ಕೇಂದ್ರ ಸರಕಾರವನ್ನು ಅಭದ್ರಗೊಳಿಸಲು ಪೆಗಾಸಸ್ ಅಸ್ತ್ರ
ಪ್ರಚಲಿತ
ಪ್ರಕಾಶ್ ಶೇಷರಾಘವಾಚಾರ್‌
@.
2017-18ರ ಅವಧಿಯಲ್ಲಿ ಭಾರತೀಯ ಪತ್ರಕರ್ತರ ಮತ್ತು ಮಾನವ ಹಕ್ಕು ಕಾರ್ಯಕರ್ತರ ಸ್ಮಾರ್ಟ್ ಫೋನ್‌ಗಳ ಮೇಲೆ ಪೆಗಾಸಿಸ್ ಬಳಸಿ ಸರಕಾರ ಕಣ್ಗಾವಲು ನಡೆಸುತ್ತಿದೆ ಎಂದು2019ರಲ್ಲಿ ಬಯಲಾಗಿ ದೊಡ್ಡ ವಿವಾದವಾಗಿತ್ತು. ವಾಟ್ಸಪ್ ದೇಶಾದ್ಯಂತ1400 ಫೋನ್‌ಗಳು ಪೆಗಾಸಿಸ್ ಹ್ಯಾಕ್ ಆಗಿದೆ ಎಂದು ತಿಳಿಸಿತು. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಪುರಾವೆಗಳಿಲ್ಲದೆ ಈ ವಿವಾದವು ತಣ್ಣಗಾಯಿತು.
2017ರಲ್ಲಿ ಎನ್‌ಎಸ್‌ಓ ಎಂಬ ಇಸ್ರೇಲಿ ಸಂಸ್ಥೆಯೂ ಈ ಕಣ್ಗಾವಲು ತತ್ರಾಂಶವನ್ನು ಪೆಗಾಸಿಸ್ ಹೆಸರಿನಲ್ಲಿ ಅಭಿವೃದ್ಧಿ ಪಡಿಸಿದೆ. ತತ್ರಾಂಶವನ್ನು ಸರಕಾರಿಬೇಹುಗಾರಿಕೆ ಸಂಸ್ಥೆ, ಕಾನೂನು ಜಾರಿ ಮಾಡುವ ಇಲಾಖೆಗಳಿಗೆ ಕೇವಲ ಅಪರಾಧ ಮತ್ತು ಭಯೋತ್ಪಾದನೆ ತಡೆಯುವ ಉದ್ದೇಶದ ಬಳಕೆಗೆ ಮಾತ್ರ ಮಾರಾಟ ಮಾಡುವುದು ಎಂದು ಸಂಸ್ಥೆ ಹೇಳಿಕೊಳ್ಳುತ್ತದೆ. ಗೌಪ್ಯತೆ ಯನ್ನು ಕಾಪಾಡುವ ದೃಷ್ಟಿಯಿಂದ ತನ್ನ ಗ್ರಾಹಕರ ಪಟ್ಟಿಯನ್ನು ಬಹಿರಂಗ ಪಡಿಸಲು ನಿರಾಕರಿಸಿದೆ.ಈ ತಂತ್ರಾಂಶವನ್ನು ಅತ್ಯಂತ ಸುಲಭವಾಗಿ ಫೋನ್‌ಗಳಲ್ಲಿ ಅಳವಡಿಸಬಹುದು.
