ಜನ ತೆಪ್ಪದ ವಿಷ್ಯದಲ್ಲೂ ತೆಪ್ಪಗಿರಲ್ಲ
ತುಂಟರಗಾಳಿ
ಹರಿ ಪರಾಕ್‌
ಸಿನಿಗನ್ನಡಇತ್ತೀಚೆಗೆ ಕೆಲವರು ಸಿನಿಮಾ ಆಡಿಷನ್‌ಗೆ ಅಂತ ಕರೆದು ಅಲ್ಲಿಗೆ ಅವಕಾಶಕ್ಕಾಗಿ ಬರುವವರನ್ನು ಬಕ್ರಾ ಮಾಡುತ್ತಿರುವ ಘಟನೆಗಳು ವರದಿಯಾಗಿವೆ. ಹಾಗೆ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕೆ ಅಂತ ಬಂದವರ ಬಳಿ, ನೀವು ಕಲಾವಿದರ ಸಂಘದ ಕಾರ್ಡ್ ಮಾಡಿಸಿಕೊಳ್ಳಬೇಕು.
ಅದಕ್ಕೆ ಇಷ್ಟು ಖರ್ಚಾಗುತ್ತೆ, ಅದೆ ನಾವೇ ಮಾಡಿಸಿಕೊಡ್ತೀವಿ ಅಂತ ದುಡ್ಡು ಪೀಕುತ್ತಿರೋ ಇವರನ್ನು ನೋಡಿದ ಮೇಲೆ ಯಂಡಮೂರಿ ವೀರೇಂದ್ರನಾಥ್ ಅವರು ತಮ್ಮ ದುಡ್ಡು ಮಾಡುವುದು ಹೇಗೆ ಎಂಬ ಪುಸ್ತಕದಲ್ಲಿ ಬರೆದ ಒಂದು ವಿಷಯ ನೆನಪಾಯಿತು. ಯಂಡಮೂರಿ ಇದನ್ನ ಎಷ್ಟು ಜಾಣ್ಮೆಯಿಂದ ಬರೆದಿzರೆ ಅಂದ್ರೆ ಯಾರೂ ಈ ರೀತಿ ಮೋಸ ಮಾಡುವವರ ಮೇಲೆ ಕೇಸು ಹಾಕುವಂತಿಲ್ಲ.
ಆ ಪ್ಲ್ಯಾನ್ ಏನಪ್ಪಾ ಅಂದ್ರೆ, ನಾವು ಸಿನಿಮಾ ಮಾಡ್ತಾ ಇದ್ದೀವಿ, ಕಲಾವಿದರು ಬೇಕಾಗಿದ್ದಾರೆ ಅಂತ ಕಾಲ್ ಮಾಡೋದು. ಅಲ್ಲಿಗೆಬರುವವರಿಗೆಲ್ಲ, ನಿಮಗೆ ನಮ್ಮ ಸಿನಿಮಾದಲ್ಲಿ ಅಭಿನಯಿಸೋಕೆ ತರಬೇತಿ ಕೊಡ್ತೀವಿ, ತರಬೇತಿ ಮುಗಿದ ಮೇಲೆ ನಾವು ಸಿನಿಮಾ ಮಾಡುವಾಗ ನಿಮ್ಮನ್ನ ಕರೆದು100ಪರ್ಸೆಂಟ್ ಅವಕಾಶ ಕೊಡುತ್ತೇವೆ ಅಂತ ಅಗ್ರಿಮೆಂಟ್ ಮಾಡಿಕೊಡ್ತೀವಿ. ಆದ್ರೆ ತರಬೇತಿಗೆ ಅಂತ ನೀವು25ಸಾವಿರ ರುಪಾಯಿ ಕೊಡಬೇಕು ಅಂತ ಎಲ್ಲರಿಂದ 25 ಸಾವಿರ ರುಪಾಯಿ ತಗೊಂಡು, ಅದರಲ್ಲಿ ಒಂದೆರಡು ಸಾವಿರ ಖರ್ಚು ಮಾಡಿ, ಯಾವುದೋ ಕೆಲಸಕ್ಕೆ ಬಾರದ ಕೆಲವು ತರಬೇತಿ ಕೊಟ್ಟಂತೆ ಮಾಡಿ ಕಳಿಸೋದು.
