ಆಷಾಢ ಮಾಸ ಶುಭವೋ? ಅಶುಭವೋ ?
ತನ್ನಿಮಿತ್ತ
ನಂ.ಶ್ರೀಕಂಠ ಕುಮಾರ್‌
ಇದೀಗ ತಾನೆ ಜೇಷ್ಠ ಮುಗಿದು ಆಷಾಢ ಮಾಸ ಪ್ರಾರಂಭವಾಗಿದ್ದು, ಅದರೊಂದಿಗೆ ಗಾಳಿಗೆ ಅಭಿಮಾನಿ ದೇವತೆಯಾದ ವಾಯು ದೇವರ ಪೂಜೆಯೂ ಆರಂಭವಾಗಿದೆ. ಇದರ ಅರ್ಥ ಆಷಾಢ ಮಾಸದಲ್ಲಿ ವಾಯು ದೇವರನ್ನು ಸ್ವಾಗತಿಸಿ ಮಳೆ ಮತ್ತು ಗಾಳಿಯಿಂದ ಪರಿಸರವನ್ನು ಶುಭ್ರಗೊಳಿಸಲಿ ಎಂಬುದಾಗಿದೆ. ಗ್ರೀಷ್ಮಋತು ಆಗಮನದಿಂದ ದೃಷ್ಟ ಶಕ್ತಿಯನ್ನು ಓಡಿಸಿ ನೆಮ್ಮದಿಯ ಬದುಕನ್ನು ಕಾಣಬೇಕಾಗಿದೆ.
ಚೈತ್ರದಿಂದ ಆರಂಭವಾಗುವ ಹನ್ನೆರಡು ಚಾಂದ್ರಮಾನ ತಿಂಗಳುಗಳ ಪೈಕಿ ಐದನೆಯದು. ಆಷಾಢ ಇಂದ್ರಲೋಕದ ದೇವತೆ. ಒಮ್ಮೆ ಆಷಾಢ ಶಿವನನ್ನು ನೋಡುವ ಬಯಕೆಯಿಂದ ನಾಗಕನ್ಯೆಯ ರೂಪವನ್ನು ತಾಳಿ ಕೈಲಾಸವನ್ನು ಪ್ರವೇಶಿಸುತ್ತಾಳೆ. ಆಗ ಶಿವ ಧ್ಯಾನಾಸ್ಥನಾಗಿರುತ್ತಾನೆ. ಶಿವನನ್ನು ಕಂಡೊಡನೆ ಆಕೆ ಪಾರ್ವತಿಯ ರೂಪವನ್ನು ಧರಿಸಿ ಶಿವನ ಪಕ್ಕ ಆಸೀನಳಾಗುತ್ತಾಳೆ. ಎಲ್ಲವನ್ನು ಬಲ್ಲ ಆ ಮಹಾದೇವ ಆಕೆಯ ಕುತಂತ್ರವನ್ನು ತಿಳಿದು ಕೋಪನಿಷ್ಠನಾಗುತ್ತಾನೆ. ಕೋಪಾಗ್ನಿಯಿಂದ ಶಿವ ತ್ರಿಶೂಲದಿಂದ ಆಕೆಯನ್ನು ದೂರ ಸರಿಯೆಂದು ತಿವಿಯುತ್ತಾನೆ.
ತ್ರಿಶೂಲದಿಂದ ಹೊರಟ ಜ್ವಾಲಾಗ್ನಿಯು ಆಷಾಢಳನ್ನು ಪರಿಶುದ್ಧಳನ್ನಾಗಿಸುತ್ತದೆ. ಆದರೂ ಶಿವನ ಕೋಪ ಕಡಿಮೆಯಾಗುವುದಿಲ್ಲ .ಆಗ ಆಷಾಢ ಶಿವನಿಗೆ ತಲೆ ಬಾಗಿ ನಾನು ನಿಮ್ಮನ್ನು ಮೆಚ್ಚಿದ್ದರಿಂದ ಹೀಗೆ ಮಾಡ ಬೇಕಾಯಿತು ನನ್ನ ತಪ್ಪನ್ನು ಮನ್ನಿಸಿ ಎಂದು ಶಿವನಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದರೂಶಿವ ಆಕೆಯ ತಪ್ಪನ್ನು ಕ್ಷಮಿಸುವುದಿಲ್ಲ ಬದಲಿಗೆ ಭೂಲೋಕದಲ್ಲಿ ಕಹಿ ರುಚಿಯ ಬೇವಿನ ಮರವಾಗಿ ಜನಿಸು ಎಂದು ಶಾಪವನ್ನು ಕೊಡುತ್ತಾನೆ. ಆಗ ಆಷಾಢ ಶಾಪ ವಿಮೋಚನೆಗಾಗಿ ಬೇಡಿಕೊಳ್ಳುತ್ತಾಳೆ. ಆಗ ಶಿವ ಭೂಲೋಕದಲ್ಲಿ ಬೇವಿನ ಮರವಾಗಿ ಜನಿಸಿದರೂ ಪೂಜೆಗೆ ಅರ್ಹಳಾಗು ಎಂದು ಆರ್ವದಿಸುತ್ತಾನೆ.
