ಸಿಎಂ ತಿಳಿದಿರಲೇಬೇಕಾದ, ಆದರೆ ತಿಳಿಯದ ಸಂಗತಿಗಳು !
ಬೇಟೆ
ಜಯವೀರ ವಿಕ್ರಮ ಸಂಪತ್‌ ಗೌಡ
ರಾಜಕಾರಣಕ್ಕೆ ಹೊತ್ತು – ಗೊತ್ತು ಇಲ್ಲ. ಅದಕ್ಕೆ ಯಾರೂ ಮುಹೂರ್ತ ನಿಗದಿಪಡಿಸುವುದಿಲ್ಲ. ಸಾವಿನ ಮನೆಯಲ್ಲೂ ರಾಜಕಾರಣ ಮಾಡುವವರಿದ್ದಾರೆ. ಹಾಲಿ ಶಾಸಕರೊಬ್ಬರು ನಿಧನರಾದಾಗ, ಅವರ ಅಂತ್ಯಸಂಸ್ಕಾರ ಮುಗಿಸಿ ಬರುವಾಗ, ನಾಯಕರೊಬ್ಬರ ಕಿವಿಯಲ್ಲಿ ‘ಸಾರ್, ಈ ಕ್ಷೇತ್ರದಲ್ಲಿ ಮರುಚುನಾವಣೆಗೆ ನನಗೇ ಟಿಕೆಟ್ ಕೊಡಿಸಿ’ ಎಂದು ಮನವಿಯಿಡುವ ರಾಜಕಾರಣಿಗಳು ಇರುವಾಗ, ಸಾವು – ಸೂತಕದ ಮನೆಯಲ್ಲೂ ರಾಜಕಾರಣ ಹಬೆಯಾಡುವುದುಂಟು.
ಆದರೆ ಇಡೀ ದೇಶ ಕರೋನಾ ಸೋಂಕಿನಿಂದ ಕಂಗೆಟ್ಟಿರುವಾಗ, ಇಂಥ ದುರಿತ ಕಾಲದಲ್ಲಿ ಯಾರೂ ರಾಜಕಾರಣದ ಬಗ್ಗೆ ಮಾತಾಡಲಿಕ್ಕಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕರ್ನಾಟಕದಲ್ಲಿ ಅವಿವೇಕಿಗಳು, ಮುಖ್ಯಮಂತ್ರಿಯವರನ್ನು ಬದಲಾಯಿಸಲು ಹೊರಟಿದ್ದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಕಳೆದ ಆರು ತಿಂಗಳುಗಳಿಂದ ನಾಯಕತ್ವ ಬದಲಾವಣೆ ವಿಷಯ ಆಗಾಗ ಪ್ರಸ್ತಾಪವಾಗುತ್ತಿದ್ದರೂ, ಕರೋನಾ ಕಾಲದಲ್ಲಿ ಅದು ಮುನ್ನೆಲೆಗೆ ಬರಲಿಕ್ಕಿಲ್ಲ ಎಂದೇ ಅನೇಕರು ಭಾವಿಸಿದ್ದರು. ಆದರೆ ಕಳೆದ ಹತ್ತು ದಿನಗಳಿಂದ ಕರೋನಾ ಮರೆಯಾಗಿ, ನಾಯಕತ್ವ ಬದಲಾವಣೆಯೇ ಮುಖ್ಯವಾಗಿರುವುದನ್ನು ನೋಡಿದರೆ, ಈ ಜನ ಸೂತಕದ ಮನೆಯಲ್ಲೂ ಶೀತ ಕಾಯಿಸಿಕೊಳ್ಳಲು ಹಿಂದೂ – ಮುಂದು ನೋಡಲಾರರು.
ಕರೋನಾದಿಂದ ಜನ ಸಾಯುತ್ತಿದ್ದಾರೆ. ಜನರಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಸಿಗುತ್ತಿರಲಿಲ್ಲ. ಆಮ್ಲಜನಕ ಸಿಗುತ್ತಿರಲಿಲ್ಲ. ಸತ್ತರೆಅಂತ್ಯಸಂಸ್ಕಾರಕ್ಕೆ ನೂರೆಂಟು ವಿಘ್ನ. ಸಾಲು ಸಾಲು ಹೆಣಗಳನ್ನಿಟ್ಟು, ಸಾಮೂಹಿಕವಾಗಿ ಸುಡಲಾಯಿತು. ಶವಸಂಸ್ಕಾರ ಮಾಡಲಾಗದೇ ಗಂಗಾ ನದಿಯಲ್ಲಿ ನೂರಾರು ಶವಗಳನ್ನು ಎಸೆಯಲಾಯಿತು. ಇಡೀ ದೇಶ ಶೋಕತಪ್ತವಾಗಿತ್ತು. ಕರ್ನಾಟಕ ಕೂಡ ಕರೋನಾ ಹೊಡೆತಕ್ಕೆ ತತ್ತರಿಸಿತ್ತು.