ಫೋನ್‌ಗಳಿಗೆ ಲಿಂಕ್ ಕಳುಹಿಸಿದಾಗ ಅದರ ಮೇಲೆ ಕ್ಲಿಕ್ ಮಾಡಿದರೆ ಅಥವಾ ವಿಡಿಯೊ ಕರೆ ಮಾಡುವ ಮೂಲಕ ಇದನ್ನು ಅಳವಡಿಸಬಹುದಾಗಿದೆ. ಫೋನ್ತಂತ್ರಜ್ಞಾನಬದಲಾದ ಹಾಗೆ ಕಣ್ಗಾವಲು ತಂತ್ರಾಂಶದ ಅಳವಡಿಕೆಯಲ್ಲಿಯೂ ಅದಕ್ಕೆ ತಕ್ಕಹಾಗೆ ಬದಲಾವಣೆಯಾಗಿರುವುದು. ಒಮ್ಮೆ ಪೆಗಾಸಿಸ್ ಅಳವಡಿಸಿದರೆ ನಿಮ್ಮ ಮೊಬೈಲ್‌ನ ಸಮಸ್ತ ಮಾಹಿತಿಯೂ ಸುಲಭವಾಗಿ ಕೈ ವಶವಾಗುತ್ತದೆ. ನಿಮ್ಮ ಪಾಸ್‌ವರ್ಡ್ ಕೂಡಾ ಇದಕ್ಕೆ ಹೊರತಾಗಿಲ್ಲ. ಪೆಗಾಸಿಸ್ ಕಣ್ಗಾವಲು ತತ್ರಾಂಶವು ಜೀ-ಮೇಲ್ ಫೇಸ್‌ಬುಕ್, ಫೇಸ್ಟೈಂ, ವಾಟ್ಸಅಪ್, ಟೆಲಿಗ್ರಾಮ್ ಮುಂತಾದ ಆಪ್‌ಗಳನ್ನು ಯಶಸ್ವಿಯಾಗಿ ಪ್ರವೇಶಿಸಿ ಸುಲಭವಾಗಿ ದತ್ತಾಂಶವನ್ನು ಸಂಗ್ರಹಿಸಿ ಖಾಸಗಿತನವನ್ನು ಸಂಪೂರ್ಣವಾಗಿ ಅಳಸಿ ಹಾಕುತ್ತದೆ.
ಎನ್‌ಎಸ್‌ಓ ಪ್ರಕಾರ ಈ ತತ್ರಾಂಶವನ್ನು ಸರಕಾರಗಳಿಗೆ ವಿನಃ ಇತರರಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇದರ ಸತ್ಯಾಸತ್ಯತೆ ದೃಢಪಡಿಸಲಾಗದು. ಪೆಗಾಸಿಸ್ ತತ್ರಾಂಶವನ್ನು ಖರೀದಿಸಲು5ಲಕ್ಷ ಡಾಲರ್ ತೆರಬೇಕಂತೆ ಮತ್ತು10ಐಫೋನ್‌ ಗಳಲ್ಲಿ ಅಳವಡಿಸಲು ಮತ್ತೆ6.5ಲಕ್ಷ ಡಾಲರ್ ನೀಡಬೇಕು. ಇದಲ್ಲದೆ ವಾರ್ಷಿಕ ನಿವರ್ಹಣಾ ವೆಚ್ಚವನ್ನು ಪ್ರತ್ಯೇಕವಾಗಿ ನೀಡಬೇಕು. ಈ ತತ್ರಾಂಶವನ್ನು ಅತ್ಯಂತ ದುಬಾರಿ ದರದಲ್ಲಿ ಖರೀದಿಸಬೇಕು ಎಂದು ನ್ಯೂಯಾರ್ಕ್ ಟೈಮ್ಸ್2019ರಲ್ಲಿ ವರದಿ ಮಾಡಿತ್ತು.
