ಅಸ್ತಿತ್ವವೆಂಬ ಹುಚ್ಚು ಕುದುರೆಯ ಬೆನ್ನೇರಿ
ಅಭಿಮತ
ರವಿ ಮಡೋಡಿ
@.
ಡಾರ್ವಿನನ ವಿಕಾಸವಾದದ ಸಿದ್ಧಾಂತದಂತೆ ಪ್ರತಿಯೊಂದು ಜೀವಿಯೂ ತನ್ನ ಅಸ್ತಿತ್ವಕ್ಕಾಗಿ ಹೋರಾಟವನ್ನು ನಡೆಸುತ್ತದೆ. ಮೂಲ ಕಲ್ಪನೆಯಲ್ಲಿ ಅಸ್ತಿತ್ವ ಎನ್ನುವುದು ಸಂತಾನ, ಅನ್ನ, ಆಹಾರಕ್ಕೆಸಂಬಂಽಸಿzಗಿದೆ. ನಾಗರಿಕತೆ ಬೆಳೆಯುತ್ತ ಹೋದಂತೆ ಅಸ್ತಿತ್ವದ ವ್ಯಾಖ್ಯಾನಗಳು ಬದಲಾಗಿವೆ ಎನ್ನಬಹುದು.
ಇಂದಿನ ಆಧುನಿಕತೆಯ ಧಾವಂತದ ಬದುಕಿನಲ್ಲಿ ಅಸ್ತಿತ್ವ ಎನ್ನುವುದು ಎಲ್ಲರ ಪ್ರಶ್ನೆಯಾಗಿ ಅಸಹಜವಾದ ರೀತಿಯಲ್ಲಿ ಅರ್ಥವನ್ನು ಪಡೆಯುತ್ತಿದೆ ಎನ್ನುವುದುಬಿಚ್ಚಿಟ್ಟ ಸತ್ಯ. ಒಬ್ಬ ರಾಜಕಾರಣಿ ಕೆಲವು ದಿನಗಳ ಕಾಲ ತನ್ನ ಪಾಡಿಗೆ ಕೆಲಸದಲ್ಲಿ ನಿರತನಾಗಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದಿದ್ದರೆ ಅಥವಾ ಹೇಳಿಕೆಗಳನ್ನು ಕೊಡದಿದ್ದರೆ ರಾಜಕೀಯದಲ್ಲಿ ಅವನ ಅಸ್ತಿತ್ವದ ಪ್ರಶ್ನೆ ಉದ್ಭವಿಸಿ ಬಿಡಬಹುದು. ಸಮಾಜ ಸುಧಾರಕ ಅಥವಾ ಸೇವಕರೆಂದು ಕರೆಸಿಕೊಳ್ಳು ವವರಿಗೆ ತಮ್ಮದೊಂದು-Pತಿಂಗಳಿಗೊಂದು ಊರಿನಲ್ಲಿ ಹಾಕಿಕೊಳ್ಳದಿದ್ದರೆ ಮತ್ತೆರಡು ತಿಂಗಳಿನಲ್ಲಿ ಹೆಸರು ಅಳಿಯುತ್ತದೆ ಎಂಬ ಭಯ ಕಾಡಬಹುದು.
ಒಟ್ಟಿನಲ್ಲಿ ಸದಾ ಎಲ್ಲರ ಮನಸ್ಸಿನಲ್ಲಿ ನಮಗೊಂದು ಸ್ಥಾನ ಕಲ್ಪಿಸಿಕೊಳ್ಳಬೇಕು ಅಥವಾ ನಮ್ಮ ಹೆಸರು ಉಳಿಯ ಬೇಕು ಈ ಮೂಲಕವಾಗಿ ಗಮ್ಯವಾದುದನ್ನು ಸಾಽಸಿಕೊಳ್ಳಬೇಕು ಎಂಬ ಹಪಹಪಿಕೆಯ ಸ್ಥಿತಿ ಸೂಚ್ಯವಾಗಿ ರೂಪುಗೊಂಡಿರುತ್ತದೆ. ಹಾಗೆ ನೋಡಿದರೆ ಈ ಅಸ್ತಿತ್ವವನ್ನು ಪ್ರತಿಪಾದಿಸುವ ಖಯಾಲಿ ನಮ್ಮ ಜನನದಲ್ಲಿಯೇ ಬಂದಿದೆ. ನಮ್ಮ ಹುಟ್ಟೆನ್ನುವುದು ಅಸ್ತಿತ್ವವನ್ನು ಪಣಕ್ಕಿಟ್ಟು ಜಯಿಸಿದ ಪ್ರತೀಕವೆಂದು ಕರೆಯಬಹುದೇನೋ. ಜತೆಗೆ ಮಗುವೊಂದು ಹುಟ್ಟಿನ ಮರುಕ್ಷಣದಲ್ಲಿಯೇ ಜೋರಾಗಿ ಅತ್ತು ತನ್ನ ಇರುವಿಕೆಯನ್ನು ಲೋಕಕ್ಕೆ ತಿಳಿಸು ತ್ತದೆ.