ಇವರ ಪ್ಲ್ಯಾನ್ ಏನಪ್ಪಾ ಅಂದ್ರೆ ಕಥೆ ಅಲ್ಲಿಗೇ ಮುಗೀತು. ಅವರು ಯಾವತ್ತೂ ಸಿನಿಮಾ ಮಾಡೋದೇ ಇಲ್ಲ. ಅವರು ಅಗ್ರಿಮೆಂಟ್‌ ನಲ್ಲಿ ಹೇಳಿರೋದು ನಾವು ಸಿನಿಮಾ ಮಾಡುವಾಗ100ಪರ್ಸೆಂಟ್ ನಿಮ್ಮನ್ನು ಕರೆದು ಅವಕಾಶ ಕೊಡ್ತೀವಿ ಅಂತ. ಸಿನಿಮಾ ಮಾಡೇ ಮಾಡ್ತೀವಿ ಅಂತೇನೂ ಹೇಳಿಲ್ಲ. ಅಲ್ಲಿಗೆ ಅವರು ಸಿನಿಮಾ ಮಾಡಲ್ಲ, ಇವರಿಗೆ ಅವಕಾಶ ಸಿಗಲ್ಲ. ಆದರೆ, ಅವರಿಗೆ ಮಾತ್ರ ಪ್ರತಿಯೊಬ್ಬರಿಂದ ಕಮ್ಮಿ ಅಂದ್ರೂ ೨೦ ಸಾವಿರ ರುಪಾಯಿ ಉಳಿಯುತ್ತೆ. ಪುಣ್ಯಕ್ಕೆ ಸ್ಯಾಂಡಲ್ವುಡ್‌ನಲ್ಲಿ ಇಂಥ ಕೆಲಸ ಇನ್ನೂ ಯಾರೂ ಮಾಡಿಲ್ಲ.
ನೆಟ್ ಪಿಕ್ಸ್ಒಂದಿನ ಕಾರ್‌ನಲ್ಲಿ ಒಬ್ಬ ವ್ಯಕ್ತಿ ತುಂಬಾ ಫಾಸ್ಟ್ ಆಗಿ ಹೋಗ್ತಾ ಇದ್ದ. ಹೈ ವೇ ನಲ್ಲಿ ಟ್ರಾಫಿಕ್ ಪೊಲೀಸ್ ಹಿಡಿದ್ರು. ಯಾಕೆ ಓವರ್ ಸ್ಪೀಡಿಂಗ್ ಮಾಡ್ತಾ ಇದ್ದೀರಾ ಅಂತ ಕೇಳಿದ್ದಕ್ಕೆ ನನ್ನ ಕೆಲಸಕ್ಕೆ ಲೇಟ್ ಆಗ್ತಾ ಇದೆ ಅದಕ್ಕೆ ಫಾಸ್ಟ್ ಆಗಿ ಹೋಗ್ತಾ ಇದ್ದೆ ಅಂದ. ಏನಂಥ ಅರ್ಜೆಂಟ್ ಕೆಲ್ಸ, ಎಲ್ಲಿ ಕೆಲ್ಸ ಮಾಡೋದು ನೀನು, ಏನು ನಿನ್ನ ಕೆಲ್ಸ ಅಂತ ಕೇಳಿದ್ರು ಪೊಲೀಸ್. ಅದಕ್ಕೆ ಆ ವ್ಯಕ್ತಿ ನಾನು ಜಂಬೋ ಸರ್ಕಸ್ ನಲ್ಲಿ ಕೆಲ್ಸ ಮಾಡ್ತಾ ಇರೋದು, ಅಲ್ಲಿ ನಾನು ಬ್ಯಾಲೆನ್ಸಿಂಗ್ ಕೆಲ್ಸ ಮಾಡ್ತೀನಿ.