ಭಾರತದಲ್ಲಿ ದಿಲ್ಲಿ, ಮುಂಬೈ ನಂತರ ಅತಿ ಹೆಚ್ಚು ಸೋಂಕು ಇಲ್ಲಿಯೇ ಹರಡಿತ್ತು. ಸುಮಾರು ಹದಿನೈದು ದಿನಗಳ ಕಾಲ ಎಲ್ಲವೂ ಅಯೋಮಯ. ಅಂಥ ಸ್ಥಿತಿಯ ಈ ದರಿದ್ರ ರಾಜಕಾರಣವೂ ಸೋಂಕಬೇಕಾ? ಇದೇ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಿಸಬೇಕು ಎಂದು ಕೆಲವರು ಒಳಗಿಂದೊಳಗೆ ಹೊಸ ಕಿತಬಿ ಶುರು ಮಾಡಿದ್ದರು. ಜನ ಸತ್ತರೇನು, ಪರಿತಪಿಸುತ್ತಿದ್ದರೇನು, ಇವರು ಮಾತ್ರ ಒಳಗಿಂದೊಳಗೇ ಕಾರಸ್ಥಾನ ಮಾಡುತ್ತಿದ್ದರು.
ಯಡಿಯೂರಪ್ಪನವರು ಕರೋನಾ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ ಎಂಬ ಕಾರಣ ನೀಡಿ, ಅವರನ್ನು ಎಗರಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಅಷ್ಟಕ್ಕೇ ಸುಮ್ಮನಾಗದ ಯಡಿಯೂರಪ್ಪನವರು ಅದಕ್ಕೆ ಪ್ರತಿತಂತ್ರ ರೂಪಿಸಿ ಸದ್ಯಕ್ಕೆ ತಮ್ಮ ಕೈಮೇಲಾಗುವಂತೆ ಮಾಡಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಇದು ತಾತ್ಕಾಲಿಕ ಶಮನವಷ್ಟೇ.ಯಡಿಯೂರಪ್ಪನವರು ಹಳೆ ಹುಲಿ. ಅವರಿಗೆ ರಾಜಕೀಯದ ಪಟ್ಟುಗಳನ್ನು ಹೇಳಿಕೊಡಬೇಕಿಲ್ಲ.
ಸಚಿನ್ ತೆಂಡೂಲ್ಕರ್‌ಗೆ ಹೇಗೆ ಬ್ಯಾಟು ಹಿಡಿಯಬೇಕು ಎಂದು ಹೇಳುವವನಂಥ ಶತಮೂರ್ಖ ಇನ್ನೊಬ್ಬನಿಲ್ಲ. ಆದರೆ ತೆಂಡೂ ಲ್ಕರ್ ಕೂಡ ತನ್ನ ಮುಂದೆ ತನ್ನನ್ನು ಮೀರಿಸುವವರು ಬಂದಿzರೆ, ತಾನೂ ಇವರ ಮುಂದೆ ಒಂದು ದಿನ  ಮಂಕಾಗ ಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲೇ ಬೇಕು. ಆಗ ಬ್ಯಾಟು ಹಿಡಿಯುವುದನ್ನು ಬೇರೆಯವರಿಂದ ಕಲಿಯದಿದ್ದರೂ, ಪಟ್ಟುಗಳನ್ನು ಬದಲಿಸುವ ತಂತ್ರಗಳನ್ನು ಶೋಧಿಸಲೇಬೇಕು. ಯಡಿಯೂರಪ್ಪನವರಿಗೆ ಈ ಸಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗಲೇ ಒಂದು ಸಂಗತಿ ಸ್ಪಷ್ಟವಾಗಿ ಗೊತ್ತಿತ್ತು. ಅದೇನೆಂದರೆ, ತಮಗೆ ವಯಸ್ಸಾಗಿದೆ, ಎಪ್ಪತ್ತೈದು ವರ್ಷವಾದವರು ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಬೇಕು ಎಂಬುದು ಪಕ್ಷದ ಸಿದ್ಧಾಂತ.