ಒಂದೊಮ್ಮೆ ಅದು ಅಳದಿದ್ದರೇ ನಮ್ಮ ಪೋಷಕರು ಅದರ ಬೆನ್ನು ತಟ್ಟಿ, ಬಡಿದು, ಶಬ್ದ ಮಾಡಿ ಲೋಕದಲ್ಲಿ ತನ್ನ ಇಹವನ್ನು ಪ್ರತಿಪಾದಿಸುವಂತೆ ಮಾಡುತ್ತಾರೆ. ಅಳುವುದು ಹೇಗೆ ನಮ್ಮ ಜಾಯಮಾನವೋ ಹಾಗೇ ಆಳುವುದು ಕೂಡ ನಮ್ಮ ಬದುಕಿನ ಭಾಗ. ಇಲ್ಲಿ ಆಳುವುದು ಎನ್ನುವುದನ್ನು ಗುರುತಿಸಿಕೊಳ್ಳುವ ಪ್ರಕ್ರಿಯೆಯ ನೆಲೆಯಲ್ಲಿ ಅದನ್ನು ಕರೆಯಬಹುದು. ಮತ್ತೊಬ್ಬರು ನಮ್ಮನ್ನು ಗುರುತಿಸಬೇಕೆಂಬ ಈ ಮನೋಕಾಮನೆಯ ಉತ್ಕಂಪದ ಭಾವ ಸದ್ದಿಲ್ಲದೇ ಅಸ್ತಿತ್ವದ ಸ್ಥಿತಿಯನ್ನು ಸ್ಥಿರವಾಗಿ ನೆಲೆಸುವಂತೆ ಮಾಡುತ್ತದೆ.
ಈ ಅಸ್ತಿತ್ವದ ಪ್ರಶ್ನೆ ಅದು ಇಂದು ನಿನ್ನೆಯದಲ್ಲ. ಅಸ್ತಿತ್ವದ ಕಾರಣಕ್ಕಾಗಿಯೇ ಪುರಾಣಗಳಲ್ಲಿ/ ಇತಿಹಾಸಗಳಲ್ಲಿ ಅನೇಕ ಯುದ್ಧಗಳೇ ಸಂಭವಿಸಿವೆ. ರಾಮನೇ ರಾವಣನಿಗೆ ನೀನು ಶರಣಾದರೇ ನಿನ್ನ ತಪ್ಪುಗಳನ್ನು ಮನ್ನಿಸಿ ಪುನಃ ನಿನಗೆ ಲಂಕೆಯನ್ನು ಒಪ್ಪಿಸುತ್ತೇನೆ ಎಂದಾಗಲೂ ರಾವಣ ತನ್ನ ಸ್ವತಂತ್ರವಾದ ಅಸ್ತಿತ್ವದ ಬಗ್ಗೆ ಯೋಚಿಸಿದ್ದ. ಆ ನೆವನದಿಂದ ರಾಮನ ಮಾತನ್ನು ಒಪ್ಪದೇ ಯುದ್ಧಕ್ಕೆ ಮುಂದಾಗಿ ಮಣ್ಣಲ್ಲಿ ಮಣ್ಣಾಗಿ ಹೋದ. ಇದೇ ನಿಲುವು ಕೌರವನಲ್ಲಿಯೂ ಇತ್ತು. ಎಂದಿಗೂ ಅಡಿಯಳಾಗಿ ಬದುಕನ್ನು ಪಡೆದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದಕ್ಕೆ ಅವನ ಮನಸ್ಸು ಒಪ್ಪಿರಲಿಲ್ಲ.
