ಮಾಡಿದ್ದನ್ನೋ ಮಾಡೋ ಕಿಸಬಾಯಿ-ದಾಸ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಚಾಲೆಂಜಿಂಗ್ ಸ್ಟಾರ್ ಅಲಿಯಾಸ್ ಡಿ ಬಾಸ್ ದರ್ಶನ್ ತೂಗುದೀಪ ಅವರ ಸುತ್ತ ಅಮೋಘ ಅದೆಷ್ಟನೇ ಬಾರಿಯೋ ವಿವಾದಗಳು ಸುತ್ತಿಕೊಂಡಿವೆ. ಮತ್ತುಅದೆಷ್ಟನೆಯ ಬಾರಿಗೋ ಅವರು ಇದಕ್ಕೆ ತಮ್ಮದೇ ಆದ ಲಾಂಗು ಮಚ್ಚು ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ.
ಯಾವುದೋ ಶೂರಿಟಿ ವಿಷಯಕ್ಕೆ ಶುರುವಾದ ಈ ಹಗರಣ ಈಗ ಸೀದಾ ಅಣ್ಣಾವ್ರು ಪ್ರಾಪರ್ಟಿ ಮತ್ತು ದರ್ಶನ್ ಫಾರ್ಮ್ ಹೌಸಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವವರೆಗೆ ಮುಟ್ಟಿದೆ. ಇದರ ಜತೆಗೆ ಮೈಸೂರಿನ ಸಂದೇಶ್ ಹೋಟೆಲ್‌ನಲ್ಲಿ ಯಾರಿಗೋ ಹೊಡೆದ ಸುದ್ದಿ ಕೂಡ ಸೇರಿಕೊಂಡು ದರ್ಶನ್ ಅವರಿಗೆ ಒಂದೇ ವಾರದಲ್ಲಿ ಮೂರು ಮೂರು ಕಿರಿಕ್ಕು ಹೇಗೆ ಸ್ವಾಮಿ ತಡಕೊಳ್ಳೋದು ಜೀವ ಎನ್ನುವಂತಾಗಿದೆ.
ಆದರೂ ಕೂಡಾ ನಾನೂ ಮೂರೂ ಬಿಟ್ಟವನು, ಇಂದ್ರಜಿತ್ ಗಂಡಸಾಗಿದ್ದರೆ, ಅವರಪ್ಪನಿಗೆ ಹುಟ್ಟಿದ್ದರೆ ಎಂಬೆಲ್ಲ ಮಾತುಗಳು ದರ್ಶನ್ ಬಾಯಿಯಲ್ಲಿ ಬರುತ್ತಿರೋದನ್ನು ಕೇಳಿ ಕನ್ನಡ ಸಿನಿ ಪ್ರೇಮಿಗಳು ಕಿವಿ ಮುಚ್ಚಿಕೊಂಡಿದ್ದಾ ರೆ. ನನ್ನ ಇಮೇಜ್ ಹಾಳು ಮಾಡೋಕೆ ನೀವೇ2006ರಲ್ಲಿ ಟ್ರೈ ಮಾಡಿದ್ರಿ. ಇವತ್ತು ನಾನೂ ಎಲ್ಲಿದ್ದೀನಿ ಗೊತ್ತಾ ಎಂಬ ಮಾಮೂಲಿ ದುರಹಂಕಾರದ ಮಾತುಗಳೂ ದರ್ಶನ್ ಬಾಯಲ್ಲಿ ಬಂದಿವೆ. ಕಡೆಗೆ ಅದೆಷ್ಟನೇ ಬಾರಿಗೋ ಮೀಡಿಯಾ ಮುಂದೆ ತಮ್ಮ ಕೂದಲು ಕಿತ್ತು ಹಾಕಿದ್ದಾರೆ ದರ್ಶನ್. ಇವತ್ತು ಕನ್ನಡದ ಮೇರುನಟ ರಾಜ್‌ ಕುಮಾರ್ ಮಗನ ಹತ್ರ ಇರೋ ಕಾರು ನನ್ನತ್ರನೂ ಇದೇ ಗೊತ್ತಾ ಎಂದು ಜಂಬ ಕೊಚ್ಚಿಕೊಂಡಿದ್ದಾರೆ.
