ದೇಶದ ಪಾಲಿನ ಆರ್ಥಿಕ ಭಯೋತ್ಪಾದಕ ಜಾರ್ಜ್ ಸೋರೋಸ್
ಅಭಿವ್ಯಕ್ತಿ
ಗಣೇಶ್ ಭಟ್ ವಾರಣಾಸಿ
@.
ಭಾರತಕ್ಕೆ ಶತ್ರುಗಳಿಗೇನೂ ಕೊರತೆ ಇಲ್ಲ. ಪಾಕಿಸ್ತಾನ ಹಾಗೂ ಚೀನಾ ಭಾರತದ ಬಾಹ್ಯ ಶತ್ರುಗಳು. ಭಾರತಕ್ಕೆ ಆಂತರಿಕ ಶತ್ರುಗಳೂ ಇದ್ದಾರೆ. ಮಾವೋ ವಾದಿ ವಿಚಾರಧಾರೆಗಳ ನಕ್ಸಲ್ ಸಂಘಟನೆಗಳು ಹಾಗೂ ಉಗ್ರವಾದಿ ಸಂಘಟನೆಗಳು ಭಾರತದ ಆಂತರಿಕ ಭದ್ರತೆಗೆ ಬಹಳ ಹಾನಿಯುಂಟುಮಾಡುತ್ತಿವೆ.
ನಕ್ಸಲೀಯರಿಗೆ, ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಸದಾ ನೈತಿಕ ಬೆಂಬಲ ಕೊಡುವ ವಿಚಾರವಾದಿಗಳು ಹಾಗೂ ಬುದ್ಧಿಜೀವಿಗಳ ದೊಡ್ಡ ದಂಡೇ ಭಾರತದಲ್ಲಿದೆ.ವಿದೇಶಿ ದೇಣಿಗೆಯಿಂದ ನಡೆಸಲ್ಪಡುವ ಬಹಳಷ್ಟು ಸರಕಾರೇತರ ಸಂಘಟನೆಗಳು ಭಾರತದಲ್ಲಿವೆ. ದೇಣಿಗೆಯನ್ನು ಕೊಡಮಾಡುವ ವಿದೇಶಿ ಫಂಡಿಂಗ್ ಸಂಸ್ಥೆ ಗಳು ತಮ್ಮ ಅಜೆಂಡಾ ಈ ಎನ್‌ಜಿಒ ಮೂಲಕ ಜಾರಿ ಮಾಡುತ್ತವೆ. ವಿದೇಶಿ ಕಾಸಿನ ಆಸೆಗೆ ಬೀಳುವ ದೇಶದ ಕೆಲವು ಎನ್‌ಜಿಓಗಳು ಹಾಗೂ ಉದಾರ ವಾದಿಗಳು ದೇಶದ ವಿರುದ್ಧವೇ ತಿರುಗಿ ಬೀಳುತ್ತಾರೆ.
ಭಾರತದ ಸಂಸ್ಥೆಗಳ ಮೂಲಕವೇ ಭಾರತ ವಿರೋಧಿ ಕೆಲಸವನ್ನು ಮಾಡಿಸುತ್ತಿರುವ, ಭಾರತ ವಿರೋಧಿ ಕೃತ್ಯಗಳಿಗೆ ಸದಾ ಆರ್ಥಿಕ ಬೆಂಬಲ ನೀಡುತ್ತಿರುವ ವ್ಯಕ್ತಿ ಹಂಗೇರಿ ಸಂಜಾತ, ಅಮೆರಿಕದ ಬಿಲಿಯನೇರ್ ಜಾರ್ಜ್ ಸೋರೋಸ್. ಜಾರ್ಜ್ ಸೋರೋಸ್2020ರ ಜನವರಿ ತಿಂಗಳಲ್ಲಿ ಸ್ವಿಟ್ಜರ್‌ಲ್ಯಾಂಡಿ ನ ದಾವೋಸ್‌ ನಲ್ಲಿ ನಡೆದವರ್ಲ್ಡ್ಎಕನಾಮಿಕ್ ಫಾರಂನಲ್ಲಿ ಮಾತನಾಡುತ್ತಾ ಜಗತ್ತಿನ ಕೆಲವು ದೇಶಗಳಲ್ಲಿ ರಾಷ್ಟ್ರೀಯವಾದ ಹೆಚ್ಚುತ್ತಿರುವುದನ್ನು ತಡೆಗಟ್ಟಲು ತಾನು ಒಂದು ಶತಕೋಟಿ ಅಮೆರಿಕನ್ ಡಾಲರ್‌ಗಳ ದೇಣಿಗೆಯನ್ನು ನೀಡು ತ್ತಿರುವುದಾಗಿ ಘೋಷಣೆಯನ್ನು ಮಾಡಿದ. ಇದಕ್ಕಾಗಿ ಆತ ಓಪನ್ ಸೊಸೈಟಿ ಯುನಿವರ್ಸಿಟಿ ನೆಟ್‌ವರ್ಕ್ ಎನ್ನುವ ಜಾಗತಿಕ ವೇದಿಕೆಯನ್ನೂ ಹುಟ್ಟು ಹಾಕಿದ್ದಾನೆ. ತನ್ನ ದಾವೋಸ್ ಆರ್ಥಿಕ ಶೃಂಗದ ಭಾಷಣದಲ್ಲಿ ಜಾರ್ಜ್ ಸೋರೋಸ್ ನೇರವಾಗಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮಾಡಿ ನರೇಂದ್ರ ಮೋದಿ ಭಾರತದಲ್ಲಿ ಹಿಂದೂ ರಾಷ್ಟ್ರೀಯವಾದವನ್ನು ಹಬ್ಬಿಸುತ್ತಿದ್ದಾರೆಂದು ಆರೋಪಿಸಿದ್ದ.
ಜಾರ್ಜ್ ಸೋರೋಸ್ ಮೂಲತಃ ಬಂಡವಾಳ ಹೂಡಿಕೆದಾರ. ಈತ ಆರಂಭದಲ್ಲಿ ಸೋರೋಸ್ ಫಂಡ್ ಮ್ಯಾನೇಜ್‌ಮೆಂಟ್ ಎನ್ನುವ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ನಂತರ ಕ್ವಾಂಟಂ ಫಂಡ್ ಅನ್ನುವ ಸಂಸ್ಥೆಯನ್ನೂ ಸ್ಥಾಪಿಸಿದ. ಪಕ್ಕಾ ಎಡ ಚಿಂತನೆಯ ಬೆಂಬಲಿಗನಾಗಿರುವ ಈತ ಹಣ ಸಂಪಾದನೆ ಮಾಡಿರುವುದೇ ಬಂಡವಾಳ ಹೂಡಿಕೆಯ ಮೂಲಕ ಎನ್ನುವುದು ವಿಪರ್ಯಾಸ!
2020ರಲ್ಲಿ ಫೋರ್ಬ್ಸ್ ಮ್ಯಾಗಜಿನ್ ಪಟ್ಟಿ ಮಾಡಿರುವಂತೆ ಜಾಗತಿಕವಾಗಿ162ನೇ ಅತೀ ದೊಡ್ಡ ಶ್ರೀಮಂತನಾಗಿರುವ ಜಾರ್ಜ್ ಸೋರೋಸ್‌ನ ಒಟ್ಟು ಮೌಲ್ಯ8.3ಶತಕೋಟಿ ಡಾಲರ್‌ಗಳು. ಮುಕ್ತ ವ್ಯಾಪಾರ ಹಾಗೂ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ನೆಪದಲ್ಲಿ ಸೋರೋಸ್ ಓಪನ್ ಸೊಸೈಟಿ ಫೌಂಡೇಶ ಮೂಲಕ ಅಮೆರಿಕ ಅಲ್ಲದೆ, ಯುರೋಪ್, ಆಫ್ರಿಕಾ ಹಾಗೂ ಏಷ್ಯಾದ ವಿವಿಧ ಸರಕಾರೇತರ ಸಂಘಟನೆಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಹಣಕಾಸು ನೆರವನ್ನು ಒದಗಿಸಿ ಆಯಾ ದೇಶಗಳ ರಾಜಕೀಯ ವ್ಯವಸ್ಥೆಯಲ್ಲಿ ಕೈಯಾಡಿಸುತ್ತಿದ್ದಾನೆ.
