ಓಲ್ಡ್ ಈಸ್ ಗೋಲ್ಡ್ ಅಂತ ಒಲಿಂಪಿಕ್ಸ್’ಗೆ ವಯಸ್ಸಾದವರನ್ನು ಕಳಿಸೋಕಾಗುತ್ತಾ ?
ತುಂಟರಗಾಳಿ
ಹರಿ ಪರಾಕ್
ಲೂಸ್ ಟಾಕ್ಯಡಿಯೂರಪ್ಪ (ಕಾಲ್ಪನಿಕ ಸಂದರ್ಶನ)ಏನ್ ಸಾರ್, ನಿಮಗೆ ಪಿಂಕ್ ಸ್ಲಿಪ್ ಕೊಡ್ತಾರಂತೆ, ಯಾವತ್ತು, ಲಾಸ್ಟ್ ವರ್ಕಿಂಗ್ ಡೇ?– ಅಲ್ರೀ, ಯಾವಾಗ್ಲೂ ನನ್ನೇ ಹಿಡ್ಕತೀರಲ್ಲ, ನಿಮಗೆ ಇಂಟರ್‌ವ್ಯೂ ಮಾಡೋಕ್ ಯಾರೂ ಸಿಗಲ್ವ?
ಬೇರೆಯವ್ರು ಯಾವಾಗ್ ಬೇಕಾದ್ರೂ ಸಿಗ್ತಾರೆ ಸರ್, ನಿಮ್ಗೆ ವಯಸ್ಸಾಯ್ತು ಅಂತ ಹೈ ಕಮ್ಯಾಂಡ್ ಡಿಸೈಡ್ ಮಾಡಿದೆ. ನೀವು ಈಗ ಬಿಟ್ರೆ ಮತ್ತೆ ಸಿಗೋದು ಡೌಟು ಅಲ್ವಾಅದಕ್ಕೇ..– ಅವ್ರಿಗೆ ಸೈಡ್‌ಲೈನ್ ಮಾಡೋಕೆ ಒಂದು ರೀಸನ್ ಬೇಕಿತ್ತು. ಅದಕ್ಕೇ ವಯಸ್ಸಾಯ್ತು ಅಂತ ಡಿಸೈಡ್ ಮಾಡಿದ್ದಾರೆ ಅಷ್ಟೇ.
ಆದ್ರೂ ನಿಮಗೆ ವಯಸ್ಸಾಗಿರೋದು ನಿಜಾ ಅಲ್ವಾ ಸಾರ್?– ವಯಸ್ಸಾಗಿದ್ರೆ, ಮುಂದಿನ ಎಲೆಕ್ಷನ್ನಿಗೆ ನಿಂತ್ಕೊಳ್ಳೋಕೆ ಆಗದಿರಬಹುದು, ಆದ್ರೆ ಈಗಿರೋ ಸಿಎಂ ಸೀಟಲ್ಲಿ ಕೂತ್ಕೊಳ್ಳೋಕೆ ಆಗದಿರುವಷ್ಟು ವಯಸ್ಸೇನೂ ಆಗಿಲ್ಲ. ಅಲ್ದೇ, ವಯಸ್ಸಾಗಿರೋರಿಗೆ ಬೆಲೆನೇ ಇಲ್ವಾ?
ಇದೆ ಸಾರ್. ಆದ್ರೆ ಓಲ್ಡ್  ಈಸ್ ಗೋಲ್ಡ್  ಅಂತ ಒಲಿಂಪಿಕ್ಸ್ ಗೆ ವಯಸ್ಸಾಗಿರೋರನ್ನು ಕಳಿಸಿದ್ರೆ ಅವರ ಕೈಲಿ ಗೋಲ್ಡ್ ತರೋಕಾಗುತ್ತಾ?
– ನಂಗೆ ಒಲಿಂಪಿಕ್ಸ್ ನಲ್ಲಿ ಆಡೋಕ್ ಆಗ್ದೇ ಇರಬಹುದು. ಆದ್ರೆ, ಈ ರಾಜಕೀಯ ದೊಂಬರಾಟ ಆಡೋದ್ರಲ್ಲಿ ನಾನು ಎಕ್ಸ್ಪರ್ಟ್ ಗೊತ್ತಾ?