ಜೊತೆಗೇ ಒಬ್ಬ ಸ್ಟಾರ್ ಅಂದ್ರೆ ಇಂಥವೆಲ್ಲ ಬಂದೇ ಬರ್ತವೆ. ನಂಗ್ ಗೊತ್ತು ಎಂದಿದ್ದಾರೆ. ದರ್ಶನ್ ಅವರ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಇವರೊಬ್ಬರೇ ಸ್ಟಾರ್ ಇರೋದಾ, ಬೇರೆ ಯಾವ ಸ್ಟಾರ್ ಗಳಿಗೂ ಇಂಥ ಕೆಟ್ಟ ಹೆಸರು ಯಾಕೆ ಬಂದಿಲ್ಲ ಅಂತ ಕೇಳಬೇಕಾಗಿದೆ. ಒಂದಷ್ಟು ಚಾರಿಟಿ ಕೆಲಸ ಮಾಡಿದರೆ ತಮಗಿರೋ ಕೆಟ್ಟ ಇಮೇಜ್ ಅನ್ನು ಯಾರೂ ಕೇರ್ ಮಾಡಲ್ಲ, ನಾನು ಏನೂ ಮಾಡಿದರೂ ನಡೆಯುತ್ತೆ ಅಂತ ಅಂದುಕೊಂಡಿದ್ದರೆ, ಈ ಬಗ್ಗೆ ದರ್ಶನ್‌ಗೆ ಕ್ಲಾರಿಟಿಯ ಅಗತ್ಯವಿದೆಅನ್ನೋದಂತೂ ಸತ್ಯ. ಒಟ್ಟಿನಲ್ಲಿ ಈ ಎಲ್ಲ ವಿವಾದಗಳ ವಿಷಯದಲ್ಲಿ ದರ್ಶನ್ ನಡೆದುಕೊಳ್ಳುತ್ತಿರೋ ರೀತಿ, ಆಡುತ್ತಿರೋ ಭಾಷೆ ನೋಡಿದ್ರೆ ಅವರು ಒಂದ ಒಂದು ದಿನ ಸರಿ ಹೋಗ್ತಾರೆ ಅಂದುಕೊಂಡವರಿಗೆ ನಿರಾಶೆ ಆಗೋದು ಖಂಡಿತ. ಜತೆಗೆ ಅದಕ್ಕಿಂತ ಹೆಚ್ಚಾಗಿ ಇಂಥ ಒಬ್ಬ ನಟ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಆಗಿರೋದು ನಮ್ಮ ದುರಂತ ಅನ್ನಿಸೋದೂ ಸಹಜ.
ಲೂಸ್ ಟಾಕ್ದರ್ಶನ್ ತೂಗುದೀಪ (ಕಾಲ್ಪನಿಕ ಸಂದರ್ಶನ)ಏನ್ ಸಾರ್, ಮೈಸೂರಲ್ಲಿ ಯಾರಿಗೋ ಹೊಡೆದ್ರಂತೆ ನೀವು. ನಿಜಾನಾ?– ಸಾರ್, ನಾನು ಹೇಳಿ ಕೇಳಿ ಡೈಲಾಗ್ ಸ್ಪೆಷಲಿ. ಸೋ, ನಾನ್ ಡೈಲಾಗ್ ಹೊಡೆದಿದ್ದನ್ನೇ, ಹೊಡೆದೇಬಿಟ್ಟ ಅನ್ನೋ ಥರ ಮಾತಾಡಿದ್ರೆ ನಾನೇ ಮಾಡಕಾಗುತ್ತೆ. ಅಲ್ವಾ ಸರ್.. ಸರಿನಾ ಸರ್.. ಅಷ್ಟೇ ಸರ್..