ಒಂದ್ ಇಪ್ಪತ್ತು ರಿಂಗ್‌ಗಳನ್ನ ಗಾಳಿಯಲ್ಲಿ ಎಸೆದು, ಅವು ಕೆಳಗೆ ಬರ್ತಾ ಇದ್ದ ಹಾಗೆ ಹಿಡಿಯುತ್ತಾ ಮತ್ತೆ ಕೈಯಲ್ಲಿರೋದನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆನ್ಸ್ ಮಾಡೋದು ನನ್ನ ಕೆಲಸ ಅಂದ. ಅದಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ನಿನ್ನ ನಂಬೋದು ಹೆಂಗೆ, ಎಲ್ಲಿ, ಒಂದ್ಸಲ ಇದ್ದೇ ಮಾಡಿ ತೋರಿಸು ಅಂದ. ಅದಕ್ಕೆ ಆ ವ್ಯಕ್ತಿ, ಇಲ್ಲ ರಿಂಗ್‌ಗಳೆ ಅ ಸರ್ಕಸ್‌ನಲ್ಲಿ ಇರ್ತಾವೆ. ನನ್ನತ್ರ ಇರಲ್ಲ ಅಂದ. ಹೀಗೆ ಪೊಲೀಸ್ ಮತ್ತು ಆ ವ್ಯಕ್ತಿ ಮಧ್ಯೆ ಸಂಭಾಷಣೆ ನಡೆಯುತ್ತಿರುವಾಗ ಅಲ್ಲಿಗೆ ಖೇಮು ಕಾರಲ್ಲಿ ಬಂದ.ಖೇಮು ಸಂಜೆ ಹೊತ್ತಿಗೇ ಕುಡಿದು ಫುಲ್ ಟೈಟ್ ಆಗಿದ್ದ.
ಇವರಿಬ್ಬರೂ ಮಾತಾಡ್ತಾ ಇರೋದನ್ನ ಗಮನಿಸಿ ಅ ಸೈಡಲ್ಲಿ ನಿಂತುಕೊಂಡ. ಈ ವ್ಯಕ್ತಿ ರಿಂಗ್ ಇಲ್ಲ ಅಂದಿದ್ದಕ್ಕೆ, ಸರಿ ನನ್ನಕಾರ್‌ನಲ್ಲಿ ಒಂದಷ್ಟು ರಿಂಗ್ಸ್ ಇzವೆ ಅವುಗಳನ್ನೇ ಎಸೆದು, ಹಿಡಿದು ಬ್ಯಾಲೆನ್ಸ್ ಮಾಡಿ ತೋರಿಸು ಅಂದ ಪೊಲೀಸ್. ಆ ವ್ಯಕ್ತಿ ಒಪ್ಪಿಕೊಂಡು ಪೊಲೀಸ್ ತಂದುಕೊಟ್ಟ ಆ ರಿಂಗ್ ಗಳನ್ನ ಮೇಲೆ ಎಸೆದು ಹಿಡಿಯುತ್ತಾ ಬ್ಯಾಲೆನ್ಸ್ ಮಾಡಿ ತೋರಿಸಿದ. ಅದಕ್ಕೆ ಪೊಲೀಸ್, ಸರಿ, ನೀನಿನ್ನು ಹೊರಡು ಎಂದು ಅವನನ್ನು ಕಳಿಸಿದ.
ಇದನ್ನು ನೋಡಿದ ಖೇಮು, ತನ್ನ ಕಾರನ್ನು ಅಲ್ಲೇ ಬಿಟ್ಟು, ಸೀದಾ ಹೋಗಿ ಪೊಲೀಸ್ ಗಾಡಿಯಲ್ಲಿ ಕುಳಿತುಬಿಟ್ಟ. ಪೊಲೀಸ್‌ಗೆ ಆಶ್ಚರ್ಯ ಆಯ್ತು. ಯಾಕೆ ನೀನೇ ಬಂದು ಪೊಲೀಸ್ ಕಾರಲ್ಲಿ ಕೂತೆ ಅಂತ ಕೇಳಿದ್ದಕ್ಕೆ ಖೇಮು ಹೇಳಿದ ಅಯ್ಯೋ, ಅಷ್ಟೆ ರಿಂಗ್ ಎಸೆದು ಹಿಡಿದು ಬ್ಯಾಲೆನ್ಸ್ ಮಾಡಿ ತೋರಿಸಿ, ನಾನು ಕುಡಿದಿಲ್ಲ ಅಂತ ಪ್ರೂವ್ ಮಾಡೋಕೆ ನನ್ ಕೈಲಾಗಲ್ಲ, ನಾನೇ ಹೇಳ್ತಾ ಇದ್ದೀನಿ, ಫುಲ್ ಟೈಟಾಗಿದ್ದೀನಿ. ಅರೆಸ್ಟ್ ಮಾಡಿ ನನ್ನ.
