿಲ್ಲ.
ಸುರಕ್ಷಿತ ಕುಡಿಯುವ ನೀರಿನ ಯೋಜನೆ ಹಾಗೂ ಸುರಕ್ಷಿತವಾಗಿ ಕಲುಷಿತವಾದಂಥ ನೀರನ್ನು ಹೊರಹಾಕಲು ಕಂಡು ಕೊಂಡಂಥ ಉಪಾಯ ರೋಮನ್ನರನ್ನು ಉಳಿಸಿತ್ತು. ಕಲುಷಿತ ನೀರನ್ನು ಹೊರಹಾಕಲು ರೋಮ್ ನಗರದಲ್ಲಿ ಸುಮಾರು74ಸುರಂಗಗಳು ಇಂದಿಗೂ ಕಾಣಸಿಗುತ್ತವೆ. ಪ್ರಾಚೀನ ರೋಮ್ ನಾಗರಿಕತೆಯ ಮಗದೊಂದು ವೈಶಿಷ್ಟ್ಯ ಭೂಮಿಯ ಒಳಗಡೆ ಇರುವ ‘ಸ್ಮಶಾನಗಳು’. ‘” ’ಗಳೆಂದು ಕರೆಯುವ ಈ ಭೂಮಿಯೊಳಗಿನ ಸ್ಮಶಾನಗಳನ್ನು ಎರಡನೆಯ ಶತಮಾನ ದಲ್ಲಿ ರೋಮ್ ನಗರದಲ್ಲಿ ನಿರ್ಮಿಸಲಾಗಿತ್ತೆಂದು ಹೇಳುತ್ತಾರೆ.
ಸುಮಾರು2000ಮೃತದೇಹಗಳನ್ನು ಹೂಳುವ ಸಾಮರ್ಥ್ಯವಿರುವ ಈ ಭೂಮಿಯೊಳಗಿನ ಸ್ಮಶಾನ ಗಳನ್ನು ಇಂದಿಗೂ ರೋಮ್ ನಗರದ ನೆಲಮಾಳಿಗೆಯಲ್ಲಿ ಕಾಣಬಹುದು. ಸುಮಾರು800ಮೀಟರ್ ಉದ್ದವಿರುವ ಈ ನೆಲಮಾಳಿಗೆಗಳಲ್ಲಿ ಕ್ರಿಶ್ಚಿಯನ್ ಸಂಪ್ರದಾಯ ದಂತೆ ಮೃತದೇಹಗಳ ಅಂತ್ಯಸಂಸ್ಕಾರ ಮಾಡಲಾಗಿದೆ. ಮೃತದೇಹಗಳನ್ನು ಮಣ್ಣಿನ ಗೋಡೆಗಳಲ್ಲಿ ಹೂಳಲು ನೆಲಮಾಳಿಗೆಯ ಸ್ಮಶಾನದಲ್ಲಿ ನಿರ್ಮಿಸಿರುವ ಕಪಾಟು ಮಾದರಿಯ ವಿನ್ಯಾಸಗಳು ಇಂದಿಗೂ ಹಾಗೆಯೆ ಉಳಿದಿವೆ. ರೋಮ್ ನಗರದ ಮನೆಗಳ ಕೆಳಗೆ ಇಂದಿಗೂ ಪುರಾತನ ಸ್ಮಶಾನ ಗಳಿರುವುದು ಅಲ್ಲಿನ ಜನರಿಗೆ ಸ್ಪಷ್ಟವಾಗಿ ತಿಳಿದಿದೆ.
ರೋಮನ್ ನಾಗರಿಕತೆಯನ್ನು ಬಿಂಬಿಸುವ ಹಲವಾರು ಚಿತ್ರಗಳು ನೆಲಮಾಳಿಗೆಯ ಸ್ಮಶಾನದ ಕಪಾಟುಗಳ ಮೇಲೆ ಕಾಣಸಿಗುತ್ತವೆ. ಕೆಲವು ಶತಮಾನಗಳ ನಂತರ ಈ ಸ್ಮಶಾನದಲ್ಲಿ ಮೃತದೇಹಗಳನ್ನು ಹೂಳುವುದನ್ನು ನಿಲ್ಲಿಸಲಾಯಿತು, ನಂತರ ರೋಮ್ ನಗರದ ಚರ್ಚ್‌ಗಳಿಗೆ ಸೇರಿದ ಸ್ಮಶಾನದಲ್ಲಿ ಹೂಳಲು ಪ್ರಾರಂಭಿಸಿದರು. ರೋಮ್ ನಗರದಲ್ಲಿ ನೆಲ ಮಾಳಿಗೆಯಲ್ಲಿ ಸುಮಾರು40ಕ್ಕೂ ಹೆಚ್ಚಿನ ಸ್ಮಶಾನ ಗಳಿವೆಯೆಂದು ಪುರಾತತ್ವ ಇಲಾಖೆಯವರು ಹೇಳುತ್ತಾರೆ.
ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದಲೂ ಸಹ ಈ ರೀತಿಯ ನೆಲಮಾಳಿಗೆಯ ಸ್ಮಶಾನವನ್ನು ಕಟ್ಟಲಾಗಿತ್ತೆಂದುಹೇಳಲಾಗುತ್ತದೆ. ಕಣ್ಣ ಮುಂದೆ ಕಾಣುವ ರೋಮ್ ನಗರದ ವಾಸ್ತುಶಿಲ್ಪ ಒಂದೆಡೆಯಾದರೆ,2000ವರ್ಷಗಳ ಹಿಂದೆ ಭೂಮಿ ಯೊಳಗಡೆ ರೋಮನ್ನರು ನಿರ್ಮಿಸಿರುವ ಸಾರ್ವಜನಿಕ ಮೂಲ ಸೌಕರ್ಯ ಸೌಲಭ್ಯಗಳು ಮತ್ತೊಂದೆಡೆ ಇಂದಿಗೂ ಅಚಲವಾಗಿ ನಿಂತಿವೆ.
ಒಂದು ನಗರದ ಸರ್ವತೋಮುಖ ಬೆಳವಣಿಗೆಗೆ ಬೇಕಾದಂಥ ಸೌಲಭ್ಯಗಳನ್ನು2000ವರ್ಷಗಳ ಹಿಂದೆಯೇ ನಿರ್ಮಿಸಿರುವ ರೋಮನ್ನರ ದೂರದೃಷ್ಟಿಯನ್ನು ಮೆಚ್ಚಲೇಬೇಕು. ಅವರು ನಿರ್ಮಿಸಿರುವ ಮೂಲಸೌಕರ್ಯಗಳನ್ನು ಕಾಪಾಡಿಕೊಂಡು ಬಂದಿರುವ ರೋಮನ್ನರ ಪ್ರಸಕ್ತ ತಲೆಮಾರಿನವರಿಗೆ ದೊಡ್ಡದೊಂದು ಸಲಾಂ.