ದರ್ಶನ್ ತೂಗುದೀಪ ಅವ್ರೇ, ನೀವು ಬಹಳಡೀಸೆಂಟ್ ಆಗಿ ಮಾತಾಡ್ತೀರಾ ಅಂತ ಗೊತ್ತು.ಆದ್ರೆ ಅಡ್ಡಗೋಡೆ ಮೇಲೆ ತೂಗುದೀಪ ಇಟ್ಟಹಾಗೆ ಮಾತಾಡ್ಬೇಡಿ.– ಏನ್ ಮಾಡೋದು.. ಈ ಪರಿಸ್ಥಿತಿಯಲ್ಲಿ ’ಬರೀ ದುಡ್ಡಿಗಷ್ಟೇ ಅಲ್ಲ, ಮಾತಿಗೂ ಶ್ಯೂರಿಟಿ ಇರಬಾರದು’.. ಆ ಥರ ಮಾತಾಡ್ಬೇಕು. ಓಹೋ.. ನಿಮ್ ಪ್ರಕಾರ ’ಕಾಲಕ್ಕೆ ತಕ್ಕಂತೆ ನುಡಿಯಬೇಕು’. ಸರಿ ಸರಿ. ಆದ್ರೆ, ದರ್ಶನ್
’ತೂಗುದೀಪ’ ಅವರ ಸದ್ಯದ ಈ ಸ್ಕ್ಯಾಂಡಲ್ ಬಗ್ಗೆ ’ಸುದೀಪ’ ಅವ್ರು ಏನೂ ಹೇಳಿಲ್ವಾ?– ಸಾರ್, ನೋಡಿ ಸರ್.. ಈಗಿರೋ ತಲೆನೋವುಗಳೇ ಸಾಕು. ನೀವು ಇದರ ಮಧ್ಯೆ ಇನ್ನೊಂದ್ ’ತೂಗು’ದೀಪ ’ಅಡಿಸೋಕೆ’ ಬರ್ಬೇಡಿ.
ಹೋಗ್ಲಿ ಬಿಡಿ. ಆದ್ರೆ ಈ ಇಂದ್ರಜಿತ್ ಲಂಕೇಶ್ ಅವರ‍್ಯಾಕೆ ನಿಮ್ಮ ವಿರುದ್ಧ ಹಲ್ಲುಮಸೀತಾ ಇದ್ದಾರೆ?– ನನ್ನ೫೦ನೇ ಸಿನಿಮಾದಲ್ಲಿ ಅವರಿಗೆ ಅವಕಾಶ ಕೊಡ್ಲಿಲ್ಲ ಅಂತ. ಅಲ್ಲ ಸಾರ್, ನೀವೇ ಹೇಳಿ..  ನಾವ್ ಮಾಡಿದ್ದು ಕುರುಕ್ಷೇತ್ರ ಅಂತ ಮಹಾಭಾರತದ ಸಿನಿಮಾ. ಅದ್ರಲ್ಲಿ ’ಇಂದ್ರಜಿತ್’ಗೆ ಅವಕಾಶ ಕೊಡೋಕಾಗುತ್ತ? ಅದನ್ನ ಅರ್ಥ ಮಾಡಿಕೊಳ್ಳದೆ ಈಗ ಇಷ್ಟೆ ’ರಾಮಾಯಣ’ ಮಾಡ್ತಾ ಇದ್ದಾರೆ.
ಹಂಗೆ ವಿಷ್ಯ. ಆದ್ರೂ, ನೀವು ಪ್ರಾಣಿ ದತ್ತು ತಗೊಂಡಾಗ ತುಂಬಾ ಜನ ’ಗಜ’ ನಡೆದಿದ್ದೇಹಾದಿ ಅಂತ ನಿಮ್ಮನ್ನ ಫಾಲೋ ಮಾಡಿದ್ರು. ಈಗ ನೀವು ಇನ್ನೊಬ್ಬರ ಮೇಲೆ ಕೈಮಾಡ್ತೀರಾ, ಕೇಳಿದ್ರೆ ತಲೆ ಎತ್ತುತ್ತೀನಿ ಅಂತೀರಾ.. ಹಿಂಗೆಲ್ಲ ಮಾಡಿದ್ರೆ ಅದು ನಿಮ್ಮಅಭಿಮಾನಿಗಳಿಗೆ ತಪ್ಪು ಸಂದೇಶ ಕೊಟ್ಟ ಹಾಗಾಗಲ್ವಾ?– ನೋಡಿ, ಮತ್ತೆ ನಂಗ್ ಸಿಟ್ಟು ಬರಿಸ್ತಾ ಇದ್ದೀರ.. ಆ ’ಸಂದೇಶ’ ಅನ್ನೋ ಮಾತ್ ಎತ್ಬೇಡಿ ನನ್ನತ್ರ.. ಎತ್ಬಿಡ್ತೀನಿ ಅಷ್ಟೇ.