2021ರಲ್ಲಿ ಪೆಗಾಸಿಸ್ ಕಣ್ಗಾವಲು ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಫ್ರಾನ್ಸ್’ನ‘ಫಾರ್ಬಿಡನ್ ಸ್ಟೋರಿಸ್’ ಎಂಬ ಎನ್‌ಜಿಒ ಮತ್ತು ಆಮ್ನೆಸ್ಟಿ ಇಂಟರ್‌ ನ್ಯಾಷನಲ್, ಆನ್‌ಲೈನ್ ಸುದ್ದಿ ಮಾಧ್ಯಮ ದಿ ವೈರ್ ಮಾಧ್ಯಮ ಸಂಸ್ಥೆಗಳ ಸಹಯೋಗದಿಂದಪ್ರಾಜೆಕ್ಟ್ಪೆಗಾಸಿಸ್ ಹೆಸರಲ್ಲಿ ಎನ್‌ಎಸ್‌ಒ ಕಣ್ಗಾವಲು ತಂತ್ರಾಂಶ ವನ್ನು ಅಳವಡಿಸಿರುವ ಕುರಿತು ತನಿಖೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ವಿಶ್ವಾದ್ಯಂತ್ಯ50ಸಾವಿರ ಫೋನ್‌ಗಳಲ್ಲಿ ಈ ತತ್ರಾಂಶವನ್ನು ಅಳವಡಿಸಿರುವುದು ಪತ್ತೆಯಾಗಿದೆ. ಅದರಲ್ಲಿ ಭಾರತದ300ದೂರವಾಣಿಗಳಲ್ಲಿಯೂಅಳವಡಿಸಿದೆ ಎಂದು ಹೇಳಿದೆ. ಇದರ ವಿವರಗಳನ್ನು ವಿಶ್ವದ15ಮಾಧ್ಯಮ ಸಂಸ್ಥೆಗಳೊಂದಿಗೆ ಇವರು ಹಂಚಿಕೊಂಡಿದ್ದಾರೆ. ಭಾರತವನ್ನು ಗುರಿಯಾಗಿಸಿ ಈ ಸುದ್ದಿಯನ್ನು ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ ಮತ್ತು ಮೋದಿ ಸರಕಾರದ ವಿರುದ್ದ ದಿನಬೆಳಗಾದರೆ ಹತ್ತಾರು ಲೇಖನಗಳಮೂಲಕ ವಿಷಕಾರುವ ಸುದ್ದಿಜಾಲ ‘ದಿ ವೈರ್’ ಪ್ರಕಟ ಮಾಡಿದೆ.
ಸಂಸತ್ ಅಧಿವೇಶನದ ಆರಂಭದ ಹಿಂದಿನ ದಿನ ಈ ಸುದ್ದಿ ಪ್ರಕಟ ಮಾಡಿರುವುದು ಗಮನಾರ್ಹ ಸಂಗತಿ. ದಿ ಗಾರ್ಡಿಯನ್ ಪತ್ರಿಕೆ ಮೋದಿಯವರ ಭಾವಚಿತ್ರ ವನ್ನು ಹಾಕಿ ಪೆಗಾಸಿಸ್ ಬಳಕೆಯ ಸುದ್ದಿ ವಿವರ ನೀಡಿದೆ. ಆದರೆ ಅಮೆರಿಕ ಸಹಿತ ಅನೇಕ ದೇಶಗಳಲ್ಲಿ ಇದನ್ನು ಉಪಯೋಗಿಸುತ್ತಿರುವಾಗ ಕೇವಲ ಮೋದಿ ಯವರೊಬ್ಬರನ್ನು ದೋಷಣೆ ಮಾಡುವ ಇವರ ಕುತಂತ್ರದ ಹಿಂದೆ ಇರಬಹುದಾದ ಅಂತರಾಷ್ಟ್ರೀಯ ಪಿತೂರಿಯತ್ತ ಕೈ ತೋರಿಸುತ್ತದೆ. ಇದರ ಪ್ರಕಾರ ರಾಹುಲ್ ಗಾಂಧಿ ಪ್ರಮುಖ ರಾಜಕಾರಣಿಗಳು ಇಬ್ಬರು ಕೇಂದ್ರ ಸಚಿವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು40ಜನ ಪತ್ರಕರ್ತರು ಹೀಗೆ ಪಟ್ಟಿ ಬೆಳೆಸಿದ್ದಾರೆ.
