ಮೈಗ್ರೇನ್‌: ನರಗಳ ಮಾರ್ಪಾಡು – ಕೋವಿಡ್‌ ಲಸಿಕೆ
ವೈದ್ಯ ವೈವಿಧ್ಯ
ಡಾ.ಎಚ್.ಎಸ್.ಮೋಹನ್‌
@.
ನನ್ನ ಈ ಅಂಕಣದ ಹಿಂದಿನ ಲೇಖನದಲ್ಲಿ ಮೈಗ್ರೇನ್‌ಗೆ ಔಷಧಗಳ ಜತೆಗೆ ಜೀವನ ಶೈಲಿಯ ಬದಲಾವಣೆಯೂ ಮುಖ್ಯ ಎಂಬುದನ್ನು ಪ್ರಸ್ತಾಪಿಸಿದ್ದೆ. ರಾತ್ರಿ ೭-೮ ತಾಸು ( ಗಂಟೆಗಳ) ನಿದ್ರೆ, ಜಾಸ್ತಿ ಪ್ರಮಾಣದಲ್ಲಿ ನೀರು ಕುಡಿಯುವುದು, ಉತ್ತಮ ಗುಣಮಟ್ಟದ ಆಹಾರ ಸೇವನೆ ದೇಹಕ್ಕೆ ಮತ್ತು ಮನಸ್ಸಿಗೆ ಅನಗತ್ಯವಾದಒತ್ತಡವನ್ನು ತಪ್ಪಿಸಿಕೊಳ್ಳುವುದು – ಹೀಗೆ ಮಾಡಿದಾಗ ಮೈಗ್ರೇನ್ ಬರುವ ಸಾಧ್ಯತೆ ಕಡಿಮೆ. ಈ ಅಂಶಗಳನ್ನು ಹಿಂದಿನ ಲೇಖನದಲ್ಲಿ ತಿಳಿಸಿದ್ದೆ.
ಹಾಗೆಯೇ ಈ ಎಲ್ಲಾ ಅಂಶಗಳನ್ನು ಪಾಲಿಸಿದರೆ ಮೈಗ್ರೇನ್ ಕಾರಣದಿಂದ ತೆಗೆದುಕೊಳ್ಳುವ ಔಷಧ ಗಳನ್ನು ಸಾಧ್ಯವಾದಷ್ಟು ತಪ್ಪಿಸಬಹುದು. ಔಷಧ ಗಳನ್ನು ಅನಗತ್ಯವಾಗಿ ತೆಗೆದುಕೊಳ್ಳದೇ ಇರುವುದೇ ಒಳ್ಳೆಯದು. ಕೆಲವೊಮ್ಮೆ ಈ ಔಷಧಗಳೇ ತಲೆನೋವು ಉಂಟುಮಾಡಬಹುದು. ಔಷಧಗಳ ಅಧಿಕ ಬಳಕೆಯಿಂದ ಬರುವ ತಲೆನೋವು ಎಂದು ನಾವು ಕರೆಯುತ್ತೇವೆ. ಪದೇ ಪದೆ ಬರುವ ಮೈಗ್ರೇನ್ ಅನ್ನು ಬರದಿರುವಂತೆ ಮಾಡುವ ಹಲವಾರು ಔಷಧಗಳು ಈಗಲಭ್ಯವಿವೆ ( ). ಮತ್ತೆ ಕೆಲವು ಔಷಧಗಳು ಮೈಗ್ರೇನ್ ಅಟ್ಯಾಕ್ ಬರುವ ವಿವಿಧ  ಗಳನ್ನು ನಿಯಂತ್ರಿಸುತ್ತವೆ. ಇವುಗಳ ಬಗ್ಗೆ ಸೂಕ್ತ ನರರೋಗ ತಜ್ಞ ವೈದ್ಯರ ಸಲಹೆ ತೆಗೆದುಕೊಂಡು ಚಿಕಿತ್ಸಾ ಕ್ರಮಗಳನ್ನು ವೈಯಕ್ತಿಕವಾಗಿ ರೂಪಿಸಿಕೊಳ್ಳಬೇಕು.