ಇಂತಹ ಅನೇಕ ಮನಸ್ಥಿತಿಗಳು ಇತಿಹಾಸದ ಪುಟಗಳಲ್ಲಿ ಕಾಣುವುದಕ್ಕೆ ಸಾಧ್ಯ. ಇಲ್ಲಿ ಮುಂದೆ ಯಾರೂ ತನ್ನನ್ನು ಗಮನಿಸದಿದ್ದರೇ ಅಥವಾ ಗೌರವಿಸದಿದ್ದರೇ ಎಂಬ ಭಾವ ಪ್ರವೃತ್ತಿಯು ಆತ್ಯಂತಿಕವಾಗಿ ಅಸ್ತಿತ್ವದ ಪ್ರತಿಪಾದನೆಗಾಗಿ ಹತೋರೆಯುವುದನ್ನು ಕಾಣಬಹುದು. ನಮ್ಮೊಳಗಿನ ಭಯದ ಮೂಲ ಅದು ಅಸ್ತಿತ್ವಕ್ಕೆಆಗುವ ಪರಿತಾಪಗಳಿಂದ ಎನ್ನಬಹುದು. ಆದ್ದರಿಂದಲೇ ಕರ್ಮದ-ಲಿತಾಂಶಗಳ ಬಗ್ಗೆ ಹೆಚ್ಚು ಆಸಕ್ತರಾಗುತ್ತೇವೆ. ಕರ್ಮ ಸಿದ್ಧಾಂತದಲ್ಲಿ ಕರ್ಮದ ಮೇಲೆಅಽಕಾರವಿದೆಯೇ ವಿನಃ ಅದು ನೀಡುವ-ಲದಮೇಲಲ್ಲ ಎಂಬುದನ್ನು ಕೃಷ್ಣ ಭಗವದ್ಗೀತೆಯಲ್ಲಿತಿಳಿಸಿzನೆ.
ಆದರೆ ಇಲ್ಲಿ-ಲದಅಪೇಕ್ಷೆಯನ್ನು ಹೊಂದುವುದು ಕೇವಲ ಬದುಕಿನ ಅಥವಾ ವ್ಯಕ್ತಿತ್ವದ ಕಾರಣಕ್ಕಾಗಿ ಮಾತ್ರವಲ್ಲ. ಅದು ಅಸ್ತಿತ್ವದ ಕಾರಣಕ್ಕೆ ಎನ್ನುವುದುಇಂದಿನ ವಾಸ್ತವ ಸ್ಥಿತಿ. ವಸ್ತುನಿಷ್ಠವಾದ-ಲಿತಗಳು ತನ್ನ ಅಸ್ತಿತ್ವಕ್ಕೆ ಮಾರಕವಾದರೆ ಎಂಬ ಭಯದ ಕಾರಣಕ್ಕಾಗಿಯೇ-ಲದಬಗ್ಗೆ ನಿರೀಕ್ಷೆಗಳು ಹೆಚ್ಚುತ್ತವೆ.ಮೇಲ್ನೋಟದಲ್ಲಿ ಅಸ್ತಿತ್ವವು ಮನ್ನಣೆ, ಸಮಾಜದಲ್ಲಿನ ಸ್ಥಾನ, ಅಽಕಾರ ಇತ್ಯಾದಿ ಅಂಶಗಳನ್ನು ಒಳಗೊಳ್ಳುತ್ತವೆ ಎಂದು ಅಂದುಕೊಳ್ಳುತ್ತೇವೆ. ಅದು ಹೌದಾಗಿ ದ್ದರೂ ಅಸ್ತಿತ್ವ ಪ್ರಕಟಣೆಗೆ ಧನವಂತ, ಸಿರಿವಂತ, ಬಡವ, ಬಲ್ಲಿದ ಎನ್ನುವ ಯಾವ ಸಾಮಾಜಿಕ ಸ್ತರಗಳ ಮೇಲೂ ಅದು ನಿರ್ಣಾಯವಾಗುವುದಿಲ್ಲ. ಅದೊಂದು ಮನುಷ್ಯನ ಅಂತರ್ಗತವಾಗಿ ಸ್ನಿಗ್ಧವಾಗಿ ನೆಲೆಯೂರಿದ ಭಾವ. ಅದು ಎಡೆ ಇರುತ್ತದೆ.
