ನಾವು ತಲೆ ಎತ್ತಿಕೊಂಡು ಬದುಕುವವರು – ತಾಲಿಬಾನ್
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡಅಂತೂ ಇಂತೂ ನಿರ್ದೇಶಕ ಗುರುಪ್ರಸಾದ್ ಮತ್ತೊಂದು ಸಿನಿಮಾ ಶುರು ಮಾಡಿದ್ದಾರೆ. ಆದರೆ, ಶುರು ಮಾಡಿzರೆ ಅಷ್ಟೇ. ಅದು ಮುಗಿಯೋದು ಯಾವಾಗ, ಬಿಡುಗಡೆ ಆಗೋದು ಯಾವಾಗ ಅಂತ ಗುರುಪ್ರಸಾದ್ ಅವರನ್ನು ಬಲ್ಲ ಯಾರೂ ಕೇಳಲ್ಲ ಬಿಡಿ. ಯಾಕಂದ್ರೆ ಗುರು ಒಂಥರಾ ಪಂಚವಾರ್ಷಿಕ ಯೋಜನೆ ಥರಸಿನಿಮಾ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತು.
ಗುರುಪ್ರಸಾದ್ ಈಗ ರಂಗನಾಯಕ ಅನ್ನೋ ಸಿನಿಮಾ ಶುರು ಮಾಡಿದ್ದಾರೆ. ಅದು ತಮ್ಮ ಹಳೆಯ ಮಿತ್ರ ಮತ್ತು ಶತ್ರು ಜಗ್ಗೇಶ್ ಅವರ ಜತೆ. ಗುರು ಮತ್ತು ಜಗ್ಗೇಶ್ಜತೆಯಾಗಿ ಸಿನಿಮಾ ಮಾಡಿದಾಗ ಚೆನ್ನಾಗೇ ಇದ್ರೂ ನಂತರ ಅವರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಮಾತೆತ್ತಿದರೆ ನಾನು ಶಾರದಾ ಸುತ ಅನ್ನುವ ಅವರು ನವರಸ ನಾಯಕ ನನ್ನ ಮುಂದೆ ಏನೂ ಅಲ್ಲ ಎಂಬಂತೆ ವರ್ತಿಸಿದ್ದರು. ಜಗ್ಗೇಶ್ ಅವರ ಜತೆ ಮಾತ್ರವಲ್ಲ, ಅವರ ಜತೆ ಎರಡು ಸಿನಿಮಾ ಮಾಡಿದ ಡಾಲಿ ಧನಂಜಯ ಅವರ ಜತೆಗೂ ಗುರು ಅವರದ್ದು ಇದೇ ರೀತಿಯ ವರ್ತನೆಯಾಗಿತ್ತು.
ಈಗ ನಟ ಜಗ್ಗೇಶ್ ತಮ್ಮ ಮಗನ ಹೆಸರೂ ಗುರು ಆಗಿರುವುದರಿಂದಲೋ ಏನೋ, ಗುರು ಪ್ರಸಾದ್ ಅವರನ್ನೂ ತಮ್ಮ ಮನೆ ಮಗ ಎಂದುಕೊಂಡು ಎಲ್ಲವನ್ನೂ ಮರೆತು ಅವರ ಜತೆ ಮತ್ತೊಂದು ಸಿನಿಮಾ ಶುರು ಮಾಡುವ ಮನಸ್ಸು ಮಾಡಿzರೆ. ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಇತ್ತೀಚೆಗೆ ಕರೋನಾ ಸಮಯದಲ್ಲಿ ಗುರುಪ್ರಸಾದ್ ಅವರು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಮಾತನಾಡಿದ ರೀತಿ ನೋಡಿದವರು, ಈಯಪ್ಪ ಯಾಕೋ ಮಾನಸಿಕ ವಾಗಿ ಕುಗ್ಗಿ ಹೋಗಿದ್ದಾರೆ ಅನಿಸಿದ್ದು ನಿಜ.