ಎಷ್ಟೋ ಬಾರಿ ನನ್ನಲ್ಲಿಯೇ ಮೈಗ್ರೇನ್ ರೋಗಿಗಳು ಕೇಳಿದ್ದಿದೆ. ಡಾಕ್ಟ್ರೇ ಮೈಗ್ರೇನ್ ಹೌದು ಅಂತಾದರೆ   ಅಥವಾ   ಮಾಡಿಸಿದರೆ ಸರಿಯಲ್ವಾ ಎಂದು. ಮೈಗ್ರೇನ್ ಎಂದು ಖಚಿತವಾಗಿ ಕಾಯಿಲೆ ನಿರ್ಧಾರ ಆದರೆ ಯಾವುದೇ ರೀತಿಯ ಸ್ಕಾನಿಂಗ್ ಅಗತ್ಯವಿಲ್ಲ. ಮೈಗ್ರೇನ್‌ನ ರೋಗ ಲಕ್ಷಣಗಳು ಸ್ಪಷ್ಟತೆ ಇಲ್ಲದಿದ್ದಾಗ ಮೈಗ್ರೇನ್ ಜತೆಗೆ ಬೇರೆ ನರಗಳಗೆ ಸಂಬಂಧಪಟ್ಟ ಲಕ್ಷಣಗಳು ಇದ್ದಾಗ, ಮೈಗ್ರೇನ್ ಹೌದು ಅಥವಾ ಅಲ್ಲ ಎಂದು ನಿರ್ಧರಿಸಲು ಸ್ಕ್ಯಾನಿಂಗ್ ಅಗತ್ಯವಿದೆ.
ಮತ್ತೊಂದು ವಿಚಾರ ಎಂದರೆ ಮೈಗ್ರೇನ್ ಕಾಯಿಲೆಯೇ ಎಂದು ಸ್ಪಷ್ಟವಾಗಿ ಕಾಯಿಲೆ ಪತ್ತೆ ಹಚ್ಚಲು ನಿರ್ದಿಷ್ಟ ಪರೀಕ್ಷೆಗಳೇ ಇಲ್ಲ. ಪದೇ ಪದೆ ತಲೆನೋವು ಬರುವುದು. ಅದರಲ್ಲಿಯೂ ತಲೆ ಸಿಡಿಯುವಂಥ ನೋವು, ಕೆಲವೊಮ್ಮೆ ಎಡ ಭಾಗದಲ್ಲಿ ಮತ್ತೆ ಕೆಲವೊಮ್ಮೆ ಬಲ ಭಾಗದಲ್ಲಿ, ವಾಂತಿ ಬರುವ ಲಕ್ಷಣ, ವಾಂತಿ ಯಾಗುವುದು – ಈ ತರಹದ ಲಕ್ಷಣಗಳು ಸತತವಾಗಿ ಮೂರು ತಿಂಗಳ ಕಾಲ ಕಾಣಿಸಿಕೊಂಡರೆ ಮೈಗ್ರೇನ್ ಕಾಯಿಲೆ ಪತ್ತೆ ಹಚ್ಚಬಹುದು ಎಂದು ಅಮೆರಿಕದ ಖ್ಯಾತ ನರರೋಗ ತಜ್ಞ ವೈದ್ಯೆ ಡಾ.ಜೆನ್ನಿಫರ್ ಮೆಕ್ ಅಭಿಪ್ರಾಯ ಪಡುತ್ತಾರೆ.