ಆ ಕಾರಣ ಆಷಾಢ ಮಾಸದಲ್ಲಿ ಪಾರ್ವತಿ ಸ್ವರೂಪಳಾದ ಬೇವಿನ ಮರವನ್ನು ಪೂಜಿಸುವ ವಾಡಿಕೆ ಇದೆ. ಹೀಗೆ ಭೂಮಿಯ ಮೇಲೆ ಬೇವಿನ ಮರವಾಗಿ ಜನಿಸಿದ ಆಷಾಢ ಪೂಜಾರ್ಹಳಾದಳು. ವೈಜ್ಞಾನಿಕವಾಗಿ ಹೇಳುವುದಾದರೆ ಆಷಾಢ ಮಾಸದಲ್ಲಿ ನಿರಂತರ ಮಳೆ ಮತ್ತು ರಭಸದ ಗಾಳಿಯಿಂದ ಸಂಚಾರಕ್ಕೆ ಹಾಗೂಕಾರ್ಯಗಳಿಗೆ ಅಡೆ ತಡೆಯಿಂದಾಗಿ ಕೆಲಸಗಳು ಕುಂಠಿತವಾಗಿ ಅಲ್ಲದೇ ಹೊಲ ಗದ್ದೆಗಳಲ್ಲಿನ ವಿಪರೀತ ಕೃಷಿ ಕೆಲಸಗಳಿಗೆ ಅನಾನುಕೂಲಗಳು ಉಂಟಾಗುತ್ತದೆ. ಆಷಾಢ ಮಾಸ ಶುಭವೋ ? ಅಶುಭವೋ ? ಎಂಬ ಜಿeಸೆ ಅಸ್ಥಿಕರಲ್ಲಿ ಕಾಣುವುದುಂಟು. ಆದರೆ ಆಷಾಢ ಮಾಸವು ಅಶುಭ ಎಂದು ಯಾವ ಶಾಸ್ತ್ರದಲ್ಲೂ ಉಖವಿರುವುದಿಲ್ಲ. ಶುಭ ಕಾರ್ಯಗಳಿಗೆ ಶಾಸದಲ್ಲಿ ಮನ್ನಣೆ ಇಲ್ಲ ಎಂಬುದು ಅನಿಸಿಕೆ.
ಆಷಾಢ ಮಾಸದ ಅಮರನಾಥದಲ್ಲಿ ಪ್ರತಿ ವರ್ಷ ಹಿಮಲಿಂಗ ದರ್ಶನ ಆಗುವುದು. ಪರಶಿ ವನು ಪಾರ್ವತಿ ದೇವಿಗೆ ಅಮರತ್ವದ ರಹಸ್ಯ ಹೇಳಿರುವುದು, ಗಂಗೆ ಭೂಮಿಗೆ ಉತ್ತರಾಭಿ ಮುಖವಾಗಿ ಹರಿದು ಬಂದದ್ದು ಇದೇ ಮಾಸದಲ್ಲಿ. ಮಹಾ ಪತಿವ್ರತೆ ಅನುಸೂಯ ದೇವಿಯು ನಾಲ್ಕು ಸೋಮವಾರ ಶಿವವ್ರತ ಆಚರಿಸಿದ್ದು ಇದೇ ಮಾಸದಲ್ಲಿ. ಲಕ್ಷ್ಮೀ ಪೂಜೆಯನ್ನು ವಿಶೇಷವಾಗಿ ಆಷಾಢ ದಲ್ಲಿ ಶುಕ್ರವಾರಗಳಂದು ಆಚರಿಸಲಾಗುವುದು. ಸುಮಂಗಲಿಯರು ದೀರ್ಘ ಕಾಲದ ಮಾಗಲ್ಯ ಪ್ರಾಪ್ತಿ ಗಾಗಿ ಅಮಾವಾಸ್ಯೆ ಸಂಜೆಯಲ್ಲಿ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆಯ ದಿನದಂದು ಗುರು ಪೂರ್ಣಿಮೆಯನ್ನು ಎ ಮಠ, ಮಂದಿರ ಗಳಲ್ಲೂ ಆಚರಿಸಿಯತಿಗಳು ಚಾತುರ್ಮಾಸ್ಯ ವ್ರತವನ್ನು ಆರಂಭಿಸುತ್ತಾರೆ.
ಆಷಾಢ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಆಚರಿಸಲಾಗುವುದು. ವಿಶೇಷವೆಂದರೆ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ಜನ್ಮ ದಿನೋತ್ಸವವು ಸಹ ಆಷಾಢದ ಆಚರಿಸಲಾಗುವುದು. ಈ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ಮಹಾ ಪಾತಕಗಳು ನಷ್ಟವಾಗುವುದು ಎಂಬುದು ನಂಬಿಕೆ. ಮಕ್ಕಳಿಗಾಗಿಯೇ ಗಾಳಿಪಟದ ಹಬ್ಬವನ್ನು ಪ್ರಥಮ ಏಕಾದಶಿ ಜುಲೈ20, ರಂದು ಆಚರಿಸಲಾಗುವುದು. ಅಂದುವೈವಿಧ್ಯಮಯ ವಿವಿಧ ಆಕಾರದ ಬಣ್ಣಗಳ ಗಾಳಿಪಟವನ್ನ ತಯಾರಿಸಿ ಸೂತ್ರವನ್ನು ಹಾಕಿ, ಗಾಳಿಪಟವನ್ನು ಗಗನಕ್ಕೆ ಹಾರಿಸಿ ಸಂಭ್ರಮಿಸುವರು. ಇತ್ತೀಚೆಗೆ ಗಾಳಿಪಟವನ್ನು ಒಂದು ಆಟವಾಗಿಯು, ಕಲೆಯಾಗಿಯೂ ಹಾಗೂ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಚರಿಸುತ್ತಿರುವುದು ಸಂತಸ ಸಂಗತಿ.