ತೀರಾ ಬಾಯಿಗೆ ಬಂದಂತೆ ಮಾತನಾಡುತ್ತಾ, ಸಿಕ್ಕ ಸಿಕ್ಕವರನ್ನೆ ಬಯ್ಯುತ್ತಾ ಗುರು ಗರಂ ಆಗಿ ರೌದ್ರಾವತಾರ ತಾಳಿದ್ದರು. ಮತ್ತೆ ಇವರು ಸಿನಿಮಾ ಮಾಡೋದುಡೌಟು ಅನ್ನೋ ಮಟ್ಟಕ್ಕೆ ಅವರ ಮನೋಭಾವ ಆತಂಕ ಹುಟ್ಟಿಸುತ್ತಿತ್ತು. ಆದರೆ ಈಗ ರಂಗನಾಯಕ ಚಿತ್ರ ಶುರು ಆಗಿರೋದ್ರಿಂದ ಪರವಾಗಿಲ್ಲ, ಗುರು ಇನ್ನೂ ಸಿನಿಮಾ ಮಾಡುವಷ್ಟು ಸಮರ್ಥರಾಗಿzರೆ ಅಂತ ಬಹಳಷ್ಟು ಜನ ಅಭಿಮಾನಿಗಳು ನಿಟ್ಟುಸಿರು ಬಿಟಿzರೆ. ಆದರೆ ಈ ಬಾರಿಯಾದರೂ ಕಿರಿಕಿರಿಗಳಿಲ್ಲದೆ ಶೂಟಿಂಗ್ಮುಗಿಸಿ, ವರ್ಷಗಟ್ಟಲೇ ಸಿನಿಮಾ ಬಿಡುಗಡೆಯನ್ನು ಎಳೆಯದೆ ಚಿತ್ರಮಂದಿರಗಳಲ್ಲಿ ರಂಗನಾಯಕನ ಆರಂಗೇಟ್ರಂ ಆಗಲಿ ಅನ್ನೋದು ಎಲ್ಲರ ಹಾರೈಕೆ.
ಲೂಸ್ ಟಾಕ್ಖೇಮು (ಕಾಲ್ಪನಿಕ ಸಂದರ್ಶನ)ಖೇಮು- ಅ, ಏನ್ರೀ ಇದು, ದೇಶದಲ್ಲಿ ಎಲ್ಲರಿಗೂ ತಲಿಬ್ಯಾನಿ ಬಂದೈತಲ್ಲಅ ಅದರ ಬಗ್ಗೆನೇ ಮಾತಾಡ್ತಾ ಇದ್ದಾರೆ, ಏನಿದು ?– ರೀ, ಖೇಮು, ಅದು ತಲಿಬ್ಯಾನಿ ಅಲ್ಲ, ತಾಲಿಬಾನ್
ಖೇಮು- ಏನೋ ಒಂದು ಆದ್ರೆ ಪ್ರಪಂಚದ ಬೇರೆ ದೇಶಗಳೆಲ್ಲ ಸೇರ್ಕೊಂಡು, ಈ ಆಫ್ಘಾನಿಸ್ತಾನದ ಮೇಲೆ ಒಂದ್ ಬಾಂಬ್ ಹಾಕಿದ್ರೆ ಸಾಕಲ್ಲ, ಯಾಕೆ ಮಾಡ್ತಾ ಇಲ್ಲ ?– ರೀ, ಹಂಗೆ ಮಾಡಕಾಗುತ್ತಾ, ಅಲ್ಲಿ ಬೇರೆ ಜನಗಳೂ ಇರಲ್ವಾ, ಅವ್ರೆಲ್ಲಸಾಯಲ್ವಾ?
ಖೇಮು- ಓಹೋ ಅಲ್ಲಿ ಜನಗಳೂ ಇದ್ದಾರಾ, ನಾನೆ ಬರೀ ಟೆರರಿಸ್ಟ್ಗಳು ಅಂದ್ಕೊಂಡಿದ್ದೆ.– ನಿಜ ಬಿಡಿ, ಟೆರರಿಗಳನ್ನೂ ಜನಗಳು ಅಂತ ತಪ್ಪು ತಿಳ್ಕೊಂಡಿರೋ ಜನ ಇರುವಾಗ ನಿಮ್ಮ ಅನಿಸಿಕೆ ಸರಿಯಾಗಿದೆ.