ಏನೇ ಎಕ್ಸ್’ಪರ್ಟ್ ಆದ್ರೂ ಅಧಿಕಾರ ಬಿಟ್ಟಮೇಲೆ ಎಕ್ಸ್ ಸಿಎಮ್ಮೇ ಅಲ್ವಾ ಸರ್ ?– ಆದ್ರೂ,ಅಧಿಕಾರದಲ್ಲಿದ್ದಾಗ ನಾನು ರೈತವಿರೋಧಿಅಂದೋರೂ ಕೂಡ, ನಾನು ರಿಸೈನ್ ಮಾಡಿದ್ಮೇಲೆ ನನ್ನ ಫಾರ್ಮರ್ ಸಿಎಂ ಅಂತಾನೇ ಕರೀಬೇಕು ಗೊತ್ತಾ..
ಸಿನಿಗನ್ನಡರಾಜ್ಯದಲ್ಲಿ ಸರಕಾರ ಚಿತ್ರಮಂದಿರಗಳಲ್ಲಿ50ಪರ್ಸೆಂಟ್ ಪ್ರೇಕ್ಷಕರಿಗೆ ಪ್ರವೇಶ ಅಂತ ಆದೇಶ ಹೊರಡಿಸಿದೆ. ಆದರೆ ಕನ್ನಡದ ನಿರ್ಮಾಪಕರು ತಮ್ಮ ಸಿನಿಮಾ ಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಹಾಗಂತ, ಓಟಿಟಿಯಲ್ಲೂ ಕನ್ನಡ ಚಿತ್ರಗಳು ಕಾಣುವುದು ಅಪರೂಪ. ಆದರೆ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಈ ಪರಿಸ್ಥಿತಿ ಇಲ್ಲ.
ಅಲ್ಲಿ ಒಂದರ ಮೇಲೊಂದರಂತೆ ಸಿನಿಮಾಗಳು ಓಟಿಟಿಗಳಲ್ಲಿ ಬಿಡುಗಡೆ ಆಗುತ್ತಿವೆ. ನಮ್ಮಲ್ಲಿ ಮಾತ್ರ ಅಪರೂಪಕ್ಕೆ ಎಂಬಂತೆ ಇಕ್ಕಟ್ ನಂಥ ಕೆಲ ಕಡಿಮೆ ಬಜೆಟ್ ಚಿತ್ರಗಳು ಮಾತ್ರ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ. ಹಾಗಾದ್ರೆ ನಮ್ಮಲ್ಲಿ ಯಾಕೆ ಓಟಿಟಿಯಲ್ಲಿ ಜಾಸ್ತಿ ಸಿನಿಮಾಗಳು ಬಿಡುಗಡೆ ಆಗ್ತಾ ಇಲ್ಲ ಅಂದ್ರೆ ನಿರ್ಮಾಪಕರು ಸ್ಟಾರ್ ಸಿನಿಮಾಗಳ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ.
ಅಷ್ಟೊಂದು ಕೋಟಿಗಟ್ಲೇ ದುಡ್ಡು ಹಾಕಿರೋ ಕೋಟಿಗೊಬ್ಬ ಹೀರೋಗಳ ಸಿನಿಮಾಗಳನ್ನ ಓಟಿಟಿಯಲ್ಲಿ ರಿಲೀಸ್ ಮಾಡಿದ್ರೆ ಲಾಸು ಅನ್ನೋದು ಅವರ ಉತ್ತರ. ಹಾಗಾದ್ರೆ, ಪರಭಾಷೆಗಳಲ್ಲಿ ಸ್ಟಾರ್ ಸಿನಿಮಾಗಳೇ ರಿಲೀಸ್ ಆಗ್ತಾ ಇಲ್ವಾ ಅನ್ನೋದು ಎಲ್ಲರೂ ಕೇಳ್ತಾ ಇರೋ ಪ್ರಶ್ನೆ. ಅದಕ್ಕೆ ಉತ್ತರ ಕೂಡ ಸುಲಭ. ಪರಭಾಷೆಯಲ್ಲಿ ಬಿಡುಗಡೆ ಆಗ್ತಾ ಇರೋ ಸಿನಿಮಾಗಳೆ ಬಹುತೇಕ ಸ್ಟಾರ್ ಸಿನಿಮಾಗಳೇ. ಆದರೆ ಅಲ್ಲಿನ ನಿರ್ಮಾಪಕರು ಸ್ಟಾರ್‌ಗಳನ್ನ ಇಟ್ಕೊಂಡು ಸಿನಿಮಾ ಮಾಡಿದ್ರೂ, ಅವರು ಸಿನಿಮಾದ ಮೇಲೆ ಹಣಹೂಡುತ್ತಿದ್ದಾರೆ.