ಲೂಸ್ ಟಾಕ್(ಕಾಲ್ಪನಿಕ ಸಂದರ್ಶನ) ಎಂ.ಪಿ. ರೇಣುಕಾಚಾರ್ಯಏನ್ ಆಚಾರ್ಯರೇ, ಇದ್ದಕ್ಕಿದ್ದಂಗೆನಿಮ್ ಬಗ್ಗೆ ಜನ ಒಳ್ಳೇ ಮಾತಾಡೋ ಥರಮಾಡಿಬಿಟ್ರಿ?ಬಹಳ ಜನ ಒಳ್ಳೆ ಮಾತಾಡ್ತಿದ್ದಾರೆ, ಆದರೆ ಕೆಲವ್ರು ಮಾತ್ರ, ಇನ್ನೂ ಆ ನರ್ಸ್ ವಿಷ್ಯ ಇಟ್ಕೊಂಡೇ ಕಾಲೆಳಿತಾರೆ ನರ್ಸತ್ತೋರು.
ಒಳ್ಳೆ ಕೆಲ್ಸ ಮಾಡ್ತಾ ಇದ್ದೀರಾ ಕೆಟ್ಟ ಮಾತು ಯಾಕೆ ಆಡ್ತೀರಾ ಬಿಡಿ. ಅದಿರ್ಲಿ, ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಥರ ನೀವುಆಸ್ಪತ್ರೆ ವಾಸ್ತವ್ಯ ಮಾಡ್ತಾ ಇದ್ದೀರಲ್ಲ?
ಅದ್ರೂ ಜನಕ್ಕೆ ತೃಪ್ತಿ ಇಲ್ಲ. ಪೇಶೆಂಟ್‌ಗಳ ಜೊತೆಯ ಮಲಗಿದ್ರೂ ಕೆಲವ್ರು ನನ್ನ ಪೇಶೆನ್ಸ್ ಟೆಸ್ಟ್ ಮಾಡ್ತಾ ಇದ್ದಾರೆ. ಇದನ್ನಡ್ರಾಮ ವಾಸ್ತವ್ಯ ಅಂತಾರೆ.
ಅಲ್ಲಾ ಸಾರ್, ಬಗ್ಗೆ ಯಾಕೋ ನೀವು ಈ ಕೆಲವ್ರು ಬಗ್ಗೆನೇ ಜಾಸ್ತಿ ತಲೆ ಕೆಡಿಸಿಕೊಂಡಿರೋ ಥರ ಇದೆಮತ್ತೆ, ಕರೋನಾ ಟೈಮಲ್ಲೂ ವಿಷ ಕಾರೋಣ ಅಂತಾರಲ್ಲ, ಆದ್ರೂ ಈ ಕೆಲವರು ಅಂದ್ರೆ ಬರೀ ಕೇವಲವಾಗಿ ಮಾತಾಡೋರು ಅಂದ್ಕೊಂಡು ಸುಮ್ಮನಾಗಬೇಕು ಅಷ್ಟೇ.
ನಾಲ್ಕು ಜನ ಏನಂತಾರೆ ಅಂತ ಯೋಚ್ನೆ ಮಾಡಿದ್ರೆ, ಮೂರು ದಿನದ ಬಾಳು ಕಷ್ಟಆಗ್ಬಿಡುತ್ತೆ ಸಾರ್..ಹೌದೌದು, ನಾನ್ ತಲೆಕೆಡಿಸ್ಕೊಳ್ಳಲ್ಲ ಇನ್ಮೇಲೆ. ತೆಪ್ಪದ ವಿಷ್ಯದಲ್ಲೂ ತೆಪ್ಪಗಿರದೆ ಟೀಕೆ ಮಾಡಿದ್ರು. ಆದ್ರೂ ನನ್ ಕೈಲಾದಷ್ಟು ಒಳ್ಳೆ ಕೆಲ್ಸ ಮಾಡ್ತಾ ಇದ್ದೀನಿ.
ಸರಿ, ಈ ನಿಮ್ಮ ಇತ್ತೀಚಿನ ಬದಲಾವಣೆಗೆ ಸೂರ್ತಿ ಅಥವಾ ಕಾರಣ ಏನು?ಏನಿಲ್ಲ,25ಜನ ಎಂಪಿಗಳು ಕರ್ನಾಟಕಕ್ಕೆ ಏನೂ ಮಾಡ್ತಿಲ್ಲ ಅಂತ ಜನ ಆಡ್ಕೋತಾ ಇದ್ರು, ಅದಕ್ಕೆ ಒಬ್ಬ ಎಂಪಿ ನಾದ್ರೂ ಕೆಲ್ಸ ಮಾಡ್ತಾ ಇzನೆ ಅಂತ ತೋರಿಸೋಕೆ ಅಷ್ಟೇ.