ಆದ್ರೂ, ಪಾಪ, ಅಲ್ಲಿಯ ಜನಕ್ಕೆ ಸ್ವಾತಂತ್ರ್ಯನೇ ಇಲ್ಲವಂತೆ. ಅವರು ತಲೆಎತ್ತಿಕೊಂಡು ಬದುಕೋ ಥರ ಏನಾದ್ರೂ ಮಾಡಬೇಕ?– ಹೆಂಗ್ ಮಾಡೋಕಾಗುತ್ತೆ, ಅಲ್ಲಿರೋರಲ್ಲಿ ಮ್ಯಾಕ್ಸಿಮಂ ಜನ, ಬರೀ ತಲೆ ಎತ್ತಿಕೊಂಡೇ ಬದುಕುವವರು.
ನಮ್ಮ ಇಂಡಿಯಾ ಈ ವಿಷಯದಲ್ಲಿ ಏನಾದ್ರೂ ಮಾಡಿ, ಈ ಉಗ್ರರನ್ನು ಮಟ್ಟಹಾಕಿ ಅಲ್ಲಿ ಜನ ಗಣ ಮನ ಹಾಡಿಸಬೇಕಲ್ಲ?– ಅದೆಲ್ಲ ಅಷ್ಟು ಸುಲಭ ಅಲ್ಲ, ಅದಕ್ಕೆ ಅಲ್ಲಿನ ಜನಗಳ ಮನ ಮುಖ್ಯ ಆಗುತ್ತೆ.
ನೆಟ್ ಪಿಕ್ಸ್
ಖೇಮು ಒಂದ್ಸಲ ಸ್ಲೀಪರ್ ಕೋಚ್ ಟ್ರೈನ್‌ನಲ್ಲಿ ಲಾಂಗ್ ಜರ್ನಿ ಹೊರಟ. ಬೆಂಗಳೂರಿನಿಂದ ಡೆಲ್ಲಿಗೆ ಹೊರಟ ಟ್ರೈನಿನಲ್ಲಿ ಅವನಿಗೆ ಸ್ಲೀಪರ್ ಕೋಚ್‌ನಲ್ಲಿ ಜಾಗಸಿಗೋದೇ ಕಷ್ಟ ಆಯ್ತು. ಕಷ್ಟ ಪಟ್ಟು ಕಾಸು ಕೊಟ್ಟು ಹೇಗೋ ಒಂದು ಸ್ಲೀಪಿಂಗ್ ಸೀಟ್ ಬುಕ್ ಮಾಡಿದ. ಸರಿ ಖೇಮು ಹೊರಡುವ ದಿನ ಬಂತು. ಸ್ಟೇಷನ್‌ಗೆ ಹೋಗಿ ತನ್ನ ಸೀಟ್ ಎಲ್ಲಿದೆ ಅಂತ ಹುಡುಕಿ ಹೋದ್ರೆ ಅಲ್ಲಿ ಬರೀ೨ಸೀಟುಗಳ ಸ್ಲೀಪಿಂಗ್ ಕೋಚ್ ಇತ್ತು. ಅಲ್ಲಿ ಪ್ರಯಾಣ ಮಾಡುತ್ತಿದ್ದು ಇವನದ್ದೇ ವಯಸ್ಸಿನ ಒಂದು ವಿವಾಹಿತ ಅಟ್ರಾಕ್ಟಿವ್ ಹೆಂಗಸು.
ಆಕೆಯನ್ನು ಮಾತನಾಡಿಸಿ, ಈ ಜರ್ನಿಯಲ್ಲಿ ನಾವು ಜತೆಗೇ ಪ್ರಯಾಣ ಮಾಡುತ್ತಿದ್ದೇವೆ. ಅಲ್ಲಿಯವರೆಗೂ ಸ್ನೇಹಿತರಾಗಿರೋಣ ಅಂತ ಕೈ ಕುಲುಕಿ ಮಾತನಾಡಿದ ಖೇಮು. ಸರಿ ರಾತ್ರಿ ಊಟ ಆಯ್ತು, ಮಲಗೋ ಟೈಮು. ಇಬ್ಬರೂ ತಮ್ಮ ತಮ್ಮ ಸ್ಲೀಪಿಂಗ್ ಕೋಚ್‌ನಲ್ಲಿ ಮಲಗೋಕೆ ರೆಡಿ ಆದ್ರು. ಖೇಮು ಮೇಲಿನ ಬರ್ತ್‌ನಲ್ಲಿ , ಆಕೆ ಕೆಳಗಿನ ಬರ್ತ್‌ನಲ್ಲಿ ಮಲಗಿದರು. ಸ್ವಲ್ಪ ಹೊತ್ತಿನಲ್ಲಿ ಖೇಮುಗೆ ಛಳಿ ಆಗೋಕೆ ಶುರು ಆಯ್ತು. ಮೇಲಿಂದಲೇ, ಕೆಳಗೆ ಮಲಗಿದ್ದ ಆಕೆಯನ್ನು, ನಾವಿಬ್ಬರೂ ಈಗ ಸ್ನೇಹಿತರಲ್ವಾ, ನಂಗೆ ತುಂಬಾ ಚಳಿ ಆಗ್ತಿದೆ.