ಹೀಗಿದ್ದರೂ ತಮ್ಮ ವಿಷಯದಲ್ಲಿ ಉದಾರ ಭಾವ ತೋರಿ, ವಿನಾಯತಿ – ರಿಯಾಯತಿಗಳನ್ನೆ ನೀಡಲಾಗಿದೆ. ಈಗ ಪ್ರಾಪ್ತವಾದಅಽಕಾರವನ್ನು ಗಟ್ಟಿಯಾಗಿ ಇಟ್ಟುಕೊಳ್ಳಬೇಕು ಅಂದರೆ, ಉತ್ತಮ ಆಡಳಿತವನ್ನು ನೀಡಬೇಕು, ತಮ್ಮ ಕಾರ್ಯಶೈಲಿಯನ್ನುಬದಲಿಸಿಕೊಳ್ಳಬೇಕು, ತಾವು ರಾಜ್ಯ ಬಿಜೆಪಿಗೆ ಅನಿವಾರ್ಯ ವಾಗಬೇಕು, ತಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಪರಿಸ್ಥಿತಿನಿರ್ಮಿಸಬೇಕು.. ಇತ್ಯಾದಿ. ಆದರೆ ಅವರು ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯ ತನಕ ಅವರ ಕಾರ್ಯಶೈಲಿಯಲ್ಲಿ ಎದ್ದು ಕಾಣುವ ಬದಲಾವಣೆಯೇನೂ ಇಲ್ಲ.
ಇನ್ನು ಆಡಳಿತವಾ? ಅದರಲ್ಲೂ ಹೇಳಿಕೊಳ್ಳುವ ಸಂಗತಿಗಳೇನೂ ಕಾಣುವುದಿಲ್ಲ. ಅವರು ಒಂಥರಾ ಮ್ಯಾನೇಜ್ ಮಾಡಿಕೊಂಡು ಹೋಗುತ್ತಿದ್ದಾರೆ. ಕ್ರಿಕೆಟ್ ಆಟದಲ್ಲಿ ವಿಕೆಟ್ ಚೆಲ್ಲದೇ ದಿನವನ್ನು ಪೂರೈಸುವ ನೈಟ್ ವಾಚಮನ್ ಥರ ಆಡಳಿತ ನೀಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಕಳೆದ ಒಂದು ವರ್ಷದಿಂದ ಕರೋನಾ ಕಾಟ. ಹೀಗಾಗಿ ಅವರಿಗೆ ಅಂದುಕೊಂಡಿದ್ದೆಲ್ಲವನ್ನೂ ಮಾಡಲು ಆಗುತ್ತಿಲ್ಲ. ಕರೋನಾ ಹೊಡೆತದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟು ಕಿಲುಸಾರೆದ್ದು ಹೋಗಿದೆ. ಇಂಥ ಸ್ಥಿತಿಯಲ್ಲಿ ಯಾರೇಇದ್ದರೂ ಮ್ಯಾಜಿಕ್ ಮಾಡುವುದು ಸಾಧ್ಯವಿಲ್ಲದ ಮಾತು.
ಬಾತುಕೋಳಿಯಂತೆ ನೀರೊಳಗೆ ಕಾಲು ಬಡಿಯುತ್ತಿರಬೇಕು, ಆದರೆ ಮುಂದಕ್ಕೆ ಹೋಗಬಾರದು, ಮುಳುಗಬಾರದು, ಆದರೆತೇಲುತ್ತಿರಬೇಕು ಎಂಬ ಸ್ಥಿತಿಯಲ್ಲಿ ಅಧಿಕಾರ ನಿರ್ವಹಿಸುವುದಕ್ಕೆ ಚಾಣಾಕ್ಷತೆ ಬೇಕು. ಇದನ್ನು ಯಡಿಯೂರಪ್ಪನವರು ಇನ್ನಷ್ಟುಚೆಂದವಾಗಿ ಮಾಡಬಹುದಿತ್ತೇನೋ?! ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತವರು ತಿಳಿದುಕೊಳ್ಳಬೇಕಾದ ಒಂದು ಮೂಲಭೂತ ಸಂಗತಿಯೆಂದರೆ, ಪಕ್ಷ ಮತ್ತು ಪಕ್ಷದ ಅಧ್ಯಕ್ಷರೊಂದಿಗೆ ಉತ್ತಮ ಸಂಬಂಧ ಹೊಂದುವುದು, ತಿಂಗಳಲ್ಲಿ ಒಂದು ಸಲ ಪಕ್ಷದ ಕಚೇರಿಗೆ ಹೋಗಿ ಕುಳಿತುಕೊಳ್ಳುವುದು.