ಗರ್ಭಿಣಿ ಮಹಿಳೆಯರು ಮೈಗ್ರೇನ್ ಔಷಧಗಳನ್ನು ತೆಗೆದುಕೊಳ್ಳಬಹುದಾ ಎಂದು ಕೆಲವರಲ್ಲಿ ಸಂಶಯವಿದೆ. ಗರ್ಭಿಣಿ ಮಹಿಳೆಯರು ಗರ್ಭ ಧರಿಸಿ ಆರಂಭದ೩ತಿಂಗಳ ನಂತರ ಟ್ರಿಪ್ಟಾನ್ ಮತ್ತು ಅಸಿಟಮೈನೋಫಿನ್ ಔಷಧಗಳನ್ನು ಸೇವಿಸಬಹುದು. ಅವು ಗರ್ಭಸ್ಥ ಶಿಶುವಿಗೆ ಅಪಾಯ ಮಾಡುವುದಿಲ್ಲ. ಆದರೆ ಮೈಗ್ರೇನ್ ಬರದಿರುವಂತೆ ಮಾಡುವ ಕೆಲವು ಔಷಧಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಅವುಗಳಲ್ಲಿ ಕೆಲವು ಔಷಧಗಳು ಗರ್ಭವನ್ನೇ ಕೆಡಿಸಬಹುದು. ಅಥವಾ ಕೆಲವೊಮ್ಮೆ ಗರ್ಭಸ್ಥ ಶಿಶುವಿನ ಮೇಲೆ ಪರಿಣಾಮ ಬೀರಿ ಜನನಾಗತ ತೊಂದರೆಗಳನ್ನು (  ) ಉಂಟು ಮಾಡಬಹುದು ಎಂಬುದು ನರರೋಗ ತಜ್ಞರ ಅಭಿಮತ.
ಗರ್ಭಿಣಿಯ ಆರಂಭದ ಹಂತದಲ್ಲಿ ಅಥವಾ ಗರ್ಭ ಧರಿಸುವ ಪೂರ್ವದಲ್ಲಿಯೇ ಮೈಗ್ರೇನ್ ಚಿಕಿತ್ಸೆಯ ಬಗ್ಗೆ ಅವರವರ ತಜ್ಞ ವೈದ್ಯರ ಜತೆ ಸಮಾಲೋಚಿಸಿಮುಂದಿನ ಚಿಕಿತ್ಸಾ ಕ್ರಮಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿ ಚಿಕಿತ್ಸೆಯ ಬಗ್ಗೆ ಒಂದು ನಿರ್ದಿಷ್ಟ ವೇಳಾಪಟ್ಟಿಯನ್ನು ರೂಪಿಸಿಕೊಳ್ಳುವುದು ಒಳ್ಳೆಯದು.ಹೌದು ಹೆಚ್ಚಿನವರಿಗೆ ತಿಳಿದಂತೆ ಗರ್ಭಿಣಿ ಮಹಿಳೆಯರಲ್ಲಿ ಎಲ್ಲಾ ಔಷಧಗಳನ್ನು ಬಳಸುವುದು ಬಹಳ ಸುರಕ್ಷಿತವಲ್ಲ. ಕೆಲವೊಂದನ್ನು ನಿರ್ದಾಕ್ಷಿಣ್ಯವಾಗಿ ಉಪಯೋಗಿಸಬಾರದು. ಕೆಲವನ್ನು ಗರ್ಭಿಣಿಯ ಮೊದಲ3ತಿಂಗಳ ನಂತರ ಉಪಯೋಗಿಸಬಹುದು.
ಇತ್ತೀಚೆಗೆ ಬಳಕೆಗೆ ಬಂದಿರುವ ದೇಹದ ಮೇಲೆ ಧರಿಸುವ    ಗರ್ಭಿಣಿಯರಿಗೆ ಉತ್ತಮ. ಅವು ತುಂಬಾ ಪರಿಣಾಮಕಾರಿ, ಪಾರ್ಶ್ವಪರಿಣಾಮಗಳು ( ) ಇಲ್ಲವೇ ಇಲ್ಲ. ಮೈಗ್ರೇನ್‌ಗೆ ಸೂಚಿತವಾದ ಆಹಾರ ಕ್ರಮಗಳನ್ನು ಪಾಲಿಸುವುದರಿಂದ ಮೈಗ್ರೇನ್ ಬರುವುದೇ ಇಲ್ಲ ಎಂದು ಕೆಲವರು ತಿಳಿದಿzರೆ. ಆರೋಗ್ಯವಂತ ಆಹಾರ ಸೇವಿಸುವುದು, ಕೆಲವು ರೀತಿಯ ಆಹಾರವನ್ನು ಸೇವಿಸದೆ ಇರುವುದು – ಈ ಕ್ರಮಗಳು ಮೈಗ್ರೇನ್ ಅಟ್ಯಾಕ್ ಟ್ರಿಗರ್ ಮಾಡುವುದನ್ನು ತಪ್ಪಿಸಬಹುದು.
