ಕರೋನಾ ಕಾಲಘಟ್ಟದ ಶೈಕ್ಷಣಿಕ ಸಮಸ್ಯೆ
ಪ್ರಚಲಿತ
ಡಾ.ವೆಂಕಟೇಶ್‌ ಮೂರ್ತಿ. ಕೆ
ಕೋವಿಡ್-19ವೈರಸ್ ರೋಗಾಣು ವಿಶ್ವಾದ್ಯಂತ ಹರಡಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತೊಂದರೆಯನ್ನುಂಟು ಮಾಡಿರುವುದಲ್ಲದೇ ಶೈಕ್ಷಣಿಕವಾಗಿವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಕಡಿಮೆ ಮಾಡಿದೆ. ವೈರಸ್ ರೋಗಾಣುವಿನ ಹರಡುವಿಕೆಯ ಪರಿಣಾಮವಾಗಿ ಶಾಲಾ ಕಾಲೇಜುಗಳಲ್ಲಿ ಭೌತಿಕ ತರಗತಿನಡೆಸಲಾಗದ ಕಾರಣ ಉಪನ್ಯಾಸಕರು ಆನ್‌ಲೈನ್ ತಂತ್ರಾಂಶಗಳಾದ , ,    ಇತರ ಆಪ್ ಮುಖಾಂತರ ತರಗತಿಗಳನ್ನು ಆರಂಭಿಸುವ ಸಂದರ್ಭ ಎದುರಾಯಿತು.
ಆದರೆ ದೀರ್ಘಕಾಲದ ಲಾಕ್‌ಡೌನ್‌ನಿಂದಾಗಿ ಮತ್ತು ಸಮಯದ ಅಭಾವದಿಂದಾಗಿ ಸಂಪೂರ್ಣ ಪಠ್ಯವನ್ನು ಮುಗಿಸುವುದು ಒಂದು ಸವಾಲಾದರೆ ಮತ್ತೊಂದೆಡೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ನೆಟ್‌ವರ್ಕ್ ಕೊರತೆ ಮತ್ತು ಪತಿಭಾವಂತರಿಗೆ ಪಠ್ಯ ವಿಷಯದ ಹತ್ತು ಹಲವು ಸಂದೇಹಗಳಿಗೆ ಪರಿಹಾರ ಸಿಗದೆ ವಿದ್ಯಾರ್ಥಿಗಳ ಮನದಲ್ಲಿ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
2020-21ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಪಠ್ಯ ವಿಷಯಗಳ ಶೇ.30ರಷ್ಟು ಕಡಿತ ಮಾಡಬೇಕಾದ ಸಂದರ್ಭ ಎದುರಾಯಿ ತಲ್ಲದೆ, ಹೀಗೆ ಕಡಿತವಾದ ಪಾಠ ಪ್ರವಚನಗಳಿಂದ ವಿದ್ಯಾರ್ಥಿ ಗಳಿಗೆ ಪಠ್ಯ ಕಲಿಕೆಯ ನಷ್ಟ ಆಗಿರುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಂತರ ಭೌತಿಕ ತರಗತಿ ಗಳನ್ನು ಪ್ರಾರಂಭ ಮಾಡಿಯೂ ಪಠ್ಯಕ್ರಮಗಳನ್ನು ಮುಗಿಸುವಷ್ಟುರಲ್ಲಿ ಕೋವಿಡ್ ವೈರಾಣುವಿನ ಹರಡುವಿಕೆ ಹೆಚ್ಚಾಗಿ ಲಾಕ್‌ಡೌನ್ ವಿಧಿಸಿ ವಿದ್ಯಾರ್ಥಿ ಮತ್ತು ಪೋಷಕರ ಹಿತದೃಷ್ಟಿಯಿಂದ ಸರಕಾರವು ಪರಿಕ್ಷೇಯನ್ನು ರದ್ದು ಪಡಿಸಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿರುವುದು ಸರಿಯಾದ ಕ್ರಮವಾಗಿದೆ ಮತ್ತು ಶ್ಲಾಘನೀಯ.