ಅಲ್ಲಿ  ಕಾರ್ಯಕರ್ತರಿಗೆ, ರಾಜ್ಯ-ಜಿಲ್ಲಾ ಪದಾಧಿಕಾರಿಗಳೊಂದಿಗೆ ಮುಖಾಮುಖಿಯಾಗುವುದು. ಇದನ್ನು ನಿಯಮಿತವಾಗಿಮಾಡಿದರೆ ಅರ್ಧದಷ್ಟು ಕರಕರ, ವಟವಟ, ತಟವಟಗಳೆ ತನ್ನಷ್ಟಕ್ಕೇ ನಿವಾರಣೆಯಾಗಿಬಿಡುತ್ತವೆ. ಇದನ್ನು ಪಶ್ಚಿಮ ಬಂಗಾಳಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅತ್ಯಂತ ಪ್ರೀತಿಯಿಂದ, ನಿಯಮಿತವಾಗಿ, ನಿರಂತರವಾಗಿ ಮಾಡಿದರು. ಅದಕ್ಕಾಗಿ ಅವರು ಕಾಲು ಶತಮಾನ ಕಾಲ ಮುಖ್ಯಮಂತ್ರಿಯಾಗಿದ್ದರು ಮತ್ತು ಪಕ್ಷಕ್ಕೆ ಅವರೆಂದೂ ಬೇಡವಾದ ನಾಯಕರಾಗಲಿಲ್ಲ. ಅನಾರೋಗ್ಯ ಕಾರಣದಿಂದ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟರು.
ಅಧಿಕಾರದಲ್ಲಿದ್ದಾಗ ಪಕ್ಷ ಮತ್ತು ಕಾರ್ಯಕರ್ತರನ್ನು ಮರೆಯಬಾರದು ಎಂಬುದಕ್ಕೆ ಈಗಲೂ ಬಸು ಅವರೇ ಆದರ್ಶ. ಪಕ್ಷದ ನಾಯಕರು ಮತ್ತು ಪದಾಧಿಕಾರಿಗಳು ಅವರನ್ನು ಭೇಟಿ ಮಾಡಲು ಅವರ ಮನೆಗೋ, ವಿಧಾನಸೌಧಕ್ಕೋ ಹೋಗುತ್ತಿರಲಿಲ್ಲ. ಅವರನ್ನೇ ಪಕ್ಷದ ಕಚೇರಿಗೆ ಕರೆಯಿಸಿಕೊಳ್ಳುತ್ತಿದ್ದರು. ಈ ಸಂಪ್ರದಾಯ ತಿಳಿಯಾಗಲು ಬಸು ಅವಕಾಶವನ್ನೇ ಕೊಡಲಿಲ್ಲ.
ಕಮ್ಯುನಿಸ್ಟ್ ಪಕ್ಷದಂತೆ, ಬಿಜೆಪಿ ಸಹ ಕೇಡರ್ ಆಧರಿತ ಪಕ್ಷ. ಯಡಿಯೂರಪ್ಪನವರು ಇದನ್ನು ಪರಿಣಾಮಕಾರಿಯಾಗಿ ಮಾಡ ಬೇಕಿತ್ತು. ಆದರೆ ಅವರು ಈ ಬಾರಿ ಮುಖ್ಯಮಂತ್ರಿಯಾದ ನಂತರ, ಈ ಎರಡು ವರ್ಷಗಳ ಅವಧಿಯಲ್ಲಿ ಎಷ್ಟು ಸಲ ಪಕ್ಷದಕಾರ್ಯಾಲಯಕ್ಕೆ ಎಡತಾಕಿzರೋ ಗೊತ್ತಿಲ್ಲ. ಅಧ್ಯಕ್ಷರ ಜತೆ ಕುಳಿತು ಎಷ್ಟು ಸಲ ಊಟ ಮಾಡಿದ್ದಾರೋ ಗೊತ್ತಿಲ್ಲ.
ಕಾರ್ಯಕರ್ತರಿಗೆ ಸಿಕ್ಕಿದ್ದಾರೋ ಗೊತ್ತಿಲ್ಲ. ಸದಾ ತಮ್ಮ ಸುತ್ತ ಸುತ್ತುವ ಗ್ರಹಗಳಾದ ಬೊಮ್ಮಾಯಿ, ಅಶೋಕ, ವಿಶ್ವನಾಥಅವರನ್ನು ಕಟ್ಟಿಕೊಂಡು ಜನಾರ್ದನ ಹೊಟೇಲು, ವಿದ್ಯಾರ್ಥಿ ಭವನಕ್ಕೆ ಹೋಗುವ ಬದಲು, ಕನಿಷ್ಠ ಮೂರು ತಿಂಗಳಿಗೊಮ್ಮೆ ಆನರಪೇತಲ ಅಧ್ಯಕ್ಷ ಕಟೀಲು ಅವರನ್ನು ಕಟ್ಟಿಕೊಂಡು ಯಾವುದೋ ಡಾಬಾಕ್ಕೋ, ದರ್ಶಿನಿಗೋ ಹೋಗಿದ್ದರೂ ಸಾಕಿತ್ತು , ಕನಿಷ್ಠ ಕಾರ್ಯಕರ್ತರ ಹೊಟ್ಟೆಯಾದರೂ ತುಂಬುತ್ತಿತ್ತು.