ಸ್ಟಾರ್‌ಗಳ ಮೇಲಲ್ಲ. ಸ್ಟಾರ್‌ಗಳು ಇದ್ದರೂ ಅಲ್ಲಿನ ಕಥೆಗಳು ಅನವಶ್ಯಕವಾಗಿ ಕೋಟಿಗಳನ್ನು ಬೇಡುತ್ತಿಲ್ಲ. ಇವರು ಹಾಕುತ್ತಿಲ್ಲ. ಹಾಗಾಗಿ ಅವರು ಓಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಿದ್ರೂ ಸಾಕು. ಅಂದರೆ ನಮ್ಮವರು ಬರೀ ಸ್ಟಾರ್‌ಗಳನ್ನು ಮೆಚ್ಚಿಸಲು ಅವರ ಇಮೇಜ್ ಅನ್ನು ಬೆಳೆಸಲು ಸಿನಿಮಾಗೆ ಅನವಶ್ಯಕವಾಗಿ ಕೋಟಿಗಳನ್ನುಸುರಿಯುತ್ತಿದ್ದಾರೆ. ಇಲ್ಲಿನ ಸ್ಟಾರ್ ನಟರೂ ಕಡಿಮೆ ಬಜೆಟ್‌ನ ಸೆನ್ಸಿಬಲ್ ಸಿನಿಮಾಗಳನ್ನು ಮಾಡಿದರೆ ಓಟಿಟಿಯಲ್ಲಿ ಬಿಡುಗಡೆ ಮಾಡಲು ಯಾವ ತೊಂದರೆಯೂ ಇರಲ್ಲ. ಒಟ್ಟಿನಲ್ಲಿ ಹೀಗೆ, ಬೇರೆ ರಾಜ್ಯಗಳ ಸಿನಿಮಾಗಳೆ ಓಟಿಟಿಗಳಲ್ಲಿ ರಾಜ್ಯಭಾರ ಮಾಡ್ತಾ ಇದ್ರೆ, ನಮ್ಮವರು ಮಾತ್ರ೧೦೦ಪರ್ಸೆಂಟ್ಹಾಜರಿಗೆ ಅನುಮತಿ ಸಿಗಲಿ ಅಂತ ಕಾಯ್ತಾ, ಇಕ್ಕಟ್ಟಿನ ಅಡ್ಜ ಮಾಡಿಕೊಂಡು ಕೂತಿzರೆ.
ನೆಟ್ ಪಿಕ್ಸ್ಖೇಮು ಹೆಂಡ್ತಿ ಖೇಮುಶ್ರೀ ಬರ್ತಾ ಬರ್ತಾ ತುಂಬಾ ದಪ್ಪ ಆಗ್ತಾ ಇದ್ಳು. ಆದ್ರೂ ಅವಳಿಗೆ ತೂಕ ಜಾಸ್ತಿ ಆಗ್ತಾ ಇರೋದ್ರ ಬಗ್ಗೆ ಕೇರ್ ಇರಲಿಲ್ಲ. ಅವಳು ಅದಕ್ಕೆ ತಲೆಕೆಡಿಸಿಕೊಳ್ತಾ ಇರಲಿಲ್ಲ. ಆದ್ರೆ ಖೇಮುಗೆ ಮಾತ್ರ ಹೆಂಡ್ತಿ ಅಷ್ಟು ದಪ್ಪ ಆಗ್ತಾ ಇರೋದು ನೋಡೋಕೆ ಆಗ್ತಾ ಇರಲಿಲ್ಲ.