ಸಿದ್ದರಾಮಯ್ಯ ಸಹಾಯಕ ವೆಂಕಟೇಶ್ ಮತ್ತು ಕುಮಾರಸ್ವಾಮಿ ಆಪ್ತ ಸಹಾಯಕರ-ನಿನಲ್ಲಿಯೂ ತತ್ರಾಂಶ ಅಳವಡಿಸಲಾಗಿತ್ತು ಎಂದು ಹೇಳಿಕೊಂಡಿದೆ.ಎನ್‌ಎಸ್‌ಒ ಸಂಸ್ಥೆಯೂ ಈ ಪಟ್ಟಿಯಲ್ಲಿನ ಸಂಖ್ಯೆಗಳು ತಮ್ಮ ಯಾವುದೇ ಗ್ರಾಹಕರಿಗೆ ಸೇರಿರುವುದಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಈಗ ಪೆಗಾಸಿಸ್ ಕಣ್ಗಾವಲು ನಡೆಯುತ್ತಿದೆ ಎಂದು ಆರೋಪಿಸಿರುವ ಸಂಸ್ಥೆಗಳು ಸಾಕ್ಷ್ಯಾಧಾರ ಸಮೇತ ರುಜುವಾತು ಪಡಿಸಬೇಕಾದ ಹೊಣೆಗಾರಿಕೆಯು ಅವರ ಮೇಲಿದೆ.
ತನಿಖೆಯ ಮೂಲಕ300ದೂರವಾಣಿಗಳಲ್ಲಿ ಪೆಗಾಸಿಸ್ ಅಳವಡಿಸಿದೆ ಎಂದು ಖಚಿತವಾಗಿ ಹೇಳುತ್ತಿರುವವರು ಇದನ್ನು ಹೇಗೆ ಪತ್ತೆ ಮಾಡಲಾಯಿತು ಎಂಬುದಕ್ಕೆ ಉತ್ತರವಿಲ್ಲ. ಇವರ ತನಿಖೆಯಲ್ಲಿ ನಿರ್ದಿಷ್ಟ ಸಂಖ್ಯೆ ದೊರೆತಿರುವಾಗ ಈ ಸಂಖ್ಯೆಯಲ್ಲಿ ಯಾವ ಮಾಹಿತಿ ಸಂಗ್ರಹಿಸಲಾಗಿದೆ ಎಂಬುದನ್ನು ಅರಿಯ ಬಹುದು. ಆದರೆ ಇವರು ವಿವರಗಳನ್ನು ನೀಡುತ್ತಿಲ್ಲ.ವಿಧಿ ವಿಜ್ಞಾನಸಂಸ್ಥೆಗೆ ಕೊಟ್ಟು ಪರಿಕ್ಷೀಸಿದರೆ ಪೆಗಾಸಿಸ್ ಅಳವಡಿಕೆಯಾದ ಬಗ್ಗೆ ಪತ್ತೆಯಾಗುವುದು ಎಂದು ದಿ ವೈರ್ ಹೇಳಿದೆ. ಹಾಗಿದ್ದರೆ ಆ ಎಲ್ಲಾ300ನಂಬರ್‌ಗಳಲ್ಲಿ ಪೆಗಾಸಿಸ್ ಇರುವುದನ್ನು ಪರೀಕ್ಷಿಸಲಾಗಿರುವುದಾ? ಉತ್ತರವಿಲ್ಲ.