ಇದೇ ರೀತಿ ಪಕ್ಷದ ಶಾಸಕರನ್ನು ಪ್ರದೇಶವಾರು ಪಂಗಡ ಮಾಡಿ, ಎರಡು ತಿಂಗಳಿಗೊಮ್ಮೆಯಾದರೂ ಭೇಟಿ ಮಾಡಿದ್ದರೆ, ಅವರಸಮಸ್ಯೆಗಳು ಅಲ್ಲಲ್ಲಿಗೇ ಇತ್ಯರ್ಥವಾಗುತ್ತಿದ್ದವು. ಹಾಗೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರನ್ನು ಆರೋ, ಎಂಟೋ ತಿಂಗಳಿಗೊಮ್ಮೆ ಭೇಟಿ ಮಾಡಿದರೆ, ಯಾವ ಸಮಸ್ಯೆಗಳೂ ಆಪರೇಷನ್ ಮಾಡುವ ಸ್ಥಿತಿ ತಲುಪುವುದೇ ಇಲ್ಲ. ಇದನ್ನು ಶರದ್ ಪವಾರ್ ಅವರಿಂದ ಕಲಿಯಬೇಕು. ಅವರು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರನ್ನು ಸಂಭಾಳಿಸುವುದರಲ್ಲಿ ನಿಷ್ಣಾತರು. ಎರಡು ತಿಂಗಳಿಗೊಮ್ಮೆ ಅವರು ಈ ಕಸರತ್ತನ್ನು ಮಾಡುತ್ತಲೇ ಇರುತ್ತಾರೆ.
ಇಲ್ಲಿ ತನಕ ಅವರ ನಾಯಕತ್ವವನ್ನು ಯಾರೂ ಪ್ರಶ್ನಿಸಿದ್ದಿಲ್ಲ. ಅವರ ವಿರುದ್ಧ ಯಾರೂ ಎದುರಾಡಿದ್ದಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರೂ, ಅವರ ನಾಯಕತ್ವದ ವರ್ಚಸ್ಸು ಕುಂದಿಲ್ಲ. ಅವರದ್ದು ಪ್ರಾದೇಶಿಕ ಪಕ್ಷವಾಗಿದ್ದಿರಬಹುದು. ಆದರೆ ಅವರಿಗೆ ಪಕ್ಷದಲ್ಲಿ ಪ್ರಭಾವಿ ನಾಯಕರಿದ್ದಾರೆ. ಆದರೆ ಅವರನ್ನು ಯಾರೂ ಪ್ರಶ್ನಿಸದಿರಲು ಕಾರಣ ಅವರು ಹೊಂದಿರುವ ಸಂಬಂಧ. ಇದನ್ನು ಯಡಿಯೂರಪ್ಪ ನವರಿಗೆ ಹೇಳಿ ಕೊಡಬೇಕಾ? ಆದರೆ ಅದ್ಯಾಕೋ ಅವರು ಇಂಥ ಕಸರತ್ತುಗಳನ್ನು ಮಾಡಿಲ್ಲ ಎಂಬುದೂ ಅಷ್ಟೇ ಸತ್ಯ.
ಯಡಿಯೂರಪ್ಪನವರು ಅರ್ಥ ಮಾಡಿಕೊಳ್ಳದ ಇನ್ನೊಂದು ಸಂಗತಿಯೆಂದರೆ, ಮೋದಿಯವರು ಪ್ರಧಾನಿಯಾದ ಬಳಿಕ ಮತ್ತುಅಮಿತ್ ಶಾ ಪಕ್ಷದ ನೇತೃತ್ವ ವಹಿಸಿಕೊಂಡ ಬಳಿಕ ಪಕ್ಷದ ಚಹರೆ, ಕಾರ್ಯವಿಧಾನ, ಕಾರ್ಯಶೈಲಿ, ಪಕ್ಷದ ಜಮಖಾನಗಳೆಬದಲಾಗಿವೆ. ಅಲ್ಲಿ ಹಳೆ ಪಳೆಯುಳಿಕೆಗಳು ಇಲ್ಲವಾಗಿವೆ. ಒಂದು ಕಾಲಕ್ಕೆ ಕಾಂಗ್ರೆಸಿನಲ್ಲಿದ್ದ ಹೈಕಮಾಂಡ್ ಸಂಸ್ಕೃತಿ ಮತ್ತಷ್ಟು ಬಲವಾಗಿ ಬಿಜೆಪಿಯಲ್ಲಿ ಬೇರೂರಿದೆ. ಮೋದಿ ಮತ್ತು ಶಾ ಅವರ ಅಣತಿಯಿಲ್ಲದೇ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.ಅವರಿಬ್ಬರ ಹೆಸರು ಹೇಳದೇ ಕೆಮ್ಮುವಂತಿಲ್ಲ, ಆಕ್ಷಿ ಅನ್ನುವಂತಿಲ್ಲ.