ನೆಟ್ ಪಿಕ್ಸ್
ಬಹಳ ದಿನದಿಂದ ನಿರುದ್ಯೋಗಿಯಾಗಿದ್ದ ಎಂಜಿನಿಯರ್ ಖೇಮು ಒಂದು ಮೆಡಿಕಲ್ ಕ್ಲಿನಿಕ್ ತೆರೆಯಲು ನಿರ್ಧರಿಸಿದ. ತನ್ನ ಕ್ಲಿನಿಕ್ ಹೊರಗೆ ಒಂದು ಬೋರ್ಡ್ ಇಟ್ಟ. ನಿಮ್ಮ ಕಾಯಿಲೆಗೆ ಇಲ್ಲಿ500ರುಪಾಯಿಗೆ ಖಚಿತ ಚಿಕಿತ್ಸೆ ನೀಡಲಾಗುತ್ತದೆ; ನಾವು ವಿಫಲವಾದರೆ ನಾವು ನಿಮಗೆ೧,೦೦೦ರುಪಾಯಿ ಪಾವತಿಸುತ್ತೇವೆ.ಇದನ್ನು ನೋಡಿದ ಡಾಕ್ಟರ್ ಖೇಮು, ಇವನೇನು ಮೆಡಿಕಲ್ ಓದಿದ್ದಾನಾ. ಇವನತ್ರ1000ರುಪಾಯಿ ಲಪಟಾಯಿಸೋಕೆ ಒಳ್ಳೆ ಅವಕಾಶ ಅಂತ ಅಲ್ಲಿಗೆ ಹೋದ. ಸೋಮು ನಾನು ನನ್ನ ರುಚಿಯನ್ನು ಕಳೆದುಕೊಂಡಿದ್ದೇನೆ.
ಖೇಮು: ನರ್ಸ್, 22ನೇ ಪೆಟ್ಟಿಗೆಯಿಂದ ಔಷಽ ತಂದು ರೋಗಿಯ ಬಾಯಿಯಲ್ಲಿ3ಹನಿ ಹಾಕಿ.ಸೋಮು: ಅಯ್ಯೋ, ಇದು ಗ್ಯಾಸೋಲಿನ್ಖೇಮು: ಅಭಿನಂದನೆಗಳು! ನಿಮ್ಮ ರುಚಿಯನ್ನು ನೀವು ಮರಳಿ ಪಡೆದಿದ್ದೀರಿ,500ರುಪಾಯಿ ಕೊಡಿ.ಸೋಮು ಹಣ ಕೊಟ್ಟು ಅಲ್ಲಿಂದ ಸಿಟ್ಟಿನಿಂದ ಎದ್ದು ಬಂದ.ಒಂದೆರಡು ದಿನಗಳ ನಂತರ ಮತ್ತೆ ನನ್ನ ಹಣ ವಾಪಸ್ ಪಡಿಲೇಬೇಕು ಅಂತ ಕ್ಲಿನಿಕ್‌ಗೆ ಹೋಗಿ ಖೇಮು ಮುಂದೆ ಕೂತ.ನಾನು ನನ್ನ eಪಕ ಶಕ್ತಿ ಕಳೆದುಕೊಂಡಿದ್ದೇನೆ’ನರ್ಸ್,೨೨ನೇ ಪೆಟ್ಟಿಗೆಯಿಂದ ಔಷಽ ತಂದು ರೋಗಿಯ ಬಾಯಿಯಲ್ಲಿ3ಹನಿ ಹಾಕಿ.ಆದರೆ ಅದು ಗ್ಯಾಸೋಲಿನ್ ಅಲ್ವಾ !ಅಭಿನಂದನೆಗಳು. ನಿಮ್ಮ ಜ್ಞಾಪಕ ಶಕ್ತಿ ವಾಪಸ್ ಬಂದಿದೆ.500ರುಪಾಯಿ ಕೊಡಿ.