ಆತ ಇಂತಹ ಕೆಲಸಗಳಿಗೆ ದೇಣಿಗೆಯ ಹೆಸರಿನಲ್ಲಿ ಖರ್ಚು ಮಾಡಿದ ಮೊತ್ತ32ಶತಕೋಟಿ ಡಾಲರ್‌ಗಳು! ಅಮೆರಿಕದ ರಾಜಕೀಯದಲ್ಲಿ ಸೋರೋಸ್‌ನದ್ದುಸಕ್ರಿಯ ಪಾತ್ರವಿದೆ. ಈತ ಡೆಮಾಕ್ರೆಟಿಕ್ ಪಕ್ಷದ ಸಮರ್ಥಕ ಹಾಗೂ ರಿಪಬ್ಲಿಕ್ ಪಕ್ಷದ ಕಡು ವಿರೋಧಿ. ಅಮೆರಿಕದಲ್ಲಿ ಜಾರ್ಜ್ ಡಬ್ಲ್ಯು ಬುಶ್ ಎರಡನೇ ಅವಧಿಯಲ್ಲಿ ಅಧಿಕಾರವನ್ನು ಹಿಡಿಯದಂತೆ ತಡೆಯಲು ಸೋರೋಸ್ ಇನ್ನಿಲ್ಲದ ಪ್ರಯತ್ನವನ್ನು ಪಟ್ಟಿದ್ದ. ಬರಾಕ್ ಒಬಾಮಾ ಅಧಿಕಾರಕ್ಕೆ ಬರುವಂತೆ ಮಾಡುವಲ್ಲೂ ಸೋರೋಸ್ ಪರಿಶ್ರಮವಿದೆ.2017ರ ಅಮೆರಿಕದ ಅಧ್ಯಕ್ಷ ಚುನಾವಣೆಯ ಸಂದರ್ಭದಲ್ಲಿ ಅಧ್ಯಕ್ಷ ಪದವಿಗೆ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾ ಕ್ರೆಟಿಕ್ ಪಕ್ಷದ ಹಿಲೆರಿ ಕ್ಲಿಂಟನ್ ನಡುವೆ ಭಿರುಸಿನ ಸ್ಪರ್ಧೆ ಇದ್ದಾಗ, ಹಿಲೆರಿ ಕ್ಲಿಂಟನ್ ಅವರ ಚುನಾವಣಾ ಪ್ರಚಾರ ಫಂಡ್‌ಗೆ ಸೋರೋಸ್ 3,43,400  ಡಾಲರ್‌ ಗಳ ಸಹಾಯವನ್ನು ದೇಣಿಗೆ ಯಾಗಿ ನೀಡಿದ್ದ.
ಡೊನಾಲ್ಡ್ ಟ್ರಂಪ್ ಎರಡನೇ ಅವಧಿಯಲ್ಲಿ ಅಮೆರಿಕದ ಅಧ್ಯಕ್ಷ ಪದವಿಗೆ ಬರದಂತೆ ತಡೆಗಟ್ಟಲು ಇನ್ನಿಲ್ಲದಂತೆ ಪ್ರಯತ್ನ ಪಟ್ಟಿದೆ. ಸೋರೋಸ್ ತಂಡ.2020ರ ಮೇ ತಿಂಗಳಲ್ಲಿ ಅಮೆರಿಕದ ಮಿನ್ನೆಪೋಲಿಸ್ ಸ್ಟ್ರೀಟ್‌ನಲ್ಲಿ ಪೋಲೀಸರಿಂದ ಅಮಾನುಷವಾಗಿ ಬಂಧಿಸಲ್ಪಟ್ಟ ಕಪ್ಪು ವರ್ಣೀಯ ಅಮೆರಿಕನ್ ಪ್ರಜೆ ಜಾರ್ಜ್ ಫಾಯ್ಡಪೋಲೀಸರ ವಶದಲ್ಲಿ ಸಾವಿಗೀಡಾಗುತ್ತಾನೆ. ಈ ವರ್ಣದ್ವೇಷದ ಘಟನೆ ಅಮೆರಿಕಾದ್ಯಂತ ಕರಿಯರ ಪ್ರತಿಭಟನೆಗೆ ಕಾರಣವಾಯಿತು. ಬ್ಲ್ಯಾಕ್ ಲೈ ಮ್ಯಾಟರ್ ಅನ್ನುವ ಘೋಷವಾಕ್ಯದಲ್ಲಿ ದೇಶ ವಿದೇಶಗಳಲ್ಲಿ ಈ ಘಟನೆಯ ವಿರುದ್ಧವಾಗಿ ಖಂಡನೆಗಳು ನಡೆದವು. ಈ ರೋಷವು ರಾಜಕೀಯ ಬಣ್ಣವನ್ನು ಪಡೆದುಕೊಂಡು ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧದ ಅಲೆಯಾಗಿ ಪರಿಣಮಿಸಿತು.
ಫಾಯ್ಡ ಸಾವಿನ ಪ್ರಕರಣವನ್ನು ಡೊನಾಲ್ಡ್ ಟ್ರಂಪ್‌ನ ವಿರುದ್ಧ ಜನಾಭಿಪ್ರಾಯವನ್ನಾಗಿ ಪರಿವರ್ತಿಸುವಲ್ಲಿ ಸೋರೋಸ್ ಬಹು ದೊಡ್ಡ ಪಾತ್ರವನ್ನು ವಹಿಸಿದ್ದನೆಂದು ಹೇಳಲಾಗುತ್ತಿದೆ. ಪ್ರತಿಭಟನಾಕಾರರನ್ನು ಒಗ್ಗೂಡಿಸಲು, ವಾಹನ ವ್ಯವಸ್ಥೆಯನ್ನು ಮಾಡಲು ಸೋರೋಸ್ ಹಣ ಸುರಿದಿದ್ದ. ಡೊನಾಲ್ಡ್ ಟ್ರಂಪ್ ವಿರುದ್ಧದಆಂಟಿ-ಗುಂಪುಗಳ ಹಾಗೂ ಬ್ಲ್ಯಾಕ್ ಲೈ ಮ್ಯಾಟರ್ ಹೋರಾಟಗಳಿಗೆ ಸೋರೋಸ್‌ನ ಓಪನ್ ಸೊಸೈಟಿ ಧಾರಾಳ ಧನ ಸಹಾಯ ಮಾಡಿರುವುದು ಗುಟ್ಟೇನಲ್ಲ. ಪರಿಣಾಮವಾಗಿ ಅಮೆರಿಕದ ಕಪ್ಪು ವರ್ಣೀಯರು ಡೊನಾಲ್ಡ್ ಟ್ರಂಪ್ ವಿರುದ್ಧ ನಿಂತರು. ಇತ್ತೀಚೆಗೆ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋರೋಸ್ಡೆಮಾಕ್ರೆಟಿಕ್ ಪಕ್ಷದ ಚುನಾವಣಾ ಫಂಡ್‌ಗೆ ದೇಣಿಗೆ ಯಾಗಿ28ದಶ ಲಕ್ಷ ಡಾಲರ್‌ಗಳನ್ನು ದೇಣಿಗೆಯಾಗಿ ನೀಡಿದ್ದ.
ಸೋರೋಸ್ ಬಳಗವು ಡೊನಾಲ್ಡ್ ಟ್ರಂಪ್ ವಿರುದ್ಧ ಮಾಡಿದ ವ್ಯವಸ್ಥಿತ ಅಪಪ್ರಚಾರದ ಫಲವಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತರು ಹಾಗೂ ಜೋ ಬೈಡೆನ್ ಗೆದ್ದರು. ಭಾರತದಲ್ಲಿ2014ರ ನಂತರ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಿದ್ದು, ಜಾರ್ಜ್ ಸೋರೋಸ್ ಗೆ ಸಹ್ಯವಾಗಿಲ್ಲ. ಓಪನ್ ಸೊಸೈಟಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಂತೆ1999ರಿಂದ ಭಾರತದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಅನ್ನು ಕೊಡುತ್ತಿದ್ದು,2014ರ ನಂತರ ಭಾರತದ ಮಟ್ಟಿಗೆ ತನ್ನ ಕಾರ್ಯ ವಿಧಾನವನ್ನು ಬದಲಾಯಿಸಿಕೊಂಡು ಭಾರತದ ಕಾನೂನು ಸುಧಾರಣೆ, ಪ್ರಜಾಪ್ರಭುತ್ವದ ಆಚರಣೆ, ಆರೋಗ್ಯ ಮತ್ತು ಹಕ್ಕು ಗಳು ಮೊದಲಾದ ವಿಷಯಗಳಿಗೆ ಆದ್ಯತೆಯನ್ನು ನೀಡಿ ದೇಣಿಗೆ ನೀಡಲು ಆರಂಭಿಸಿತು.