ಅಲ್ಲದೆ ಅವನ ಗೆಳೆಯರ ಹೆಂಡತಿಯರೆ ತುಂಬಾ ಸ್ಲಿಮ್ ಆಗಿದ್ರು. ಸೋ, ಖೇಮುಗೆ ನನ್ನ ಹೆಂಡತಿನೂ ಹಂಗೇ ಇರಬೇಕು ಅಂತ ಆಸೆ. ಖೇಮುಶ್ರೀಗೆ ಡೈಲಿ ವಾಕಿಂಗ್ ಮಾಡು ಅಂತ ಹೇಳಿ ಹೇಳಿ ಸಾಕಾಗಿತ್ತು. ಅವಳು ಮಾಡ್ತಾನೇ ಇರಲಿಲ್ಲ. ಒಂದು ದಿನ ಖೇಮು ಖಡಕ್ಕಾಗಿ ಹೇಳಿಬಿಟ್ಟ, ನೀನು ಇವತ್ತಿಂದ ಡೈಲಿ೧೦ಸಾವಿರ ಸ್ಟೆ ವಾಕ್ ಮಾಡಬೇಕು. ನೀನು ಸೋಮಾರಿ ಅಂತ ಗೊತ್ತು. ಅದಕ್ಕೇ ಈ ಸ್ಮಾರ್ಟ್ ವಾಚ್ ತಂದಿದ್ದೀನಿ. ಇನ್ಮೇಲೆ ನೀನು ತಪ್ಪಿಸಿಕೊಳ್ಳೋಕಾಗಲ್ಲಅಂತ. ಸರಿ ಅಂದಿನಿಂದ ಪ್ರತಿದಿನ ಆಫೀಸಿಂದ ಬಂದಮೇಲೆ ಖೇಮು ಹೆಂಡತಿಯ ಸ್ಮಾರ್ಟ್ ವಾಚ್ ಟೆ ಮಾಡ್ತಾ ಇದ್ದ. ಅದು೧೦ಸಾವಿರಕ್ಕಿಂತ ಜಾಸ್ತಿನೇ ತೋರಿಸ್ತಾ ಇತ್ತು.
ಖೇಮು ಖುಷಿಯಾಗ್ತಾ ಇದ್ದ. ಆದ್ರೆ ಎಷ್ಟೇ ದಿನ ಆದ್ರೂ ಖೇಮುಶ್ರೀ ಮಾತ್ರ ಸಣ್ಣ ಆಗ್ಲಿಲ್ಲ. ಖೇಮು ಕೇಳಿದ್ರೆ, ನಾನೇನ್ ಮಾಡ್ಲಿ, ದಿನಾ ನೀವು ಆಫೀಸಿಗೆ ಹೋದಾಗ ವಾಕಿಂಗ್ ಮಾಡ್ತೀನಿ.೧೦ಸಾವಿರ ಸ್ಟೆಗಿಂತ ಜಾಸ್ತಿ. ಆದ್ರೂ ಸಣ್ಣ ಆಗ್ತಿಲ್ಲ ಅಂದ್ಳು. ಖೇಮುಗೆ ಅನುಮಾನ ಬಂದು ಒಂದ್ ದಿನ ಆಫೀಸಿನಿಂದ ಸ್ವಲ್ಪ ಮುಂಚೆನೇ ಮನೆಗೆ ಹೊರಟ. ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ. ಯಾರು ಬಂದಿರಬಹುದು ಅಂತ ಖೇಮುಶ್ರೀ ಅನುಮಾನದ ಹೊರಗೆ ಬಂದಳು.
ಅಷ್ಟೊತ್ತಿಗೆ, ಅದೆಲ್ಲಿತ್ತೋ ಅವರ ಮನೆಯ ನಾಯಿ ರಾಬರ್ಟ್, ಓಡಿ ಬಂದು ಖೇಮು ಮುಂದೆ ಬಾಲ ಅಡಿಸ್ತಾ ನಿಂತ್ಕೊಂತು. ಅದರ ಕುತ್ತಿಗೆಯಲ್ಲಿದ್ದ ಸ್ಮಾರ್ಟ್ ವಾಚ್‌ನಲ್ಲಿ11ಸಾವಿರ ಸ್ಟೆ ರೀಡಿಂಗ್ ತೋರಿಸ್ತಾ ಇತ್ತು.
ಲೈನ್ ಮ್ಯಾನ್ಕುಡುಕರ ಕಷ್ಟಕುಡಿದು ಸ್ವಲ್ಪ ಜಾಸ್ತಿ ಮಾತಾಡಿದ್ರೆ, ಫುಲ್ ಟೈಟ್ ಆಗಿ ಸಿಕ್ಕಾಪಟ್ಟೆಮಾತಾಡ್ತಿದ್ದಾನೆಅಂತಾರೆ. ಹಂಗಂತ, ಇವ್ರ್ ಸಾವಾಸನೇ ಬೇಡ ಅಂತ ಸುಮ್ನೆ ಸೈಲೆಂಟ್ ಆಗಿ ಕೂತ್ಕೊಂಡ್ರೆ, ಅಣ್ಣ ಫುಲ್ ಚಿತ್ತಾಗವ್ನೆ, ಮಾತೇ ಬರ್ತಿಲ್ಲ ಅಂತಾರೆ.