ಕಡೆಯ ಪಕ್ಷ ಈಗಾಗಲೇ ಯಾರ ಹೆಸರಿನ ದೂರವಾಣಿಗಳಲ್ಲಿ ಅಳವಡಿಸಲಾಗಿದೆ ಎಂದು ತಿಳಿದಿರುವಾಗ ಆ ಸಂಬಂಧಪಟ್ಟವರು ವಿಧಿವಿಜ್ಞಾನಸಂಸ್ಥೆಗೆ ತಮ್ಮ ಮೊಬೈಲ್ ಕೊಟ್ಟು ತಪಾಸಣೆ ಮಾಡಿಸಬಹುದಿತ್ತಲ್ಲವಾ? ಆಮ್ನೆಸ್ಟಿ ಮತ್ತು ದಿ ವೈರ್ ಮೋದಿ ಸರಕಾರದ ಬದ್ಧ ವೈರಿಗಳು. ಆಮ್ನೆಸ್ಟಿ ಭಾರತ ವಿರೋಧಿ ಕಾರ್ಯ ಸೂಚಿಗೆ ಕೇಂದ್ರ ಸರಕಾರ ಕಡಿವಾಣ ಹಾಕಿದಾಗ ತಮ್ಮ ಅಂಗಡಿಯನ್ನು ಮುಚ್ಚಿಕೊಂಡು ದೇಶದಿಂದ ಪೇರಿ ಕಿತ್ತಿದ್ದರು. ದಿ ವೈರ್ ಸಂಪಾದಕ ವರದರಾಜ್ ಅವರು ಅಮಿತ್ ಶಾ ಮಗನ ವಿರುದ್ದ ಗಂಭೀರ ಆರೋಪ ಮಾಡಿ100ಕೋಟಿ ರು. ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ಜಾರೆ.
ದಿ ವೈರ್ ನಲ್ಲಿ ಸುದ್ದಿಗಳು ಕೇವಲ ಮೋದಿ ವಿರೋಧಿ ಮತ್ತು ಬಲಪಂಥೀಯರ ಮೇಲೆ ದಿನನಿತ್ಯ ಒಂದ ಒಂದು ಅಪ್ರಪಚಾರ ಕೈಗೊಳ್ಳುತ್ತಿರುವ ಸುದ್ದಿಜಾಲವಿದು.ದೂರವಾಣಿ ಕದ್ದಾಲಿಕೆಯೂ ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಯ ಕಾರಣಗಳಿಗೆ ಹಾಗೂ ಗಂಭೀರ ಅಪರಾಧಗಳನ್ನು ತಡೆಯಲು ಎಲ್ಲಾ ಸರಕಾರಗಳುಈ ಚೇಷ್ಟೆಯನ್ನು ನಡೆಸುತ್ತವೆ.2011ರಲ್ಲಿ ರಿಲಯನ್ಸ್ ಕಮ್ಯುನಿಕೇಷನ್‌ರವರು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿ ಯುಪಿಎ ಸರಕಾರದ ಅವಧಿಯಲ್ಲಿ2006ರಿಂದ2011ರೊಳಗೆ1.5ಲಕ್ಷ ಮೊಬೈಲ್ ಟ್ಯಾಪ್ ಮಾಡಲಾಗಿತ್ತು ಎಂದು ತಿಳಿಸಿತ್ತು.
ಕೇವಲ ಒಂದು ಟೆಲಿಕಾಂ ಸೇವೆ ನೀಡುವ ಸಂಸ್ಥೆಯಲ್ಲಿ ಈ ಪಾಡಾಗಿದ್ದರೆ ಇತರ ಸಂಸ್ಥೆಗಳ ಲೆಕ್ಕ ಹಾಕಿದರೆ ವರ್ಷಕ್ಕೆ ಒಂದು ಲಕ್ಷ ಫೋನ್‌ಗಳ ಕದ್ದಾಲಿಕೆ ನಡೆಯುತ್ತಿತ್ತು ಎಂದು ಅಂದಾಜಿಸಲಾಗಿದೆ. ಪ್ರಸಕ್ತ ಪ್ರಕರಣದಲ್ಲಿ ತನಿಖೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಸಂಸ್ಥೆಗಳು ಯಾವುದೇ ಆಧಾರವನ್ನು ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳಲು ಒದಗಿಸಿಲ್ಲ. ಅವರು ಇಂತಹ ಮೊಬೈಲ್‌ನಲ್ಲಿ ಪೆಗಾಸಿಸ್ ಅಳವಡಿಸಲಾಗಿದೆ ಎಂದು ಮಾತ್ರ ಹೇಳಿದ್ದಾರೆ ಆದರ ಸತ್ಯಾ ಸತ್ಯಗಳ ಬಗ್ಗೆ ಅವರಿಗೇ ಗೊಂದಲವಿದೆ.