ಅವುಗಳೇ ಅಲ್ಲದೆ ಇನ್ನೂ ಹಲವು ಮುಖ್ಯ ವಿಚಾರಗಳಿವೆ. ಸರಿಯಾಗಿ ನಿದ್ರೆ ಬರದಿರುವುದು, ಮಾನಸಿಕ, ದೈಹಿಕ ಒತ್ತಡ ಮತ್ತು ವಿವಿಧ ಹಾರ್ಮೋನುಗಳ ಬದಲಾವಣೆ ಇವೆ ಮೈಗ್ರೇನ್ ಆಹಾರ ಕ್ರಮಗಳಿಗೆ ಹೊರತಾದ ವಿಚಾರಗಳು. ಹಾಗಾಗಿ ಆಹಾರ ಕ್ರಮಗಳ ಕೆಲವು ಬದಲಾವಣೆಯಿಂದ ಕೆಲವು ಮೈಗ್ರೇನ್ ಟ್ರಿಗರ್ಸ್‌ಗಳನ್ನು ತಪ್ಪಿಸಬಹುದಷ್ಟೇ. ಆಹಾರದಲ್ಲಿ ಸೇವಿಸುವ ಪೂರಕ ವಸ್ತುಗಳು ಮೈಗ್ರೇನ್ ಅನ್ನು ಗುಣಪಡಿಸುತ್ತವೆ ಎಂದು ಹಲವರು ತಪ್ಪು ತಿಳಿದಿದ್ದಾರೆ.
ಮ್ಯಾಗ್ನೀಷಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ2– ಇವು ಮೈಗ್ರೇನ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತವೆ ಅಷ್ಟೇ. ಹಾಗೆಂದು ಎಲ್ಲರಲ್ಲಿಯೂ ಮೈಗ್ರೇನ್ ಬರದಂತೆ ತಡೆಯುವಲ್ಲಿ ಅಥವಾ ಮೈಗ್ರೇನ್ ನೋವನ್ನು ನಿವಾರಿಸುವಲ್ಲಿ ನೇರವಾಗಿ ಸಹಾಯ ಮಾಡುವುದಿಲ್ಲ. ಕೆಲವು ವ್ಯಕ್ತಿಗಳಲ್ಲಿ ಒಳ್ಳೆಯ ಕೆಲಸ ಮಾಡಿ ಸಹಾಯ ಮಾಡುತ್ತವೆ. ಮತ್ತೆ ಕೆಲವರಲ್ಲಿ ಏನೂ ಕೆಲಸವನ್ನೇ ಮಾಡುವುದಿಲ್ಲ. ಮೈಗ್ರೇನ್ ನೋವು  ಎಂಬ ಪೂರ್ವ ಸೂಚನೆಯಿಲ್ಲದೆ ಬರುವುದಿಲ್ಲ ಎಂದು ಕೆಲವರು ತಿಳಿದಿದ್ದಾರೆ.