ಭಾರತದ ಕಾನೂನು, ಇಲ್ಲಿನ ಪ್ರಜಾಪ್ರಭುತ್ವ, ಹಕ್ಕುಗಳ ಬಗ್ಗೆ ಹೊರದೇಶದ ಸಂಸ್ಥೆಯೊಂದು ಮೂಗು ತೂರಿಸುವ ಅವಶ್ಯಕತೆಯಾದರೂ ಏನು?2014ರನಂತರ ಈ ಕೆಲಸಗಳಿಗಾಗಿ ಓಪನ್ ಸೊಸೈಟಿ ಒದಗಿಸಿದ ಅನುದಾನ11.9ಶತಕೋಟಿ ಡಾಲರ್‌ಗಳು (ಇಂದಿನ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು88ಕೋಟಿ ರುಪಾಯಿಗಳು). ಭಾರತದಲ್ಲಿ ಉಗ್ರರ ಅಥವಾ ನಕ್ಸಲೈಟ್ ಹತ್ಯೆಯಾದಾಗ ಭಾರತೀಯ ಸೈನ್ಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದೆ ಎಂದು ಬೊಬ್ಬೆ ಹಾಕುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು, ಓಪನ್ ಸೊಸೈಟಿಯಿಂದ ನಿರಂತರವಾಗಿ ಆರ್ಥಿಕ ಸಹಾಯವನ್ನು ಪಡೆಯುವ ಸಂಸ್ಥೆ.
2019ರಲ್ಲಿ ನರೇಂದ್ರ ಮೋದಿ ಸರಕಾರ ಮರು ಆಯ್ಕೆಯಾದುದು ಸೋರೋಸ್‌ಗೆ ಮತ್ತಷ್ಟು ಇರುಸು ಮುರುಸು ಉಂಟು ಮಾಡಿತು. ಮರುವರ್ಷದ ದಾವೋಸ್ ಆರ್ಥಿಕ ಸಮ್ಮೇಳನದಲ್ಲಿ ಮಾತನಾಡಿದ ಜಾರ್ಜ್ ಸೋರೋಸ್ ಭಾರತದಲ್ಲಿ ಅತಿ ದೊಡ್ಡ ಮತ್ತು ಭಯಾನಕ ಹಿನ್ನಡೆ ಸಂಭವಿಸಿದೆ, ಅಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನರೇಂದ್ರ ಮೋದಿ ಭಾರತವನ್ನು ಹಿಂದೂ ರಾಷ್ಟ್ರೀಯವಾದಿ ದೇಶವನ್ನಾಗಿ ಬದಲಾಯಿಸುತ್ತಿದ್ದಾರೆ. ಅರೆ ಸ್ವಾಯತ್ತ ಮುಸ್ಲಿಂ ಪ್ರದೇಶವಾದ ಕಾಶ್ಮೀರದ ಮೇಲೆ ದಂಡನಾತ್ಮಕ ಕ್ರಮಗಳನ್ನು ಹೇರುತ್ತಿದ್ದಾರೆ ಹಾಗೂ ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳುವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದ. ಅರೆ ಸ್ವಾಯತ್ತ ಮುಸ್ಲಿಂ ಪ್ರದೇಶವಾದ ಕಾಶ್ಮೀರದ ಮೇಲೆ ದಂಡನಾತ್ಮಕ ಕ್ರಮಗಳನ್ನು ಹೇರುತ್ತಿದ್ದಾರೆ ಎಂದದ್ದು ಕಾಶ್ಮೀರದಲ್ಲಿ ಆರ್ಟಿಕಲ್370ಅನ್ನು ಹಿಂಪಡೆದುದನ್ನು ಉದ್ದೇಶಿಸಿ.
