ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದ ಮೊದಲ ಕಿಡಿ
ತನ್ನಿಮಿತ್ತ
ಕಿರಣ್‌ ಕುಮಾರ ವಿವೇಕವಂಶಿ
kirankumardodmani2016@.
ಸ್ವಾತಂತ್ರ್ಯ ಎನ್ನುವುದು ಯಾರೋ ಭಿಕ್ಷೆಯಾಗಿ ನೀಡಿದ್ದಲ್ಲ! ಅದು ಪ್ರೇರಣಾದಾಯಿ ನುಡಿಗಳಿಂದ ಕಿಚ್ಚುಹಚ್ಚಿ, ಬಲಿದಾನಗಳಿಂದ ಬಡಿದೆಬ್ಬಿಸಿ, ನೆತ್ತರಹನಿಗಳಿಂದತರ್ಪಣಗೈದು, ನೂರಾರು ಶಾಂತಿಯುತ ಹಾಗೂ ಕ್ರಾಂತಿಕಾರಕ ಹೋರಾಟಗಳಿಂದ ಗಳಿಸಿದ್ದು.
ಹೀಗೆ ಪ್ರೇರಣಾದಾಯಿಯಾಗಿ ಸೋದರರೇ, ಎದ್ದೇಳಿ! ಹಿಂದೆ ಬೀಳುವ ಸಮಯ ಇದಲ್ಲ. ಬನ್ನಿ ಕೈ ಜೋಡಿಸಿ ಸ್ವಾತಂತ್ರ್ಯ ಲಕ್ಷ್ಮೀ ನಿಮ್ಮನ್ನು ಆಹ್ವಾನಿಸುತ್ತಿದ್ದಾಳೆ ಎಂದು ಕರೆ ನೀಡಿ ಸ್ವತಃ ತಾನೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಯಜ್ಞಕ್ಕೆ ಮೊದಲ ಹವಿಸ್ಸಾದ ವೀರ ಮಂಗಲ್ ಪಾಂಡೆ. ಉತ್ತರ ಪ್ರದೇಶದ ಫೈಜಾಬಾದ್ಬಳಿಯ ನಾಗ್ವಾದಲ್ಲಿ ಜುಲೈ19, 1827ರಂದು ಅಭಯ್ರಾಣಿ ಮತ್ತು ದಿವಾಕರ್ ಪಾಂಡೆ ಅವರ ಮಗನಾಗಿ ಜನಿಸಿದರು. ಸಂಪ್ರದಾಯ ಬ್ರಾಹ್ಮಣ ಕುಟುಂಬ. ಮಂಗಲ ಪಾಂಡೆಯೂ ಹಾಗೆಯೇ ಬೆಳೆದ. ಮಹಾಸ್ವಾಭಿಮಾನಿಯೂ, ಧರ್ಮಾಭಿಮಾನಿಯೂ ಆಗಿದ್ದ ಈತ ತಪ್ಪದೇ ಪ್ರತಿದಿನ ಸಂಧ್ಯಾವಂದನೆ, ಮಡಿ ಪೂಜೆ, ಭಗವದ್ಜಪ, ಧಾರ್ಮಿಕವಿಧಿವಿಧಾನಗಳ ಆಚರಣೆ ಮಾಡುತ್ತಿದ್ದ.
ಕಂಪನಿ ಸರಕಾರದ34ನೇ ನೇಟಿವ್ ಇನ್ಯಾಂಟ್ರಿ5ನೇ ಕಂಪನಿಯಲ್ಲಿ ಸಿಪಾಯಿಯಾಗಿ ಸೇರಿಕೊಂಡ. ಸುಮಾರು26ಪ್ರಾಯಕ್ಕೆ ಕಾಲಿಟ್ಟ ಸಮಯ ಪಾಂಡೆ ಇದ್ದ ಬ್ಯಾರಕ್ಪುರ ರೆಜಿಮೆಂಟಿಗೆ ಹೊಸ ಮಾದರಿಯ ’ಎನ್‌ಫೀಲ್ಡ್’ ಕೋವಿ ಹಾಗೂ ಕಾಡತೂಸುಗಳನ್ನು ಪರೀಕ್ಷಿಸಲು ಕೊಡಲಾಗಿತ್ತು. ಈ ಹೊಸ ಕಾಡತೂಸುಗಳ ಬಗ್ಗೆ ದೇಶದ ವಿವಿಧ ಸೇನಾ ಛಾವಣಿಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿತ್ತು. ಕಾರಣ ಕಚ್ಚಿ ತೆರೆಯ ಬೇಕಾದ ಕೋವಿಗಳ ಹೊರಗವಚಕ್ಕೆ ದನದ ಹಾಗೂ ಹಂದಿಯ ಮಾಂಸವನ್ನು ಸವರಲಾಗಿದೆ ಎಂಬ ಗುಮಾನಿ!