ಅದು ಶುದ್ಧ ತಪ್ಪು. ಹೆಚ್ಚಿನ ಮೈಗ್ರೇನ್ ಗಳಲ್ಲಿ  ಇರುವುದಿಲ್ಲ ಎಂಬುದು ತಜ್ಞರ ಅಭಿಮತ. ಅಂತಾರಾಷ್ಟ್ರೀಯ ಮೈಗ್ರೇನ್ ಟ್ರಸ್ಟ್ ಪ್ರಕಾರ ಶೇ.10-30ಜನರಲ್ಲಿ ಮಾತ್ರ ಆರಂಭದ ಸೂಚನೆZZಕಾಣಿಸಿಕೊಳ್ಳುತ್ತದೆ. ಮೈಗ್ರೇನ್‌ಗೆ ಈಗಾಗಲೇ ಹಲವು ರೀತಿಯ ಚಿಕಿತ್ಸಾ ಕ್ರಮಗಳಿರುವುದರಿಂದ ಅದರ ಬಗ್ಗೆ ಹೊಸದಾಗಿ ಸಂಶೋಧನೆ ನಡೆಯುತ್ತಿಲ್ಲ ಎಂಬುದು ಕೆಲವರ ತಪ್ಪು ತಿಳಿವಳಿಕೆ. ಯಾವುದೇ ಕಾಯಿಲೆ ಮತ್ತು ಚಿಕಿತ್ಸೆ ಬಗ್ಗೆ ಸಂಶೋಧನೆಗಳು ಅವಿರತವಾಗಿ ನಡೆಯುತ್ತಲೇ ಇರುತ್ತವೆ. ಪ್ರಸ್ತುತ ಮೈಗ್ರೇನ್ ಕಾಯಿಲೆಯ ಒಳಮರ್ಮ ( )ವನ್ನು ವಿಶ್ಲೇಷಿಸುವ ಹಾಗೂ ಹೊಸ ಚಿಕಿತ್ಸಾ ಕ್ರಮಗಳನ್ನುಹುಡುಕುವ ಹಲವಾರು ಅಧ್ಯಯನಗಳು, ನಡೆಯುತ್ತಲೇ ಇವೆ. ಕಳೆದ4ವರ್ಷಗಳಲ್ಲಿ ಮೈಗ್ರೇನ್ ಬಗ್ಗೆ ಹಲವು ಅಪರೂಪದ ವಿಷಯಗಳು ಮಾಹಿತಿಗಳು ಹೊರ ಬಂದಿವೆ.
ಇದರ ಮುಖ್ಯ ಉದಾಹರಣೆ ಎಂದರೆ ನರಗಳನ್ನು ಮಾರ್ಪಡಿಸುವ ಉಪಕರಣಗಳು (  ). ಇತ್ತೀಚೆಗೆ ಬಳಕೆಗೆ ಬಂದವೈದ್ಯಕೀಯ ಉಪಕರಣಗಳು. ನರಮಂಡಲದ ಕಾರ್ಯಗಳನ್ನು ನಿಯಂತ್ರಿಸಬಹುದು – ನರಗಳನ್ನು ಉತ್ತೇಜಿಸಬಹುದು ಅಥವಾ ನರಗಳ ಕಾರ್ಯಗಳನ್ನುಕುಂಠಿತಗೊಳಿಸಬಹುದು. ಈ ತಾಂತ್ರಿಕತೆಯು ಮೈಗ್ರೇನ್ ಅಟ್ಯಾಕ್ ಮತ್ತು  headacheಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ನರಗಳ ಮಾರ್ಪಾಡು ಕ್ರಿಯೆಯ ತಾಂತ್ರಿಕತೆ (  ):ಎಲೆಕ್ಟ್ರಿಕಲ್ ತರಂಗಗಳು ಅಥವಾ ಅಯಸ್ಕಾಂತಗಳನ್ನು () ಉಪಯೋಗಿಸಿ ಮೆದುಳಿನಲ್ಲಿ ಹಲವಾರು ಕ್ರಿಯೆಗಳನ್ನು ಬದಲಿಸಬಹುದು ಹಾಗೂ ಕೆಲವೊಮ್ಮೆ ನಿಯಂತ್ರಿಸಬಹುದು. ಇದರಲ್ಲಿ ಕೆಲವು ಉಪಕರಣ ಗಳು ಆಗಸ್ಟೇ ಆರಂಭವಾಗಿರುವ ಮೈಗ್ರೇನ್ ಅಟ್ಯಾಕ್ ಅನ್ನು ಅಲ್ಲಿಗೇ ನಿಲ್ಲಿಸಬಹುದು. ಮತ್ತೆ ಕೆಲವು ಉಪಕರಣಗಳಿಂದ ಅಟ್ಯಾಕ್ ಬರದಿರುವಂತೆ ಮಾಡಲು ಉಪಯೋಗಿಸಬಹುದು. ಬೇರೆ ಬೇರೆ ಉಪಕರಣಗಳು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಆದರೆ ಅವೆಲ್ಲವುಗಳ ಮೂಲ ಉದ್ದೇಶ ನರಗಳ  ನಲ್ಲಿ ಅವುಗಳ ಕಾರ್ಯವನ್ನು ಬದಲಾಯಿಸುವುದು.