ಸದ್ಯದ ಪರಿಸ್ಥಿತಿಯಲ್ಲಿ ದೇಶದ ಪ್ರಜೆಗಳು ಕುಡಿಯೋ ಅಭ್ಯಾಸ ಕಡಿಮೆ ಮಾಡೋದುಹೇಗೆ ?– ಏನಿಲ್ಲ, ಬೇಜಾರಾದಾಗೆಲ್ಲ ಕುಡೀಯೋದ್ ಬಿಟ್ಟು, ಬರೀ ಖುಷಿ ಆದಾಗ್ ಮಾತ್ರ ಕುಡಿಯೋ ಅಭ್ಯಾಸ ಮಾಡಿಕೊಂಡ್ರೆ ಸಾಕು.
ಪ್ರೈಮ್ ವಿಡಿಯೊದಲ್ಲಿ ಇಕ್ಕಟ್ ಸಿನಿಮಾ ನೋಡಿದ ಮೇಲೆ ಅನ್ನಿಸಿದ್ದು– ಇಕ್ಕಟ್ಟಿನಲ್ಲಿ ಸುಖವಿಲ್ಲ
ಇಕ್ಕಟ್ ಸಿನಿಮಾದ ಬಗ್ಗೆ ಒಂದ್ ಪಾಸಿಟಿವ್ ರಿವ್ಯೂ– ನಮ್ದೆಲ್ಲ ಆರ್ಡಿನರಿ ಸಿನಿಮಾ, ಪ್ರೈಮ್ ವಿಡಿಯೊದವರು ತಗೊಳ್ಳಲ್ಲ ಅಂತ ಯಾರೂ ಕೀಳರಿಮೆ ಇಟ್ಕೊಳ್ಳೋ ಅವಶ್ಯಕತೆ ಇಲ್ಲ. ಪ್ರೈಮ್ ನವರು ಇಕ್ಕಟ್ ಸಿನಿಮಾನೂತಗೊಂಡಿದ್ದಾರೆ.
ಅಮಿತ್ ಶಾ – ಯಡಿಯೂರಪ್ಪಾಜೀ, ನಿಮ್ಗೆ ಒಂದ್ ವಿಷ್ಯ ಹೇಳ್ಬೇಕಿತ್ತು, ಯಾವಾಗ್ಸಿಗ್ತೀರಾ?– ಆಖ್ಗ-ನಾಳೆ, ’ಮಟ ಮಟ’ ಮಧ್ಯಾಹ್ನ
ಫೇಕ್ ಫೇಸ್ ಬುಕ್ ಅಕೌಂಟಿಂದ ಮೆಸೆಂಜರ್‌ಗೆ ಬಂದು, ಫೋನ್ ಪೇ, ಗೂಗಲ್ ಪೇಇದ್ಯಾ ಅಂತ ಕೇಳಿದ್ರೆ ಏನ್ ಮಾಡಬೇಕು?
– ಇದೆ, ಬರೀ ಇನ್ ಕಮಿಂಗ್ ಅಷ್ಟೇ, ಔಟ್ ಗೋಯಿಂಗ್ ಇಲ್ಲ ಅನ್ಬೇಕು
ಇನ್ನೊಬ್ರನ್ನ ಕನ್ ಫ್ಯೂಸ್ ಮಾಡೋದು ಹೇಗೆ?ಒಂದ್ ಟೀ ಸ್ಪೂನ್, ಕಾಫಿ ಪುಡಿ ಹಾಕಿ
ರಾಜಕೀಯ ರಹಸ್ಯ– ಎಕ್ಸ್ ಸಿಎಂಗಳಾದ ಮೇಲೂ ಅವರಿಗೆ ಝೆಡ್ ಸೆಕ್ಯುರಿಟಿ ಕೊಟ್ರೂ ನಮ್ ಜನ ವೈ ಅಂತ ಕೇಳಲ್ಲ.
ರಾಜಕೀಯ ಗೊತ್ತಿಲ್ದೇ ಇರೋರು ಸದ್ಯಕ್ಕೆ ಕೇಳ್ತಾ ಇರೋ ಪ್ರಶ್ನೆ– ವೈ ಆರ್ ದೇ ಚೇಂಜಿಂಗ್ ಬಿಎಸ್ ವೈ?