ಉದಾಹರಣೆಗೆ ನಾವು ನಮ್ಮ ಕಷ್ಟಗಳ ಸರಮಾಲೆಯನ್ನು ಮತ್ತೊಬ್ಬರಲ್ಲಿ ತೋಡಿಕೊಳ್ಳುತ್ತೇವೆ. ಏಕೆಂದರೆ ಅದಕ್ಕೆ ಮತ್ತೊಂದು ಪರಿಹಾರವಾಗಬೇಕು ಎಂಬ ನೆಲೆಗಿಂತ ಹೆಚ್ಚಾಗಿ ನಮಗೂ ಸಮಸ್ಯೆಯಿದೆ ಎನ್ನುವುದು ಲೋಕಕ್ಕೆ ತಿಳಿಯಲಿ ಎಂಬ ಪ್ರಸಕ್ತಿ ಹೆಚ್ಚು ನಮ್ಮನ್ನು ಕಾಡುತ್ತದೆ. ಒಂದಷ್ಟು ಕನಿಕರಗಳು ಸಿಕ್ಕು ನಮ್ಮಅಸ್ತಿತ್ವವನ್ನು ಮತ್ತೊಬ್ಬರು ಗಮನಿಸಿದರೆ ಸಾಕು ಎನ್ನುವ ಇಂತಹ ಸಂಗತಗಳು ನಮ್ಮೊಳಗೆ ಇರುವುದನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ.
ಅಸ್ತಿತ್ವದ ಪ್ರಶ್ನೆ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಕೃತಿಯಲ್ಲಿರುವ ಸ್ಥಿರಚರಾದಿ ವಸ್ತುಗಳಲ್ಲಿ ಅದರ ಭಾವ ಸಾಂದ್ರಿಕರಿಸುತ್ತದೆ. ಗರಿಕೆಯ ಹುಂದು ಕಡು ಬೇಸಿಗೆಯಲ್ಲಿ ಕರಟಿ ಕಮರಿ ಹೋಗುತ್ತದೆ. ಆದರೆ ಮಳೆಯ ಹನಿಯೊಂದು ಅದರ ತಾಗಿದಾಗ ಚಿಗುರೊಡೆದು ತನ್ನ ಅಸ್ತಿತ್ವವನ್ನು ಪ್ರಕಟಿಸುತ್ತದೆ. ಹಾಗೆ ಭೂಕಂಪ/ಜ್ವಾಲಾಮುಖಿ ಇತ್ಯಾದಿಗಳನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದು. ಹುಟ್ಟು ಸಾವುಗಳ ಮಧ್ಯದ ನಡುವಿನ ನಮ್ಮ ಜೀವನವು ಅಸ್ತಿತ್ವವನ್ನು ಅಽಷ್ಠಿತಗೊಳಿಸಿರುತ್ತದೆ.