ಕೆಲವು ಉಪಕರಣಗಳು ಸಣ್ಣದಾಗಿದ್ದು ದೇಹದ ಮೇಲೆ ಧರಿಸಬಹುದು, ಮತ್ತೆ ಕೆಲವನ್ನು ಶಸ್ತ್ರಕ್ರಿಯೆ ಮಾಡಿ ದೇಹದೊಳಗೆ ಇರಿಸಬೇಕು. ಹಲವು ಉಪಕರಣ ಗಳನ್ನು ಅಮೆರಿಕದ  ಈಗಾಗಲೇ ಅಂಗೀಕರಿಸಿರುವುದರಿಂದ ಇವುಗಳನ್ನು ಪ್ರಾಯೋಗಿಕ ಉಪಕರಣಗಳು ಎಂದು ಗಣಿಸಬೇಕಾಗಿಲ್ಲ. ಕನಿಷ್ಠ ರಿಸ್ಕ್ ಎಂದು   ಲೇಬಲ್ ಕೊಟ್ಟಿರುವುದರಿಂದ ಇವುಗಳಿಂದ ಪಾರ್ಶ್ವ ಪರಿಣಾಮಗಳು ಇಲ್ಲವೇ ಇಲ್ಲ ಎನ್ನಬಹುದು. ತೀರಾ ಇತ್ತೀಚೆಗೆ ಬಳಕೆಗೆ ಬಂದ ಉಪಕರಣ – ಸ್ಮಾರ್ಟ್ ಫೋನ್ ನಿಯಂತ್ರಿತ, ಮುಂಗೈಯಲ್ಲಿ ಧರಿಸಬಹುದು,45ನಿಮಿಷಗಳ ಚಿಕಿತ್ಸೆ ನೀಡುತ್ತದೆ.
ಯಾರಲ್ಲಿ ನರಗಳ ಮಾರ್ಪಾಡಿನ ಉಪಕರಣಗಳು ಉಪಯೋಗವಾಗುತ್ತವೆ ಎಂದರೆ – ಯಾರಲ್ಲಿ ಬೇರೆಯ ಹಲವು ಕಾಯಿಲೆಗಳಿದ್ದಾಗ, ಯಾರಲ್ಲಿ ಮೈಗ್ರೇನ್ಔಷಧಗಳನ್ನು ಉಪಯೋಗಿಸಲು ತೊಂದರೆ ಇದೆಯೋ, ಔಷಧಗಳ ಉಪಯೋಗದಿಂದ ಬರುವ ತಲೆನೋವಿನ ಬಗ್ಗೆ ಯಾರು ತುಂಬಾ ಆತಂಕ ಹೊಂದಿದ್ದಾರೋಅಂಥವರಲ್ಲಿ ಇವು ತುಂಬಾ ಸೂಕ್ತ ಎಂದು ತಜ್ಞರ ಅಭಿಮತ. ಔಷಧಗಳ ಅಗತ್ಯವಿಲ್ಲದೇ ಮೈಗ್ರೇನ್ ಅಟ್ಯಾಕ್ ಅನ್ನು ಮತ್ತು  ತಲೆನೋವನ್ನು ಚಿಕಿತ್ಸೆಮಾಡುವುದಾದರೆ ಏಕೆ ಇವುಗಳನ್ನು ಉಪಯೋಗಿಸಬಾರದು ಎಂದು ಹಲವಾರು ಅಂತಾರಾಷ್ಟ್ರೀಯ ನರರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ. ಆದರೆ ಅವು ತುಂಬಾ ದುಬಾರಿ () ಅನಿಸಬಹುದು. ಕಡಿಮೆ ಬೆಲೆಗೆ ತರಲು ಯತ್ನಿಸಲಾಗುತ್ತಿದೆ. ಕಡಿಮೆ ಬೆಲೆಯ ಉಪಕರಣವೊಂದು ಅಮೆರಿಕದಲ್ಲಿ ಇತ್ತೀಚೆಗೆ ಬಳಕೆಗೆ ಬಂದಿದೆ. ಇನ್ನೂ ಹೆಚ್ಚಿನ ಬಗೆಯ ಉಪಕರಣಗಳು ಎಲ್ಲಾ ದೇಶದ ಸಾಮಾನ್ಯ ಜನರಿಗೆ ಲಭ್ಯವಾದರೆ ಔಷಧಗಳ ಮೇಲೆ ಅವಲಂಬಿತ ಮೈಗ್ರೇನ್‌ನ ಕೋಟ್ಯಂತರ ರೋಗಿಗಳಿಗೆ ವರದಾನವಾಗಬಲ್ಲದು.
ಮೈಗ್ರೇನ್ ಮತ್ತು ಕೋವಿಡ್ ಲಸಿಕೆ:ತಮಗೆ ಗೊತ್ತಿರುವಂತೆ ಕೋವಿಡ್ ಲಸಿಕೆಗಳು ಕೆಲವು ವ್ಯಕ್ತಿಗಳಲ್ಲಿ ಪಾರ್ಶ್ವ ಪರಿಣಾಮಗಳನ್ನು ಬೀರುತ್ತವೆ. ಹೆಚ್ಚಿನ ಸಂದರ್ಭ ಗಳಲ್ಲಿ ಇವು ತುಂಬಾ ಗಂಭೀರವಾದ ಪರಿಣಾಮಗಳಲ್ಲ. ಈ ಪಾರ್ಶ್ವ ಪರಿಣಾಮಗಳಲ್ಲಿ  ತಲೆನೋವು ಕೂಡ ಒಂದು. ಹಾಗಾಗಿ ಈಗಾಗಲೇ ಮೈಗ್ರೇನ್ ಇರುವ ವ್ಯಕ್ತಿಗಳಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳುವುದರಿಂದ ತಮ್ಮ ಮೈಗ್ರೇನ್ ಜಾಸ್ತಿಯಾಗಿ ತಮಗೆ ಹೆಚ್ಚಿನ ತೊಂದರೆ ಬರಬಹುದೇ ಎಂಬ ಸಂದೇಹವಿದೆ. ಅಥವಾ ಲಸಿಕೆ ತೆಗೆದುಕೊಂಡ ಕೂಡಲೇ ಮೈಗ್ರೇನ್ ಅಟ್ಯಾಕ್ ತಕ್ಷಣವೇ ಬರಬಹುದೇ, ಹಾಗಲ್ಲದೆ ಲಸಿಕೆಯು ಈಗಾಗಲೇ ಇರುವ ತಮ್ಮ ಮೈಗ್ರೇನ್ ಅನ್ನು ತೀವ್ರ ಸ್ವರೂಪದ ಮೈಗ್ರೇನ್ ಆಗಿಸುವುದೇ ಅಥವಾ ಮೊದಲಿಗಿಂತ ಮೈಗ್ರೇನ್ ಮತ್ತೆ ಮತ್ತೆ ಬಂದು ಮರುಕಳಿಸಿ ಒಟ್ಟಾರೆ ತಮ್ಮ ಮೈಗ್ರೇನ್ ಕಾಯಿಲೆಯ ಮೇಲೆ ಕೋವಿಡ್ ಲಸಿಕೆಯು ಋಣಾತ್ಮಕ ಪರಿಣಾಮವನ್ನು ಹೊಂದಿದೆಯೇ ಎಂದು ಹಲವು ಬಗೆಯ ಸಂಶಯ ಹೊಂದಿದ್ದಾರೆ.
