ಗ್ರಂಥಾಲಯ ದಿನಾಚರಣೆ ಮತ್ತು ಪುಸ್ತಕ ಸಂಸ್ಕೃತಿ
ಅಭಿಪ್ರಾಯ
ಪ್ರೊ.ಸಿದ್ದು ಯಾಪಲಪರವಿ
ಮುಗಿದು ಒಳಗೆ ಬಾ ಜ್ಷಾನ ಮಂದಿರದೊಳು’ ಎಂಬ ಮಾತು ತುಂಬಾ ಅರ್ಥಗರ್ಭಿತ. ಎಸ್.ಆರ್.ರಂಗನಾಥನ್ ಭಾರತ ದೇಶದ ಗ್ರಂಥಾಲಯ ವಿಜ್ಞಾನಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸವಿನೆನಪಿಗಾಗಿ ಅಗ 12ನ್ನು ಗ್ರಂಥಾಲಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಅಕ್ಷರ ಸಂಸ್ಕೃತಿ ನಮಗೆ ಅನಾದಿ ಕಾಲದಿಂದಲೂ ಇದೆ. ಆದರೆ ಅನಾದಿ ಕಾಲದಲ್ಲಿ ಶೂದ್ರರು ಶಿಕ್ಷಣದಿಂದ ವಂಚಿತರಾಗಿದ್ದರು ಎಂಬ ವಿಷಾದವಿದೆ. ಆದರೆ ಆಧುನಿಕ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಬ್ರಿಟಿಷರು ಭಾರತವನ್ನು ಆಳಲು ಪ್ರಾರಂಭಿಸಿದ ಮೇಲೆ ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೆ ಮುಕ್ತವಾಗಿ ಲಭಿಸಲಾ ರಂಭಿಸಿತು. ವಿದ್ಯಾರ್ಥಿಗಳ ಪಾಲಿಗೆ ಗ್ರಂಥಾಲಯವೇ ದೇವಾಲಯ ಎಂಬ ಮಾತು ಚಾಲ್ತಿಗೆ ಬಂತು. ಗ್ರಂಥಾ ಲಯಕ್ಕೆ ಒಂದು ವೈಜ್ಞಾನಿಕ ಸ್ವರೂಪ ನೀಡಿದವರು ಗ್ರಂಥ ವಿeನಿ ಎಸ್.ಆರ್.ರಂಗನಾಥನ್.
ಕೇವಲ ಆಧ್ಯಯನ ಕಾರಣವಲ್ಲದೆ ವ್ಯಕ್ತಿಯ ಒಂಟಿತನವನ್ನು ದೂರ ಮಾಡಿ ಏಕಾಂತ ಸೃಷ್ಟಿ ಮಾಡುವ ತಾಕತ್ತು ಮತ್ತು ಚೈತನ್ಯ ಪುಸ್ತಕಕ್ಕೆ ಇದೆ ಎಂಬ ಅರಿವು ವಿಸ್ತಾರವಾಯಿತು. ಮಹಾತ್ಮ ಗಾಂಧಿಯವರು ಓದಿದ ಸತ್ಯ ಹರಿಶ್ಚಂದ್ರ ಕಥೆ ಅವರ ಬದುಕಿನ ಆಲೋಚನೆಯ ದಿಕ್ಕನ್ನೇ ಬದಲಿಸಿತು. ಜಗತ್ತಿನಲ್ಲಿ ಅತಿ ಹೆಚ್ಚು ಗ್ರಂಥಗಳನ್ನು ಓದಿದ ಕೀರ್ತಿಗೆ ಭಾಜನರಾದವರು ಡಾ.ಬಿ.ಆರ್.ಅಂಬೇಡ್ಕರ್ ಎಂಬುದು ಭಾರತೀಯರ ಹೆಮ್ಮೆ. ಅಮೆರಿಕದ ಗ್ರಂಥಾಲಯದಲ್ಲಿ ಇರುವ ಎಲ್ಲಾ ಪುಸ್ತಕಗಳನ್ನು ಓದಿದ ದಾಖಲೆ ಅಸಾಮಾನ್ಯ. ಅತಿ ಹೆಚ್ಚು ಪದವಿಗಳನ್ನು ಗಳಿಸಲು ಅಂಬೇಡ್ಕರ್ ಬೆಳೆಸಿಕೊಂಡ ಪುಸ್ತಕ ಸಂಸ್ಕೃತಿಯೇ ಕಾರಣ.