ಇಫ್ ಯೂ ಡೋಂಟ್ ಮೈಂಡ್, ಅಲ್ಲಿ ಕೆಳಗಿರೋ ಒಂದು ಬೆಡ್ ಶೀಟ್ ತೆಗೆದುಕೊಡ್ತೀರಾ ಅಂತ ಕೇಳಿದ. ಅದಕ್ಕೆ, ಖೇಮು ಕಡೆಗೆ ರೊಮ್ಯಾಂಟಿಕ್ ಆಗಿ ನೋಡುತ್ತಾ, ಆಕೆ ಹೇಳಿದಳು, ನಾವಿಬ್ರೂ ಸ್ನೇಹಿತರು, ತುಂಬಾ ಚಳಿ ಆಗ್ತಿದೆ ಅಂತಿದೀರಾ, ನಿಮಗೆ ಬೆಡ್ ಶೀಟ್ ಬೇಕು, ಆದ್ರೆ, ನಾವಿಬ್ಬರೂ ಯಾಕೆ ಈ ರಾತ್ರಿಯ ಮಟ್ಟಿಗೆ ಗಂಡ ಹೆಂಡತಿಯರ ಥರ ಇರಬಾರದು. ಖೇಮುಗೆ ಇದನ್ನು ಕೇಳಿ ಶಾಕ್ ಮತ್ತು ಒಳಗೊಳಗೆ ಎಕ್ಸೈಟ್ ಮೆಂಟ್ ಆಯ್ತು. ಮೆಲ್ಲಗೆ ಕೆಳಗಿಳಿದು ಬಂದು ಆಕೆಯ ಬೆಡ್ ಶೀಟ್‌ನೊಳಗೆ ತೂರಿಕೊಳ್ಳಲು ನೋಡಿದ. ಆಗ ಆಕೆ ಸಿಟ್ಟಿನಿಂದ ಹೇಳಿದ್ಳು, ಹಲೋ ನಾನು ಗಂಡ ಹೆಂಡತಿಯರ ಥರ ಇರೋಣ ಅಂತ ಹೇಳಿದ್ದು, ನಿನಗೆ ಬೇಕಾಗಿರೋ ಬೆಡ್‌ಶೀಟ್‌ನ ನೀನೇ ಹೋಗಿ ತಗೋ ಅಂತ ಹೇಳೋಕೆ. ಖೇಮುಗೆ ಈಗ ನಿರಾಸೆ ಮತ್ತು ಶಾಕ್ ಆಯ್ತು.
ಸಿಟ್ಟು ಬಂದರೂ ತಡೆದುಕೊಂಡು, ಮೆಲ್ಲಗೆ ಹೋಗಿ ಬೆಡ್ ಶೀಟ್ ತಗೊಂಡು ಮೇಲೆ ಹೋಗಿ ಮಲಗಿಕೊಂಡು ಬೆಡ್ ಶೀಟ್ ಓಪನ್ ಮಾಡಿ, ಪುರ್ ಅಂತ ಹೂಸುಬಿಟ್ಟು ಹೇಳಿದ, ಸರಿ, ನೀವು ಹೇಳಿದ ಹಾಗೆ, ಇಬ್ರೂ ಇವತ್ತು ರಾತ್ರಿಯ ಮಟ್ಟಿಗೆ ಗಂಡ ಹೆಂಡತಿ ಥರ ಇರೋಣ.