ಕೋವಿಡ್ ಲಸಿಕೆಯ ವಿಚಾರದಲ್ಲಿಯೂ ಅದರಿಂದ ಬರುವ ಲಾಭ ಮತ್ತು ಉಂಟಾಗಬಹುದಾದ ಅಪಾಯ – ಇವೆರಡನ್ನೂ ಕೂಲಂಕಷವಾಗಿ ವಿಚಾರ ಮಾಡಿನಿರ್ಧಾರ ತೆಗೆದುಕೊಳ್ಳಬೇಕು. ಕೋವಿಡ್ ಕಾಯಿಲೆ ಬಂದು ತೀವ್ರವಾದ ತಲೆನೋವು ಬರುವ ಸಾಧ್ಯತೆ ಇದ್ದೇ ಇದೆ. ಈ ಕಾಯಿಲೆಗೆ ತುತ್ತಾದ ಹಲವಾರು ವ್ಯಕ್ತಿ ಗಳಿಗೆ ಬಹಳ ದಿನಗಳವರೆಗೆ ಸತತವಾಗಿ ಸುದೀರ್ಘಕಾಲ ತಲೆನೋವು ಬಂದ ನಿದರ್ಶನಗಳು ಬೇಕಾದಷ್ಟಿವೆ.
ಹಾಗಲ್ಲದೆ ಮೊದಲೇ ಮೈಗ್ರೇನ್ ಕಾಯಿಲೆ ಇದ್ದು ಅಂಥವರಲ್ಲಿ ಕೋವಿಡ್ ಕಾಣಿಸಿಕೊಂಡಾಗ ಅವರ ತಲೆನೋವು ತೀವ್ರ ಪ್ರಮಾಣಕ್ಕೆ ಹೋದ ನಿದರ್ಶನಗಳೂಬೇಕಾದಷ್ಟಿವೆ. ಹಾಗಾಗಿ ಮೈಗ್ರೇನ್ ಇರುವವರು ವ್ಯಾಕ್ಸೀನ್ ತೆಗೆದುಕೊಳ್ಳಬಾರದು ಅಂತೇನಿಲ್ಲ. ಮತ್ತೆ ಕೆಲವರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ತಮ್ಮ ಮೈಗ್ರೇನ್ ಚಿಕಿತ್ಸೆಯನ್ನು ಮುಂದುವರಿಸಬಹುದೇ ಎಂಬ ಸಂಶಯವೂ ಇದೆ. ಲಸಿಕೆ ಹಾಕಿಸಿಕೊಳ್ಳುವವರು ಮೊದಲಿನ ಮೈಗ್ರೇನ್ ಚಿಕಿತ್ಸೆಯಲ್ಲಿ ವ್ಯತ್ಯಾಸ ಮಾಡಬೇಕು ಎಂಬುದರ ಬಗ್ಗೆ ಯಾವ ಪುರಾವೆಯೂ ಲಭ್ಯವಿಲ್ಲ. ಅಲ್ಲದೆ ಮೈಗ್ರೇನ್ ಅಥವಾ ಇನ್ನಿತರ ತಲೆನೋವಿನ ಚಿಕಿತ್ಸೆಯು ಕೋವಿಡ್ ಲಸಿಕೆಯಪರಿಣಾಮವನ್ನು ಬದಲಿಸುತ್ತದೆ ಎಂಬುದಕ್ಕೆ ಸಹಿತ ಪುರಾವೆ ಇಲ್ಲ. ಹಾಗಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳುವವರು ಮೊದಲಿನ ಮೈಗ್ರೇನ್ ಚಿಕಿತ್ಸೆಯನ್ನು ವ್ಯತ್ಯಾಸ ಮಾಡದೆ ಮುಂದುವರಿಸಬೇಕು ಎಂಬುದು ತಜ್ಞರ ಸ್ಪಷ್ಟ ಅಭಿಪ್ರಾಯ.