ಸೋಮು ಮತ್ತೆ ಸಿಟ್ಟಿನಿಂದ ಅಲ್ಲಿಂದ ಹೊರಟು ಕೆಲವು ದಿನಗಳ ನಂತರ ಮತ್ತೆ ವಾಪಸ್ ಬಂದ. ಈ ಸಲ ಏನಾದ್ರೂ ಮಾಡಿ ನನ್ನ ಹಣ ವಾಪಸ್ ಕಿತ್ಕೋಬೇಕು ಅಂತ ಡಿಸೈಡ್ ಮಾಡಿ ಖೇಮು ಮುಂದೆ ಕೂತ.ನನ್ನ ದೃಷ್ಟಿ ಹಾಳಾಗಿದೆ. ನಂಗೆ ಏನೂ ಕಾಣ್ತಿಲ್ಲಸರಿ, ಇದಕ್ಕೆ ನನ್ನತ್ರ ಯಾವುದೇ ಔಷಧಿ ಇಲ್ಲ. ಈ1000ರುಪಾಯಿ ತಗೊಳ್ಳಿಅಯ್ಯೋ, ನೀನು ಕೊಟ್ಟಿರೋದು500ರುಪಾಯಿ ನೋಟುಅಭಿನಂದನೆಗಳು..ನಿಮ್ಮ ದೃಷ್ಟಿಯನ್ನು ನೀವು ಮರಳಿ ಪಡೆದಿದ್ದೀರಿ.500ರುಪಾಯಿ ಕೊಡಿ.
ಲೈನ್ ಮನ್ಲಾಕ್‌ಡೌನ್‌ನಲ್ಲಿ ಮಾಡಿದ ನಾಟಕ– ಲಾಕ್ ‘ಡೌ’ನ್
ಪೋಷಕರು ಟಿವಿಯಲ್ಲಿ ದರ್ಶನ್ ಮಾತು ಕೇಳ್ತಾ ಇರೋ ಮಕ್ಕಳಿಗೆ ಏನ್ ಹೇಳ್ತಾರೆ?– ಹೇ, ಸಣ್ ಮಕ್ಳು ಇದೆಲ್ಲ ನೋಡ್ಬಾರ್ದು. ಚಾನಲ್ ಚೇಂಜ್ ಮಾಡಿ.
ದರ್ಶನ್ ಪ್ರಾಣಿ ಪ್ರಿಯ– ಹೌದು, ಅವರು ಮನುಷ್ಯರ ಜತೆ ವರ್ತಿಸೋ ರೀತಿ ನೋಡಿದ್ರೆ ಗೊತ್ತಾಗುತ್ತೆ ಬಿಡಿ.
ಇವತ್ತು ದರ್ಶನ್ ಆಡಿದ ಮಾತು ಕೇಳಿದವರಿಗೆ ಅನ್ನಿಸಿದ್ದು– ಇದು ಗಾಂಽನಗರನಾ ಇ ‘ಗಂಽ’ ನಗರನಾ?
ದರ್ಶನ್ ಹಳೇ ವರ್ತನೆ ಪುನರಾವರ್ತನೆ ಆಗುತ್ತಿರೋದು ನೋಡಿದವರ ಮಾತು– ಮಾಡಿದ ತಪ್ಪನ್ನೇ ಮಾಡೋ ಕಿಸಬಾಯಿ ’ದಾಸ’
ಕಾಬೂಲ್ ನಿಂದ ಯಾರಾದ್ರೂ ಗಿಫ್ಟ್ ತಂದು ಕೊಟ್ರೆ ಏನೂ ಹೇಳ್ಬೇಕು?– ಕಬೂಲ್ ಹೈ
ಸುಳ್ಳು ಹೇಳ್ಕೊಂಡೇ ಮಾಡೋ ಜೀವನ– ‘ಲೈ’ಫ್