ಸಾವಿನ ಆನಂತರದ ಸ್ಥಿತಿ ಬಗ್ಗೆ ನಮ್ಮ ಅನುಭವದಲ್ಲಿ ಇಲ್ಲದೇ ಇರುವುದರಿಂದ ಅಸ್ತಿತ್ವದ ವ್ಯಾಖ್ಯಾನವನ್ನು ಇದಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಬಹುದು. ಹುಟ್ಟಿಬೆಳೆದು ಬದುಕಿನ ಈ ರಂಗಸ್ಥಳದಲ್ಲಿ ಪಾತ್ರಧಾರಿಗಳಾಗಿ ಪಾತ್ರವನ್ನು ನಿರ್ವಹಿಸುತ್ತೇವೆ. ಪಾತ್ರಗಳು ಶಾಶ್ವತವಲ್ಲ ಎಂಬ ಸತ್ಯ ಕಣ್ಣಿಗೆ ನಿತ್ಯವೂ ಕಾಣಿಸುತ್ತದೆ. ಆದರೂ ಅಸ್ತಿತ್ವವೆನ್ನುವ ಸ್ಥಾಯಿಭಾವದಿಂದ ಹಾಗೂ ಅದರ ಮೋಹದಿಂದ ಬಿಡುಗಡೆ ಹೊಂದುವುದಕ್ಕೆ ಸಾಧ್ಯವಾಗುವುದಿಲ್ಲ. ಅದರ ದಾಹ ಎನ್ನುವುದು ಉಪ್ಪುನ್ನುತಿಂದಂತೆ. ತಿಂದಷ್ಟು ತೀಕ್ಷ್ಣವಾಗಿ ದಾಹ ಹೆಚ್ಚುತ್ತಲೇ ಹೋಗುತ್ತದೆ. ಇದನ್ನು ಕಗ್ಗದಲ್ಲಿ ಚೆನ್ನಾಗಿ ವಿವರಿಸುತ್ತಾರೆ.
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ|ಚಿನ್ನದಾತುರಕಿಂತ ಹೆಣ್ಣುಗಂಡೊಲವು ||ಮನ್ನಣೆಯದಾಹವೀಯೆಲ್ಲಕುಂ ತೀಕ್ಷ್ಣತಮ |ತಿನ್ನುವುದಾತ್ಮವನೆ – ಮಂಕುತಿಮ್ಮ ||ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೋ!ಕೊನೆಗೆ ಕಾಡೊಳೋ ಮಸಣದೊಳೋ ಮತ್ತೆ!!ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು!
ನೆನೆಯದಾತ್ಮದ ಸುಖವ ಮಂಕುತಿಮ್ಮ ಕೊನೆಯದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣವನ್ನು ಗಮನಿಸುವಾಗ ಅಸ್ತಿತ್ವದ ತೀವ್ರ ಅಸಹಜ ಅನುಭೂತಿ ಹಾಗೂ ಅನುಭವಗಳು ಎಗ್ಗಿಲ್ಲದೇ ಶ್ರುತಗೊಳ್ಳುತ್ತವೆ. ಗಾಳಮೇಳವಾಗಿ ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ವಂಚನೆ ಯಾವುದನ್ನು ವಿವೇಚಿಸುವ ಮನಸ್ಥಿತಿಯನ್ನು ಹೊಂದದೆ ಸಿಕ್ಕಿದ್ದನೆಲ್ಲ-ರ್ವಡ್ಮಾಡುವ, ಪೋ ಮಾಡುವ ಸಂಸ್ಕೃತಿ ಸುಟವಾಗಿ ಕಾಣಿಸುತ್ತದೆ. ಇಲ್ಲಿ ಇರುವಿಕೆಯ/ಅಸ್ತಿತ್ವದ ತಹತಹಿಸುವ ವಿಕ್ಷಿಪ್ತ ಮನೋಭಾವ ಬೇರೂರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಇದನ್ನೇ ಲಕ್ಷ್ಯವಾಗಿಸಿಕೊಂಡು ಸುಳ್ಳನ್ನು ಸತ್ಯವಾಗಿಸುವ ಅಥವಾ ಸತ್ಯವನ್ನು ಸುಳ್ಳನ್ನಾಗಿಸುವ ವ್ಯಾಪಾರವನ್ನು ಮಾಡುವವರು ದಿನೇದಿನೇ ಹುಟ್ಟಿಕೊಳ್ಳುತ್ತಿದ್ದರೆ. ಇಂತಹ ವ್ಯಾಪಾರದ ಮನಸ್ಥಿತಿ ಸರಿಯೇ ಎಂದು ಪ್ರಶ್ನಿಸಿದರೆ ಬಹುಶಃ ಅವರಿಗೂ ಕೂಡ ಈ ಅಸ್ತಿತ್ವದ ಪ್ರಶ್ನೆ ಎದುರಾಗಿರಬಹುದು!
೦೦೦