ಪಾಕಿಸ್ತಾನ, ಬಾಂಗ್ಲಾ, ಅಫಘಾನಿಸ್ತಾನಗಳಲ್ಲಿ ಧಾರ್ಮಿಕ ದಬ್ಬಾಳಿಕೆಯನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ಕೊಡುವ ಸಿಟಿಜನ್‌ ಶಿಪ್ ಅಮೆಂಡ್‌ಮೆಂಟ್ ಆಕ್ಟ್(ಸಿಎಎ) ಮತ್ತು ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ದೇಶೀಯರು ಹಾಗೂ ರೋಹಿಂಗ್ಯಾಗಳನ್ನು ಕಂಡು ಹಿಡಿಯುವ ದೃಷ್ಟಿಯಿಂದ ಹಾಗೂ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್(ಎನ್‌ಆರ್‌ಸಿ)ಗಳನ್ನು ಭಾರತ ಸರಕಾರವು ಜಾರಿಗೆ ತಂದುದನ್ನು ಸೋರೋಸ್ ಲಕ್ಷಾಂತರ ಮುಸ್ಲಿಮರ ಪೌರತ್ವವನ್ನು ಕಸಿಯುವ ಬೆದರಿಕೆ ಎಂದು ಬಣ್ಣಿಸಿದ್ದಾನೆ.
ಸಿಎಎಯ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಹಿಂಸಾಚಾರದಲ್ಲಿ ಸೋರೋಸ್‌ನ ಕೈವಾಡ ಕಂಡುಬಂದಿದೆ. ಓಪನ್ ಸೊಸೈಟಿ ಫೌಂಡೇಶನ್ಸದಸ್ಯರಾದ ಹರ್ಷ ಮ್ಯಾಂಡರ್ ನಡೆಸುತ್ತಿರುವ ಕಾರ್ವಾನ್ ಎ ಮೊಹಬ್ಬತ್ ಹೆಸರಿನ ಎನ್‌ಜಿಓ ಶಹೀನ್ ಬಾಗ್‌ನಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆಗೆನೇರ ಬೆಂಬಲವನ್ನು ಸೂಚಿಸಿತ್ತು. ಹರ್ಷ ಮ್ಯಾಂಡರ್, ಜಾನ್ ದಯಾಲ, ಉಮರ್ ಖಾಲಿದ್, ತೀಸ್ತಾ ಸೆತಲ್ವಾಡ್, ವಾರಿಸ್ ಪಠಾಣ್, ಉಷಾ ರಾಮನಾಥನ್ಮೊದಲಾದ ವ್ಯಕ್ತಿಗಳು ಸಿಎಎ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸಡಕ್ ಪೆ ಆಂದೋಲನ್ (ಬೀದಿ ಬೀದಿಗಳಲ್ಲಿ ಪ್ರತಿಭಟನೆ)ಗೆ ಉತ್ತೇಜನವನ್ನು ನೀಡಿದ್ದರು.
ಇದರ ಪರಿಣಾಮವಾಗಿ ಸಿಎಎ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದು2020ರ ಫೆಬ್ರವರಿ24ಹಾಗೂ25ರಂದು ದೆಹಲಿಯಲ್ಲಿ ವ್ಯಾಪಕ ಹಿಂಸಾಚಾರ ಹಾಗೂ ಕೋಮು ಗಲಭೆಗಳು ನಡೆದು ಓರ್ವ ಪೊಲೀಸ್ ಆಫೀಸರ್ ಸೇರಿದಂತೆ53ಮಂದಿ ಹತರಾಗಿದ್ದರು.200ಮಂದಿ ಗಾಯಾಳುಗಳಾಗಿದ್ದರು. ರೈತರ ಕಾಯಿದೆಗಳು2020ರ ವಿರುದ್ಧ ನಡೆಯುತ್ತಿರುವ ಹೋರಾಟಗಳಲ್ಲೂ ಜಾರ್ಜ್ ಸೋರೋಸ್‌ನ ಕೈವಾಡವಿದೆ.2021ರ ಜನವರಿ26ರಂದು ದೆಹಲಿಗೆ ನುಗ್ಗಿದ ರೈತರೆಂದು ಹೇಳಿಕೊಂಡವರು ದೆಹಲಿಯ ಬೀದಿ ಬೀದಿಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ಯದ್ವಾ ತದ್ವಾ ಓಡಿಸಿ, ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿ, ಅಲ್ಲಿ ಮಾರಕಾಯುಧ ಗಳನ್ನು ಝಳಪಿಸಿ, ರಾಷ್ಟ್ರಧ್ವಜವನ್ನು ಕಿತ್ತು ನಿಶಾನ್ ಸಾಹಿಬ್ ಧ್ವಜವನ್ನು ಹಾರಿಸಿದ ವಿಲಕ್ಷಣ ಘಟನೆಯೂ ನಡೆಯಿತು.