ಓದಿನ ಹಸಿವು ವ್ಯಕ್ತಿಯ ಜ್ಞಾನದ ಸಾಮರ್ಥ್ಯವನ್ನು ವೃದ್ಧಿಸುತ್ತದೆ. eನವೆಂಬುದು ಯಾರೂ ಕದಿಯಲಾರದ ಅಮೂಲ್ಯ ಸಂಪತ್ತು. ಮಹಾಜ್ಞಾನಿಯಾದವನು ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ. ಇಡೀಜಗತ್ತು ನಿಂತಿರುವುದೇ ಪುಸ್ತಕ ಮಾಹಿತಿ ಮೇಲೆಯೇ ಎಂಬುದು ಗಮನಾರ್ಹ. ಜಗತ್ತನ್ನು ಆಳಿದ ಅನೇಕ ಮಹನೀಯರು ಇಂದಿಗೂ ಅಜರಾಮರವಾಗಿರಲು ಗ್ರಂಥಗಳೇ ಕಾರಣ. ಸಾಧು, ಸಂತರು, ಇತಿಹಾಸ ಪುರುಷರು ಇಂದಿಗೂ ನಮ್ಮೊಂದಿಗೆ ಜೀವಂತವಾಗಿರಲು ಇತಿಹಾಸದ ದಾಖಲೆಗಳು ಪೂರಕವಾಗುತ್ತವೆ. ಮತ್ತೆ, ಮತ್ತೆ ಮೆಲುಕು ಹಾಕುವ ದಾರ್ಶನಿಕರ, ಶರಣರ ಸಾಲು ಗಳು, ದೇಶ ಆಳಲು ಸಹಕಾರಿಯಾಗಿರುವ ಸಂವಿಧಾನಗಳು ನಮ್ಮ ಪಾಲಿನ ಗೀತೆಯಾಗಿವೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ವೈಯಕ್ತಿಕ ವ್ಯವಸ್ಥೆ ನಿರ್ಮಾಣವಾಗುವುದೇ ಈ ಗ್ರಂಥಗಳ ಆಧಾರದಿಂದ.
ಜ್ಞಾನಿಗಳು ಪ್ರತಿಯೊಂದು ಮಾಹಿತಿಯನ್ನು ಪಡೆಯಲು ಗ್ರಂಥಾಲಯಕ್ಕೆ ಮೊರೆ ಹೋಗುವ ಸಂಪ್ರದಾಯವಿತ್ತು, ಈಗಲೂ ಇದೆ ಆದರೆ ಸ್ವರೂಪ ಬದಲಾಗಿದೆ. ಡಿಜಿಟಲ್ ಲೈಬ್ರರಿ, ಗೂಗಲ್ ಸಂಚರಿಸುವ ಗ್ರಂಥಾಲಯಗಳಾಗಿ ಮಾರ್ಪಟ್ಟಿವೆ. ಗ್ರಂಥಾಲಯ ಮತ್ತು ಅಕ್ಷರ ಸಂಸ್ಕಾರ ನಮ್ಮ ಬದುಕಿನ ದೊಡ್ಡ ಸಂಗಾತಿ.ಸಚಿವರೊಬ್ಬರು ‘ಹಾರ ತುರಾಯಿಗಳ ಬದಲು ಪುಸ್ತಕ ನೀಡಿ’ ಎಂಬ ಹೇಳಿಕೆ ನಿಜಕ್ಕೂ ಪುಳಕವನ್ನುಂಟು ಮಾಡಿದೆ. ನಮ್ಮ ರಾಜ್ಯ ಸರಕಾರ ಅದೇ ದಾರಿಯಲ್ಲಿ ಹೋಗಿರುವುದು ಅಭಿನಂದನೀಯ.
ಆಳುವ ಅನೇಕ ಜನಪ್ರತಿನಿಧಿಗಳಗೆ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗದ ಕುರಿತು ಸಮರ್ಪಕ ತಿಳುವಳಿಕೆ ಇಲ್ಲ. ಕೆಲವು ರಾಜಕಾರಣಿಗಳು ಪತ್ರಿಕೆ ಗಳ ಮೇಲೂ ಕಣ್ಣಾಡಿಸುವುದಿಲ್ಲ. ತಮ್ಮ ಅಧಿಕಾರಾವಧಿಯಲ್ಲಿ ಒಮ್ಮೆಯೂ ಅಲ್ಲಿರುವ ಗ್ರಂಥಾಲಯಕ್ಕೆ ಭೇಟಿ ಮಾಡಿ ಪುಸ್ತಕಗಳ ಮೇಲೆ ಕೈ ಆಡಿಸಿರುವು ದಿಲ್ಲ. ಕಲಾಪಗಳ ಸಭೆಗೆ ಕಡ್ಡಾಯವಾಗಿ ಹಾಜರಾಗಲು ವಿಪ್ ನೀಡುವಂತೆ, ಕಡ್ಡಾಯವಾಗಿ ಗ್ರಂಥಾಲಯಕ್ಕೆ ಭೇಟಿ ಕೊಡುವ ಆದೇಶವನ್ನು ಎರಡು ಮನೆಯ ಸಭಾಪತಿ ಗಳು ನೀಡಬೇಕು.
ತಮ್ಮ ಅಧಿಕಾರಾವಧಿಯಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡದ ಜನಪ್ರತಿನಿಽಗಳಿಗೆ ನಿವೃತ್ತಿ ವೇತನ ನೀಡಬಾರದು. ಪುಸ್ತಕ ಮತ್ತು ಗ್ರಂಥಾಲಯಗಳೆಂದರೆ ಬೆಳಕಿನ ಸಂಕೇತ. ’ಜ್ಞಾನದ ಬಲದಿಂದ ಅಜ್ಞಾನದ ಕೇಡು,ಜ್ಯೋತಿಯ ಬಲದಿಂದ ತಮಂಧದ ಕೇಡು’ ಎಂಬ ಬಸವಣ್ಣನ ಸಾಲುಗಳು ಮನದ ಕತ್ತಲೆಯನ್ನು ಕಳೆಯುತ್ತವೆ. ಸಾವಿರಾರು ಕೃತಿಗಳ ಮೂಲಕ ನಮ್ಮ ಕಣ್ಣು ತೆರೆಸಿದ ಮಹಾನ್ ಸಾಹಿತಿಗಳಿಗೆ ಸಾವಿರದ ಶರಣು.