ಲೈನ್ ಮ್ಯಾನ್ಜೀವನದಲ್ಲಿ ಕಷ್ಟ ಬಂದ್ರೆ ಅದರಿಂದ ಹೊರಗ್ ಬರೋದ್ ಹೇಗೆ ಅಂತ ಯೋಚನೆಮಾಡ್ತೀವಿ..ಆದ್ರೆ ಈ ಲಾಕ್ ಡೌನ್ ಥರದ ಕಷ್ಟ ಬಂದ್ರೆ ‘ಹೊರಗ್ ಬರೋದ್ ಹೇಗೆ’ ಅಂತನೂ ಯೋಚನೆ ಮಾಡೋಕಾಗಲ್ಲ.
ಜನ – ಈ ಭ್ರಷ್ಟ ರಾಜಕಾರಣಿಗಳನ್ನೆಲ್ಲ ಅರಬ್ಬೀ ಸಮುದ್ರಕ್ಕೆ ಎಸೀಬೇಕು.ರಾಜಕಾರಣಿ – ಸಿಕ್ಕಾಪಟ್ಟೆ ಜನ ಇದೀವಿ ಕಣಪ್ಪಾ, ಜಾಗ ಸಾಕಾಗಲ್ಲ.
ಅಂಡು ಮುಚ್ಕೊಂಡಿರು ಅಂತ ಯಾರಿಗಾದ್ರೂ ಬೈದ ಮೇಲೆ ನನ್ನ ಮಾತನ್ನ ವಾಪಸ್ತಗೋತೀನಿ ಅಂತ ಹೇಳೋದು‘’
ಫ್ಲೆಕ್ಸ್ ಹಾಕಬಾರದು ಅಂತ ಕಾನೂನು ಇದ್ರೂ ರಾಜಕಾರಣಿಗಳು ಅದಕ್ಕೆ ಕೇರ್ ಮಾಡಲ್ಲ.ಯಾಕಂದ್ರೆ ಅವರಿಗೆ ಎಲ್ಲಾ ನಿಯಮಗಳು ಫ್ಲೆಕ್ಸಿಬಲ್
ಧೂಮಪಾನ ವಿರೋಧಿ ಸ್ಲೋಗನ್ಮಾಸ್ – ಸ್ವಲ್ಪ ದಿನ ಹೊಗೆ ಬಿಟ್ಟ, ಆಮೇಲೆ ಹೋಗೇ ಬಿಟ್ಟ ಕ್ಲಾಸ್ – ಸಿಗರೇಟನ್ನು ‘ಆರಿಸಿ’, ಆರೋಗ್ಯವನ್ನು ‘ಆರಿಸಿ’.
ವಾತಾವರಣ ‘ಚೇಂಜ್’ ಆದ್ರೆ ಏನಾಗುತ್ತೆ?‘ದುಡ್ಡಿನ’ ಮಳೆ ಸುರಿಯುತ್ತೆ.
ಎಲ್ಲವನ್ನೂ ಅನುವಾದ ಮಾಡೋಕ್ ಹೋಗ್ಬಾರ್ದುಇಂದ್ರೆ ‘ವಸತಿ’ ಖಾತೆ ಸಚಿವ ‘ಹೋಮ’ ಮಿನಿಸ್ಟರ್ ಆಗಿಬಿಡ್ತಾನೆ.
ಕಾರ್ಡ್ಸ್ ಆಡಿ ತನ್ನ ಸಂಸಾರ ಹಾಳು ಮಾಡಿಕೊಂಡವನನ್ನು ಏನಂತ ಕೇಳ್ಬೇಕು?ನೀನಾರಿಗಾದೆಯೋ ‘ಎಲೆ’ ಮಾನವ?
ಗ್ರಹಚಾರ ಕೆಟ್ರೆ   ಅನ್ನೋ ಥರ ಇದ್ದವರೂ ಕಿತ್ಕೊಂಡ್ ತಿನ್ ಅನ್ನೋ ಥರ ಆಗ್ತಾರೆ ಬಿಯರ್ ಕುಡಿಯುವುದರಲ್ಲಿ ತಲ್ಲೀನನಾದವನು‘ಮಗ್’ನ