ಕಳೆದ7ವರ್ಷದಿಂದ ಮೋದಿ ಸರಕಾರಕ್ಕೆ ಮಸಿ ಬಳೆಯಲು ಅನೇಕ ಪಿತೂರಿಯನ್ನು ಮೋದಿ ವಿರೋಧಿಗಳು ಒಂದ ಒಂದು ರೀತಿಯಲ್ಲಿ ನಡೆಸುತ್ತಲೇ ಬಂದಿವೆ. ರೈತ ಹೋರಾಟದ ಸಂದರ್ಭದಲ್ಲಿ ಹೊರ ಬಂದ ಟೂಲ್‌ಕಿಟ್ ಹಾಗೆಯೇ ಕಾಂಗ್ರೆಸ್ ಪಾರ್ಟಿ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೂಡಿದ್ದ ಷಡ್ಯಂತ್ರದ ಟೂಲ್ ಕಿಟ್ ಗಳು ಸಾಕ್ಷಿಯಾಗಿವೆ. ಆದರೆ ಪ್ರತಿ ಬಾರಿಯು ಈ ಶಕ್ತಿಗಳು ಮೋದಿ ಸರಕಾರಕ್ಕೆ ಮಸಿ ಬಳೆಯುವುದರಲ್ಲಿ ವಿಫಲವಾಗಿ ಮುಖಭಂಗಿತರಾಗುತ್ತಿದ್ದಾರೆ.ಈಗ ಪೆಗಾಸಿಸ್ ವಿವಾದವನ್ನು ಹುಟ್ಟು ಹಾಕಿರುವ ಆಮ್ನೆಸ್ಟಿಯವರೇ ಯಾವ ಯಾವ ಮೊಬೈಲ್‌ಗೆ ಪೆಗಾಸಿಸ್ ಅಳವಡಿಸಿದೆ ಎಂದು ಪಟ್ಟಿಯನ್ನು ಕೊಡುತ್ತಿರು ವುದು.
ಅವರು ಕೊಟ್ಟ ಸಂಖ್ಯೆಯನ್ನು ಒಪ್ಪಿಕೊಳ್ಳಬೇಕು. ಇವರ ತನಿಖಾ ವರದಿಯ ವಿಶ್ವಾಸಾರ್ಹತೆ ತಿಳಿಯಲು ಸಾಧ್ಯವಿಲ್ಲವಾಗಿದೆ. ಡ್ಯಾನಿಶ್ ಸಿದ್ದಕ್ಕಿ ಸಾವಿನ ನಂತರ ಯಾವ ಎಡಚರ ಗ್ಯಾಂಗ್ ಬಲಪಂಥೀಯರ ಮೇಲೆ ಸಾಮಾಜಿಕ ತಾಣದಲ್ಲಿ ಹರಿಹಾಯ್ದ ಶಕ್ತಿಗಳೇ ಇಂದು ಮತ್ತೆ ದಿ ವೈರ್‌ನಲ್ಲಿ ಮಾಡಿರುವ ಆರೋಪವನ್ನು ಬಲವಾಗಿ ಸರ್ಮರ್ಥಿಸಿಕೊಂಡು ಮೋದಿ ಸರಕಾರದ ವಿರುದ್ದ ವಿಷ ಕಾರುತ್ತಿದ್ದಾರೆ.