ಲೈನ್ ಮ್ಯಾನ್
ಭಾರತದ ಎಲ್ಲ ಇಂಪೋರ್ಟ್ ಎಕ್ಸ್ ಪೋರ್ಟ್ ಬಂದ್- ತಾಲಿಬಾನ್ ನಮ್ಮ ಸರಕಾರ-ಯಾವಾಗ್ಲೂ ಗನ್ ಇಟ್ಕೊಂಡೇ ಓಡಾಡ್ತಾ ಇರ್ತಾರೆ. ಸೋ,PUBGಥರ ಇವ್ರದ್ದು ಯಾವಾದ್ರೂAppಇದ್ದೇ ಇರ್ತವೆ ನೋಡ್ರೋ, ಬ್ಯಾನ್ ಮಾಡಣ.ಮಾಡರ್ನ್ ಮಕ್ಕಳು’ಪುಟ್ಟಾ, ಎಲ್ಲಿಗೋಗಿದ್ಯೋ ೨ ದಿನ?’– ’ಅಮ್ಮ ಊರಿಗ್ ಕರ್ಕೊಂಡ್ ಹೋಗಿದ್ರು.’’ಯಾಕೆ?’– ’ಅಜ್ಜಿ ದೇವ್ರಾಗಿದ್ದಾರೆ ಅಂತ ಅಮ್ಮ ಕರ್ಕೊಂಡೋಗಿದ್ರು. ಪಪ್ಪಾ, ನಿಮಗ್ಗೊತ್ತಾ,ನಾನೆ ಅಜ್ಜಿ ಸತ್ತೋಗಿದಾರೆ ಅಂದ್ಕೊಂಡಿದ್ದೆ’ಫೋಟೋಗ್ರಾಫರ‍್ ಒಬ್ಬ ಸತ್ತರೆ, ನ್ಯೂಸ್ ಹೆಡ್ ಲೈನ್ಫೋಟೋಗ್ರಾಫರ್ ಫಿನಿಷ್ತಡವಾದ ಜ್ಞಾನೋದಯಅಯ್ಯೋ, ನಿನ್ನೆ ವರ್ಲ್ಡ ಫೋಟೋಗ್ರಾಫರ‍್ ಡೇ ಇತ್ತಂತೆ, ನಂಗೆ ಫ್ಲ್ಯಾಷ್ ಆಗ್ಲಿಲ್ಲ.ಕಾಡುಪಾಪಗಳ ಫೊಟೋ ತೆಗೆಯೋನುವೈಲ್ಡ್ ಲೈಫ್ ಫೋಟೋಗ್ರಾಫರ್ಮನೆಯಲ್ಲಿ ಪಾಪುಗಳ ಫೋಟೋ ತೆಗೆಯೋನುಚೈಲ್ಡ್ ಲೈಫ್ ಫೋಟೋಗ್ರಾಫರ್
ಸಂಸಾರಗಳ ಗುಟ್ಟುಒಂದ್ ಸಂಸಾರ ಇದ್ರೆ Family೨-೩ ಸಂಸಾರ ಇದ್ರೆ –  Familyಅದಕ್ಕೂ ಜಾಸ್ತಿ ಇದ್ರೆ?-  Familyಯಾರೋ ಅವರ ಮನೆಗೆ ಆಶ್ಚರ್ಯ ನಿವಾಸ ಅಂತ ಹೆಸರಿಟ್ಟಿದ್ರುಅದನ್ನ ನೋಡಿ ಡೌಟ್ ಆಯ್ತು, ಇವ್ರೇನ್ ಮನೆ ಕಟ್ಟಿದ್ದಾರೋ, ಇ ವಂಡರ್ ಲಾ ಕಟ್ಟಿದ್ದಾರೋ ಕರೋನಾ ಬರಬಾರದು ಅಂದ್ರೆ ಶುಗರ್ ತಿನ್ನಬಾರದು ಅಂತ ಒಂದು ಸುಳ್ಳು ಸುದ್ದಿ. ಆದ್ರೂ ಒಂಥರಾ ಅದು ನಿಜ, ಯಾಕಂದ್ರೆ ಚೀನೀ ಕಮ್ ಇದ್ದಾಗ ಕರೋನಾ ಬರಲ್ಲ.