ಆ ವೇಳೆಗಾಗಲೇ ಬ್ರಿಟಿಷರ ವಿರುದ್ಧ ಮಹಾ ಸಂಗ್ರಾಮಕ್ಕೆ ನಾಯಕರು ಒಳಗಿಂದೊಳಗೆ ತಯಾರಿ ನಡೆಸಿದ್ದರು. ನಾನಾ ಸಾಹೇಬ, ತಾತ್ಯಾಟೋಪೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಮೊಘಲ ದೊರೆ ಬಹದ್ದೂರ್ ಷಾಜಾಫರ್ಸೇರಿದಂತೆ ಅನೇಕ ಘಟಾನಘಟಿಗಳು ಕಂಪನಿ ಸರಕಾರದ ನಿಯಮಗಳು, ದುರಾಚಾರ ಹಾಗೂ ಕಿರು ಕುಳಕ್ಕೆ ಬೇಸತ್ತು ಜತೆಯಾಗಿ ಹೋರಾಟಕ್ಕೆ ಸಜ್ಜಾಗಿದ್ದರು.1857ರ ಮೇ31ರಂದು ದೇಶಾದ್ಯಂತ ಏಕಕಾಲಕ್ಕೆ ಕ್ರಾಂತಿ ಆರಂಭಿಸಲು ಕಮಲ ಮತ್ತು ಚಪಾತಿ ಸಂಕೇತಗಳೊಂದಿಗೆ ಸಂದೇಶ ರವಾನಿಸಲಾಗಿತ್ತು. ಆದರೆ ಆ ದಿನಕ್ಕೂ ಮೊದಲೇ ಅನಿರೀಕ್ಷಿತ ಘಟನೆಯೊಂದು ಸಂಭವಿಸಿತ್ತು.
ನಿಗದಿತ ದಿನಕ್ಕೂ ಮುನ್ನವೇ ಮಾರ್ಚ್29ರಂದು ಕ್ರಾಂತಿಯ ಮೊದಲ ಕಿಡಿ ಸಿಡಿಯಿತು. ಬ್ಯಾರಕ್ಪುರ ರೆಜಿಮೆಂಟಿನ ಸಿಪಾಯಿಗಳಿಗೆ ಕಾಡತೂಸುಗಳನ್ನು ಬಳಸಲು ಆದೇಶಿಸಿದಾಗ ಅವರುಧಿಕ್ಕರಿಸಿದರು;ಶಸಗಳನ್ನೆತ್ತಿ ಪ್ರತಿಭಟಿಸಿದರು. ಮಂಗಲಪಾಂಡೆ ಒಂದು ಕೈಯಲ್ಲಿ ಬಂದೂಕು ಹಿಡಿದು, ಇನ್ನೊಂದು ಕೈಯಲ್ಲಿ ಖಡ್ಗ ಝಳಪಿಸುತ್ತ ‘ಓ ನನ್ನ ಸೈನಿಕ ಬಾಂಧವರೆ, ನಾವು ಈಗಿಂದೀಗಲೇ ಯುದ್ಧ ಸಾರಬೇಕು. ಹೊಟ್ಟೆಪಾಡಿಗಾಗಿ ಇಷ್ಟು ದಿನ ಈ ಧೂರ್ತರ ಸೇವೆ ಮಾಡಿದ್ದು ಸಾಕು. ನಮ್ಮ ಧರ್ಮಗಳಿಗೆ ಅವರು ಎಸಗಿದ ದ್ರೋಹಕ್ಕೆ ಸೇಡು ತೀರಿಸಿಕೊಳ್ಳೊಣ’ ಎಂದು ಸಮರ ಸಂದೇಶ ಮೊಳಗಿಸಿದ.
ಯಾರೂ ಪ್ರತಿಕ್ರಿಯಿಸದೇಇದ್ದಾಗಕೋಪೊದ್ರಿಕ್ತನಾಗಿ ಆ ದಳದ ನಾಯಕ, ಮಹಾ ಬ್ರಾಹ್ಮಣ ಮಂಗಲ ಪಾಂಡೆ ಮೈದಾನದಲ್ಲಿದ್ದ ಮೂವರು ಬ್ರಿಟಿಷ್ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದನು. ಆ ವೇಳೆಗೆ34ನೇ ರೆಜಿಮೆಂಟಿನ ಕಮಾಂಡಿಂಗ್ ಆಫೀಸರ್ ಸ್ಟೀವನ್ ವ್ಹೀಲರ್ಬಂಧಿಸುವಂತೆಅರಚಿದ, ಜಾಯ್ಸ್ಹಿಯಸಿರ್ಆಜ್ಞಾಪಿಸಿದ ಆದರೆ ಇವರ ಕೈಗಳಿಂದ ತಾನು ಸಾಯಬಾರದೆಂದು ಮಂಗಲ ಪಾಂಡೆ ಸ್ವತಃ ಗುಂಡು ಹಾರಿಸಿಕೊಂಡ. ದುರಾದೃಷ್ಟವಶಾತ್ ಪಾಂಡೆ ಸಾಯಲಿಲ್ಲ! ಶಸಚಿಕಿತ್ಸೆ ಮಾಡಿ ಏಪ್ರಿಲ್6ರಂದು ಕೋರ್ಟ್ ಮಾರ್ಷಲ್ ಮಾಡಿ ಗಲ್ಲು ಶಿಕ್ಷೆ ವಿಧಿಸಲಾಯಿತು.
1857, ಏಪ್ರಿಲ್ 8ರ ಮುಂಜಾನೆ6ಗಂಟೆಗೆ ಬ್ಯಾರಕ್ಪುರ ಗ್ರೌಂಡಿನಲ್ಲಿ ಎಲ್ಲರ ಎದುರುಗಡೆಯೇ ಗಲ್ಲಿಗೆ ಏರಿಸಲಾಯಿತು. ಅದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅರ್ಪಣೆಯಾದ ಮೊದಲ ಬಲಿಯಾಗಿತ್ತು. ಸ್ವಾತಂತ್ರ್ಯ ಜ್ಯೋತಿಗೆ ಬೆಂಕಿ ಹೊತ್ತಿಸಿದ ಮೊದಲ ಕಿಡಿಯಾಗಿತ್ತು.