ವಾಜಪೇಯಿ ಮತ್ತು ಆಡ್ವಾಣಿ ಕಾಲದ ಕುರ್ಚಿ-ಮೇಜು, ಚಾರುಪಾಯಿಗಳೆ ಗುಜರಿ ಸೇರಿವೆ. ದೀನದಯಾಳ ಉಪಾಧ್ಯಾಯರ ಫೋಟೋ ಕೂಡ ಮೊನಾಲಿಸಾಳ ಕಲಾಕೃತಿ ಯಂತೆ ಹೊಳೆಯುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿ ತನಕ ನಡೆಯುವ ವಿದ್ಯಮಾನಗಳೆಲ್ಲ ಇವರಿಬ್ಬರ ನಜರಿಗೆ ಬಂದೇ ಹೋಗಬೇಕು. ಆಟದ ನಿಯಮಗಳೆ ಬದಲಾಗಿವೆ. ಅಂಪೈರ್‌ ಬದಲಾಗಿದ್ದಾರೆ.
ಇದನ್ನು ಯಡಿಯೂರಪ್ಪನವರು ಸೂಕ್ಷ್ಮವಾಗಿ ಗಮನಿಸಿ ಅರಿತುಕೊಳ್ಳಬೇಕಿತ್ತು. ತಾನು ಅಧಿಕಾರದಲ್ಲಿ ಮುಂದುವರಿಯಬೇಕು ಅಂದರೆ ಇವರಿಬ್ಬರ ಜತೆ ಉತ್ತಮ ಸಂಬಂಧ ಹೊಂದಲೇಬೇಕು, ಇವರಿಬ್ಬರನ್ನು ಯಾವಾಗ ಬೇಕಾದರೂ ಭೇಟಿಯಾಗುವ ಸಂಪರ್ಕ ಸೇತುವೆಯನ್ನು ಸದಾ ಮುಕ್ತವಾಗಿ ಇಟ್ಟುಕೊಳ್ಳಬೇಕು, ಎರಡು ತಿಂಗಳಿಗೊಮ್ಮೆಯಾದರೂ ‘ನಂಬರ್ ಒನ್ ಮತ್ತು ಟೂ’ವನ್ನು ಏನೋ ನೆಪವಾಗಿಟ್ಟುಕೊಂಡು ದಿಲ್ಲಿಗೆ ಹೋಗಿ ಭೇಟಿ ಮಾಡಬೇಕು, ಆರೇಳು ತಿಂಗಳಿಗೊಮ್ಮೆ ಯಾವುದಾದರೂ ಕಾರ್ಯಕ್ರಮದ ಉದ್ಘಾಟನೆ ನಿಮಿತ್ತ ರಾಜ್ಯಕ್ಕೆ ಆಮಂತ್ರಿಸಬೇಕು… ಈ ರೀತಿಯ ಒಂದಿಂದು ಚಟುವಟಿಕೆಯನ್ನು ಜಾರಿಯಲ್ಲಿಡ ಬೇಕಿತ್ತು.
ಆದರೆ ಯಡಿಯೂರಪ್ಪನವರು ಆ ದಿಸೆಯಲ್ಲಿ ಸ್ವಲ್ಪವೂ ಪ್ರಯತ್ನಿಸಲೇ ಇಲ್ಲ. ಇಂದು ಅವರು ದಿಲ್ಲಿಗೆ ಹೋದರೂ, ‘ಒನ್ಮತ್ತು ಟೂ’ ಭೇಟಿಗೆ ಕಾಲಾವಕಾಶ ಸಿಕ್ಕೇಬಿಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಹೀಗಾಗಿ ಅವರು ಅಲ್ಲಿಗೆ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಇದರಿಂದ ‘ಒನ್ ಮತ್ತು ಟೂ’ ನಡುವಿನ ಕಂದಕ ಹಿರಿದಾಗಿದೆ. ಯಡಿಯೂರಪ್ಪನವರನ್ನು ಕಂಡರೆ ಮೋದಿಯವರಿಗೆ ಮೊದಲಿಂದಲೂ ಗೌರವವಿತ್ತು. ಇದನ್ನು ಯಡಿಯೂರಪ್ನವರು ಮುಖ್ಯಮಂತ್ರಿಯಾದ ಬಳಿಕ ಬಳಸಿಕೊಳ್ಳಲಿಲ್ಲ.
ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬಗೆಹರಿಸಿಕೊಳ್ಳುವುದು ದೊಡ್ಡ ವಿಷಯವಾಗಿರಲಿಲ್ಲ. ಅದೇ ರೀತಿ ‘ಟೂ’ ಜತೆಗೂ. ಹೇಗಿದ್ದರೂ ‘ಟೂ’ , ಯಡಿಯೂರಪ್ಪನವರಿಗಿಂತ ಕಿರಿಯರು. ಆ ನಾತೆಯಿಂದಾದರೂ, ‘ಟೂ’ ಜತೆಗೆ ಹತ್ತಿರವಾಗಬಹುದಿತ್ತು.ಒಂದೆರಡು ಸಲ ದಿಲ್ಲಿಗೆ ಹೋದಾಗ, ಅವರಿಬ್ಬರ ಭೇಟಿ ಸಾಧ್ಯವಾಗಲಿಲ್ಲವೆಂದೋ, ಅದನ್ನೇ ಮಾಧ್ಯಮಗಳು ಜೋರಾಗಿ ವರದಿ ಮಾಡಿದವೆಂದೋ, ದಿಲ್ಲಿ ಕಡೆ ಮುಖ ಹಾಕುವುದನ್ನೇ ಬಿಟ್ಟು ಬಿಟ್ಟರು. ಈಗ ಪ್ರತಿ ಸಲ, ಏರುಪೇರಾದಾಗ, ಯಡಿಯೂರಪ್ಪನವರು ಬೇರೆಯವರನ್ನೇ ಆಶ್ರಯಿಸಬೇಕು.
ಅವರೇ ಹೋಗುವುದಕ್ಕೂ, ಬೇರೆಯವರನ್ನು ಪ್ರತಿನಿಧಿಯಾಗಿ ಕಳಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮದುವೆ ಮತ್ತು ರಾಜಕೀಯದಲ್ಲಿ ಮಾತ್ರ ನಾವೇ ಹೋಗಬೇಕು! ಆದರೆ ಯಡಿಯೂರಪ್ಪ ಇಲ್ಲಿ ವಿಫಲರಾದರು. ಇವೆಲ್ಲದರ ಪರಿಣಾಮ, ಪ್ರತಿದಿನವೂ ಅನಿಶ್ಚಿತತೆಯಲ್ಲಿ ಕಾಲಕಳೆಯುವಂತಾಗಿದೆ. ದಿಲ್ಲಿ ವ್ಯವಹಾರಕ್ಕೆ ಬೇರೆಯವರನ್ನು ನೆಚ್ಚಿಕೊಳ್ಳುವಂತಾಗಿದೆ. ಎದುರಿಗೆ ಬಂದರೆ, ‘ಒನ್ ಮತ್ತು ಟೂ’ ಮುಖ ಅಡ್ಡಹಾಕಿ ಹೋಗುವಂಥ ವ್ಯಕ್ತಿತ್ವ ಯಡಿಯೂರಪ್ಪನವರದಲ್ಲ. ಇಂದಿಗೂ ಸಕ್ರಿಯರಾಗಿರುವ ಅತ್ಯಂತ ಹಿರಿಯ ನಾಯಕರಬ್ಬರು ಎಂಬ ಪರಿಜ್ಞಾನ ‘ಒನ್ ಮತ್ತು ಟೂ’ಗೆ ಇದೆ.
ಸರಿ, ಪರಿಸ್ಥಿತಿ ಮತ್ತು ಕಾರ್ಯಬಾಹುಳ್ಯದಿಂದ ‘ಒನ್ ಮತ್ತು ಟೂ’ ಜತೆ ಸತತ ಸಂಬಂಧ ಇಟ್ಟುಕೊಳ್ಳಲು ಆಗದಿದ್ದರೂ,ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ.ಸಂತೋಷ್ ಜತೆಗಾದರೂ ಒಳ್ಳೆಯ ಸಂಬಂಧ ಹೊಂದುವುದು ಅತ್ಯಂತ ಅವಶ್ಯಕ ಎಂಬ ಸಂಗತಿ ಯಡಿಯೂರಪ್ಪನವರಿಗೆ ವೇದ್ಯವಾಗಬೇಕಿತ್ತು. ಇಂದು ಸಂತೋಷ್ ಅದೆಂಥ ಆಯಕಟ್ಟಿನ ಸ್ಥಾನ ದಲ್ಲಿದ್ದಾರೆ ಅಂದ್ರೆ ಮನಸು ಮಾಡಿದರೆ ಅವರು ಆಟ ಕೆಡಿಸಬಲ್ಲರು ಅಥವಾ ಆಟ ಡ್ರಾ ಮಾಡಬಲ್ಲರು.