ಈ ಹಿಂದೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಶೈಕ್ಷಣಿಕ ಚಟುವಟಿಕೆಗಳನ್ನು ಯೋಜಿಸಿ ತರಗತಿಗಳಲ್ಲಿ ತಮ್ಮದೇ ಆದ ವಿವಿಧ ಬೋಧನಾ ಶೈಲಿಯಲ್ಲಿ ಬೋಧಿಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುತ್ತಿದ್ದರಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಅರಿತು ಕಾಲೇಜು ಮಟ್ಟದಲ್ಲಿಯೇ ಪರಿಹರಿಸುತ್ತಿದ್ದರು. ಜತೆಗೆ ಸೆಮಿನಾರ್, ಘಟಕ ಪರೀಕ್ಷೆ, ಇತ್ಯಾದಿಗಳನ್ನು ಮಾಡಿ ವಿದ್ಯಾರ್ಥಿಗಳ   ಹೋಗಲಾಡಿಸುವ ಶ್ರಮ ಅನನ್ಯ. ಅಲ್ಲದೆ ವಿವಿಧ ಸ್ತರದಲ್ಲಿ ಸಾಧನೆಯನ್ನು ಮಾಡಿರುವ ಮಾಜಿ ಸೈನಿಕರು, ಪೊಲೀಸ್ ಅಧಿಕಾರಿಗಳು, ವೈದ್ಯರು, ಕೆಎಎಸ್ ಮತ್ತು ಐಎಎಸ್ ಅಧಿಕಾರಿ ಗಳನ್ನು ಆಹ್ವಾನಿಸಿ ಉಪನ್ಯಾಸ ಮತ್ತು ವಿಚಾರಗೋಷ್ಠಿ ನಡೆಸುತ್ತಿದ್ದರು.
ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕನಸನ್ನು ಕಟ್ಟಲು ಸದಾ ಪ್ರೇರೇಪಿಸುತ್ತಿತ್ತು. ಹಾಗೇ ಶೈಕ್ಷಣಿಕ ವರ್ಷದ ಕೊನೆಯಲ್ಲಿ ‘ಪಿ.ಯು.ಸಿ ನಂತರ ಮುಂದೇನು’, ಎಂಬ   ಮಾಹಿತಿಯನ್ನು ಸಹ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದರು. ಸಹಪಠ್ಯ ಚಟುವಟಿಕೆಗಳಾದ ರಸಪ್ರಶ್ನೆ, ಕ್ರೀಡೆ, ಶೈಕ್ಷಣಿಕ ಪ್ರವಾಸ, ಎನ್‌ಎಸ್‌ಎಸ್, ಎನ್‌ಸಿಸಿ, ವಾರ್ಷಿಕೋತ್ಸವ ಇತ್ಯಾದಿಗಳಿಂದ ವಿದ್ಯಾರ್ಥಿಗಳು ವಿವಿಧ ಹಂತದಲ್ಲಿ ಮತ್ತೊಬ್ಬರಿಂದ ಪ್ರೇರಣೆಗೊಂಡು ಜೀವನದ ಗುರಿಗಳನ್ನು ನಿರ್ಧರಿಸುವಲ್ಲಿ ಈ ಪಠ್ಯೇತರ ಚಟುವಟಿಕೆಗಳ ಪಾತ್ರ ಬಹುಮುಖ್ಯವಾಗಿತ್ತು,
ಆದರೆ ಈ ಕರೋನಾ ಮಾಹಾಮಾರಿಯ ಪರಿಣಾಮ 2020-21ನೇ ಸಾಲಿನ ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಿಂದ ವಂಚಿತರನ್ನಾಗಿ ಮಾಡಿದೆ.ಕೋವಿಡ್-19ವೈರಸ್ ರೋಗಾಣುವಿನ ಹರಡುವಿಕೆ ಮತ್ತು ವಿಷಯವಾರು ಪಠ್ಯ ಕಡಿತದ ಪರಿಣಾಮವಾಗಿ ಪಿಯುಸಿ ನಂತರದ , ,  ,    ಇತರ ಕೋರ್ಸ್ ಆಯ್ಕೆಮಾಡಿಕೊಂಡಿರುವ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣದಲ್ಲಿ ಕಡಿತಗೊಂಡಿರುವ ವಿಷಯಗಳನ್ನು ಮತ್ತೊಮ್ಮೆ ಕಲಿಯಲು ಸಾಧ್ಯವಾಗದೆ ಇರುವುದು ಕಳವಳಕಾರಿ. ಮತ್ತೊಂದೆಡೆ ಪದವಿಗೆ ಸೇರ ಬಯಸುತ್ತಿರುವ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳ ಕಡಿತಗೊಂಡಿರುವ ಪಠ್ಯಕ್ರಮಗಳನ್ನು ಪದವಿ ಕಾಲೇಜುಗಳ ಬೋಧಕರು ಅರಿತು   ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕಾದ ಅನಿವಾರ್ಯತೆ ಯಿದೆ.
ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರಥಮ ವರ್ಷ ಪದವಿಗೆ ಸೇರಿದ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಋಣಾತ್ಮಕವಾಗಿ ತೀರ್ಮಾನಿಸದೆ ಕಡಿತ ಗೊಂಡಿರುವ ವಿಷಯಗಳನ್ನು ಬೋಧಿಸುವುದು ಪದವಿ ಕಾಲೇಜುಗಳ ನೈತಿಕ ಜವಾಬ್ದಾರಿಯಾಗಿದೆ ಎಂದರೆ ತಪ್ಪಾಗಲಾರದು.