ಪತ್ರಕರ್ತೆ ಸಾಗರಿಕ ಘೋಷ್ ಈ ಕಪೋಲಕಲ್ಪಿತ ಆರೋಪವನ್ನು1988ರಲ್ಲಿ ರಾಮಕೃಷ್ಣ ಹೆಗಡೆ ಕೈಗೊಂಡಿದ್ದ ದೂರವಾಣಿ ಕದ್ದಾಲಿಕೆಗೆ ಹೋಲಿಸಿ ಪ್ರಧಾನಿ ಯವರು ರಾಜೀನಾಮೆ ಕೊಡಬೇಕು ಎಂದು ಫರ್ಮಾನ್ ಹೊರಡಿಸುತ್ತಾರೆ. ಸರಕಾರ ಈ ಎಲ್ಲಾ ಆರೋಪಗಳನ್ನು ಬಲವಾಗಿ ತಳ್ಳಿ ಹಾಕಿದೆ. ಸರಕಾರದ ಪರಿಸ್ಥಿತಿಯೂ ಇಂತಹ ಸಂದರ್ಭದಲ್ಲಿ ಸೂಕ್ಷ್ಮವಾಗುತ್ತದೆ. ಕಣ್ಗಾವಲು ದೇಶದ ಭದ್ರತೆ ದೃಷ್ಟಿಯಿಂದ ನಡೆದೇ ನಡೆಯುತ್ತಿರುತ್ತದೆ. ಅದು ಕಾನೂನಿನ ಪರಿಮಿತಿ ಯಲ್ಲಿ ನಡೆಯುವುದು. ಯಾವ ಸರಕಾರವು ಅದನ್ನು ಅಧಿಕೃತವಾಗಿ ಒಪ್ಪಿಕೊಳ್ಳುವುದಿಲ್ಲ.
ಮಾಡಿರುವ ಆರೋಪಗಳು ಸಾಕ್ಷ್ಯಾಧಾರಗಳು ಇಲ್ಲ ಮತ್ತು ಯಾವುದೇ ಪಾರದರ್ಶಕತೆ ಇಲ್ಲದಿರುವುದರಿಂದ ಪ್ರತಿಪಕ್ಷಗಳು ಮತ್ತು ಮೋದಿಯ ವಿರೋಧಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅನಿಶ್ಚಿತತೆ ಹಾಗೂ ಸರ್ಕಾರದ ಸಂದಿಗ್ಧತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷಗಳು ಪೆಗಾಸಿಸ್ ಕಣ್ಗಾವಲು ಕುರಿತು ಪ್ರಶ್ನೆ ಕೇವಲ ಸರಕಾರಕ್ಕೆ ಮಾತ್ರವಲ್ಲ, ಇದರ ಬಗ್ಗೆ ಆರೋಪ ಮಾಡಿರುವ ಸಂಸ್ಥೆಗಳನ್ನು ಉತ್ತರ ಕೇಳಬೇಕು. ಆದರೆ ಈ ಎಲ್ಲಾ ಶಕ್ತಿಗಳಿಗೆ ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸುವುದು ಮುಖ್ಯವಾಗಿದೆಯೇ ಹೊರತು ಸತ್ಯ ಹೊರ ಬರುವುದಲ್ಲ.
ಕೇಂದ್ರ ಸರಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಕ್ತಿಗಳಿಂದ ಅನೂಚಾನೂಚವಾಗಿ ಕಳೆದ7ವರ್ಷದಿಂದ ಒಂದ ಒಂದು ವಿಷಯದಲ್ಲಿ ನಡೆದುಕೊಂಡು ಬಂದಿದೆ. ಈಗ ಆ ಪಟ್ಟಿಗೆ ಪ್ರಾಜೆಕ್ಟ್ ಪೆಗಾಸಿಸ್ ಕಣ್ಗಾವಲು ತನಿಖೆಯು ಸೇರ್ಪಡೆಯಾಗಿದೆ.