ಕನಿಷ್ಠ ಬೆನಿಫಿಟ್ ಆಫ್ ಡೌಟ್ ಕೊಟ್ಟು ಜೀವದಾನ ಕೊಡಬಲ್ಲರು. ಆದರೆ ಯಡಿಯೂರಪ್ಪನವರದು ಅವರ ಜತೆಗೂ ಕಮಲದ ಮೇಲಿನ ನೀರಿನ ಸಂಬಂಧ! ಕಾಂಗ್ರೆಸ್ ತೊರೆದು ಬಂದು, ತಮಗೆ ಸರಕಾರ ರಚಿಸಲು ನೇರವಾದ ಮುನಿರತ್ನ ಅವರಿಗೆ ರಾಜ ರಾಜೇಶ್ವರಿನಗರ ಮರುಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಅಷ್ಟೆ ಹರಸಾಹಸ ಮಾಡಬೇಕಾಗಿ ಬಂದಾಗ ಮತ್ತು ಮುನಿರತ್ನ ಆರಿಸಿ ಬಂದರೂ ಇಲ್ಲಿ ತನಕ ವಚನ ಕೊಟ್ಟಂತೆ, ಮಂತ್ರಿ ಸ್ಥಾನ ಕೊಡಿಸಲು ಆಗದಿದ್ದಾಗ, ತಮ್ಮ ‘ಸಂತೋಷ’ ಎಲ್ಲಿದೆ ಎಂಬು ದನ್ನು ಯಡಿಯೂರಪ್ಪನವರು ಅರ್ಥ ಮಾಡಿಕೊಳ್ಳಬೇಕಿತ್ತು.
ಅದನ್ನು ಅವರು ತಿಳಿಯುವ ಪ್ರಯತ್ನವನ್ನೇ ಮಾಡಲಿಲ್ಲ. ಮಾಡಿದರೂ ಉದಾಸೀನ ಮಾಡಿದರು. ಇಂದಿಗೂ ಯಡಿಯೂರಪ್ಪ ನವರ ಬಗ್ಗೆ ಅವೆಷ್ಟೇ ತಕರಾರುಗಳಿದ್ದರೂ, ಸಂತೋಷ್ ಹೃದಯದಲ್ಲಿ ಅವರ (ಯಡಿಯೂರಪ್ಪ) ಬಗ್ಗೆ ಹಿರಿಯರೆಂಬ ಆದರ, ಪಕ್ಷ ಕಟ್ಟಿದ ಧೀಮಂತ ನಾಯಕ ಎಂಬ ಗೌರವ ಇದೆ. ಇದನ್ನು ಅವರು ಬಳಸಿಕೊಳ್ಳಲೇ ಇಲ್ಲ. ಹೀಗಾಗಿ ದಿಲ್ಲಿ ಎಂಬ ಕುರುಕ್ಷೇತ್ರ ದಲ್ಲಿ ಬತ್ತಳಿಕೆಯೇ ಇಲ್ಲದ ಬಿಲ್ಲುಗಾರನಂತಾಗಿದ್ದಾರೆ.
ಬಿಲ್ಲನ್ನೂ, ಬತ್ತಳಿಕೆಯನ್ನೂ ಕಡ ತೆಗೆದುಕೊಳ್ಳಬೇಕಾದ ಸ್ಥಿತಿ. ಇನ್ನು ನಡ್ಡಾ ಅಥವಾ ಅರುಣ್ ಸಿಂಗ್ ಅವರಂಥವರ ಜತೆ ಎಷ್ಟೇ ಒಳ್ಳೆಯ ಸಂಬಂಧ ಇಟ್ಟುಕೊಂಡರೆಷ್ಟು, ಬಿಟ್ಟರೆಷ್ಟು? ಇವನ್ನೆ ಅವರೇ ಚೆಂದವಾಗಿ ನಿರ್ವಹಿಸಬಹುದಾದ, ಆದರೆ ಅವರೇ ತಂದಿಟ್ಟುಕೊಂಡ ಸಮಸ್ಯೆಗಳು. ರಾಜಕೀಯದಲ್ಲಿ ಬರೀ ಗುದ್ದಾಟ, ಸಂಘರ್ಷ, ಡ್ಯಾಮೇಜ್ ಕಂಟ್ರೋಲುಗಳೇ à   ಆಗಬಾರದು. ದುರ್ದೈವವೆಂದರೆ, ಯಡಿಯೂರಪ್ಪನವರಂಥ ಜನಪ್ರಿಯ,   ಗೆ ಈ ವಯಸ್ಸಿನಲ್ಲಿ, ಈ ಅನುಭವದಲ್ಲಿ , ಈ ಎ ತಲೆನೋವುಗಳೇ ಇರಬಾರದು. ಆದರೆ ಅವೇ ಕಾಯಕವಾಗಿದೆ.