ರೈತರ ಹೋರಾಟದಲ್ಲಿ ಭಾಗವಹಿಸಿದ ಬಹುತೇಕ ಜನರು ಪಂಜಾಬಿ ಸಿಖ್ ಸಮುದಾಯದವರು. ನಿಷೇಧಿತ ಖಾಲಿಸ್ತಾನ್ ಸಂಘಟನೆಯು ರೈತರ ಮಸೂದೆಯ ವಿರುದ್ಧವಾಗಿ ಪಂಜಾಬಿ ಸಿಕ್ಖರನ್ನು ಎತ್ತಿಕಟ್ಟುತ್ತಿದೆ. ರಾಷ್ಟ್ರೀಯವಾದದ ಪ್ರಬಲ ವಿರೋಧಿಯಾದ ಸೋರೋಸ್‌ಗೆ ಭಾರತದಲ್ಲಿ ಪ್ರಬಲ ರಾಷ್ಟ್ರೀಯವಾದಿರಾಜಕೀಯ ಪಕ್ಷವು ಅಧಿಕಾರವನ್ನು ನಡೆಯಿಸುತ್ತಿರುವುದು ಒಂದಿಷ್ಟೂ ಸಹ್ಯವಾಗುತ್ತಿಲ್ಲ.2024ರಲ್ಲಿ ಇನ್ನೊಮ್ಮೆ ಮೋದಿ ಸರಕಾರವು ಬರದಂತೆ ತಡೆಗಟ್ಟುವಉದ್ದೇಶದಲ್ಲಿ ಸರಕಾರದ ವಿರುದ್ಧ ಜನಾಭಿಪ್ರಾಯವನ್ನು ರೂಪಿಸುವ ಉದ್ದೇಶದಿಂದ ಈ ಎಲ್ಲ ರೀತಿಯ ಹೋರಾಟಗಳನ್ನು ಸೋರೋಸ್‌ನ ಓಪನ್ ಸೊಸೈಟಿಯುಪ್ರೋತ್ಸಾಹಿಸುತ್ತಿದೆ.
ಭಾರತದ ವಿರೋಧ ಪಕ್ಷಗಳೂ ಸೋರೋಸ್ ಜತೆ ಕೈಜೋಡಿಸಿರುವ ಶಂಕೆಯಿದೆ. ವಿಡೆಮ್ ಅನ್ನುವ ಓಪನ್ ಸೊಸೈಟಿಯಿಂದ ಆರ್ಥಿಕ ಸಹಾಯವನ್ನು ಪಡುತ್ತಿರುವ ಸ್ವೀಡನ್ ಮೂಲದ ವಿಡೆಮ್ ಸಂಸ್ಥೆ ಭಾರತವಿಂದು ಪಾಕಿಸ್ತಾನದಂತಹ ಸರ್ವಾಧಿಕಾರಿ ದೇಶವಾಗಿದೆ ಎಂದು ವರದಿಯನ್ನು ಪ್ರಕಟಿಸಿತ್ತು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು2021ರ ಮಾರ್ಚ್11ರಂದು ವಿಡೆಮ್‌ನ ವರದಿಯನ್ನು ಉಖಿಸಿ ಭಾರತವಿಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ ಎಂದು ಟ್ವೀಟ್ ಮಾಡಿದ್ದರು. ಕಮ್ಯುನಿ ಪಕ್ಷಗಳೂ ಸೋರೋಸ್ ಬಲೆಯಲ್ಲಿವೆ.
ಇತ್ತೀಚೆಗೆ ಕೇರಳದ ಮಾಜಿ ಆರೋಗ್ಯ ಸಚಿವೆ ಹಾಗೂ ಕಮ್ಯುನಿ ಪಕ್ಷದ ನಾಯಕಿ ಕೆ.ಕೆ.ಶೈಲಜಾ ಟೀಚರ್ ಅವರಿಗೆ ಸೋರೋಸ್‌ನಿಂದ ನಡೆಸಲ್ಪಡುತ್ತಿರುವ ಸೆಂಟ್ರಲ್ ಯುರೋಪಿಯನ್ ಯುನಿವರ್ಸಿಟಿಯು ಓಪನ್ ಸೊಸೈಟಿ ಪ್ರಶಸ್ತಿಯನ್ನು ಕೊಟ್ಟಿದೆ! ಈ ಎಲ್ಲ ವಿಷಯಗಳು ಜಾರ್ಜ್ ಸೋರೋಸ್ ನ ಜತೆಗೆ ಭಾರತದ ಪ್ರತಿಪಕ್ಷಗಳು ನಿಕಟ ಸಂಪರ್ಕವನ್ನು ಹೊಂದಿವೆ ಎಂಬುದನ್ನು ಸಾಬೀತುಪಡಿಸುತ್ತದೆ.
ರಫೇಲ್ ಯುದ್ಧ ವಿಮಾನದ ಖರೀದಿಯ ವಿಚಾರವಾಗಿ ಭಾರತದ ಸುಪ್ರೀಂ ಕೋರ್ಟ್ ಹಾಗೂ ಸಿಎಜಿಗಳು ಖರೀದಿ ವ್ಯವಹಾರವು ಭ್ರಷ್ಟಾಚಾರ ರಹಿತವೂ,ಪಾರದರ್ಶಕವೂ ಆಗಿದೆ ಎಂದು ಹೇಳಿದ್ದರೂ, ಇತ್ತೀಚೆಗೆ ಫ್ರಾನ್ಸ್ನಶೆಪಾರ್ ಹೆಸರಿನ ಸರಕಾರೇತರ ಸಂಘಟನೆಯು ರಫೇಲ್ ಖರೀದಿಯ ವಿಚಾರವಾಗಿ ತನಿಖೆಯಾಗಬೇಕೆಂದು ಫ್ರಾನ್ಸ್ನಕೋರ್ಟ್ ಮೆಟ್ಟಿಲನ್ನೇರಿದೆ. ಶೆಪಾರ್ ಸಂಸ್ಥೆಯು ಸೋರೋಸ್‌ನ ಓಪನ್ ಸೊಸೈಟಿಯ ದೇಣಿಗೆಯನ್ನು ಪಡೆಯುತ್ತಿರುವ ಸಂಸ್ಥೆಯಾಗಿದೆ ಎನ್ನುವು ದನ್ನು ಗಮನಿಸಬೇಕಾದ ವಿಷಯ!
ತಾನು ಸ್ವತಃ ಯಹೂದೀಯನಾದರೂ ಸೋರೋಸ್ ಇಸ್ರೇಲ್‌ನ ವಿರೋಽಗಳಾದ ಪ್ಯಾಲೆಸ್ತೀನ್‌ನ ಉಗ್ರರಿಗೆ ಆರ್ಥಿಕ ಸಹಾಯವನ್ನು ಮಾಡುತ್ತಾನೆ. ರಷ್ಯಾ ದೇಶವು ಓಪನ್ ಸೊಸೈಟಿಯನ್ನು ನಿಷೇಧಿಸಿದೆ. ಭಾರತ ಸರಕಾರವು ಇತ್ತೀಚೆಗೆ ಓಪನ್ ಸೊಸೈಟಿಯ ದೇಣಿಗೆ ಪಡೆಯುತ್ತಿರುವ ಎನ್‌ಜಿಓಗಳ ಮೇಲೆ ನಿರ್ಬಂಧ ವನ್ನು ಹೇರಿದೆ. ಆದರೆ ಇಷ್ಟು ಸಾಲದು. ಸೋರೋಸ್‌ನ ಕುತಂತ್ರಗಳಿಗೆ ರತ ಸರಕಾರವು ಬಲವಾದ ಪ್ರತ್ಯುತ್ತರವನ್ನು ಕೊಡ ಬೇಕಾಗಿದೆ. ಇಲ್ಲವಾದರೆ ಜಾರ್ಜ್ ಸೋರೋಸ್ ಅಮೆರಿಕದಲ್ಲಿ ನಡೆಸಿದಂತಹ ಅರಾಜಕತೆಯನ್ನು ಭಾರತದಲ್ಲೂ ಎಬ್ಬಿಸುವ ಅಪಾಯವಿದೆ.